ವಿವಾಹಿತ ಯುವಕನ ಜತೆ ವಿದ್ಯಾರ್ಥಿನಿ ಲವ್, ಕೆರೆಗೆ ಹಾರಿ ಇಬ್ಬರೂ ಆತ್ಮಹತ್ಯೆ!

ಸುದ್ದಿಗಳು News

Posted by vidyamaana on 2024-07-03 13:36:16 |

Share: | | | | |


ವಿವಾಹಿತ ಯುವಕನ ಜತೆ ವಿದ್ಯಾರ್ಥಿನಿ ಲವ್, ಕೆರೆಗೆ ಹಾರಿ ಇಬ್ಬರೂ ಆತ್ಮಹತ್ಯೆ!

ಬೆಂಗಳೂರು (ಜು.3): ಇಲ್ಲಿನ ಹೊರವಲಯದ ನೈಸ್ ರಸ್ತೆ ಸಮೀಪದ ಕೆರೆಗೆ ಹಾರಿ ಯುವ ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಕಾಲೇಜು ವಿದ್ಯಾರ್ಥಿನಿ ಅಂಜನಾ(20) ಮತ್ತು ಶ್ರೀಕಾಂತ್(25) ಸಾವನ್ನಪ್ಪಿರುವ ದುರ್ದೈವಿಗಳಾಗಿದ್ದಾರೆ. ಜುಲೈ 1ರಂದು ಪ್ರೇಮಿಗಳು ನಾಪತ್ತೆಯಾಗಿದ್ದರು.

ಕಳೆದ ಕೆಲ ವರ್ಷಗಳಿಂದ ಇಬ್ಬರು ಪರಸ್ಪರ ಪ್ರೀತಿಸ್ತಿದ್ದರು. ಆದರೆ ಯುವಜೋಡಿಯ ಪ್ರೀತಿಗೆ ವಿದ್ಯಾರ್ಥಿನಿ ಪೋಷಕರಿಂದ ವಿರೋಧ ವ್ಯಕ್ತವಾಗಿತ್ತು. ವಿದ್ಯಾರ್ಥಿನಿ ತಲಘಟ್ಟಪುರ ಸಮೀಪದ ಅಂಜನಾಪುರ ಬಳಿ ವಾಸವಿದ್ದಳು. ಯುವಕ ಶ್ರೀಕಾಂತ್ ಕೋಣನಕುಂಟೆ ನಿವಾಸಿಯಾಗಿದ್ದ. ಇಬ್ಬರೂ ನಾಪತ್ತೆಯಾಗಿದ್ದರು. ನಾಪತ್ತೆ ಹಿನ್ನಲೆ ಎರಡೂ ಕಡೆಯವರ ಪೋಷಕರು ಕೋಣನಕುಂಟೆ ಮತ್ತು ತಲಘಟ್ಟಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಇದೀಗ ಇಬ್ಬರೂ ಶವವಾಗಿ ಪತ್ತೆಯಾಗಿದ್ದಾರೆ. ನಮ್ಮ ಸಾವಿಗೆ ನಾವೇ ಕಾರಣ ಎಂದು ಡೆತ್ ನೋಟ್ ಬರೆದಿಟ್ಟು ಜೋಡಿ ಆತ್ಮಹತ್ಯೆ ಮಾಡಿಕೊಂಡಿದೆ.

ಮದುವೆಯಾಗಿದ್ದ ಶ್ರೀಕಾಂತ್!

ಶ್ರೀಕಾಂತ್ ಗೆ ಬೇರೊಬ್ಬರ ಜೊತೆಗೆ ವಿವಾಹವಾಗಿದೆ. ಆದರೂ ಅಂಜನಾಳನ್ನ ಪ್ರೀತಿ ಮಾಡ್ತಿದ್ದ. ಇಬ್ಬರು ಒಟ್ಟಿಗೆ ಬದುಕಲು ಅವಕಾಶ ಇಲ್ಲ ಎಂದು ಸಾಯೋ ನಿರ್ಧಾರ ಮಾಡಿದ್ದಾರೆ. ಮೊದಲು ಶ್ರೀಕಾಂತ್ ಮೃತದೇಹ ಕೆರೆಯಲ್ಲಿ ಕಾಣಿಸಿದೆ. ಆತನನ್ನ ಮೇಲೆತ್ತಿದ್ದ ನಂತರ ಅಂಜನಾ ಮೃತದೇಹ ಕೂಡ ಮೇಲೆ ಬಂದಿದೆ. ಅಂಜನಾ ಮೃತದೇಹದ ಬಗ್ಗೆ ಪೊಲೀಸರಿಗೂ ಮಾಹಿತಿ ಇರುದಿಲ್ಲ. ಇಬ್ಬರು ಕೈಗೆ ಹಗ್ಗ ಕಟ್ಟಿಕೊಂಡಿದ್ದರಿಂದ ಇಬ್ಬರ ಮೃತದೇಹ ಒಟ್ಟಿಗೆ ಸಿಕ್ಕಿದೆ. ಮೊಬೈಲ್ ನಲ್ಲಿ ವೀಡಿಯೊ ಮಾಡಿರುವ ಯುವತಿ ಅಂಜನಾ ಅದನ್ನ ಆಟೋದಲ್ಲಿ ಬಿಟ್ಟು ಶ್ರೀಕಾಂತ್ ಜೊತೆಗೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ನಮ್ಮ ಸಾವಿಗೆ ಯಾರು ಕಾರಣ ಅಲ್ಲ. ನಾವಿಬ್ಬರು ಒಟ್ಟಿಗೆ ಬದುಕಲು ಆಗಲ್ಲ. ಹಾಗಾಗಿ ಸಾಯ್ತಿದ್ದೇವೆ ಎಂದು ವಿಡಿಯೋ ಮಾಡಿದ್ದಾಳೆ. ಮೊಬೈಲ್ ವಶಕ್ಕೆ ಪಡೆದುಕೊಂಡಿರೊ ತಲಘಟ್ಟಪುರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

 Share: | | | | |


ಶಾಸಕರ ಇಂದಿನ ಕಾರ್ಯಕ್ರಮ ಜು 30

Posted by Vidyamaana on 2023-07-29 23:18:55 |

Share: | | | | |


ಶಾಸಕರ ಇಂದಿನ ಕಾರ್ಯಕ್ರಮ ಜು 30

ಪುತ್ತೂರು ಶಾಸಕ ಅಶೋಕ್ ಕುಮಾರ್ ಅವರು ಜುಲೈ 30 ರಂದು

💥 ಬೆಳಿಗ್ಗೆ 9 ಗಂಟೆಗಡ ಅಜ್ಜಿನಡ್ಕದಲ್ಲಿ ರಕ್ತದಾನ‌ ಶಿಬಿರ

💥10 ಗಂಟೆಗೆ ಟೌನ್ ಬ್ಯಾಂಕ್ ಸಭಾಂಗಣದಲ್ಲಿ ಟೈಲರ್ಸ್ ಅಸೋಸಿಯೇಶನ್ ಮಹಾಸಭೆ,ಪ್ರತಿಭಾ ಪುರಸ್ಕಾರ

💥12 ಕ್ಕೆ ಮರಾಟಿ ಯುವ ವೇದಿಕೆ ಕೊಂಬೆಟ್ಟು ಇದರ ವತಿಯಿಂದ ಆರ್ಯಾಪು ಮೇಲ್ಮಜಲು ನಲ್ಲಿ ಕೆಸರುಗದ್ದೆ ಕ್ರೀಡಾ ಕೂಟ ಕಾರ್ಯಕ್ರಮ

💥2 ಗಂಟೆಗೆ ಕೋಡಿಂಬಾಡಿ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಸನ್ಮಾನ ಕಾರ್ಯಕ್ರಮ

💥ಸಂಜೆ ಸಾಜದಲ್ಲಿ ಕೆಸರುಡೊಂಜಿ ದಿನ

💥ಸಂಜೆ 6 ಕ್ಕೆ ಪಾಣಾಜೆ ರಣಮಂಗಳ ದೇವಸ್ಥಾನದಲ್ಲಿ ಕಾರ್ತಿಕ ಪೂಜೆಯ ಕಾರ್ಯಕ್ರಮ ದಲ್ಲಿಭಾಗವಹಿಸಲಿದ್ದಾರೆ

ಮುದ್ರಾಂಕ ಶುಲ್ಕ ಐದು ಪಟ್ಟು ಭಾರಿ ಹೆಚ್ಚಳ: ಸರ್ಕಾರದ ಆದಾಯ 2000 ಕೋಟಿ ರು.ವರೆಗೂ ಹೆಚ್ಚಳ ನಿರೀಕ್ಷೆ

Posted by Vidyamaana on 2024-02-09 17:24:43 |

Share: | | | | |


ಮುದ್ರಾಂಕ ಶುಲ್ಕ ಐದು ಪಟ್ಟು ಭಾರಿ ಹೆಚ್ಚಳ: ಸರ್ಕಾರದ ಆದಾಯ 2000 ಕೋಟಿ ರು.ವರೆಗೂ ಹೆಚ್ಚಳ ನಿರೀಕ್ಷೆ

ಬೆಂಗಳೂರು (ಫೆ.09): ವಿಭಜನೆ, ದತ್ತು ಪತ್ರ, ಅಫಿಡವಿಟ್, ಕರಾರು ಪತ್ರದ ರದ್ದತಿ, ಕಂಪನಿಗಳ ಪುನರ್‌ನಿರ್ಮಾಣ ಅಥವಾ ವಿಭಜನೆ, ಅಡಮಾನದ ಮರುಹಂಚಿಕೆ ಸೇರಿದಂತೆ ಸರ್ಕಾರ ಒಟ್ಟು 25ಕ್ಕೂ ಹೆಚ್ಚು ರೀತಿಯ ದಾಖಲೆಗಳ ಮುದ್ರಾಂಕ ಶುಲ್ಕವನ್ನು ರಾಜ್ಯ ಶೇ.200ರಿಂದ ಶೇ.500ರವರೆಗೆ ಹೆಚ್ಚಳ ಮಾಡಿ ಅಧಿಕೃತ ರಾಜ್ಯ ಪತ್ರ ಹೊರಡಿಸಿದೆ.ಇದರಿಂದ ವಿವಿಧ ದಾಖಲೆಗಳಿಗೆ ಮುದ್ರಾಂಕ ಶುಲ್ಕ ಎರಡು ಪಟ್ಟು, ಇನ್ನು ಕೆಲ ದಾಖಲೆಗಳಿಗೆ ಐದು ಪಟ್ಟು ಹೆಚ್ಚಳವಾಗಲಿದೆ. ಅತಿ ಹೆಚ್ಚು ಅಂದರೆ ನಗರ ಪ್ರದೇಶಗಳ ಆಸ್ತಿ ವಿಭಜನಾ ಪತ್ರಗಳಿಗೆ 1000 ರು. ಇದ್ದ ಮುದ್ರಾಂಕ ಶುಲ್ಕವನ್ನು ಪ್ರತಿ ಷೇರಿಗೆ 5,000 ರು.ಗೆ, ನಗರ ಹೊರಗಿರುವ ಆಸ್ತಿಗಳಿಗೆ 500 ರು. ಇದ್ದ ಶುಲ್ಕ ಪ್ರತಿ ಷೇರಿಗೆ 3,000 ರು.ಗೆ ಹೆಚ್ಚಿಸಲಾಗಿದೆ.


ಈ ಸಂಬಂಧ ಕಳೆದ ಡಿಸೆಂಬರ್‌ನಲ್ಲಿ ಬೆಳಗಾವಿಯಲ್ಲಿ ನಡೆದ ವಿಧಾನಮಂಡಲ ಚಳಿಗಾಲದ ಅಧಿವೇಶನದಲ್ಲಿ ಕರ್ನಾಟಕ ಸ್ಟ್ಯಾಂಪ್ ತಿದ್ದುಪಡಿ ಮಸೂದೆ 2023 ಅನ್ನು ಮಂಡಿಸಿ ಸರ್ಕಾರ ಅಂಗೀಕಾರ ಪಡೆದಿತ್ತು. ಇದೇ ಫೆಬ್ರವರಿ 3 ರಂದು ರಾಜ್ಯಪಾಲರು ಮಸೂದೆಗೆ ಒಪ್ಪಿಗೆ ನೀಡಿದ್ದು, ಅದೇ ದಿನ ಹೊಸ ದರಗಳ ಗೆಜೆಟ್ ಅಧಿಸೂಚನೆ ಹೊರಡಿಸಲಾಗಿದೆ. ಇದರಿಂದ ಸರ್ಕಾರಕ್ಕೆ ಮುದ್ರಾಂಕ ಶುಲ್ಕ ಸಂಗ್ರಹದಿಂದ ಬರುವ ಆದಾಯ ಕನಿಷ್ಠ 1000 ದಿಂದ 2000 ಕೋಟಿ ರು.ಗಳವರೆಗೆ ಹೆಚ್ಚಳವಾಗುವ ನಿರೀಕ್ಷೆ ಇದೆ. 2022-2023ರಲ್ಲಿರಾಜ್ಯದಲ್ಲಿ ಮುದ್ರಾಂಕ ಶುಲ್ಕ ಸಂಗ್ರಹವು ಸುಮಾರು 2,027 ಕೋಟಿ ರು.ಗಳಷ್ಟಿತ್ತು. ಇನ್ನು ಮುಂದೆ ಇದು ಸುಮಾರು 3,000 ಕೋಟಿ ರು. ನಿಂದ 4,000 ಕೋಟಿ ರು.ಗಳಿಗೆ ಹೆಚ್ಚುವ ನಿರೀಕ್ಷೆ ಮಾಡಲಾಗಿದೆ. ಯಾವ ದರ ಎಷ್ಟು ಹೆಚ್ಚಳ?: ರಾಜ್ಯ ಪತ್ರದಲ್ಲಿ ಪ್ರಕಟಿತ ತಿದ್ದುಪಡಿ ದರದ ಪ್ರಕಾರ, ದತ್ತು ಪತ್ರಗಳ ಮೇಲಿನ ಮುದ್ರಾಂಕ ಶುಲ್ಕ 500 ರು. ನಿಂದ 1,000 ರು.ಗೆ ಏರಿಕೆಯಾಗಿದೆ. ಸದ್ಯ ವಿವಿಧ ಅಫಿಡವಿಟ್‌ಗಳಿಗೆ 20 ರು. ಇರುವ ಮುದ್ರಾಂಕ ಶುಲ್ಕವನ್ನು 100 ರು. ವರೆಗೆ ಹೆಚ್ಚಿಸಲಾಗಿದೆ. ಪವರ್‌ಆಫ್ ಅಟಾರ್ನಿಗೆ 100 ರು. ಇದ್ದ ಮುದ್ರಣ ಶುಲ್ಕ 500 ರು.ಗೆ, ಐದಕ್ಕಿಂತ ಹೆಚ್ಚು ಮಂದಿ, ಆದರೆ 10ಕ್ಕಿಂತ ಕಡಿಮೆ ವ್ಯಕ್ತಿಗಳು ಜಂಟಿ ಯಾಗಿ ಪವರ್‌ಆಫ್ ಅಟಾರ್ನಿ ನೀಡುವುದಾದರೆ 200 ರು. ಬದಲು ಇನ್ನು ಮುಂದೆ 1,000 ರು. ಶುಲ್ಕ ಪಾವತಿಸಬೇಕು. 


ಷೇರಿಗೆ 5,000 ರು.ಗೆ ಹೆಚ್ಚಿಸಲಾಗಿದೆ. ನಗರ ಮಿತಿಯಿಂದ ಹೊರಗಿರುವ ಆಸ್ತಿಗಳಿಗೆ ಪ್ರಸ್ತುತ ಇರುವ 500 ರು. ಬದಲು ಪ್ರತಿ ಷೇರಿಗೆ 3,000 ರು. ಶುಲ್ಕಪಾವತಿಸಬೇಕು. ಕೃಷಿ ಆಸ್ತಿಗಳನ್ನು ವಿಭಜಿಸಲು ಪ್ರತಿ ಷೇರಿಗೆ ಇದ್ದ 250 ರು.ಗಳನ್ನು ಈಗ 1,000 ರು.ಗೆ ಹೆಚ್ಚಿಸಲಾಗಿದೆಇನ್ನು, ವಿಚ್ಛೇದನ ಪತ್ರಗಳ ಮೇಲಿನ ಸ್ಟಾಂಪ್ ಡ್ಯೂಟಿ ಕೂಡ 100 ರು. ರಿಂದ 500 ರು.ಗೆ ಹೆಚ್ಚಾಗಿದೆ. ಪ್ರಮಾಣೀಕೃತ ಪ್ರತಿಗಳ ಶುಲ್ಕವನ್ನು 5 ರು.ರಿಂದ20 ರು.ಗೆ, ಸದ್ಯ ವಿವಿಧ ಅಫಿಡವಿಟ್ಟುಗಳಿಗೆ 20 ರು. ಇದ್ದ ಮುದ್ರಾಂಕ ಶುಲ್ಕವನ್ನು 100 ರು.ಗಳ ನಗರ ಪ್ರದೇಶಗಳ ಆಸ್ತಿ ವಿಭಜನಾ ಪತ್ರಗಳಿಗೆ ವರೆಗೆ ಹೆಚ್ಚಿಸಲಾಗಿದೆ. ಅದೇ ರೀತಿ ಟ್ರಸ್ಟ್‌ಗಳನ್ನು 1000 ರು. ಇದ್ದ ಮುದ್ರಾಂಕ ಶುಲ್ಕವನ್ನು ಪ್ರತಿ ನೋಂದಾಯಿಸುವುದು, ಕಂಪನಿಗಳ ವಿಲೀನ ಮತ್ತಿತರ ಪ್ರಕ್ರಿಯೆಗಳ ಶುಲ್ಕದಲ್ಲೂ ಸಹ ಹೆಚ್ಚಳವಾಗಲಿದೆ. ಕಂಪನಿಗಳ ವಿಲೀನವನ್ನು ಒಳಗೊಂಡಿರುವ ಸಾಗಣೆ ಪತ್ರಗಳಲ್ಲಿ ನಿಗದಿತ ಮುದ್ರಾಂಕ ಶುಲ್ಕವು ಆಸ್ತಿಯ ಮಾರುಕಟ್ಟೆ ಮೌಲ್ಯದ ಮೇಲೆ 3 ಪ್ರತಿಶತ ಅಥವಾ ಷೇರುಗಳ ಒಟ್ಟು ಮೌಲ್ಯದ 1 ಪ್ರತಿಶತಕ್ಕೆ ಸಮನಾಗಿರುತ್ತದೆ. ಇದನ್ನು ಆಸ್ತಿಯ ಮಾರುಕಟ್ಟೆ ಮೌಲ್ಯದ ಶೇ.5 ಮತ್ತು ಷೇರುಗಳ ಮೌಲ್ಯದ ಶೇ.5 ಹೆಚ್ಚಿಸಲು ಮಸೂದೆ ಪ್ರಸ್ತಾಪಿಸುತ್ತದೆ. ಬಿಲ್‌ನ ಆಪ್ಲೆಕ್ಸ್‌ ಗಳು ಮತ್ತು ಕಾರಣಗಳ ಹೇಳಿಕೆಯಪ್ರಕಾರ, ಬ್ಯಾಂಕ್ ಗ್ಯಾರಂಟಿಗಳ ಮೇಲೆ ಮುದ್ರಾಂಕ ಶುಲ್ಕವನ್ನು ವಿಧಿಸುವಬಗ್ಗೆ ಪ್ರತ್ಯೇಕನಿಬಂಧನೆಯನ್ನು ಪ್ರಸ್ತಾಪಿಸಲಾಗಿದೆ.

ಸಂತ ಫಿಲೋಮಿನಾ ಕಾಲೇಜಿನ ವಿದ್ಯಾರ್ಥಿ ಸಂಘದ ಉದ್ಘಾಟನೆ

Posted by Vidyamaana on 2022-12-15 14:18:07 |

Share: | | | | |


ಸಂತ ಫಿಲೋಮಿನಾ ಕಾಲೇಜಿನ ವಿದ್ಯಾರ್ಥಿ ಸಂಘದ ಉದ್ಘಾಟನೆ

ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನ ೨೦೨೨-೨೩ನೇ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ಸಂಘದ ಉದ್ಘಾಟನೆ ಕಾಲೇಜಿನ ಬೆಳ್ಳಿಹಬ್ಬ ಸಭಾಭವನದಲ್ಲಿ ಉದ್ಘಾಟನೆಗೊಂಡಿತು.

ಉಪ್ಪಿನಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ. ಸುಬ್ಬಪ್ಪ ಕೈಕಂಬ ಉದ್ಘಾಟಿಸಿ ಮಾತನಾಡಿ, ಒಂದು ಹಣತೆಯಿಂದ ಸಾವಿರಾರು ಹಣತೆಗಳನ್ನು ಹಚ್ಚಬಹುದು. ಹಾಗೆಯೇ ನಮ್ಮ ಜ್ಞಾನವನ್ನು ಇತರರೊಂದಿಗೆ ಹಂಚಿದಲ್ಲಿ ಮಾತ್ರ ಅದು ವೃದ್ಧಿಯಾಗುತ್ತದೆ. ಜ್ಞಾನವನ್ನು ತಲೆಯಲ್ಲಿಟ್ಟು ಮೆರೆಯದೆ ಹೃದಯದಲ್ಲಿಟ್ಟು ವಿನಮ್ರವಾಗಿ ನಡೆದುಕೊಂಡರೆ ಜೀವನ ಸಾರ್ಥಕವಾಗುವುದು. ನಾಯಕರು ಅನುಯಾಯಿಗಳನ್ನು ಸೃಷ್ಠಿಸುವ ಬದಲು ನಾಯಕರನ್ನು ಸೃಷ್ಠಿಸಬೇಕು. ವ್ಯಕ್ತಿಗಳನ್ನು ಹಾಗೂ ವ್ಯಕ್ತಿತ್ವಗಳನ್ನು ಉಳಿಸಿ ಬೆಳೆಸುವಲ್ಲಿ ವಿದ್ಯಾಸಂಸ್ಥೆಗಳು ಮಹತ್ತರ ಪಾತ್ರ ವಹಿಸುತ್ತವೆ. ಯುವಕರು ಒಂದು ಹೆಜ್ಜೆ ಮುಂದೆ ಇಡುವ ಮುನ್ನ ಇಟ್ಟ ಹೆಜ್ಜೆ ಸರಿಯಾಗಿದೆಯೇ ಎಂದು ಪರಾಮರ್ಶಿಸಬೇಕು. ಬದುಕಿನ ಜಂಜಾಟಗಳ ನಡುವೆ ನಮಗೆ ಬರಬಹುದಾದ ಅದ್ಭುತ ಅವಕಾಶಗಳನ್ನು ಕಳೆದುಕೊಳ್ಳಬಾರದು ಎಂದು ಹೇಳಿದರು.

ಅಧ್ಯ÷ಕ್ಷತೆ ವಹಿಸಿದ್ದ ಕಾಲೇಜಿನ ಸಂಚಾಲಕ ಜೆರೋಮ್ ಲಾರೆನ್ಸ್ ಮಸ್ಕರೇಞಸ್, ವಿದ್ಯಾರ್ಥಿ ಸಮೂಹಕ್ಕೆ ಒಳಿತನ್ನು ಮಾಡಲು ನಾಯಕರನ್ನು ಚುನಾಯಿಸಲಾಗಿದೆ. ನೀವು ಯಾರಾದರೊಬ್ಬ ವ್ಯಕ್ತಿಯನ್ನು ಪ್ರೀತಿಸಿದಲ್ಲಿ ಅವರ ಒಳಿತು ಹಾಗೂ ಸಂತೋಷಕ್ಕಾಗಿ ಸದಾ ಶ್ರಮಿಸುತ್ತೀರಿ. ನಿಮ್ಮ ಹೆತ್ತವರನ್ನು ಪ್ರೀತಿಸಿದಂತೆಯೇ ಕಲಿತ ವಿದ್ಯಾಸಂಸ್ಥೆಯನ್ನೂ ಪ್ರೀತಿಸಿರಿ. ನಾಯಕರು ತಮ್ಮ ಜವಾಬ್ದಾರಿಗಳನ್ನು ಪ್ರೀತಿಯಿಂದಲೇ ನಿರ್ವಹಿಸಿದಲ್ಲಿ ಸಂಸ್ಥೆಯನ್ನು ಸುಲಭವಾಗಿ ಮುನ್ನಡೆಸಬಹುದಾಗಿದೆ ಎಂದರು.

ಕಾಲೇಜಿನ ಪ್ರಾಂಶುಪಾಲ ಡಾ. ಆಂಟನಿ ಪ್ರಕಾಶ್ ಮೊಂತೆರೋ ಅವರು ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಮಾಯ್ ದೆ ದೇವುಸ್ ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ಮೌರಿಸ್ ಮಸ್ಕರೇಞಸ್, ವಿದ್ಯಾರ್ಥಿ ಸಂಘದ, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ, ಹಿರಿಯವಿದ್ಯಾರ್ಥಿ ಸಂಘದ ಅಧ್ಯಕ್ಷ ಎ. ಜಗಜೀವನ್ ದಾಸ್ ರೈ ಶುಭಹಾರೈಸಿದರು. ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಅಶೋಕ್ ರಾಯನ್ ಕ್ರಾಸ್ತಾ, ಸಂತ ಫಿಲೋಮಿನಾ ಪ್ರೌಢಶಾಲಾ ಮುಖ್ಯಶಿಕ್ಷಕಿ ಕಾರ್ಮಿನ್ ಪಾಯಸ್, ಕಾಲೇಜಿನ ಆಡಳಿತ ಮಂಡಳಿ ಸದಸ್ಯರಾದ ವಿ.ಜೆ. ಫೆರ್ನಾಂಡಿಸ್, ಕ್ಸೇವಿಯರ್ ಡಿಸೋಜ ಉಪಸ್ಥಿತರಿದ್ದರು.

ಕಾಲೇಜಿನ ಲಲಿತ ಕಲಾ ಸಂಘದ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ವಿದ್ಯಾರ್ಥಿ ಸಂಘದ ನಾಯಕ ಮಹಮ್ಮದ್ ಆಶಿಕ್ ಸ್ವಾಗತಿಸಿದರು. ಕಾರ್ಯದರ್ಶಿ ಅನುಶ್ರೀ ಅತಿಥಿಗಳನ್ನು ಪರಿಚಯಿಸಿದರು. ತೃತೀಯ ಬಿಸಿಎ ವಿದ್ಯಾರ್ಥಿ ಜೋನ್ ವಿಸ್ಟನ್ ಟೈಟಸ್ ಡಯಾಸ್ ಅತಿಥಿಗಳನ್ನು ಸ್ವಾಗತಿಸಿದರು. ಜತೆ ಕಾರ್ಯದರ್ಶಿ ಶಿವಾನಿ ವಂದಿಸಿದರು. ತೃತೀಯ ಬಿಎಸ್ಸಿ ವಿದ್ಯಾರ್ಥಿ ನಿರಕ್ಷಾ ಅಂಚನ್ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿಗಳಾದ ಡಾ. ಚಂದ್ರಶೇಖರ್ ಕೆ., ಭಾರತಿ ಎಸ್. ರೈ ಉಪಸ್ಥಿತರಿದ್ದರು.

ದಿನ ರೀಲ್ಸ್‌ ಮಾಡುತ್ತಿದ್ದಕ್ಕೆ ಪತ್ನಿ,ಮಗುವನ್ನು ಕೊಂದು ದರೋಡೆ ಕಥೆ ಕಟ್ಟಿದ ಪತಿ

Posted by Vidyamaana on 2024-01-11 16:48:05 |

Share: | | | | |


ದಿನ ರೀಲ್ಸ್‌ ಮಾಡುತ್ತಿದ್ದಕ್ಕೆ ಪತ್ನಿ,ಮಗುವನ್ನು ಕೊಂದು ದರೋಡೆ ಕಥೆ ಕಟ್ಟಿದ ಪತಿ

ಲಕ್ನೋ:  ವ್ಯಕ್ತಿಯೊಬ್ಬ ತನ್ನ ಪತಿ, ಮಗುವನ್ನು ಕೊಂದು ದರೋಡೆಯ ನಾಟಕವಾಡಿ, ಪೊಲೀಸರ ಕೈಗೆ ಸಿಕ್ಕಿಬಿದ್ದಿರುವ ಘಟನೆ ಉತ್ತರ ಪ್ರದೇಶದ ಲಲಿತ್‌ ಪುರದಲಿ ನಡೆದಿದೆ.


ಆರೋಪಿಯನ್ನು ನೀರಜ್ ಕುಶ್ವಾಹ ಎಂದು ಗುರುತಿಸಲಾಗಿದ್ದು, ಲಲಿತ್‌ಪುರದ ಸದರ್ ಕೊಟ್ವಾಲಿ ಪ್ರದೇಶದ ಚಂದಮಾರಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಘಟನೆ ವಿವರ:

ರಾತ್ರಿ 1.30ರ ವೇಳೆಗೆ 6 ಮಂದಿ ದುಷ್ಕರ್ಮಿಗಳು ನುಗ್ಗಿ ಪತ್ನಿ ಹಾಗೂ ಮಗಳನ್ನು ಕೊಂದು ನನ್ನ ಬಾಯಿಗೆ ಸಾಕ್ಸ್ ತುರುಕಿ ನಗದು, ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ ಎಂದು ಪೊಲೀಸರಿಗೆ ನೀರಜ್ ಕುಶ್ವಾಹ ಮಾಹಿತಿ ಕೊಟ್ಟಿದ್ದಾರೆ. ಗಾಯದಿಂದ ಆಸ್ಪತ್ರೆಗೆ ದಾಖಲಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.ಆದರೆ ಪೊಲೀಸರು ನೀರಜ್‌ ಅವರ ಮಾತುಗಳನ್ನು ನಂಬದೆ, ಆತನಲ್ಲೇ ಮತ್ತಷ್ಟು ಮಾಹಿತಿಯನ್ನು ಕೇಳಿ ವಿಚಾರಿಸಿದ್ದಾರೆ. ತೀವ್ರ ವಿಚಾರಣೆ ವೇಳೆ ಘಟನೆಯ ಬಗ್ಗತೆ ಸತ್ಯ ಬಾಯಿ ಬಿಟ್ಟಿದ್ದಾನೆ.


ಆಕೆ ಸುಂದರವಾಗಿದ್ದಳು.. ಆದರೆ ಇಡೀ ದಿನ ರೀಲ್ಸ್‌ ಮಾಡುತ್ತಿದ್ದಳು.. ವಿಚಾರಣೆ ವೇಳೆ ಪೊಲೀಸರಲ್ಲಿ ತಾನೇ ತನ್ನ 22 ವರ್ಷದ ಪತ್ನಿ ಹಾಗೂ 1 ವರ್ಷದ ಮಗುವನ್ನು ಕೊಲೆಗೈದಿದ್ದಾನೆ ಎನ್ನುವ ವಿಚಾರವನ್ನು ಹೇಳಿದ್ದಾನೆ.

“ನನ್ನ ಪತ್ನಿ ಸುಂದರವಾಗಿದ್ದಳು, ಆದರೆ ಆಕೆ ಇಡೀ ದಿನ ರೀಲ್ಸ್‌ ಮಾಡುತ್ತಿದ್ದಳು. ಸೋಶಿಯಲ್‌ ಮೀಡಿಯಾದಲ್ಲಿ ವ್ಯಕ್ತಿಗಳ ಜೊತೆ ಮಾತನಾಡುತ್ತಿದ್ದಳು. ಆಕೆಯನ್ನು ನಾನು ಬಿಡುವ ಯೋಚನೆಯಲ್ಲಿದ್ದೆ. ಆಕೆಯನ್ನು ಬಿಟ್ಟು ಅತ್ತಿಗೆಯನ್ನು ಮದುವೆ ಆಗುವವನಿದ್ದೆ. ಆದರೆ ಇದಕ್ಕೆ ಪತ್ನಿ ಒಪ್ಪಿಗೆ ನೀಡಿಲ್ಲ. ಈ ಕಾರಣದಿಂದ ನಾನು ಆಕೆ ಹಾಗೂ ಮಗಳನ್ನು ಕ್ರಿಕೆಟ್‌ ಬ್ಯಾಟ್‌ ನಿಂದ ಹಲ್ಲೆ ಮಾಡಿ ಕೊಲೆ ಮಾಡಿದೆ” ಎಂದು ಪೊಲೀಸರ ಮುಂದೆ ನೀರಜ್‌ ಹೇಳಿದ್ದಾನೆ.

ಆರೋಪಿಯು ದರೋಡೆ ಆಗಿದೆ ಎನ್ನುವುದನ್ನು ಸಾಬೀತು ಮಾಡಲು ತಾನೇ ಮನೆಯ ಚಿನ್ನಾಭರಣಗಳನ್ನು ತೆಗೆದಿಟ್ಟು, ಮನೆಯ ಸಾಮಾಗ್ರಿಗಳನ್ನು ಆಚೆ ಇಚೆ ಮಾಡಿದ್ದಾನೆ. ಇದಲ್ಲದೆ ನಕಲಿ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ಕ್ರಿಕೆಟ್ ಬ್ಯಾನರ್ ಕಟ್ಟುತ್ತಿದ್ದ ಯುವಕನಿಗೆ ವಿದ್ಯುತ್ ಶಾಕ್ ಮೂರ್ನಾಡಿನ ಆರಿಫ್ ದುರ್ಮರಣ!

Posted by Vidyamaana on 2024-05-11 13:39:56 |

Share: | | | | |


ಕ್ರಿಕೆಟ್ ಬ್ಯಾನರ್ ಕಟ್ಟುತ್ತಿದ್ದ ಯುವಕನಿಗೆ ವಿದ್ಯುತ್ ಶಾಕ್ ಮೂರ್ನಾಡಿನ ಆರಿಫ್ ದುರ್ಮರಣ!

ಮಡಿಕೇರಿ: ಆಕಸ್ಮಿಕವಾಗಿ ವಿದ್ಯುತ್ ತಂತಿ ತಗುಲಿ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಮೂರ್ನಾಡು ಪಟ್ಟಣದಲ್ಲಿ ನಡೆದಿದೆ

ಶುಕ್ರವಾರ ರಾತ್ರಿ ಈ ಘಟನೆ ನಡೆದಿದ್ದು, ಮೂರ್ನಾಡಿನ ಆರಿಫ್ (34) ಮೃತ ದುರ್ದೈವಿ.

ಪುತ್ತೂರಿನ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಚುನಾವಣಾ ಕಛೇರಿ ಉದ್ಘಾಟನೆ.

Posted by Vidyamaana on 2023-04-17 19:58:30 |

Share: | | | | |


ಪುತ್ತೂರಿನ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಚುನಾವಣಾ ಕಛೇರಿ ಉದ್ಘಾಟನೆ.

ಪುತ್ತೂರು: ಪುತ್ತೂರು ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಆಯ್ಕೆಯಾಗಿರುವ ಅಶೋಕ್ ಕುಮಾರ್ ರೈ ಕೋಡಿಂಬಾಡಿಯವರ ಚುನಾವಣಾ ಕಚೇರಿ ಎ.17ರಂದು ಉದ್ಘಾಟನೆಗೊಂಡಿತ್ತು.ದರ್ಬೆಯ ಆರ್‌ಇಬಿ ಎಂಕೇವ್ ಕಟ್ಟಡದಲ್ಲಿರುವ ಈ ಕಛೇರಿಯಲ್ಲಿ ಅರ್ಚಕ ಹರಿಪ್ರಸಾದ್ ಬನಾರಿಯವರ ನೇತೃತ್ವದಲ್ಲಿ ಗಣಪತಿ ಹವನ, ಪೂಜಾ ವಿಧಿವಿಧಾನಗಳು ನೆರವೇರಿತು. ಬಳಿಕ ಮಾಜಿ ಶಾಸಕಿ ಶಕುಂತಳಾ ಟಿ ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ ವಿಶ್ವನಾಥ ರೈ, ವಿಟ್ಲ- ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ರಾಜಾರಾಮ ಕೆ.ಬಿ, ಹಿರಿಯರಾದ ವಲೇರಿಯನ್ ಡಯಾಸ್ ಮೊದಲಾದವರು ದೀಪ ಬೆಳಗಿಸಿ ಕಛೇರಿಯನ್ನು ಉದ್ಘಾಟಿಸಿದರು.ಬಳಿಕ ಮಾತನಾಡಿದ ಮಾಜಿ ಶಾಸಕಿ ಶಕುಂತಳಾ ಟಿ.ಶೆಟ್ಟಿ ಪುತ್ತೂರು ಮಹಾಲಿಂಗೇಶ್ವರ ದೇವರ ರಥೋತ್ಸವದ ಸಂದರ್ಭದಲ್ಲಿಯೇ ಅಶೋಕ್ ರೈಯವರ ಪಕ್ಷದ ಕಚೇರಿಯು ಉದ್ಘಾಟನೆಗೊಳ್ಳುತ್ತಿದ್ದು ಪುತ್ತೂರಿನಲ್ಲಿ ಹಾಗೂ ರಾಜ್ಯದಲ್ಲಿ ಪಕ್ಷದ ತೇರು ಎಳೆಯುವಂತಾಗಲಿ ಎಂದರು.ಪುತ್ತೂರಿನಲ್ಲಿ 14 ಮಂದಿ ಆಕಾಂಕ್ಷಿಯಾಗಿದ್ದರು ಅವರವರ ಅಭಿಮಾನದಲ್ಲಿ ಹಲವು ಮಂದಿಯಿದ್ದರು. ಆವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಯಾರ ಮನಸ್ಸಿಗೂ ನೋವಾಗದಂತೆ ಕೆಲಸಮಾಡಬೇಕು ಎಂದು ಶುಭ ಹಾರೈಸಿದರು.

ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ ವಿಶ್ವನಾಥ ರೈ ಮಾತನಾಡಿ, ಪಕ್ಷದ ಕಾರ್ಯಕರ್ತರು ಪ್ರತಿಯೊಬ್ಬರೂ ನಾನೇ ಅಭ್ಯರ್ಥಿ ಎಂಬ ಭಾವನೆಯೊಂದಿಗೆ ಚುನಾವಣಾ ಹೋರಾಟದಲ್ಲಿ ಭಾಗಿಗಳಾಗುವ ಮೂಲಕ ಪಕ್ಷದ ಗೆಲುವಿಗೆ ಕಾರಣರಾಗಬೇಕು. ಪುತ್ತೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲುವುದು ಮಾತ್ರವಲ್ಲದೆ ರಾಜ್ಯದಲ್ಲಿಯೂ ಬದಲಾವಣೆಯನ್ನು ತರುವಂತಾಗಬೇಕು. ಕಾಂಗ್ರೆಸ್ ಪಕ್ಷದ ಶಾಸಕರ ಮೂಲಕ ಪುತ್ತೂರಿನಲ್ಲಿ ಬಹಳಷ್ಟು ಅಭಿವೃದ್ಧಿ ಕಾರ್ಯಗಳಾಗಬೇಕು. ವಿಜಯದ ಸಂಕೇತ ಕಚೇರಿಯಿಂದ ಪ್ರಾರಂಭವಾಗಿದ್ದು ಮೆ.13 ರ ಫಲಿತಾಂಶವು ಇದೇ ಕಚೇರಿಯಲ್ಲಿ ನಡೆಯಬೇಕು ಎಂದು ಹೇಳಿದರು.

ಬಹಳಷ್ಟು ಜವಾಬ್ದಾರಿ ನನ್ನ ತಲೆ ಮೇಲಿದೆ

ರಾಜ್ಯದಲ್ಲಿರುವ ಬಿಜೆಪಿನ ಸರಕಾರ ಭ್ರಷ್ಠಾಚಾರದಿಂದ ತುಂಬಿ ತುಳುಕಿದೆ. ಬಿಜೆಪಿಯ ಎಲ್ಲಾ ನಾಯಕರು ಪಕ್ಷ ತೊರೆದು ಕಾಂಗ್ರೆಸ್‌ನತ್ತ ಬರುತ್ತಿದ್ದಾರೆ.ಬಿಜೆಪಿ ಸರಕಾರದಲ್ಲಿ ಈಗಿರುವಷ್ಟು ಭ್ರಷ್ಟಾಚಾರ ಈ ಹಿಂದೆ ಯಾರಿಂದಲೂ ನಡೆದಿಲ್ಲ.ನಾನು ಹಣ ಮಾಡುವ ಉದ್ದೇಶದಿಂದ ರಾಜಕೀಯಕ್ಕೆ ಬಂದಿಲ್ಲ. ಪಕ್ಷಕ್ಕಾಗಿ ದುಡಿಯುತ್ತೇನೆ. ಬಡವರ, ದೀನ ದಲಿತರ ಅಭಿವೃದ್ಧಿಗೆ ಶ್ರಮಿಸುತ್ತೇನೆ. ಬಡವರಿಗೆ ದೊರೆಯಬೇಕಾದ 94 ಸಿಯನ್ನು ಮನೆ ಮನೆ ಹೋಗಿ ನ್ಯಾಯ ಒದಗಿಸುತ್ತೇನೆ. ಅದರಲ್ಲಿ ಯಾವುದೇ ರಾಜಿಯಿಲ್ಲ. ಯಾವುದೇ ಪಕ್ಷ ಬೇಧವಿಲ್ಲದೆ ಎಲ್ಲರಿಗೂ ಕಾನೂನು ಬದ್ಧವಾಗಿ ದೊರೆಯಬೇಕಾದ ಸವಲತ್ತುಗಳನ್ನು ಮನೆ ಮನೆಗೆ ತಲುಪಿಸುವಲ್ಲಿ ಪ್ರಯತ್ನಿಸುತ್ತೇನೆ. ಭ್ರಷ್ಟಾಚಾರ ರಹಿತ ಆಡಳಿತ ನೀಡುವುದೇ ನನ್ನ ಗುರಿಯಾಗಿದೆ ಎಂದ ಅವರು, ಪುತ್ತೂರಿನಲ್ಲಿ 14 ಮಂದಿ ಆಕಾಂಕ್ಷಿಗಳಿದ್ದರೂ ನನಗೆ ಅವಕಾಶ ದೊರೆತಿದೆ. ಬಹಳಷ್ಟು ಜವಾಬ್ದಾರಿ ನನ್ನ ತಲೆ ಮೇಲಿದ್ದು ನನ್ನ ಜವಾಬ್ದಾರಿ ಅರಿತು ಕೆಲಸ ಮಾಡುತ್ತೇನೆ ಎಂದರು.

.ಎ.19 - ನಾಮಪತ್ರ

ಮೇ.18 ರಂದು ಎಲ್ಲಾ ಧರ್ಮಗಳ ಧಾರ್ಮಿಕ ಕೇಂದ್ರಗಳಿಗೆ ಭೇಟಿ ನೀಡಿ ಆಶೀರ್ವಾದ ಪಡೆದು ಎ.19 ರಂದು ನಾಮಪತ್ರ ಸಲ್ಲಿಸಲಾಗುವುದು. ಬೆಳಿಗ್ಗೆ 9.30ಕ್ಕೆ ಮಹಾಲಿಂಗೇಶ್ವರ ದೇವಸ್ಥಾನದಿಂದ ಮೆರವಣಿಗೆ ಮೂಲಕ ತೆರಲಿ ನಾಮಪತ್ರ ಸಲ್ಲಿಸಲಾಗುವುದು. ಮೆರವಣಿಗೆಯಲ್ಲಿ 25000ಮಂದಿ ಭಾಗವಹಿಸುವ ಮೂಲಕ ನಮ್ಮಶಕ್ತಿ ಪ್ರದರ್ಶನ ಮಾಡಲಾಗುವುದು ಎಂದು ಅಶೋಕ್ ಕುಮಾರ್ ರೈ ತಿಳಿಸಿದರು.ಜಿ.ಪಂ ಮಾಜಿ ಸದಸ್ಯ ಎಂ.ಎ ಮಹಮ್ಮದ್ ಮಾತನಾಡಿ ಶುಭ ಹಾರೈಸಿದರು .ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ರಾಜಾರಾಮ ಕೆ.ಬಿ ಸ್ವಾಗತಿಸಿದರು. ಜಿಲ್ಲಾ ಕಾಂಗ್ರೆಸ್ ವಕ್ತಾರ ಮಹಮ್ಮದ್ ಬಡಗನ್ನೂರು ಕಾರ್ಯಕ್ರಮ ನಿರೂಪಿಸಿದರು..



Leave a Comment: