ಫೇಕ್ ನ್ಯೂಸ್ ಗಳ ಪತ್ತೆಗೆ, ನಿಯಂತ್ರಣಕ್ಕೆ, ಎಲ್ಲಾ ಜಿಲ್ಲೆಗಳಲ್ಲಿ Fact check ಘಟಕ ಆರಂಭ: ಸಿಎಂ ಸಿದ್ದರಾಮಯ್ಯ

ಸುದ್ದಿಗಳು News

Posted by vidyamaana on 2024-07-01 19:16:06 |

Share: | | | | |


ಫೇಕ್ ನ್ಯೂಸ್ ಗಳ ಪತ್ತೆಗೆ, ನಿಯಂತ್ರಣಕ್ಕೆ, ಎಲ್ಲಾ ಜಿಲ್ಲೆಗಳಲ್ಲಿ Fact check ಘಟಕ ಆರಂಭ: ಸಿಎಂ ಸಿದ್ದರಾಮಯ್ಯ

ಬೆಂಗಳೂರು : ಫೇಕ್ ನ್ಯೂಸ್ ಗಳ ಬಗ್ಗೆ ಇಡೀ ಸಮಾಜ ಬಹಳ ಎಚ್ಚರದಿಂದ ಇರಬೇಕು. ಪತ್ರಿಕಾ, ಮಾಧ್ಯಮ ಸಂಘಟನೆಗಳು ಈ ಬಗ್ಗೆ ಗಂಭೀರವಾಗಿ ಯೋಚಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರೆ ನೀಡಿದರು.

ಬೆಂಗಳೂರು ಪ್ರೆಸ್ ಕ್ಲಬ್, ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ವಾರ್ತಾ ಮತ್ತು ಪ್ರಚಾರ ಇಲಾಖೆ ಸಂಯುಕ್ತಾಶ್ರಯದಲ್ಲಿ ನಡೆದ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಸಾಮಾಜಿಕ‌ ಮಾಧ್ಯಮಗಳ ಮೂಲಕ ಹರಡುವ ಸುಳ್ಳು ಸುದ್ದಿಗಳು ಸಮಾಜಕ್ಕೆ ಅನಾಹುತಕಾರಿ. ಸುಳ್ಳು ಸುದ್ದಿಗಳ ಮೇಲೆ ತೀವ್ರ ನಿಗಾ ಇಡಲು ಪ್ರತೀ ಜಿಲ್ಲೆಗಳಲ್ಲೂ ವಿಶೇಷ ಘಟಕ ಸ್ಥಾಪಿಸಲಾಗಿದ್ದು ಸುಳ್ಳು ಸುದ್ದಿಗಳನ್ನು ಪತ್ತೆ ಹಚ್ಚಲಾಗುತ್ತಿದೆ ಎಂದರು.

ಫೇಕ್ ನ್ಯೂಸ್ ಗಳ ಪತ್ತೆಗೆ, ನಿಯಂತ್ರಣಕ್ಕೆ, ಈ ಬಗ್ಗೆ ಕ್ರಮಕ್ಕಾಗಿ ಎಲ್ಲಾ ಜಿಲ್ಲೆಗಳಲ್ಲಿ Fact check ಘಟಕಗಳನ್ನು ಕ್ರಿಯಾಶೀಲಗೊಳಿಸಲಾಗಿದೆ ಎಂದರು

ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಸರ್ಕಾರದ ಕಾರ್ಯದರ್ಶಿ ಕೆ.ವಿ.ತ್ರಿಲೋಕಚಂದ್ರ, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್, ವಾರ್ತಾ ಇಲಾಖೆ ಆಯುಕ್ತರಾದ ಸೂರಳ್ಕರ್ ವಿಕಾಸ್ ಕಿಶೋರ್, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶಿವಾನಂದ ತಗಡೂರು, ವಿಧಾನ ಪರಿಷತ್ ಸದಸ್ಯರಾದ ಯು.ಬಿ.ವೆಂಕಟೇಶ್, ಪ್ರೆಸ್ ಕ್ಲಬ್ ಅಧ್ಯಕ್ಷರಾದ ಆರ್.ಶ್ರೀಧರ್, ಪ್ರಧಾನ ಕಾರ್ಯದರ್ಶಿ ಮಲ್ಲಪ್ಪ ಅವರು ಉಪಸ್ಥಿತರಿದ್ದರು.

ಹಿರಿಯ ಪತ್ರಕರ್ತರಾದ ಕೃಷ್ಣಪ್ರಸಾದ್ ಅವರು ಪ್ರಧಾನ ಭಾಷಣದಲ್ಲಿ ಪತ್ರಿಕೋದ್ಯಮದ ಈ ಕ್ಷಣದ ಸ್ಥಿತಿಗತಿಯನ್ನು ವಿವರಿಸಿದರು.

 Share: | | | | |


ಹಾಲಿ ಶಾಸಕರು ಮಾಜಿ ಶಾಸಕರ ಬಗ್ಗೆ ಅವಹೇಳನಕಾರಿಯಾಗಿ ಮಾತಾನಾಡುವುದು, ಜನತೆಗೆ ಸುಳ್ಳು ಮಾಹಿತಿ ನೀಡುವುದು ಘನತೆಗೆ ತಕ್ಕುದಲ್ಲ’ – ರಾಧಾಕೃಷ್ಣ ಆಳ್ವ

Posted by Vidyamaana on 2024-01-13 21:27:38 |

Share: | | | | |


ಹಾಲಿ ಶಾಸಕರು ಮಾಜಿ ಶಾಸಕರ ಬಗ್ಗೆ ಅವಹೇಳನಕಾರಿಯಾಗಿ ಮಾತಾನಾಡುವುದು, ಜನತೆಗೆ ಸುಳ್ಳು ಮಾಹಿತಿ ನೀಡುವುದು ಘನತೆಗೆ ತಕ್ಕುದಲ್ಲ’ – ರಾಧಾಕೃಷ್ಣ ಆಳ್ವ

ಪುತ್ತೂರು : ಆರಂಭದ ಒಂದು ಮಳೆಗೆ ಕೊಡೆ ಹರಿದಂತೆ ಎಂಬ ಗಾದೆಯಂತೆ ಶಾಸಕರಾಗಿ ಮೊದಲ ಅರ್ಧ ವರ್ಷದಲ್ಲಿಯೇ ಈ ಹಿಂದಿನ ಶಾಸಕರು ತಂದಿರುವ ಅನುದಾನದ ಕಾಮಗಾರಿಯು ಶಿಲಾನ್ಯಾಸವಾಗಿ ಕೆಲಸ ಪ್ರಗತಿಯಲ್ಲಿರುವಾಗಲೇ ಹಾಲಿ ಶಾಸಕರು ಮತ್ತೊಮ್ಮೆ ಶಂಕುಸ್ಥಾಪನೆ ಮಾಡುತ್ತಾ ಇರುವುದು ಜನಸಾಮಾನ್ಯರ ನಡುವಿನಲ್ಲಿ ನಗೆಪಾಟಲಿಗೀಡಾಗಿರುವುದಂತು ಸತ್ಯ ಎಂದು ಪುತ್ತೂರು ಗ್ರಾಮಾಂತರ ಮಂಡಲದ ಪದಾಧಿಕಾರಿಗಳ ಸಭೆಯಲ್ಲಿ ಅಧ್ಯಕ್ಷರಾದ ರಾಧಕೃಷ್ಣ ಆಳ್ವ ಹೇಳಿದರು.


ಪುತ್ತೂರು ಕ್ಷೇತ್ರಾದ್ಯಂತ ಈಗ ನಡೆಯುತ್ತಿರುವ ಎಲ್ಲಾ ಕಾಮಗಾರಿಗಳು ಅದರಲ್ಲಿಯೂ ಉಪ್ಪಿನಂಗಡಿಯ ದ್ವಿಪದ ರಸ್ತೆಯಾಗಿರಲಿ., ಬಿಳಿಯೂರುಕಟ್ಟೆ-ಸಾಜ-ಕುದ್ದುಪದವು ರಸ್ತೆಯ ಕಾಮಗಾರಿಯಾಗಿರಲಿ.., ಎಲ್ಲವೂ ಕೂಡ ಬಿಜೆಪಿ ಸರಕಾರ ಇರುವಾಗ ಬಂದಿರುವಂತ ಅನುದಾನಗಳು ಆದರೆ ಹಾಲಿ ಶಾಸಕರು ಹೋದಲ್ಲಿ ಎಲ್ಲಾ ಮಾಜಿ ಶಾಸಕರನ್ನು ಅವಹೇಳನಕಾರಿಯಾಗಿ ಮಾತಾನಾಡುವುದು ಮತ್ತು ಜನರಿಗೆ ಸುಳ್ಳು ಮಾಹಿತಿಯನ್ನು ನೀಡುವುದು ಘನತೆಗೆ ತಕ್ಕುದಲ್ಲ ಎಂದು ಹೇಳಿದರು.ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠೆಯ ಅಂಗವಾಗಿ ಜನವರಿ14ರಿಂದ 21ರವರೆಗೆ ದೇವಸ್ಥಾನ, ದೈವಸ್ಥಾನ, ಮಠ ಮಂದಿರಗಳ ಸ್ವಚ್ಛತೆಯಲ್ಲಿ ಕಾರ್ಯಕರ್ತರು ,ಪದಾಧಿಕಾರಿಗಳು ಭಾಗವಹಿಸಬೇಕು ಮತ್ತು ಜ.22 ಪ್ರತಿಷ್ಠಾ ದಿನದಂದು ಎಲ್ಲಾ ಹಿಂದೂ ಮನೆಗಳಲ್ಲಿ ಪ್ರಧಾನಿಯವರ ಆಶಯದಂತೆ ದೀಪ ಬೆಳಗಿಸುವಂತೆ ಈ ಸಂದರ್ಭದಲ್ಲಿ ವಿನಂತಿಸಿದರು.


ಮಂಡಲದ ಪ್ರ.ಕಾರ್ಯದರ್ಶಿ ನಿತೀಶ್ ಶಾಂತಿವನ ಸ್ವಾಗತಿಸಿದರು.


ಮಂಡಲ ಉಪಾಧ್ಯಕ್ಷರಾದ ಹರಿಪ್ರಸಾದ್ ಯಾದವ್ , ಮುಕುಂದ ಬಜತ್ತೂರು, ಅರುಣ್ ವಿಟ್ಲ, ಮೀನಾಕ್ಷಿ ಮಂಜುನಾಥ್,ಉಷಾ ಮುಳಿಯ,ವಿಜಯ ಕೋರಂಗ, ಖಜಾಂಜಿ ರಮೇಶ್ ಭಟ್, ಕಾರ್ಯದರ್ಶಿ ರಮಣಿ ಗಾಣಿಗ, ಲೋಹಿತ್ ಅಮ್ಚಿನಡ್ಕ, ವಿವಿಧ ಮೋರ್ಚಾ ಅಧ್ಯಕ್ಷ ಕಾರ್ಯದರ್ಶಿಗಳಾದ ಯಶಸ್ವಿನಿ ಶಾಸ್ತ್ರಿ, ಯಶೋಧ ಗೌಡ, ಸುರೇಶ್ ಕಣ್ಣರಾಯ, ಪುನೀತ್ ಮಾಡತ್ತಾರು, ನವೀನ್ ಪಡ್ನೂರು,ಸುನೀಲ್ ದಡ್ಡು, ಮಹಾಶಕ್ತಿ ಕಾರ್ಯದರ್ಶಿಗಳಾದ ಸುರೇಶ್ ಅತ್ರಮಜಲು, ದಯಾನಂದ ಶೆಟ್ಟಿ ಉಜ್ರೆಮಾರು ಮೊದಲಾದವರು ಉಪಸ್ಥಿತರಿದ್ದರು.ಮಂಡಲ ಪ್ರ.ಕಾರ್ಯದರ್ಶಿ ಪುರುಷೋತ್ತಮ ಮಂಗ್ಲಿಮನೆ ಧನ್ಯವಾದ ಸಲ್ಲಿಸಿದರು.

ರಾಜ್ಯ ಸರ್ಕಾರದಿಂದ ಅರ್ಚಕರು ನೌಕರರಿಗೆ ಗುಡ್ ನ್ಯೂಸ್

Posted by Vidyamaana on 2023-10-15 10:39:08 |

Share: | | | | |


ರಾಜ್ಯ ಸರ್ಕಾರದಿಂದ ಅರ್ಚಕರು ನೌಕರರಿಗೆ ಗುಡ್ ನ್ಯೂಸ್

ಬೆಂಗಳೂರು : ರಾಜ್ಯ ಸರ್ಕಾರವು ದೇವಸ್ಥಾನಗಳ ಅರ್ಚಕರು ಹಾಗೂ ಸಿಬ್ಬಂದಿಗಳ ಮಕ್ಕಳಿಗೆ ಸಿಹಿಸುದ್ದಿ ನೀಡಿದ್ದು, ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಆರ್ಥಿಕ ನೆರವು ನೀಡುವುದಾಗಿ ಘೋಷಿಸಿದೆ.ಈ ಕುರಿತು ಸಚಿವ ಎಂ.ಬಿ.ಪಾಟೀಲ್ ಮಾಹಿತಿ ನೀಡಿದ್ದು, ಬಿ ಮತ್ತು ಸಿ ವರ್ಗದ ದೇವಸ್ಥಾನಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅರ್ಚಕರ ಅರ್ಚಕರು ಮತ್ತು ಸಿಬ್ಬಂದಿಯ ಮಕ್ಕಳಿಗೆ ರಾಜ್ಯ ಸರ್ಕಾರದಿಂದ ಶಿಕ್ಷಣಕ್ಕಾಗಿ ಆರ್ಥಿಕ ನೆರವು ನೀಡಲಾಗುವುದು ಎಂದು ತಿಳಿಸಿದ್ದಾರೆ.ಸರ್ಕಾರವು ಪಿಯುಸಿ ವಿದ್ಯಾರ್ಥಿಗಳಿಗೆ 5,000 ರೂ., ಐಟಿಐ/ ಜೆಒಸಿ/ ಡಿಪ್ಲೊಮಾ ವಿದ್ಯಾರ್ಥಿಗಳಿಗೆ 5,000 ರೂ., ಪದವಿಗೆ 7,000 ರೂ., ಸ್ನಾತಕೋತ್ತರರಿಗೆ 15,000 ರೂ., ಆಯುರ್ವೇದ 25,000 ರೂ. ವಾರ್ಷಿಕ ಆರ್ಥಿಕ ನೆರವು ನೀಡಲಿದೆ. ಹೋಮಿಯೋಪತಿ ಕೋರ್ಸ್‌ಗಳು, ತಾಂತ್ರಿಕ ಶಿಕ್ಷಣಕ್ಕೆ (ಎಂಜಿನಿಯರಿಂಗ್) 25,000 ರೂ., ವೈದ್ಯಕೀಯ, ದಂತ ವೈದ್ಯಕೀಯ ಕೋರ್ಸ್‌ಗಳಿಗೆ 50,000 ರೂ. ಮತ್ತು ವಿದೇಶದಲ್ಲಿ ಅಧ್ಯಯನಕ್ಕೆ 1 ಲಕ್ಷ ರೂ. ನೆರವು ಸಿಗಲಿದೆ ಎಂದು ಹೇಳಿದ್ದಾರೆ.


ಮುಜರಾಯಿ ಇಲಾಖೆಯ ವ್ಯಾಪ್ತಿಯ ದೇವಾಲಯಗಳಲ್ಲಿ ಕರ್ತವ್ಯ ನಿರ್ವಹಿಸುವ ಅರ್ಚಕರು, ನೌಕರರ ಪೈಕಿ ವರ್ಷಕ್ಕೆ 1,200 ಮಂದಿಯನ್ನು ಕಾಶಿ, ಗಯಾ ಯಾತ್ರೆಗೆ ಉಚಿತವಾಗಿ ಕಳುಹಿಸಲಾಗುವುದು. ಮುಜರಾಯಿ ಇಲಾಖೆಯ ವ್ಯಾಪ್ತಿಯ ದೇವಾಲಯಗಳಲ್ಲಿ ಕರ್ತವ್ಯ ನಿರ್ವಹಿಸುವ ಅರ್ಚಕರು, ನೌಕರರು ಮೃತರಾದರೆ ಅವರ ಕುಟುಂಬಕ್ಕೆ ₹2 ಲಕ್ಷ ಪರಿಹಾರ ನೀಡಲಾಗುವುದು ಎಂದು ತಿಳಿಸಿದ್ದಾರೆ.

ಅಯೋಧ್ಯೆಯ ಶ್ರೀರಾಮ ಪ್ರಾಣ ಪ್ರತಿಷ್ಠೆಯು ವಿಶ್ವ ಶಾಂತಿ ನೆಮ್ಮದಿಯನ್ನು ಎಲ್ಲೆಡೆ ಕರುಣಿಸಲಿ: ಶಾಸಕ ಅಶೋಕ್ ರೈಯವರಿಂದ ವಿಶೇಷ ಪ್ರಾರ್ಥನೆ

Posted by Vidyamaana on 2024-01-22 13:34:20 |

Share: | | | | |


ಅಯೋಧ್ಯೆಯ ಶ್ರೀರಾಮ ಪ್ರಾಣ ಪ್ರತಿಷ್ಠೆಯು ವಿಶ್ವ ಶಾಂತಿ ನೆಮ್ಮದಿಯನ್ನು ಎಲ್ಲೆಡೆ ಕರುಣಿಸಲಿ: ಶಾಸಕ ಅಶೋಕ್ ರೈಯವರಿಂದ ವಿಶೇಷ ಪ್ರಾರ್ಥನೆ

ಉಪ್ಪಿನಂಗಡಿ : ಅಯೋಧ್ಯೆಯಲ್ಲಿ ಶ್ರೀ ರಾಮನ ಪ್ರಾಣ ಪ್ರತಿಷ್ಠೆ ಪ್ರಯುಕ್ತ ಕೋಡಿಂಬಾಡಿ ಗ್ರಾಮಸ್ಥರ ಹಾಗೂ ಪುತ್ತೂರಿನ ಸಮಸ್ತ ನಾಗರಿಕರ ಪರವಾಗಿ ತನ್ನ ಸ್ವ ಗ್ರಾಮ ಕೋಡಿಂಬಾಡಿ ಮಠಂತಬೆಟ್ಟು‌ಶ್ರೀ ಮಹಿಷ‌ಮರ್ಧಿನಿ ದೇವಿಗೆ ಪುಷ್ಪ ವನ್ನು ಸಮರ್ಪಿಸುತ್ತಾ ರಾಜ್ಯ ,ದೇಶ ಮತ್ತು ವಿಶ್ವಕ್ಕೆ ಸನ್ಮಂಗಳವನ್ನು ಉಂಟು ಮಾಡಲಿ ಎಂದು ಪ್ರಾರ್ತಿಸಿದರು. ಈ ದೇಶದಲ್ಲಿ ಎಲ್ಲಾ ಧರ್ಮಿಯರು ಪರಸ್ಪರ ಸಹೋದರತೆಯಿಂದ ಬಾಳ್ವೆ ನಡೆಸುವ ಮೂಲಕ ದೇಶ ,ಜಗತ್ತಿನಲ್ಲಿ‌ ಶಾಂತಿ ನೆಲಸುವಂತಾಗಲಿ‌ಎಂದು ಪ್ರಾರ್ಥಿಸಿದರು. ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ರಾದ ನಿರಂಜನ್ ರೈ ರೈ ಮಠಂತಬೆಟ್ಡು, ಮುರಳೀಧರ್ ರೈ ಮಠಂತಬೆಟ್ಟು, ಯೋಗೀಶ್ ಸಾಮಾನಿ, ನಿಹಾಲ್ ಶೆಟ್ಟಿ ಕಲ್ಲಾರೆ ,ದೇವಸ್ಥಾನದ ವ್ಯವಸ್ಥಾಪಕರಾದ ಸಂತೋಷ್ ರೈ ,ವಾರಿಸೇನ ಜೈನ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

ಬಡವರ ಭಾಗ್ಯದ ಬಾಗಿಲು ತೆರೆಯುವ ಡ್ರೀಮ್ ಗೋಲ್ಡ್ ಲಕ್ಕಿ ಸ್ಕೀಮ್

Posted by Vidyamaana on 2023-11-28 15:17:32 |

Share: | | | | |


ಬಡವರ ಭಾಗ್ಯದ ಬಾಗಿಲು ತೆರೆಯುವ ಡ್ರೀಮ್ ಗೋಲ್ಡ್ ಲಕ್ಕಿ ಸ್ಕೀಮ್

ಸುರತ್ಕಲ್: ಕಾರು, ಬೈಕ್, ಆಕ್ಟಿವಾ, ಚಿನ್ನ ಮತ್ತು ಗೃಹೋಪಯೋಗಿ ವಸ್ತುಗಳನ್ನು ತಮ್ಮದಾಗಿಸಿಕೊಳ್ಳುವ ನಿಮ್ಮ ಕನಸನ್ನು ನನಸಾಗಿಸಲು “ಡ್ರೀಮ್ ಗೋಲ್ಡ್ ಲಕ್ಕಿ ಸ್ಕೀಮ್” ಹೊಸ ಯೋಜನೆಯೊಂದನ್ನು ಕಾರ್ಯರೂಪಕ್ಕೆ ತಂದಿದೆ.



ಈ ಸ್ಕೀಮ್ ನ ಪ್ರಥಮ ಡ್ರಾ ಇದೇ ಬರುವ ಡಿಸೆಂಬರ್ 15 ರಂದು ನಡೆಯಲಿದ್ದು, ಪ್ರತೀ ತಿಂಗಳು ರೂ.1000/- . ನಂತೆ 20 ಕಂತುಗಳ ಒಟ್ಟು 20ಡ್ರಾಗಳು ನಡೆಯಲಿವೆ. ಪ್ರತೀ ತಿಂಗಳು ಗ್ರಾಹಕರ ಕನಸಿನ ಬಹುಮಾನಗಳೊಂದಿಗೆ ಪ್ರತೀ ಡ್ರಾದಲ್ಲೂ ಕನಿಷ್ಠ 10 ಅದೃಷ್ಟಶಾಲಿಗಳಿಗೆ ವಿಶೇಷ ಉಡುಗೊರೆಗಳನ್ನು ಸಂಸ್ಥೆ ನೀಡಲಿದೆ.

ಸ್ಕೀಮ್ ನ ವಿಷೇಶ ಏನೆಂದರೆ ಮೊದಲ ತಿಂಗಳ ಡ್ರಾ ನಲ್ಲೇ ಒಬ್ಬ ಅದೃಷ್ಟಶಾಲಿಗೆ “ಮಾರುತಿ ಸುಜುಕಿ ಆಲ್ಟೊ 800” ಕಾರು ಹಾಗೂ 20 ಅದೃಷ್ಟಶಾಲಿಗಳಿಗೆ ವಿಶೇಷ ಉಡುಗೊರೆಗಳು ಸಿಗಲಿದೆ.


ಕೊನೆಯ 20 ನೇ ತಿಂಗಳ ಗೋಲ್ಡನ್ ಡ್ರಾ ನಲ್ಲಿ ಸಂಸ್ಥೆಯು ಭರ್ಜರಿ ಬಂಪರ್ ಬಹುಮಾನಗಳನ್ನು ನೀಡುತ್ತಿದ್ದು ಒಬ್ಬ ಅದೃಷ್ಟಶಾಲಿಗೆ “ಹ್ಯುಂಡೈ ಎಕ್ಸ್ಟರ್” ಕಾರು, ಮೂವರು ಅದ್ರಷ್ಟಶಾಲಿಗಳಿಗೆ “ಹೋಂಡಾ ಆಕ್ಟಿವಾ” ಹಾಗೂ ಒಬ್ಬ ಅದ್ರಷ್ಟಶಾಲಿಗೆ ಸಿಗಲಿದೆ ಭರ್ಜರಿ “25 ಪವನ್ ನ ಚಿನ್ನಾಭರಣ”, ಹಾಗೆಯೇ 20 ಅದ್ರಷ್ಟಶಾಲಿಗಳಿಗೆ ವಿಶೇಷ ಉಡುಗೊರೆ ಲಭಿಸಲಿದೆ. 20 ತಿಂಗಳುಗಳಲ್ಲಿ ಯಾವುದೇ ಬಹುಮಾನ ಸಿಗದ ಸದಸ್ಯರಿಗೆ 20,000 ಬೆಲೆಬಾಳುವ ಇನ್ವರ್ಟರ್ ಸೆಟ್, ವಾಷಿಂಗ್ ಮಶೀನ್, ಫ್ರಿಡ್ಜ್, ಎಲ್ ಇ ಡಿ ಟಿವಿ ಹಾಗೂ ಸೋಫಾ ಸೆಟ್ ಇವುಗಳಲ್ಲಿ ಆಯ್ಕೆ ಮಾಡಿದ ವಸ್ತುವನ್ನು ಸಮಾಧಾನಕರ ಬಹುಮಾನವಾಗಿ ಸಂಸ್ಥೆ ನೀಡಲಿದೆ.


ಈಗಾಗಲೇ ದ.ಕ. ,ಉಡುಪಿ,ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ ಜಿಲ್ಲೆಗಳಲ್ಲಿ ತನ್ನ ಸಂತೃಪ್ತ ಗ್ರಾಹಕರನ್ನು ಹೊಂದಿರುವ ಡ್ರೀಮ್ ಗೋಲ್ಡ್ ಲಕ್ಕಿ ಸ್ಕೀಮ್ ಬಡವರ ಪಾಲಿನ ಆಶಾಕಿರಣವಾಗಿ, ಕಾರು, ದ್ವಿಚಕ್ರ ವಾಹನ, ಚಿನ್ನಾಭರಣ ಹಾಗೂ ಗೃಹೋಪಯೋಗಿ ವಸ್ತುಗಳನ್ನು ತನ್ನದಾಗಿಸಿಕೊಳ್ಳುವವರ ಕನಸುಗಳಿಗೆ ರೆಕ್ಕೆಗಳಾಗಿವೆ.ಡ್ರೀಮ್ ಗೋಲ್ಡ್ ಲಕ್ಕಿ ಸ್ಕೀಮ್ ಗೆ ನೀವೂ ಸಂತೃಪ್ತ ಗ್ರಾಹಕರಾಗಬೇಕೆ? ಹಾಗಾದರೆ ತಡ ಏಕೆ? ಈ ಸುದ್ದಿಯೊಂದಿಗೆ ಇರುವ ಲಿಂಕ್ ಗೆ ಒತ್ತಿ ಸಂಸ್ಥೆಯ ಗ್ರಾಹಕರಾಗಬಹುದು ವಾಟ್ಸಾಪ್ 9845376677 ಅಥವಾ 6364018834, 8050257514 ಗೆ ಕರೆ ಮಾಡಿಯೂ ಸಂಸ್ಥೆಯೊಂದಿಗೆ ಹೆಸರನ್ನು ನೋಂದಾಯಿಸಿಕೊಳ್ಳಬಹುದು.


ಪ್ರತೀ ತಿಂಗಳ ಡ್ರಾ ಪ್ರಕ್ರಿಯೆಯನ್ನು “ಡ್ರೀಮ್ ಗೋಲ್ಡ್” ಯೂಟ್ಯೂಬ್ ಚಾನೆಲ್ ನಲ್ಲಿ ನೇರ ಪ್ರಸಾರ ಮಾಡಲಾಗುವುದು ಹಾಗೆಯೇ ಡ್ರಾ ಫಲಿತಾಂಶವನ್ನು ವಾಟ್ಸಾಪ್ ಮೂಲಕ ಎಲ್ಲಾ ಗ್ರಾಹಕರಿಗೆ ತಿಳಿಸಲಾಗುವುದು, ಪತ್ರಿಕೆ ಹಾಗೂ ವೆಬ್ ಪೋರ್ಟಲ್ ಗಳಲ್ಲಿ ಪ್ರಕಟಿಸಲಾಗುವುದು.

ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವರ ಬ್ರಹ್ಮಕಲಶೋತ್ಸವಕ್ಕೆ ಚಾಲನೆ ಭಕ್ತರಿಂದ ಸಮರ್ಪಣೆಯಾದ ಹೊರೆಕಾಣಿಕೆ

Posted by Vidyamaana on 2024-04-21 20:43:32 |

Share: | | | | |


ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವರ ಬ್ರಹ್ಮಕಲಶೋತ್ಸವಕ್ಕೆ ಚಾಲನೆ ಭಕ್ತರಿಂದ ಸಮರ್ಪಣೆಯಾದ ಹೊರೆಕಾಣಿಕೆ

ಪುತ್ತೂರು: ಆರ್ಯಾಪು ಗ್ರಾಮದ ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವೈಭವದ ಬ್ರಹ್ಮಕಲಶೋತ್ಸವಕ್ಕೆ ಶನಿವಾರ ಸಂಜೆ ಹೊರೆ ಕಾಣಿಕೆ ಸಮರ್ಪಣೆ ಮೂಲಕ ಚಾಲನೆ ನೀಡಲಾಯಿತು.

ಶನಿವಾರ ಸಂಜೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಿಂದ ಹೊರೆಕಾಣಿಕೆ ಮೆರವಣಿಗೆ ಶ್ರೀ ದೇವಸ್ಥಾನದಕ್ಕೆ ತೆರಳಿತು. 

ಮಾಣಿಲ ಶ್ರೀಧಾಮ ಕ್ಷೇತ್ರದ ಶ್ರೀ ಮೋಹನದಾಸ ಸ್ವಾಮೀಜಿ ತೆಂಗಿಕಾಯಿ ಒಡೆಯುವ ಮೂಲಕ ಚಾಲನೆ ನೀಡಿದರು.

ಅ. 7 ರಂದು ರೈ ಎಸ್ಟೇಟ್ಸ್ ಚಾರಿಟೇಬಲ್ ಟ್ರಸ್ಟ್‌ನಿಂದ ಬೃಹತ್ ಉಚಿತ ವೈದ್ಯಕೀಯ ತಪಾಸಣಾ ಶಿಬಿರ

Posted by Vidyamaana on 2023-10-05 21:59:37 |

Share: | | | | |


ಅ. 7 ರಂದು ರೈ ಎಸ್ಟೇಟ್ಸ್ ಚಾರಿಟೇಬಲ್ ಟ್ರಸ್ಟ್‌ನಿಂದ ಬೃಹತ್ ಉಚಿತ ವೈದ್ಯಕೀಯ ತಪಾಸಣಾ ಶಿಬಿರ

ಪುತ್ತೂರು: ರೈ ಎಸ್ಟೇಟ್ಸ್ ಎಜುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ಇದರ ವತಿಯಿಂದ ಪುತ್ತೂರು ಶಾಸಕರಾದ ಅಶೋಕ್ ರೈ ನೇತೃತ್ವದಲ್ಲಿ ಬೃಹತ್ ಉಚಿತ ವೈದ್ಯಕೀಯ ತಪಾಸಣಾ ಶಿಬಿರವರು ಅ. ೭ ರಂದು ಶನಿವಾರ ಬೈಪಾಸ್ ಬಳಿ ಇರುವ ಶಾಸಕರ ಟ್ರಸ್ಟ್ ಕಚೇರಿ ಸಭಾಂಗಣದಲ್ಲಿ ನಡೆಯಲಿದೆ ಎಂದು ಟ್ರಸ್ಟ್‌ನ ಕಾರ್ಯಾಧ್ಯಕ್ಷರಾದ ಸುದೇಶ್ ಶೆಟ್ಟಿ ಶಾಂತಿನಗರ ತಿಳಿಸಿದ್ದಾರೆ.

ಕೆಎಂಸಿ ಆಸ್ಪತ್ರೆ ಅತ್ತಾವರ ಮಂಗಳೂರು ಮತ್ತು ಕೆಎಂಸಿ ಆಸ್ಪತ್ರೆ ಡಾ. ಅಂಬೇಡ್ಕರ್ ವೃತ್ತ ಮಂಗಳೂರು ಇವರ ಸಹಯೋಗದಲ್ಲಿ ಶಿಬಿರ ನಡೆಯಲಿದೆ. ನುರಿತ ವೈದ್ಯರುಗಳು ಶಿಬಿರದಲ್ಲಿ ಭಾಗವಹಿಸಲಿದ್ದು ಕೆಲವೊಂದು ಸಣ್ಣಪುಟ್ಟ ಕಾಯಿಲೆಗಳಿಗೆ ಸ್ಥಳದಲ್ಲೇ ಔಷಧವನ್ನು ನೀಡಲಾಗುವುದು ಎಂದು ತಿಳಿಸಿದ್ದಾರೆ.


ಭಾಗವಹಿಸುವ ವಿಭಾಗಗಳು

ಸಾಮಾನ್ಯ ರೋಗ, ಹೃದಯ ರೋಗ, ಕಣ್ಣಿನ ವಿಭಾಗ, ಎಲುಬು ಮತ್ತು ಕೀಲು ರೋಗ, ಗ್ಯಾಸ್ಟೋಎಂಟರಾಲಜಿ ವಿಭಾಗ, ಮೂತ್ರಶಾಸ್ತ್ರ ವಿಭಾಗದ ನುರಿತ ವೈದ್ಯರುಗಳ ಭಾಗವಹಿಸಿ ಸೂಕ್ತ ಚಿಕಿತ್ಸೆ ಮತ್ತು ತಪಾಸಣೆಯನ್ನು ನಡೆಸಲಿದ್ದಾರೆ.


ಸೌಲಭ್ಯಗಳು

ಉಚಿತ ಬಿ ಪಿ ಹಾಗೂ ಮಧುಮೇಹ ತಪಾಸಣೆ, ಅಗತ್ಯ ಇರುವವರಿಗೆ ಉಚಿತ ಇಸಿಜಿ ಪರೀಕ್ಷೆ, ಉಚಿತ ಔಷಧ ವಿತರಣೆ, ಮತ್ತು ಉಚಿತ ಓದುವ ಕನ್ನಡಕದ ವಿತರಣೆ ನಡೆಯಲಿದೆ. ಬೆಳಿಗ್ಗೆ ೯ ರಿಂದ ಮಧ್ಯಾಹ್ನ ೧ ಗಂಟೆಯತನಕ ಶಿಬಿರ ನಡೆಯಲಿದ್ದು ಸಾರ್ವಜನಿಕರು ಪ್ರಯೋಜನವನ್ನು ಪಡೆದುಕೊಳ್ಳುವಂತೆ ಕಾರ್ಯಾಧ್ಯಕ್ಷರು ವಿನಂತಿಸಿದ್ದಾರೆ.

Recent News


Leave a Comment: