ಕುತ್ತಾರು ಮದನಿ ನಗರ ದುರಂತ ಪ್ರಕರಣ: ಸಂಸದ ಕ್ಯಾ. ಬ್ರಿಜೇಶ್ ಚೌಟ ಭೇಟಿ; ಶೀಘ್ರ ಪರಿಹಾರ ಒದಗಿಸಲು ಸೂಚನೆ

ಸುದ್ದಿಗಳು News

Posted by vidyamaana on 2024-06-30 19:50:01 |

Share: | | | | |


ಕುತ್ತಾರು ಮದನಿ ನಗರ ದುರಂತ ಪ್ರಕರಣ: ಸಂಸದ ಕ್ಯಾ. ಬ್ರಿಜೇಶ್ ಚೌಟ ಭೇಟಿ; ಶೀಘ್ರ ಪರಿಹಾರ ಒದಗಿಸಲು ಸೂಚನೆ

ಮಂಗಳೂರು , ಜೂ. 30: ಕುತ್ತಾರು ಮದನಿ ನಗರದಲ್ಲಿ ಇತೀಚೆಗೆ ಪಕ್ಕದ ಮನೆಯ ಗೋಡೆ ಮನೆಯೊಂದರ ಮೇಲೆ ಕುಸಿದು ಒಂದೇ ಕುಟುಂಬದ ನಾಲ್ವರು ಮೃತಪಟ್ಟ ಪ್ರಕರಣದ ಘಟನಾ ಸ್ಥಳಕ್ಕೆ ರವಿವಾರ ಸಂಸದ ಕ್ಯಾ. ಬ್ರಿಜೇಶ್ ಚೌಟ ಭೇಟಿ ನೀಡಿ ಪರಿಶೀಲಿಸಿದರು.

ಸಂತ್ರಸ್ತರಿಗೆ ಶೀಘ್ರ ಪರಿಹಾರವನ್ನು ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ ಅವರು ಇದೇ ಸಂದರ್ಭ, ಉಳ್ಳಾಲ- ಸೋಮೇಶ್ವರ ಭಾಗದ ಕಡಲ್ಕೊರೆತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

ಕಡಲ್ಕೊರೆತ ತೀವ್ರಗೊಂಡಿರುವ ಉಚ್ಚಿಲ, ಮೊಗವೀರಪಟ್ನ, ಬಟ್ಟಂಪಾಡಿ, ಸೀಗ್ರೌಂಡ್ ಪ್ರದೇಶಕ್ಕೆ ಭೇಟಿ ನೀಡಿದರು. 


ಸಮುದ್ರತೀರದ ಮನೆಗಳಲ್ಲಿ ವಾಸವಾಗಿರುವವರು ಎಚ್ಚರಿಕೆ ವಹಿಸುವಂತೆ ಸೂಚಿಸಿದ ಸಂಸದ ಕ್ಯಾ. ಬ್ರಿಜೇಶ್, ಅಪಾಯದಂಚಿನಲ್ಲಿ ಇರುವ ಮನೆಮಂದಿಗೆ ತಾತ್ಕಾಲಿಕ ವ್ಯವಸ್ಥೆ ಕಲ್ಪಿಸುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದರು.

ಉಳ್ಳಾಲ ತಾಲೂಕು ತಹಶಿಲ್ದಾರರಾದ ಪ್ರದೀಪ್ ಕುರುಡೇಕರ್, ಬಂದರು ಇಲಾಖೆಯ ಇಂಜಿನಿಯರ್ ಪ್ರವೀಣ್, ಉಳ್ಳಾಲ ತಾಲೂಕು ಕಂದಾಯ ನಿರೀಕ್ಷಕರು ಪ್ರಮೋದ್, ಬಿಜೆಪಿ ಜಿಲ್ಲಾಧ್ಯಕ್ಷರಾದ ಸತೀಶ್ ಕುಂಪಲ, ಸಂತೋಷ್ ಬೋಳಿಯಾರ್ ಮೊದಲಾದವರು ಉಪಸ್ಥಿತರಿದ್ದರು.

 Share: | | | | |


10ನೇ ತರಗತಿ ಪರೀಕ್ಷೆಯಲ್ಲಿ 623 ಅಂಕ ಪಡೆದ ಜವಾನನಿಗೆ ಓದಲೂ, ಬರೆಯಲು ಗೊತ್ತಿಲ್ಲ! ತನಿಖೆ ಆರಂಭ

Posted by Vidyamaana on 2024-05-24 05:44:32 |

Share: | | | | |


10ನೇ ತರಗತಿ ಪರೀಕ್ಷೆಯಲ್ಲಿ 623 ಅಂಕ ಪಡೆದ ಜವಾನನಿಗೆ ಓದಲೂ, ಬರೆಯಲು ಗೊತ್ತಿಲ್ಲ! ತನಿಖೆ ಆರಂಭ

ಬೆಂಗಳೂರು :10ನೇ ತರಗತಿ ಪರೀಕ್ಷೆಯಲ್ಲಿ ಶೇ.99.7ರಷ್ಟು ಅಂಕಗಳನ್ನು ಗಳಿಸಿದ್ದ 23 ವರ್ಷದ ಪ್ರಭು ಲಕ್ಷ್ಮೀಕಾಂತ್ ಲೋಕರೆ ಎಂಬ ಜವಾನನಿಗೆ ಓದಲು ಅಥವಾ ಬರೆಯಲು ಬರುವುದಿಲ್ಲ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.ಈ ಬಹಿರಂಗಪಡಿಸುವಿಕೆಯು ಆರೋಪದ ಬಗ್ಗೆ ತನಿಖೆಯನ್ನು ಮಾಡಲಾಗುತ್ತಿದೆ.

ಹೆಚ್ಚಿನ ಅಂಕಗಳನ್ನು ಗಳಿಸಿದ ನಂತರ, ಲೋಕರೆ ಕೊಪ್ಪಳ ಜಿಲ್ಲೆಯ ಸ್ಥಳೀಯ ನ್ಯಾಯಾಲಯದಲ್ಲಿ ಜವಾನನಾಗಿ ಕೆಲಸ ಪಡೆದರು. ವರದಿಯ ಪ್ರಕಾರ, ಲೋಕರೆ ಅವರ 10 ನೇ ತರಗತಿಯ ಅಂಕಗಳ ಆಧಾರದ ಮೇಲೆ ಜವಾನರ ನೇಮಕಾತಿ ಪರೀಕ್ಷೆಯ ಅಂತಿಮ ಮೆರಿಟ್ ಪಟ್ಟಿಯಲ್ಲಿ ಏಪ್ರಿಲ್ 22, 2024 ರಂದು ಅವರ ಹೆಸರು ಕಾಣಿಸಿಕೊಂಡಾಗ ಅವರನ್ನು ಕೆಲಸಕ್ಕೆ ಆಯ್ಕೆ ಮಾಡಲಾಯಿತು. ಲೋಕರೆ ಅವರ ಶೈಕ್ಷಣಿಕ ದಾಖಲೆಗಳ ಬಗ್ಗೆ ತನಿಖೆ ನಡೆಸುವಂತೆ ನ್ಯಾಯಾಲಯ ಆದೇಶಿಸಿದೆ.

2034ರ ಫಿಫಾ ವಲ್ಡ್‌ಕಪ್‌ ಆತಿಥ್ಯವನ್ನ ಯಾರು ವಹಿಸಲಿದ್ದಾರೆ?

Posted by Vidyamaana on 2023-11-01 15:46:21 |

Share: | | | | |


2034ರ ಫಿಫಾ ವಲ್ಡ್‌ಕಪ್‌ ಆತಿಥ್ಯವನ್ನ ಯಾರು ವಹಿಸಲಿದ್ದಾರೆ?

 ಸೌದಿ ಅರೇಬಿಯಾ: 2034ರ ಫುಟ್‌ಬಾಲ್‌ ವಿಶ್ವಕಪ್‌ (ಫಿಫಾ) ಆತಿಥ್ಯವನ್ನ ಸೌದಿ ಅರೇಬಿಯಾ ವಹಿಸಲಿದೆ. ಆಸ್ಟ್ರೇಲಿಯನ್‌ ಫುಟ್‌ಬಾಲ್‌ ಫೆಡರೇಶನ್‌ ಬಿಡ್ಡಿಂಗ್‌ ಪ್ರಕ್ರಿಯೆಯಲ್ಲಿ ಭಾಗಿಯಾಗದ ಕಾರಣ 2034ರ ಫಿಫಾ ವರ್ಲ್ಡ್‌ಕಪ್‌ ಆತಿಥ್ಯವನ್ನ ಸೌದಿ ಅರೇಬಿಯಾಗೆ ವಹಿಸಲಾಗಿದೆ. ಈ ಕುರಿತು ಫಿಫಾ ಅಧ್ಯಕ್ಷ ಗಿಯಾನ್ನಿ ಇನ್‌ಫಾಂಟಿನೋ ತಿಳಿಸಿದ್ದಾರೆ.ಅಂದ್ಹಾಗೆ ಫಿಫಾ ವರ್ಲ್ಡ್‌ಕಪ್‌ 2030ರ ಆತಿಥ್ಯವನ್ನ ಮೊರಾಕೊ, ಪೋರ್ಚುಗಲ್‌ ಮತ್ತು ಸ್ಪೇನ್‌ಗೆ ವಹಿಸೋದಾಗಿ ಫಿಫಾ ನಿರ್ಧರಿಸಿದ ಬೆನ್ನಲ್ಲೇ 20234 ಫಿಫಾ ಆತಿಥ್ಯವನ್ನ ಸೌದಿ ಅರೇಬಿಯಾ ವಹಿಸೋದು ಖಚಿತವಾಗಿದೆ.

ಪುತ್ತೂರು ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಬನ್ನೂರು, ಉಪ್ಪಿನಂಗಡಿ,ನಿಡ್ಪಳ್ಳಿ, ಚರ್ಚ್ ಗಳಿಗೆ ಭೇಟಿ.

Posted by Vidyamaana on 2023-04-30 05:22:52 |

Share: | | | | |


ಪುತ್ತೂರು ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಬನ್ನೂರು, ಉಪ್ಪಿನಂಗಡಿ,ನಿಡ್ಪಳ್ಳಿ, ಚರ್ಚ್ ಗಳಿಗೆ  ಭೇಟಿ.

ಪುತ್ತೂರು : ಪುತ್ತೂರು ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಭಾನುವಾರ ಬೆಳಿಗ್ಗೆ  ಬನ್ನೂರು, ಉಪ್ಪಿನಂಗಡಿ, ನಿಡ್ಪಳ್ಳಿ ಚರ್ಚ್ ಗಳಿಗೆ  ಭೇಟಿ ನೀಡಿದರು.

ಸಿ.ಟಿ.ರವಿ ಸಿಎಂ ಆಗಲಿ.. ಬಿಜೆಪಿಯಲ್ಲಿ ಸಂಚಲನ ಸೃಷ್ಟಿಸಿದ ಈಶ್ವರಪ್ಪ ಹೇಳಿಕೆ

Posted by Vidyamaana on 2023-04-25 12:40:04 |

Share: | | | | |


ಸಿ.ಟಿ.ರವಿ ಸಿಎಂ ಆಗಲಿ.. ಬಿಜೆಪಿಯಲ್ಲಿ ಸಂಚಲನ ಸೃಷ್ಟಿಸಿದ ಈಶ್ವರಪ್ಪ ಹೇಳಿಕೆ

ಚಿಕ್ಕಮಗಳೂರು: ಚುನಾವಣೆ ನಡೆಯುವ ಮೊದಲೇ ರಾಜಕೀಯ ಪಕ್ಷಗಳಲ್ಲಿ ಮುಂದಿನ ಸಿಎಂ ಚರ್ಚೆ ಜೋರಾಗಿದೆ. ಅಧಿಕಾರಕ್ಕೇರುವ ಮುನ್ನವೇ ಸಿಎಂ ಕೂಗು ಕೇಳಿ ಬರುತ್ತಿದೆ. ಮಾಜಿ ಸಚಿವ ಕೆ.ಎಸ್.‌ ಈಶ್ವರಪ್ಪನವರು ಸಿಟಿ ರವಿ ಅವರು ಮುಂದಿನ ಸಿಎಂ ಆಗಲಿ ಎಂದು ಹೇಳಿದ್ದಾರೆ.

ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ನಿಡಘಟ್ಟದಲ್ಲಿ ನಡೆದ, ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಈ ಚುನಾವಣೆಯಲ್ಲಿ ಸಿಟಿ ರವಿ ಅವರನ್ನು ದೊಡ್ಡ ಅಂತರದಿಂದ ಗೆಲ್ಲಿಸಿ ಅವರನ್ನು ಕರ್ನಾಟಕದ ಮುಂದಿನ ಸಿಎಂಯನ್ನಾಗಿ ಮಾಡಬೇಕೆಂದಿದ್ದಾರೆ.ಕಾಂಗ್ರೆಸ್‌ ನಲ್ಲಿ ಓಡಾಡುತ್ತಿದ್ದ ಸಿಎಂ ಕೂಗು ಇದೀಗ ಬಿಜೆಪಿಯಲ್ಲೂ ಕೇಳಿ ಬಂದಿದೆ. ಬಹಿರಂಗ ಸಭೆಯಲ್ಲೇ ಸಿ.ಟಿ.ರವಿ ಪರ ಈಶ್ವರಪ್ಪ ಅವರು ಒಲವು ತೋರಿದ್ದು, ಇದೀಗ ಈ ಸಂಬಂಧಿತ ವಿಡಿಯೋ ಸದ್ದು ಮಾಡುತ್ತಿದೆ.ನಿನ್ನೆಯಷ್ಟೇ ಸಿಟಿ ರವಿ ಅವರು ಮೈಸೂರಿನಲ್ಲಿ ಮಾತನಾಡುವ ವೇಳೆ ಸಿಎಂ ಆಗುವ ಇಂಗಿತವನ್ನು ವ್ಯಕ್ತಪಡಿಸಿದ್ದರು.ಈಶ್ವರಪ್ಪ ಅವರ ಈ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಮಹತ್ವ ಪಡೆದುಕೊಂಡಿದೆ

ಬಿಲ್ಲವ ಯವ ಸಮಾಜ ವತಿಯಿಂದ ಶಾಸಕರಿಗೆ ಅಭಿನಂದನಾ ಕಾರ್ಯಕ್ರಮ

Posted by Vidyamaana on 2023-08-28 14:48:05 |

Share: | | | | |


ಬಿಲ್ಲವ ಯವ ಸಮಾಜ ವತಿಯಿಂದ ಶಾಸಕರಿಗೆ ಅಭಿನಂದನಾ ಕಾರ್ಯಕ್ರಮ

ಪುತ್ತೂರು: ಬಿಲ್ಲವ ಯುವ ಸಮಾಜ ಪುತ್ತೂರು ಇದರ ವತಿಯಿಂದ ಪುತ್ತೂರು ಶಾಸಕರಾದ ಅಶೋಕ್ ರೈಯವರಿಗೆ ಅಭಿನಂದನೆ ಸಲ್ಲಿಸಲಾಯಿತು. ಶಾಸಕರ ನೂತನ ಕಚೇರಿ ಶುಭಾರಂಭ ಕಾರ್ಯಕ್ರಮದ ಬಳಿಕ ಯುವ ವೇದಿಕೆಯ ವತಿಯಿಂದ ಶಾಸಕರ ಕಚೇರಿಯಲ್ಲಿ ಅಭಿನಂದನೆ ಸಲ್ಲಿಸಲಾಯಿತು. ಕ್ಷೇತ್ರದ ಅಭಿವೃದ್ದಿಗೆ ಇನ್ನಷ್ಟು ಒತ್ತು ನೀಡುವ ಮೂಲಕ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಬಡವರ ಕೆಲಸಗಳು ಸೇರಿದಂತೆ ಪ್ರಮುಖ ಬೇಡಿಕೆಗಳನ್ನು ಈಡೇರಿಸುವ ಕೆಲಸ ನಿಮ್ಮಿಂದಾಗಲಿ ಎಂದು ಬಿಲ್ಲವ ಯುವ ಸಮಾಜದ ಮುಖಂಡರು ಶಾಸಕರಲ್ಲಿ ವಿನಂತಿಸಿದರು. ಈ ಸಂದರ್ಭದಲ್ಲಿ ಕೋಡಿಂಬಾಡಿ ಗ್ರಾಪಂ ಉಪಾಧ್ಯಕ್ಷರಾದ ಜಯಪ್ರಕಾಶ್ ಬದಿನಾರ್, ಕಿರಣ್‌ಬಸಂತಕೋಡಿ, ದಿನೇಶ್ ಕರ್ಕೆರಾ ಕೋಲಾಡಿ, ಚಂಧ್ರಶೇಖರ್ ಕಲ್ಲಗುಡ್ಡೆ, ಚಂದ್ರಕಲಾ ಮುಕ್ವೆ, ಮೋಹನ್ ಗುರ್ಜಿನಡ್ಕ, ಕೇಶವ ಅರ್ಕ, ಮೋಹನ್ ಪೂಜಾರಿ ಪುಣಚ, ಅಶೋಕ್ ಪೂಜಾರಿ ಬೊಳ್ಳಾಡಿ, ಕೃಷ್ಣಪ್ಪ ಕಲಾವಿದ, ಎಲ್ಯಣ್ಣ ಪೂಜಾರಿ ಮಿರುಂಡ, ನಾರಾಯಣ ಪೂಜಾರಿ ಬದಿಗುಡ್ಡೆ ಮೊದಲಾದವರು ಉಪಸ್ತಿತರಿದ್ದರು. ನೆನಪಿನ ಕಾಣಿಕೆಯಾಗಿ ಬ್ರಹ್ಮಶ್ರೀ ನಾರಾಯಣಗುರುಗಳ ಭಾವಚಿತ್ರವನ್ನು ಕೊಡುಗೆಯಾಗಿ ನೀಡಿದರು.

ಕರುನಾಡಿನ ಗಂಧದ ಗುಡಿ ಯಲ್ಲೇ ಶ್ರೀಗಂಧದ ಎಣ್ಣೆಗೆ ಬರ

Posted by Vidyamaana on 2023-12-19 07:21:41 |

Share: | | | | |


ಕರುನಾಡಿನ ಗಂಧದ ಗುಡಿ ಯಲ್ಲೇ ಶ್ರೀಗಂಧದ ಎಣ್ಣೆಗೆ ಬರ

ಬೆಂಗಳೂರು, ಡಿಸೆಂಬರ್ 19: ಶತಮಾನದ ಇತಿಹಾಸ ಹೊಂದಿರುವ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತದ (KSDL)ಸ್ಯಾಂಡಲ್​ ಸೋಪ್​ (Sandal Soap) ತಯಾರಿಕೆಗೂ ಈಗ ಶ್ರೀಗಂಧದ ಎಣ್ಣೆಯ ಕೊರತೆ ಉಂಟಾಗಿದೆ! ನೈಸರ್ಗಿಕವಾದ ಶ್ರೀಗಂಧದ ಎಣ್ಣೆಯನ್ನು ಬಳಸಿ ಸಾಬೂನು ತಯಾರಿಸುವ ಕೆಎಸ್​ಡಿಎಲ್​ಗೆ ಇದೀಗ ಸಂಕಷ್ಟದ ಪರಿಸ್ಥಿತಿ ಎದುರಾಗಿದೆ. ಶ್ರೀಗಂಧದ ಮರಗಳ ಅತಿಯಾದ ಕಡಿಯುವಿಕೆ, ಕಳ್ಳಸಾಗಾಣಿಕೆಯ ಪರಿಣಾಮ ಇದೀಗ ಸಾಕಷ್ಟು ಪ್ರಮಾಣದಲ್ಲಿ ಶ್ರೀಗಂಧದ ಎಣ್ಣೆ ದೊರೆಯದಾಗಿದೆ. ಹೀಗಾಗಿ ಕಂಪನಿಯು ಆಸ್ಟ್ರೇಲಿಯಾದಿಂದ ಶ್ರೀಗಂಧದ ಎಣ್ಣೆ ಆಮದು ಮಾಡಿಕೊಳ್ಳಲು ಆರಂಭಿಸಿದೆ ಎಂದು ವರದಿಯಾಗಿದೆ.


ಕೆಎಸ್​ಡಿಎಲ್ 500 ಕೋಟಿ ರೂಪಾಯಿಗಳ ಹೂಡಿಕೆಯೊಂದಿಗೆ ಉತ್ಪಾದನೆ ಮತ್ತು ಮಾರುಕಟ್ಟೆ ಕಾರ್ಯತಂತ್ರವನ್ನು ಮರುರೂಪಿಸಲು ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.


ನೈಸರ್ಗಿಕ ಶ್ರೀಗಂಧದ ಎಣ್ಣೆಯನ್ನು ಬಳಸುವ ಮೂಲಕ ಸಾಬೂನು ತಯಾರಿಸುವ ಜಾಗತಿಕ ಮಟ್ಟದ ಏಕೈಕ ಸಂಸ್ಥೆ ಕೆಎಸ್​ಡಿಎಲ್ ಎಂದು ಕಂಪನಿ ಹೇಳಿಕೊಂಡಿದೆ. ಇದೀಗ ಸಾಬೂನು ತಯಾರಿಕೆಗೆ ಬೇಕಾಗಿರುವ ಪ್ರಮುಖ ಕಚ್ಚಾ ವಸ್ತುವಾದ ಶ್ರೀಗಂಧದ ಎಣ್ಣೆಗಾಗಿ ಬೇರೆ ದೇಶದ ಮೊರೆ ಹೋಗಬೇಕಾಗಿ ಬಂದಿದೆ. ಕಂಪನಿಯು ಆಸ್ಟ್ರೇಲಿಯಾದಿಂದ ತೈಲವನ್ನು ಆಮದು ಮಾಡಿಕೊಳ್ಳುತ್ತಿದೆ. ಕಳೆದ ವರ್ಷ 4,000 ಕೆಜಿ ಶ್ರೀಗಂಧದ ಎಣ್ಣೆ ಆಮದು ಮಾಡಿಕೊಂಡಿದೆ. ಈ ವರ್ಷ 7,000 ಕೆಜಿ ಶ್ರೀಗಂಧದ ಎಣ್ಣೆಯನ್ನು ಆಮದುಮಾಡಿಕೊಳ್ಳಲು ಉದ್ದೇಶಿಸಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ದಿ ನ್ಯೂ ಇಂಡಿಯನ್ ಎಕ್ಸ್​​ಪ್ರೆಸ್ ವರದಿ ಮಾಡಿದೆ.


ಈ ಮಧ್ಯೆ, ಶ್ರೀಗಂಧದ ಗಿಡಗಳನ್ನು ನೆಟ್ಟು ಬೆಳೆಸುವ ವಿಚಾರವಾಗಿ ರಾಜ್ಯ ಸರ್ಕಾರವು ಅಭಿಯಾನ ಹಮ್ಮಿಕೊಂಡಿದೆ. 700 ರೈತರೊಂದಿಗೆ ಒಪ್ಪಂದವನ್ನೂ ಮಾಡಿಕೊಂಡಿದೆ. ಶ್ರೀಗಂಧವನ್ನು ಬೆಳೆಯಲು 4,000 ಎಕರೆ ಭೂಮಿಯನ್ನು ಗುರುತಿಸಲಾಗಿದೆ.


ಈ ಹಿಂದೆ ಶ್ರೀಗಂಧವನ್ನು ಎಲ್ಲಿ ಬೆಳೆದರೂ ಅದು ರಾಜ್ಯದ ಆಸ್ತಿಯಾಗಿತ್ತು. ಈಗ ಸರ್ಕಾರ ಆ ಷರತ್ತನ್ನು ತೆಗೆದು ರೈತರಿಗೆ ತಮ್ಮ ಹೊಲಗಳಲ್ಲಿ ಗಿಡ ನೆಟ್ಟು ಬೆಳೆಸಲು ಅನುಕೂಲ ಮಾಡಿಕೊಟ್ಟಿದೆ. ಅವರು ಮರಗಳನ್ನು 20 ವರ್ಷಗಳ ಅವಧಿಯ ನಂತರ ಅರಣ್ಯ ಇಲಾಖೆ ಅಥವಾ ಕೆಎಸ್‌ಡಿಎಲ್‌ಗೆ ಮಾರಾಟ ಮಾಡಬಹುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂಬಿ ಪಾಟೀಲ್ ಹೇಳಿದ್ದಾರೆ.


ಕಂಪನಿಯು 2026 ರ ಮಾರ್ಚ್ ವೇಳೆಗೆ 4,000 ಕೋಟಿ ರೂಪಾಯಿ ವಹಿವಾಟು ನಡೆಸುವ ಗುರಿ ಹೊಂದಿದೆ ಎಂದು ಅವರು ಹೇಳಿದ್ದಾರೆ. ಯೋಜನೆಯು ಹೊಸ ಕೊಡುಗೆಗಳೊಂದಿಗೆ ಇತರ ಮಾರುಕಟ್ಟೆಗಳಿಗೆ ವಿಸ್ತರಿಸುವುದು, ದೃಢವಾದ ಕಚ್ಚಾ ವಸ್ತುಗಳ ಪೂರೈಕೆ ಸರಪಳಿ ಮತ್ತು ಉತ್ಪಾದನಾ ನೆಲೆಯನ್ನು ಬೆಳೆಸುವುದು ಮತ್ತು ಹೊಸ ಉತ್ಪನ್ನ ವಿಭಾಗಗಳನ್ನು ಆರಂಭಿಸುವುದನ್ನು ಒಳಗೊಂಡಿದೆ ಎನ್ನಲಾಗಿದೆ.

Recent News


Leave a Comment: