ಬಂಟ್ವಾಳ : ವಗ್ಗ ಬಳಿ ಅಂಬುಲೆನ್ಸ್ ನಿಯಂತ್ರಣ ತಪ್ಪಿ ಪಲ್ಟಿ

ಸುದ್ದಿಗಳು News

Posted by vidyamaana on 2023-08-18 08:29:00 |

Share: | | | | |


ಬಂಟ್ವಾಳ : ವಗ್ಗ ಬಳಿ ಅಂಬುಲೆನ್ಸ್  ನಿಯಂತ್ರಣ ತಪ್ಪಿ ಪಲ್ಟಿ

ಬೆಳ್ತಂಗಡಿ: ರೋಗಿಯೊಬ್ಬರನ್ನು  ಕೊಂಡುಹೋಗುತ್ತಿರುವ ವೇಳೆ ಟುಫಾನ್ ಅಂಬುಲೆನ್ಸ್ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಚಾಲಕ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಘಟನೆ ವಗ್ಗ ಬಳಿ ಆಗಸ್ಟ್ 18 ರಂದು ನಡೆದಿದೆ.



ಬೆಳ್ತಂಗಡಿಯಿಂದ ಮಂಗಳೂರಿಗೆ ರೋಗಿಯೊಬ್ಬರನ್ನು ಕೊಂಡೊಯ್ಯುತ್ತಿರುವ ವೇಳೆ ಬಂಟ್ವಾಳದ ವಗ್ಗ ಬಳಿ ಅಂಬುಲೆನ್ಸ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಈ ವೇಳೆ ಚಾಲಕ ಮಡಂತ್ಯಾರ್ ಮಾಲಾಡಿ ನಿವಾಸಿ ಶಬೀರ್ ಎಂಬವರು ಗಂಭೀರ ಗಾಯಗೊಂಡಿದ್ದು ತಕ್ಷಣ ಅವರನ್ನು ತುಂಬೆ ಖಾಸಗಿ ಆಸ್ಪತ್ರೆಗೆ ಕೊಂಡು ಹೋದರೂ ಅಲ್ಲಿ ಅವರು ಚಿಕಿತ್ಸೆಗೆ ಸ್ಪಂದಿಸದೇ  ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

 Share: | | | | |


ಸುಳ್ಯದಲ್ಲಿ ಎರಡು ಖಾಸಗಿ ಬಸ್ ಸೀಝ್

Posted by Vidyamaana on 2023-07-06 02:15:00 |

Share: | | | | |


ಸುಳ್ಯದಲ್ಲಿ ಎರಡು ಖಾಸಗಿ ಬಸ್  ಸೀಝ್

ಸುಳ್ಯ; ಅತೀ ಹಳೆಯ ಪರ್ಮಿಟ್ ಹೊಂದಿದ್ದ ಎರಡು ಖಾಸಗಿ ಬಸ್ ಗಳನ್ನು ಆರ್ ಟಿ ಓ ಅಧಿಕಾರಿಗಳು ಸೀಝ್ ಮಾಡಿದ ಘಟನೆ ಸುಳ್ಯದಲ್ಲಿ ನಡೆದಿದೆ. ಸುಳ್ಯ - ಮಂಡೆಕೋಲು ಮಾರ್ಗದಲ್ಲಿ ಸಂಚರಿಸುತ್ತಿದ್ದ ಎರಡು ಬಸ್ ಗಳನ್ನು ಸೋಮವಾರ ಮುಂಜಾನೆ ಸಾರಿಗೆ ಇಲಾಖೆ ಇನ್ಸ್ ಪೆಕ್ಟರ್ ಇಸ್ಮಾನ್ ನೇತೃತ್ವದಲ್ಲಿ ಪುತ್ತೂರು ಆರ್ ಟಿ ಓ ಅಧಿಕಾರಿಗಳ ತಂಡ ಸೀಝ್ ಮಾಡಿದೆ.


ಹಿಂದಿನಿಂದಲೂ ಅಜ್ಜಾವರ ಮಂಡೆಕೋಲು - ಅಡೂರು ಗೆ ತೆರಳುತ್ತಿದ್ದ ಕೆಎ-20-ಸಿ-1809 ಖಾಸಗಿ ಬಸ್ ಅನಿಲ್ ಛಾತ್ರ ಎಂಬುವವರ ಹೆಸರಿನಲ್ಲಿದ್ದು ಈ ಬಸ್ಸು ಒಂದು ಲಕ್ಷದ ಹನ್ನೆರಡು ಸಾವಿರ ಟ್ಯಾಕ್ಸ್ ಉಳಿಸಿಕೊಂಡಿದೆ. ಅಲ್ಲದೇ ಕೆಎ-19-ಸಿ-0329 ಎಂಬ ಸಂಖ್ಯೆಯ ಇನ್ನೊಂದು ಬಸ್ ಸುಮಾರು ಮೂವತ್ತೊಂಬತ್ತು ಸಾವಿರ ಟ್ಯಾಕ್ಸ್ ಉಳಿಸಿಕೊಂಡಿದೆ. ಇವುಗಳಲ್ಲಿ ಒಂದು ಡಿಸೆಂಬರ್ ತಿಂಗಳಿನಲ್ಲಿ ಹಾಗೂ ಇನ್ನೊಂದು ಜನವರಿ ತಿಂಗಳಿನಲ್ಲಿ ಅವಧಿ ಮುಗಿದಿದ್ದರೂ ನವೀಕರಣ ಮಾಡದೇ ಬಸ್ ಗಗಳನ್ನು ಓಡಿಸುತ್ತಿರುವ ಕುರಿತು ಆರ್ ಟಿ ಓ ಅಧಿಕಾರಿಗಳಿಗೆ ದೂರು ಕೇಳಿಬಂದಿತ್ತು ಈ ಹಿನ್ನೆಲೆ ಬಸ್ ಗಳನ್ನು ಸೀಝ್ ಮಾಡಿದ್ದಾರೆ.ಸೀಝ್ ಆಗಿರುವ ಬಸ್ಸುಗಳು ಚೆನ್ನಕೇಶವ ದೇವಾಲಯದ ಬಳಿಯಲ್ಲಿ ಪೋಲೀಸ್ ಸುಪರ್ದಿಗೆ ನೀಡಲಾಗಿದೆ. ಈ ಕುರಿತಂತೆ ಕಾನೂನು ರೀತಿಯಲ್ಲಿ ಚಾರ್ಜ್ ಶೀಟ್ ಸಲ್ಲಿಕೆ ಹಾಗೂ ಪರವಾನಿಗೆ ಹೊಂದಿದ ಮಾಲಕರು ನೋಟಿಸ್ ಗೆ ಉತ್ತರ ಸಲ್ಲಿಸಿದ ಬಳಿಕ ಮುಂದಿನ ಕ್ರಮಗಳನ್ನು ಕೈಗೊಳ್ಳಲಾಗುವುದು ಎನ್ನಲಾಗಿದೆ.

ಗುಡ್ಡೆಅಂಗಡಿ : ರೆಫ್ರಿಜರೇಶನ್ ರಿಪೇರಿ ಅಂಗಡಿಯಲ್ಲಿ ಆಕಸ್ಮಿಕ ಅಗ್ನಿ ಅವಘಡ ಅಪಾರ ನಷ್ಟ.

Posted by Vidyamaana on 2023-03-05 15:31:42 |

Share: | | | | |


ಗುಡ್ಡೆಅಂಗಡಿ : ರೆಫ್ರಿಜರೇಶನ್ ರಿಪೇರಿ ಅಂಗಡಿಯಲ್ಲಿ  ಆಕಸ್ಮಿಕ  ಅಗ್ನಿ ಅವಘಡ ಅಪಾರ ನಷ್ಟ.

ಬಂಟ್ವಾಳ: ಪಾಣೆಮಂಗಳೂರು ಗ್ರಾಮದ ಮೆಲ್ಕಾರ್ ಸಮೀಪದ ಗುಡ್ಡೆಅಂಗಡಿಯಲ್ಲಿ ರೆಫ್ರಿಜರೇಟರ್ ರಿಪೇರಿ ಅಂಗಡಿಯಲ್ಲಿ ಭಾನುವಾರ ಸಂಜೆ ಆಕಸ್ಮಿಕ ಅಗ್ನಿ ಅವಘಡ ಉಂಟಾಗಿ ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ. 

ಬಿ ಸಿ ರೋಡು-ಪರ್ಲಿಯಾ ನಿವಾಸಿ ಫಾರೂಕ್ ಎಂಬವರಿಗೆ ಸೇರಿದ ಅಂಗಡಿಯಲ್ಲಿ ಈ ಬೆಂಕಿ ಅವಘಡ ಸಂಭವಿಸಿದ್ದು, ಬೆಂಕಿ ಹೊತ್ತಿಕೊಂಡ ಬಗ್ಗೆ ತಿಳಿದು ಬರುತ್ತಲೇ ಸ್ಥಳಕ್ಕಾಗಮಿಸಿದ ಸ್ಥಳೀಯರು ಬೆಂಕಿ ನಂದಿಸುವ ಪ್ರಯತ್ನ ನಡೆಸಿದ್ದಾರೆ. ಬಳಿಕ ಸ್ಥಳಕ್ಕಾಗಮಿಸಿದ ಬಂಟ್ವಾಳ ಅಗ್ನಿಶಾಮಕ ಸಿಬ್ಬಂದಿಗಳು ಪೂರ್ಣವಾಗಿ ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.

ರೈಲ್ವೆ ಹಳಿಗಳ ಮೇಲೆ ವಿಧ್ವಂಸಕ ಕೃತ್ಯ ನಡೆಸಲು ಯತ್ನ: ಮೂವರ ಬಂಧನ

Posted by Vidyamaana on 2023-11-16 04:40:47 |

Share: | | | | |


ರೈಲ್ವೆ ಹಳಿಗಳ ಮೇಲೆ ವಿಧ್ವಂಸಕ ಕೃತ್ಯ ನಡೆಸಲು ಯತ್ನ: ಮೂವರ ಬಂಧನ

ಮೈಸೂರು: ರೈಲ್ವೆ ಹಳಿಗಳ ಮೇಲೆ ಕಬ್ಬಿಣದ ಸ್ಲೀಪರ್ ಮತ್ತು ಮರದ ದಿಮ್ಮಿಗಳನ್ನು ಇರಿಸಿ ವಿಧ್ವಂಸಕ ಕೃತ್ಯ ನಡೆಸಲು ಯತ್ನಿಸಿದ ಪ್ರಕರಣವನ್ನು ರೈಲ್ವೆ ರಕ್ಷಣಾ ಪಡೆ ಪತ್ತೆ ಹಚ್ಚುವ ಮೂಲಕ ಸಂಭವಿಸಬಹುದಾದ ಅನಾಹುತವನ್ನು ತಪ್ಪಿಸಿದೆ.



ಚಾಮರಾಜನಗರದಿಂದ ಮೈಸೂರಿಗೆ ಬರುತ್ತಿದ್ದ ಎಕ್ಸ್ ಪ್ರೆಸ್ ರೈಲು ಗಾಡಿ ಸಂ. 06275 ರ ಲೋಕೋ ಪೈಲಟ್ (ಚಾಲಕ) ನಂಜನಗೂಡು ಮತ್ತು ಕಡಕೊಳ ರೈಲ್ವೆ ನಿಲ್ದಾಣಗಳ ನಡುವಿನ ರೈಲ್ವೆ ಹಳಿಯಲ್ಲಿ ಸಂಭಾವ್ಯ ಅನಾಹುತವನ್ನು ತಪ್ಪಿಸಿ ಅತ್ಯಂತ ಜಾಗರೂಕವಾದ ಶ್ಲಾಘನೀಯವಾದ ಕಾರ್ಯ ಮಾಡಿದ್ದಾರೆ. ರೈಲ್ವೆ ಎಂಜಿನ್ ನ ಚಾಲಕನ ತ್ವರಿತ ಪ್ರತಿಕ್ರಿಯೆಯ ಕಾರಣವಾಗಿ ಪ್ರಯಾಣಿಕರನ್ನು ಸುರಕ್ಷಿತವಾಗಿ ಕಾಪಾಡಲಾಗಿದ್ದು ರೈಲನ್ನು ಧ್ವಂಸಗೊಳಿಸುವ ದುರುದ್ದೇಶಪೂರಿತ ಪ್ರಯತ್ನವನ್ನು ವಿಫಲಗೊಳಿಸಲಾಗಿದೆ.


ಘಟನೆಗೆ ಸಂಬಂಧಿಸಿದಂತೆ ಸೋಮಯ್ ಮರಾಂಡಿ, ಭಜನು ಮುರ್ಮು ಮತ್ತು ದಸಮತ್ ಮರಾಂಡಿ ಎಂದು ಗುರುತಿಸಲಾದ ಮೂವರು ವ್ಯಕ್ತಿಗಳನ್ನು ರೈಲ್ವೆ ಸಂರಕ್ಷಣಾ ಪಡೆ ಮತ್ತು ರೈಲ್ವೆ ಪೊಲೀಸರು ಬಂಧಿಸಿದ್ದಾರೆ. ಮೂವರೂ ಆರೋಪಿಗಳು ಉದ್ದೇಶಪೂರ್ವಕವಾಗಿ ಕಿಲೋ ಮೀಟರ್. ನಂ 19/200-300ರಲ್ಲಿ ಹಳಿಗಳ ಮೇಲೆ ಕಬ್ಬಿಣದ ಸ್ಲೀಪರ್ ಮತ್ತು ಮರದ ದಿಮ್ಮಿಗಳನ್ನು ಇರಿಸಿದ್ದರು. ಇದರಿಂದಾಗಿ ರೈಲು ಗಾಡಿ ಸಂಖ್ಯೆ 06275 ಅನ್ನು ಬಲವಂತವಾಗಿ ನಿಲ್ಲಿಸಬೇಕಾಯಿತು.


ಈ ಕುರಿತು ಮಾಹಿತಿ ಪಡೆದ ಮೈಸೂರಿನ ರೈಲ್ವೆ ಸಂರಕ್ಷಣಾ ದಳದ ಸಹಾಯಕ ರಕ್ಷಣಾ ಆಯುಕ್ತ ಎಂ.ಎನ್.ಎ.ಖಾನ್, ಪೋಸ್ಟ್ ಕಮಾಂಡರ್ ಲ ಕೆ.ವಿ.ವೆಂಕಟೇಶ ಮತ್ತು ಅವರ ತಂಡ, ಆರ್‌ಪಿಎಫ್ ನ ಶ್ವಾನ ದಳ ಘಟನಾ ಸ್ಥಳಕ್ಕೆ ಕ್ಷಿಪ್ರವಾಗಿ ತೆರಳಿ ಅನಾಹುತ ತಪ್ಪಿಸುವಲ್ಲಿ‌ ಯಶಸ್ವಿಯಾಗಿದ್ದಾರೆ.ಒಡಿಶಾದ ಮಯೂರ್‌ಬಂಜ್ ನ ಬಂಗಿರಿಪೋಸಿದ ಜಲ್ದಿಹಾ ಮೂಲದ ಸೋಮಯ್ ಮರಾಂಡಿ ಎಂಬಾತ ಸ್ಥಳದಲ್ಲಿ ಪತ್ತೆಯಾಗಿದ್ದು, ವಿಚಾರಣೆ ನಡೆಸಿದಾಗ, ತನ್ನ ಸಹಚರರೊಂದಿಗೆ



ವಿಧ್ವಂಸಕ ಕೃತ್ಯದ ಯತ್ನವನ್ನು ಒಪ್ಪಿಕೊಂಡಿದ್ದಾನೆ ಎಂದು ರೈಲ್ವೆ ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳನ್ನು ಹೆಚ್ಚಿನ ತನಿಖೆಗಾಗಿ ಮೈಸೂರಿನ ರೈಲ್ವೆ ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ಆರೋಪಿಗಳ‌ವಿರುದ್ದ ರೈಲ್ವೆ ಕಾಯಿದೆ-1989ರ ಅನ್ವಯ Cr.No.39/2023 U/s 150(1)(A) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪ್ರಕರಣ ಕುರಿತಂತೆ ತನಿಖೆಯು ನಡೆಯುತ್ತಿದ್ದು ಜೀವಾವಧಿವರೆಗಿನ ಶಿಕ್ಷೆಗೆ ಗುರಿಯಾಗಬಹುದು ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.


ಘಟನೆಯ ಕಾರಣಕ್ಕಾಗಿ ರೈಲು ಸಂಖ್ಯೆ 06275ರ ಸಂಚಾರವನ್ನು ತಡೆಹಿಡಿದಿದ್ದ ಹಿನ್ನೆಲೆಯಲ್ಲಿ ಆ ಮಾರ್ಗದ ರೈಲುಗಳ ಸಂಚಾರದಲ್ಲಿ ಕೆಲ‌ ನಿಮಿಷಗಳ ಕಾಲ ವ್ಯತ್ಯಯ ಉಂಟಾಗಿತ್ತು.


ಮೈಸೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕಿ ಶಿಲ್ಪಿ ಅಗರ್ವಾಲ್ ರವರು ರೈಲಿನ ಚಾಲಕನ ಸಮಯೋಚಿತ ಕ್ರಮ ಮತ್ತು ಭದ್ರತಾ ಪಡೆಗಳ ತ್ವರಿತ ಪ್ರತಿಕ್ರಿಯೆ ಶ್ಲಾಘಿಸಿ, ಪ್ರಯಾಣಿಕರ ಸುರಕ್ಷತೆ ಮತ್ತು ಯೋಗಕ್ಷೇಮವನ್ನು ವಿಚಾರಿಸಿಕೊಂಡು ಕೃತಜ್ಞತೆ ಸಲ್ಲಿಸಿದರು.


ಹಳಿಗಳ ಮೇಲೆ ಇಂತಹ ಕೃತ್ಯದಲ್ಲಿ ತೊಡಗಿ ಪ್ರಯಾಣಿಕರಿಗೆ ದೊಡ್ಡ ಆಪತ್ತು ತರುವ ಮತ್ತು ಜೀವಹಾನಿ ಉಂಟುಮಾಡುವ ಚಟುವಟಿಕೆಗಳಲ್ಲಿ ಪಾಲ್ಗೊಳ್ಳದಂತೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಲಾಗಿದೆ. ಅಂತಹ ಚಟುವಟಿಕೆಗಳಲ್ಲಿ ಯಾರಾದರೂ ತಪ್ಪಿತಸ್ಥರೆಂದು ಕಂಡುಬಂದರೆ ಅವರ ವಿರುದ್ಧ ರೈಲ್ವೆ ಆಡಳಿತವು ಅತ್ಯಂತ ಕಠಿಣ ಕ್ರಮ ತೆಗೆದುಕೊಳ್ಳುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಅತಿಯಾಗಿ ಸೆಕ್ಸ್​​ಗೆ ಒತ್ತಾಯಿಸಿದಕ್ಕೆ ಇನ್​​ಸ್ಟಾ ಗೆಳತಿ ಕಥೆಯನ್ನೇ ಮುಗಿಸಿದ್ದ ಆರೋಪಿ ನವೀನ್ ಅರೆಸ್ಟ್

Posted by Vidyamaana on 2024-04-23 15:24:20 |

Share: | | | | |


ಅತಿಯಾಗಿ ಸೆಕ್ಸ್​​ಗೆ ಒತ್ತಾಯಿಸಿದಕ್ಕೆ ಇನ್​​ಸ್ಟಾ ಗೆಳತಿ ಕಥೆಯನ್ನೇ ಮುಗಿಸಿದ್ದ ಆರೋಪಿ ನವೀನ್ ಅರೆಸ್ಟ್

ಬೆಂಗಳೂರು : ರಾಜಧಾನಿ ಬೆಂಗಳೂರಿನ (Bengaluru) ಕೊಡಿಗೇಹಳ್ಳಿ ಒಂಟಿ ಮಹಿಳೆ (Single Women) ಹತ್ಯೆ ಪ್ರಕರಣಕ್ಕೆ ಬಿಗ್​ ಟ್ವಿಸ್ಟ್ ಸಿಕ್ಕಿದ್ದು, ಮನೆಯಲ್ಲೇ ಮಹಿಳೆಯನ್ನು ಕೊಲೆ ಮಾಡಿ (Murder Case) ಎಸ್ಕೇಪ್ ಆಗಿದ್ದ ಆರೋಪಿಯನ್ನು ಪೊಲೀಸರು (Kodigenahalli Police) ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಹೇರೋಹಳ್ಳಿ ಮೂಲದ ನವೀನ್ ಬಂಧಿತ ಆರೋಪಿಯಾಗಿದ್ದು, ಏಪ್ರಿಲ್ 19ನೇ ತಾರೀಖು 48 ವರ್ಷದ ಶೋಭಾ ಎಂಬ ಮಹಿಳೆಯ ಮೃತದೇಹ ನಗ್ನಸ್ಥಿತಿಯಲ್ಲಿ ಪತ್ತೆಯಾಗಿತ್ತು.


ಆರೋಪಿ ನವೀನ್​​ ಸಾಮಾಜಿಕ ಜಾಲತಾಣ ಇನ್​​ಸ್ಟಾದಲ್ಲಿ ಮೃತ ಮಹಿಳೆ ಶೋಭಾರನ್ನು ಪರಿಚಯ ಮಾಡಿಕೊಂಡಿದ್ದನಂತೆ. ಇಬ್ಬರ ನಡುವಿನ ಸ್ನೇಹ ಕೆಲ ದಿನಗಳ ಬಳಿಕ ಅನೈತಿಕ ಸಂಬಂಧಕ್ಕೆ ತಿರುಗಿತ್ತು ಎನ್ನಲಾಗಿದೆ. ಕೊಲೆ ನಡೆದ ದಿನವೂ ಮಹಿಳೆ ಮನೆಗೆ ನವೀನ್​ ಬಂದಿದ್ದನಂತೆ. ಈ ವೇಳೆ ಅತಿಯಾಗಿ ಸೆಕ್ಸ್ ಗೆ ಒತ್ತಾಯಿಸುತ್ತಿದ್ದರಿಂದ ಬೇಸರಗೊಂಡು ಮಹಿಳೆಯನ್ನು ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಸದ್ಯ ಆರೋಪಿಯನ್ನ ಬಂಧಿಸಿರುವ ಕೊಡಿಗೇಹಳ್ಳಿ ಠಾಣೆ ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ.

45 ಕೋಟಿ ರೂ. ಬಹುಮಾನವೆಂಬ ಸುಳ್ಳು ಸುದ್ದಿ

Posted by Vidyamaana on 2023-06-24 16:36:52 |

Share: | | | | |


45 ಕೋಟಿ ರೂ. ಬಹುಮಾನವೆಂಬ ಸುಳ್ಳು ಸುದ್ದಿ

ಪುತ್ತೂರು: ಸುಳ್ಯದ ಯುವಕನೋರ್ವನಿಗೆ ಲಾಟರಿಯಲ್ಲಿ 45 ಕೋಟಿ ರೂ. ಬಹುಮಾನ ಬಂದಿದೆ ಎಂಬ ಸುಳ್ಳು ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಅಬುದಾಬಿಯಲ್ಲಿರುವ ಸುಳ್ಯ ಮೂಲದ ಯುವಕನಿಗೆ ಲಾಟರಿಯಲ್ಲಿ ದೊಡ್ಡ ಮೊತ್ತ ಬಂದಿದೆ ಎಂದು ಹೇಳಲಾಗುತ್ತಿದೆ. ಮೊದಲಿಗೆ ಬೆಳ್ತಂಗಡಿಯ ಯುವಕನೋರ್ವನ ಫೊಟೋ ಬಳಸಿಕೊಂಡು ಇಂತಹ ಫೇಕ್ ಸುದ್ದಿಯನ್ನು ರವಾನಿಸಲಾಗುತ್ತಿತ್ತು. ಬಳಿಕ ಸುಳ್ಯದ ಯುವಕನೋರ್ವನ ಫೊಟೋವನ್ನು ಬಳಸಕೊಳ್ಳಲಾಯಿತು. ಒಟ್ಟಿನಲ್ಲಿ ಇದು ರಾಜ್ಯದಲ್ಲಿ ಬ್ಯಾನ್ ಆಗಿರುವ ಲಾಟರಿಗೆ ಪ್ರೋತ್ಸಾಹ ನೀಡುವ ಕ್ರಮ ಇದಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಬೆಳ್ತಂಗಡಿ: ಪತ್ನಿಯ ಕಣ್ಣನ್ನು ಕಚ್ಚಿ, ಮಾಂಸ ಹೊರಬರುವಂತೆ ಹಲ್ಲೆ ಪ್ರಕರಣ; ಆರೋಪಿ ಸುರೇಶ್ ಗೌಡ ಬಂಧನ

Posted by Vidyamaana on 2023-12-19 21:35:14 |

Share: | | | | |


ಬೆಳ್ತಂಗಡಿ: ಪತ್ನಿಯ ಕಣ್ಣನ್ನು ಕಚ್ಚಿ, ಮಾಂಸ ಹೊರಬರುವಂತೆ ಹಲ್ಲೆ ಪ್ರಕರಣ; ಆರೋಪಿ ಸುರೇಶ್ ಗೌಡ ಬಂಧನ

ಬೆಳ್ತಂಗಡಿ: ಪತ್ನಿ ಕಣ್ಣು ಕಚ್ಚಿ ಮಾಂಸ ಹೊರಬರುವಂತೆ ಗಾಯಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.


ಬೆಳ್ತಂಗಡಿ ತಾಲೂಕಿನ ಶಿಶಿಲದಲ್ಲಿ ಕಂಠಪೂರ್ತಿ ಕುಡಿದು ಮನೆಗೆ ಬಂದ ಆರೋಪಿ ಪತಿ ಸುರೇಶ್ ಗೌಡ(55), ತನ್ನ ಹೆಂಡತಿ ಮೋಹಿನಿ(55) ಯ ಕಣ್ಣನ್ನು ಕಚ್ಚಿ, ಮಾಂಸ ಹೊರಬರುವಂತೆ ಗಾಯಗೊಳಿಸಿದ್ದ ವಿಕೃತ ಘಟನೆ ನಡೆದಿತ್ತು. ಬಳಿಕ ಪರಾರಿಯಾಗಿ ಮನೆಯ ಹತ್ತಿರದ ತೋಟದಲ್ಲಿ ಅಡಗಿ ಕುಳಿತ್ತಿದ್ದ ಆತನನ್ನು ಪೊಲೀಸರು ಬಂಧಿಸಿದ್ದಾರೆ.



Leave a Comment: