ನೇರಳಕಟ್ಟೆ : ಪಂತಡ್ಕ ನಿವಾಸಿ ಬಾತಿಷಾ ನಿಧನ

ಸುದ್ದಿಗಳು News

Posted by vidyamaana on 2024-07-25 19:32:58 | Last Updated by Vidyamaana on 2024-07-25 19:32:58

Share: | | | | |


ನೇರಳಕಟ್ಟೆ : ಪಂತಡ್ಕ ನಿವಾಸಿ ಬಾತಿಷಾ ನಿಧನ

ಬಂಟ್ವಾಳ : ಜ್ವರದಿಂದ ಬಳಲುತ್ತಿದ್ದ ಯುವಕನೋರ್ವ ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಗುರುವಾರ ಸಂಜೆ ಮೃತಪಟ್ಟಿದ್ದಾರೆ. 

 ನೇರಳಕಟ್ಟೆ ಸಮೀಪದ ಪಂತಡ್ಕ ನಿವಾಸಿ ಅಟೋ ರಿಕ್ಷಾ ಮೆಕೇನಿಕ್ ಸಿ.ಎಚ್. ಹನೀಫ್ ಅವರ ಪುತ್ರ

ಬಾತಿಷಾ( 22) ಮೃತಪಟ್ಟವರು.ಮಂಗಳೂರಿನ ಬಟ್ಟೆ ಅಂಗಡಿಯೊಂದರಲ್ಲಿ ಸೇಲ್ಸ್ ಮೇನ್ ಆಗಿ ಕೆಲಸ ಮಾಡುತ್ತಿದ್ದ ಈತನಿಗೆ ವಾರದ ಹಿಂದೆ ಜ್ವರ ಬಂದಿದ್ದು ಚಿಕಿತ್ಸೆ ಪಡೆಯುತ್ತಿದ್ದ, ಗುರುವಾರ ಬೆಳಿಗ್ಗೆ ಜ್ವರ ಉಲ್ಬಣಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಸಂಜೆ ವೇಳೆಗೆ ಮೃತಪಟ್ಟಿದ್ದಾರೆ.

 Share: | | | | |


ಹೃದಯಾಘಾತದಿಂದ ಆಟೋ ಚಾಲಕ ಅಶ್ರಫ್ ನಿಧನ

Posted by Vidyamaana on 2024-05-04 14:40:31 |

Share: | | | | |


ಹೃದಯಾಘಾತದಿಂದ ಆಟೋ ಚಾಲಕ  ಅಶ್ರಫ್ ನಿಧನ

ವಿಟ್ಲ: ಇಲ್ಲಿನ ಉರಿಮಜಲು ನಿವಾಸಿ, ಆಟೋ ಚಾಲಕ ಅಶ್ರಫ್ (38 ವ.) ಮೇ 3ರಂದು ಹೃದಯಾಘಾತದಿಂದ ನಿಧನರಾದರು.

ಹಲವು ವರ್ಷಗಳಿಂದ ರಿಕ್ಷಾ ಚಾಲಕರಾಗಿ ದುಡಿಯುತ್ತಿದ್ದ ಇವರು, ಶುಕ್ರವಾರ ಮಧ್ಯಾಹ್ನ ನಮಾಜ್ ಮುಗಿಸಿ ಮನೆಗೆ ತೆರಳಿದ್ದರು. ಮನೆಯಲ್ಲಿ ಯಾರೂ ಇಲ್ಲದ ಕಾರಣ ಬಾಗಿಲು ಹಾಕಿ ಮಲಗಿದ್ದರು.

ಎಸ್ ಡಿ ಪಿ ಐ ಕುರಿಯ ಬೂತ್ ಸಮೀತಿ ವತಿಯಿಂದ ರಂಝಾನ್ ಕಿಟ್ ವಿತರಣೆ

Posted by Vidyamaana on 2023-03-24 23:15:03 |

Share: | | | | |


ಎಸ್ ಡಿ ಪಿ ಐ ಕುರಿಯ ಬೂತ್ ಸಮೀತಿ ವತಿಯಿಂದ ರಂಝಾನ್ ಕಿಟ್ ವಿತರಣೆ

ಪುತ್ತೂರು: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕುರಿಯ ಬೂತ್ ಸಮೀತಿ ವತಿಯಿಂದ ವರ್ಷಂಪ್ರತಿ ರಂಝಾನ್ ತಿಂಗಳಲ್ಲಿ ದಾನಿಗಳ‌ ನೆರವಿನಿಂದ ಅರ್ಹ ಕುಟುಂಬಗಳಿಗೆ ರಂಝಾನ್ ಕಿಟ್ ಗಳನ್ನು ನೀಡುತ್ತಿದ್ದು ಅದೇ ರೀತಿ ಈ ಬಾರಿ ಕೂಡ ಮಾ :24 ರಂದು ಶುಕ್ರವಾರ ಸುಮಾರು 120 ರಷ್ಟು ಆಹಾರ ಕಿಟ್ ಗಳನ್ನು ನೀಡಲಾಯಿತು.

 ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ SDPI ಪುತ್ತೂರು ವಿಧಾನಸಭಾ ಅಧ್ಯಕ್ಷರಾದ ಹಾಜಿ ಇಬ್ರಾಹಿಂ ಸಾಗರ್ ಹಾಗೂ SDPI ಹಿರಿಯ ನಾಯಕರಾದ PBK ಮಹಮ್ಮದ್ ಹಾಗೂ ಆರ್ಯಾಪು ಚುನಾವಣಾ ಉಸ್ತುವಾರಿಯಾದ ಅಶ್ರಫ್ ಸಂಟ್ಯಾರ್ ರವರು ಆಗಮಿಸಿ, ಕಿಟ್ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು...

ಹಾಜಿ ಇಬ್ರಾಹಿಂ ಸಾಗರ್ ಮಾತನಾಡಿ ಕುರಿಯ SDPI ಯ ಯುವಕರ ಈ ಉತ್ತಮ ಕಾರ್ಯಕ್ಕೆ ಪ್ರಶಂಸೆ ವ್ಯಕ್ತಪಡಿಸಿದರು.ಇಂತಹ ಮಾದರಿ ಕಾರ್ಯಗಳು ಹಾಗೂ ಸಾಮಾಜಿಕ ಸೇವೆಗಳು ತಾಲೂಕಿನ ‌ಪ್ರತಿಯೊಂದು ಕಡೆಗಳಲ್ಲಿ ಕೂಡ ನಡೆಯಬೇಕಿದೆ ಕುರಿಯದ ಎಸ್ಡಿಪಿಐ ಸದಸ್ಯರಿಗೆ ಹಾಗೂ ಕಿಟ್ ನೀಡಲು ಸಹಕಾರ ನೀಡಿದ ದಾನಿಗಳಿಗೆ ಅಭಿನಂದನೆಗಳನ್ನು ಸಲ್ಲಿಸಿದರು...

ಈ ಸಂದರ್ಭದಲ್ಲಿ  ಸ್ಥಳೀಯ ಎಸ್ಡಿಪಿಐ ಕಾರ್ಯಕರ್ತರಾದ ಅಶ್ರಫ್,ಝೈದ್, ಜಬ್ಬಾರ್ ಕುರಿಯ, ಜಬ್ಬಾರ್ ಅಜ್ಜಿಕಟ್ಟೆ, ಸಾದಿಕ್ ಕುರಿಯ , ಶಾಕಿರ್ ಮುಂಡೂರು,ನಿಝಾಂ ಪಂಜಳ, ಫಾರುಕ್ ಪಿ ಎಸ್,,ರವುಫ್ ಕುರಿಯ,ಪವಾಝ್ ಕುರಿಯ  ಹಾಗೂ ಪಕ್ಷದ ಅಭಿಮಾನಿಗಳು ಮತ್ತು ಹಿತೈಷಿಗಳು ಉಪಸ್ಥಿತರಿದ್ದರು...

ಪೈವಳಿಕೆಯಲ್ಲಿ ಕೊಲೆ ಪುತ್ತೂರಿನಲ್ಲಿ ಸೆರೆ

Posted by Vidyamaana on 2023-06-03 10:52:32 |

Share: | | | | |


ಪೈವಳಿಕೆಯಲ್ಲಿ ಕೊಲೆ ಪುತ್ತೂರಿನಲ್ಲಿ ಸೆರೆ

ಪುತ್ತೂರು: ಕಾಸರಗೋಡಿನ ಪೈವಳಿಕೆಯಲ್ಲಿ ತಮ್ಮನನ್ನು ಇರಿದು ಕೊಂದ ಅಣ್ಣ ಪುತ್ತೂರಿನಲ್ಲಿ ಪೊಲೀಸರ ಅತಿಥಿಯಾಗಿದ್ದಾನೆ.

ಸಹೋದರರ ನಡುವಿನ ವೈಷಮ್ಯದ ಕಾರಣದಿಂದ ಅಣ್ಣ ಜಯರಾಮ, ತಮ್ಮ ಪ್ರಭಾಕರ ನೋಂಡಾ (40) ಎಂಬವರನ್ನು ಇರಿದು ಹತ್ಯೆ ಮಾಡಿದ್ದ ಘಟನೆ ಶನಿವಾರ ಬೆಳಿಗ್ಗೆ ಪೈವಳಿಕೆಯಲ್ಲಿ ನಡೆದಿತ್ತು.

ಕೇರಳದ ಪೈವಳಿಕೆಯಲ್ಲಿ ಕೊಲೆ ಮಾಡಿ ಪುತ್ತೂರಿನಲ್ಲಿ ಬಂದು ತಲೆಮರೆಸಿಕೊಂಡಿದ್ದ ವ್ಯಕ್ತಿಯನ್ನು ಕೇರಳ ಪೊಲೀಸರು ಪುತ್ತೂರಿನ ಕೊಂಬೆಟ್ಟಿನಿಂದ ವಶಕ್ಕೆ ಪಡೆದುಕೊಂಡಿದ್ದಾರೆ.


ಆರೋಪಿಯನ್ನು ಬಂಧಿಸುವಲ್ಲಿ ಪುತ್ತೂರು ನಗರ ಠಾಣಾ ಪೊಲೀಸರು ಸಹಕರಿಸಿದ್ದಾರೆ. ಪ್ರಭಾಕರ ವಿರುದ್ಧ ಹಲವು ಪ್ರಕರಣಗಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಆಶೀರ್ವಾದ ಲಕ್ಕೀ ಸ್ಕೀಂ ನ ಎರಡನೇ ಇನ್ನಿಂಗ್ಸ್ ಇನ್ನಷ್ಟು ಕಲರ್ ಫುಲ್

Posted by Vidyamaana on 2024-08-26 22:16:06 |

Share: | | | | |


ಆಶೀರ್ವಾದ ಲಕ್ಕೀ ಸ್ಕೀಂ ನ ಎರಡನೇ ಇನ್ನಿಂಗ್ಸ್ ಇನ್ನಷ್ಟು ಕಲರ್ ಫುಲ್


ಗಣ್ಯರಿಂದ ಲೋಗೋ, ಮೊಬೈಲ್ ಆಪ್ ಬಿಡುಗಡೆ – ಶಾಲಾ ವಿದ್ಯಾರ್ಥಿಗಳಿಗೆ ಬ್ಯಾಗ್ ವಿತರಣೆ

ನಾನು ತಿನ್ನುವ ಅನ್ನದ ಬಟ್ಟಲು ನೀವು - ದೇವದಾಸ್ ಕಾಪಿಕಾಡ್

ಜಗತ್ತಿನ ದುಬಾರಿ ವಸ್ತು ನಂಬಿಕೆ -ವಾಲ್ಟರ್ ನಂದಳಿಕೆ

ಎಲ್ಲಾ ಕಡೆ ಸಂಸ್ಥೆ ಬೆಳಗಲಿ - ರವಿ ರಾಮಕುಂಜ

ಮಂಡಬೆಚ್ಚಿ ಮಾಲ್ಪೊಡ್ಚಿ...! ಸ್ಕೀಂಗ್ ಸೇರಿಯರ ಆಪುಜ...!? - ಬೇಬಿ ಆತ್ಮೀ

ಪುತ್ತೂರು: ದರ್ಬೆ ಮೊದಿನ್ ಕಾಂಪ್ಲೆಕ್ಸ್‌ನಲ್ಲಿ ವ್ಯವಹರಿಸುತ್ತಿರುವ ಆಶೀರ್ವಾದ ಎಂಟರ್‌ಪ್ರೈಸಸ್‌ ಲಕ್ಷ್ಮೀ ಸ್ಟೀಂನ 2ನೇ ಸೀಝನ್ ಶುಭಾರಂಭ, ಸಂಸ್ಥೆಯ ಲೋಗೋ ಅನಾವರಣ, ಮೊಬೈಲ್ ಆ್ಯಪ್ ಬಿಡುಗಡೆ ಹಾಗೂ 163 ಶಾಲಾ ಮಕ್ಕಳಿಗೆ ಬ್ಯಾಗ್‌ ವಿತರಣಾ ಕಾರ್ಯಕ್ರಮ ಬೈಪಾಸ್‌ ರಸ್ತೆಯಲ್ಲಿರುವ ಅಶ್ಮಿ ಕಂಪರ್ಟ್‌ನಲ್ಲಿ ಆ. 25ರಂದು ನಡೆಯಿತು. ಅತಿಥಿಗಳಾದ ದೇವದಾಸ್ ಕಾಪಿಕಾಡ್ ಸಂಸ್ಥೆಯ ಲೋಗೋ ಬಿಡುಗಡೆಗೊಳಿಸಿದರು. ವಾಲ್ಟರ್ ನಂದಳಿಕೆಯವರು ಸಂಸ್ಥೆಯ ಬ್ರೋಚರ್‌ ಬಿಡುಗಡೆ ಮಾಡಿದರು. ರವಿರಾಮಕುಂಜ ಸಂಸ್ಥೆಯ ಮೊಬೈಲ್ ಆ್ಯಪ್ ಬಿಡುಗಡೆಗೊಳಿಸಿದರು. 

ನಾನು ತಿನ್ನುವ ಅನ್ನದ ಬಟ್ಟಲು ನೀವು-ದೇವದಾಸ್ ಕಾಪಿಕಾಡ್: 

ತುಳು ಚಿತ್ರರಂಗದ ನಿರ್ಮಾಪಕರು ಹಾಗೂ ಹಿರಿಯ ಕಲಾವಿದ ತೆಲಿಕೆದ ಬೊಳ್ಳಿ ದೇವದಾಸ್‌ ಕಾಪಿಕಾಡ್‌ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಬಳಿಕ 2ನೇ ಸೀಝನ್ ಮತ್ತು ಸಂಸ್ಥೆಯ ಲೋಗೋ ಅನಾವರಣ ಮಾಡಿ ಮಾತನಾಡಿ, ನಿಮ್ಮ ಸಂಸ್ಥೆಯ ಪಾಲುದಾರರಲ್ಲಿ ಒಗ್ಗಟ್ಟು ಇದೆ. ತುಂಬಾ ಖುಷಿಯಾಯಿತು. ನಿಮಗೆಲ್ಲರಿಗೂ ಉಪಕಾರ ಮಾಡಲು ಈ ಸಂಸ್ಥೆಯನ್ನು ಹುಟ್ಟು ಹಾಕಿದ್ದಾರೆ. ಇವತ್ತು ಪ್ರತೀ ಮನೆಗೂ ಆಧಾರಸ್ತಂಭವಾಗಿ ನಿಲ್ಲುವ ಸಂಸ್ಥೆಯಾಗಿ ಆಶೀರ್ವಾದ ಬೆಳೆದಿದೆ. ನಿಮ್ಮಲ್ಲಿ ನಂಬಿಕೆಯ ನಗು ಇದೆ. ಎಂದರು. ನಿಮ್ಮ ಆಶೀರ್ವಾದದಿಂದ ನಾನು ಮೇಲೆ ಬಂದಿದ್ದೇನೆ. ನಾನು ತಿನ್ನುವ ಅನ್ನದ ಬಟ್ಟಲು ನೀವು ಎಂದ ಅವರು ಪ್ರತೀ ಊರಲ್ಲಿ ಆಶೀರ್ವಾದ ಸಂಸ್ಥೆ ಹುಟ್ಟಲಿ ಅಲ್ಲದೆ ಅಂತರಾಷ್ಟ್ರೀಯ ಮಟ್ಟಕ್ಕೂ ವಿಸ್ತರಿಸಲಿ ಎಂದು ಹೇಳಿ ಹಾರೈಸಿದರು.

ಜಗತ್ತಿನ ದುಬಾರಿ ವಸ್ತು ನಂಬಿಕೆ-ವಾಲ್ಟರ್ ನಂದಳಿಕೆ: 

ಸಂಸ್ಥೆಯ ಬ್ರೋಚರ್‌ ಬಿಡುಗಡೆ ಮಾಡಿದ ಡೈಸಿ ವರ್ಲ್ಡ್ ಸಂಸ್ಥಾಪಕ ವಾಲ್ಟರ್ ನಂದಳಿಕೆ ಮಾತನಾಡಿ ಜಗತ್ತಿನಲ್ಲಿ ದುಬಾರಿ ವಸ್ತು ಎಂದರೆ ನಂಬಿಕೆ, ನಂಬಿಕೆಗೆ ಅರ್ಹವಾದ ಮಕ್ಕಳಿಗೆ ಬ್ಯಾಗ್ ನೀಡಿ ಕಲಿಕೆಗೆ ಪ್ರೋತ್ಸಾಹ ನೀಡುತ್ತಿದ್ದಾರೆ ಇದು ಹೆಮ್ಮೆಯ ವಿಷಯ ಎಂದರು. ನಿಮ್ಮ ಮಕ್ಕಳು ಕಲಿಕೆಯಲ್ಲಿ ಹಿಂದೆ ಇದ್ದು ಉಳಿದ ಚಟುವಟಿಕೆಗಳಲ್ಲಿ ಪ್ರತಿಭಾವಂತರಾಗಿದ್ದರೆ ಅವರಿಗೆ ಪ್ರೋತ್ಸಾಹ ನೀಡಿ ಮಕ್ಕಳ ಕನಸನ್ನು ಕೇಳಿ. ಮಕ್ಕಳಿಗೆ ಆಸ್ತಿ ಮಾಡಬೇಡಿ. ಮಕ್ಕಳನ್ನು ಸಮಾಜದ ಆಸ್ತಿ ಮಾಡಿ ಎಂದರು. ಮಕ್ಕಳ ಅಂಕಗಳೇ ಎಲ್ಲವೂ ಅಲ್ಲ, ಅದು ಸರ್ಟಿಫಿಕೇಟ್ ಮಾತ್ರ ಎಂದು ಪೋಷಕರಿಗೆ ತಿಳಿಸಿದರು.

ಎಲ್ಲಾ ಕಡೆ ಸಂಸ್ಥೆ ಬೆಳಗಲಿ ರವಿ ರಾಮಕುಂಜ: 


ಅಕ್ರಮ ಹಣ ವರ್ಗಾವಣೆ: ED ಅಧಿಕಾರಿ ಗಳಿಂದ ಜಾರ್ಖಂಡ್ ಸಿಎಂ ಹೇಮಂತ್ ಸೊರೆನ್ ಬಂಧನ

Posted by Vidyamaana on 2024-01-31 20:48:07 |

Share: | | | | |


ಅಕ್ರಮ ಹಣ ವರ್ಗಾವಣೆ: ED ಅಧಿಕಾರಿ ಗಳಿಂದ ಜಾರ್ಖಂಡ್ ಸಿಎಂ ಹೇಮಂತ್ ಸೊರೆನ್ ಬಂಧನ

ರಾಂಚಿ : ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ಜಾರ್ಖಂಡ್ ಸಿಎಂ ಸೊರೇನ್ ಅವರು ಇಡಿ ಬಂಧನದ ಭೀತಿಯಿಂದ ಕೆಲ ದಿನಗಳ ಹಿಂದೆ ನಾಪತ್ತೆಯಾಗಿದ್ದರು. ಇಂದು ಇಡಿ ವಿಚಾರಣೆಗೆ ಹಾಜರಾಗಿದ್ದಂತ ಅವರನ್ನು, ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಿದ್ದಾರೆ.ಮನಿ ಲಾಂಡರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರನ್ನು ಜಾರಿ ನಿರ್ದೇಶನಾಲಯದ ವಿಚಾರಣೆಯು ಬುಧವಾರ ಮಧ್ಯಾಹ್ನ ಅವರ ರಾಂಚಿ ನಿವಾಸದಲ್ಲಿ ಪ್ರಾರಂಭವಾಯಿತು. ಈ ವಿಚಾರಣೆಯ ಬಳಿಕ ಅವರನ್ನು ಇಡಿ ಅಧಿಕಾರಿಗಳು ಬಂಧಿಸಿರೋದಾಗಿ ತಿಳಿದು ಬಂದಿದೆ.


ತನಿಖಾ ಸಂಸ್ಥೆಯ ಅಧಿಕಾರಿಗಳು ಏಳು ಗಂಟೆಗಳಿಗೂ ಹೆಚ್ಚು ಕಾಲ ಅವರ ನಿವಾಸದಲ್ಲಿ ಬೀಡುಬಿಟ್ಟಿದ್ದರು. ಅವರ ನಿವಾಸದ ಒಳಗೆ ಮತ್ತು ಹೊರಗೆ ಭಾರಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಈಗ ಅಲ್ಲಿಗೆ ಉನ್ನತ ಅಧಿಕಾರಿಗಳಲ್ಲಿ ರಾಜ್ಯದ ಪೊಲೀಸ್ ಮಹಾನಿರ್ದೇಶಕ ಅಜಯ್ ಕುಮಾರ್ ಮತ್ತು ಸರ್ಕಾರದ ಮುಖ್ಯ ಕಾರ್ಯದರ್ಶಿ ಎಲ್ ಖಿಯಾಂಗೇಟ್ ಧಾವಿಸಿದ್ದಾರೆ.


ಸೊರೆನ್ ಅವರ ಮನೆಯ ಹೊರಗಿನ ಇತ್ತೀಚಿನ ದೃಶ್ಯಗಳು ಹೆಚ್ಚಿನ ಸಂಖ್ಯೆಯ ಪೊಲೀಸರು ಮತ್ತು ಭದ್ರತಾ ಸಿಬ್ಬಂದಿಯನ್ನು ಹಾಜರಿದ್ದರು.ಅವರಲ್ಲಿ ಕೆಲವರು ಶಸ್ತ್ರಸಜ್ಜಿತರಾಗಿದ್ದಾರೆ. ಪ್ರವೇಶ ದ್ವಾರವನ್ನು ಕಾಯುತ್ತಿದ್ದಾರೆ. ಪೊಲೀಸ್ ಜೀಪುಗಳು ಮತ್ತು ವಾಹನಗಳು ಬೀದಿಯಲ್ಲಿ ಸಾಲುಗಟ್ಟಿ ನಿಲ್ಲುತ್ತವೆ.


ಸೆಕ್ಷನ್ 144 - ನಾಲ್ಕು ಅಥವಾ ಅದಕ್ಕಿಂತ ಹೆಚ್ಚು ಜನರು ಸೇರುವುದನ್ನು ನಿಷೇಧಿಸುವ ಆದೇಶ - ಈ ಪ್ರದೇಶದಲ್ಲಿ ಜಾರಿಯಲ್ಲಿದೆ. ಇದರ ನಡುವೆ ಜಾರ್ಖಂಡ್ ಸಿಎಂ ಹೇಮಂತ್ ಸೊರೆನ್ ಅವರನ್ನು ಇಡಿ ಅಧಿಕಾರಿಗಳು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧಿಸಿರೋದಾಗಿ ತಿಳಇದು ಬಂದಿದೆ.

ಕುಂಬ್ರ ಶ್ರೀರಾಮ ಭಜನಾಮಂದಿರದಲ್ಲಿ ನಡೆದ ಗಣೇಶೋತ್ಸವ ಕಾರ್ಯಕ್ರಮ

Posted by Vidyamaana on 2023-09-21 16:26:05 |

Share: | | | | |


ಕುಂಬ್ರ ಶ್ರೀರಾಮ ಭಜನಾಮಂದಿರದಲ್ಲಿ ನಡೆದ ಗಣೇಶೋತ್ಸವ ಕಾರ್ಯಕ್ರಮ

ಪುತ್ತೂರು: ಹೆತ್ತ ತಂದೆ ತಾಯಿಯನ್ನು ಆರೈಕೆ ಮಾಡದೆ , ಅವರನ್ನು ಆಶ್ರಮದಲ್ಲಿ ಹಾಕಿ ಅವರ ಸೇವೆ ಮಾಡುವ ಭಾಗ್ಯವಿಲ್ಲದ ಮಂದಿ ಎಷ್ಟೇ ದೊಡ್ಡ ಪುಣ್ಯದ ಕೆಲಸ ಮಾಡಿದರೂ ಆತನಿಗೆ ದೇವರು ಖಂಡಿತವಾಗಿಯೂ ಒಲಿಯವುದಿಲ್ಲ ಮತ್ತು ಆತನಿಗೆ ದೇವರ ಆಶೀರ್ವಾದ ಪಡೆಯಲು ಸಾಧ್ಯವೇ ಇಲ್ಲ ಎಂದು ಪುತ್ತೂರು ಶಾಸಕರಾದ ಅಶೋಕ್ ರೈ ಹೇಳಿದರು.


ಅವರು ಕುಂಬ್ರ ಶ್ರೀರಾಮ ಭಜನಾಮಂದಿರದಲ್ಲಿ ನಡೆದ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ದೇವರ ಪ್ರಸಾದ ಸ್ವೀಕರಿಸಿದರು.


ಹೊಟ್ಟೆಗೆ ತುತ್ತು ಇಲ್ಲದೇ ಇದ್ದರೂ ನಮ್ಮನ್ನು ಹೆತ್ತು ಸಾಕಿದ, ವಿದ್ಯೆ ಕೊಡಿಸಿದ ತಂದೆ ತಾಯಿಯೇ ನಮಗೆ ನಿಜವಾದ ದೇವರು. ಮನೆಯೊಳಗೆ ಜೀವಂತವಾಗಿರುವ ದೇವರ ಆಶೀರ್ವಾದ ಪಡೆಯದೆ ನಾವು ಎಷ್ಟು ಸಮಾಜ ಸೇವೆ ಮಾಡಿದರೂ ಏನೂ ಫಲವಿಲ್ಲ. ವಿದ್ಯೆ ಕಲಿತು ದೊಡ್ಡ ವ್ಯಕ್ತಿಗಳಾದ ನಾವು ಬಳಿಕ ತಂದೆ ತಾಯಿಯನ್ನು ಮರೆತು ಬಿಡುತ್ತೇವೆ, ಅವರು ನಮಗೆ ಮಾಡಿದ ತ್ಯಾಗವನ್ನು ಗ್ರಹಿಸುವ ಶಕ್ತಿಯೂ ನಮಗೆ ಇರುವುದಿಲ್ಲ. ಮುದಿ ಪ್ರಾಯದಲ್ಲಿ ಅವರನ್ನು ನಾವು ಆಶ್ರಮಕ್ಕೆ ಸೇರಿಸಿ ಸುಖ ಜೀವನ ನಡೆಸುತ್ತಿದ್ದೇವೆ ಇದು ಖಂಡಿತವಾಗಿಯೂ ಯಾವ ದೇವರಿಗೂ ಇಷ್ಟವಾಗುವುದಿಲ್ಲ ಎಂಬುದನ್ನು ನಾವು ಪ್ರತೀಯೊಬ್ಬರೂ ತಿಳಿದುಕೊಳ್ಳಬೇಕು. ತಂದೆ ತಾಯಿಯನ್ನು ದೂರ ಮಾಡುವ ಸಂಸ್ಕಾರ ನಮ್ಮದಲ್ಲ, ಅದು ಭಾರತೀಯ ಸಂಸ್ಕೃತಿಯೂ ಅಲ್ಲ ಎಂದು ಹೇಳಿದರು.


ವೇದಿಕೆಯಲ್ಲಿ ಒಳಮೊಗ್ರು ಗ್ರಾಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು, ತೆಂಕಿಲ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಮುಖ್ಯ ಗುರುಗಳಾದ ಆಶಾ ಬೆಳ್ಳಾರೆ, ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಸುಧಾಕರ ರಾವ್ ಆರ್ಯಾಪು, ಕಬಕ ಸರಕಾರಿ ಶಾಲೆಯ ಮುಖ್ಯ ಗುರು ಬಾಬು,  ಕುಂಬ್ರ ದುರ್ಗಾ ಪ್ರಸಾದ್ ರೈ, ಗ್ರಾಪಂ ಸದಸ್ಯ ವಿನೋದ್ ಶೆಟ್ಟಿ ಮುಡಾಲ, ಎಂ ಎಸ್ ಕೇಶವ ಶಾಂತಿವನ, ರಾಮಯ್ಯ ಗೌಡ ಬೊಳ್ಳಾಡಿ, ರಾಜೇಶ್ ರೈ ಪರ್ಪುಂಜ , ಮಾಧವ ರೈ ಕುಂಬ್ರ ಮೊದಲಾದವರು ಉಪಸ್ಥಿತರಿದ್ದರು.



Leave a Comment: