ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕರ ಸೇವಾಂಜಲಿ ಟ್ರಸ್ಟ್ ಗೆ ಶಾಸಕರಿಂದ ರೂ.೫೦ ಸಾವಿರ ಸಹಾಯಧನ

ಸುದ್ದಿಗಳು News

Posted by vidyamaana on 2024-07-03 19:23:39 |

Share: | | | | |


ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕರ ಸೇವಾಂಜಲಿ ಟ್ರಸ್ಟ್ ಗೆ ಶಾಸಕರಿಂದ ರೂ.೫೦ ಸಾವಿರ ಸಹಾಯಧನ

ಪುತ್ತೂರು: ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕರ ಸೇವಾಂಜಲಿ ಟ್ರಸ್ಟ್ ಗೆ ಪುತ್ತೂರು ಶಾಸಕರಾದ ಅಶೋಕ್ ರೈಯವರು ರೂ. ೫೦ ಸಾವಿರ ಸಹಾಯಧನವನ್ನು ನೀಡಿದರು. ಮಂಗಳೂರು ಕೇಂದ್ರ ಕಚೇರಿಯನ್ನು ಹೊಂದಿರುವ ಈ ಟ್ರಸ್ಟ್ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಈ ಟ್ರಸ್ಟ್‌ನಲ್ಲಿ ಸದಸ್ಯರಾಗಿರುತ್ತಾರೆ.

ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಕ್ಷೇಮಾಭಿವೃದ್ದಿ ಟ್ರಸ್ಟ್ ಇದಾಗಿರುತ್ತದೆ. ಈ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಜಿಲ್ಲಾಧ್ಯಕ್ಷೆ ತಾರಾಬಲ್ಲಾಲ್, ಪುತ್ತೂರು ತಾಲೂಕು ಅಧ್ಯಕ್ಷೆ ಕಮಲ, ತಾಲೂಕು ಕಾರ್ಯದರ್ಶಿ ಪುಷ್ಪಾವತಿ, ಸೇವಾಂಜಲಿ ಟ್ರಸ್ಟ್ ಉಪಾಧ್ಯಕ್ಷೆ ಅರುಣಾ ಡಿ, ನಿರ್ದೇಶಕಿ ಮೀನಾಕ್ಷಿ ಉಪಸ್ಥಿತರಿದ್ದರು.

 Share: | | | | |


ಕುಂಬೋಳ್ ತಂಙಳ್ ಆಶೀರ್ವಾದ ಪಡೆದ ಪುತ್ತೂರು ಶಾಸಕರು

Posted by Vidyamaana on 2023-05-25 15:29:39 |

Share: | | | | |


ಕುಂಬೋಳ್ ತಂಙಳ್ ಆಶೀರ್ವಾದ ಪಡೆದ ಪುತ್ತೂರು ಶಾಸಕರು

ಪುತ್ತೂರು: ಕುಂಬೋಳ್ ತಂಙಳ್ ಬಗ್ಗೆ ಗೊತ್ತಿಲ್ಲದವರು ಬಹಳ ಅಪರೂಪ. ಅನೇಕ ಪವಾಡಗಳಿಂದ ಜನ ಮಾನಸದಲ್ಲಿ ಪ್ರಚಾರದಲ್ಲಿರುವ ಮತ್ತು ಜಾತಿ,ಮತ, ಧರ್ಮಗಳ ಬೇದವಿಲ್ಲದೆ ಎಲ್ಲರಿಗೂ ಸಾಂತ್ವನ ನೀಡುತ್ತಿರುವ ಕುಂಬೋಳ್ ತರವಾಡಿನ ಶೈಕುನಾ ಕುಂಞಿ ಕೋಯಾ ತಂಙಳ್ ರವರು ಇಂದು ವಿಧಾನ ಸೌಧಕ್ಕೆ ಭೇಟಿ ನೀಡಿದ್ದರು. ಸೀಎಂ, ಡಿಸಿಎಂ ಸಹಿತ ಎಲ್ಲರೂ ಅವರನ್ನು ಅತ್ಯಂತ ಗೌರವದಿಂದ ನಡೆಸಿಕೊಂಡರು ಮತ್ತು ಅವರಿಂದ ಆಶೀರ್ವಾದವನ್ನು ಪಡೆದರು.ಜೊತೆಗೆ ಪುತ್ತೂರು ಶಾಸಕರಾದ ಅಶೋಕ್ ರೈಯವರು ತಂಙಳ್ ರನ್ನು ಭೇಟಿಯಾಗಿ ಆಶೀರ್ವಾದ ಪಡೆದರು.

ಪ್ರವೀಣ್ ನೆಟ್ಟಾರು ಪತ್ನಿಯನ್ನು ಗ್ರೂಪ್-ಸಿ ಹುದ್ದೆಗೆ ಮರುನೇಮಕ - ಸಿಎಂ ಸಿದ್ಧರಾಮಯ್ಯ ಘೋಷಣೆ

Posted by Vidyamaana on 2023-05-27 15:51:17 |

Share: | | | | |


ಪ್ರವೀಣ್ ನೆಟ್ಟಾರು ಪತ್ನಿಯನ್ನು ಗ್ರೂಪ್-ಸಿ ಹುದ್ದೆಗೆ ಮರುನೇಮಕ - ಸಿಎಂ ಸಿದ್ಧರಾಮಯ್ಯ ಘೋಷಣೆ

ಬೆಂಗಳೂರು : ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಪತ್ನಿಯನ್ನು ಗ್ರೂಪ್ ಸಿ ಹುದ್ದೆಗೆ ಮರು ನೇಮಕ ಮಾಡಿಕೊಳ್ಳುವುದಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಘೋಷಿಸಿದ್ದಾರೆ.ಈ ಕುರಿತಂತೆ ಇಂದು ಟ್ವಿಟ್ ಮಾಡಿರುವಂತ ಅವರು, ಹೊಸ ಸರ್ಕಾರ ಬಂದ ನಂತರ ಹಿಂದಿನ ಸರ್ಕಾರ ನೇಮಕ ಮಾಡಿಕೊಂಡಿದ್ದ ತಾತ್ಕಾಲಿಕ ನೌಕರರನ್ನು ಸರ್ಕಾರಿ ಸೇವೆಯಿಂದ ವಜಾ ಮಾಡುವುದು ಒಂದು ಸಹಜ ಪ್ರಕ್ರಿಯೆ ಎಂದಿದ್ದಾರೆ.ಪ್ರವೀಣ್ ನೆಟ್ಟಾರು ಅವರ ಪತ್ನಿ ಮಾತ್ರವಲ್ಲ ಸುಮಾರು 150ಕ್ಕೂ ಹೆಚ್ಚು ಗುತ್ತಿಗೆ ನೌಕರರನ್ನು ಈಗಾಗಲೇ ಸೇವೆಯಿಂದ ವಜಾ ಮಾಡಲಾಗಿದೆ. ಇದರಲ್ಲಿ ಸರ್ಕಾರದ ಯಾವುದೇ ಹಸ್ತಕ್ಷೇಪವಿಲ್ಲ. ಇದನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಮಾನವೀಯತೆ ಆಧಾರದಲ್ಲಿ ನೂತನ ಕುಮಾರಿ ಅವರ ಮರು ನೇಮಕ ಮಾಡಲಾಗುವುದು ಎಂಬುದಾಗಿ ತಿಳಿಸಿದ್ದಾರೆ.

ಕೇರಳದಲ್ಲಿ ಚಿಕನ್ ಶವರ್ಮಾ ತಿಂದ ರಾಹುಲ್ ಮೃತ್ಯು : ಹೊಟೇಲ್‌ಗೆ ಬೀಗ

Posted by Vidyamaana on 2023-10-26 22:22:40 |

Share: | | | | |


ಕೇರಳದಲ್ಲಿ ಚಿಕನ್ ಶವರ್ಮಾ ತಿಂದ ರಾಹುಲ್ ಮೃತ್ಯು : ಹೊಟೇಲ್‌ಗೆ ಬೀಗ

ಕೊಚ್ಚಿ: ನಗರದ ಹೊಟೇಲೊಂದರಿಂದ ಆನ್​ಲೈನ್​ ಮೂಲಕ ಚಿಕನ್ ಶವರ್ಮಾ ತರಿಸಿ ತಿಂದ ಯುವಕ ತೀವ್ರ ಅನಾರೋಗ್ಯಕ್ಕೀಡಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.


ಕೊಟ್ಟಾಯಂ ಮೂಲದ ರಾಹುಲ್​ ನಾಯರ್ (24) ಮೃತ ಯುವಕ.  ಕೊಟ್ಟಾಯಂ ಮೂಲದ ರಾಹುಲ್​ ಆನ್​ಲೈನ್ ಮೂಲಕ ‘ಲೇ ಹಯಾತ್’ ಎಂಬ ​ ರೆಸ್ಟೋರೆಂಟ್​ನಿಂದ ಚಿಕನ್ ಶವರ್ಮಾವನ್ನು ತರಿಸಿಕೊಂಡಿದ್ದಾನೆ. ಅದನ್ನು ತಿಂದ ಬಳಿಕ ಇದ್ದಕ್ಕಿದ್ದ ಹಾಗೆ ತೀವ್ರ ಅನಾರೋಗ್ಯಕ್ಕೀಡಾಗಿ ಕಾಕ್ಕನಾಡುನಲ್ಲಿನ ಸನ್​ರೈಸ್ ಆಸ್ಪತ್ರೆಗೆ ದಾಖಲಾಗಿದ್ದಾನೆ. ಚಿಕಿತ್ಸೆ ಬಳಿಕ ಕೊಂಚ ಚೇತರಿಸಿಕೊಂಡು ಡಿಸ್ಚಾರ್ಜ್ ಆಗಿದ್ದು, ಬಳಿಕ  ಹೊಟ್ಟೆಯಲ್ಲಿ ನೋವು ಕಾಣಿಸಿದ್ದರಿಂದ ಅಕ್ಟೋಬರ್ 22 ರಂದು ಆಸ್ಪತ್ರೆಗೆ ಮತ್ತೆ ದಾಖಲು ಆಗಿದ್ದನು ಎನ್ನಲಾಗಿದೆ.


ಎರಡನೇ ಸಲ ಆಸ್ಪತ್ರೆ ಸೇರಿದ ಯುವಕನ ಸ್ಥಿತಿ ಗಂಭೀರವಾಗುತ್ತಾ ಹೋಗಿದ್ದು, ಆಸ್ಪತ್ರೆಯಲ್ಲೇ ಸಾವನ್ನಪ್ಪಿದ್ದಾನೆ. ಈ ಬಗ್ಗೆ ಆಸ್ಪತ್ರೆ ಸಿಬ್ಬಂದಿ ರಿಲೀಸ್ ಮಾಡಿರುವ ಹೆಲ್ತ್ ಬುಲೆಟಿನ್ ಅಲ್ಲಿ ಯುವಕನ ಕಿಡ್ನಿ ಹಾಗೂ ಲೀವರ್ ಹಾನಿಯಾಗಿದ್ದು ಹೃದಯಘಾತದಿಂದ ಸಾವನ್ನಪ್ಪಿದ್ದಾನೆ ಎಂದು ಹೇಳಿದ್ದಾರೆ.  ಕಿಡ್ನಿ ಮತ್ತು ಲಿವರ್ ಹಾಳಾಗಲು ಕಾರಣ ದೇಹದಲ್ಲಿ ವಿಷ ಸೇರಿರುವುದು ಪಕ್ಕಾ. ಇದು ಆತ ತಿಂದ ಚಿಕನ್ ಶವರ್ಮಾ ಪದಾರ್ಥದಿಂದ ಆಗಿದಿಯೋ ಅಥವಾ ಬೇರೆ ಆಹಾರದಿಂದ ಆಗಿದಿಯೋ ಅನ್ನೋದು ತನಿಖೆಯಿಂದ ಗೊತ್ತಾಗಬೇಕಿದೆ ಎಂದು ವೈದ್ಯರು  ಹೇಳಿದ್ದಾರೆ.


ಮೃತ ಯುವಕನ ಸಂಬಂಧಿಕರು ರೆಸ್ಟೋರೆಂಟ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಸದ್ಯಕ್ಕೆ ಸರ್ಕಾರದ ಆದೇಶದಂತೆ ಅದನ್ನು ಮುಚ್ಚಲಾಗಿದೆ. ರೆಸ್ಟೋರೆಂಟ್ ಮಾಲಕರ ವಿರುದ್ಧ ತೃಕ್ಕಾಕರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಹಸಿ ಮೊಟ್ಟೆ, ಬೇಯಿಸದ ಎಣ್ಣೆ, ಬೆಳ್ಳುಳ್ಳಿ ಸೇರಿಸಿ ಮಾಡುವ ಮಸಾಲೆಯೊಂದು ಶವರ್ಮಾ ಜೊತೆ ಹೇರಳವಾಗಿ ಬೆರೆಸಲಾಗುತ್ತಿದ್ದು, ಆ ಬಿಳಿಯಾದ ಪದಾರ್ಥ ಸ್ವಲ್ಚ ಹಳೆಯದಾದರೂ ವಿಷವಾಗಿ ಮಾರ್ಪಾಡಾಗುತ್ತೆ ಎಂದು ಹೇಳಲಾಗುತ್ತಿದೆ. ಇಂತಹ ಪದಾರ್ಥ ತಿಂದು ಸಾವನ್ನಪ್ಪಿದ ಇತರ ಘಟನೆಗಳೂ ಇವೆ. ತಿಂಡಿಪ್ರಿಯರು ಎಚ್ಚರವಾಗಬೇಕಾಗಿದೆ ಎಂದು ನಾಗರಿಕರೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆನ್ನಲಾಗಿದೆ.

ಪುತ್ತೂರು – ಉಪ್ಪಿನಂಗಡಿ ಚತುಷ್ಪಥ ರಸ್ತೆ ಕಾಮಗಾರಿ ಪರಶೀಲಿಸಿ ಶಾಸಕ ಅಶೋಕ್ ರೈ

Posted by Vidyamaana on 2023-05-25 16:13:40 |

Share: | | | | |


ಪುತ್ತೂರು – ಉಪ್ಪಿನಂಗಡಿ ಚತುಷ್ಪಥ ರಸ್ತೆ ಕಾಮಗಾರಿ ಪರಶೀಲಿಸಿ ಶಾಸಕ ಅಶೋಕ್ ರೈ

ಪುತ್ತೂರು: 20 ದಿನದೊಳಗೆ ಪುತ್ತೂರು – ಉಪ್ಪಿನಂಗಡಿ ಚತುಷ್ಪಥ ರಸ್ತೆಯ ಡಿವೈಡರ್ ಹಾಗೂ ಡ್ರೈನೇಜ್ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು. ಈಗ ಮೊದಲಿನ ಹಾಗಲ್ಲ, ಚೇಂಜಸ್ ಇರ್ತದೆ ಎನ್ನುವುದನ್ನು ಮರೆಯದಿರಿ ಎಂದು ಶಾಸಕ ಅಶೋಕ್ ಕುಮಾರ್ ರೈ ಗುತ್ತಿಗೆದಾರರಿಗೆ ಸೂಚನೆ ನೀಡಿದ ಘಟನೆ ಗುರುವಾರ ನಡೆಯಿತು.

ಪುತ್ತೂರು – ಉಪ್ಪಿನಂಗಡಿ ಚತುಷ್ಪಥ ಹೆದ್ದಾರಿಯ ಕಾಮಗಾರಿ ವೀಕ್ಷಣೆ ನಡೆಸುತ್ತಾ ಅಧಿಕಾರಿ ಹಾಗೂ ಗುತ್ತಿಗೆದಾರರಿಗೆ ಖಡಕ್ ಸೂಚನೆ ನೀಡಿದರು.

ಚತುಷ್ಪಥ ರಸ್ತೆಯ ಡಿವೈಡರ್ ಕಾಮಗಾರಿ ಅಪೂರ್ಣವಾಗಿರುವುದರಿಂದ ಎಲ್ಲರಿಗೂ ಸಮಸ್ಯೆಯಾಗಿದೆ. ಇದರಿಂದಾಗಿ ಡ್ರೈನ್ ಸಮಸ್ಯೆಯೂ ಎದುರಾಗಿದೆ. ರಸ್ತೆ ಮಧ್ಯದಲ್ಲಿ ಡಿವೈಡರ್ ಬದಲು ಕಲ್ಲುಗಳನ್ನು ಹಾಕಿರುವುದು ಎಷ್ಟು ಸರಿ. ಅದು ಸರಿಯಾಗಿ ಕಾಣುವುದೂ ಇಲ್ಲ. ದ್ವಿಚಕ್ರ ಸವಾರರು ರಾತ್ರಿ ವೇಳೆ ಬಂದು, ಢಿಕ್ಕಿ ಹೊಡೆದರೆ ಅವರ ಜೀವಕ್ಕೆ ಯಾರು ಗತಿ? ಎಂದು ಕ್ಲಾಸ್ ತೆಗೆದುಕೊಂಡರು.

ಆದ್ದರಿಂದ ಈ ಎಲ್ಲಾ ಕಾಮಗಾರಿಗಳನ್ನು ಯಾವಾಗ ಪೂರ್ಣಗೊಳ್ಳುತ್ತದೆ ಎನ್ನುವ ಮಾಹಿತಿ ಕೊಡಿ ಎಂದರು. ಇದಕ್ಕೆ ಉತ್ತರಿಸಿದ ಗುತ್ತಿಗೆದಾರರು ಮಳೆಗಾಲದ ಒಳಗಡೆ ಮುಗಿಸುತ್ತೇವೆ ಎಂದರು.

ಲೋಕೋಪಯೋಗಿ ಇಲಾಖೆಯ ರಾಜಾರಾಂ ಮಾತನಾಡಿ, ಅವರಿಗೆ ನೀಡಿರುವ ಸಮಯ ಮುಗಿದಿದೆ. ಆದರೆ ಕಾಮಗಾರಿ ಇನ್ನೂ ಇರುವುದರಿಂದ ಹೆಚ್ಚಿನ ಕಾಲಾವಕಾಶ ತೆಗೆದುಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು.

ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ, ಮೊದಲಿಗೆ ಡಿವೈಡರ್ ಹಾಗೂ ಡ್ರೈನ್ ಕೆಲಸ ಪೂರ್ಣಗೊಳಿಸಬೇಕು. ಇಲ್ಲವಾದರೆ ಜನಸಾಮಾನ್ಯರಿಗೆ ಸಮಸ್ಯೆ. ಅದನ್ನು ತಕ್ಷಣದಲ್ಲಿ ಪೂರ್ಣಗೊಳಿಸಿ. ಅದಕ್ಕೆ ಎಷ್ಟು ಸಮಯ ಬೇಕೆಂದು ತಿಳಿಸಿ ಎಂದರು.

ಉತ್ತರಿಸಿದ ಗುತ್ತಿಗೆದಾರರು 15 ದಿನಗಳ ಕಾಲಾವಕಾಶ ಕೇಳಿದರು.

ಪ್ರತಿಕ್ರಿಯಿಸಿದ ಶಾಸಕರು, 15 ದಿನವಲ್ಲ, ಇನ್ನೂ 5 ದಿನ ಹೆಚ್ಚಿನ ಕಾಲಾವಕಾಶ ತೆಗೆದುಕೊಳ್ಳಿ. ಆದರೆ ಮಾತಿಗೆ ತಪ್ಪದಿರಿ. ನೀವು ತೆಗೆದುಕೊಂಡ ಸಮಯದೊಳಗೆ ಕಾಮಗಾರಿ ಪೂರ್ಣಗೊಳಿಸಬೇಕು. ಈಗ ಮೊದಲಿನ ಹಾಗಲ್ಲ. ಮೊದಲಿಗಿಂತ ಚೇಂಜಸ್ ಇರ್ತದೆ ಎಂದು ಖಡಕ್ ಎಚ್ಚರಿಕೆ ರವಾನಿಸಿದರು.

ಮನೆಯವರಿಗೆ ತೊಂದರೆ ಆಗಬಾರದು:

2-3 ಜನ ಹಾಕಿಕೊಂಡು ಕೆಲಸ ಮಾಡುವುದನ್ನು ಚತುಷ್ಪಥ ಹೆದ್ದಾರಿಯಲ್ಲಿ ಕಾಣುತ್ತಿದ್ದೇವೆ. ಇದು ಗುತ್ತಿಗೆದಾರರು ಮಾಡುವ ಕೆಲಸವಲ್ಲ. ಒಮ್ಮೆಗೆ ಕೆಲಸ ಮಾಡಿ ಬಿಡಬೇಕು. ಕಳೆದ 3 ವರ್ಷದಿಂದ ಕಾಮಗಾರಿ ನಡೆಯುತ್ತಿದೆ. ಇನ್ನೂ ಪೂರ್ಣಗೊಂಡಿಲ್ಲ ಎಂದರೆ ಏನರ್ಥ. ಇದರೊಂದಿಗೆ ನೆಕ್ಕಿಲಾಡಿವರೆಗೆ ಕಾಮಗಾರಿಯೂ ಆಗಬೇಕಿದೆ. ಪುತ್ತೂರಿನಿಂದ ಉಪ್ಪಿನಂಗಡಿವರೆಗೆ ಚತುಷ್ಪಥ ರಸ್ತೆ ನಿರ್ಮಾಣ ಆಗಬೇಕಿದೆ. ಇದರ ನಡುವೆ ಕಾಮಗಾರಿಯಿಂದಾಗಿ ಕೆಲವು ಮನೆಗಳು ಕುಸಿತದ ಭೀತಿ ಎದುರಿಸುತ್ತಿದೆ. ಇದಕ್ಕೆಲ್ಲಾ ಎಸ್ಟಿಮೇಟೇ ಆಗಿಲ್ಲ. ಆದ್ದರಿಂದ ಸರಿಯಾದ ಕ್ರಮ ಕೈಗೊಳ್ಳಬೇಕು. ಒಂದು ಮನೆಯವರಿಗೂ ತೊಂದರೆ ಆಗಬಾರದು. ಮಳೆಗಾಲ ಮುಗಿದ ತಕ್ಷಣ ನಿರ್ದಿಷ್ಟ ಸಮಯದೊಳಗೆ ಚತುಷ್ಪಥ ಕಾಮಗಾರಿ ಪೂರ್ಣಗೊಳಿಸಬೇಕು. ಇದರಿಂದ ಜನಸಾಮಾನ್ಯರಿಗೆ ಯಾವುದೇ ತೊಂದರೆ ಆಗಬಾರದು ಎಂದು ಶಾಸಕ ಅಶೋಕ್ ಕುಮಾರ್ ರೈ ಅವರು ಅಧಿಕಾರಿಗಳಿಗೆ ಹಾಗೂ ಗುತ್ತಿಗೆದಾರರಿಗೆ ಸೂಚನೆ ನೀಡಿದರು.

ಬೆಳ್ತಂಗಡಿ : ಸಾರ್ವಜನಿಕ ಸ್ಥಳಗಳಲ್ಲಿ ಮಚ್ಚು ತೋರಿಸಿ ಬೆದರಿಕೆ

Posted by Vidyamaana on 2023-10-11 14:36:06 |

Share: | | | | |


ಬೆಳ್ತಂಗಡಿ : ಸಾರ್ವಜನಿಕ ಸ್ಥಳಗಳಲ್ಲಿ ಮಚ್ಚು ತೋರಿಸಿ ಬೆದರಿಕೆ

ಬೆಳ್ತಂಗಡಿ: ವೇಣೂರು ಶ್ರೀ ಬಾಹುಬಲಿ ಕ್ಷೇತ್ರದ ಪರಿಸರದಲ್ಲಿ ಆಕ್ಟೋಬರ್ 10 ರಂದು ಸಂಜೆ ಮಹಾಮಸ್ತಕಾಭಿಷೇಕದ ಪ್ರಯುಕ್ತ ಜಿನ ಭಜನಾ ಸ್ಪರ್ಧೆಗೆ ತರಬೇತಿ ಪಡೆಯುತ್ತಿದ್ದಾಗ ವ್ಯಕ್ತಿಯೊರ್ವ ಸ್ಥಳಕ್ಕೆ ತೆರಳಿ ಅವಾಚ್ಯ ಶಬ್ದಗಳಿಂದ ಬೈದಿರುವುದಲ್ಲದೆ, ಮಚ್ಚು ತೋರಿಸಿ ಜೀವ ಬೆದರಿಕೆ ಹಾಕಿರುವುದಾಗಿ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಬೆಳ್ತಂಗಡಿ ತಾಲೂಕಿನ ಮುಂಡೂರಿನ ಆನಂದ ಆಚಾರ್ಯ (38) ಎಂಬಾತನು ಅಕ್ಟೋಬರ್ 10 ರಂದು ಸಂಜೆ ವೇಣೂರು ಬಾಹುಬಲಿ ಕ್ಷೇತ್ರದಲ್ಲಿ ವಲಯ ಮಟ್ಟದ ಜಿನ ಭಜನಾ ಸ್ಪರ್ದೆಗೆ ಮಹಿಳೆಯರು,ಮಕ್ಕಳು ಸೇರಿ ಸುಮಾರು 70 ಮಂದಿ ಅಭ್ಯಾಸ ನಡೆಸುತ್ತಿದ್ದರು,ಪ್ರವಾಸಿಗರು ಕೂಡ ಇದ್ದರು. ಈ ಸಂದರ್ಭ ಅಲ್ಲಿಗೆ ತೆರಳಿ ಮಚ್ಚು ತೋರಿಸಿ, ಬೊಬ್ಬೆ ಹಾಕಿ ಬೆದರಿಕೆ ಹಾಕಿದ್ದು ಕೂಡಲೇ ಸ್ಥಳಿಯರು ವೇಣೂರು ಪೋಲಿಸ್ ಠಾಣೆಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಪೋಲೀಸರು ಆಗಮಿಸಿ ಮಚ್ಚನ್ನು ವಶಪಡಿಸಿಕೊಂಡು.ಆರೋಪಿಯನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕಾಂಗ್ರೆಸ್ ಸಮಾಲೋಚನಾ ಸಭೆಯಲ್ಲಿ ಸೋಲು – ಗೆಲುವಿನ ಲೆಕ್ಕಾಚಾರ

Posted by Vidyamaana on 2023-05-30 09:10:06 |

Share: | | | | |


ಕಾಂಗ್ರೆಸ್ ಸಮಾಲೋಚನಾ ಸಭೆಯಲ್ಲಿ ಸೋಲು – ಗೆಲುವಿನ ಲೆಕ್ಕಾಚಾರ

ಪುತ್ತೂರು: ವಿಧಾನಸಭಾ ಚುನಾವಣೆಯಲ್ಲಿ ಸೋಲು – ಗೆಲುವಿನ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮಂಗಳೂರು ಜಿಲ್ಲಾ ಕಚೇರಿಯಲ್ಲಿ ಸಮಾಲೋಚನಾ ಸಭೆ ನಡೆಯಿತು.

ಜಿಲ್ಲಾ  ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಸೋಲು – ಗೆಲುವಿನ ಬಗ್ಗೆ ವಿಮರ್ಶೆ ನಡೆಯಿತು.

ಪುತ್ತೂರು ಶಾಸಕ ಅಶೋಕ್ ರೈ, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ ಭಂಡಾರಿ ಸಹಿತ ಜಿಲ್ಲೆ ಹಾಗೂ ವಿಧಾನಸಭಾ ಕ್ಷೇತ್ರಗಳ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.



Leave a Comment: