ಎಸ್ ಪಿ ಆವರಣದಲ್ಲೇ ಪತ್ನಿಯನ್ನು ಇರಿದು ಕೊಂದ ಪೊಲೀಸ್ ಕಾನ್‌ಸ್ಟೇಬಲ್

ಸುದ್ದಿಗಳು News

Posted by vidyamaana on 2024-07-01 12:44:53 |

Share: | | | | |


ಎಸ್ ಪಿ ಆವರಣದಲ್ಲೇ ಪತ್ನಿಯನ್ನು ಇರಿದು ಕೊಂದ ಪೊಲೀಸ್ ಕಾನ್‌ಸ್ಟೇಬಲ್

ಹಾಸನ: ಪೊಲೀಸ್‌ ಕಾನ್‌ಸ್ಟೇಬಲ್‌ (Police Constable) ಒಬ್ಬ ತನ್ನ ಪತ್ನಿಯನ್ನು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳ (SP) ಕಚೇರಿ ಆವರಣದಲ್ಲೇ ಇರಿದು (Stabbed) ಕೊಂದುಹಾಕಿದ (Murder Case) ಘಟನೆ ಹಾಸನದಲ್ಲಿ ನಡೆದಿದೆ.ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಈ ಕಾನ್‌ಸ್ಟೇಬಲ್‌, ಪತ್ನಿಗೆ ಚಾಕುವಿನಿಂದ ಇರಿದಿದ್ದಾನೆ.

ಕಳೆದ ನಾಲ್ಕೈದು ದಿನಗಳಿಂದ ಗಂಡ-ಹೆಂಡತಿ ನಡುವೆ ಜಗಳ ನಡೆದಿತ್ತು. ಪೊಲೀಸ್ ಗಂಡನ ವಿರುದ್ಧ ದೂರು ನೀಡಲೆಂದು ಪತ್ನಿ ಮಮತಾ(37) ಹಾಸನದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಗೆ ಆಗಮಿಸಿದ್ದರು. ಇದೇ ವೇಳೆ, ಹಿಂಬಾಲಿಸಿ ಬಂದಿದ್ದ ಲೋಕನಾಥ್ ಹಾಸನ ಎಸ್ಪಿ ಕಚೇರಿ ಎದುರಲ್ಲೇ ಪತ್ನಿಯ ಎದೆಗೆ ಚಾಕುವಿನಿಂದ ಇರಿದು ಪರಾರಿಯಾಗಲು ಯತ್ನಿಸಿದ್ದಾನೆ.‌

ಮಹಿಳೆಯನ್ನು ಕೂಡಲೇ ಪೊಲೀಸರು ಆಸ್ಪತ್ರೆಗೆ ಒಯ್ದಿದ್ದು ಅಷ್ಟರಲ್ಲಿ ಸಾವು ಕಂಡಿದ್ದಾಳೆ.‌ ಆರೋಪಿ ಪತಿ ಲೋಕನಾಥ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹಾಸನ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

 Share: | | | | |


ಪುತ್ತೂರಿನಲ್ಲಿ ಗೃಹಜ್ಯೋತಿಗೆ ಹೆಸರು ನೋಂದಾಯಿಸಿದವರೆಷ್ಟು ಗೊತ್ತೇ?

Posted by Vidyamaana on 2023-07-29 02:59:38 |

Share: | | | | |


ಪುತ್ತೂರಿನಲ್ಲಿ ಗೃಹಜ್ಯೋತಿಗೆ ಹೆಸರು ನೋಂದಾಯಿಸಿದವರೆಷ್ಟು ಗೊತ್ತೇ?

ಪುತ್ತೂರು: ರಾಜ್ಯ ಸರ್ಕಾರದ ಕೊಡುಗೆಯಾಗಿ ಸಿಕ್ಕಿರುವ ಗೃಹಜ್ಯೋತಿ ಯೋಜನೆಗೆ ಪುತ್ತೂರಿನ ಮೆಸ್ಕಾಂ ಉಪವಿಭಾಗದಲ್ಲಿ 28200 ಮಂದಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ.

ಮೆಸ್ಕಾಂನ ಪುತ್ತೂರು ಉಪವಿಭಾಗದಲ್ಲಿ ಯೋಜನೆಗೆ ಒಳಪಡುವ 37000 ಮಂದಿ ಮನೆ ಬಳಕೆದಾರರಿದ್ದಾರೆ. ಇದರಲ್ಲಿ 28200 ಮಂದಿ ತಮ್ಮ ಹೆಸರನ್ನು ಯೋಜನೆಗೆ ನೋಂದಾಯಿಸಿಕೊಂಡಿದ್ದಾರೆ. ಅಂದರೆ ಇನ್ನೂ ಕೂಡ 8800 ಮಂದಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಲು ಬಾಕಿ ಉಳಿದಿದ್ದಾರೆ ಎಂದಾಯಿತು. ಇವರು ಇನ್ನೂ ಕೂಡ ನೋಂದಣಿ ಮಾಡಿಸಿಕೊಳ್ಳಬಹುದು.

ಗೃಹಜ್ಯೋತಿಗೆ ಹೆಸರು ನೋಂದಾಯಿಸಲು ಜುಲೈ 26 ಕೊನೆ ದಿನವಾಗಿತ್ತು. ಅದರಂತೆ ಜುಲೈ 26ರೊಳಗೆ ಇಷ್ಟು ಮಂದಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. ಇನ್ನು ಯೋಜನೆಗೆ ಹೆಸರು ನೋಂದಾಯಿಸಿಕೊಳ್ಳುವವರಿಗೆ ಆಗಸ್ಟ್ ತಿಂಗಳ ಉಚಿತ ವಿದ್ಯುತ್ ಸಿಗುವುದಿಲ್ಲ. ಮುಂದಿನ ತಿಂಗಳ ಉಚಿತ ವಿದ್ಯುತಿನ ಫಲಾನುಭವಿಗಳು ಅವರಾಗಲಿದ್ದಾರೆ.

ಸುಮಾರು 1 ಸಾವಿರದಷ್ಟು ಬಳಕೆದಾರರು ತಿಂಗಳಿಗೆ 200 ಯೂನಿಟ್’ಗಿಂತ ಹೆಚ್ಚು ವಿದ್ಯುತ್ ಬಳಕೆ ಮಾಡುವುದರಿಂದ, ಅವರು ಯೋಜನೆಯ ಒಳಗಡೆ ಬರುವುದಿಲ್ಲ.

200 ಯೂನಿಟ್ ಬಳಕೆಯ ಗುಟ್ಟು:

ರಾಜ್ಯ ಸರ್ಕಾರ ಘೋಷಿಸಿದಂತೆ 200 ಯೂನಿಟ್ ಬಳಕೆವರೆಗೆ ಉಚಿತ ವಿದ್ಯುತ್ ನೀಡಲಾಗುತ್ತದೆ. ಆದರೆ ಇಲ್ಲಿಯೂ ಕೆಲ ಗೊಂದಲಗಳು ಸೃಷ್ಟಿಯಾಗಿತ್ತು. ಅದಕ್ಕೆ ಪರಿಹಾರವನ್ನು ಮೆಸ್ಕಾಂ ಎಇಇ ರಾಮಚಂದ್ರ ಅವರು ನೀಡಿದ್ದಾರೆ.

ತಿಂಗಳಲ್ಲಿ ಸರಾಸರಿ ಬಳಕೆ ಮಾಡುವ ಯೂನಿಟಿಗಿಂತ ಶೇ. 10ರಷ್ಟು ಹೆಚ್ಚು ಯೂನಿಟ್ ಅನ್ನು ಗ್ರಾಹಕರು ಬಳಕೆ ಮಾಡಬಹುದು. ಅಲ್ಲಿವರೆಗೆ ಪೂರ್ಣ ಉಚಿತ. ನಂತರದ ಯೂನಿಟ್’ಗಳಿಗಷ್ಟೇ ಶುಲ್ಕ ಪಾವತಿಸಿದರಾಯಿತು. ಅಂದರೆ 120 ಯೂನಿಟ್ ಸರಾಸರಿ ಬಳಕೆದಾರರು ನೀವಾಗಿದ್ದರೆ, ಇದರ ಮೇಲೆ ಶೇ. 10 ಯೂನಿಟ್’ವರೆಗೂ ಪೂರ್ಣ ಉಚಿತ. ನಂತರದ ಯೂನಿಟ್’ಗಳಷ್ಟೇ ಲೆಕ್ಕಕ್ಕೆ ಸೇರುತ್ತದೆ. ಅವಷ್ಟನ್ನು ಪಾವತಿಸಿದರಾಯಿತು.

ಒಂದು ವೇಳೆ, ನೀವು 200 ಯೂನಿಟ್’ಗಿಂತ ಹೆಚ್ಚು ಬಳಕೆ ಮಾಡಿದರೆ ಆಗ ಪೂರ್ಣ ಮೊತ್ತವನ್ನು ಪಾವತಿ ಮಾಡಬೇಕು. ಉದಾಹರಣೆಗೆ 210 ಯೂನಿಟ್ ವಿದ್ಯುತ್ ಖರ್ಚು ಮಾಡಿದ್ದರೆ, ಆಗ 210 ಯೂನಿಟ್’ನ ಮೊತ್ತವನ್ನು ನೀವು ಪಾವತಿ ಮಾಡಬೇಕಾಗುತ್ತದೆ.

ಸುಳ್ಯ; ಅಜ್ಞಾವರದಲ್ಲಿ ಕೆರೆಗೆ ಬಿದ್ದ ಮೂರು ಕಾಡಾನೆಗಳು: ಮೇಲೆ ಬರಲಾಗದೇ ಪರದಾಡುತ್ತಿರುವ ಗಜಪಡೆ

Posted by Vidyamaana on 2023-04-13 03:58:39 |

Share: | | | | |


ಸುಳ್ಯ; ಅಜ್ಞಾವರದಲ್ಲಿ ಕೆರೆಗೆ ಬಿದ್ದ ಮೂರು ಕಾಡಾನೆಗಳು: ಮೇಲೆ ಬರಲಾಗದೇ ಪರದಾಡುತ್ತಿರುವ ಗಜಪಡೆ

ಸುಳ್ಯ; ಇಲ್ಲಿನ ಅಜ್ಜಾವರ ಗ್ರಾಮದ ತುದಿಯಡ್ಕ ಎಂಬಲ್ಲಿ ತೋಟವೊಂದರ ಕೆರೆಗೆ ನಿನ್ನೆ ರಾತ್ರಿ ನಾಲ್ಕು ಕಾಡಾನೆಗಳು ಬಿದ್ದಿವೆ. ಕೆರೆಯಿಂದ ಮೇಲೆ ಬರಲಾರದೇ ಕಾಡಾನೆಗಳು ಪರದಾಡುತ್ತಿವೆ.

ಇಲ್ಲಿನ ತುದಿಯಡ್ಕ ಎಂಬಲ್ಲಿನ ಸಂತೋಷ್ ಎಂಬವರ ತೋಟದ ಕೆರೆಗೆ ಬಿದ್ದ ಎರಡು ದೊಡ್ಡ ಮತ್ತೆರಡು ಮರಿಯಾನೆಗಳು ಮೇಲೆ ಬರಲಾಗದೇ ಪರದಾಡುತ್ತಿವೆ.

ಇತ್ತ ಆನೆಗಳನ್ನು ಕೆರೆಯಿಂದ ಕಾಡಾನೆಗಳನ್ನು ಮೇಲಕ್ಕೆತ್ತಲು, ಅರಣ್ಯ ಇಲಾಖಾ ಸಿಬ್ಬಂದಿ ಶ್ರಮಿಸುತ್ತಿದ್ದು, ಈ ಬಗ್ಗೆ ಇನ್ನಷ್ಟೇ ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.

ಸೋಲಿನ ಹೊಣೆ ಹೊತ್ತ ಮುಖ್ಯಮಂತ್ರಿ ರಾಜೀನಾಮೆ

Posted by Vidyamaana on 2023-05-13 17:05:46 |

Share: | | | | |


ಸೋಲಿನ ಹೊಣೆ ಹೊತ್ತ ಮುಖ್ಯಮಂತ್ರಿ ರಾಜೀನಾಮೆ

ಬೆಂಗಳೂರು: ತೀವ್ರ ಆಘಾತಕಾರಿ ಸೋಲಿನ ಬಳಿಕ ಸಿಎಂ ಬಸವರಾಜ್ ಬೊಮ್ಮಾಯಿ ತನ್ನ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಶನಿವಾರ ರಾತ್ರಿ ಪತ್ರಿಕಾಗೋಷ್ಠಿಯಲ್ಲಿ ಈ ವಿಚಾರ ತಿಳಿಸಿದರು.

ಸೋಲಿನ ಹೊಣೆ ಹೊತ್ತ ಅವರು, ಅಧಿಕಾರ ಇಲ್ಲದೇ ಇದ್ದರೂ ಜನಸೇವೆ ಮಾಡುವುದಾಗಿ ತಿಳಿಸಿದರು. ಜನಸೇವೆಗೆ ತಲೆಬಾಗುವುದಾಗಿ ತಿಳಿಸಿದರು.

ನಕಲಿ ಇನ್‌ಸ್ಟಾಗ್ರಾಂ ಖಾತೆ ಸೃಷ್ಟಿಸಿ ವಿದ್ಯಾರ್ಥಿನಿಯರಿಗೆ ಬೆದರಿಕೆ : ಇಬ್ಬರು ವಿದ್ಯಾರ್ಥಿಗಳ ಬಂಧನ

Posted by Vidyamaana on 2023-08-12 11:14:48 |

Share: | | | | |


ನಕಲಿ ಇನ್‌ಸ್ಟಾಗ್ರಾಂ ಖಾತೆ ಸೃಷ್ಟಿಸಿ ವಿದ್ಯಾರ್ಥಿನಿಯರಿಗೆ ಬೆದರಿಕೆ : ಇಬ್ಬರು ವಿದ್ಯಾರ್ಥಿಗಳ ಬಂಧನ

ಹುಬ್ಬಳ್ಳಿ: ಖಾಸಗಿ ಕಾಲೇಜುವೊಂದರ ವಿದ್ಯಾರ್ಥಿನಿಯ ಹೆಸರಲ್ಲಿ ನಕಲಿ ಇನ್‌ಸ್ಟಾಗ್ರಾಂ ಖಾತೆ ಸೃಷ್ಟಿಸಿ ವಿದ್ಯಾರ್ಥಿನಿಯರಿಗೆ ಹಾಗೂ ಪೊಲೀಸರಿಗೆ ಬೆದರಿಕೆ ಹಾಕಿದ ಪ್ರಕರಣ ತಿರುವು ಪಡೆದಿದ್ದು, ಮೂಲ ಆರೋಪಿಗಳಿಬ್ಬರನ್ನು ಸೈಬರ್ ಕ್ರೈಂ ಪೊಲೀಸರು ಏಳು ದಿನದಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.


ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಪೊಲೀಸರು ಶಂಕಿತ ಆರೋಪಿ ಹಾಗೂ ಖಾಸಗಿ ಕಾಲೇಜಿನ ಹಳೇ ವಿದ್ಯಾರ್ಥಿ ರಜನಿಕಾಂತ್ ತಳವಾರ ಎಂಬಾತನನ್ನು ಸಂಶಯದ ಮೇಲೆ ಬಂಧಿಸಿ ಏಳು ದಿನ ವಿಚಾರಣೆಗೆ ಒಳಪಡಿಸಿದ್ದರು. ಅಷ್ಟೇ ಅಲ್ಲದೆ ಈ ಪ್ರಕರಣದ ಹಿಂದೆ ಇನ್ನೂ ಕೆಲವರು ಇದ್ದಾರೆ ಎಂಬ ಸಂಶಯದ ಮೇರೆಗೆ ತನಿಖೆ ಮುಂದುವರಿಸಿದ್ದರು.


ಜಾಲತಾಣದ ಅಧಿಕೃತ ಮಾಹಿತಿಯ ಹಿಂದೆ ಬಿದ್ದಾಗ ರಜನಿಕಾಂತ್ ಆರೋಪಿ ಅಲ್ಲ ಎಂಬುದು ಪೊಲೀಸರಿಗೆ ಸ್ಪಷ್ಟವಾಗಿದೆ. ಶಂಕಿತ ಆರೋಪಿಯಾಗಿದ್ದ ರಜನಿಕಾಂತ್‌ನ ಇನ್‌ಸ್ಟಾಗ್ರಾಂ ಖಾತೆ, ಇ-ಮೇಲ್ ಐಡಿ ಹಾಗೂ ಸಾಮಾಜಿಕ ಜಾಲತಾಣದ ವಿವವರಗಳನ್ನು ಪೊಲೀಸರು ಸಂಗ್ರಹಿಸಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದರು. ಆದರೆ ಈ ವರದಿ ಬರುವವರೆಗೂ ಉಳಿದ ಆರೋಪಿಗಳನ್ನು ಪತ್ತೆ ಮಾಡುವುದು ಪೊಲೀಸರಿಗೆ ಕಷ್ಟವಾಗಿತ್ತು. ಪ್ರಕರಣ ಗಂಭೀರವಾಗಿದ್ದರಿಂದ ಸೈಬರ್ ಠಾಣಾ ಪೊಲೀಸರು ಹ್ಯಾಕ್ ಮಾಡಲಾದ ವಿದ್ಯಾರ್ಥಿನಿಯರ ಇನ್‌ಸ್ಟಾಗ್ರಾಂ ಖಾತೆ ವಿವರ ಸಂಗ್ರಹಿಸಿ ಫೇಸ್‌ಬುಕ್ ಸಂಸ್ಥೆಗೆ ಮಾಹಿತಿ ನೀಡಲು ಪತ್ರ ಬರೆದಿದ್ದರು.


ಅಲ್ಲಿಂದ ದೊರೆತ ಅಧಿಕೃತ ಮಾಹಿತಿಯೇ ಆರೋಪಿಗಳ ಪತ್ತೆಗೆ ಸಹಕಾರಿಯಾಗಿದೆ. ಬಂಧನಕ್ಕೆ ಒಳಗಾದ ವಿದ್ಯಾರ್ಥಿ ವಿದ್ಯಾರ್ಥಿನಿಯರು ಓದುತ್ತಿರುವ ಕಾಲೇಜಿನಲ್ಲಿಯೇ ಅಧ್ಯಯನ ಮಾಡುತ್ತಿದ್ದು, ಒಬ್ಬ ವಿದ್ಯಾರ್ಥಿನಿ ಇನ್ನೊಬ್ಬ ವಿದ್ಯಾರ್ಥಿಯ ಜೊತೆ ಸಲುಗೆಯಿಂದ ಇದ್ದಳು. ಅದನ್ನು ಸಹಿಸದ ಆರೋಪಿ ತಮ್ಮ ಊರಿನ ಮತ್ತೊಂದು ಕಾಲೇಜಿನಲ್ಲಿ ಓದುತ್ತಿದ್ದ ಸ್ನೇಹಿತನ ಸಹಾಯ ಪಡೆದು, ಆ ವಿದ್ಯಾರ್ಥಿನಿಯ ಇನ್‌ಸ್ಟಾಗ್ರಾಂ ಖಾತೆ ಹ್ಯಾಕ್ ಮಾಡಿಸಿದ್ದಾನೆ. ತನ್ನ ಹೆಸರು ಎಲ್ಲಿಯೂ ಬರಬಾರದು ಎಂದು ದಿಕ್ಕು ತಪ್ಪಿಸಲು ಪೊಲೀಸ್ ಬಗ್ಗೆ ಅವಹೇಳನ ಪದ ಬಳಸಿ ಪೋಸ್ಟ್ ಮಾಡಿದ್ದ. ಎಲ್ಲಾ ವಿಚಾರ ತಿಳಿದ ಬೆನ್ನಲ್ಲೇ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

ಕೊಹ್ಲಿ ರಾಹುಲ್ ಅಬ್ಬರ-ಕುಲ್ದೀಪ್ ಮ್ಯಾಜಿಕ್ ಪಾಕ್​ ವಿರುದ್ಧ ಐತಿಹಾಸಿಕ ಜಯ ಸಾಧಿಸಿದ ಭಾರತ

Posted by Vidyamaana on 2023-09-12 08:22:27 |

Share: | | | | |


ಕೊಹ್ಲಿ ರಾಹುಲ್ ಅಬ್ಬರ-ಕುಲ್ದೀಪ್ ಮ್ಯಾಜಿಕ್ ಪಾಕ್​ ವಿರುದ್ಧ ಐತಿಹಾಸಿಕ ಜಯ ಸಾಧಿಸಿದ ಭಾರತ

ಕೊಲಂಬೊ: ಇಲ್ಲಿನ ಆರ್.ಪ್ರೇಮದಾಸ ಕ್ರೀಡಾಂಗಣದಲ್ಲಿ ಸೋಮವಾರ ಮುಂದುವರಿದ ಏಷ್ಯಾ ಕಪ್ ಸೂಪರ್‌ ಫೋರ್‌ ಏಕದಿನ ಪಂದ್ಯದಲ್ಲಿ ಭಾರತ ತಂಡ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಅತ್ಯಮೋಘ ನಿರ್ವಹಣೆ ತೋರಿ ಪಾಕಿಸ್ಥಾನಕ್ಕೆ ಭಾರಿ ಸೋಲಿನ ಶಾಕ್ ನೀಡಿದೆ.


ಮಳೆ ಅಡ್ಡಿಯ ನಡುವೆ ಸಾಗಿದ ಮೀಸಲು ದಿನದ ಪಂದ್ಯದಲ್ಲಿ 357 ರನ್ ಗಳ ಸವಾಲು ಪಡೆದ ಪಾಕಿಸ್ಥಾನ 32 ಓವರ್ ಗಳಲ್ಲಿ 128 ರನ್ ಗಳಿಗೆ 8 ವಿಕೆಟ್ ಕಳೆದುಕೊಂಡಿತು. ಭಾರತ 228 ರನ್ ಗಳ ಭಾರಿ ಗೆಲುವು ಸಾಧಿಸಿತು. ಪಾಕ್ ನ ಕೊನೆಯಲ್ಲಿ ಬರಬೇಕಾದ ನಸೀಮ್ ಮತ್ತು ಹ್ಯಾರಿಸ್ ಫೀಲ್ಡಿಂಗ್ ಮಾಡುವಾಗ ಗಾಯದೊಂದಿಗೆ ಹೊರ ಹೋಗಿದ್ದು ,ಅವರು ಬ್ಯಾಟಿಂಗ್‌ಗೆ ಬರದ ಕಾರಣ 8 ವಿಕೆಟ್ ಕಳೆದುಕೊಂಡಾಗಲೇ ಆಟ ಮುಗಿಯಿತು.


ಕುಲದೀಪ್ ಯಾದವ್ ಅವರು 5 ವಿಕೆಟ್ ಪಡೆದು ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು. 8 ಓವರ್ ಗಳಲ್ಲಿ 25 ರನ್ ಬಿಟ್ಟುಕೊಟ್ಟರು. 9 ರನ್ ಗಳಿಸಿದ್ದ ವೇಳೆ ಇಮಾಮ್-ಉಲ್-ಹಕ್ ಅವರನ್ನು ಬುಮ್ರಾ ಔಟ್ ಮಾಡಿದರು. ಬುಮ್ರಾ ಎಸೆದ ಚೆಂಡು ಹಕ್ ಬ್ಯಾಟ್ ಗೆ ತಗುಲಿ ಶುಭ್ ಮನ್ ಗಿಲ್ ಅವರ ಕೈಸೇರಿತು. 10 ರನ್ ಗಳಿಸಿದ್ದ ನಾಯಕ ಬಾಬರ್ ಆಜಂ ಅವರನ್ನು ಹಾರ್ದಿಕ್ ಪಾಂಡ್ಯ ಬೌಲ್ಡ್ ಮಾಡಿ ಶಾಕ್ ನೀಡಿದರು.


ಪಾಕಿಸ್ಥಾನದ ಪ್ರಮುಖ ಬ್ಯಾಟ್ಸ್ ಮ್ಯಾನ್ ಗಳು ಭಾರತದ ಬಿಗು ಬೌಲಿಂಗ್ ವ್ಯೂಹ ದೊಳಗೆ ಸಿಲುಕಿ ನಲುಗಿದರು. 9 ರನ್ ಗಳಿಸಿದ್ದ ವೇಳೆ ಇಮಾಮ್-ಉಲ್-ಹಕ್ ಅವರನ್ನು ಬುಮ್ರಾ ಔಟ್ ಮಾಡಿದರು. ಬುಮ್ರಾ ಎಸೆದ ಚೆಂಡು ಹಕ್ ಬ್ಯಾಟ್ ಗೆ ತಗುಲಿ ಶುಭ್ ಮನ್ ಗಿಲ್ ಅವರ ಕೈಸೇರಿತು. 10 ರನ್ ಗಳಿಸಿದ್ದ ನಾಯಕ ಬಾಬರ್ ಆಜಂ ಅವರನ್ನು ಹಾರ್ದಿಕ್ ಪಾಂಡ್ಯ ಬೌಲ್ಡ್ ಮಾಡಿ ಶಾಕ್ ನೀಡಿದರು. 27 ರನ್ ಗಳಿಸಿದ್ದ ಫಖರ್ ಜಮಾನ್ ಅವರನ್ನು ಕುಲದೀಪ್ ಯಾದವ್ ಬೌಲ್ಡ್ ಮಾಡಿದರು. ಮೊಹಮ್ಮದ್ ರಿಜ್ವಾನ್ 2 ರನ್ ಗಳಿಗೆ ನಿರ್ಗಮಿಸಿದರು.ಶಾರ್ದೂಲ್ ಠಾಕೂರ್ ಎಸೆದ ಚೆಂಡನ್ನು ರಾಹುಲ್ ಕೈಗಿತ್ತು ಪೆವಿಲಿಯನ್ ಕಡೆಗೆ ಮರಳಿದರು.ಶತಕದ ಜುಗಲ್ ಬಂದಿ

ವಿರಾಟ್ ಕೊಹ್ಲಿ ಮತ್ತು ಕೆ.ಎಲ್. ರಾಹುಲ್ ಅತ್ಯಮೋಘ ಶತಕಗಳನ್ನು ಸಿಡಿಸಿ ಭಾರತದ ಬ್ಯಾಟಿಂಗ್ ಬಲ ಸಾಬೀತುಪಡಿಸಿದ್ದಾರೆ. ಭಾರತ 50 ಓವರ್ ಗಳಲ್ಲಿ ಕೇವಲ 2 ವಿಕೆಟ್ ನಷ್ಟಕ್ಕೆ 356 ರನ್ ಗಳ ಸವಾಲಿನ ಮೊತ್ತವನ್ನು ಕಲೆಹಾಕಿತು. ಕೊಹ್ಲಿ 122 ರನ್ ಗಳಿಸಿ ಅಜೇಯರಾಗಿ ಉಳಿದರು.93 ಎಸೆತಗಳಲ್ಲಿ ಆಕರ್ಷಕ 9 ಬೌಂಡರಿ ಮತ್ತು 3 ಸಿಕ್ಸರ್ ಅವರ ಇನ್ನಿಂಗ್ಸ್ ನ ಆಕರ್ಷಣೆಯಾಗಿತ್ತು. ಜವಾಬ್ದಾರಿಯುತ ಆಟವಾಡಿದ ರಾಹುಲ್ ಅಜೇಯ 111 ರನ್ ಗಳಿಸಿದರು.106 ಎಸೆತಗಳಲ್ಲಿ 12 ಬೌಂಡರಿ ಮತ್ತು 2 ಸಿಕ್ಸರ್ ಅವರ ಆಟದ ಆಕರ್ಷಣೆಯಾಗಿತ್ತು. 3 ನೇ ವಿಕೆಟ್ ಗೆ ಇಬ್ಬರು 233 ರನ್ ಜತೆಯಾಟವಾಡಿದ್ದು ಇದು ಏಷ್ಯಾ ಕಪ್ ಇತಿಹಾಸದಲ್ಲಿ ಭಾರತದ ಅತೀ ದೊಡ್ಡ ಜತೆಯಾಟವಾಗಿದೆ.ನಿನ್ನೆ ಭಾರಿ ಮಳೆಯಿಂದ ಪಂದ್ಯ ಮುಂದೂಡಿಕೆಯಾದ ವೇಳೆ 24.1 ಓವರ್ ಗಳಲ್ಲಿ ಭಾರತ 2 ವಿಕೆಟ್ ನಷ್ಟಕ್ಕೆ 147 ರನ್ ಗಳಿಸಿತ್ತು. 8 ರನ್ ಗಳಿಸಿದ್ದ ಕೊಹ್ಲಿ ಮತ್ತು 17 ರನ್ ಗಳಿಸಿದ್ದ ರಾಹುಲ್ ಇಂದು ಆಕರ್ಷಕ ಜತೆಯಾಟವನ್ನು ಆಡಿದರು. ಪಾಕಿಸ್ಥಾನ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು. ನಾಯಕ ರೋಹಿತ್ ಶರ್ಮಾ 56 ರನ್ ಶುಭಮನ್ ಗಿಲ್ 58 ರನ್ ಗಳಿಸಿ ಔಟಾಗಿದ್ದರು.

ನಗರಸಭೆ ಬೈ ಎಲೆಕ್ಷನ್ - ಬಿಜೆಪಿ ಅಭ್ಯರ್ಥಿಗಳ ಜೊತೆ ಕಾಣಿಸಿಕೊಂಡ ಡಾ. ಸುರೇಶ್ ಪುತ್ತೂರಾಯರು

Posted by Vidyamaana on 2023-12-15 15:30:12 |

Share: | | | | |


ನಗರಸಭೆ ಬೈ ಎಲೆಕ್ಷನ್ - ಬಿಜೆಪಿ ಅಭ್ಯರ್ಥಿಗಳ ಜೊತೆ ಕಾಣಿಸಿಕೊಂಡ ಡಾ. ಸುರೇಶ್ ಪುತ್ತೂರಾಯರು

ಪುತ್ತೂರು : ನಗರ ಸಭಾ ಸದಸ್ಯರಿಬ್ಬರ ಮರಣದಿಂದ ತೆರವಾದ ಎರಡು ಸ್ಥಾನಗಳಿಗೆ ಡಿ.27 ರಂದು ನಡೆಯಲಿರುವ ಉಪ ಚುನಾವಣೆಗೆ ಸಂಬಂಧಿಸಿದಂತೆ ಈಗಾಗಲೇ ಅಧಿಸೂಚನೆ ಹೊರಡಿಸಿದ್ದು, ಬಿಜೆಪಿ ಪಕ್ಷದಿಂದ ಅಭ್ಯರ್ಥಿಗಳ ಹೆಸರು ಈಗಾಗಲೇ ಘೋಷಣೆಯಾಗಿದ್ದು, ಇಂದು ನಾಮಪತ್ರ ಸಲ್ಲಿಕೆ ನಡೆಯಲಿದೆ.ಈ ಹಿನ್ನೆಲೆ ಅಭ್ಯರ್ಥಿಗಳು ಹಾಗೂ ಪಕ್ಷದ ಪ್ರಮುಖರು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಭೇಟಿ ನೀಡಿ ವಿಶೇಷ ಪೂಜೆ ಹಾಗೂ ಪ್ರಾರ್ಥನೆ ಸಲ್ಲಿಸಿದರು.ಮಾಜಿ ಶಾಸಕ ಸಂಜೀವ ಮಠಂದೂರು, ಜೀವಂಧರ್ ಜೈನ್ ಸಹಿತ ಹಲವು ಬಿಜೆಪಿ ಪ್ರಮುಖರು ಉಪಸ್ಥಿತರಿದ್ದರು.


ಅರುಣ್ ಕುಮಾರ್ ಪುತ್ತಿಲ ಅವರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪುತ್ತೂರು ಕ್ಷೇತ್ರದಿಂದ ಪಕ್ಷೇತರರಾಗಿ ಸ್ಪರ್ಧೆಗೆ ಇಳಿದ ಸಂದರ್ಭದಲ್ಲಿ ಅವರ ಜತೆಗೆ ಪ್ರಮುಖ ನಾಯಕರಾಗಿ ಕಾಣಿಸಿಕೊಂಡಿದ್ದ ಸುರೇಶ್ ಪುತ್ತೂರಾಯ ಅವರು ದಿಢೀರ್ ಆಗಿ ಬಿಜೆಪಿ ಪಾಳಯದಲ್ಲಿ ಕಾಣಿಸಿಕೊಂಡಿದ್ದಾರೆ 


ಬಿಜೆಪಿಯಿಂದ ವಾರ್ಡ್ 1ರ ಅಭ್ಯರ್ಥಿಯಾಗಿ ಸುನೀತಾ ಹಾಗೂ ವಾರ್ಡ್ 11ರ ಅಭ್ಯರ್ಥಿಯಾಗಿ ರಮೇಶ್ ರೈ ಅವರು ಇಂದು ನಾಮಪತ್ರ ಸಲ್ಲಿಸಲಿದ್ದಾರೆ.


ನಗರ ಸಭೆಯ ವಾರ್ಡ್ 1 ರಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಶಿವರಾಮ ಸಪಲ್ಯ ಹಾಗೂ ವಾರ್ಡ್ 11ರಲ್ಲಿ ಕಾಂಗ್ರೆಸ್ ಬೆಂಬಲಿತ ಸದಸ್ಯ ಶಕ್ತಿ ಸಿನ್ಹಾ ರವರ ನಿಧನದಿಂದ ತೆರವಾದ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.


ಡಿ.8 ರಂದು ಜಿಲ್ಲಾಧಿಕಾರಿಗಳು ಅದಿಸೂಚನೆ ಪ್ರಕಟಗೊಳಿಸಲಿದ್ದು, ಅದೇ ದಿನ ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಪ್ರಾರಂಭಗೊಂಡಿದೆ. ಡಿ.15 ನಾಮಪತ್ರ ಸಲ್ಲಿಸಲು ಅಂತಿಮ ದಿನವಾಗಿದೆ. ಡಿ.16ರಂದು ನಾಮಪತ್ರ ಪರಿಶೀಲನೆ, ಡಿ.18ರಂದು ನಾಮಪತ್ರ ಹಿಂತೆಗೆದುಕೊಳ್ಳಲು ಅಂತಿಮ ದಿನವಾಗಿದೆ.


ಡಿ.27 ರಂದು ಮತದಾನ ಪ್ರಕ್ರಿಯೆ ನಡೆಯಲಿದ್ದು ಬೆಳಿಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯ ತನಕ ಮತದಾನ ನಡೆಯಲಿದೆ. ಅವಶ್ಯವಿದ್ದರೆ ಡಿ.29ರಂದು ಮರು‌ಮತದಾನ ನಡೆದು ಡಿ.30 ರಂದು ಬೆಳಿಗ್ಗೆ 8 ಗಂಟೆಯಿಂದ ಮತ ಎಣಿಕೆ ಪ್ರಕ್ರಿಯೆ ನಡೆದು ಫಲಿತಾಂಶ ಘೋಷಣೆಯಾಗಲಿದೆ.

Recent News


Leave a Comment: