ಕಲ್ಲಡ್ಕ ಮ್ಯೂಸಿಯಂ ವೀಕ್ಷಿಸಿದ ದ.ಕ. ಜಿಲ್ಲಾಧಿಕಾರಿ ಮುಲೈ ಮುಗಿಲನ್

ಸುದ್ದಿಗಳು News

Posted by vidyamaana on 2024-06-30 19:51:42 |

Share: | | | | |


ಕಲ್ಲಡ್ಕ ಮ್ಯೂಸಿಯಂ ವೀಕ್ಷಿಸಿದ ದ.ಕ. ಜಿಲ್ಲಾಧಿಕಾರಿ ಮುಲೈ ಮುಗಿಲನ್

ಬಂಟ್ವಾಳ : ತಾಲೂಕಿನ ವಿವಿಧ ಕಡೆಗಳಿಗೆ ತೆರಳಿ ಮಳೆಹಾನಿ ಬಗ್ಗೆ ವೀಕ್ಷಿಸಿದ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ಅವರು ಜಿಲ್ಲೆಯಲ್ಲಿಯೇ ಖ್ಯಾತಿ ಪಡೆದಿರುವ ಕಲ್ಲಡ್ಕದ ಯಾಸೀರ್ ಅವರ ಅಪರೂಪದ ವಸ್ತುಗಳ ಸಂಗ್ರಹವಿರುವ ಕಲ್ಲಡ್ಕ ಮ್ಯೂಸಿಯಂಗೆ ಭೇಟಿ ನೀಡಿದರು.ಹಿಂದಿನ ಕಾಲದ ವಸ್ತುಗಳು, ನಾಣ್ಯ, ಪತ್ರಿಕೆಗಳ ಸಂಗ್ರಹವನ್ನು ವೀಕ್ಷಿಸಿ ರೋಮಾಂಚನಗೊಂಡ ಅವರು ಯಾಸೀರ್ ಅವರ ವಸ್ತುಗಳ ಸಂಗ್ರಹಣ ಕೌಶಲ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಅತ್ಯಂತ ಸಾವಕಾಶವಾಗಿ ಪ್ರತಿಯೊಂದು ವಸ್ತುಗಳನ್ನು ಕುತೂಹಲದಿಂದ ವೀಕ್ಷಿಸಿ ಅವುಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಬಳಿಕ ಮೊಡಂಕಾಪುವಿನಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಬಾಲಕರ ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿದರು. ಇಲ್ಲಿನ ಮಕ್ಕಳೊಂದಿಗೆ ಮಕ್ಕಳಾಗಿ ಬೆರೆತು ಎಲ್ಲರಿಗೂ ಕೈಕುಲುಕಿ ಮೆಚ್ಚುಗೆ ವ್ಯಕ್ತಪಡಿಸಿದರು. ಇದೇ ವೇಳೆ ಮಕ್ಕಳಿಂದ ಅಂಬೇಡ್ಕರ್ ಬಗ್ಗೆ ಹಾಡು ಹಾಡಿಸಿ ವಿದ್ಯಾರ್ಥಿಗಳನ್ನು ಹುರಿದುಂಬಿಸಿ ಗಮನ ಸೆಳೆದರು. ತಹಸೀಲ್ದಾರ್ ಅರ್ಚನಾ ಭಟ್, ವಿದ್ಯಾರ್ಥಿ ನಿಲಯ ಮೇಲ್ವಿಚಾರಕರು ಜೊತೆಗಿದ್ದರು.

 Share: | | | | |


ಕೋಳಿ ಅಂಕ ಕಾನೂನು ಬಾಹಿರ – ಅನುಮತಿ ಕೇಳ್ಕೊಂಡು ಠಾಣೆಗೆ ಬರ್ಬೇಡಿ ಖಡಕ್ ಸೂಚನೆ ಕೊಟ್ರು SP ರಿಷ್ಯಂತ್

Posted by Vidyamaana on 2024-01-30 16:36:27 |

Share: | | | | |


ಕೋಳಿ ಅಂಕ ಕಾನೂನು ಬಾಹಿರ – ಅನುಮತಿ ಕೇಳ್ಕೊಂಡು ಠಾಣೆಗೆ ಬರ್ಬೇಡಿ ಖಡಕ್ ಸೂಚನೆ ಕೊಟ್ರು SP ರಿಷ್ಯಂತ್

ಮಂಗಳೂರು: ಜೂಜಿನ ಕೋಳಿ ಅಂಕವು ಕಾನೂನುಬಾಹಿರ ಅಪರಾಧವಾಗಿದ್ದು, ಕೋಳಿ ಅಂಕವನ್ನು ನಡೆಸುವುದಕ್ಕಾಗಿ ಪೊಲೀಸ್ ಠಾಣೆಗಳಲ್ಲಿ ಅನುಮತಿ ನೀಡಲು ಕಾನೂನಿನಲ್ಲಿ ಯಾವುದೇ ಅವಕಾಶವಿರುವುದಿಲ್ಲ ಎಂದು ದ.ಕ. ಎಸ್ ಪಿ ಸಿಬಿ ರಿಷ್ಯಂತ್ ತಿಳಿಸಿದ್ದಾರೆ.


ಸುದ್ದಿಗೋಷ್ಠಿ ನಡೆಸಿದ ಅವರು ಕೋಳಿ ಅಂಕ ನಡೆಸಲು ಕಾನೂನಿನಲ್ಲಿ ಯಾವುದೇ ಅವಕಾಶವಿರುವುದಿಲ್ಲ ಹಾಗಾಗಿ ಸಾರ್ವಜನಿಕರು ಕೋಳಿ ಅಂಕ ನಡೆಸಲು ಅನುಮತಿಗಾಗಿ ಪೊಲೀಸ್ ಠಾಣೆಗಳಿಗೆ ಮನವಿ ಸಲ್ಲಿಸಬಾರದು ಎಂದು ಹೇಳಿದರು.

ಮುಂದಿನ ದಿನಗಳಲ್ಲಿ ಇಂತಹ ಅಕ್ರಮ ಚಟುವಟಿಕೆಗಳನ್ನು ನಡೆಸುವುದು ಕಂಡುಬಂದಲ್ಲಿ, ಅವರ ವಿರುದ್ಧ ಸೂಕ್ತ ಕಾನೂನುಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ

ಉಳ್ಳಾಲ :ತೌಡುಗೋಳಿ ನಿವಾಸಿ ವಿವಾಹಿತೆ ಉಳ್ಳಾಲ ಮೂಲದ ಸುಜಾತಾ ಶೆಟ್ಟಿ ಪುಣೆಯಲ್ಲಿ ಅನುಮಾನಸ್ಪದ ಸಾವು

Posted by Vidyamaana on 2023-10-11 15:42:04 |

Share: | | | | |


ಉಳ್ಳಾಲ :ತೌಡುಗೋಳಿ ನಿವಾಸಿ ವಿವಾಹಿತೆ ಉಳ್ಳಾಲ ಮೂಲದ ಸುಜಾತಾ ಶೆಟ್ಟಿ ಪುಣೆಯಲ್ಲಿ ಅನುಮಾನಸ್ಪದ ಸಾವು

ಉಳ್ಳಾಲ : ನಾಲ್ಕು ತಿಂಗಳ ಹಿಂದೆಯಷ್ಟೇ ವಿವಾಹವಾಗಿದ್ದ ತೌಡುಗೋಳಿ ಕ್ರಾಸ್ ಗುರಿಕಾರಮೂಲೆ ನಿವಾಸಿ ನಾರಾಯಣ ಶೆಟ್ಟಿ ಎಂಬವರ ಪುತ್ರಿ ಸುಜಾತ ಶೆಟ್ಟಿ (38) ಎಂಬವರು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ಪುಣೆಯ ಭಾರತೀಯ ವಿದ್ಯಾಪೀಠ ಎಂಬಲ್ಲಿ ನಡೆದಿದೆ.

ಪಜೀರು ಪಾನೇಲ ನಿವಾಸಿ ಪುಣೆಯಲ್ಲಿ ಕ್ಯಾಂಟೀನ್ ನಡೆಸುತ್ತಿದ್ದ ಸುರೇಶ್ ಕೈಯ್ಯ ಎಂಬವರಿಗೆ ನಾಲ್ಕು ತಿಂಗಳ ಹಿಂದೆಯಷ್ಟೇ ಸುಜಾತಾ ಅವರನ್ನು ವಿವಾಹ ಮಾಡಿಕೊಡಲಾಗಿತ್ತು. ಅ.8 ರಂದು ಸುಜಾತ ಮೃತದೇಹ ಭಾರತೀಯ ವಿದ್ಯಾಪೀಠದಲ್ಲಿರುವ ಮನೆಯೊಳಗೆ ಅನುಮಾನಸ್ಪದ ರೀತಿಯಲ್ಲಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಕಂಡುಬಂದಿತ್ತು. ಈ ಬಗ್ಗೆ ಅಲ್ಲಿನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಮೃತದೇಹವನ್ನು ಶವಮಹಜರಿಗೆ ಕಳುಹಿಸಲಾಗಿತ್ತು. ಅ.9 ರಂದು ತೌಡುಗೋಳಿ ಸಮೀಪ ಸುಜಾತ ಅವರ ಅಂತಿಮ ಸಂಸ್ಕಾರ ನೆರವೇರಿದ್ದು, ಮನೆಮಂದಿ ಸುರೇಶ್ ವಿರುದ್ಧ ಅನುಮಾನ ವ್ಯಕ್ತಪಡಿಸಿದ್ದಾರೆ. ಶವಮಹಜರು ವರದಿ ಬಂದ ಬಳಿಕವಷ್ಟೇ ಪ್ರಕರಣದ ಸತ್ಯಾಸತ್ಯತೆ ಹೊರಬೀಳಲಿದೆ. ಸುಜಾತಾ ಅವರು ತೊಕ್ಕೊಟ್ಟು ಬ್ಯೂಟಿಪಾರ್ಲರ್ ನಲ್ಲಿ ಈ ಹಿಂದೆ ಬ್ಯೂಟೀಷಿಯನ್ ಆಗಿ ಕೆಲಸ‌ನಿರ್ವಹಿಸುತ್ತಿದ್ದರು.

ಉಪ್ಪಳ : ಹಾಡಹಗಲೇ ವಾಹನದ ಗಾಜು ಒಡೆದು ಎಟಿಎಂಗೆ ತುಂಬಲು ತಂದಿದ್ದ ಹಣ ಕಳವು

Posted by Vidyamaana on 2024-03-27 17:16:13 |

Share: | | | | |


ಉಪ್ಪಳ : ಹಾಡಹಗಲೇ ವಾಹನದ ಗಾಜು ಒಡೆದು ಎಟಿಎಂಗೆ ತುಂಬಲು ತಂದಿದ್ದ ಹಣ ಕಳವು

ಕಾಸರಗೋಡು, ಮಾ.27: ಎಟಿಎಂಗೆ ಹಣ ತುಂಬಿಸಲು ಬಂದಿದ್ದ ವಾಹನದಿಂದ 50 ಲಕ್ಷ ರೂ. ದರೋಡೆಗೈದ ಘಟನೆ ಉಪ್ಪಳಪೇಟೆಯಲ್ಲಿ ನಡೆದಿದೆ.


ವಾಹನದ ಗಾಜನ್ನು ಒಡೆದು ಹಣ ದರೋಡೆ ಮಾಡಿದ್ದಾರೆ. ಉಪ್ಪಳ ಪೇಟೆಯಲ್ಲಿರುವ ಆಕ್ಸಿಸ್ ಬ್ಯಾಂಕ್ ನ ಎ ಟಿ ಎಂ ಮೆಷಿನ್ ಗೆ ಹಣ ತುಂಬಿಸಲು ಬಂದಿದ್ದ ಸಂದರ್ಭ ಈ ಘಟನೆ ನಡೆದಿದೆ.


ವಾಹನದಲ್ಲಿದ್ದ ನೌಕರರು ವಾಹನ ನಿಲ್ಲಿಸಿ ಎಟಿಎಂ ಮೆಷಿನ್ ತೆರೆದು ವಾಹನದಲ್ಲಿದ್ದ ಹಣದ ಬಾಕ್ಸನ್ನು ತೆಗೆದುಕೊಂಡು ಹೋಗಲು ಮರಳಿ ಬಂದಾಗ ವಾಹನದ ಗಾಜು ಹುಡಿಯಾದ ಸ್ಥಿತಿಯಲ್ಲಿ ಕಂಡುಬಂದಿದೆ. ಪರಿಶೀಲಿಸಿದಾಗ 50 ಲಕ್ಷ ರೂ. ಇದ್ದ ಬಾಕ್ಸ್ ನಾಪತ್ತೆಯಾಗಿತ್ತು. ಖಾಸಗಿ ಏಜೆನ್ಸಿಯ ವಾಹನದಲ್ಲಿ ಹಣವನ್ನು ತಂದು ಎಟಿಎಂ ಗೆ ತುಂಬಿಸಲಾಗುತ್ತಿತ್ತು. ವಾಹನದ ಗಾಜನ್ನು ಒಡೆದು ಕೃತ್ಯ ನಡೆಸಲಾಗಿದೆ.


ಮಂಜೇಶ್ವರ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ಆರಂಭಿಸಿದ್ದು , ವಾಹನದ ಚಾಲಕ ಮತ್ತು ನೌಕರನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಸಮೀಪದ ಸಿಸಿಟಿವಿ ಕ್ಯಾಮರಾ ಮೂಲಕ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ರಿಕ್ಷಾ: ಗಾಯ

Posted by Vidyamaana on 2024-05-10 15:14:17 |

Share: | | | | |


ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ರಿಕ್ಷಾ: ಗಾಯ

ಪುತ್ತೂರು: ಮಿತ್ತೂರು ರೈಲ್ವೇ ಓವರ್ ಬ್ರಿಡ್ಜ್ ಸಮೀಪ ರಿಕ್ಷಾವೊಂದು ಪಲ್ಟಿಯಾಗಿ, ಚಾಲಕ ಗಾಯಗೊಂಡ ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿದೆ.

ಆಟೋ ಚಾಲಕ, ಮಿತ್ತಪಡ್ಪು ಪಾಟ್ರಕೋಡಿ ನಿವಾಸಿ ನೀಲಪ್ಪ ಮೂಲ್ಯ ಗಾಯಗೊಂಡವರು. ರಿಕ್ಷಾದಲ್ಲಿದ್ದ ಇಬ್ಬರು ಸವಾರರು ಪಾರಾಗಿದ್ದಾರೆ.

ಕಲ್ಲಡ್ಕ ಪ್ರಭಾಕರ್ ಭಟ್ ಹೆಸರಿನಲ್ಲಿ ನಕಲಿ ಫೇಸ್ ಬುಕ್ ಖಾತೆ- ದೂರು ದಾಖಲು

Posted by Vidyamaana on 2023-08-01 13:10:03 |

Share: | | | | |


ಕಲ್ಲಡ್ಕ ಪ್ರಭಾಕರ್ ಭಟ್ ಹೆಸರಿನಲ್ಲಿ ನಕಲಿ ಫೇಸ್ ಬುಕ್ ಖಾತೆ- ದೂರು ದಾಖಲು

ಬಂಟ್ವಾಳ: ಅರ್ ‌ಎಸ್.ಎಸ್.ಪ್ರಮುಖ ಕಲ್ಲಡ್ಕ ಡಾ. ಪ್ರಭಾಕರ್ ಭಟ್ ಅವರ ಹೆಸರಿನಲ್ಲಿ ನಕಲಿ ಫೇಸ್ ಬುಕ್ ಖಾತೆ ತೆರದು ಆಕ್ಷೇಪ ಅರ್ಹ ಬರಹಗಳನ್ನು ಬರೆದು ಸಮಾಜದಲ್ಲಿ ಅಶಾಂತಿ ಹಬ್ಬಲು ಕೆಲವು ಕಿಡಿಗೇಡಿಗಳು ಪ್ರಯತ್ನಿಸುತ್ತಿದ್ದು, ಇವರ ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳುವಂತೆ ಮಂಗಳೂರು ಸೈಬರ್ ಕ್ರೈಮ್ ಪೋಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ.


ಆರ್‌.ಎಸ್.ಎಸ್.ಪ್ರಮುಖರಾಗಿರುವ ಕಲ್ಲಡ್ಕ ಶ್ರೀರಾಮ‌ ವಿದ್ಯಾ ಕೇಂದ್ರದ ಸಂಸ್ಥಾಪಕ, ಪುತ್ತೂರು ವಿವೇಕಾನಂದ ವಿದ್ಯಾ ವರ್ದಕ ಸಂಘದ ಅಧ್ಯಕ್ಷರಾಗಿರುವ ಹಿಂದೂ ಸಾಮ್ರಾಟ್ ಎಂದೇ ಕರೆಯಲ್ಪಡುವ ಕಲ್ಲಡ್ಕ ‌ಡಾ. ಪ್ರಭಾಕರ್ ಭಟ್ ಅವರ ಹೆಸರಿನಲ್ಲಿ ನಕಲಿ ಫೇಸ್ ಬುಕ್ ಖಾತೆಯನ್ನು ತೆರದು ಆಕ್ಷೇಪ ಆರ್ಹ ಸುದ್ದಿಗಳನ್ನು ಬಿತ್ತರಿಸುತ್ತಿರುವ ಬಗ್ಗೆ ದೂರು ದಾಖಲಾಗಿದೆ.

ಕಲ್ಲಡ್ಕ ಡಾ ಭಟ್ ಅವರ ಫೇಸ್ ಬುಕ್ ಖಾತೆಯಾಗಲಿ, ಅಥವಾ ಇನ್ನಿತರ ಯಾವುದೇ ಸಾಮಾಜಿಕ ಜಾಲತಾಣದಲ್ಲಿ ಖಾತೆಯನ್ನು ಹೊಂದಿರುವುದಿಲ್ಲ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.

ಅಲ್ಲದೆ ಈ ಖಾತೆಯ ಮೂಲಕ ಸಮಾಜದಲ್ಲಿ ಅಶಾಂತಿ ಹಬ್ಬಿಸುವ ಪ್ರಯತ್ನ ಮತ್ತು ಹೆಸರನ್ನು ಕೆಡಿಸುವ ಕೆಲಸ ಮಾಡಲಾಗುತ್ತಿದ್ದು ಈ ಬಗ್ಗೆ ಪೋಲೀಸರು ಸೂಕ್ತವಾದ ತನಿಖೆ ನಡೆಸುವಂತೆ ಮತ್ತು ಅವರ ಮೇಲೆ ಕಾನೂನು ಕ್ರಮವನ್ನು ಕೈಗೊಂಡು ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಪುನರಾವರ್ತನೆ ಕಂಡುಬರದಂತೆ ಪೋಲೀಸರು ‌ನಿಗಾವಹಿಸುವಂತೆಯೂ ಅವರು ತಿಳಿಸಿದ್ದಾರೆ.

ಮಂಗಳೂರು- ಪುತ್ತೂರು: ವಿದ್ಯುತ್ ಚಾಲಿತ ರೈಲು ಪ್ರಾಯೋಗಿಕ ಓಡಾಟ

Posted by Vidyamaana on 2023-07-29 03:53:35 |

Share: | | | | |


ಮಂಗಳೂರು- ಪುತ್ತೂರು: ವಿದ್ಯುತ್ ಚಾಲಿತ ರೈಲು ಪ್ರಾಯೋಗಿಕ ಓಡಾಟ

ಮಂಗಳೂರು, ಜು.28: ನಗರ ಹೊರವಲಯದ ಪಡೀಲ್‌ನಿಂದ ಪುತ್ತೂರು ತನಕದ ವಿದ್ಯುದ್ದೀಕರಣಗೊಂಡ ರೈಲು ಮಾರ್ಗದಲ್ಲಿ ವಿದ್ಯುತ್ ಚಾಲಿತ ರೈಲು ಇಂಜಿನ್‌ನ ಪ್ರಾಯೋಗಿಕ ಓಡಾಟವು ಶುಕ್ರವಾರ ನಡೆಯಿತು.


ಮಧ್ಯಾಹ್ನ ಸುಮಾರು 2:30ಕ್ಕೆ ಪಡೀಲ್‌ನಿಂದ ಹೊರಟ ರೈಲು ಸಂಜೆ 4ಕ್ಕೆ ಪುತ್ತೂರು ತಲುಪಿತು. ಹಿಮ್ಮುಖ ದಿಕ್ಕಿನಲ್ಲಿ ಚಲಿಸುವಾಗ ವೇಗ ಪ್ರಯೋಗ ನಡೆಸಲಾಯಿತು ಎಂದು ಮೈಸೂರು ವಿಭಾಗದ ಹಿರಿಯ


ವಿಭಾಗೀಯ ಇಂಜಿನಿಯರ್ (ಇಲೆಕ್ನಿಕಲ್) ಸೌಂದ‌


ರಾಜನ್ ಮಾಹಿತಿ ನೀಡಿದ್ದಾರೆ.


ಈ ಮಾರ್ಗದಲ್ಲಿ ವಿದ್ಯುದ್ದೀಕರಣ ಕಾಮಗಾರಿಯು ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಆರಂಭಿಸಲಾಗಿತ್ತು. ಪ್ರಾಯೋಗಿಕ ಓಡಾಟ ನಡೆಸಿದ ವಿದ್ಯುದ್ದೀಕರ ಗೊಂಡ ಮಾರ್ಗದಲ್ಲಿ ರೈಲುಗಳನ್ನು ಓಡಿಸಲು ಟ್ರ್ಯಾಕ್ ಫಿಟ್ ಪ್ರಮಾಣಪತ್ರ ಶೀಘ್ರ ದೊರೆಯಬಹುದು ಎಂದು ರಾಜನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆನೈರುತ್ಯ ರೈಲ್ವೆ ಪ್ರಿನ್ಸಿಪಲ್ ಚೀಫ್ ಇಲೆಕ್ಟಿಕಲ್ ಇಂಜಿನಿಯರ್ ಜೈಪಾಲ್ ಸಿಂಗ್ ಪ್ರಾಯೋಗಿಕ ಓಡಾಟ ಮತ್ತು ಪರಿಶೀಲನೆಯ ನೇತೃತ್ವ ವಹಿಸಿದ್ದರು.


*ಸುಬ್ರಹ್ಮಣ್ಯ ರಸ್ತೆ ನಿಲ್ದಾಣ, ಕಬಕ ಪುತ್ತೂರು-ಸುಬ್ರಹ್ಮಣ್ಯ ರಸ್ತೆ (ನೆಟ್ಟಣ) ವಿಭಾಗದಲ್ಲಿ (48 ಮಾರ್ಗ ಕಿ.ಮೀ) ವಿದ್ಯುದ್ದೀಕರಣ ಕಾಮಗಾರಿ ಭರದಿಂದ ಸಾಗುತ್ತಿದ್ದು, ಈ ವರ್ಷದ ಸೆಪ್ಟೆಂಬರ್ ಅಥವಾ ಅಕ್ಟೋಬರ್‌ಗೆ ಕಾಮಗಾರಿ ಪೂರ್ಣಗೊಳ್ಳಬಹುದು. ಸುಬ್ರಹ್ಮಣ್ಯ ರಸ್ತೆ ಮತ್ತು ಹಾಸನ ನಡುವಿನ ಮಂಗಳೂರು-ಹಾಸನ ವಿಭಾಗದ ವಿದ್ಯುದ್ದೀಕರಣಕ್ಕೆ ಇನ್ನೂ ಸ್ವಲ್ಪಸಮಯ ಬೇಕಾಗಬಹುದು ಎಂದು ಇಲಾಖೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.


ಸುಬ್ರಹ್ಮಣ್ಯ ರಸ್ತೆ ನಿಲ್ದಾಣದವರೆಗೆ ವಿದ್ಯುದ್ದೀಕರಣ ಕಾರ್ಯವು ಪೂರ್ಣಗೊಂಡಾಗ, ಸ್ಥಳೀಯ ರೈಲುಗಳನ್ನು ಇಲೆಕ್ಟಿಕಲ್ ಲೊಕೊಗಳಿಂದ ನಿರ್ವಹಿಸಬಹುದಾಗಿದೆ.


ಮೈಸೂರು-ಹಾಸನ-ಮಂಗಳೂರು ಮಾರ್ಗವು 2021ರ ಜುಲೈನಲ್ಲಿ ಅರಸೀಕೆರೆ-ಹಾಸನ (47 ಕಿಮೀ) ಸಹಿತ ಮೈಸೂರು-ಹಾಸನ- ಮಂಗಳೂರು ಮಾರ್ಗವನ್ನು (300 ಕಿಮೀ) ವಿದ್ಯುದ್ದೀಕರಿಸುವ ಗುತ್ತಿಗೆಯನ್ನುಒದಗಿಸಲಾಗಿತ್ತು. ಜೂನ್ 2024ರೊಳಗೆ ಈ ಯೋಜನೆ ಪೂರ್ಣಗೊಳಿಸಲು2018ರ ಕೇಂದ್ರ ಬಜೆಟ್‌ನಲ್ಲಿ 315 ಕೋ.ರೂ ನಿಗದಿಪಡಿಸಲಾಗಿತ್ತು

Recent News


Leave a Comment: