ಪುತ್ತೂರಿನ ಪ್ರತಿಷ್ಠಿತ ಕಲ್ಲೇಗ ಟೈಗರ್ಸ್ ಮುಖ್ಯಸ್ಥ ಅಕ್ಷಯ್ ಕಲ್ಲೇಗ ತಡರಾತ್ರಿ ಬರ್ಬರ ಹತ್ಯೆ

ಸುದ್ದಿಗಳು News

Posted by vidyamaana on 2023-11-07 04:42:13 |

Share: | | | | |


ಪುತ್ತೂರಿನ ಪ್ರತಿಷ್ಠಿತ ಕಲ್ಲೇಗ ಟೈಗರ್ಸ್ ಮುಖ್ಯಸ್ಥ ಅಕ್ಷಯ್ ಕಲ್ಲೇಗ ತಡರಾತ್ರಿ ಬರ್ಬರ ಹತ್ಯೆ

ಪುತ್ತೂರು: ಪುತ್ತೂರಿನ ನಗರದಲ್ಲಿ ತಲವಾರ್ ನಲ್ಲಿ ಕಡಿದು ಕಲ್ಲೇಗ ಟೈಗರ್ಸ್ ನ ಪ್ರಮುಖ ನಾಯಕನನ್ನು ಹತ್ಯೆ ಮಾಡಿದ ಘಟನೆ ಇದೀಗ ನಡೆದಿದೆ.


ಟೈಗರ್ಸ್ ನ ಮುಖ್ಯಸ್ಥ ಅಕ್ಷಯ್ ಕಲ್ಲೇಗ ಅವರನ್ನು ಹತ್ಯೆಗೀಡಾದ ಯುವಕ. ಈತ ಪುತ್ತೂರಿನ ನಗರದಲ್ಲಿ ಇದ್ದಾಗ ತಂಡಯೊಂದು ಆಗಮಿಸಿ ಯದ್ವಾತದ್ವ ತಲವಾರ್ ನಲ್ಲಿ ದಾಳಿ ನಡೆಸಿ, ಹತ್ಯೆ ಮಾಡಿದೆ. ಸ್ಥಳಕ್ಕೆ ಆಗಮಿಸಿದ ಪುತ್ತೂರು ನಗರ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

 Share: | | | | |


ಉಪ್ಪಿನಂಗಡಿ : ಪತ್ನಿಗೆ ಕಿರುಕುಳ ವಂಚನೆ ಪ್ರಕರಣ

Posted by Vidyamaana on 2023-09-27 12:54:39 |

Share: | | | | |


ಉಪ್ಪಿನಂಗಡಿ : ಪತ್ನಿಗೆ ಕಿರುಕುಳ ವಂಚನೆ ಪ್ರಕರಣ

ಉಪ್ಪಿನಂಗಡಿ : ಪತ್ನಿಗೆ ವಂಚಿಸಿ ಇನ್ನೊಂದು ಮದುವೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.ಮಹಮ್ಮದ್ ಜಲೀಲ್ ಬಂಧಿತ ಆರೋಪಿ.ಜಲೀಲ್ ಮೊದಲ ಪತ್ನಿಯ ತಂದೆ 2020 ರಲ್ಲಿ ಈ ಬಗ್ಗೆ ಠಾಣೆಗೆ ದೂರು ನೀಡಿದ್ದರು.


ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಕಲಂ: 128 ಸಿ.ಆರ್.ಪಿ.ಸಿ ರಂತೆ ಪ್ರಕರಣ ದಾಖಲಾಗಿತ್ತು.


ಜಲೀಲ್ ಪತ್ನಿ ತಂದೆ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.


2019 ರಲ್ಲಿ ಜಲೀಲ್ ಮದುವೆಯಾಗಿದ್ದು, ಮದುವೆ ಆದ ನಂತರದಲ್ಲಿ ಜಲೀಲ್ ವಿದೇಶಕ್ಕೆ ಹೋಗಿದ್ದು, ಜಲೀಲ್ ಸಹೋದರರು  ಆತನ ಪತ್ನಿ ವಾಸ ಇರುವ ಮನೆಯಲ್ಲಿಯೇ ವಾಸವಿದ್ದು, ಜಲೀಲ್ ಪತ್ನಿಗೆ ಕಿರುಕುಳ ನೀಡಲು ಆರಂಭಿಸಿದ್ದು, ಫೋನ್ ಕರೆಯಲ್ಲಿ  ಕುಟುಂಬಕ್ಕೆ ಮತ್ತು ಜಲೀಲ್ ಪತ್ನಿಗೆ ಅವಾಚ್ಯ ಶಬ್ದಗಳಿಂದ

ಬೈಯುವುದು ಅಲ್ಲದೆ ನೀನು ಮನೆಯಿಂದ ಹೊರಗೆ ಹೋಗು ನಾನು ನಿನಗೆ ತಲಾಖ್ ನೀಡಿರುತ್ತೇನೆ. ನೀನು ನಿನ್ನ ತವರು ಮನೆಗೆ ಹೋಗದಿದ್ದರೆ ನನ್ನ ತಮ್ಮಂದಿರಿಂದ ನಿನ್ನ ಕೊಲೆ ಮಾಡಿಸುತ್ತೇನೆ ಎಂದು ಬೆದರಿಕೆ ಹಾಕಿರುತ್ತಾನೆ.


 ಬೈದಿರುವುದಲ್ಲದೆ  ನಿಂದಿಸುವುದು, ಆಕೆಗೆ ಆಹಾರ ನೀರು ನೀಡದೆ ಸತಾಯಿಸುವುದು, ಜೀವ ಬೆದರಿಕೆ ಹಾಕಿರುತ್ತಾರೆಂದು ದೂರಿನಲ್ಲಿ ತಿಳಿಸಿರುತ್ತಾರೆ.


 ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದವನ್ನು ಪಿಎಸ್ಐ  ರವರ ಮಾರ್ಗದರ್ಶನದಲ್ಲಿ ಹೆಚ್ ಸಿ ಗಜೇಂದ್ರ, ಪಿಸಿ ಅಭಿಜಿತ್ ರವರು ದಸ್ತಗಿರಿ ಮಾಡಿ ಪುತ್ತೂರು ನ್ಯಾಯಲಯಕ್ಕೆ ಹಾಜರುಪಡಿಸಿದರು.

ದಿ.ರಾಜೀವ್ ಗಾಂಧಿ 32 ನೇ ಪುಣ್ಯ ತಿಥಿ ಸೋನಿಯಾ,ರಾಹುಲ್,ಖರ್ಗೆ ಸೇರಿ ಗಣ್ಯರಿಂದ ಪುಷ್ಪನಮನ

Posted by Vidyamaana on 2023-05-21 05:19:54 |

Share: | | | | |


ದಿ.ರಾಜೀವ್ ಗಾಂಧಿ 32 ನೇ ಪುಣ್ಯ ತಿಥಿ ಸೋನಿಯಾ,ರಾಹುಲ್,ಖರ್ಗೆ ಸೇರಿ ಗಣ್ಯರಿಂದ ಪುಷ್ಪನಮನ

ನವದೆಹಲಿ: ಇಂದು ಮಾಜಿ ಪ್ರಧಾನಿ ದಿ.ರಾಜೀವ್ ಗಾಂಧಿ ಅವರ 32ನೇ ಪುಣ್ಯತಿಥಿ ಅಂಗವಾಗಿ ದೆಹಲಿಯ ವೀರಭೂಮಿಯಲ್ಲಿ ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಶ್ರದ್ಧಾಂಜಲಿ ಸಲ್ಲಿಸಿದರು.ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಕೂಡ ಪುಷ್ಪನಮನ ಸಲ್ಲಿಸಿದರು.ರಾಹುಲ್ ಗಾಂಧಿ ಟ್ವಿಟರ್‌ನಲ್ಲಿ ತಮ್ಮ ತಂದೆಯ ವಿಡಿಯೋವನ್ನು ಹಂಚಿಕೊಂಡಿದ್ದಾರೆ.


ಆಗಸ್ಟ್ 20, 1944 ರಂದು ಜನಿಸಿದ ರಾಜೀವ್ ಗಾಂಧಿ ಉತ್ತರ ಪ್ರದೇಶದ ಅಮೇಥಿ ಸಂಸದೀಯ ಕ್ಷೇತ್ರವನ್ನು ನಾಲ್ಕು ಬಾರಿ ಪ್ರತಿನಿಧಿಸಿದ್ದರು. ಭಾರತ ರತ್ನ ಪುರಸ್ಕೃತರಾದ ರಾಜೀವ್ ಗಾಂಧಿ ಅವರು 1984 ರಿಂದ 1989 ರವರೆಗೆ ಭಾರತದ ಆರನೇ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದರು. 1984 ರಲ್ಲಿ ಅವರ ತಾಯಿ, ಆಗಿನ ಪ್ರಧಾನಿ ಇಂದಿರಾ ಗಾಂಧಿಯವರ ಹತ್ಯೆಯ ನಂತರ ಅವರು ಅಧಿಕಾರ ವಹಿಸಿಕೊಂಡರು.

ಬಾಂಜಾರುಮಲೆ ಮತಗಟ್ಟೆಯಲ್ಲಿ ಶೇ. ನೂರು ಮತದಾನ ; ಅಪರೂಪದ ಸಾಧನೆಗೆ ಜಿಲ್ಲಾಧಿಕಾರಿ ಬಹುಮಾನ

Posted by Vidyamaana on 2024-04-27 10:34:00 |

Share: | | | | |


ಬಾಂಜಾರುಮಲೆ ಮತಗಟ್ಟೆಯಲ್ಲಿ ಶೇ. ನೂರು ಮತದಾನ ; ಅಪರೂಪದ ಸಾಧನೆಗೆ ಜಿಲ್ಲಾಧಿಕಾರಿ ಬಹುಮಾನ

ಮಂಗಳೂರು, ಎ.26: ಲೋಕಸಭೆ ಚುನಾವಣೆಯಲ್ಲಿ ಶೇ.100 ಮತದಾನ ಮಾಡುವ ಮೂಲಕ ನಕ್ಸಲ್ ಪೀಡಿತ ಎಂಬ ಹಣೆಪಟ್ಟಿ ಹೊತ್ತ ಪಶ್ಚಿಮ ಘಟ್ಟದ ವ್ಯಾಪ್ತಿಯ ಬಾಂಜಾರುಮಲೆ ಮತಗಟ್ಟೆ ದಾಖಲೆ ‌ನಿರ್ಮಿಸಿದೆ.

ಬಾಂಜಾರುಮಲೆಯ ಮತಗಟ್ಟೆ ಸಂಖ್ಯೆ 86ರ ಸಮುದಾಯ ಭವನದಲ್ಲಿ ಮತದಾನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಇಲ್ಲಿ 51 ಮಹಿಳೆಯರು, 60 ಪುರುಷರು ಸೇರಿ ಒಟ್ಟು 111 ಮತದಾರರಿದ್ದಾರೆ. 2019 ರಲ್ಲಿ ಈ ಮತಗಟ್ಟೆಯಲ್ಲಿ ಒಬ್ಬರ ಗೈರಿನಿಂದಾಗಿ ಶೇ.99 ಮತದಾನವಾಗಿತ್ತು. ಈ ಬಾರಿ ಜಿಲ್ಲಾ ಸ್ವೀಪ್ ಸಮಿತಿ ಮಾರ್ಗದರ್ಶನದಂತೆ ಬೆಳ್ತಂಗಡಿ ತಾಲೂಕಿನ ಸ್ವೀಪ್ ಸಮಿತಿ ಅಧ್ಯಕ್ಷ ವೈಜಣ್ಣ ಹಾಗೂ ತಂಡ ಶೇ.100 ಮತದಾನ ಮಾಡುವಂತೆ ಊರ ಜನರಲ್ಲಿ ಜಾಗೃತಿ ಮೂಡಿಸಿತ್ತು. ಇದರ ಪರಿಣಾಮ ಮೊಬೈಲ್ ನೆಟ್ ವರ್ಕ್, ರಸ್ತೆ, ಮೂಲಸೌಕರ್ಯವೇ ಇಲ್ಲದ ಪುಟ್ಟ ಗ್ರಾಮ ಇಡೀ ರಾಜ್ಯದಲ್ಲಿ ಮಾದರಿ ಎನ್ನುವ ಕೆಲಸ ಮಾಡಿದೆ.‌

ಮೊಟ್ಟೆತ್ತಡ್ಕ - ಪಂಜಳ ರಸ್ತೆಯ ತಿರುವಿನಲ್ಲಿ ಮೋರಿ ಕುಸಿತ

Posted by Vidyamaana on 2024-02-26 21:51:31 |

Share: | | | | |


ಮೊಟ್ಟೆತ್ತಡ್ಕ - ಪಂಜಳ ರಸ್ತೆಯ ತಿರುವಿನಲ್ಲಿ ಮೋರಿ ಕುಸಿತ

ಪುತ್ತೂರು: ಇಲ್ಲಿನ ಮೊಟ್ಟೆತ್ತಡ್ಕ - ಪಂಜಳ ರಸ್ತೆಯಲ್ಲಿ ಮೋರಿಯೊಂದು ಕುಸಿದಿದ್ದು, ಅಪಘಾತಕ್ಕೆ ಆಹ್ವಾನ ನೀಡುತ್ತಿದೆ.

ಗೇರು ಸಂಶೋಧನಾ ನಿರ್ದೇಶನಾಲಯದ ಸಮೀಪದ ತಿರುವಿನಲ್ಲಿ ಮೋರಿ ಕುಸಿದಿದೆ. ತಿರುವಿನಲ್ಲಿ ಈ ಮೋರಿ ಇರುವ ಕಾರಣ, ವಾಹನ ಸವಾರರ ಗಮನಕ್ಕೆ ಈ ಅಪಾಯ ತಕ್ಷಣಕ್ಕೆ ಬರುತ್ತಿಲ್ಲ. ಇದರಿಂದ ಅಪಘಾತ ಸಂಭವಿಸುವ ಲಕ್ಷಣ ಹೆಚ್ಚಿದೆ.

ಮೋರಿ ಕುಸಿದಿರುವ ಬಗ್ಗೆ ಸೂಚನೆ ನೀಡಲು ಕನಿಷ್ಠ ಒಂದು ಸೂಚನಾ ಫಲಕವನ್ನು ಹಾಕಿಲ್ಲ. ಹಾಗಾಗಿ ಇದರ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಿ, ಮೋರಿಯನ್ನು ದುರಸ್ತಿ ಮಾಡಬೇಕೆಂದು ಕುರಿಯ ಮುಂಡೂರು ಆಟೋ ಚಾಲಕರು ಮತ್ತು ಸಾರ್ವಜನಿಕರ ಆಗ್ರಹಿಸಿರುತ್ತಾರೆ.

ಲಾರಿಯಲ್ಲಿ ನಕಲಿ ಟ್ರಾನ್ಸ್​ಫಾರ್ಮರ್ ಇಟ್ಟು ಮದ್ಯ ಸಾಗಣೆ

Posted by Vidyamaana on 2023-10-18 16:45:35 |

Share: | | | | |


ಲಾರಿಯಲ್ಲಿ ನಕಲಿ ಟ್ರಾನ್ಸ್​ಫಾರ್ಮರ್ ಇಟ್ಟು ಮದ್ಯ ಸಾಗಣೆ

ಬೆಳಗಾವಿ, ಅ.18: ಪಂಚ ರಾಜ್ಯಗಳ ಚುನಾವಣೆ ಹಿನ್ನೆಲೆ ಅಕ್ರಮವಾಗಿ ಮದ್ಯ ಸಾಗಣೆ ಸದ್ದಿಲ್ಲದೇ ನಡೆಯುತ್ತಿದೆ. ಈ ಬೆನ್ನಲ್ಲೇ ಗೋವಾದಿಂದ ತೆಲಂಗಾಣಕ್ಕೆ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಲಾರಿಯಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಅಪಾರ ಪ್ರಮಾಣದ ಮದ್ಯವನ್ನು ಜಪ್ತಿ ಮಾಡುವಲ್ಲಿ ಬೆಳಗಾವಿಯ ಅಬಕಾರಿ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.


ಕಳೆದ ತಿಂಗಳು ಲಾರಿಯಲ್ಲಿ ಪ್ಲೈವುಡ್ ನಡುವೆ ಮದ್ಯದ ಬಾಕ್ಸ್​ಗಳನ್ನು ಇಟ್ಟುಕೊಂಡು ಸಾಗಿಸುತ್ತಿದ್ದಾಗ ಸಿನಿಮೀಯ ಶೈಲಿಯಲ್ಲಿ ದಾಳಿ ಮಾಡಿ, ಅಕ್ರಮ ಜಾಲ‌ ಭೇದಿಸಿದ ಅಬಕಾರಿ ಇಲಾಖೆ ಅಧಿಕಾರಿಗಳು, ಈ ಬಾರಿಯೂ ಅದೇ ಮಾದರಿಯಲ್ಲಿ ದಾಳಿ ನಡೆಸಿ ನಕಲಿ ಟ್ರಾನ್ಸ್​ಫಾರ್ಮರ್ ಸಾಗಿಸುತ್ತಿದ್ದ ಲಾರಿಯಲ್ಲಿ ಬಚ್ಚಿಟ್ಟಿದ್ದ ಮದ್ಯವನ್ನು ವಶಕ್ಕೆ ಪಡೆದಿದ್ದಾರೆ.


ಖಚಿತ ಮಾಹಿತಿ ಮೇರೆಗೆ ಹಿರೇಬಾಗೇವಾಡಿ ಟೋಲ್ ನಾಕಾ ಬಳಿ ದಾಳಿ ಮಾಡಿದ ಅಧಿಕಾರಿಗಳು, ಲಾರಿ ತಡೆದು ಚಾಲಕನ ವಿಚಾರಣೆ ನಡೆಸಿದಾಗ ಪ್ರಕರಣ ಬಯಲಿಗೆ ಬಂದಿದೆ. ಎರಡು ಎಲೆಕ್ಟ್ರಿಕ್ ಟ್ರಾನ್ಸ್​ಫಾರ್ಮರ್​ಗಳ ನಡುವೆ ಬಚ್ಚಿಟ್ಟಿದ್ದ 10 ಲಕ್ಷ ರೂ. ಮೌಲ್ಯದ 250 ರಟ್ಟಿನ ಪೆಟ್ಟಿಗೆಗಳಲ್ಲಿದ್ದ 5 ವಿವಿಧ ಕಂಪನಿಯ‌ ಮದ್ಯವನ್ನು ಜಪ್ತಿ ಮಾಡಿರುವ ಅಬಕಾರಿ ಅಧಿಕಾರಿಗಳು‌, ಆರೋಪಿ ಲಾರಿ ಚಾಲಕ ಮಹಾರಾಷ್ಟ್ರದ ಮುಂಬೈ ನಿವಾಸಿ ಶ್ರೀರಾಮ್ ಸುಧಾಕರ್ ಪರಡೇ(31) ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ‌. ಅದೇ ರೀತಿ 20 ಲಕ್ಷ ರೂ. ಮೌಲ್ಯದ ಲಾರಿಯ‌ನ್ನೂ ಜಪ್ತಿ ಮಾಡಲಾಗಿದೆ.


ಲಾರಿಗೆ ಜಿಪಿಎಸ್ ಅಳವಡಿಕೆ :


ವಾಹನವನ್ನು ಅತ್ಯಾಧುನಿಕ ತಂತ್ರಜ್ಞಾನ ಜಿಪಿಎಸ್ ಉಪಕರಣ ಬಳಸಿ ನಿಯಂತ್ರಿಸಲಾಗುತ್ತಿತ್ತು. ಅಬಕಾರಿ ಅಧಿಕಾರಿಗಳು ದಾಳಿ ಮಾಡುತ್ತಿದ್ದಂತೆ ವಾಹನ ಮುಂದೆ ಹೋಗದಂತೆ ಖದೀಮರು ಜಿಪಿಎಸ್ ಆಫ್​ ಮಾಡಿದರು. ಎಲ್ಲೋ ಒಂದು ಕಡೆ ಇದ್ದ ತಂಡ, ಲಾರಿಯನ್ನು‌ ಅಲ್ಲಿಂದಲೇ ನಿಯಂತ್ರಿಸುತ್ತಿತ್ತು. ಬಳಿಕ, ಜಿಪಿಎಸ್ ಡಿಸ್​ಕನೆಕ್ಟ್ ಮಾಡಿ ವಾಹನ ಜಪ್ತಿ ಮಾಡಲಾಗಿದೆ.


ಚುನಾವಣೆ ಎಫೆಕ್ಟ್ :


ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆ ಪೈಕಿ ತೆಲಂಗಾಣ ರಾಜ್ಯದಲ್ಲೂ ಚುನಾವಣೆ ಇರುವುದರಿಂದ ಗೋವಾದಿಂದ ಮದ್ಯ ಸಾಗಿಸಲಾಗುತ್ತಿತ್ತು. ಟ್ರಾನ್ಸ್​ಫರ್ಮರ್​ಗಳ ಮಧ್ಯೆ ಮದ್ಯದ ಬಾಕ್ಸ್​ಗಳನ್ನು ಇಟ್ಟರೆ ಯಾರಿಗೂ ಅನುಮಾನ ಬರುವುದಿಲ್ಲವೆಂದು ಆರೋಪಿಗಳು ಅಂದುಕೊಂಡಿದ್ದರು. ಆದರೆ, ಅಬಕಾರಿ‌ ಅಧಿಕಾರಿಗಳ ಚಾಕಚಕ್ಯತೆಯಿಂದ ಅವರ ಪ್ಲಾನ್ ಉಲ್ಟಾ ಆಗಿದೆ. ಅಲ್ಲದೇ, ಯಾವ ಪಕ್ಷ?, ಯಾವ ಅಭ್ಯರ್ಥಿಗೆ ಈ ಮದ್ಯ ಸೇರಿದೆ ಎಂಬುದು ತನಿಖೆಯಿಂದ ತಿಳಿದು ಬರಲಿದೆ‌

ಬೆದ್ರಾಳ ಎಸ್. ಇಸ್ಮಾಯಿಲ್ ಹಾಜಿ ನಿಧನ

Posted by Vidyamaana on 2023-08-21 10:11:13 |

Share: | | | | |


ಬೆದ್ರಾಳ ಎಸ್. ಇಸ್ಮಾಯಿಲ್ ಹಾಜಿ ನಿಧನ

ಪುತ್ತೂರು: ಮುಕ್ವೆ ಜಮಾಅತ್ ಗೆ ಒಳಪಟ್ಟ ಬೆದ್ರಾಳ ನಿವಾಸಿ, ಮುಕ್ವೆ ಜುಮಾ ಮಸೀದಿಯ ಆಡಳಿತ ಸಮಿತಿಯ ಮಾಜಿ ಅಧ್ಯಕ್ಷ ಎಸ್. ಇಸ್ಮಾಯಿಲ್ ಹಾಜಿ ಯಾನೆ ಶಿಬರ ಮೋನುಚ್ಚ (84 ವ.)ರವರು ಅಲ್ಪಕಾಲದ ಅನಾರೋಗ್ಯದಿಂದ ಆ. 21ರಂದು ಬೆದ್ರಾಳದ ಸ್ವಗೃಹದಲ್ಲಿ ನಿಧನರಾದರು.

ಇವರು ಹಲವಾರು ವರ್ಷಗಳ ಕಾಲ ಮುಕ್ವೆ ಜುಮಾ ಮಸೀದಿಯ ಆಡಳಿತ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಸಾಮಾಜಿಕ, ಧಾರ್ಮಿಕ ಕ್ಷೇತ್ರದಲ್ಲಿ ಸಕ್ರೀಯರಾಗಿದ್ದ ಅವರು, ಸಮುದಾಯ ನಿರ್ಮಾಣ ಸಮಿತಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಮೃತರು  ಪತ್ನಿ, ಪುತ್ರ ಅಬ್ದುಲ್ ರಹಿಮಾನ್,

 ಪುತ್ರಿಯರನ್ನು ಅಗಲಿದ್ದಾರೆ. ಮೃತರ ಮನೆಗೆ ಹಲವು ಗಣ್ಯರು ಭೇಟಿ ನೀಡಿ ಸಂತಾಪ ಸೂಚಿಸಿದ್ದಾರೆ.




Leave a Comment: