ತುಮಕೂರಿನಲ್ಲಿ ಮೂವರಿದ್ದ ಕಾರಿಗೆ ಬೆಂಕಿ ಹಚ್ಚಿದ ಪ್ರಕರಣಕ್ಕೊಂದು ರೋಚಕ ಟ್ವಿಸ್ಟ್!

ಸುದ್ದಿಗಳು News

Posted by vidyamaana on 2024-03-23 15:52:34 | Last Updated by Vidyamaana on 2024-03-23 15:52:34

Share: | | | | |


ತುಮಕೂರಿನಲ್ಲಿ ಮೂವರಿದ್ದ ಕಾರಿಗೆ ಬೆಂಕಿ ಹಚ್ಚಿದ ಪ್ರಕರಣಕ್ಕೊಂದು ರೋಚಕ ಟ್ವಿಸ್ಟ್!

ಬೆಳ್ತಂಗಡಿ : ತುಮಕೂರಿನಲ್ಲಿ ಕಾರಿಗೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ ಕಾರಿನೊಳಗಿದ್ದ ಮೂವರು ಸಾವನ್ನಪ್ಪಿದ ಸಂಬಂಧಿಸಿದಂತೆ ಮೂವರು ಸೇರಿ 50 ಲಕ್ಷ ಮಿಕ್ಕಿ ಹಣ ತುಮಕೂರು ಹೋಗುವಾಗ ತೆಗೆದುಕೊಂಡು ಹೋಗಿದ್ದರು ಎಂದು ಕುಟುಂಬ ಸದಸ್ಯರು ಕೋರಾ ಪೊಲೀಸರ ವಿಚಾರಣೆ ವೇಳೆ ಮಾಹಿತಿ ನೀಡಿದ್ದಾರೆ.

*💥Whats App Group ಗೆ ಸೇರಲು ಕ್ಲಿಕ್ ಮಾಡಿ

*ಹಣ ತೆಗೆದುಕೊಂಡು ಹೋದ ವಿಚಾರ*:  ಇನ್ನೂ ಕಾರಿನಲ್ಲಿ ಹೋಗುವಾಗ ಮದಡ್ಕದ ಇಸಾಕ್ ಉಜಿರೆಯಲ್ಲಿದ್ದ ಸ್ವಂತ ಮನೆಯನ್ನು ಮಾರಾಟ ಮಾಡಿದ ಹಣ ಮತ್ತು ಮಗಳ ಚಿನ್ನವನ್ನು ಅಡವಿಟ್ಟು ಸುಮಾರು 35 ಲಕ್ಷ ಹಣವನ್ನು ತೆಗೆದುಕೊಂಡು ಹೋಗಿದ್ದರು ಎಂದು ಇಸಾಕ್ ಪತ್ನಿ ಕೋರಾ ಪೊಲೀಸ್ ಠಾಣೆಯಲ್ಲಿ ಮಾ.23 ರಂದು ಪೊಲೀಸ್ ವಿಚಾರಣೆ ವೇಳೆ ಹೇಳಿಕೆಯನ್ನು ನೀಡಿದ್ದಾರೆ. ಇನ್ನೂ ಶಿರ್ಲಾಲು ಸಿದ್ದಿಕ್ ಮತ್ತು ಟಿ.ಬಿ.ಕ್ರಾಸ್ ಸಾಹುಲ್ ಹಮೀದ್ ಕೂಡ ಸ್ನೇಹಿತರ ಮೂಲಕ ಪಡೆದ ಸುಮಾರು 15 ಲಕ್ಷಕ್ಕೂ ಮಿಕ್ಕಿ ಹಣ ತುಮಕೂರು ಹೋಗುವಾಗ ತೆಗೆದುಕೊಂಡು ಹೋಗಿದ್ದರು ಎಂದು ಮನೆಯವರು ಹೇಳಿಕೆ ನೀಡಿದ್ದಾರೆ. ಒಟ್ಟು ಮೂವರ ಬಳಿ 50 ಲಕ್ಷಕ್ಕೂ ಮಿಕ್ಕಿ ಹಣ ತುಮಕೂರು ಹೋಗುವಾಗ ಇತ್ತು ಎನ್ನಲಾಗಿದೆ.

ತುಮಕೂರಿಗೆ ಕಳೆದ ಹನ್ನೊಂದು ದಿನದ ಹಿಂದೆ ವ್ಯವಹಾರ ಸಂಬಂಧ ಮದಡ್ಕದ ರಫೀಕ್ ಎಂಬವರ ಮಾಲೀಕತ್ವದ ಎಸ್ ಪ್ರೆಸ್ ಕಾರಿನಲ್ಲಿ ಬೆಳ್ತಂಗಡಿ ತಾಲೂಕಿನ ನಡ ಗ್ರಾಮದ ಟಿ.ಬಿ.ಕ್ರಾಸ್ ನಿವಾಸಿ ಆಟೋ ಚಾಲಕ ಸಾಹುಲ್ ಹಮೀದ್(45) , ಕುವೆಟ್ಟು ಗ್ರಾಮದ ಮದಡ್ಕ ನಿವಾಸಿ ಇಸಾಕ್(56) , ಶಿರ್ಲಾಲು ಗ್ರಾಮದ ಸಿದ್ದಿಕ್(34) ಮೂವರು ಬಾಡಿಗೆ ಮಾಡಿಕೊಂಡು ಹೋಗಿದ್ದರು ಎಂದು ಹೇಳಲಾಗಿದೆ.

ಮೂವರು ಕೂಡ ನಕಲಿ ಚಿನ‌್ನದ ದಂಧೆಯ ಆಸೆಗೆ ಬಲಿಯಾಗಿದ್ದಾರೆ ಅನ್ನೋದು ಪ್ರಾಥಮಿಕ ವಿಚಾರಣೆ ವೇಳೆ ಗೊತ್ತಾಗಿದೆ. ನಮ್ಮ ಜಾಗದಲ್ಲಿ ಕೃಷಿ ಮಾಡುವಾಗ ಚಿನ್ನದ ಹಂಡೆ ಸಿಕ್ಕಿದೆ ಕಡಿಮೆ ಚಿನ್ನವನ್ನು ಬೆಲೆಗೆ ನೀಡುತ್ತೇವೆ ಎಂದು ಸುಳ್ಳು ಹೇಳಿ ಮೂವರನ್ನು ಕರೆಸಿ ಹಣ ದೋಚುವ  ಪ್ಲ್ಯಾನ್ ಮಾಡಿ ಕರೆಸಿಕೊಂಡು ಮಾ.21 ರಂದು ರಾತ್ರಿ ನಂತರ ಕೈಕಾಲು ಕಟ್ಟಿ ಹಾಕಿ ಕಾರಿಗೆ ಬೆಂಕಿ ಹಚ್ಚಿ ಕೊಲೆ ಮಾಡಿ ನಂತರ ಹಣವನ್ನು ದೋಚಿದ್ದಾರೆ ಎನ್ನಲಾಗಿದೆ. ಇನ್ನೂ ಪ್ರಕರಣ ಸಂಬಂಧ ಪ್ರಮುಖ ರೂವಾರಿ ತುಮಕೂರಿನ ಸ್ವಾಮಿ ಸೇರಿ ಆರು ಜನರನ್ನು ಮೊಬೈಲ್ ಕಾಲ್ ಡಿಟೈಲ್ಸ್ ಮೂಲಕ  ಕಾರ್ಯಾಚರಣೆ ನಡೆಸಿ ಮಾ.22 ರಂದು ರಾತ್ರಿ ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.

ಕೋರಾ ಪೊಲೀಸ್ ಠಾಣೆಯಲ್ಲಿ ಮಾ.22 ರಂದು ಸುಮೊಟೋ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಬೆಂಕಿಗಾಹುತಿಯಾದ ಕಾರನ್ನು ಕೋರಾ ಪೊಲೀಸ್ ಠಾಣೆಗೆ ತೆಗೆದುಕೊಂಡು ಬಂದಿದ್ದು. ಮೂವರ ಶವ ಸರಕಾರಿ ಆಸ್ಪತ್ರೆಯಲ್ಲಿ ಡಿಎನ್ಎ ಪರೀಕ್ಷೆ ಮಾಡಿದ ಬಳಿಕ ಮುಂದಿನ ಗುರುವಾರ ಅಥವಾ ಶುಕ್ರವಾರ ಮೃತದೇಹವನ್ನು ಗುರುತು ಪತ್ತೆಯಾದ ಬಳಿಕ ಅವರ ಕಟುಂಬ ಸದಸ್ಯರಿಗೆ ನೀಡಲಾಗುವುದು ಎಂದು ವೈದ್ಯರು ತಿಳಿಸಿದ್ದಾರೆ.


 Share: | | | | |


ವಾರದಲ್ಲಿ ಐಸಿಸ್ ನಂಟು ಸಾಬೀತಿಗೆ ಯತ್ನಾಳ್ ಗೆ ತನ್ವೀರ ಹಾಶ್ಮಿ ಸವಾಲು

Posted by Vidyamaana on 2023-12-08 04:21:51 |

Share: | | | | |


ವಾರದಲ್ಲಿ ಐಸಿಸ್ ನಂಟು ಸಾಬೀತಿಗೆ ಯತ್ನಾಳ್ ಗೆ ತನ್ವೀರ ಹಾಶ್ಮಿ ಸವಾಲು

ವಿಜಯಪುರ: ಐಸಿಸ್ ಉಗ್ರರೊಂದಿಗೆ ನಾನು ಸಂಪರ್ಕ ಹೊಂದಿರುವ ಆರೋಪವನ್ನು ಶಾಸಕ ಬಸನಗೌಡ ಪಾಟೀಲ ಯತ್ನಾಳ ಒಂದು ವಾರದಲ್ಲಿ ಸಾಬೀತು ಮಾಡಿದರೆ ನಾನು ದೇಶ ತೊರೆಯುತ್ತೇನೆ. ಆರೋಪ ಸುಳ್ಳಾದರೆ ಯತ್ನಾಳ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಭಾರತ ದೇಶ ತೊರೆದು ಪಾಕಿಸ್ತಾನಕ್ಕೆ ಹೋಗಬೇಕು ಎಂದು ಮುಸ್ಲಿಂ ಧರ್ಮಗುರು ಸಯ್ಯದ್ ಮೊಹಮ್ಮದ್ ತನ್ವೀರ್ ಪೀರಾ ಹಾಶ್ಮಿ ಸವಾಲು ಹಾಕಿದ್ದಾರೆ.



ತಮ್ಮ ವಿರುದ್ಧ ತನಿಖೆ ನಡೆಸಲು ಕೇಂದ್ರ ಸರ್ಕಾರಕ್ಕೆ ಯತ್ನಾಳ ಪತ್ರ ಬರೆದ ವಿಷಯ ಬಹಿರಂಗವಾದ ಬೆನ್ನಲ್ಲೇ ಪ್ರಕಟಣೆ ನೀಡಿದ ಧರ್ಮಗುರು ಸೈಯದ್ ಮೊಹಮದ್ ತನ್ವೀರ ಹಾಶ್ಮಿ, ನಾನು ಐಎಸ್‍ಐ ಸಂಘಟನೆಯೊಂದಿಗೆ ನಂಟು, ಭಯೋತ್ಪಾಕದರೊಂದಿಗೆ ಸಂಪರ್ಕ ಹೊಂದಿದನ್ನು ಯತ್ನಾಳ ಸಾಬೀತು ಮಾಡಿದರೆ ಭಾರತದ ದೇಶ ತೊರೆದು ಪಲಾಯನ ಮಾಡುತ್ತೇನೆ. ಸಾಬೀತು ಮಾಡದಿದ್ದರೆ ಯತ್ನಾಳ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಪಾಕಿಸ್ತಾನಕ್ಕೆ ಪಲಾಯನ ಮಾಡಬೇಕೆಂದು ಸವಾಲು ಎಸೆದಿದ್ದಾರೆ.


ನನ್ನ ಮೇಲೆ ಯತ್ನಾಳ ಮಾಡಿರುವ ಆರೋಪಗಳಲ್ಲಿ ಸತ್ಯಾಂಶ ಹೊಂದಿಲ್ಲ. ದಿ.4ರಂದು ಹುಬ್ಬಳ್ಳಿಯಲ್ಲಿ ನಡೆದ ಅವಲಾದ ಗೌಸ್ ಎ ಆಜಮ್ ಸಮ್ಮೇಳನದಲ್ಲಿ ನಾನು ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದೆ. ಇದೇ ವೇದಿಕೆಯಲ್ಲಿ ವಿವಿಧ ದರ್ಗಾದ ಪೀಠಾಧೀಶರು, ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾನೂನು ಸಚಿವ ಎಚ್.ಕೆ.ಪಾಟೀಲ, ಸೇರಿದಂತೆ ಹಲವು ಮಂತ್ರಿಗಳು-ಶಾಸಕರು, ರಾಜಕೀಯ ಧುರೀಣರು, ಪಾಲ್ಗೊಂಡಿದ್ದರು ಎಂದು ವಿವರಿಸಿದ್ದಾರೆ.


ಮುಖ್ಯಮಂತ್ರಿ ಸ್ಥಾನದಲ್ಲಿ ಇರುವವರು ಯಾವುದೇ ಕೋಮು ಅಥವಾ ಸಮಾಜದವರಿಗೆ ಸೀಮಿತವಾಗಿಲ್ಲ. ರಾಜಕಾರಣದಲ್ಲಿ ಎಲ್ಲಾ ಧರ್ಮ ಮತ್ತು ಜಾತಿಗಳ ಮುಖ್ಯಮಂತ್ರಿಗಳಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮುಖ್ಯಮಂತ್ರಿಗಳ ಜನಪ್ರಿಯತೆ ಸಹಿಸದೆ ಹತಾಶರಾಗಿ, ಯತ್ನಾಳ ನನ್ನ ವಿರುದ್ಧ ನೀಡಿರುವ ಹೇಳಿಕೆಯಲ್ಲಿ ಯಾವುದೇ ಸತ್ಯಾಂಶ ಇಲ್ಲ ಎಂದು ತಿರುಗೇಟು ನೀಡಿದ್ದಾರೆ.ಅಂತಾರಾಷ್ಟ್ರೀಯ ಭಯೋತ್ಪಾದನೆ ಖಂಡಿಸುವ ಸಮ್ಮೇಳನದಲ್ಲಿ ದೇಶದ ಪ್ರತಿನಿಧಿಯಾಗಿ ಪಾಲ್ಗೊಂಡಿದ್ದ ನನ್ನ ಬಗ್ಗೆ ಸಾರ್ವಜನಿಕರಿಗೆ ತಪ್ಪು ಸಂದೇಶ ರವಾನಿಸಿದ್ದಾರೆ. ನನಗೆ ಐಸಿಸ್ ಜೊತೆ ನಂಟಿ ಎಂಬ ಹೇಳಿಕೆ ಮೂಲಕ ಮುಸ್ಲಿಂ ಸಮಾಜದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಯತ್ನಾಳ ವಿರುದ್ಧ ಪೀರಾ ಕಿಡಿ ಕಾರಿದ್ದಾರೆ.



ತಮ್ಮ ತಮ್ಮ ರಾಜಕೀಯ ಬೇಳೆ ಬೇಯಿಸುವುಕ್ಕಾಗಿ ಇಂಥ ಹೇಳಿಕೆ ನೀಡಿರುವ ಯತ್ನಾಳ, ನಾನು ಐಸಿಸ್ ಉಗ್ರರ ಜೊತೆ ನಂಟಿದೆ ಎಂಬುದನ್ನು ಕೇಂದ್ರ ಮತ್ತು ರಾಜ್ಯದ ಎಲ್ಲಾ ತನಿಖಾ ಸಂಸ್ಥೆಗಳಿಗೆ ದಾಖಲೆ ನೀಡಿ, ಒಂದು ವಾರದಲ್ಲಿ ಸಾಬೀತು ಮಾಡಲಿ ಎಂದು ಆಗ್ರಹಿಸಿದ್ದಾರೆ.


ಒಂದು ವಾರದೊಳಗೆ ಐಸಿಸ್ ಉಗ್ರರ ಜೊತೆಗೆ ನನ್ನ ನಂಟಿದೆ ಎಂಬುದನ್ನು ದಾಖಲೆ ಸಮೇತ ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ ಯತ್ನಾಳ ಶಾಸಕರ ಸ್ಥಾನಕ್ಕೆ ರಾಜಿನಾಮೆ ನೀಡಿ, ಪಾಕಿಸ್ತಾನಕ್ಕೆ ಪಲಾಯನ ಮಾಡಬೇಕೆಂದು ಸವಾಲು ಹಾಕಿದ ಧರ್ಮಗುರು, ನಾನನಷ್ಟೇ ಅಲ್ಲ, ನನ್ನ ಭಕ್ತರು, ಶಿಷ್ಯರು ಐಸಿಸ್ ಜೊತೆ ನಂಟಿದೆ ಎಂದು ಸಾಬೀತು ಪಡಿಸಿದರೆ ನಾನು ದೇಶವನ್ನು ತ್ಯಾಗ ಮಾಡುತ್ತೇನೆ ಎಂದು ಸವಾಲು ಹಾಕಿದ್ದಾರೆ.


ಯತ್ನಾಳ ಅವರು ಮಾಧ್ಯಮದಲ್ಲಿ ಬಿಂಬಿಸುವ ಫೋಟೋಗಳು ಫೆಸ್‍ಬುಕ್‍ನಲ್ಲಿ ನಾನು ಹೊಂದಿರುವ ಸ್ವಂತ ಖಾತೆಯಲ್ಲಿ ಹಾಕಿರುವ ಫೋಟೋಗಳೇ ಆಗಿವೆ. 12 ವರ್ಷಗಳ ಹಿಂದೆ ಇರಾಕ್ ದೇಶದ ಅಂತಾರಾಷ್ಟ್ರೀಯ ಪ್ರಸಿದ್ದ ಮಹಾನ್ ಸೂಫಿ ಮಹೆಬೂಬ ಎ ಸುಭಾನಿ ಗೌಸ ಎ ಆಜಮ ಅವರ ದರ್ಶನಕ್ಕೆ ಹೋಗಿದ್ದೆ ಎಂದು ವಿವರಿಸಿದ್ದಾರೆ.


ಆಗ ಅಲ್ಲಿನ ದರ್ಗಾದ ಖಾಲೀದ್ ಜಿಲಾನಿ ಅವರ ಆರ್ಶೀವಚನ ಪಡೆಯುವ ಸಂಧರ್ಭದಲ್ಲಿ ತೆಗೆದಿರುವ ಫೋಟೋಗಳು. ಮತ್ತೊಂದು ಫೋಟೋ ಖಾಲೀದ ಜಿಲಾನಿ ಅವರ ಅಂಗರಕ್ಷಕ ನನ್ನನ್ನು ಅವರ ಪೀಠಕ್ಕೆ ಕರೆದುಕೊಂಡು ಹೋಗುವ ಸಮಯದಲ್ಲಿ ತೆಗೆಯಲಾಗಿದೆ ಎಂದು ವಿವರಣೆ ನೀಡಿದ್ದಾರೆ.

ಎಲ್ಲಾ ಹುದ್ದೆ ತಮ್ಮ ಮಕ್ಕಳಿಗೆ ಬೇಕು, ಇನ್ನೂ ಏನಾದರೂ ಉಳಿದಿದ್ದರೇ ಮನೆಯ ಬೆಕ್ಕುಗಳಿಗೆ ಕೊಡಿ: ಬಿಎಸ್​ ವೈ ವಿರುದ್ಧ ಯತ್ನಾಳ್​ ಕಿಡಿ

Posted by Vidyamaana on 2023-12-02 15:16:45 |

Share: | | | | |


ಎಲ್ಲಾ ಹುದ್ದೆ ತಮ್ಮ ಮಕ್ಕಳಿಗೆ ಬೇಕು, ಇನ್ನೂ ಏನಾದರೂ ಉಳಿದಿದ್ದರೇ ಮನೆಯ ಬೆಕ್ಕುಗಳಿಗೆ ಕೊಡಿ: ಬಿಎಸ್​ ವೈ ವಿರುದ್ಧ ಯತ್ನಾಳ್​ ಕಿಡಿ

ಬೆಂಗಳೂರು: ಎಲ್ಲಾ ಹುದ್ದೆ ತಮ್ಮ ಮಕ್ಕಳಿಗೆ ಬೇಕು. ಇನ್ನು ಏನಾದರೂ ಉಳಿದಿದ್ದರೇ ಮನೆಯ ಬೆಕ್ಕುಗಳಿಗೆ ಕೊಟ್ಟು ಬಿಡಿ ಅಂತ ಹೇಳಿದ್ದೇನೆ. ಪ್ರಧಾನ ಕಾರ್ಯದರ್ಶಿ, ಉಪ ಕಾರ್ಯದರ್ಶಿ ಅಂತ ಮಾಡಿಕೊಳ್ಳಲಿ ಎಂದು ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್ ಆಕ್ರೋಶ ವ್ಯಕ್ತಪಡಿಸಿದರು.


ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಮೊದಲು ಮಾಜಿ ಮುಖ್ಯಮಂತ್ರಿ ಅಂತಿದ್ದರು. ಮುಖಭಂಗ ಆಗುತ್ತೆ ಅಂತಾ ಈಗ ನಿಕಟಪೂರ್ವ ಎಂದು ಹೇಳುತ್ತಾರೆ. ಅಪ್ಪ, ಮಗ ನಾಟಕ ಮಾಡಬೇಡಿ ಅಂತಾ ಈ ಹಿಂದೆ ನಾನು ಹೇಳಿದ್ದೆ. ಎಲ್ಲಾ ನಾಟಕ ಮಾಡೋದು, ಎಲ್ಲಾ ಹುದ್ದೆ ತಮ್ಮ ಮಕ್ಕಳಿಗೆ ಬೇಕು. ಯಾಕಂದ್ರೆ ಆ ಖುರ್ಚಿ ಬಿಡಬಾರದು‌ ಅಂತ. ರೈತರ ಬಗ್ಗೆ ಕಣ್ಣೀರು ಹಾಕೋದು ನೋಡಿದರೇ ಎಲ್ಲಾ ನಾಟಕ ಮಾಡೋದು, ಎಲ್ಲಾ ಹುದ್ದೆ ತಮ್ಮ ಮಕ್ಕಳಿಗೆ ಬೇಕು. ಇನ್ನು ಏನಾದರೂ ಉಳಿದಿದ್ದರೇ ಮನೆಯ ಬೆಕ್ಕುಗಳಿಗೆ ಕೊಟ್ಟು ಬಿಡಿ ಅಂತ ಹೇಳಿದ್ದೇನೆ. ಪ್ರಧಾನ ಕಾರ್ಯದರ್ಶಿ, ಉಪ ಕಾರ್ಯದರ್ಶಿ ಅಂತ ಮಾಡಿಕೊಳ್ಳಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು

ಪುತ್ತೂರು : ಸಚಿನ್ ಟ್ರೇಡರ್ಸ್ ನಿಂದ ಲಕ್ಷಾಂತರ ರೂಪಾಯಿ ಕಳವು - ಸಿಸಿಕ್ಯಾಮರದಲ್ಲಿ ಸೆರೆ

Posted by Vidyamaana on 2023-09-09 04:44:40 |

Share: | | | | |


ಪುತ್ತೂರು : ಸಚಿನ್ ಟ್ರೇಡರ್ಸ್ ನಿಂದ ಲಕ್ಷಾಂತರ ರೂಪಾಯಿ ಕಳವು - ಸಿಸಿಕ್ಯಾಮರದಲ್ಲಿ ಸೆರೆ

ಪುತ್ತೂರು: ಪುತ್ತೂರಿನ ಖ್ಯಾತ ಹೋಲ್ ಸೇಲ್

ಡಿಸ್ಟ್ರಿಬ್ಯೂಟರ್ ಸಚಿನ್ ಟ್ರೇಡರ್ಸ್‌ ಅಂಗಡಿಯಿಂದ ಲಕ್ಷಾಂತರ ರೂಪಾಯಿ ನಗದು ಕಳವಾಗಿರುವ ಬಗ್ಗೆ ಪುತ್ತೂರು ಪೊಲೀಸರಿಗೆ ಅಂಗಡಿಯ ಮಾಲಕರು

ದೂರು ನೀಡಿದ್ದಾರೆ.ಕಳವು ಪ್ರಕರಣ ಸಿಸಿ ಕ್ಯಾಮರದಲ್ಲಿ ಪತ್ತೆಯಾಗಿದೆ. ಸಚಿನ್ ಟ್ರೇಡರ್ಸ್ ನ ಮಾಲಕಿ ವಿದ್ಯಾ ನಾಯಕ್ ಮತ್ತು ಅವರ ಗಂಡ ಮಂಜುನಾಥ್ ನಾಯಕ್ ಅವರು ಅಂಗಡಿಯ ವ್ಯವಹಾರ ನೋಡಿಕೊಳ್ಳುತ್ತಿದ್ದು ಸೆ.4ರಂದು ಮಂಜುನಾಥ್ ನಾಯಕ್ ಅವರು ಲೆಕ್ಕ ಮಾಡಿಟ್ಟ ರೂ. 2,15,000 ನಗದನ್ನು ಪೇಪರ್‌ನಲ್ಲಿ ಕಟ್ಟಿ ಮನೆಗೆ ಹೋಗುವಾಗ ತೆಗೆದುಕೊಂಡು ಹೋಗಲೆಂದು ಡ್ರಾಯರ್ ಪಕ್ಕದಲ್ಲಿ ಇಟ್ಟಿದ್ದರು. ಆದರೆ ಅವರು ಮರೆತು ನಗದನ್ನು ಅಲ್ಲೇ

ಬಿಟ್ಟಿದ್ದರು.ಎರಡು ದಿನ ಬಳಿಕ ಅವರಿಗೆ ತಾನಿಟ್ಟ ಹಣದ ನೆನಪಾಗಿ ಡ್ರಾಯರ್ ಪಕ್ಕ ನೋಡಿದಾಗ ನಗದು ಅಲ್ಲಿ ನಾಪತ್ತೆಯಾಗಿತ್ತು. ಈ ಕುರಿತು ಅವರು ಅಂಗಡಿಯ ಸಿಸಿ ಕ್ಯಾಮರಾವನ್ನು ಪರಿಶೀಲಿಸಿದಾಗ ಸೆ.4 ರಾತ್ರಿ ಸಮಯ ಒಬ್ಬ ವ್ಯಕ್ತಿ ಅಂಗಡಿಯ ಹಿಂಬದಿಯ ಕ್ಯಾಂಟೀನ್ ಗೋಡೆಗೆ ಹತ್ತಿ ವೆಂಟಿಲೇಟರ್ ಮೂಲಕ ಒಳಪ್ರವೇಶಿಸಿ ಅಂಗಡಿಯ ಒಳಗೆ ಬಂದು ಅಂಗಡಿಯ ಡ್ರಾಯ‌ರ್ 

ಪಕ್ಕದಲ್ಲಿದ್ದ ಹಣದ ಕಟ್ಟನ್ನು ಕದ್ದು ಹೋಗುತ್ತಿರುವುದು ಕಂಡು ಬಂದಿದೆ.ಅಂಗಡಿಯ ಮಾಲಕರು ಸೆ.7ರಂದು ಪುತ್ತೂರು

ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕೆಲಸದಾಳುವಿನ ಮೇಲೆ ಸಂಶಯ :

ಸಿಸಿ ಕ್ಯಾಮರ ಪರಿಶೀಲಿಸಿದಾಗ ಅಂಗಡಿಯ ಕೆಲಸದಾಳು ಕುದ್ಮಾರು ಗ್ರಾಮದ ಚೇತನ್ ಕುಮಾರ್ ಎಂದು ಮೇಲ್ನೋಟಕ್ಕೆ ಕಂಡು ಬರುತ್ತಿತ್ತು. ಆತನೇ ಕಳವು ಮಾಡಿರಬಹುದು ಎಂದು ಅಂಗಡಿಯ ಮಾಲಕರು ದೂರಿನಲ್ಲಿ ತಿಳಿಸಿದ್ದಾರೆ. ಈ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಆ. 28: ಪುತ್ತೂರು ಶಾಸಕರ ನೂತನ ಕಚೇರಿ ಉದ್ಘಾಟನೆ

Posted by Vidyamaana on 2023-08-22 16:20:28 |

Share: | | | | |


ಆ. 28: ಪುತ್ತೂರು ಶಾಸಕರ ನೂತನ ಕಚೇರಿ ಉದ್ಘಾಟನೆ

ಪುತ್ತೂರು: ನೂತನ‌ ಶಾಸಕ ಅಶೋಕ್ ಕುಮಾರ್ ರೈ ಅವರ ನೂತನ ಕಚೇರಿ ಉದ್ಘಾಟನೆಗೆ ಕೊನೆಗೂ ಮುಹೂರ್ತ ಫಿಕ್ಸ್ ಆಗಿದೆ.

ಆ. 28ರಂದು ಪುತ್ತೂರು ಶಾಸಕರ ಸುಸಜ್ಜಿತ ಕಚೇರಿ ಲೋಕಾರ್ಪಣೆಗೊಳ್ಳಲಿದೆ.

ಹಿಂದಿನ ಸಹಾಯಕ ಆಯುಕ್ತರ ಕಚೇರಿ, ನಂತರ‌ ಪುಡಾ ಆಫೀಸ್ ಆಗಿದ್ದ ಕಟ್ಟಡದಲ್ಲೇ ಶಾಸಕರ ನೂತನ ಕಚೇರಿ ಇರಲಿದೆ. ಸಾರ್ವಜನಿಕರ ಅನುಕೂಲತೆ ದೃಷ್ಟಿಯನ್ನಿಟ್ಟುಕೊಂಡು ಹೊಸ ಕಚೇರಿ ಉದ್ಘಾಟನೆಗೆ ಸಿದ್ಧವಾಗಿದೆ.

ಸಾಕಷ್ಟು ಸ್ಥಳಾವಕಾಶ ಇಟ್ಟುಕೊಂಡು ನೂತನ ಕಚೇರಿಯ ಪ್ಲ್ಯಾನ್ ಸಿದ್ಧಪಡಿಸಿದ್ದು, ಸಾರ್ವಜನಿಕರ ಕೆಲಸ ಕಾರ್ಯಗಳಿಗೆ ತೊಂದರೆ ಆಗದಂತೆ ಸುವ್ಯವಸ್ಥಿತವಾಗಿ ಕಚೇರಿ ನಿರ್ಮಾಣ ಮಾಡಲಾಗಿದೆ.

ಸಮರ್ಥ ಜನನಾಯಕ ಅಶೋಕ್ ಕುಮಾರ್ ರೈ ಕೋಡಿಂಬಾಡಿ – ಪುತ್ತೂರು ಕ್ಷೇತ್ರವನ್ನು ಕೈ ವಶ ಮಾಡಿಕೊಳ್ಳಲು ನಡೆದಿದೆ ಭರ್ಜರಿ ತಯಾರಿ

Posted by Vidyamaana on 2023-05-08 11:07:46 |

Share: | | | | |


ಸಮರ್ಥ ಜನನಾಯಕ ಅಶೋಕ್ ಕುಮಾರ್ ರೈ ಕೋಡಿಂಬಾಡಿ – ಪುತ್ತೂರು ಕ್ಷೇತ್ರವನ್ನು ಕೈ ವಶ ಮಾಡಿಕೊಳ್ಳಲು ನಡೆದಿದೆ ಭರ್ಜರಿ ತಯಾರಿ

ಪುತ್ತೂರು: ಒಬ್ಬ ಜನನಾಯಕ ಹೇಗಿರಬೇಕೆಂಬ ಪ್ರಶ್ನೆಗೆ ಹಲವರು ಹಲವು ಉತ್ತರಗಳನ್ನು ಕೊಡಬಹುದು. ಉತ್ತಮ ನಾಯಕತ್ವದ ಗುಣಗಳು, ಮಾತುಗಾರಿಕೆ, ತನ್ನದೇ ಆದ ಸ್ವಂತ ಚಾರ್ಮ್, ಜನರ ನೋವಿಗೆ ಸ್ಪಂದಿಸುವ ಗುಣ, ಸಂಕಷ್ಟದ ಸಂದರ್ಭದಲ್ಲಿ ಎದೆಗುಂದದೆ ಜೊತೆಗಿದ್ದವರಿಗೆ ಧೈರ್ಯ ತುಂಬಿ ಎಲ್ಲರನ್ನೂ ಒಟ್ಟಾಗಿ ಕರೆದೊಯ್ಯುವ ಸ್ವಭಾವ.. ಹೀಗೆ ಒಬ್ಬ ಉತ್ತಮ ನಾಯಕನಲ್ಲಿ ಇಂತಹ ಹಲವು ಗುಣಗಳನ್ನು ನಾವು ಪಟ್ಟಿ ಮಾಡುತ್ತಾ ಹೋಗಬಹುದು. ಆದರೆ ಇವುಗಳಲ್ಲಿ ಎಲ್ಲಾ ಗುಣಗಳು ಅಲ್ಲವಾದರೂ ಕೆಲವು ಗುಣಗಳನ್ನಾದರೂ ಒಬ್ಬನೇ ನಾಯಕನಲ್ಲಿ ನಿರೀಕ್ಷಿಸುವುದು ಇಂದಿನ ದಿನಗಳಲ್ಲಿ ಕಷ್ಟಸಾಧ್ಯವೇ ಸರಿ!

       ಆದರೆ ಪುತ್ತೂರು ಕ್ಷೇತ್ರದ ಜನತೆಯ ಪುಣ್ಯದ ಫಲವೋ ಎಂಬಂತೆ ಈ ಬಾರಿ ಹತ್ತೂರ ಒಡೆಯನ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷದಿಂದ ಓರ್ವ ಸಮರ್ಥ ಅಭ್ಯರ್ಥಿ ಕಣಕ್ಕಿಳಿದಿದ್ದು ಕ್ಷೇತ್ರದ ಮತದಾರರ ಆಶೀರ್ವಾದದ ನಿರೀಕ್ಷೆಯಲ್ಲಿದ್ದಾರೆ- ಅವರೇ ಪುತ್ತೂರಿನವರಿಗೆ ಚಿರಪರಿಚಿತ ಹೆಸರು, ಸಮಾಜಸೇವೆಯ ಮೂಲಕ ನೊಂದ 25 ಸಾವಿರಕ್ಕೂ ಹೆಚ್ಚು ಕುಟುಂಬಗಳ ಬಾಳಿನಲ್ಲಿ ಭರವಸೆಯ ನಗುವನ್ನು ಅರಳಿಸಿರುವ ನಗುಮೊಗದ ನಾಯಕ ಅಶೋಕ್ ಕುಮಾರ್ ರೈ ಕೋಡಿಂಬಾಡಿ.

ಹಾಸನದಲ್ಲಿ ಭೀಕರ ಅಪಘಾತ: ಸ್ಥಳದಲ್ಲೇ ಐವರ ದುರ್ಮರಣ

Posted by Vidyamaana on 2024-05-26 10:37:59 |

Share: | | | | |


ಹಾಸನದಲ್ಲಿ ಭೀಕರ ಅಪಘಾತ: ಸ್ಥಳದಲ್ಲೇ ಐವರ ದುರ್ಮರಣ

ಹಾಸನ: ಹಾಸನ ಹೊರವಲಯದ ಈಚನಹಳ್ಳಿ (Ichanahalli Village) ಬಳಿ ಕಾರು ಹಾಗೂ ಟ್ರಕ್ ನಡುವೆ ಭೀಕರ ಅಪಘಾತ (ಮೇ.26) ಸಂಭವಿಸಿದೆ. ಸ್ಥಳದಲ್ಲೇ ಐವರು ಮೃತಪಟ್ಟಿದ್ದಾರೆ. ಡಿಕ್ಕಿ ರಭಸಕ್ಕೆ ಕಾರು ನಜ್ಜುಗುಜ್ಜು (Five died on the spot) ಆಗಿದೆ. ಮೃತದೇಹಗಳನ್ನು ಹೊರಗೆ ತೆಗೆಯಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ.



Leave a Comment: