ನೆಟ್ಟೇ ಕಮ್ಮಿ ಆಪುಂಡು ನನ ಬರೋಡ್ಚಿ.. ಎಂದು ಹೇಳಿ ಮದ್ದು ಕೊಡ್ತಿದ್ದ ನರಸಿಂಹ ಭಟ್ ರಿಟೈರ್ಡ್

ಸುದ್ದಿಗಳು News

Posted by vidyamaana on 2023-07-10 07:10:00 | Last Updated by Vidyamaana on 2023-09-05 06:51:23

Share: | | | | |


ನೆಟ್ಟೇ ಕಮ್ಮಿ ಆಪುಂಡು ನನ ಬರೋಡ್ಚಿ.. ಎಂದು ಹೇಳಿ ಮದ್ದು ಕೊಡ್ತಿದ್ದ ನರಸಿಂಹ ಭಟ್ ರಿಟೈರ್ಡ್

ಪುತ್ತೂರು: “ನೆಟ್ಟೇ ಕಮ್ಮಿ. ನನ ಬರೋಡ್ಚಿ…”

ಹೀಗೆ ಹೇಳಿ ಔಷಧಿ ನೀಡಿದರೆಂದರೆ, ಯಾರದೇ ರೋಗವಾದರೂ ವಾಸಿಯಾಗಲೇಬೇಕು. ಆಸ್ಪತ್ರೆಗೆ ಹೋಗಿ ತಾಸುಗಟ್ಟಲೇ ಕಾಯಬೇಕೆಂದಿಲ್ಲ. ಹೆದರಿಕೆಯಾಗುವ ಬಿಲ್ ಕೂಡ ಇಲ್ಲ. ಯಾರೇ ಬಂದರೂ ಅವರ ನಗುವೇ ದಿವ್ಯೌಷಧ.

ಇದು ಎರಡೇ ಸಾಲಿನಲ್ಲಿ ವಿವರಣೆ ಕೊಡಬಹುದಾದ ಕಾಂಪೌಂಡರ್ ಖ್ಯಾತಿಯ ನರಸಿಂಹ ಭಟ್ ಅವರ ಪರಿಚಯ. ತನ್ನ 16ನೇ ವಯಸ್ಸಿಗೇ ಡಾ. ಶಿವರಾಮ ಭಟ್ ಅವರ ಜೊತೆಗೆ ಕಾಂಪೌಂಡರ್ ಆಗಿ ಸೇರಿಕೊಂಡ ಅವರು, ಇದುವರೆಗೆ ಸುದೀರ್ಘ 68 ವರ್ಷಗಳ ಸೇವೆ ಸಲ್ಲಿಸಿದ್ದಾರೆ. ಹಾರಾಡಿಯಲ್ಲಿ ವಾಸವಾಗಿರುವ ಇವರ ತಂದೆ ಶಂಕರ್ ಭಟ್, ತಾಯಿ ಕಾವೇರಮ್ಮ. ಸರಸ್ವತಿ ಇವರ ಪತ್ನಿ. ಸಾಫ್ಟ್ ವೇರ್ ಇಂಜಿನಿಯರ್ ಆಗಿರುವ ಪುತ್ರ ಕಾರ್ತಿಕ್ ತನ್ನ ಪತ್ನಿ - ಮಗನೊಂದಿಗೆ ಲಂಡನಿನಲ್ಲಿ ವಾಸವಾಗಿದ್ದಾರೆ.

ಇದೀಗ ತನ್ನ 82ನೇ ವಯಸ್ಸಿನಲ್ಲಿ ವಿಶ್ರಾಂತ ಜೀವನಕ್ಕೆ ತೆರಳಿದ್ದಾರೆ. ವಯೋ ಸಹಜ ಸಮಸ್ಯೆಗಳ ಕಾರಣದಿಂದಾಗಿ ಡಾ. ಶಿವರಾಮ ಭಟ್ ಅವರ ಕ್ಲಿನಿಕ್ ಅನ್ನು ಬಂದ್ ಮಾಡಲಾಗಿದೆ ಎಂದು ಕ್ಲಿನಿಕ್ ಮುಂದುಗಡೆ ಬೋರ್ಡ್ ಹಾಕಲಾಗಿದೆ.

ಹಾಗಾಗಿ, ಔಷಧಕ್ಕೆಂದು ಆಗಮಿಸುವ ಜನರು ಬೋರ್ಡ್ ನೋಡಿ, ಹ್ಯಾಪ್ ಮೋರೆ ಹಾಕಿಕೊಂಡು ವಾಪಾಸ್ ಹೋಗುತ್ತಿದ್ದಾರೆ. ದಿನಕ್ಕೆ ಸುಮಾರು 300 ಮಂದಿಯಂತೆ ತಿಂಗಳಿಗೆ 10 ಸಾವಿರದಷ್ಟು ಮಂದಿ ಇವರ ಔಷಧವನ್ನೇ ಅವಲಂಬಿತರಾಗಿದ್ದರು. ಇದೀಗ ಇಷ್ಟು ಮಂದಿ ಬೇರೆ ವೈದ್ಯರ ಮೊರೆ ಹೋಗಲೇಬೇಕಾದ ಅನಿವಾರ್ಯತೆ ಎದುರಾಗಿದೆ.

ಮಳೆಗಾಲ ಆರಂಭವಾಯಿತೆಂದರೆ ಜ್ವರ, ಶೀತ, ಕೆಮ್ಮು ಸಿದ್ಧ. ಇದಕ್ಕೆಲ್ಲಾ ಕಾಂಪೌಂಡರ್ ನೀಡುವ 3 ಹೊತ್ತಿನ ಮದ್ದು ಸಾಕು. ಕಡಿಮೆ ಶುಲ್ಕ ಮಾತ್ರವಲ್ಲ, ಸುಲಭದಲ್ಲಿ ಸಿಗುವ ವೈದ್ಯರು ಎಂಬ ಕಾರಣಕ್ಕೆ ಜನರೂ ಇಲ್ಲಿಗೆ ಆಗಮಿಸುತ್ತಿದ್ದರು. ಇನ್ನು ಮುಂದೆ ಪುತ್ತೂರಿನ ಹೃದಯ ಭಾಗದಲ್ಲಿ ಇದ್ದ ಡಾ. ಶಿವರಾಮ ಭಟ್ ಅವರ ಕ್ಲಿನಿಕಿನಲ್ಲಿ ಕಾಂಪೌಂಡರ್ ಮದ್ದು ನೀಡುವುದಿಲ್ಲ!

ಡಾ. ಶಿವರಾಮ ಭಟ್ ಗುರು:

ಡಾ. ಶಿವರಾಮ ಭಟ್ ಅವರನ್ನೇ ಗುರುವಾಗಿ ನೆಚ್ಚಿಕೊಂಡಿದ್ದ ಕಾಂಪೌಂಡರ್ ಖ್ಯಾತಿಯ ನರಸಿಂಹ ಭಟ್ ಅವರು, ಸುದೀರ್ಘ ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಡಾ. ಶಿವರಾಮ ಭಟ್ ಅವರ ನಿಧನದ ನಂತರವೂ ಅವರ ಹೆಸರಿನಲ್ಲೇ ಕ್ಲಿನಿಕ್ ನಡೆಯುತ್ತಿತ್ತು. ಆಗ ಕಾಂಪೌಂಡರ್ ಅವರೇ ಔಷಧ ನೀಡುತ್ತಿದ್ದರು. ಕ್ಲಿನಿಕಿಗೆ ಆಗಮಿಸಿದ ಹೆಚ್ಚಿನ ಜನರಿಗೆ ಇವರೇ ಡಾ‌. ಶಿವರಾಮ ಭಟ್ ಎಂದು ನಂಬಿದ್ದರು.

ಸರ್ಕಾರಿ ಉದ್ಯೋಗದ ಅವಕಾಶವನ್ನೇ ಕೈಚೆಲ್ಲಿದರು!

ನರಸಿಂಹ ಭಟ್ ಅವರಿಗೆ ಸರ್ಕಾರಿ ಉದ್ಯೋಗದ ಅವಕಾಶವೂ ಕೈಬೀಸಿ ಕರೆಯಿತು. ಆದರೆ ಡಾ. ಶಿವರಾಮ್ ಭಟ್ ಅವರನ್ನೇ ಮಾನಸ ಗುರುವಾಗಿ ಸ್ವೀಕರಿಸಿದ್ದರಿಂದ, ಸರ್ಕಾರಿ ಉದ್ಯೋಗದ ಅವಕಾಶವನ್ನು ಕೈಚೆಲ್ಲಿದರು. ಡಾ. ಶಿವರಾಮ ಭಟ್ ಅವರು ಇರುವವರೆಗೂ ಹಾಗೂ ಅವರು ಇಲ್ಲದ ಬಳಿಕವೂ ತನ್ನ ಗುರುವಿನ ಹೆಸರಿನಲ್ಲಿಯೇ ಔಷಧ ನೀಡಿತ್ತಿದ್ದರು ಎನ್ನುವುದು ಕಾಂಪೌಂಡರ್ ಅವರ ವಿಶೇಷತೆ.

 Share: | | | | |


ಮಳೆಗಾಗಿ ಶ್ರೀ‌ಮಹಾಲಿಂಗೇಶ್ವರ ದೇವಸ್ಥಾನದಲ್ಲಿ‌ಪರ್ಜನ್ಯ ಜಪ: ಶಾಸಕರು ಭಾಗಿ

Posted by Vidyamaana on 2024-04-28 20:17:10 |

Share: | | | | |


ಮಳೆಗಾಗಿ ಶ್ರೀ‌ಮಹಾಲಿಂಗೇಶ್ವರ ದೇವಸ್ಥಾನದಲ್ಲಿ‌ಪರ್ಜನ್ಯ ಜಪ: ಶಾಸಕರು ಭಾಗಿ

ಪುತ್ತೂರು: ಮಳೆ ಇಲ್ಲದೆ ಕರಾವಳಿ ಬಿಸಿ ತಾಪದಿಂದ ಕೂಡಿದ್ದು ಜನ‌ಸಂಕಷ್ಡ ಎದುರಿಸುವಂತಾಗಿದ್ದು ಶೀಘ್ರ ಮಳೆ ಪ್ರಾಪ್ತಿಗಾಗಿ ಪುತ್ತೂರಿನ ಶ್ರೀ‌ಮಹಾಲಿಂಗೇಶ್ವರ ದೇವಳದಲ್ಲಿ‌ಶಾಸಕರ ಸೂಚನೆಯಂತೆ ಪರ್ಜನ್ಯ ಜ‌ಪ ನೆರವೇರಿತು. ಜಪ ಕಾರ್ಯಕ್ರಮದಲ್ಲಿ‌ಶಾಸಕರಾದ ಅಶೋಕ್ ರೈಭಾಗವಹಿಸಿ ಮಳೆ ಗಾಗಿ ದೇವರಲ್ಲಿ‌ಪ್ರಾರ್ಥನೆ ಮಾಡಿದರು. ಈ‌ಸಂದರ್ಭದಲ್ಲಿ ಪಂಜಿಗುಡ್ಡೆ ಈಶಗವರಭಟ್,ನ್ಯಾಯವಾದಿ ಜಗನ್ನಿವಾಸ್ ರಾವ್ , ಕೋಡಿಂಬಾಡಿ ಗ್ರಾಪಂ ಉಪಾಧ್ಯಕ್ಷರಾದ ಜಯಪ್ರಕಾಶ್ ಬದಿನಾರ್ ,ರಂಜಿತ್ ಬಂಗೇರ ಮೊದಲಾದವರು ಉಪಸ್ಥಿತರಿದ್ದರು.

ಉಪ್ಪಿನಂಗಡಿ ಮೂಲದ ಟೂರ್ ಏಜೆನ್ಸಿಯಿಂದ ವಂಚನೆ ಆರೋಪ : ಪ್ರಶ್ನಿಸಿದ್ದಕ್ಕೆ ಹಲ್ಲೆ ; ಠಾಣೆಗೆ ದೂರು

Posted by Vidyamaana on 2024-06-30 12:26:53 |

Share: | | | | |


ಉಪ್ಪಿನಂಗಡಿ ಮೂಲದ ಟೂರ್ ಏಜೆನ್ಸಿಯಿಂದ ವಂಚನೆ ಆರೋಪ  : ಪ್ರಶ್ನಿಸಿದ್ದಕ್ಕೆ ಹಲ್ಲೆ ; ಠಾಣೆಗೆ ದೂರು

ಉಪ್ಪಿನಂಗಡಿ ಮೂಲದ ಜಲಾಲಿಯ್ಯ ಅಜ್ಮೀರ್ ಝಿಯಾರತ್ ಟೂರ್‌ ಏಜೆನ್ಸಿ ವಿರುದ್ಧ ವಂಚನೆಯ ಆರೋಪ ಕೇಳಿ ಬಂದಿದ್ದು, ಟೂರ್ ಏಜನ್ಸಿ ಅಜ್ಮೀರ್ ಯಾತ್ರೆಗೆ ಕರೆದುಕೊಂಡು ಹೋಗಿ ಹಣ ವಂಚಿಸಿದೆ ಎಂದು ಯಾತ್ರಾರ್ಥಿ ಕುಟುಂಬವೊಂದು ಬೆಂಗಳೂರಿನ ಪದ್ಮನಾಭನಗರ ಪೊಲೀಸ್‌ ಠಾಣೆಗೆ ದೂರು ನೀಡಿದೆ.

ಉಪ್ಪಿನಂಗಡಿ ಸಮೀಪದ ಕುಪ್ಪೆಟ್ಟಿಯ ಫಾರೂಕ್ ಎಂಬವರಿಗೆ ಸೇರಿದ ಈ ಟೂರ್ ಏಜೆನ್ಸಿ ಮೂಲಕ ಆತೂರು ಮೂಲದ ಮಹಮ್ಮದ್‌ ತ್ವಾಹ ಮತ್ತು ಕುಟುಂಬಸ್ಥರು ಸೇರಿ ಒಟ್ಟು 60 ಯಾತ್ರಿಕರಿದ್ದ ತಂಡ ಅಜ್ಮೀರ್ ಯಾತ್ರೆಗೆ ತೆರಳಿತ್ತು. ಫಾರೂಕ್ ಅವರ ಟೂ‌ರ್ ಏಜೆನ್ಸಿ ಮೂಲಕ ಬೆಂಗಳೂರಿನಿಂದ ಅಜ್ಮೀರ್ ಗೆ ತಂಡ ತೆರಳಿತ್ತು. 60 ಸಾವಿರದ ಪ್ಯಾಕೇಜ್ ಮೂಲಕ ಅಜ್ಮೀರ್ ಯಾತ್ರೆಗೆ ತೆರಳಿದ್ದರು. ಆದರೆ ಅಜ್ಮೀರ್ ಯಾತ್ರೆ ಮುಗಿಸಿ ಹಿಂತಿರುಗುತ್ತಿದ್ದ ವೇಳೆ ಮಹಮ್ಮದ್ ತ್ವಾಹ ಫ್ಯಾಮಿಲಿ ಅವರಲ್ಲಿ ಟೂ‌ರ್ ಏಜೆನ್ಸಿ ಸಿಬ್ಬಂದಿ ಹೆಚ್ಚುವರಿ ಹಣ ಕೇಳಿದ್ದಾರೆ ಎಂದು ಆರೋಪಿಸಿದ್ದಾರೆ.

ಕಡಬ ಕಾಂಗ್ರೆಸ್ ಪಾಳಯದಲ್ಲಿ ಭಿನ್ನಮತ ಸ್ಫೋಟ : ಮುಖಂಡರು ಮತ್ತು ಕಾರ್ಯಕರ್ತರ ನಡುವೆ ನೂಕಾಟ – ತಳ್ಳಾಟ

Posted by Vidyamaana on 2024-03-30 21:21:56 |

Share: | | | | |


ಕಡಬ ಕಾಂಗ್ರೆಸ್ ಪಾಳಯದಲ್ಲಿ ಭಿನ್ನಮತ ಸ್ಫೋಟ : ಮುಖಂಡರು ಮತ್ತು ಕಾರ್ಯಕರ್ತರ ನಡುವೆ ನೂಕಾಟ – ತಳ್ಳಾಟ

ಕಡಬ : ಕಾಂಗ್ರೆಸ್ ಪಾಳಯದಲ್ಲಿ ಭಿನ್ನಮತ ಸ್ಫೋಟಗೊಂಡಿದ್ದು, ನಾಯಕರ ಮತ್ತು ಕಾರ್ಯಕರ್ತರ ನಡುವೆ ವಾಗ್ವಾದ ನಡೆದು, ನೂಕಾಟ – ತಳ್ಳಾಟದವರೆಗೆ ತಲುಪಿದ ಬಗ್ಗೆ ವರದಿಯಾಗಿದೆ.

ಮಾ.7 ಪುತ್ತೂರಿನಲ್ಲಿ ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಯ ಫಲಾನುಭವಿಗಳ ಪುತ್ತೂರು ಸಮಾವೇಶ

Posted by Vidyamaana on 2024-03-06 22:32:01 |

Share: | | | | |


ಮಾ.7 ಪುತ್ತೂರಿನಲ್ಲಿ ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಯ ಫಲಾನುಭವಿಗಳ ಪುತ್ತೂರು ಸಮಾವೇಶ

ಪುತ್ತೂರು: ರಾಜ್ಯ ಸರಕಾರದ ಮಹತ್ವಾಕಾಂಕ್ಷಿಯ ಐದು ಗ್ಯಾರಂಟಿ ಯೋಜನೆಯ ಪುತ್ತೂರು ವಿಧಾನ ಸಭಾ ಕ್ಷೇತ್ರದ ಫಲಾನುಭವಿಗಳ ಸಮಾವೇಶವು ಮಾ.7ರಂದು ಕಿಲ್ಲೆಮೈದಾನದಲ್ಲಿ ನಡೆಯಲಿದೆ ಎಂದು ಶಾಸಕ ಅಶೋಕ್‌ ಕುಮಾರ್ ರೈ ಶಾಸಕರ ಕಚೇರಿಯಲ್ಲಿ ಮಾ.4ರಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.


ರಾಜ್ಯ ಸರಕಾರ ಆಯೋಜಿಸುವ ಫಲಾನುಭವಿಗಳ ಸಮಾವೇಶವು ಇಡೀ ರಾಜ್ಯದಾದ್ಯಂತ ಎಲ್ಲಾ ವಿಧಾನ ಸಭಾ ಕ್ಷೇತ್ರಗಳಲ್ಲಿಯೂ ನಡೆಯಲಿದೆ. ದ.ಕ ಜಿಲ್ಲೆಯಲ್ಲಿ ಮಾ.5ರಿಂದ ಪ್ರಾರಂಭಗೊಂಡು ಮಾ.10ರ ತನಕ ನಡೆಯಲಿದೆ. ಪುತ್ತೂರಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಆಗಮಿಸಲಿದ್ದಾರೆ. ರಾಜ್ಯದ ವಿವಿಧ ಮಂತ್ರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ರವರನ್ನೂ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದ್ದು ಅವರೂ ಭಾಗವಹಿಸುವ ಸಾಧ್ಯತೆಗಳಿವೆ. ಸಮಾವೇಶವು ಬೆಳಿಗ್ಗೆ 11 ಗಂಟೆಗೆ ಆರಂಭವಾಗಲಿದೆ.

ಪುತ್ತೂರು ವಿಧಾನ ಸಭಾ ಕ್ಷೇತ್ರದ ಅಂಗನವಾಡಿ ಕಾರ್ಯಕರ್ತೆಯ ಮೂಲಕ ಮೂಲೆ ಮೂಲೆಗಳಿಂದ ಫಲಾನುಭವಿಗಳು ಆಗಮಿಸಲಿದ್ದು ಸಮಾವೇಶದಲ್ಲಿ ಸುಮಾರು 20,000 ಮಂದಿ ಸೇರುವ ನಿರೀಕ್ಷೆಯಿದೆ.5 ಗ್ಯಾರಂಟಿ ಯೋಜನೆಗಳಲ್ಲಿ ಪುತ್ತೂರು ವಿಧಾನ ಸಭಾ ಕ್ಷೇತ್ರದಲ್ಲಿ ಶಕ್ತಿ ಯೋಜನೆಯ ಮೂಲಕ 81.90ಲಕ್ಷ ಮಂದಿ ಪ್ರಯಾಣಿಸಿದ್ದಾರೆ. ಇದರ ಒಟ್ಟು ಮೊತ್ತ ರೂ.17.88ಕೋಟಿ ಆಗಿದ್ದು ಅದನ್ನು ಸರಕಾರದಿಂದ ಸಾರಿಗೆ ನಿಗಮಕ್ಕೆ ಪಾವತಿಸಲಾಗಿದೆ. ಗೃಹಲಕ್ಷ್ಮೀ ಯೋಜನೆಯಲ್ಲಿ 59,727 ಮಂದಿ, ಗೃಹಜ್ಯೋತಿಯಲ್ಲಿ 30,000 ಮಂದಿ, ಅನ್ನಭಾಗ್ಯದಲ್ಲಿ 24,948 ಮಂದಿ, ಅಂತ್ಯೋದಯದಲ್ಲಿ 2,944 ಹಾಗೂ ಇತ್ತೀಚೆಗೆ ಆರಂಭಗೊಂಡಿರುವ ಯುವನಿಧಿಯಲ್ಲಿ 356 ಮಂದಿ ಫಲಾನುಭವಿಗಳು ಪ್ರಯೋಜನ ಪಡೆದುಕೊಂಡಿದ್ದಾರೆ.

ಗೃಹಲಕ್ಷ್ಮೀ ಯೋಜನೆಯಲ್ಲಿ ಶೇ.98 ಮಂದಿ ಪ್ರಯೋಜನ ಪಡೆದುಕೊಂಡಿದ್ದಾರೆ. ತಾಂತ್ರಿಕ ತೊಂದರೆಗಳಿಂದ ಕೆಲವು ಮಂದಿಗೆ ಬಾಕಿಯಿದೆ. ಫಲಾನುಭವಿಗಳ ಸಮಾವೇಶದಲ್ಲಿ ವಿವಿಧ ಗ್ಯಾರಂಟಿ ಯೋಜನೆಗಳಿಗೆ ಪ್ರತ್ಯೇಕ ಕೌಂಟರ್‌ಗಳನ್ನು ತೆರೆಯಾಗುತ್ತಿದ್ದು ಫಲಾನುಭವಿಗಳಿಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ವಿಚಾರ ವಿಮರ್ಶೆ ಮಾಡಲಾಗುವುದು ಎಂದರು.

ಪುತ್ತೂರು: ಪ್ರಭು ಚರುಂಬುರಿ ಅಂಗಡಿಯಲ್ಲಿ ಅಗ್ನಿ ಅವಘಡ ಅಪಾರ ಹಾನಿ

Posted by Vidyamaana on 2024-03-02 04:26:28 |

Share: | | | | |


ಪುತ್ತೂರು: ಪ್ರಭು ಚರುಂಬುರಿ ಅಂಗಡಿಯಲ್ಲಿ ಅಗ್ನಿ ಅವಘಡ ಅಪಾರ ಹಾನಿ

ಪುತ್ತೂರು : ಇಲ್ಲಿನ ಕೊಂಬೆಟ್ಟಿನಲ್ಲಿರುವ ಜಿ ಎಲ್ ಟ್ರೇಡ್ ಸೆಂಟರ್ ನ ಪ್ರಭು ಚರುಂಬುರಿ ಮಳಿಗೆಯಲ್ಲಿ‌ ಶುಕ್ರವಾರ ತಡರಾತ್ರಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದೆ. ಅಂಗಡಿಯಲ್ಲಿದ್ದ ಸಾಮಾಗ್ರಿಗಳು ಸುಟ್ಟು ಕರಕಲಾಗಿವೆ.

ತಕ್ಷಣ ಸ್ಥಳಕ್ಕೆ ಅಗ್ನಿಶಾಮಕ ದಳ ಆಗಮಿಸಿ ಬೆಂಕಿ ನಂದಿಸಿದೆ. ಅದೃಷ್ಟವಶಾತ್ ಯಾವುದೇ ರೀತಿಯಾದಂತಹ ಪ್ರಾಣಾಪಾಯ ಸಂಭವಿಸಿಲ್ಲ. ಅದರೆ ಘಟನೆಯಿಂದ ತೀವ್ರ ನಷ್ಟವಾಗಿದೆ.

ಸೌದಿ ಅರೇಬಿಯಾದಲಿ ಕಾರು ಅಪಘಾತ; ವಿಟ್ಲ ಮೂಲದ ಯುವಕ ಹಬೀಬ್ ಮೃತ್ಯು

Posted by Vidyamaana on 2023-04-20 20:37:14 |

Share: | | | | |


ಸೌದಿ ಅರೇಬಿಯಾದಲಿ ಕಾರು ಅಪಘಾತ; ವಿಟ್ಲ ಮೂಲದ ಯುವಕ ಹಬೀಬ್ ಮೃತ್ಯು

ವಿಟ್ಲ: ಸೌದಿ ಅರೇಬಿಯಾದಲ್ಲಿ ನಡೆದ ಅಪಘಾತದಲ್ಲಿ ವಿಟ್ಲದ ಯುವಕ ಮೃತಪಟ್ಟ ಘಟನೆ ವರದಿಯಾಗಿದೆ.

ಮುಹಮ್ಮದ್ ಮುಸ್ಲಿಯಾರ್ ಅಲ್ ಖಾಸಿಮಿ ಎಂಬವರ ಹಿರಿಯ ಪುತ್ರ ಹಬೀಬ್ ಉಕ್ಕುಡ ಮೃತ ಯುವಕ ಎಂದು ತಿಳಿದುಬಂದಿದೆ.

ಹಬೀಬ್ ಅವರು ಮೂರು ತಿಂಗಳ ಹಿಂದೆಯಷ್ಟೇ ವಿದೇಶಕ್ಕೆ ಕೆಲಸಕ್ಕೆ ತೆರಳಿದ್ದರು. ನಿಯಂತ್ರಣ ಕಳೆದುಕೊಂಡ ಕಾರು ಕಂಬಕ್ಕೆ ಢಿಕ್ಕಿ ಹೊಡೆದು ರಸ್ತೆಗೆ ಪಲ್ಟಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡ ಹಬೀಬ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.



Leave a Comment: