ಕಾರು ಡಿಕ್ಕಿ: ಯುಕೆಜಿ ವಿದ್ಯಾರ್ಥಿ ಮಹಮ್ಮದ್ ಆದಿಲ್ ಮೃತ್ಯು

ಸುದ್ದಿಗಳು News

Posted by vidyamaana on 2023-09-23 20:22:34 | Last Updated by Vidyamaana on 2023-09-23 20:22:34

Share: | | | | |


ಕಾರು ಡಿಕ್ಕಿ: ಯುಕೆಜಿ ವಿದ್ಯಾರ್ಥಿ ಮಹಮ್ಮದ್ ಆದಿಲ್ ಮೃತ್ಯು

ಪುತ್ತೂರು: ಮಧ್ಯಾಹ್ನ ಕೆಯ್ಯೂರಿನಲ್ಲಿ ನಡೆದ ಕಾರು ಅಪಘಾತದಲ್ಲಿ ಕೆಯ್ಯೂರು ಕರ್ನಾಟಕ ಪಬ್ಲಿಕ್ ಸ್ಕೂಲ್ ನ ಯುಕೆಜಿ ವಿದ್ಯಾರ್ಥಿ,ನುಸ್ರತುಲ್ ಇಸ್ಲಾಂ ಮದ್ರಸದ 1ನೇ ತರಗತಿ ವಿದ್ಯಾರ್ಥಿ ಮೃತಪಟ್ಟಿರುವುದಾಗಿ ವರದಿಯಾಗಿದೆ.

ಮೃತನನ್ನು 5 ವರ್ಷ ಪ್ರಾಯದ ಮುಹಮ್ಮದ್ ಆದಿಲ್ ಎಂದು ಗುರುತಿಸಲಾಗಿದೆ‌. ಕೆಯ್ಯೂರು ನಿವಾಸಿ ಹಾರೀಸ್ ದಾರಿಮಿ ಅವರ ಪುತ್ರ.

ಪುತ್ತೂರು ಕಡೆ ಬರುತ್ತಿದ್ದ ಈಕೋ ಕಾರು ಬಾಲಕನಿಗೆ ಢಿಕ್ಕಿ ಹೊಡೆದಿದ್ದು, ಬಾಲಕ ಗಂಭೀರ ಗಾಯಗೊಂಡಿದ್ದ. ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ಸಂಜೆ ವೇಳೆ ಮೃತಪಟ್ಟ ಬಗ್ಗೆ ವರದಿಯಾಗಿದೆ.

 Share: | | | | |


ಉಳ್ಳಾಲ: ಕಾರಿನಲ್ಲಿ ನಿಷೇಧಿತ ಮಾದಕ ವಸ್ತು ಎಂಡಿಎಂಎ ಸಾಗಿಸುತ್ತಿದ್ದ ನಾಲ್ವರು ಪೊಲೀಸ್ ವಶ

Posted by Vidyamaana on 2024-05-16 07:23:16 |

Share: | | | | |


ಉಳ್ಳಾಲ: ಕಾರಿನಲ್ಲಿ ನಿಷೇಧಿತ ಮಾದಕ ವಸ್ತು ಎಂಡಿಎಂಎ ಸಾಗಿಸುತ್ತಿದ್ದ ನಾಲ್ವರು ಪೊಲೀಸ್ ವಶ

ಉಳ್ಳಾಲ: ಕಾರಿನಲ್ಲಿ ನಿಷೇಧಿತ ಮಾದಕ ವಸ್ತು ಎಂಡಿಎಂಎ ಸಾಗಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ದೇರಳಕಟ್ಟೆ ಪರಿಸರದಲ್ಲಿ ಕಾರನ್ನು ಪತ್ತೆ ಹಚ್ಚಿದ್ದು, ಕಾರಿನಲ್ಲಿದ್ದ ಬಿಜೈ ನ್ಯೂರೋಡ್‌ನ‌ ಮೊಹಮ್ಮದ್‌ ಅಮೀನ್‌ ರಾಫಿ (23), ಅಡ್ಡೂರಿನ ಮೊಹಮ್ಮದ್‌ ಸಿನಾನ್‌ ಅಬ್ದುಲ್ಲಾ (23), ಬಂದರಿನ ಮೊಹಮ್ಮದ್‌ ನೌಮಾನ್‌ (22) ಮತ್ತು ಬೋಳಿಯಾರ್‌ನ ಮೊಹಮ್ಮದ್‌ ಸಫೀಲ್‌ (23)ನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಅವರಿಂದ 6,50,000 ರೂ ಮೌಲ್ಯದ 270 ಗ್ರಾಂ ನಿಷೇಧಿತ ಮಾದಕ ವಸ್ತು ಎಂಡಿಎಂಎ, 4 ಮೊಬೈಲ್‌, ಕಾರು, ಡಿಜಿಟಲ್‌ ತೂಕ ಮಾಪಕವನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಸೊತ್ತಿನ ಒಟ್ಟು ಮೌಲ್ಯ ಅಂದಾಜು 14,85,500 ರೂ. ಎಂದು ಅಂದಾಜಿಸಲಾಗಿದೆ.

ಬೆಂಗಳೂರು ಕಂಬಳ ಕ್ಕೆ ನಡೀತಿದೆ ಭರ್ಜರಿ ಸಿದ್ಧತೆ - ನಟಿ ಅನುಷ್ಕಾ ಶೆಟ್ಟಿ ಮನೆಗೆ ಅಶೋಕ್ ರೈ ಭೇಟಿ

Posted by Vidyamaana on 2023-10-02 12:00:45 |

Share: | | | | |


ಬೆಂಗಳೂರು ಕಂಬಳ ಕ್ಕೆ ನಡೀತಿದೆ ಭರ್ಜರಿ ಸಿದ್ಧತೆ - ನಟಿ ಅನುಷ್ಕಾ ಶೆಟ್ಟಿ ಮನೆಗೆ ಅಶೋಕ್ ರೈ ಭೇಟಿ

ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ನಡೆಯಲಿರುವ ಬೆಂಗಳೂರು ಕಂಬಳ ಕೂಟದ ಹಿನ್ನೆಲೆಯಲ್ಲಿ ಟಾಲಿವುಡ್ ನಟಿ ಅನುಷ್ಕಾ ಶೆಟ್ಟಿ ಅವರ ಮನೆಗೆ ಶಾಸಕ ಅಶೋಕ್ ರೈ ಭೇಟಿ ನೀಡಿದರು.

ಬೆಂಗಳೂರಿನಲ್ಲಿರುವ ಅನುಷ್ಕಾ ಶೆಟ್ಟಿ ಅವರ ಸಹೋದರ ಬಿ. ಗುಣರಂಜನ್ ಶೆಟ್ಟಿ ಅವರ ಮನೆಯಲ್ಲಿ ಏರ್ಪಡಿಸಿದ್ದ ಭೋಜನ ಕೂಟದಲ್ಲಿ ಭಾಗವಹಿಸಿದ ಅವರು, ಕಂಬಳ ಬಗ್ಗೆ ಚರ್ಚೆ ನಡೆಸಿದರು.

ಕರಾವಳಿ ಕ್ರೀಡೆಯಾದ ಕಂಬಳವನ್ನು ಬೆಂಗಳೂರಿನಲ್ಲಿ ಏರ್ಪಡಿಸಿರುವ ಹಿನ್ನೆಲೆಯಲ್ಲಿ ಶಾಸಕ ಅಶೋಕ್ ಕುಮಾರ್ ರೈ ಅವರ ಭೇಟಿ ಮಹತ್ವ ಪಡೆದುಕೊಂಡಿದೆ. ಸಂಗೀತ ನಿರ್ದೇಶಕ ಗುರುಕಿರಣ್ ಅವರು ಜೊತೆಗಿದ್ದರು.

ಅನುಷ್ಕಾ ಶೆಟ್ಟಿ ಅವರ ತಂದೆ ವಿಠಲ್ ಶೆಟ್ಟಿ, ತುಳು ಕೂಟ ಅಧ್ಯಕ್ಷ ಸುಂದರ್ ರಾಜ್ ರೈ ಉಪಸ್ಥಿತರಿದ್ದರು.

ಎಲ್‌ಕೆಜಿ ತರಗತಿಯ ಗೋಡೆಗಳಲ್ಲಿ ಬಣ್ಣದ ಅಂಗ್ಲ ಆಕ್ಷರಗಳ ವರ್ಣಮಾಲೆ...

Posted by Vidyamaana on 2023-10-27 20:34:17 |

Share: | | | | |


ಎಲ್‌ಕೆಜಿ ತರಗತಿಯ ಗೋಡೆಗಳಲ್ಲಿ ಬಣ್ಣದ ಅಂಗ್ಲ ಆಕ್ಷರಗಳ ವರ್ಣಮಾಲೆ...

ಪುತ್ತೂರು: ಎ ಬಿ ಸಿ ಡಿ ಹೀಗೇ Zತನಕ ಇಂಗ್ಲೀಷ್ ಅಕ್ಷರಗಳು ತರಗತಿಯ ಗೋಡೆಗಳಲ್ಲಿ ಬಣ್ಣ ಬಣ್ಣಗಳಿಂದ ಬರೆಯಲಾಗಿದೆ, ಜೊತೆಗೆ ಅಕ್ಷರ ಓದಲು ಕಲಿಯುವಂತೆ ಸಹಕಾರಿಯಾಗಲು ಹೊಂದಿಕೊಂಡಿರುವ ಚಿತ್ರಗಳು, ಗೋಡೆಗಳಲ್ಲಿರುವ ಅಕ್ಷರವನ್ನು ನೋಡಿ ಪುಸ್ತಕದಲ್ಲಿ ಬರೆಯುವ ಅಬ್ಯಾಸ ಮಾಡಿಕೊಳ್ಳುವ ಹಾಲುಗಲ್ಲದ ಪುಟ್ಟ ಮಕ್ಕಳು. ಇದು ಕಂಡು ಬಂದಿದ್ದು ಕಾವು ಸರಕಾರಿ ಎಲ್‌ಕೆಜೆ ಯುಕೆಜಿ ತರಗತಿ ಕೊಠಡಿಯಲ್ಲಿ. ಮಕ್ಕಳ ಕಲಿಕೆಗೆ ನರವಾಗಲೆಂದು ಇಂಗ್ಲೀಷ್ ಅಕ್ಷರಗಳನ್ನು ಗೋಡೆಗಳಲ್ಲಿ ಜೋಡಿಸಿದ್ದು ಲಿಯೋ ಕ್ಲಬ್ ತಂಡ, ಲಯನ್ಸ್ ಕ್ಲಬ್ ನ ಸಹಬಾಗಿತ್ವದಲ್ಲಿ ಸಮಾಜ ಸೇವೆಯಲ್ಲಿ ತೊಡಗಿಕೊಂಡಿರುವ ಲಿಯೋ ಕ್ಲಬ್ ಶೈಕ್ಷಣಿಕ ಕ್ಷೇತ್ರದಲ್ಲಿ ತನ್ನ ಛಾಪನ್ನು ಮೂಡಿಸಿದೆ.

ಕಾವು ಸರಕಾರಿ ಪ್ರಾಥಮಿಕ ಶಾಲೆಯನ್ನು ಕಾವು ಹೇಮನಾಥ ಶೆಟ್ಟಿಯವರು ದತ್ತು ತೆಗೆದುಕೊಂಡಿದ್ದಾರೆ. ದತ್ತು ತೆಗೆದುಕೊಂಡ ಬಳಿಕ ಇಲ್ಲಿ ಆಂಗ್ಲ ಮಾಧ್ಯಮ ಎಲ್‌ಕೆಜಿ ಯುಕೆಜಿ ತರಗತಿಯನ್ನು ಪ್ರಾರಂಭ ಮಾಡಲಾಗಿದೆ. ಸರಕಾರ ಕೆಪಿಎಸ್ ಸ್ಕೂಲ್‌ಗಳಲ್ಲಿ ಆಂಗ್ಲ ಮಾದ್ಯಮ ತರಗತಿ ಆರಂಭ ಮಾಡುವ ಮೊದಲೇ ಕಾವು ಸರಕಾರಿ ಶಾಲೆಯಲ್ಲಿ ಇಂಗ್ಲೀಷ್ ಕ್ರಾಂತಿಯನ್ನು ಪ್ರಾರಂಭಿಸಲಾಗಿತ್ತು. ಮಕ್ಕಳ ಸಂಖ್ಯೆಯೂ ಗಣನೀಯವಾಗಿದೆ.


ಕಲಿಕೆಗೆ ಸಹಕಾರಿ

ತರಗತಿಯ ಕೊಠಡಿಯ ಗೋಡೆಗಳಲ್ಲಿ ಇಂಗ್ಲೀಷ್ ಅಕ್ಷರಮಾಲೆಯನ್ನು ಚಿತ್ರ ಸಹಿತ ಬರೆದಿರುವ ಕಾರಣ ಮಕ್ಕಳಿಗೆ ಅಕ್ಷರದ ಪರಿಚಯ ಮತ್ತು ಅಕ್ಷರವನ್ನು ಬರೆಯುವ ವಿಧಾನವನ್ನು ಸುಲಭದಲ್ಲಿ ಮನನ ಮಾಡಬಹುದಾಗಿದೆ. ಸಾಧಾರಣವಾಗಿ ಶಾಲೆಯ ಗೋಡೆಗಳಲ್ಲಿ ಪಕ್ಷಿ, ಪರಿಸರ ಸೇರಿದಂತೆ ಇತರೆ ಬಣ್ಣ ಬಣ್ಣದ ಚಿತ್ರಗಳನ್ನು ಬಿಡಿಸಲಾಗುತ್ತದೆ. ಕಾವು ಶಾಲೆಯಲ್ಲಿ ಲಿಯೋ ಕ್ಲಬ್ ಮಕ್ಕಳ ಶಿಕ್ಷಣಕ್ಕೆ ನೆರವು ಆಗುವ ರೀತಿಯಲ್ಲಿ ಚಿತ್ರಗಳನ್ನು , ಅಕ್ಷರಗಳನ್ನು ಬರೆದಿರುವುದು ಮಕ್ಕಳ ಪೋಷಕರಲ್ಲೂ ಸಂತಸಕ್ಕೆ ಕಾರಣವಾಗಿದೆ. ಕಳೆದ ೨೦ ದಿನಗಳ ಹಿಂದೆ ಈ ಚಿತ್ರಗಳನ್ನು ಬಿಡಿಸಲಾಗಿದ್ದು ಆ ಬಳಿಕ ಮಕ್ಕಳ ಕಲಿಕಾ ಉತ್ಸಾಹವೂ ಇಮ್ಮಡಿಗೊಂಡಿದೆ ಮತ್ತು ಅಕ್ಷರ ಜ್ಞಾನವೂ ಮಕ್ಕಳಲ್ಲಿ ವೃದ್ದಿಯಾಗಿದೆ ಎನ್ನುತ್ತಾರೆ ಪೋಷಕರು.


ಆದೃತಿ ಯೋಜನೆಯಡಿ ನಾಲ್ಕು ಜಿಲ್ಲೆಗಳಲ್ಲಿ ಸೇವೆ

ಲಿಯೋ ಕ್ಲಬ್ ಇದರ ಆದೃತಿ ಯೋಜನೆಯಡಿ ಕ್ಲಬ್ ವ್ಯಾಪ್ತಿಯ ಹಾಸನ , ಚಿಕ್ಕಮಗಳೂರು, ಮಡಿಕೇರಿ ಮತ್ತು ದ ಕ ಜಿಲ್ಲೆಯ ಆಯ್ದ ೧೫ ಸರಕಾರಿ ಪೂರ್ವ ಪ್ರಾಥಮಿಕ ಶಾಲೆಗಳಲ್ಲಿ ಇದೇ ಸೇವೆ ನಡೆಯಲಿದೆ. ದ ಕ ಜಿಲ್ಲೆಯ ಕಿನ್ನಿಗೋಳಿ ಕರೆಕಾಡು, ಹಳೆಯಂಗಡಿ ಕೊಳ್ನಾಡಿ ಮುಚ್ಚಿ, ಮೂಡಬಿದ್ರೆ ಮಚ್ಚೂರು ಶಾಲೆ ಹಾಗೂ ಮಂಗಳೂರು ನಗರ ವ್ಯಾಪ್ತಿಯ ಸರಕಾರಿ ಶಾಲೆಗಳಲ್ಲಿ ವರ್ಣಮಾಲೆ ಅಕ್ಷರ ಜೋಡನಾ ಕಾರ್ಯಕ್ಕೆ ಆಯ್ಕೆಗೊಂಡಿದೆ. ಲಿಯೋ ಕ್ಲಬ್ ವತಿಯಿಂದ ಆರೋಗ್ಯ ಮೇಳ, ಉದ್ಯೋಗ ಮೇಳ, ವಿಕಲಚೇತನರ ಜೊತೆ ಸಹಭೋಜನೆ, ವ್ಯಕ್ತಿತ್ವ ವಿಕಸನ ಸಮಾವೇಶ, ಸೇರಿದಂತೆ ಇನ್ನಿತರ ಸಮಾಜಸೇವಾ ಕಾರ್ಯಗಳು ನಿರಂತರವಾಗಿ ನಡೆಯುತ್ತಿದ್ದು ಕ್ಲಬ್‌ನ ಹಿರಿಮೆಯನ್ನು ಹೆಚ್ಚಿಸಿದೆ.




ಲಿಯೋ ಕ್ಲಬ್ ಸಂಸ್ಥೆ ಈ ಸೇವೆ ಇನ್ನೊಬ್ಬರಿಗೆ ಉತ್ತೇಜನ ನೀಡುವ ಕಾರ್ಯವಾಗಿದೆ. ಸರಕಾರಿ ಶಾಲೆಗಳಲ್ಲಿ ಕಲಿಯುತ್ತಿರುವ ಬಡ ಗ್ರಾಮೀಣ ಮಕ್ಕಳ ಕಲಿಕೆಗೆ ಸಹಾಯ ಮಾಡುವ ಉದ್ದೇಶದಿಂದ ಈ ವರ್ಣ ಮಾಲೆಯನ್ನು ರಚಿಸಿದ್ದು ಇದಕ್ಕಾಗಿ ನಾನು ಅವರಿಗೆ ಅಭಿನಂದನೆಯನ್ನು ಸಲ್ಲಿಸುತ್ತೇನೆ. ಇದೇ ಸೇವೆಯನ್ನು ಕ್ಲಬ್ ವ್ಯಾಪ್ತಿಯ ನಾಲ್ಕು ಜಿಲ್ಲೆಗಳಲ್ಲಿ ಮುಂದುವರೆಸಲಿದ್ದಾರೆ. ಸಂಸ್ಥೆಯ ಮೂಲಕ ಶಿಕ್ಷಣ, ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡುವ ಮೂಲಕ ಮುಂದಿನ ಯುವ ಸಮೂಹವಕ್ಕೆ ಸಮಾಜ ಸೇವಾ ಮನೋಭಾವ ಬೆಳೆಸುವ ಕೆಲಸ ನಿರಂತರ ಆಗಬೇಕಿದ್ದು ಅದನ್ನು ಲಿಯೋ ಕ್ಲಬ್ ಮೂಲಕ ನಡೆಸಲಾಗುತ್ತಿದೆ.

ಮೆಲ್ವಿನ್ ಡಿಸೋಜಾ, ಲಯನ್ಸ್ ಜಿಲ್ಲಾ ಗವರ್‍ನರ್

ಚಿತ್ರ ಇದೆ






ಲಿಯೋ ಡಿಸ್ಟ್ರಿಕ್ಟ್ ೩೧೭ ಡಿ ಇದರ ವತಿಯಿಂದ ಕ್ಲಬ್ ವ್ಯಾಪ್ತಿಯ ನಾಲ್ಕು ಜಿಲ್ಲೆಗಳ ಆಯ್ದ ಸರಕಾರಿ ಪೂರ್ವ ಪ್ರಾಥಮಿಕ (ಎಲ್‌ಕೆಜಿ, ಯುಕೆಜಿ) ತರಗತಿ ಗಳಲ್ಲಿ ಮಕ್ಕಳ ಕಲಿಕೆಗೆ ನೆರವಾಗುವುದು ಮತ್ತು ಕಲಿಕಾ ಸಾಮರ್ಥ್ಯ ಹೆಚ್ಚಿಸುವ ಉದ್ದೇಶದಿಂದ ಕೊಠಡಿಗಳಲ್ಲಿ ಆಧುನಿಕತೆಯ ಟಚಪ್‌ನೊಂದಿಗೆ ಅಕ್ಷರ ವರ್ಣ ಮಾಲೆಯನ್ನು ಚಿತ್ರದ ಮೂಲಕ ಬರೆಯಲಾಗಿದೆ. ಪ್ರಸಿದ್ದ ಆರ್ಟಿಸ್ಟ್ ಮೂಲಕ ಈ ವರ್ಣ ಮಾಲೆಯನ್ನು ರಚಿಸಲಾಗಿದೆ. ಲಿಯೋ ಕ್ಲಬ್ ಸದಸ್ಯರ ಸಹಕಾರದಿಂದ ಚಿತ್ರಕ್ಕೆ ಬಣ್ಣ ಕೊಡುವ ಕಾರ್ಯವನ್ನು ಮಾಡಲಾಗಿದೆ.  ಕ್ಲಬ್ ವತಿಯಿಂದ ಮಕ್ಕಳ ಕಲಿಕಾ ವ್ಯವಸ್ಥೆಗೆ ಒತ್ತು ನೀಡುವ ಉದ್ದೇಶವೂ ಇದರ ಹಿಂದೆ ಇದ್ದು , ಕ್ಲಬ್ ವ್ಯಾಪ್ತಿಯ ದ ಕ, ಚಿಕ್ಕಮಗಳೂರು, ಹಾಸನ ಮತ್ತು ಕೊಡಗು ಜಿಲ್ಲೆಗಳಲ್ಲಿ ಈ ಸೇವೆಯನ್ನು ನಡೆಸಲಾಗುವುದು. ಕ್ಲಬ್ ಯೋಜನೆಗೆ ಪೋಷಕರಿಂದ ಮತ್ತು ಸಾರ್ವಜನಿಕರಿಂದ ಅಭಿನಂದನೆಗಳು ವ್ಯಕ್ತವಾಗಿದೆ, ಸಮಾಜ ಸೇವೆ ಇನ್ನೂ ಮುಂದುವರೆಯಲಿದೆ.


ಡಾ. ರಂಜಿತಾ ಎಚ್ ಶೆಟ್ಟಿ

ಜಿಲ್ಲಾಧ್ಯಕ್ಷರು ಲಿಯೋ ಕ್ಲಬ್ ೩೧೭ಡಿ

ಚಿತ್ರ ಇದೆ



ಕಲಿಕೆಗೆ ತುಂಬಾ ಸಹಕಾರಿಯಾಗಿದೆ

ತರಗತಿಯ ಗೋಡೆಗಳಲ್ಲಿ ಇಂಗ್ಲೀಷ್ ವರ್ಣಮಾಲೆಯನ್ನು ಚಿತ್ರ ಸಹಿತ ಬರೆದಿರುವುದು ನಮಗೆ ತುಂಬಾ ಸಹಕಾರಿಯಾಗಿದೆ. ಮಕ್ಕಳಿಗೆ ಅಕ್ಷರದ ಪರಿಚಯ ಮಾಡಿಸಲು ಮತ್ತು ಬರೆಯವುದು ಮತ್ತು ಓದುವುದನ್ನು ಕಲಿಸಲು ಇದು ಪ್ರಯೋಜನಕಾರಿಯಾಗಿದ್ದು ಇತರ ಕಡೆಗೂ ಇದು ವಿಸ್ತರಣೆಯಾಗಬೇಕಿದೆ.


ವಂದಿತಾ, ಕಾವು ಶಾಲೆ ಶಿಕ್ಷಕಿ

ಕುಡಿದ ಮತ್ತಿನಲ್ಲಿ ಗಲಾಟೆ: ಜೈಲರ್ ಸಿನಿಮಾದ ನಟನ ಬಂಧನ

Posted by Vidyamaana on 2023-10-25 15:40:01 |

Share: | | | | |


ಕುಡಿದ ಮತ್ತಿನಲ್ಲಿ ಗಲಾಟೆ: ಜೈಲರ್ ಸಿನಿಮಾದ ನಟನ ಬಂಧನ

ಕೊಚ್ಚಿ : ಕುಡಿದ ಮತ್ತಿನಲ್ಲಿ ಕೊಚ್ಚಿ ಪೊಲೀಸ್ ಠಾಣೆಯಲ್ಲಿ ಗಲಾಟೆ ಮಾಡಿದ ಆರೋಪದ ಮೇಲೆ ಜೈಲರ್ ನಟ ವಿನಾಯಕನ್ ಅವರನ್ನು ಕೇರಳ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.ನಟ ಸಂಜೆ ಎರ್ನಾಕುಲಂ ಟೌನ್ ಉತ್ತರ ಪೊಲೀಸ್ ಠಾಣೆಯಲ್ಲಿ ಕೋಲಾಹಲ ಸೃಷ್ಟಿಸಿದ್ದಾರೆ. ಅವರು ತಮ್ಮ ಅಪಾರ್ಟ್ಮೆಂಟ್ನಲ್ಲಿ ಗಲಾಟೆ ಮಾಡಿದ್ದಕ್ಕಾಗಿ ನೆರೆದಿದ್ದವರು ಪೊಲೀಸರನ್ನು ಕರೆಸಿದರು.ಬಳಿಕ ಪೊಲೀಸ್ ಠಾಣೆಯಲ್ಲಿಯೂ ತೊಂದರೆ ಉಂಟುಮಾಡಿದ್ದಕ್ಕಾಗಿ ಆತನನ್ನು ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅಗತ್ಯ ವೈದ್ಯಕೀಯ ಪರೀಕ್ಷೆಗಾಗಿ ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.


ವಿನಾಯಗನ್ ಅವರನ್ನು ಪೊಲೀಸ್ ಠಾಣೆಯ ಮೂಲೆಯೊಂದರಲ್ಲಿ ನಿಲ್ಲಿಸಿರುವ ಚಿತ್ರ ಹಾಗೂ ವಿನಾಯಗನ್ ಅವರನ್ನು ಆಟೋನಲ್ಲಿ ಕರೆದುಕೊಂಡು ಹೋಗುತ್ತಿರುವ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ರೈತರಿಗೆ ಗುಡ್ ನ್ಯೂಸ್: ಈ ದಿನಾಂಕದಂದು ಪಿಎಂ ಕಿಸಾನ್ ನಿಧಿಯ 17 ನೇ ಕಂತಿನ ಹಣ ಖಾತೆಗೆ ಜಮಾ

Posted by Vidyamaana on 2024-06-15 15:38:58 |

Share: | | | | |


ರೈತರಿಗೆ ಗುಡ್ ನ್ಯೂಸ್: ಈ ದಿನಾಂಕದಂದು ಪಿಎಂ ಕಿಸಾನ್ ನಿಧಿಯ 17 ನೇ ಕಂತಿನ ಹಣ ಖಾತೆಗೆ ಜಮಾ

ನವದೆಹಲಿ : ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಈವರೆಗೆ 16 ಕಂತುಗಳನ್ನು ಬಿಡುಗಡೆ ಮಾಡಲಾಗಿದ್ದು, ಈಗ 17 ನೇ ಕಂತಿನ ಸರದಿ. ಅದೇ ಸಮಯದಲ್ಲಿ, ಮೋದಿ ಸರ್ಕಾರ ರಚನೆಯಾದ ತಕ್ಷಣ, ಪ್ರಧಾನಿ ನರೇಂದ್ರ ಮೋದಿ ಅವರು 17 ನೇ ಕಂತನ್ನು ಬಿಡುಗಡೆ ಮಾಡುವ ಕಡತಕ್ಕೆ ಸಹಿ ಹಾಕಿದ್ದಾರೆ, ಅಂದರೆ ಜೂನ್.18‌ ರಂದು ಯೋಜನೆಗೆ ಸಂಬಂಧಿಸಿದ ಕೋಟ್ಯಂತರ ರೈತರು ಕಂತಿನ ಲಾಭವನ್ನು ಪಡೆಯಲಿದ್ದಾರೆ.

ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 17ನೇ ಕಂತು ಜೂನ್ 18, 2024 ರಂದು ಬಿಡುಗಡೆಯಾಗಲಿದೆ. ನೀವು ಯೋಜನೆಯ ಪ್ರಯೋಜನೆ ಪಡೆಯಲು ಅರ್ಜಿ ಸಲ್ಲಿಸಿದ್ದರೆ ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಪರಿಶೀಲಿಸಬಹುದು.

ಕಂತು ಪಡೆಯಲು ರೈತರು ತಪ್ಪದೇ ಈ ಕೆಲಸ ಮಾಡಬೇಕು

ಪುತ್ತೂರು ಒಕ್ಕಲಿಗ ಸ್ವಸಹಾಯ ಟ್ರಸ್ಟ್‌ ನ ದಶಮಾನೋತ್ಸವ ಕುರಿತು ಪೂರ್ವಭಾವಿ ಸಭೆ

Posted by Vidyamaana on 2024-01-23 13:20:30 |

Share: | | | | |


ಪುತ್ತೂರು ಒಕ್ಕಲಿಗ ಸ್ವಸಹಾಯ ಟ್ರಸ್ಟ್‌ ನ ದಶಮಾನೋತ್ಸವ ಕುರಿತು ಪೂರ್ವಭಾವಿ ಸಭೆ

ಪುತ್ತೂರು: ಪುತ್ತೂರು ಒಕ್ಕಲಿಗ ಸ್ವಸಹಾಯ ಟ್ರಸ್ಟ್ ನ ದಶಮಾನೋತ್ಸವದ ಕಾರ್ಯಕ್ರಮದ ಕುರಿತು ಪೂರ್ವಭಾವಿ ಸಭೆ ಸೋಮವಾರ ಸ್ವಸಹಾಯ ಟ್ರಸ್ಟ್ ಕಚೇರಿಯಲ್ಲಿ ನಡೆಯಿತು.


ಸಭೆಯಲ್ಲಿ ದಶಮಾನೋತ್ಸವದ ಅಂಗವಾಗಿ ಪ್ರತೀ ತಿಂಗಳು ಒಂದು ಕಾರ್ಯಕ್ರಮ ನಡೆಸುವುದರ ಜತೆಗೆ ಪ್ರತೀ ವಲಯದಲ್ಲೂ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಕುರಿತು ತೀರ್ಮಾನಿಸಲಾಯಿತು.ವೇದಿಕೆಯಲ್ಲಿ ಒಕ್ಕಲಿಗ ಟ್ರಸ್ಟ್ ನ ಡಿ.ವಿ.ಮನೋಹರ, ಎ.ವಿ.ನಾರಾಯಣ, ದಿವ್ಯಪ್ರಸಾದ್ ಎ.ಎಮ್., ವಸಂತ ವೀರಮಂಗಲ, ಜಿನ್ನಪ್ಪ ಗೌಡ ಮಳವೇಲು, ಪದ್ಮಯ್ಯ ಗೌಡ ವಾರಣಾಸಿ, ವೆಂಕಪ್ಪ ಗೌಡ, ಶ್ರೀಧರ ಗೌಡ ಕಣಜಾಲು ಉಪಸ್ಥಿತರಿದ್ದರು.



Leave a Comment: