ಮಂಗಳೂರು : ನಿರ್ಮಾಣ ಹಂತದ ಕಟ್ಟಡದ ಬಳಿ ಭೂಕುಸಿತ ಪ್ರಕರಣ ಮಣ್ಣಿನಡಿ ಸಿಲುಕಿದ್ದ ಕಾರ್ಮಿಕ ಚಂದನ್ ಕುಮಾರ್ ಮೃತ್ಯು

ಸುದ್ದಿಗಳು News

Posted by vidyamaana on 2024-07-03 20:52:26 |

Share: | | | | |


ಮಂಗಳೂರು : ನಿರ್ಮಾಣ ಹಂತದ ಕಟ್ಟಡದ ಬಳಿ ಭೂಕುಸಿತ ಪ್ರಕರಣ ಮಣ್ಣಿನಡಿ ಸಿಲುಕಿದ್ದ ಕಾರ್ಮಿಕ ಚಂದನ್ ಕುಮಾರ್ ಮೃತ್ಯು

ಮಂಗಳೂರು : ನಿರ್ಮಾಣ ಹಂತದ ಕಟ್ಟಡದ ಬಳಿ ಭೂಕುಸಿತ ಸಂಭವಿಸಿ ಮಣ್ಣಿನಡಿ ಸಿಲುಕಿದ್ದ ಓರ್ವ ಕಾರ್ಮಿಕ ಮೃತಪಟ್ಟ ಘಟನೆ ನಗರದ ಬಲ್ಮಠ ಬಳಿ ಬುಧವಾರ ಸಂಭವಿಸಿದೆ.ಮೃತ ಕಾರ್ಮಿಕನನ್ನು ಉತ್ತರ ಪ್ರದೇಶ ಮೂಲದ ಚಂದನ್ ಕುಮಾರ್ (30) ಎಂದು ತಿಳಿದು ಬಂದಿದೆ.ಮಧ್ಯಾಹ್ನ ಕಟ್ಟಡದ ಕಾಮಗಾರಿ ನಡೆಯುತಿದ್ದ ವೇಳೆ ಭೂಕುಸಿತ ಸಂಭವಿಸಿ ಮಣ್ಣಿನಡಿ ಇಬ್ಬರು ಕಾರ್ಮಿಕರು ಸಿಲುಕಿದ್ದರು.

ಘಟನೆ ನಡೆದ ವಿಚಾರ ತಿಳುಯುತ್ತಲೇ ಸ್ಥಳಕ್ಕೆ ಅಗ್ನಿಶಾಮಕ ದಳ , ಎಸ್ ಡಿ ಆರ್ ಎಫ್, ಎನ್ ಡಿ ಆರ್ ಎಫ್ ತಂಡ ದೌಡಾಯಿಸಿ ರಕ್ಷಣಾ ಕಾರ್ಯಾಚರಣೆ ನಡೆಸಲು ಆರಂಭಿಸಿದ್ದಾರೆ ಇದಾದ ಕೆಲವು ಗಂಟೆಗಳ ಬಳಿಕ ಓರ್ವ ಕಾರ್ಮಿಕನನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಈ ನಡುವೆ ಮಣ್ಣಿನಡಿ ಸಿಲುಕಿದ್ದ ಚಂದನ್ ಪತ್ತೆಗೆ ಕಾರ್ಯಾಚರಣೆ ಮುಂದುವರೆದಿತ್ತು.

ರಿಟೇನಿಂಗ್ ವಾಲ್ ಮತ್ತು ಶೀಟ್ ಗಳ ಮಧ್ಯೆ ಸಿಲುಕಿದ್ದ ಕಾರ್ಮಿಕನ ರಕ್ಷಣೆಗಾಗಿ ರಾತ್ರಿಯ ವರೆಗೂ ಕಾರ್ಯಾಚರಣೆ ನಡೆಸಿದರೂ ಕಾರ್ಮಿಕನನ್ನು ರಕ್ಷಿಸಲು ಸಾಧ್ಯವಾಗಲಿಲ್ಲ ಸುಮಾರು ಏಳು ಗಂಟೆಯ ವೇಳೆಗೆ ಮೃತದೇಹವನ್ನು ಎನ್ ಡಿ ಆರ್ ಎಫ್ ತಂಡ ಹೊರತೆಗೆದಿದೆ.

 Share: | | | | |


ಪೋಷಕರು ಬುದ್ಧಿವಾದ ಹೇಳಿದ್ದಕ್ಕೆ ವಿದ್ಯಾರ್ಥಿನಿ ಸುರಕ್ಷಾ ಆತ್ಮಹತ್ಯೆ

Posted by Vidyamaana on 2023-09-30 12:45:02 |

Share: | | | | |


ಪೋಷಕರು ಬುದ್ಧಿವಾದ ಹೇಳಿದ್ದಕ್ಕೆ ವಿದ್ಯಾರ್ಥಿನಿ ಸುರಕ್ಷಾ ಆತ್ಮಹತ್ಯೆ

ಚಿಕ್ಕಮಗಳೂರು: ಪೋಷಕರು ಬುದ್ಧಿವಾದ ಹೇಳಿದ್ದಕ್ಕೆ ಮನನೊಂದು ಪದವಿ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಶೃಂಗೇರಿ ತಾಲೂಕಿನ ಬೇಗಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹರಾವರಿ ಎಂಬ ಗ್ರಾಮದಲ್ಲಿ ನಡೆದಿದೆ.



ಶೃಂಗೇರಿ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಓದುತ್ತಿದ್ದ ವಿದ್ಯಾರ್ಥಿನಿ ಸುರಕ್ಷಾ (19) ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡವರು.

ಸುರಕ್ಷಾ ಗಣೇಶ ಹಬ್ಬಕ್ಕೆಂದು ಮನೆಗೆ ತೆರಳಿದ್ದಾಗ, ಪೋಷಕರು ಹಲವು ವಿಷಯದಲ್ಲಿ ಬುದ್ದಿವಾದ ಹೇಳಿದ್ದರು. ಇದರಿಂದ ಮನನೊಂದು ವಿದ್ಯಾರ್ಥಿನಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಮಂಗಳೂರಿನಲ್ಲಿ ಪ್ರಧಾನಿ ಮೋದಿ ರೋಡ್​ ಶೋ

Posted by Vidyamaana on 2024-04-14 20:23:09 |

Share: | | | | |


ಮಂಗಳೂರಿನಲ್ಲಿ ಪ್ರಧಾನಿ ಮೋದಿ ರೋಡ್​ ಶೋ

ಮಂಗಳೂರು: ಲೋಕಸಭೆ ಚುನಾವಣಾ ಪ್ರಚಾರಕ್ಕೆಂದು ರಾಜ್ಯಕ್ಕೆ ಆಗಮಿಸಿರುವ ಪ್ರಧಾನಿ ನರೇಂದ್ರ ಮೋದಿ ಮಂಗಳೂರಿನಲ್ಲಿ ರೋಡ್​ ಶೋ ನಡೆಸುತ್ತಿದ್ದಾರೆ.

ಇದಕ್ಕೂ ಮುನ್ನ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದ ಬಿಜೆಪಿ ವಿಜಯಸಂಕಲ್ಪ ಬೃಹತ್ ಸಮಾವೇಶ ಮುಗಿಸಿದ ಬಳಿಕ ಪ್ರಧಾನಿ ಮೋದಿ ಮಂಗಳೂರು ತಲುಪಿದರು.

ಮೈಸೂರು ದಸರಾ 2023: ಕೊಡಗಿನ ಪುಂಡಾನೆ ಅಭಿಮನ್ಯು ಈಗ ಗಜಪಡೆಯ ಕ್ಯಾಪ್ಟನ್ ಆಗಿದ್ದೇಗೆ..?

Posted by Vidyamaana on 2023-10-15 09:11:33 |

Share: | | | | |


ಮೈಸೂರು ದಸರಾ 2023: ಕೊಡಗಿನ ಪುಂಡಾನೆ ಅಭಿಮನ್ಯು ಈಗ ಗಜಪಡೆಯ ಕ್ಯಾಪ್ಟನ್ ಆಗಿದ್ದೇಗೆ..?

ಮೈಸೂರು , ಅಕ್ಟೋಬರ್‌ 15: ಇದುವರೆಗೆ ಸಾವಿರಾರು ಸಾಕಾನೆಗಳು ಮೈಸೂರು ದಸರಾದ ಜಂಬೂಸವಾರಿಯಲ್ಲಿ ಪಾಲ್ಗೊಂಡಿದ್ದರೂ ಕೂಡ ಅವುಗಳ ಪೈಕಿ ಕೆಲವೇ ಕೆಲವು ಆನೆಗಳಿಗೆ ಮಾತ್ರ ಚಿನ್ನದ ಅಂಬಾರಿ ಹೊರುವ ಅವಕಾಶ ದೊರೆತಿದ್ದು ಅದರಲ್ಲಿ ಈಗ ಅಂಬಾರಿ ಹೊರುವ ಅಭಿಮನ್ಯು ಕೂಡ ಒಂದಾಗಿದೆ.ಇತಿಹಾಸದ ಪುಟಗಳನ್ನು ಕೆದಕಿದರೆ ಅಂಬಾರಿ ಹೊತ್ತ ಹಲವು ಆನೆಗಳ ಪಟ್ಟಿಗಳು ಸಿಗುತ್ತವೆ. ಜೊತೆಗೆ ಅವುಗಳ ಸಾಮರ್ಥ್ಯದ ಬಗೆಗೂ ಮಾಹಿತಿಗಳು ದೊರೆಯುತ್ತವೆ. ಎಲ್ಲ ಆನೆಗಳಿಗೂ ಅಂಬಾರಿ ಹೊರಲಾಗುವುದಿಲ್ಲ. ಅವು ಅದಕ್ಕೆ ತಕ್ಕಂತ ಮೈಕಟ್ಟು ಹೊಂದಿರಬೇಕು. ಬಲಾಢ್ಯನಾಗಿರಬೇಕು. ಮಾವುತರ ಮಾತುಗಳನ್ನು ಚಾಚುತಪ್ಪದೆ ಪಾಲಿಸುವಂತಿರಬೇಕು.ಇಷ್ಟೇ ಅಲ್ಲದೆ ಇತರೆ ಆನೆಗಳನ್ನು ನಿಯಂತ್ರಿಸುವಂತಿರಬೇಕು. ಸದ್ಯ ಅಂತಹ ಎಲ್ಲ ಗುಣಲಕ್ಷಣಗಳನ್ನು ಹೊಂದಿರುವ ಕಾರಣದಿಂದಲೇ ಅಭಿಮನ್ಯುಗೆ ಕಳೆದ ಮೂರು ವರ್ಷಗಳಿಂದ ಗಜಪಡೆಯ ಕ್ಯಾಪ್ಟನ್ ಆಗಿ ಚಿನ್ನದ ಅಂಬಾರಿ ಹೊರುವ ಜವಬ್ದಾರಿಯನ್ನು ನೀಡಲಾಗಿದೆ. ಕಳೆದ ಮೂರು ವರ್ಷಗಳ ಕಾಲವೂ ಯಶಸ್ವಿಯಾಗಿ ತನ್ನ ಕಾರ್ಯವನ್ನು ನಿರ್ವಹಿಸಿ ಇದೀಗ ನಾಲ್ಕನೇ ವರ್ಷದ ಜವಬ್ದಾರಿ ನಿಭಾಯಿಸಲು ಸಿದ್ದನಾಗಿರುವುದು ಎದ್ದು ಕಾಣಿಸುತ್ತಿದೆ.


ಕೊಡಗಿನಲ್ಲಿ ಸೆರೆ ಸಿಕ್ಕ ಆನೆ


ಈ ಬಾರಿ ಅಭಿಮನ್ಯು ಚಿನ್ನದ ಅಂಬಾರಿ ಹೊರಲು ಬೇಕಾದ ಎಲ್ಲ ಕಠಿಣ ತಾಲೀಮುಗಳು ಮುಗಿಯುತ್ತಾ ಬಂದಿದೆ. ಸದ್ಯ ಮರದ ಅಂಬಾರಿ ಹೊರುವ ಮತ್ತು ಸಿಡಿಮದ್ದಿನ ತಾಲೀಮು ನಡೆಯುತ್ತಿದೆ. ಜಂಬೂಸವಾರಿಗೆ ಇನ್ನು ಹತ್ತು ದಿನಗಳಷ್ಟೆ ಬಾಕಿಯಿದ್ದು ಅಭಿಮನ್ಯು ಸೇರಿದಂತೆ ಗಜಪಡೆ ಸರ್ವ ರೀತಿಯಲ್ಲಿ ಸಜ್ಜಾಗುತ್ತಿದೆ. ಇದೆಲ್ಲದರ ನಡುವೆ ಕ್ಯಾಪ್ಟನ್ ಅಭಿಮನ್ಯು ಬಗ್ಗೆಯೂಹೇಳಲೇ ಬೇಕು.


1977ಕ್ಕೂ ಹಿಂದೆ ಎಲ್ಲ ಆನೆಗಳಂತೆ ಇದು ಕೂಡ ಪುಂಡಾನೆಯಾಗಿತ್ತು. ಕೊಡಗಿನ ಅರಣ್ಯದಲ್ಲಿ ಅಂಡಲೆಯುತ್ತಾ ಪುಂಡಾಟ ನಡೆಸುತ್ತಿತ್ತು. ಹೀಗಾಗಿ ಇದನ್ನು 1977 ರಲ್ಲಿ ಕೊಡಗಿನ ಹೆಬ್ಬಳ್ಳ ಅರಣ್ಯ ಪ್ರದೇಶದಲ್ಲಿ ಸೆರೆಹಿಡಿದು ಪಳಗಿಸಿ ಅಭಿಮನ್ಯು ಎಂದು ನಾಮಕರಣ ಮಾಡಲಾಯಿತು.


ಜವಾಬ್ದಾರಿ ನಿಭಾಯಿಸುವುದರಲ್ಲಿ ಎತ್ತಿದ ಕೈ


ಸದ್ಯ ಅಭಿಮನ್ಯು ವಯಸ್ಸು 58 ಆಗಿದ್ದು ಕಳೆದ 26 ವರ್ಷಗಳಿಂದ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುತ್ತಿದೆ. 2.74 ಮೀಟರ್ ಎತ್ತರ ಹಾಗೂ 3.51ಮೀಟರ್ ಉದ್ದವನ್ನು ಹೊಂದಿದ್ದು ಈಗ 5,300 ಕೆಜಿಯಷ್ಟು ತೂಕವಿದೆ. ಮುಂದಿನ ಜಂಬೂಸವಾರಿ ವೇಳೆಗೆ ಇನ್ನಷ್ಟು ತೂಕ ಜಾಸ್ತಿಯಾದರೂ ಅಚ್ಚರಿಯಿಲ್ಲ.ವರ್ಷಪೂರ್ತಿ ಕೊಡಗಿನ ಮತ್ತಿಗೋಡು ಶಿಬಿರದಲ್ಲಿರುವ ಅಭಿಮನ್ಯುನನ್ನು ಮಾವುತ ಜೆ.ಎಸ್.ವಸಂತ ಮತ್ತು ಕಾವಾಡಿ ಜೆ.ಕೆ.ರಾಜು ನೋಡಿಕೊಳ್ಳುತ್ತಾರೆ. ಮೊದಲಿಗೆ ಜಂಬೂಸವಾರಿಯಲ್ಲಿ ಮಾಮೂಲಿ ಆನೆಯಾಗಿ ಭಾಗವಹಿಸಿ ಬಳಿಕ ಆರೇಳು ವರ್ಷಗಳ ಕಾಲ ಸಂಗೀತ ಗಾಡಿಯನ್ನು ಎಳೆಯುವ ಜವಾಬ್ದಾರಿ ಹೊತ್ತಿದ್ದ ಈತನಿಗೆ 2020ರಲ್ಲಿ ಅರಣ್ಯಾಧಿಕಾರಿಗಳು ಅಂಬಾರಿ ಹೊರುವ ಜವಾಬ್ದಾರಿ ವಹಿಸಿದ್ದರು. ಅಲ್ಲಿಂದ ಇಲ್ಲಿವರೆಗೆ ಅದನ್ನು ಯಶಸ್ವಿಯಾಗಿ ಪೂರೈಸುತ್ತಾ ಬಂದಿದ್ದಾನೆ.


ಬಲಶಾಲಿ, ಧೈರ್ಯಶಾಲಿ, ಪರಾಕ್ರಮಿ ಅಭಿಮನ್ಯು


ಅಭಿಮನ್ಯು ಬಗ್ಗೆ ಇನ್ನಷ್ಟು ಹೇಳಬೇಕೆಂದರೆ ಈತ ಕಾಡಾನೆ ಸೆರೆ ಹಿಡಿಯುವುದು, ಕಾಡಿಗೆ ಹಿಮ್ಮೆಟ್ಟಿಸುವುದರಲ್ಲಿ ನಿಸ್ಸೀಮ. ಅಷ್ಟೇ ಅಲ್ಲದೆ ಹುಲಿ ಸೆರೆ ಕಾರ್ಯಾಚರಣೆಯಲ್ಲೂ ಈತ ಎತ್ತಿದ ಕೈ. ಇದುವರೆಗೆ ಈತ 200ಕ್ಕೂ ಹೆಚ್ಚು ಪುಂಡಾನೆ ಸೆರೆ ಮತ್ತು 40ಕ್ಕೂ ಹೆಚ್ಚು ಹುಲಿ ಸೆರೆ ಕಾರ್ಯಾಚರಣೆಯಲ್ಲಿಪಾಲ್ಗೊಂಡಿರುವುದು ಆತನ ಕಾರ್ಯವೈಖರಿಗೆ ಸಾಕ್ಷಿಯಾಗಿದೆ.


ಅಭಿಮನ್ಯು ಎಷ್ಟು ಬಲಶಾಲಿಯೋ ಅಷ್ಟೇ ಧೈರ್ಯಶಾಲಿ, ಪರಾಕ್ರಮಿಯೂ ಹೌದು. ಇದಕ್ಕೆ ಉದಾಹರಣೆ ಎಂದರೆ ಕೆಲ ವರ್ಷಗಳ ಹಿಂದೆ ರಾಮನಗರ ಜಿಲ್ಲೆಯ ಮಾಗಡಿಯ ಸಾವನದುರ್ಗ ಅರಣ್ಯದಲ್ಲಿ ಈತನ ಮೇಲೆ ಎರಡು ಕಾಡಾನೆಗಳು ದಾಳಿ ಮಾಡಿದರೂ ಧೃತಿಗೆಡದೆ ಅವುಗಳನ್ನು ಹಿಮ್ಮೆಟ್ಟಿಸಿ ಪರಾಕ್ರಮ ಮೆರೆದಿದ್ದನು. ಮೈಸೂರು ಮಾತ್ರವಲ್ಲದೆ ಶ್ರೀರಂಗಪಟ್ಟಣದಲ್ಲಿ ನಡೆಯುವ ದಸರಾದ ವೇಳೆ ಮೂರು ಬಾರಿ ಅಂಬಾರಿ ಹೊತ್ತಿರುವುದು ವಿಶೇಷವಾಗಿದೆ.


ಜಂಬೂ ಸವಾರಿಯ ಆಕರ್ಷಣೆ


ಒಟ್ಟಾರೆಯಾಗಿ ಹೇಳಬೇಕೆಂದರೆ ಪುಂಡಾನೆಯಾಗಿದ್ದ ಅಭಿಮನ್ಯು ಮೈಸೂರು ದಸರಾದಲ್ಲಿ ಭಾಗವಹಿಸಲು ಆರಂಭಿಸಿದ ಬಳಿಕ ಹಂತಹಂತವಾಗಿ ತನಗೆ ನೀಡಿದಜವಬ್ದಾರಿಯನ್ನು ನಿಷ್ಠೆಯಿಂದ ನಿರ್ವಹಿಸುತ್ತಾ ಇವತ್ತು ದಸರಾ ಜಂಬೂಸವಾರಿಯ ಪ್ರಮುಖ ಆಕರ್ಷಣೆಯಾಗಿ ಚಾಮುಂಡೇಶ್ವರಿ ವಿರಾಜಿತ ಚಿನ್ನದ ಅಂಬಾರಿಯನ್ನು ಹೊತ್ತು ಸಾಗುತ್ತಿರುವುದು ಖುಷಿಯ ವಿಚಾರವಾಗಿದೆ.

ಕಡಬದಲ್ಲಿ ನಕ್ಸಲರ ಚಲನವಲನ: ಮನೆಗೆ ಬಂದು ಊಟ ಮಾಡಿದ ಶಂಕಿತರು

Posted by Vidyamaana on 2024-04-06 13:10:16 |

Share: | | | | |


ಕಡಬದಲ್ಲಿ ನಕ್ಸಲರ ಚಲನವಲನ: ಮನೆಗೆ ಬಂದು ಊಟ ಮಾಡಿದ ಶಂಕಿತರು

ಕಡಬ: ಕಡಬ ತಾಲೂಕಿನ ಕೊಂಬಾರು ಸಮೀಪದ ಚೆರು ಗ್ರಾಮಕ್ಕೆ ಗರುವಾರ ಸಾಯಂಕಾಲ ನಕ್ಸಲರ ತಂಡ ಭೇಟಿ ನೀಡಿರುವ ಶಂಕೆ ವ್ಯಕ್ತವಾಗಿದೆ.

ನಕ್ಸಲರು ಚೆರು ಗ್ರಾಮದ ಮನೆಯೊಂದಕ್ಕೆ ತೆರಳಿ, ಎರಡು ಗಂಟೆಗಳ ಕಾಲ ಅಲ್ಲೇ ಕಾಲ ಕಳೆದಿದ್ದಾರೆ. ನಂತರ ಅದೇ ಮನೆಯಲ್ಲಿ ಊಟ ಮಾಡಿ ಬಳಿಕ ದಿನಸಿ ಸಾಮಗ್ರಿ ಪಡೆದಿರುವ ಮಾಡಿರುವ ಮಾಹಿತಿ ದೊರೆತಿದೆ.

ಮೇ 13 ಮತ ಏಣಿಕೆ | ಸುರತ್ಕಲ್ ಎನ್ಐಟಿಕೆಯಲ್ಲಿ ಬಿಗಿ ಭದ್ರತೆ: ದ.ಕ. ಜಿಲ್ಲಾಧಿಕಾರಿ ರವಿಕುಮಾರ್

Posted by Vidyamaana on 2023-05-13 01:53:50 |

Share: | | | | |


ಮೇ 13 ಮತ ಏಣಿಕೆ | ಸುರತ್ಕಲ್ ಎನ್ಐಟಿಕೆಯಲ್ಲಿ ಬಿಗಿ ಭದ್ರತೆ: ದ.ಕ. ಜಿಲ್ಲಾಧಿಕಾರಿ ರವಿಕುಮಾರ್

ಮಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಯ ಮತ ಎಣಿಕೆ ಕಾರ್ಯ ಮೇ 13ರಂದು ಆರಂಭವಾಗಲಿದ್ದು, ಸುರತ್ಕಲ್ ಎನ್ ಐಟಿಕೆಯಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ರವಿಕುಮಾರ್ ತಿಳಿಸಿದ್ದಾರೆ.ಈ ಬಗ್ಗೆ ಎನ್ಐಟಿಕೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೇ 10 ರಂದು ನಡೆದ ಚುನಾವಣೆಯಲ್ಲಿ ಜಿಲ್ಲೆಯಲ್ಲಿ 77.39% ಮತದಾನವಾಗಿದೆ. ಅಂಚೆ ಮತಗಳ ಎಣಿಕೆ ಬೆಳಿಗ್ಗೆ 8 ಗಂಟೆಗೆ ಪ್ರಾರಂಭವಾಗಲಿದ್ದು, ನಂತರ ಇವಿಎಂಗಳ ಎಣಿಕೆ ಬೆಳಿಗ್ಗೆ 8:30 ಕ್ಕೆ ನಡೆಯಲಿದೆ.ಅಭ್ಯರ್ಥಿಗಳು ಅಥವಾ ಅವರ ಏಜೆಂಟರು ರಿಟರ್ನಿಂಗ್ ಅಧಿಕಾರಿಗಳ ಪಕ್ಕದಲ್ಲಿ ಕುಳಿತುಕೊಳ್ಳಲು ಸಾಕಷ್ಟು ವ್ಯವಸ್ಥೆ ಮಾಡಲಾಗಿದೆ. ಮತ ಎಣಿಕೆ ಕೇಂದ್ರದ ಪ್ರತಿ ಟೇಬಲ್ ನ ಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಯಾವುದೇ ಅಕ್ರಮಗಳು ನಡೆಯದಂತೆ ಕೇಂದ್ರ ಮತ್ತು ರಾಜ್ಯ ಚುನಾವಣಾ ಆಯೋಗಗಳು ಮೇಲ್ವಿಚಾರಣೆ ನಡೆಸಲಿವೆ ಎಂದು ಜಿಲ್ಲಾಧಿಕಾರಿ ಹೇಳಿದರು.

ಮತ ಎಣಿಕೆ ಕೇಂದ್ರದಲ್ಲಿ 300 ಹೆಡ್ ಕಾನ್ಸ್ಟೇಬಲ್ ಗಳು, 14 ಇನ್ಸ್ಪೆಕ್ಟರ್ ಗಳು , 2 ಡಿಸಿಪಿಗಳು, 400 ಸಿವಿಲ್ ಪೊಲೀಸ್ ಸಿಬ್ಬಂದಿ, 39 ಸಹಾಯಕ ಸಬ್ಇನ್ಸ್ಪೆಕ್ಟರ್ ಗಳು, 200 ಗೃಹರಕ್ಷಕರು, 4 ತುಕಡಿಗಳು, ಕೆಎಸ್ ಆರ್ ಪಿ ತುಕಡಿಗಳು ಮತ್ತು ಸಿಎಪಿಎಫ್ ತುಕಡಿಗಳನ್ನು ನಿಯೋಜಿಸಲಾಗಿದೆ ಎಂದು ಹೇಳಿದ್ದಾರೆ.

ಇಸ್ರೇಲ್-ಪ್ಯಾಲೆಸ್ತೀನ್ ಯುದ್ಧ - ಹಮಾಸ್ ಬೆಂಬಲಿಸಿ ವಿಡಿಯೋ ಹರಿಬಿಟ್ಟ ವ್ಯಕ್ತಿಯ ಪೊಲೀಸ್ ವಶಕ್ಕೆ

Posted by Vidyamaana on 2023-10-14 18:59:44 |

Share: | | | | |


ಇಸ್ರೇಲ್-ಪ್ಯಾಲೆಸ್ತೀನ್ ಯುದ್ಧ - ಹಮಾಸ್ ಬೆಂಬಲಿಸಿ ವಿಡಿಯೋ ಹರಿಬಿಟ್ಟ ವ್ಯಕ್ತಿಯ ಪೊಲೀಸ್ ವಶಕ್ಕೆ

ಮಂಗಳೂರು : ಇಸ್ರೇಲ್​ ಮತ್ತು ಪ್ಯಾಲೆಸ್ತೀನ್​ನ ಹಮಾಸ್ ​ಉಗ್ರರ ನಡುವಿನ ಯುದ್ಧಕ್ಕೆ ಸಂಬಂಧಿಸಿದಂತೆ ಹಮಾಸ್  ಬೆಂಬಲಿಸಿ ವೀಡಿಯೋ ಹರಿಬಿಟ್ಟಿದ್ದ ಮಂಗಳೂರಿನ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.ಮಂಗಳೂರಿನ ಬಂದರು ನಿವಾಸಿ ಜಾಕಿರ್ ಯಾನೆ ಜಾಕಿ ಬಂಧಿತ ಆರೋಪಿ.


ಹಮಾಸ್ ಬೆಂಬಲಿಸಿ, ಪ್ಯಾಲೇಸ್ಟೈನ್, ಗಾಜಾ ಹಾಗೂ ಹಮಾಸ್ ದೇಶಪ್ರೇಮಿ ಯೋಧರಿಗೆ ಜಯ ಸಿಗಲು ಪ್ರಾರ್ಥಿಸುವಂತೆ ಕರೆ ನೀಡಿ ಜಾಕಿರ್ ವೀಡಿಯೋ ಹರಿಬಿಟ್ಟಿದ್ದ. ಈತನ ವಿವಾದಾತ್ಮಕ ಹೇಳಿಕೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದ್ದಂತೆ ಎಲ್ಲೆಡೆ ಭಾರೀ ಆಕ್ರೋಶ ವ್ಯಕ್ತವಾಗಿತ್ತು.


ಈ ಕೃತ್ಯದ ಬಗ್ಗೆ ಸಮಾಜದಲ್ಲಿ ಕೋಮುಸೌಹಾರ್ದತೆಗೆ ಧಕ್ಕೆಯಾಗುವ ಸಾಧ್ಯತೆ ಇರುವುದರಿಂದ ಈ ಕೃತ್ಯಕ್ಕೆ ಸಂಬಂಧಿಸಿದಂತೆ ಮಂಗಳೂರು ಉತ್ತರ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರಾದ ವಿನಾಯಕ ತೋರಗಲ್ ಅವರು ಸ್ವಯಂ ದೂರು ದಾಖಲಿಸಿ ಆರೋಪಿ ಜಾಕಿರ್ ಯಾನ ಜಾಕಿ ಎಂಬಾತನನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.


ಇನ್ನು ಈ ಆರೋಪಿತನ ಮೇಲೆ ಈ ಹಿಂದ ಕೂಡ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಸುಮಾರು 7 ಪ್ರಕರಣಗಳು ದಾಖಲಾಗಿದೆ ಎಂದು ತಿಳಿದು ಬಂದಿದೆ.



Leave a Comment: