ಇಂದಿನಿಂದ ರಾಜ್ಯದಲ್ಲಿ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ನಿಷೇಧ :ರಾಜ್ಯ ಸರ್ಕಾರ ಆದೇಶ

ಸುದ್ದಿಗಳು News

Posted by vidyamaana on 2024-07-05 17:43:40 |

Share: | | | | |


ಇಂದಿನಿಂದ ರಾಜ್ಯದಲ್ಲಿ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ನಿಷೇಧ :ರಾಜ್ಯ ಸರ್ಕಾರ ಆದೇಶ

ಬೆಂಗಳೂರು : ಇಂದಿನಿಂದ ರಾಜ್ಯದಲ್ಲಿ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ನಿಷೇಧ ಮಾಡಿ ರಾಜ್ಯ ಸರ್ಕಾರ ಖಡಕ್ ಆದೇಶ ಹೊರಡಿಸಿದೆ .ಈ ಮೂಲಕ ಆಟೋ, ಕ್ಯಾಬ್ ಚಾಲಕರಿಗೆ ಕೊಂಚ ರಿಲೀಫ್ ಸಿಕ್ಕಂತಾಗಿದೆ.ಕಳೆದ ವರ್ಷ ಬೈಕ್ ಟ್ಯಾಕ್ಸಿಗಳನ್ನು ನಿಷೇಧಿಸುವಂತೆ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ಮಾಡಲಾಗಿತ್ತು.

ಈ ವೇಳೆ ಸರ್ಕಾರದಿಂದ ಎಲ್ಲ ಮಾದರಿಯ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿಗಳ ಸಂಚಾರವನ್ನು ನಿಷೇಧಿಸಲಾಗಿತ್ತು. ಆದರೂ, ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿಗಳ ಕಾರ್ಯಾಚರಣೆ ಮಾಡಲಾಗುತ್ತಿದೆ.ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ನಿಷೇಧ ಮಾಡುವಂತೆ ಸಾರಿಗೆ ಸಂಘಟನೆಗಳು ಸರ್ಕಾರಕ್ಕೆ ಹಲವು ಬಾರಿ ಒತ್ತಾಯಿಸಿತ್ತು ಸಾರಿಗೆ ಸಂಘಟನೆಗಳ ಮನವಿ ಬೆನ್ನಲ್ಲೇ ಸಾರಿಗೆ ಇಲಾಖೆ ಅಧಿಕಾರಿಗಳು ಅನಧಿಕೃತ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ವಿರುದ್ದ ಕ್ರಮಕ್ಕೆ ಮುಂದಾಗಿದೆ.

ಈ ಹಿನ್ನೆಲೆ ಸಾರಿಗೆ ಅಧಿಕಾರಿಗಳು ನಗರದಲ್ಲಿ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ಸೀಜ್ ಮಾಡಲು ಮುಂದಾಗಿದ್ದು. 11 ತಂಡವನ್ನು ರಚಿಸಿ ಆರ್ಟಿಓ ಅಧಿಕಾರಿಗಳ ನೇತೃತ್ವದಲ್ಲಿ ಸೀಜ್ ಕಾರ್ಯಾಚರಣೆ ನಡೆಸುತ್ತಿದ್ದಾರೆ.ರಾಜ್ಯಾದ್ಯಂತ ಜು.5ರಿಂದ ಕಡ್ಡಾಯವಾಗಿ ಎಲೆಕ್ಟ್‌ಇಕ್ ಬೈಕ್ ಟ್ಯಾಕ್ಸಿಗಳ ಸಂಚಾರವನ್ನು ನಿಷೇಧಿಸಲಾಗಿದ್ದು, ಒಂದು ವೇಳೆ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿಗಳ ಕಾರ್ಯಾಚರಣೆ ಕಂಡುಬಂದಲ್ಲಿ ಕೂಡಲೇ ಅವುಗಳನ್ನು ಜಪ್ತಿ ಮಾಡಿ ಕಾನೂನು ಕ್ರಮ ಕೈಗೊಳ್ಳುವಂತೆ ಸಾರಿಗೆ ಇಲಾಖೆ ಆದೇಶ ಹೊರಡಿಸಿದೆ.

 Share: | | | | |


ಅಕ್ರಮ ಮದ್ಯ ಮಾರಾಟ ಪ್ರಕರಣದ ಆರೋಪಿಗೆ ಸಿಕ್ತು ನಿರೀಕ್ಷಣಾ ಜಾಮೀನು

Posted by Vidyamaana on 2023-06-28 17:47:21 |

Share: | | | | |


ಅಕ್ರಮ ಮದ್ಯ ಮಾರಾಟ ಪ್ರಕರಣದ ಆರೋಪಿಗೆ ಸಿಕ್ತು ನಿರೀಕ್ಷಣಾ ಜಾಮೀನು

ಪುತ್ತೂರು :ಅಕ್ರಮ ಮದ್ಯ ಮಾರಾಟ ಪ್ರಕರಣದ ಆರೋಪಿಯೆ ನ್ನಲಾಗಿದ್ದ ವಿನೋದ್ ಕುಮಾರ್ ರೈ ಯವರಿಗೆ ನಿರೀಕ್ಷಣಾ ಜಾಮೀನನ್ನು ಪುತ್ತೂರು ಐದನೇ ಹೆಚ್ಚುವರಿ  ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ.

ಪುತ್ತೂರು ತಾಲೂಕು ಒಳಮೋಗ್ರು ಗ್ರಾಮದ ಕೈಕಾರ ಪನಡ್ಕ ಎಂಬಲ್ಲಿ  ಅಕ್ರಮವಾಗಿ ಯಾವುದೇ ಪರವಾನಿಗೆ ಇಲ್ಲದೆ, ಗೋಣಿಚೀಲದಲ್ಲಿ ಮದ್ಯವನ್ನು ಮಾರಾಟ ಮಾಡಿ, ಹಣ ಪಡೆದಿರುವುದಾಗಿ ಆರೋಪಿಯೆನ್ನಲಾಗಿದ್ದ ವಿನೋದ್ ಕುಮಾರ್ ರೈ ಯವರ ವಿರುದ್ಧ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ  ಕರ್ನಾಟಕ ಅಬಕಾರಿ ಕಾಯಿದೆಯನ್ವಯ ಪ್ರಕರಣ ದಾಖಲಿಲಾಗಿತ್ತು.

ಹೀಗಿರುವಾಗ,ಈ ವಿಚಾರ ತಿಳಿದ ವಿನೋದ್ ಕುಮಾರ್ ರೈ ಯವರು ಅವರ ಪರ ವಕೀಲರಾದ ಮಹೇಶ್ ಕಜೆ ಯವರ  ಮುಖಾಂತರ ಪುತ್ತೂರಿನ ಮಾನ್ಯ ಐದನೇ ಹೆಚ್ಚುವರಿ  ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ನಿರೀಕ್ಷಣಾ ಜಾಮೀನು ಕೋರಿ ಅರ್ಜಿಯನ್ನು  ಸಲ್ಲಿಸಿದ್ದರು.ಈ ಮೇಲೆ ತಿಳಿಸಿದ ಆರೋಪಿಯು ಕೃತ್ಯವನ್ನು ಮಾಡಿದ್ದಾರೆ ಎಂಬುವುದಕ್ಕೆ ಸಂಬಂಧಿಸಿದಂತೆ ಯಾವುದೇ ಪೂರಕವಾದ ಸಾಕ್ಷ್ಯಧಾರಗಳು ಕಂಡು ಬಂದಿರುವುದಿಲ್ಲ. ಎಂಬಿತ್ಯಾದಿ ಅಂಶಗಳನ್ನು ವಾದಿಸಿದ್ದರು. ಸರಕಾರಿ ಅಭಿಯೋಜಕರು ಆರೋಪಿ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಗೆ ಆಕ್ಷೇಪವನ್ನು ಸಲ್ಲಿಸಿದ್ದರು. ವಾದ -ವಿವಾದವನ್ನು ಆಲಿಸಿದ 

ಪುತ್ತೂರಿನ ಮಾನ್ಯ ಐದನೇ ಹೆಚ್ಚುವರಿ  ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಸರಿತಾ. ಡಿ ಯವರು ಆರೋಪಿಗೆ ಶರತ್ತು ಬದ್ಧ ನಿರೀಕ್ಷಣಾ ಜಾಮೀನು ಮಂಜೂರು ಮಾಡಿರುತ್ತಾರೆ.

BREAKING: 5, 8, 9, 11ನೇ ತರಗತಿ ಬೋರ್ಡ್ ಪರೀಕ್ಷೆ ಫಲಿತಾಂಶ ಕ್ಕೆ ಸುಪ್ರೀಂಕೋರ್ಟ್ ತಡೆ

Posted by Vidyamaana on 2024-04-08 13:00:16 |

Share: | | | | |


BREAKING: 5, 8, 9, 11ನೇ ತರಗತಿ ಬೋರ್ಡ್ ಪರೀಕ್ಷೆ ಫಲಿತಾಂಶ ಕ್ಕೆ ಸುಪ್ರೀಂಕೋರ್ಟ್ ತಡೆ

ನವದೆಹಲಿ: ಕರ್ನಾಟಕ ರಾಜ್ಯ ಶಿಕ್ಷಣ ಮಂಡಳಿಗೆ (ಕೆಎಸ್‌ಇಎಬಿ) ಸಂಯೋಜಿತವಾಗಿರುವ ಶಾಲೆಗಳ 5,8, 9 ಮತ್ತು 11 ನೇ ತರಗತಿಗಳಿಗೆ "ಬೋರ್ಡ್ ಪರೀಕ್ಷೆಗಳನ್ನು" ನಡೆಸುವುದನ್ನು ಎತ್ತಿಹಿಡಿದ ಹೈಕೋರ್ಟ್ ಆದೇಶ ಸುಪ್ರೀಂ ಕೋರ್ಟ್ ಸೋಮವಾರ ತಡೆ ನೀಡಿದೆ.ನ್ಯಾಯಮೂರ್ತಿಗಳಾದ ಬೇಲಾ ಎಂ ತ್ರಿವೇದಿ ಮತ್ತು ಪಂಕಜ್ ಮಿಥಾಲ್ ಅವರ ನ್ಯಾಯಪೀಠವು ಕಳೆದ ತಿಂಗಳು ಕರ್ನಾಟಕ ಹೈಕೋರ್ಟ್ ನಿರ್ದೇಶನದ ಮೇರೆಗೆ ಪುನರಾರಂಭಗೊಂಡ ಈ ಪರೀಕ್ಷೆಗಳ ಯಾವುದೇ ಫಲಿತಾಂಶಗಳನ್ನು ಘೋಷಿಸುವುದನ್ನು ತಡೆಹಿಡಿದಿದೆ.

ಕಡಬ; ಡೆಂಟಲ್ ಕ್ಲಿನಿಕ್ ಗೆಂದು ಹೋದ ತೀರ್ಥಲತಾ ನಾಪತ್ತೆ

Posted by Vidyamaana on 2023-08-02 10:49:33 |

Share: | | | | |


ಕಡಬ; ಡೆಂಟಲ್ ಕ್ಲಿನಿಕ್ ಗೆಂದು ಹೋದ   ತೀರ್ಥಲತಾ ನಾಪತ್ತೆ

ಕಡಬ; ಡೆಂಟಲ್ ಕ್ಲಿನಿಕ್ ಗೆಂದು ಹೋದ ವಿವಾಹಿತೆ ನಾಪತ್ತೆಯಾಗಿರುವ ಘಟನೆ ಕಡಬದಲ್ಲಿ ನಡೆದಿದೆ.ಇಲ್ಲಿನ ಬಿಳಿನೆಲೆ ಗ್ರಾಮದ ದೇವಸ್ಯ ಮನೆ ಮಾಯಿಲಪ್ಪ ಗೌಡ ಅವರ ಪುತ್ರಿ ತೀರ್ಥಲತಾ ಕಾಣೆಯಾದ ವಿವಾಹಿತೆ.


ಈ ಬಗ್ಗೆ ಅವರ ತಂದೆ ದೂರು ನೀಡಿದ್ದು, ತನ್ನ ಮಗಳನ್ನು ಗದಗ ಮೂಲದ ಮುಂಡರಗಿಯ ಶಿವರಾಜ್ ಎಂಬವರಿಗೆ ವಿವಾಹ ಮಾಡಿಕೊಡಲಾಗಿತ್ತು. ತಂದೆ ಮನೆಗೆ ಬಂದಿದ್ದ ಆಕೆ ಸುಬ್ರಹ್ಮಣ್ಯದಲ್ಲಿರುವ ಡೆಂಟಲ್ ಕ್ಲಿನಿಕ್ ಗೆ ಚಿಕಿತ್ಸೆಗಾಗಿ ತೆರಳಿ ಬಳಿಕ ಮನೆಗೆ ಬಂದಿಲ್ಲವೆಂದು ದೂರಿನಲ್ಲಿ ತಿಳಿಸಲಾಗಿದೆ.


ಈ ಬಗ್ಗೆ ಸುಬ್ರಹ್ಮಣ್ಯ ಪೊಲೀಸರು ದೂರು ದಾಖಲಿಸಿಕೊಂಡು ಸಾರ್ವಜನಿಕ ಪ್ರಕಟನೆ ಹೊರಡಿಸಿ ಮಾಹಿತಿ ಸಿಕ್ಕಲ್ಲಿ ಠಾಣೆಗೆ ತಿಳಿಸುವಂತೆ ಕೋರಿದ್ದಾರೆ.

ಕುಕ್ಕೆ ಸುಬ್ರಹ್ಮಣ್ಯಕ್ಕೆ ನೂತನ ಆಡಳಿತಾಧಿಕಾರಿ ಯೇಸುರಾಜ್ ಧರ್ಮದ ಬಗ್ಗೆ ಅಪಪ್ರಚಾರ

Posted by Vidyamaana on 2024-05-03 07:21:29 |

Share: | | | | |


ಕುಕ್ಕೆ ಸುಬ್ರಹ್ಮಣ್ಯಕ್ಕೆ ನೂತನ ಆಡಳಿತಾಧಿಕಾರಿ ಯೇಸುರಾಜ್ ಧರ್ಮದ ಬಗ್ಗೆ ಅಪಪ್ರಚಾರ

ಮಂಗಳೂರು, ಮೇ.2: ರಾಜ್ಯದ ಮುಜರಾಯಿ ಇಲಾಖೆಗೊಳಪಟ್ಟ ಶ್ರೀಮಂತ ದೇಗುಲ ಎಂದು ಹೆಸರಾಗಿರುವ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿ ಎಸ್.ಜೆ. ಯೇಸುರಾಜ್ ಎಂಬವರನ್ನು ನೇಮಕ ಮಾಡಲಾಗಿತ್ತು. ರಾಮನಗರ ಜಿಲ್ಲಾ ಮುಜರಾಯಿ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಯೇಸುರಾಜ್ ಅವರನ್ನು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಎಇಓ ಆಗಿ ನೇಮಕ ಮಾಡಿರುವುದು ಚರ್ಚೆಗೂ ಕಾರಣವಾಗಿತ್ತು.


ಯೇಸುರಾಜ್ ಎನ್ನುವ ಹೆಸರಿನ ಕಾರಣಕ್ಕೆ ಅನ್ಯ ಧರ್ಮದವರನ್ನು ಹಿಂದುಗಳ ದೇವಸ್ಥಾನಕ್ಕೆ ನೇಮಕ ಮಾಡಿದ್ದಾರೆಂದು ಹಿಂದು ಸಂಘಟನೆಗಳ ನಾಯಕರು ಆಕ್ಷೇಪಿಸಿದ್ದರು. ಅವರ ಧರ್ಮದ ಹಿನ್ನೆಲೆಯ ಬಗ್ಗೆ ಪ್ರಶ್ನೆಯನ್ನೂ ಮಾಡಿದ್ದರು. ಈ ವಿಚಾರ ಆಕ್ಷೇಪಕ್ಕೆ ಗುರಿಯಾದ ಬೆನ್ನಲ್ಲೇ ಮುಜರಾಯಿ ಇಲಾಖೆ ಸಚಿವ ರಾಮಲಿಂಗಾ ರೆಡ್ಡಿ ಸ್ಪಷ್ಟನೆ ನೀಡಿದ್ದು, ಯೇಸುರಾಜ್ ಅವರ ಹಿನ್ನೆಲೆ, ಗೋತ್ರಗಳ ದಾಖಲೆಯನ್ನು ಟ್ವಿಟರ್ ನಲ್ಲಿ ಬಿಡುಗಡೆ ಮಾಡಿದ್ದಾರೆ.

ಇಂದು (ಆ16) ವಕೀಲರ ಸಂಘದಲ್ಲಿ ಆಟಿದ ಗೌಜಿ

Posted by Vidyamaana on 2023-08-16 02:24:59 |

Share: | | | | |


ಇಂದು (ಆ16) ವಕೀಲರ ಸಂಘದಲ್ಲಿ ಆಟಿದ ಗೌಜಿ

ಪುತ್ತೂರು: ಇಲ್ಲಿನ ವಕೀಲರ ಸಂಘದ ಆಶ್ರಯದಲ್ಲಿ ಆ. 16ರಂದು ಮಧ್ಯಾಹ್ನ 1 ಗಂಟೆಗೆ ಪರಾಶರ ಸಭಾಂಗಣದಲ್ಲಿ ಆಟಿದ ಗೌಜಿ ಕಾರ್ಯಕ್ರಮ ನಡೆಯಲಿದೆ.

ಪ್ರಧಾನ ಹಿರಿಯ ವ್ಯವಹಾರಿಕ ನ್ಯಾಯಾಧೀಶ, ಎಸಿಜೆಎಂ, ತಾ.ಕಾ.ಸೇ. ಸಮಿತಿ ಅಧ್ಯಕ್ಷ ಗೌಡ ಆರ್.ಪಿ. ಕಾರ್ಯಕ್ರಮ ಉದ್ಘಾಟಿಸುವರು. ವಕೀಲರ ಸಂಘದ ಅಧ್ಯಕ್ಷ ಮನೋಹರ್ ಕೆ.ವಿ. ಅಧ್ಯಕ್ಷತೆ ವಹಿಸುವರು. ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶ ಮತ್ತು ಜೆ.ಎಂ.ಎಫ್.ಸಿ. ಪ್ರೀಯಾ ರವಿ ಜೊಗ್ಲೇಕರ್, ಪ್ರಧಾನ ಸಿವಿಲ್ ನ್ಯಾಯಾಧೀಶೆ ಹಾಗೂ ಜೆ.ಎಂ.ಎಫ್.ಸಿ. ಹಾಗೂ ತಾ.ಕಾ.ಸೇ. ಸಮಿತಿ ಸದಸ್ಯ ಕಾರ್ಯದರ್ಶಿ ಅರ್ಚನಾ ಕೆ. ಉಣ್ಣಿತ್ತಾನ್, ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಹಾಗೂ ಜೆ.ಎಂ.ಎಫ್.ಸಿ. ಶಿವಣ್ಣ ಎಚ್.ಆರ್., 2ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಹಾಗೂ ಜೆ.ಎಂ.ಎಫ್.ಸಿ. ಯೋಗೇಂದ್ರ ಶೆಟ್ಟಿ ಉಪಸ್ಥಿತರಿರುವರು.

ಸುಳ್ಯದ ಹಿರಿಯ ವಕೀಲ ಜಗದೀಶ ಹುದೇರಿ ಅವರು ಆಟಿಯ ಆಶಯ ಭಾಷಣ ಮಾಡಲಿದ್ದಾರೆ. ಬಳಿಕ ಆಟಿ ವಿಶೇಷ ಊಟದ ವ್ಯವಸ್ಥೆ ಇದೆ ಎಂದು ಸಂಘದ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತುಮಕೂರು : ಒಂದೇ ಕುಟುಂಬದ ಐವರು ಆತ್ಮಹತ್ಯೆಗೆ ಶರಣು

Posted by Vidyamaana on 2023-11-27 04:41:41 |

Share: | | | | |


ತುಮಕೂರು : ಒಂದೇ ಕುಟುಂಬದ ಐವರು ಆತ್ಮಹತ್ಯೆಗೆ ಶರಣು

ತುಮಕೂರು: ಒಂದೇ ಕುಟುಂಬದ ಐವರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಭಾನುವಾರ ಸದಾಶಿವ ನಗರದಲ್ಲಿ ನಡೆದಿದೆ. ಸಾವಿಗೀಡಾದವರು ಗರೀಬ್ ಸಾಬ್, ಸುಮಯ್ಯ, ಹಾಜಿರಾ, ಮೊಹಮ್ಮದ್ ಸುಭಾನ್, ಮೊಹಮ್ಮದ್ ಮುನೀರ್ ಎಂದು ತಿಳಿದು ಬಂದಿದೆ.



ಸಾವಿಗೂ ಮುನ್ನ ಗರೀಬ್ ಸಾಬ್ ದೊಡ್ಡಮ್ಮನಿಗೆ ಡೆತ್ ನೋಟ್ ಬರೆದಿದ್ದಾರೆ‌. ದೊಡ್ಡಮ್ಮನಿಗೆ ನಮಸ್ಕಾರಗಳು. ನಮಗೆ ಸಾಲ ಹೆಚ್ಚಾಗಿದೆ. ವ್ಯಾಪಾರದಲ್ಲಿ ಲಾಭ ಇಲ್ಲ. ಕೆಲಸಕ್ಕೆ ಹೋದರೆ ಹಣ ಬರ್ತಿಲ್ಲ.ಹೀಗಾಗಿ ಸಂಸಾರ ಮಾಡೋದು ಕಷ್ಟವಾಗಿದೆ.ಊಟ ಮಾಡೋಕು ಕಷ್ಟ ಆಗಿದೆ. ಊರಲ್ಲಿದ್ದಾಗ ಹೆಂಡತಿ ಅಣ್ಣ ಸಾದಿಕ್, ಹೆಂಡತಿಯ ತಂಗಿ ಯಾಸಿನ್ ನಮ್ಮ ಮೇಲೆ ವಿಷ ಕಾರಿದ್ದರು. ಅದಕ್ಕೆ ನಾವು ಇಲ್ಲಿಗೆ ಬಂದಿದ್ದೇವೆ. ಇಲ್ಲಿ ಸಾಲ ಕಟ್ಟೋದು ಹೆಚ್ಚಾಗಿದೆ. ಬಾಡಿಗೆ ಮನೆಗೆ ನಲವತ್ತೈದು ಸಾವಿರ ಅಡ್ವಾನ್ಸ್ ಕೊಟ್ಟಿದ್ದೀವಿ. ಮೂರು ತಿಂಗಳ ಬಾಡಿಗೆ ಕೊಡೋದು ಬಾಕಿಯಿದೆ.


ಉಳಿದ ಹಣವನ್ನ ನಮ್ಮ ದೊಡ್ಡಮ್ಮನಿಗೆ ವಾಪಾಸು ಕೊಡಿ.ಮನೆ ವಸ್ತುಗಳನ್ನ ನೀವು ತಗೋಳಿ.ಹದಿನೈದು ಸಾವಿರ ಹಣವನ್ನ ಜರಿನಾ ಆಂಟಿಗೆ ಕೊಡಿ. ನಮ್ಮ ಬೈಕ್ ನ ನಮ್ಮ ಹಿರಿಯಣ್ಣ ಅಜಾಜ್ ಗೆ ಕೊಡಿ. ಅತ್ತಿಗೆ ಪರ್ವೀನ್ ಮತ್ತು ಅಣ್ಣನಿಗೆ ಫೋನ್ ಕೊಡಿ. ದೊಡ್ಡಮ್ಮ ನೀವು ಬೇಕಾದ ವಸ್ತುಗಳನ್ನ ಇಟ್ಟುಕೊಳ್ಳಬಹುದು ಅಥವಾ ಮಾರಿಕೊಳ್ಳಬಹುದು. ತುಂಬಾ ವಿಷಯ ಇದೆ. ಆದ್ರೆ ಇದರಲ್ಲಿ ಬರೆಯೋಕಾಗಲ್ಲ. ಈ ಪತ್ರವನ್ನ ಪೊಲೀಸರಿಗೆ ತೋರಿಸಿ ಎಂದು ಬರೆಯಲಾಗಿದೆ.


ಮತ್ತರ್ ಮಾಮನಿಗೆ ಕೊನೆಯ ನಮಸ್ಕಾರಗಳು. ನಮಗೆ ಊಟಕ್ಕೆ ಅಕ್ಕಿ ಕೊಟ್ಟಿದ್ದೀರಾ, ಅದಕ್ಕೆ ನಿಮಗೆ ಮೆಳೇಕೋಟೆಯಲ್ಲಿರೋ ಅಂಗಡಿಯಲ್ಲಿರೋ ಸಾಮಾನುಗಳು ಮತ್ತೆ ಅದರಲ್ಲಿ ಐದು ಸಾವಿರ ಇಟ್ಟಿದ್ದೀವಿ. ಒಂದು ತಿಂಗಳು ಬಾಡಿಗೆ 2000 ರೂ. ಕೊಡಬೇಕು. ಸದಾಶಿವನಗರದ ಮೂರನೇ ಬಿ ಮುಖ್ಯರಸ್ತೆಯಲ್ಲಿರುವ ನಾವು ವಾಸಿಸುವ ಮನೆಯ ಕೆಳಗಿನವರು ನಮಗೆ ತುಂಬಾ ಕಾಟ ಕೊಟ್ಟಿದ್ದಾರೆ.

ನಮಗೆ ಯಾರಾದರೂ ಸಹಾಯ ಮಾಡಿದರೆ ಅವರಿಗೆ ಇಲ್ಲಸಲ್ಲದನ್ನ ಹೇಳ್ತಿದರು. ನಾವು ಅವರು ಹೇಳಿದಂತೆ ಕೇಳಬೇಕಿತ್ತು. ಇಲ್ಲವಾದರೆ ಅವರು ನಮ್ಮ ಜತೆ ಜಗಳ ಮಾಡುತಿದ್ದರು.ಶಬಾನಾ ನಮಗೆ ಏಳು ತಿಂಗಳ ಹಣ ಕೊಟ್ಟಿರಲಿಲ್ಲ. ಹಣ ಕೇಳಿದ್ದಕ್ಕೆ ನಮ್ಮ ಮೇಲೆ ವಿಷ ಕಾರುತ್ತಿದ್ದಾಳೆ. ನಮ್ಮ ಸಾವಿಗೆ ಐದು ಜನರೇ ಕಾರಣ. ನಮ್ಮ ಮನೆಯ ಕೆಳಗಿನ ಖಲಂದರ್, ಅವನ ಮಗಳು ಸಾನಿಯಾ,ಅವನ ಹಿರಿಯ ಮಗ, ಮಹಡಿ ಮನೆಯ ಶಬಾನಾ, ಮತ್ತು ಅವಳ ಮಗಳು ಸಾನಿಯಾ ಈ ಎಲ್ಲರೂ ನಮ್ಮ ಸಾವಿಗೆ ಕಾರಣ ಎಂದು ಬರೆಯಲಾಗಿದೆ.ನಮ್ಮ ಸಾವಿಗೆ ಗೃಹ ಮಂತ್ರಿ ಸರ್ ಕಾನೂನು ರೀತಿ ಶಿಕ್ಷೆ ಕೊಡಬೇಕು ಎಂದು ಬೇಡಿಕೊಳ್ತೀನಿ.ಇವರ ಕಾಟಕ್ಕೆ ನಮ್ಮ ಪ್ರಾಣ ಕೊಟ್ಟಿದ್ದೇವೆ. ಎಲ್ಲಾ ಪೊಲೀಸ್ ಅಧಿಕಾರಿಗಳಿಗೆ ಕೈ ಮುಗಿದು ಕೇಳಿಕೊಳ್ಳುತ್ತೇವೆ. ನಮ್ಮ ದೇಹವನ್ನ ಪೋಸ್ಟ್ ಮಾರ್ಟಮ್ ಮಾಡಬೇಕು. ಇನ್ನೂ ವಿಷಯ ಫೋನ್ ನಲ್ಲಿದೆ. ಇಂತಿ ನಿಮ್ಮ ಗರೀಬ್ ಸಾಬ್, ಸುಮಯ್ಯ, ಹಾಜಿರಾ, ಮೊಹಮ್ಮದ್ ಸುಭಾನ್, ಮೊಹಮ್ಮದ್ ಮುನೀರ್ ಎಂದು ಬರೆಯಲಾಗಿದೆ.

ಸ್ಥಳಕ್ಕೆ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.



Leave a Comment: