ಮಂಗಳೂರಲ್ಲಿ ಮಣ್ಣು ಕುಸಿತ ಪ್ರಕರಣ : ಓರ್ವ ಕಾರ್ಮಿಕನ ರಕ್ಷಣೆ

ಸುದ್ದಿಗಳು News

Posted by vidyamaana on 2024-07-03 16:20:08 |

Share: | | | | |


ಮಂಗಳೂರಲ್ಲಿ ಮಣ್ಣು ಕುಸಿತ ಪ್ರಕರಣ : ಓರ್ವ ಕಾರ್ಮಿಕನ ರಕ್ಷಣೆ

ಮಂಗಳೂರು : ಮಂಗಳೂರಿನ ಬಲ್ಮಠದಲ್ಲಿ ನಿರ್ಮಾಣ ಹಂತದ ಕಟ್ಟಡದಲ್ಲಿ ಮಣ್ಣು ಕುಸಿತದಿಂದ ಮಣ್ಣಿನ ಅಡಿಯಲ್ಲಿ ಇಬ್ಬರು ಕಾರ್ಮಿಕರು ಸಿಲುಕಿದ್ದರು. ಇದೀಗ ಮಣ್ಣಿನ ಅಡಿ ಸಿಲುಕಿದ್ದ ಕಾರ್ಮಿಕರ ಪೈಕಿ ಒಬ್ಬನನ್ನು ರಕ್ಷಣೆ ಮಾಡಲಾಗಿದೆ.ಹೌದು ಇಂದು ಮಂಗಳೂರಿನ ಬಲ್ಮಠದಲ್ಲಿ ನಿರ್ಮಾಣ ಹಂತದ ಕಟ್ಟಡದಲ್ಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದರು

ಈ ವೇಳೆ 20 ಅಡಿ ಅಡಿ ಆಳದಲ್ಲಿ ಇಬ್ಬರು ಕಾರ್ಮಿಕರು ಇದ್ದು ತಕ್ಷಣ ಮಣ್ಣು ಕುಸಿತವಾಗಿದೆ. ಇವಳೇ ಇಬ್ಬರು ಕಾರ್ಮಿಕರು ಮಣ್ಣಿನ ಆಡಿ ಸಿಕ್ಕಿದ್ದಾರೆ ತಕ್ಷಣ ಘಟನಾ ಸ್ಥಳಕ್ಕೆ ಎಸ್‌ಡಿಆರ್‌ಎಫ್ ತಂಡ ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿ ಒಬ್ಬನನ್ನು ರಕ್ಷಣೆ ಮಾಡಿದ್ದಾರೆ.

ಆದರೆ ಇನ್ನೊಬ್ಬ ಕಾರ್ಮಿಕನ ರಕ್ಷಣೆಗೆ ಕಾರ್ಯಾಚರಣೆ ಮುಂದುವರೆದಿದ್ದು ಈ ವೇಳೆ ಮಳೆ ಕಾರ್ಯಾಚರಣೆಗೆ ಅಡ್ಡಿ ಪಡಿಸುತ್ತಿದೆ. ಜೋರಾದ ಮಳೆಯಿಂದ ಇದೀಗ ಕಾರ್ಯಾಚರಣೆಗೆ ತೊಂದರೆ ಉಂಟಾಗುತ್ತಿದೆ. ರಕ್ಷಿತ ಕಾರ್ಮಿಕನನ್ನು ತಕ್ಷಣ ಆಂಬುಲೆನ್ಸ್ ನಲ್ಲಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಗಡನಾಸ್ ತಳಕ್ಕೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ, ಮುಲ್ಲೈ ಮುಗಿಲನ್   ಹಾಗೂ ಇತರೆ ಅಧಿಕಾರಿಗಳು ಸ್ಥಳದಲ್ಲಿ ಇದ್ದಾರೆ.

 Share: | | | | |


ಇಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಪುತ್ತೂರು, ಹನುಮಗಿರಿಗೆ ಭೇಟಿ ಹಿನ್ನಲೆ ಬಿಗಿ ಪೊಲೀಸ್ ಭದ್ರತೆ

Posted by Vidyamaana on 2023-02-11 03:21:47 |

Share: | | | | |


ಇಂದು ಕೇಂದ್ರ ಗೃಹ ಸಚಿವ ಅಮಿತ್ ಶಾ  ಪುತ್ತೂರು, ಹನುಮಗಿರಿಗೆ ಭೇಟಿ ಹಿನ್ನಲೆ ಬಿಗಿ ಪೊಲೀಸ್ ಭದ್ರತೆ

ಪುತ್ತೂರು:ಪ್ರತಿಷ್ಠಿತ ಅಂತರಾಜ್ಯ ಸಹಕಾರಿ ಸಂಸ್ಥೆ ಕ್ಯಾಂಪ್ಕೋ ಸುವರ್ಣ ಮಹೋತ್ಸವ ಹಾಗೂ ಹನುಮಗಿರಿಯಲ್ಲಿ ಅಮರಗಿರಿ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲು ಕೇಂದ್ರ ಗೃಹ ಸಚಿವರು, ದೇಶದ ಪ್ರಥಮ ಸಹಕಾರ ಸಚಿವರೂ ಆಗಿರುವ ಅಮಿತ್‌ ಶಾ ಅವರು ಫೆ.11 ರಂದು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಪುತ್ತೂರು, ಹನುಮಗಿರಿ ಸುತ್ತಮುತ್ತ ಪೊಲೀಸರು ಬಿಗಿ ಭದ್ರತಾ ವ್ಯವಸ್ಥೆ ಕಲ್ಪಿಸಿದ್ದು ಎಲ್ಲಿ ನೋಡಿದರೂ ಪೊಲೀಸರೇ ಕಾಣುತ್ತಿದ್ದಾರೆ. ರಾಜ್ಯದ ನಾನಾ ಭಾಗದಿಂದ ಪೊಲೀಸರನ್ನು ಭದ್ರತೆಗೆ ನಿಯೋಜನೆ ಮಾಡಲಾಗಿದೆ.ಅಮಿತ್ ಶಾ ಅವರಲ್ಲದೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಹಿತ ರಾಜ್ಯದ ಹಲವು ಸಚಿವರು, ಜನಪ್ರತಿನಿಧಿಗಳು, ರಾಜಕೀಯ ನಾಯಕರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಆಯಕಟ್ಟಿನ ಸ್ಥಳಗಳಲ್ಲಿ ಪೊಲೀಸರು ಹದ್ದಿನ ಕಣ್ಣಿರಿಸಿದ್ದಾರೆ.ಕೆಲವು ದಿನಗಳಿಂದ ಕೇರಳ ಗಡಿ ಸಹಿತ ವಿವಿಧೆಡೆ ಪೊಲೀಸರನ್ನು ನಿಯೋಜಿಸಿ ನಿಗಾ ಇರಿಸಲಾಗಿದೆ.ಗೃಹ ಸಚಿವ ಅಮಿತ್‌ ಶಾ ಅವರು ಪಾಲ್ಗೊಳ್ಳುವ ಹನುಮಗಿರಿಯಲ್ಲಿ ಮತ್ತು ಪುತ್ತೂರು ಕ್ಯಾಂಪ್ಕೋ ಸುವರ್ಣ ಮಹೋತ್ಸವ ಉದ್ಘಾಟನೆ ಹಾಗೂ ಸಮಾವೇಶ ನಡೆಯಲಿರುವ ವಿವೇಕಾನಂದ ವಿದ್ಯಾಸಂಸ್ಥೆಯ ಕ್ರೀಡಾಂಗಣದಲ್ಲಿ ಸಕಲ ಸಿದ್ಧತೆಗಳನ್ನು ಮಾಡಲಾಗುತ್ತಿದೆ.

ಉನ್ನತ ಭದ್ರತಾ ವ್ಯವಸ್ಥೆಯನ್ನು ಹೊಂದಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ದಕ್ಷಿಣ ಕನ್ನಡ ಜಿಲ್ಲೆಗೆ ಭೇಟಿ ಹಿನ್ನೆಲೆಯಲ್ಲಿ ಎಲ್ಲೆಡೆ ಪೊಲೀಸ್ ಕಟ್ಟೆಚ್ಚರ ವಹಿಸಲಾಗಿದೆ: ಸುಮಾರು ಮೂರು ಸಾವಿರ ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.ಈ ಮಧ್ಯೆ ಕೇಂದ್ರ ಗುಪ್ತಚರ ಇಲಾಖೆಯ ಅಧಿಕಾರಿಗಳೂ ಈ ಭಾಗದಲ್ಲಿ ಸಕ್ರಿಯರಾಗಿದ್ದಾರೆ.ಸಚಿವರು ಕೇರಳದ ಕಣ್ಣೂರುಗೆ ಬಂದು ಬಳಿಕ ಜಿಲ್ಲೆಯ ನಾನಾ ಕಡೆ ಪ್ರಯಾಣಿಸಲಿರುವ ಕಾರಣ ಜಿಲ್ಲಾಡಳಿತ ಸಚಿವರ ಭದ್ರತೆಗೆ ಗರಿಷ್ಠ ಆದ್ಯತೆ ನೀಡಿದೆ.

ಮೂರು ಹೆಲಿಪ್ಯಾಡ್: ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿ ಹಿನ್ನೆಲೆಯಲ್ಲಿ ಪುತ್ತೂರಿನಲ್ಲಿ ಮೂರು ಹೆಲಿಪ್ಯಾಡ್‌ ಗಳನ್ನು ನಿರ್ಮಿಸಲಾಗಿದೆ.

ಕೇರಳ ಗಡಿ ಭಾಗದಲ್ಲಿರುವ ಹನುಮಗಿರಿ ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದ ಬಳಿಕ ಅಮರಗಿರಿ ಭಾರತಮಾತಾ ಮಂದಿರವನ್ನು ಸಚಿವರು ಉದ್ಘಾಟಿಸಲಿದ್ದಾರೆ. ಕಣ್ಣೂರುನಿಂದ ಬರಲಿರುವ ಅಮಿತ್‌ ಶಾ ಅವರ ಹೆಲಿಕಾಪ್ಟರ್ ಲ್ಯಾಂಡಿಂಗ್ ಆಗಲು ಈಶ್ವರಮಂಗಲ ಗಜಾನನ ಶಾಲೆ ಮೈದಾನದಲ್ಲಿ ಹೆಲಿಪ್ಯಾಡ್ ನಿರ್ಮಿಸಲಾಗಿದ್ದು, ಈಗಾಗಲೇ ಇದರ ಉದ್ಘಾಟನೆ ನಡೆದಿದೆ.ಹೈದರಾಬಾದ್‌ನಿಂದ ಕಣ್ಣೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದು ಅಲ್ಲಿಂದ ಬಿಎಸ್‌ಎಫ್ ಹೆಲಿಕಾಪ್ಟರ್‌ನಲ್ಲಿ ಬರುವ ಅಮಿತ್ ಶಾರವರು ಹನುಮಗಿರಿ ಹೆಲಿಪ್ಯಾಡ್‌ನಲ್ಲಿ ಬಂದಿಳಿಯಲಿದ್ದಾರೆ.ಹನುಮಗಿರಿ ಕಾರ್ಯಕ್ರಮ ಮುಗಿಸಿ ಹೆಲಿಕಾಪ್ಟರ್‌ನಲ್ಲಿ ಬರಲಿರುವ ಶಾ ಅವರು ಕೆಮ್ಮಿಂಜೆ ಗ್ರಾಮದ ಮೊಟ್ಟೆತಡ್ಕ ರಾಷ್ಟ್ರೀಯ ಗೇರು ಸಂಶೋಧನಾ ನಿರ್ದೇಶನಾಲಯದ ಎದುರಿನ ಮೈದಾನದಲ್ಲಿನಿರ್ಮಿಸಲಾಗಿರುವ ಹೆಲಿಪ್ಯಾಡ್ ಲ್ಲಿ ನಲ್ಲಿ ಬ೦ದಿಳಿಯಲಿದ್ದಾರೆ.ಮೊಟ್ಟೆತ್ತಡ್ಕದಲ್ಲಿ ಇದೀಗ ಶಾಶ್ವತವಾದ ಹೆಲಿಪ್ಯಾಡ್ ನಿರ್ಮಿಸಲಾಗಿದೆ.ಇದರ ಜತೆಗೆ ಪುತ್ತೂರು ಸಂತ ಫಿಲೋಮಿನಾ ಹೆಲಿಕಾಪ್ಟರ್ ಕಾಲೇಜಿನ ಮೈದಾನವನ್ನೂ ಹೆಚ್ಚುವರಿ ಹೆಲಿಪ್ಯಾಡ್ ಆಗಿ ಬಳಸಿಕೊಳ್ಳಲು ನಿರ್ಧರಿಸಲಾಗಿದೆ.ಇದು 3ನೇ ಮತ್ತು ತುರ್ತು ಹೆಲಿಪ್ಯಾಡ್ ಆಗಿ ಬಳಕೆಯಾಗಲಿದೆ.


ಕಂಗೊಳಿಸುತ್ತಿರುವ ಪುತ್ತೂರು ಪೇಟೆ:

ಕ್ಯಾಂಪ್ಕೋ ಸುವರ್ಣ ಮಹೋತ್ಸವ ಸಹಿತ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಆಗಮಿಸುತ್ತಿರುವ ಅಮಿತ್‌ ಶಾ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಹಿತ ವಿವಿಧ ಮಂತ್ರಿಗಳು, ಜನಪ್ರತಿನಿಧಿಗಳಿಗೆ ಸ್ವಾಗತ ಕೋರಿ ಪುತ್ತೂರು ಪೇಟೆಯಾದ್ಯಂತ ಬ್ಯಾನರ್, ಬಂಟಿಂಗ್ಸ್, ಕಟೌಟ್‌ಗಳನ್ನು ಅಳವಡಿಸಲಾಗಿದೆ. ಹನುಮಗಿರಿ ವ್ಯಾಪ್ತಿಯಲ್ಲಿಯೂ ಬ್ಯಾನರ್, ಕಟೌಟ್‌ಗಳು ರಾರಾಜಿಸುತ್ತಿವೆ.ಇತರ ಗ್ರಾಮಾಂತರ ಭಾಗಗಳಲ್ಲೂ ರಸ್ತೆ ಬದಿ ಸ್ವಾಗತದ ಬ್ಯಾನರ್‌ಗಳನ್ನು ಅಳವಡಿಸಲಾಗಿದೆ.


ಸಮಾವೇಶಕ್ಕೆ ಆಗಮಿಸುವವರಿಗೆ ಊಟದ ವ್ಯವಸ್ಥೆ: ಸುಳ್ಯ ಭಾಗದಿಂದ ಬರುವವರಿಗಾಗಿ ಕಾವು ಕ್ಯಾಂಪೋ ಬಳಿಯಲ್ಲಿ, ಬೆಳ್ಳಾರೆ ಭಾಗದಿಂದ ಬರುವವರಿಗೆ ಪರ್ಪುಂಜ ಶಿವಕೃಪಾ ಹಾಲ್ ಬಳಿ, ಸವಣೂರು ಮತ್ತು ಸುಬ್ರಹ್ಮಣ್ಯ ಭಾಗದಿಂದ ಬರುವವರಿಗೆ ನರಿಮೊಗರು ಮುಕ್ತ ಉಮಾಮಹೇಶ್ವರಿ ದೇವಸ್ಥಾನದ ಬಳಿ, ಬೆಳ್ತಂಗಡಿ ಹಾಗೂ ನೆಲ್ಯಾಡಿ ಭಾಗದಿಂದ ಬರುವವರಿಗೆ ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನ, ಬಂಟ್ವಾಳ ಭಾಗದಿಂದ ಬರುವವರಿಗೆ ಮಾಣಿ-ಕಬಕ ರಸ್ತೆಯ ಮಿತ್ತೂರು ಪೆಟ್ರೋಲ್ ಪಂಪ್ ಬಳಿ, ವಿಟ್ಲ ಕನ್ಯಾನ ಭಾಗದಿಂದ ಬರುವವರಿಗೆ ಕಬಕ ವಿಟ್ಲ ರಸ್ತೆಯ ಅಳಕೆಮಜಲು ಭಜನಾ ಮಂದಿರ ಬಳಿ,

ಪಾಣಾಜೆ ಭಾಗದಿಂದ ಬರುವವರಿಗೆ ಉಪ್ಪಳಿಗೆ ಶಾಲಾ ವಠಾರದಲ್ಲಿ ಊಟದ ವ್ಯವಸ್ಥೆ ಮಾಡಲಾಗಿದೆ.


ವಾಹನಗಳ ಪಾರ್ಕಿಂಗ್ ಸ್ಥಳ, ಪಾರ್ಕಿಂಗ್ ಪ್ರಮುಖರು: ವಿವೇಕಾನಂದ ತೆಂಕಿಲ ಶಾಲಾ ಮೈದಾನದಲ್ಲಿ ಕ್ಯಾಂಪ್ರೋ ಸುವರ್ಣ ಮಹೋತ್ಸವ ಕಾರ್ಯಕ್ರಮಕ್ಕೆ ಆಗಮಿಸುವವರು ವಾಹನಗಳನ್ನು ಸ್ವಯಂ ಸೇವಕರು ಸೂಚಿಸಿದ ಸ್ಥಳದಲ್ಲೇ ಪಾರ್ಕ್ಮಾಡುವಂತೆ ವಾಹನ ಪಾರ್ಕಿಂಗ್ ವ್ಯವಸ್ಥೆಯ ಸಂಚಾಲಕ ಭಾಮಿ ಅಶೋಕ್ ಶೆಣೈ ಮತ್ತು ಮುರಳೀಕೃಷ್ಣ ಹಸಂತಡ್ಕ ತಿಳಿಸಿದ್ದಾರೆ.ಪ್ರತಿ ವಾಹನ ನಿಲುಗಡೆಯ ಸ್ಥಳಕ್ಕೂ ಪ್ರತ್ಯೇಕ ಹೆಸರು ಸೂಚಿಸಲಾಗಿದೆ.ಪ್ರಮುಖವಾಗಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ಎದುರಿನ ಗದ್ದೆ, ಪುತ್ತೂರು ನಗರದ ಕಿಲ್ಲೆ ಮೈದಾನ, ಪುತ್ತೂರು ನಗರದ ಎಪಿಎಂಸಿ, ವಿಐಪಿಗಳಿಗೆ ತೆಂಕಿಲ ಬೈಪಾಸ್ ವ್ಯಾಪ್ತಿಯ 3-4 ಲೇ ಔಟ್‌ಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಇದೆ.ಸುಳ್ಯದಿಂದ ಬರುವ ಬಸ್‌ಗಳಿಗೆ ಸುಭದ್ರ ಬಳಿ (ಸಿಂಧೂ) ಪಾರ್ಕಿಂಗ್‌ಗೆ ಅಜಿತ್‌ ಕೆಯೂರು(ಮೊ: 8970994039) ನಿಲುಗಡೆ ಪ್ರಮುಖ ಆಗಿದ್ದಾರೆ.ಕಾಣಿಯೂರಿನಿಂದ ಬರುವ ನಾಲ್ಕು ಚಕ್ರದ ವಾಹನಗಳಿಗೆ ಫಿಲೋಮಿನಾ ಹೈಸ್ಕೂಲ್ ಬಳಿ (ನರ್ಮದಾ) ಪಾರ್ಕಿಂಗ್‌ಗೆ ದಿನೇಶ್ ತಿಂಗಳಾಡಿ(ಮೊ:8431839614) ನಿಲುಗಡೆ ಪ್ರಮುಖರಾಗಿದ್ದಾರೆ.ಸುಳ್ಯದ ಕಡೆಯಿಂದ ಬರುವ ನಾಲ್ಕು ಚಕ್ರದ ವಾಹನಗಳಿಗೆ ಬೈಪಾಸ್ ಅಭಯ ಮಾರ್ಬಲ್ ಎದುರು (ಯಮುನಾ) ಪಾರ್ಕಿಂಗ್‌ಗೆ ಅನಿಲ್ ದರ್ಬೆ (9902813711 ಪ್ರಮುಖರಾಗಿದ್ದಾರೆ.ವಿಐಪಿ ವಾಹನಗಳಿಗೆ ತೆಂಕಿಲ ಬೈಪಾಸ್ ಸುರೇಶ್ ಟವರ್ ಬಳಿ (ತುಂಗಾ) ಮತ್ತು (ಭದ್ರ) ಪಾರ್ಕಿಂಗ್ ಗೆ ಚಂದ್ರ ತೆಂಕಿಲ(9591197706) ಪ್ರಮುಖರಾಗಿದ್ದಾರೆ.ತೆಂಕಿಲ ಗೌಡ ಸಮುದಾಯದ ಬಳಿ (ಶರಾವತಿ) ಪಾರ್ಕಿಂಗ್‌ಗೆ ರೂಪೇಶ್ ಮುರ (7019504836) ಪ್ರಮುಖರಾಗಿದ್ದಾರೆ. ಸರಕಾರಿ ವಾಹನಗಳಿಗೆ ತೆಂಕಿಲ ಸ್ವಾಮಿ ಕಲಾಮಂದಿರದ(ಕೃಷ್ಣಾ) ಪಾರ್ಕಿಂಗ್‌ಗೆ ನಿತೇಶ್ ನಗರ(8904221429)ಪ್ರಮುಖರಾಗಿದ್ದಾರೆ.ತೆಂಕಿಲ ಮಂಗಳಾ ಹಾರ್ಡ್ ವೇರ್ ಕಟ್ಟಡದ ಬಳಿ (ಫಲ್ಗುಣಿ)ಪಾರ್ಕಿಂಗ್‌ಗೆ ನಿತೇಶ್ ನಗರ, ನಗರ ಮತ್ತು ಬಲ್ನಾಡಿನಿಂದ ಬರುವ ನಾಲ್ಕು ಚಕ್ರದ ವಾಹನಗಳಿಗೆ ತೆಂಕಿಲ ದರ್ಶನ್ ಹಾಲ್‌ನ ಹಿಂಭಾಗ(ಶಾಂಭವಿ) ಪಾರ್ಕಿಂಗ್ ಚೇತನ್ ಬೊಳುವಾರು(ಮೊ: 8105895210) ಪ್ರಮುಖರಾಗಿದ್ದಾರೆ.ಅದೇ ಭಾಗದಿ೦ದ ಬರುವ ನಾಲ್ಕು ಚಕ್ರದ ವಾಹನಗಳಿಗೆ ಜೈನಭವನ (ಸರಯೂ) ಪಾರ್ಕಿಂಗ್ ಜೀವನ್ ಬಲ್ನಾಡು(ಮೊ:9483215377) ಪ್ರಮುಖರಾಗಿದ್ದಾರೆ.ಅದೇ ಭಾಗದಿಂದ ಬರುವ ದ್ವಿಚಕ್ರ ವಾಹನಗಳಿಗೆ ತೆಂಕಿಲ ಪಾದೆಯ (ನೇತ್ರಾವತಿ) ಪಾರ್ಕಿಂಗ್‌ನಲ್ಲಿ ಭವಿಷ್ಯತ್ (7026869493) ಪ್ರಮುಖರಾಗಿದ್ದಾರೆ: ವಿಟ್ಲ ಭಾಗದಿಂದ ಬರುವ ಬಸ್‌ಗಳಿಗೆ ಬೈಪಾಸ್‌ ರಸ್ತೆಯ ಅತ್ಮೀ ಕಂಫರ್ಟ್‌ ಬಳಿ (ಕಾವೇರಿ) ಪಾರ್ಕಿಂಗ್‌ನಲ್ಲಿ ಪ್ರವೀಣ್ ಕಲ್ಲೇಗ(ಮೊ: 9663885236)ಪ್ರಮುಖರಾಗಿದ್ದಾರೆ. ವಿಟ್ಲ ಭಾಗದಿಂದ ಬರುವ ನಾಲ್ಕು ಚಕ್ರದ ವಾಹನಗಳಿಗೆ ಸುಶ್ರುತ ಆಸ್ಪತ್ರೆಯ ಬಳಿ (ಗೋದಾವರಿ) ಪಾರ್ಕಿ೦ಗ್‌ನಲ್ಲಿ ರೂಪೇಶ್ ಬಲ್ನಾಡ್ (9632346192)ಪ್ರಮುಖರಾಗಿದ್ದಾರೆ.ಬೆಳಿ ಂಗಡಿ ಮತ್ತು ಉಪ್ಪಿನಂಗಡಿಯಿಂದ ಬರುವ ಬಸ್‌ಗಳಿಗೆ ಮಹಾಲಿಂಗೇಶ್ವರ ದೇವಸ್ಥಾನದ (ಗೋದಾವರಿ) ಪಾರ್ಕಿಂಗ್‌ನಲ್ಲಿ ಜಿತೇಶ್ (0:9606779737) ಪ್ರಮುಖರಾಗಿದ್ದಾರೆ.ಸುಳ್ಯ ರಸ್ತೆಯಿಂದ ಬರುವ ನಾಲ್ಕು ಚಕ್ರದ ವಾಹನಳಿಗೆ ಬೈಪಾಸ್‌ ಭಾರತ್ ಗ್ಯಾಸ್, ಎದುರುಗಡೆ (ಕುಮಾರಧಾರ) ಪಾರ್ಕಿಂಗ್‌ನಲ್ಲಿ ಹರೀಶ್ doces (in: 8310857491) ಪ್ರಮುಖರಾಗಿದ್ದಾರೆ.ಪಂಚವಟಿ ಬಳಿ ಸೀತಾ ಪಾರ್ಕಿಂಗ್, ಪರ್ಲಡ್ಕ ಶಾಲಾ ಮೈದಾನದಲ್ಲಿ ಭಾಗೀರಥಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಭದ್ರತೆಯ ದೃಷ್ಟಿಯಿಂದ ಎಲ್ಲಾ ವಾಹನಗಳು ಮಧ್ಯಾಹ್ನ ಗಂಟೆ 1.30ರ ಒಳಗಾಗಿ ಸೂಚಿಸಿದ ಸ್ಥಳದಲ್ಲಿ ನಿಲುಗಡೆಗೊಳಿಸಬೇಕೆಂದು ಪಾರ್ಕಿಂಗ್ ವಿಭಾಗದ ಸಂಚಾಲಕರು ಸೂಚಿಸಿದ್ದಾರೆ.

ಈ ರಸ್ತೆಯಲ್ಲಿ ವಾಹನ ಸಂಚಾರ ನಿಷೇಧ

ಅಮಿತ್ ಶಾ ಅವರು ಹನುಮಗಿರಿ ಕಾರ್ಯಕ್ರಮ ಮುಗಿಸಿ ಪುತ್ತೂರಿಗೆ ಹೊರಡುವ 1 ಗಂಟೆ ಮೊದಲು ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಪುತ್ತೂರು ತಾಲೂಕಿನ 2 ಕಡೆಗಳಲ್ಲಿ ಸಂಚಾರ ಸ್ಥಗಿತಗೊಳಿಸಲಾಗುತ್ತದೆ.ಮಧ್ಯಾಹ್ನ 2 ಗಂಟೆಯಿಂದ ಸಂಜೆ 5.30ರವರೆಗೆ ಲಿನೆಟ್ ಜಂಕ್ಷನ್‌ನಿಂದ ಮುಕ್ರಂಪಾಡಿ ತನಕ ವಾಹನ ಸಂಚಾರ ಸಂಪೂರ್ಣ ನಿಷೇಧಿಸಲಾಗುತ್ತದೆ.

1,600 ಪೊಲೀಸ್ ಸಿಬ್ಬಂದಿಗಳನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ.7 ಮಂದಿ ಎಸ್‌ಪಿ, 22 ಮಂದಿ ಡಿವೈಎಸ್ಪಿ, 38 ಮಂದಿ ಇನ್‌ಸ್ಪೆಕ್ಟರ್, 80ಕ್ಕೂ ಅಧಿಕ ಪಿಎಸ್‌ಐಗಳು ಕರ್ತವ ನಿರ್ವಹಿಸಲಿದ್ದಾರೆ.ಇದರ ಜತೆಗೆ ಪ್ಯಾರಾ ಮಿಲಿಟರಿ ಫೋರ್ಸ್, ಅಮಿತ್ ಶಾ ಅವರಿಗೆ ಎಸ್‌ಪಿಜಿ ಭದ್ರತೆ ಇರಲಿದೆ.ಹನುಮಗಿರಿ, ಮೊಟ್ಟೆತ್ತಡ್ಕ ಹೆಲಿಪ್ಯಾಡ್, ತೆಂಕಿಲ ಸಮಾವೇಶ ಸ್ಥಳದಲ್ಲಿ ಬಿಗಿ ಭದ್ರತೆ ಮಾಡಲಾಗಿದೆ.ಫೆ.11ರಂದು ಪುತ್ತೂರು ನಗರದಲ್ಲಿ ವಾಹನ ಸಂಚಾರಕ್ಕೆ ಬದಲಿ ಮಾರ್ಗಸೂಚಿ ನಿಗದಿಪಡಿಸಲಾಗಿದೆ.

ಅಮಿತ್ ಶಾ ಕಾರ್ಯಕ್ರಮ....

ಫೆ.11ರಂದು ಅಪರಾಹ್ನ 2.50ಕ್ಕೆ ಕಣ್ಣೂರಿನಿಂದ ಹೆಲಿಕಾಪ್ಟರ್ ಮೂಲಕ ಆಗಮಿಸಲಿರುವ ಅಮಿತ್ ಶಾ ಅವರು 3.15ಕ್ಕೆ ಹನುಮಗಿರಿ ಹೆಲಿಪ್ಯಾಡ್‌ನಲ್ಲಿ ಇಳಿಯಲಿದ್ದಾರೆ. ಹನುಮಗಿರಿ, ಅಮರಗಿರಿ ಭೇಟಿ ಮುಗಿಸಿ 3.40ಕ್ಕೆ ಪುತ್ತೂರಿಗೆ ಹೊರಡಲಿದ್ದಾರೆ. ಸಾಯಂಕಾಲ 5.30ರವರೆಗೆ ಪುತ್ತೂರು ತೆಂಕಿಲ ಮೈದಾನದಲ್ಲಿ ಕ್ಯಾಂಪೋ ಸಂಸ್ಥೆಯ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.5.40ಕ್ಕೆ ಪುತ್ತೂರಿನಿಂದ ಹೊರಟು, 6 ಗಂಟೆಗೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಇಳಿಯಲಿದ್ದಾರೆ.6.15ರಿಂದ 8 ಗಂಟೆಯವರೆಗೆ ಮಂಗಳೂರಿನಲ್ಲಿ ಇರಲಿದ್ದಾರೆ.


ಬೆಳ್ತಂಗಡಿ : ಅರಣ್ಯ ಇಲಾಖೆ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಶಾಸಕ ಹರೀಶ್ ಪೂಂಜಾ ನೇತೃತ್ವದಲ್ಲಿ ಪ್ರತಿಭಟನೆ

Posted by Vidyamaana on 2023-10-09 21:08:02 |

Share: | | | | |


ಬೆಳ್ತಂಗಡಿ : ಅರಣ್ಯ ಇಲಾಖೆ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಶಾಸಕ ಹರೀಶ್ ಪೂಂಜಾ ನೇತೃತ್ವದಲ್ಲಿ ಪ್ರತಿಭಟನೆ

ಬೆಳ್ತಂಗಡಿ : ಕಳೆಂಜ ಗ್ರಾಮದಲ್ಲಿ ಸ್ವಾತಂತ್ರ್ಯ ಪೂರ್ವದಿಂದಲೂ ವಾಸವಾಗಿರುವ ಸುಮಾರು ನೂರಕ್ಕೂ ಹೆಚ್ಚು ಮನೆಗಳಿರುವ ಪ್ರದೇಶದಲ್ಲಿ ತಮ್ಮ ಪೂರ್ವಜರ ಕಾಲದಿಂದಲೂ ಕೃಷಿ ಮಾಡಿಕೊಂಡು ಬಂದಿರುವ ಜಾಗದಲ್ಲಿ ಮನೆಕಟ್ಟಲು ಹಾಕಿದ್ದ ಅಡಿಪಾಯವನ್ನು ಏಕಾಏಕಿ ಕಳೆಂಜದ ದೇವಣ್ಣ ಗೌಡರ ಮನೆ ದ್ವಂಸಗೊಳಿಸಲು ಸಜ್ಜಾದ ಅರಣ್ಯ ಇಲಾಖೆ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಬೆಳ್ತಂಗಡಿಯ ಶಾಸಕರಾದ ಹರೀಶ್ ಪೂಂಜಾ ರವರ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.ಅರುಣ್ ಕುಮಾರ್ ಪುತ್ತಿಲ ಹಾಗೂ ಪುತ್ತಿಲ ಪರಿವಾರದ ಪ್ರಮುಖರು ಪ್ರತಿಭಟನಾ ಸ್ಥಳಕ್ಕೆ ತೆರಳಿ ಪ್ರತಿಭಟನಾ ನಿರತರಿಗೆ ಸಾಥ್ ನೀಡಿದರು.ಕೊನೆಗೆ ಅರಣ್ಯ ಅಧಿಕಾರಿಗಳು ಸರ್ವೆ ನಡೆಸುವ ಬಗ್ಗೆ ಒಪ್ಪಿಗೆ ಕೊಟ್ಟ ನಂತರ ಪ್ರತಿಭಟನೆ ಹಿಂಪಡೆಯಲಾಯಿತು.

ವಿಧಾನ ಪರಿಷತ್ ನೈರುತ್ಯ ಪದವೀಧರ ಕ್ಷೇತ್ರ ಹಾಗೂ ನೈರುತ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯ ಹಿನ್ನೆಲೆ

Posted by Vidyamaana on 2024-05-26 13:22:03 |

Share: | | | | |


ವಿಧಾನ ಪರಿಷತ್ ನೈರುತ್ಯ ಪದವೀಧರ ಕ್ಷೇತ್ರ ಹಾಗೂ ನೈರುತ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯ ಹಿನ್ನೆಲೆ

ಉಡುಪಿ: ವಿಧಾನ ಪರಿಷತ್ ನೈರುತ್ಯ ಪದವೀಧರ ಕ್ಷೇತ್ರ ಹಾಗೂ ನೈರುತ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಬಿಜೆಪಿ ಕಚೇರಿಯಲ್ಲಿ ಕಾರ್ಯಕರ್ತರ, ಮಹಾ ಶಕ್ತಿ ಕೇಂದ್ರದ ಪ್ರಮುಖರ ಸಭೆಯನ್ನು ಆಯೋಜಿಸಲಾಗಿತ್ತು.

4 ಸ್ನಾತಕೋತ್ತರ ಪದವಿ, ಪಿಎಚ್‌ಡಿ ಪಡೆದು ತರಕಾರಿ ಮಾರಿಯೇ ಜೀವನ ಸಾಗಿಸುವ ಡಾ ಸಂದೀಪ್ ಸಿಂಗ್

Posted by Vidyamaana on 2024-01-01 12:37:27 |

Share: | | | | |


4 ಸ್ನಾತಕೋತ್ತರ ಪದವಿ, ಪಿಎಚ್‌ಡಿ ಪಡೆದು ತರಕಾರಿ ಮಾರಿಯೇ ಜೀವನ ಸಾಗಿಸುವ ಡಾ ಸಂದೀಪ್ ಸಿಂಗ್

ಚಂಡಿಗಢ: ನಮ್ಮಲ್ಲಿ ಎಷ್ಟೇ ಉನ್ನತಮಟ್ಟದ ಶಿಕ್ಷಣವನ್ನು ಪಡೆದರೂ ಅದಕ್ಕೆ ತಕ್ಕ ಉದ್ಯೋಗ ಸಿಗುವುದು ತುಸು ಕಷ್ಟ. ಸಿಕ್ಕರೂ ಶಿಕ್ಷಣ ಪಡೆದ ಎಲ್ಲರಿಗೂ ಅದೇ ಕ್ಷೇತ್ರದಲ್ಲಿ ಕೆಲಸ ಸಿಗುವುದು ಇನ್ನೂ ಕಷ್ಟ. ನಾಲ್ಕು ಸ್ನಾತಕೋತ್ತರ ಪದವಿಗಳು ಮತ್ತು ಪಿಎಚ್‌ಡಿಗಳನ್ನು ಪಡೆದಿರುವ ವ್ಯಕ್ತಿಯೊಬ್ಬರು ದಿನನಿತ್ಯದ ಜೀವನ ಸಾಗಿಸಲು ರಸ್ತೆ ಬದಿ ತರಕಾರಿ ಮಾರುವ ಸ್ಥಿತಿಗೆ ಬಂದಿದ್ದಾರೆ.


ಪಂಜಾಬ್‌ ಮೂಲದ 39 ವರ್ಷದ ಡಾ. ಸಂದೀಪ್ ಸಿಂಗ್ 11 ವರ್ಷಗಳ ಕಾಲ ಪಂಜಾಬ್ ವಿಶ್ವವಿದ್ಯಾಲಯದ ಕಾನೂನು ವಿಭಾಗದಲ್ಲಿ ಗುತ್ತಿಗೆ ಆಧಾರದಲ್ಲಿ ಪ್ರಾಧ್ಯಾಪಕರಾಗಿದ್ದರು. ಎಲ್ಲವೂ ಅಂದುಕೊಂಡಂತೆ ಇದ್ದಿದ್ದರೆ ಅವರಿಂದು ತರಕಾರಿ ಮಾರುವ ಸ್ಥಿತಿಗೆ ಬರುತ್ತಿರಲಿಲ್ಲ.ಕಾನೂನು ವಿಷಯದಲ್ಲಿ ಪಿಎಚ್‌ಡಿ ಮಾಡಿದ್ದಾರೆ ಮತ್ತು ಪಂಜಾಬಿ, ಪತ್ರಿಕೋದ್ಯಮ ಮತ್ತು ರಾಜಕೀಯ ವಿಜ್ಞಾನ ಸೇರಿದಂತೆ ನಾಲ್ಕು ವಿಷಯಗಳಲ್ಲಿ ಸ್ನಾತಕೋತ್ತರ ಪದವಿಗಳನ್ನು ಪಡೆದಿದ್ದು, ಈಗಲೂ ಅಧ್ಯಯನವನ್ನು ಮುಂದುವರಿಸುತ್ತಿದ್ದಾರೆ.


ಗುತ್ತಿಗೆ ಆಧಾರದಲ್ಲಿ ಪ್ರಾಧ್ಯಾಪಕರಾಗಿದ್ದ ಸಂದೀಪ್‌ ಅವರಿಂದು ತರಕಾರಿಯನ್ನು ಮಾರುತ್ತಿದ್ದಾರೆ. ʼಪಿಎಚ್‌ ಡಿ ಸಬ್ಜಿವಾಲಾʼ ಎನ್ನುವ ತಳ್ಳುಗಾಡಿಯಲ್ಲಿ ರಸ್ತೆಬದಿಯಲ್ಲಿ ತರಕಾರಿ ಮಾರುತ್ತಿದ್ದಾರೆ.ಇದರ ಹಿಂದಿನ ಕಾರಣದ ಬಗ್ಗೆ ಮಾತನಾಡುವ ಅವರು, “ಸಂಬಳ ಕಡಿತ ಮತ್ತು ಸರಿಯಾದ ಸಮಯಕ್ಕೆ ವೇತನ ನೀಡುತ್ತಿರಲಿಲ್ಲ. ಇದರಿಂದ ಜೀವನ ಸಾಗಿಸುವುದು ಕಷ್ಟವಾಯಿತು. ಆ ಕಾರಣದಿಂದ ಕೆಲಸ ಬಿಡಬೇಕಾದ ಅನಿವಾರ್ಯತೆ ಎದುರಾಯಿತು. ನಿತ್ಯ‌ ಜೀವನ ಸಾಗಿಸಲು ತರಕಾರಿ ಮಾರುವ ವ್ಯಾಪಾರವನ್ನು ಆರಂಭಿಸಿದೆ. ಪ್ರೊಫೆಸರ್ ಆಗಿದ್ದಕ್ಕಿಂತ ತರಕಾರಿ ಮಾರಾಟ ಮಾಡಿ ಹೆಚ್ಚು ಹಣ ಗಳಿಸುತ್ತಿದ್ದೇನೆ. ನಿತ್ಯದ ವ್ಯಾಪಾರದ ಬಳಿಕ ಮನೆಗೆ ಹೋಗಿ ಪರೀಕ್ಷೆಗಾಗಿ ಓದುತ್ತೇನೆ. ಒಂದಲ್ಲ ಒಂದು ದಿನ ಹಣ ಉಳಿಸಿ ತನ್ನದೇ ಆದ ಟ್ಯೂಷನ್‌ ಸೆಂಟರ್‌ ನ್ನು ಆರಂಭಿಸಬೇಕೆನ್ನುವುದು ನನ್ನ ಉದ್ದೇಶ” ಎಂದು ಹೇಳುತ್ತಾರೆ.

ರಾಜ್ಯದಲ್ಲಿ 60 ವರ್ಷ ಮೇಲ್ಪಟ್ಟವರಿಗೆ ಮಾಸ್ಕ್ ಕಡ್ಡಾಯ: ದಿನೇಶ್ ಗುಂಡೂರಾವ್

Posted by Vidyamaana on 2023-12-18 14:30:37 |

Share: | | | | |


ರಾಜ್ಯದಲ್ಲಿ 60 ವರ್ಷ ಮೇಲ್ಪಟ್ಟವರಿಗೆ ಮಾಸ್ಕ್ ಕಡ್ಡಾಯ: ದಿನೇಶ್ ಗುಂಡೂರಾವ್

ಮಡಿಕೇರಿ: ರಾಜ್ಯದಲ್ಲಿ ಕೊರೊನಾ ರೂಪಾಂತರಿ ಬಗ್ಗೆ ಯಾರೂ ಕೂಡ ಆತಂಕಪಡಬೇಕಿಲ್ಲ. ಆದರೆ 60 ವರ್ಷ ಮೇಲ್ಪಟ್ಟವರಿಗೆ ಮಾಸ್ಕ್ ಕಡ್ಡಾಯ ಮಾಡಲಾಗುತ್ತದೆ. ಇಂದಿನಿಂದಲೇ ರಾಜ್ಯ ಸರ್ಕಾರ ಆದೇಶ ಹೊರಡಿಸಲಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.ಕೊಡಗು ಜಿಲ್ಲೆಯ ಕುಶಾಲನಗರದಲ್ಲಿ ಮಾತಾನಾಡಿದ ಅವರು, ಕೊಡಗು ಜಿಲ್ಲೆ ಕುಶಾಲನಗರದಲ್ಲಿ ಮಾತನಾಡಿದ ಅವರು, ಕೊರೊನಾ ರೂಪಾಂತರಿ ಬಗ್ಗೆ ಯಾರೂ ಸಹ ಆತಂಕಪಡಬೇಕಿಲ್ಲ. 60 ವರ್ಷ ಮೇಲ್ಪಟ್ಟವರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಹೃದಯ ಸಂಬಂಧಿ ಸಮಸ್ಯೆ ಇದ್ರೆ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದರು.


60 ವರ್ಷ ಮೇಲ್ಪಟ್ಟವರು ಮತ್ತು ಹೃದಯ, ಕಿಡ್ನಿ ಸಂಬಂಧಿತ ಇತರ ಕಾಯಿಲೆಗಳಿಂದ ಬಳಲುತ್ತಿರುವವರು ಹಾಗೂ ಜ್ವರ, ಕಫ, ಶೀತ ಇರುವಂತಹವರು ಕಡ್ಡಾಯವಾಗಿ ಮಾಸ್ಕ್ ಹಾಕಿಕೊಳ್ಳಬೇಕು ಎಂದು ಮನವಿ ಮಾಡಿದ್ದೇವೆ ಎಂದರು. ಈಗಾಗಲೇ ಆಸ್ಪತ್ರೆ ಹಾಗೂ ಆರೋಗ್ಯ ಕೇಂದ್ರಗಳಲ್ಲಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡು ಸಜ್ಜು ಆಗುವಂತೆಯೂ ಸೂಚನೆ ನೀಡಲಾಗಿದೆ. ಕೇರಳದಿಂದ ಬರುವವರ ಮೇಲೆ ಹೆಚ್ಚು ಟೆಸ್ಟ್ ಮಾಡುವಂತೆ ಆದೇಶ ಮಾಡಿದ್ದೇವೆ ಎಂದು ಹೇಳಿದರು.

ಪುತ್ತೂರು: ಈಜಲು ತೆರಳಿದ್ದ ವಿದ್ಯಾರ್ಥಿ ತಸ್ಲೀಮ್ ನಾಪತ್ತೆ- ಹೊಳೆಯಲ್ಲಿ ಹುಡುಕಾಟ

Posted by Vidyamaana on 2023-10-15 19:52:29 |

Share: | | | | |


ಪುತ್ತೂರು: ಈಜಲು ತೆರಳಿದ್ದ ವಿದ್ಯಾರ್ಥಿ ತಸ್ಲೀಮ್ ನಾಪತ್ತೆ- ಹೊಳೆಯಲ್ಲಿ ಹುಡುಕಾಟ

ಪುತ್ತೂರು: ಹೊಳೆಯಲ್ಲಿ ಈಜಲು ತೆರಳಿದ ಬಾಲಕನೊಬ್ಬ ನೀರಿನಲ್ಲಿ ಮುಳುಗಿರುವ ಶಂಕೆ ವ್ಯಕ್ತವಾಗಿದ್ದು ನೀರಿನಲ್ಲಿ ಹುಡುಕಾಟ ನಡೆಸಲಾಗುತ್ತಿದೆ.

ಮಾಡಾವು ಕಟ್ಟತ್ತಾರು ನಿವಾಸಿ ಹಂಝ ಎಂಬವರ ಪುತ್ರ ತಸ್ಲೀಮ್ (17ವ) ಗೆಳೆಯರ ಜೊತೆಗೂಡಿ ಅ . 15ರಂದು ಸಂಜೆ ಅರಿಕ್ಕಿಲ ಸಮೀಪದ ಎರಕ್ಕಲ ಎಂಬಲ್ಲಿನ ಹೊಳೆಗೆ ತೆರಳಿದ್ದು ಈಜುವ ವೇಳೆ ಬಾಲಕ ನೀರಿನಲ್ಲಿ ಮುಳುಗಿದ್ದಾನೆ ಎನ್ನಲಾಗಿದೆ. ಸ್ಥಳದಲ್ಲಿ ನೂರಾರು ಮಂದಿ ಸೇರಿದ್ದು ಹುಡುಕಾಟ ನಡೆಸುತ್ತಿದ್ದಾರೆ.



Leave a Comment: