ಪುತ್ತೂರು :ಭೀಕರ ಅಪಘಾತ - 10 ಕ್ಕೂ ಹೆಚ್ಚು ವಾಹನಗಳು ಪುಡಿ ಪುಡಿ

ಸುದ್ದಿಗಳು News

Posted by vidyamaana on 2024-05-27 18:41:30 |

Share: | | | | |


ಪುತ್ತೂರು :ಭೀಕರ ಅಪಘಾತ - 10 ಕ್ಕೂ  ಹೆಚ್ಚು ವಾಹನಗಳು ಪುಡಿ ಪುಡಿ

ಪುತ್ತೂರು : ಪುತ್ತೂರಿನ ಹೊರ ವಲಯದ ಸಂಟ್ಯಾರಿನಲ್ಲಿ ಭೀಕರ ಅಪಘಾತ ನಡೆದು 10ಕ್ಕೂ ಹೆಚ್ಚು ವಾಹನಗಳು ಪುಡಿ ಪುಡಿಯಾದ ಘಟನೆ ಮೇ.27ರಂದು ಸಂಜೆ ನಡೆದಿದೆ. 

ಪಾಣಾಜೆ - ಸಂಟ್ಯಾರ್ ರಸ್ತೆಯಲ್ಲಿ ಈ ಅಪಘಾತ ಸಂಭವಿಸಿದೆ. ಸಂಟ್ಯಾರ್ ಜಂಕ್ಷನ್ ನಲ್ಲಿ ನಿಲ್ಲಿಸಿದ್ದ ಹತ್ತಕ್ಕೂ ಹೆಚ್ಚು ಬೈಕ್ ಗಳು ಪುಡಿ ಪುಡಿಯಾಗಿ ಚೆಲ್ಲಪಿಲ್ಲಿಯಾಗಿದೆ. 


ಪಾಣಾಜೆ ಕಡೆಯಿಂದ ಅತೀ ವೇಗದಲ್ಲಿ ಬರುತಿದ್ದ ಕಾರೊಂದು  ಈ ಹತ್ತಕ್ಕೂ ಹೆಚ್ಚು ದ್ವಿಚಕ್ರ ವಾಹನಗಳಿಗೆ ಡಿಕ್ಕಿಯಾಗಿದೆ. ಸಂಟ್ಯಾರ್ ಜಂಕ್ಷನ್ ನಲ್ಲಿ   ವಾಹನ ನಿಲ್ಲಿಸಿ ಬಸ್ ನಲ್ಲಿ ಉದ್ಯೋಗಕ್ಕೆ ತೆರಳುವವರ 10 ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳು ಪುಡಿ ಪುಡಿಯಾಗಿ ಚೆಲ್ಲಪಿಲ್ಲಿಯಾಗಿದೆ.

 Share: | | | | |


ಎರಡು ವರ್ಷಗಳ ಹಿಂದಿನ ಮನೆ ಕಳವು ಪ್ರಕರಣವನ್ನು ಭೇದಿಸಿದ ಬೆಳ್ಳಾರೆ ಪೊಲೀಸರು

Posted by Vidyamaana on 2024-07-03 08:00:29 |

Share: | | | | |


ಎರಡು ವರ್ಷಗಳ ಹಿಂದಿನ ಮನೆ ಕಳವು ಪ್ರಕರಣವನ್ನು ಭೇದಿಸಿದ ಬೆಳ್ಳಾರೆ ಪೊಲೀಸರು

ಬೆಳ್ಳಾರೆ : ಎರಡು ವರ್ಷಗಳ ಹಿಂದೆ ನಡೆದ ಮನೆ ಕಳ್ಳತನ ಪ್ರಕರಣವನ್ನು ಬೆಳ್ಳಾರೆ ಪೊಲೀಸರು ಭೇದಿಸಿದ್ದಾರೆ.


ಪೊಲೀಸ್ ಠಾಣಾ ವ್ಯಾಪ್ತಿಯ ಕಡಬ ತಾಲೂಕು ಎಡಮಂಗಲ ಗ್ರಾಮದ ದಡ್ಡು ಎಂಬಲ್ಲಿ ನಡೆದ ಸುಮಾರು 1,48,000 ರೂ. ಮೌಲ್ಯದ ಚಿನ್ನಾಭರಣಗಳು ಮತ್ತು ನಗದು ಹಣ 30,000 ರೂ. ಸೇರಿ ಒಟ್ಟು 1,78,000 ರೂ. ಮೌಲ್ಯದ ಮನೆಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳ್ಳಾರೆ ಠಾಣೆಯಲ್ಲಿ ಅಪರಾಧ ಕ್ರಮಾಂಕ. 22/2022 ಕಲಂ 457,380 ಭಾ. ದಂ. ಸಂ ರಂತೆ ಪ್ರಕರಣ ದಾಖಲಿಸಿಕೊಂಡು, ಕಳೆದ ಎರಡು ವರ್ಷಗಳಿಂದ ತನಿಖೆ ನಡೆಸಿದ್ದು, ಪ್ರಸ್ತುತ ಪ್ರಕರಣದ ಆರೋಪಿ ಬೆಳ್ತಂಗಡಿ ನೆರಿಯಾ ನಿವಾಸಿ ಶರತ್ (24) ಎಂಬಾತನನ್ನು ವಶಕ್ಕೆ ಪಡೆಯಲಾಗಿದ್ದು, ಕಳವು ಮಾಡಿದ ಸೊತ್ತುಗಳನ್ನು ಪತ್ತೆ ಮಾಡಿ ಸ್ವಾದೀನಪಡಿಸಿಕೊಳ್ಳಲಾಗಿದೆ.

ಗಾಳಿಪಟ ಹಾರಿಸುತ್ತಿದ್ದಾಗ ವಿದ್ಯುತ್ ತಂತಿ ಸ್ಪರ್ಶಿಸಿ ಬಾಲಕ ಸಾವು

Posted by Vidyamaana on 2024-01-14 08:28:15 |

Share: | | | | |


ಗಾಳಿಪಟ ಹಾರಿಸುತ್ತಿದ್ದಾಗ ವಿದ್ಯುತ್ ತಂತಿ ಸ್ಪರ್ಶಿಸಿ ಬಾಲಕ ಸಾವು

ಹೈದರಾಬಾದ್: ಮನೆಯ ಟೆರೇಸ್ ಮೇಲೆ ಗಾಳಿಪಟ ಹಾರಿಸುತ್ತಿದ್ದಾಗ ವಿದ್ಯುತ್ ತಂತಿ ಸ್ಪರ್ಶಿಸಿ ಬಾಲಕ ತನಿಷ್ಕ್ (11) ಮೃತಪಟ್ಟಿರುವ ಘಟನೆ ಅತ್ತಾಪುರ ಪ್ರದೇಶದಲ್ಲಿ ನಡೆದಿದೆ.


ತನಿಷ್ಕ್ ತಮ್ಮ ಮನೆಯ ಮಹಡಿ ಮೇಲೆ ನಿಂತು ಗಾಳಿ ಪಟ ಹಾರಿಸುವ ವೇಳೆ ಗಾಳಿ ಪಟದ ದಾರ ವಿದ್ಯುತ್​ ತಂತಿಗೆ ಸಿಲುಕಿಕೊಂಡಿದೆ. ಅದನ್ನು ಬಿಡಿಸಲು ಹೋದಾಗ ದೇಹಕ್ಕೆ ವಿದ್ಯುತ್​ ಪ್ರವಹಿಸಿದೆ.


ತಕ್ಷಣ ಬಾಲಕ ಕಿರುಚಿಕೊಂಡಿದ್ದು, ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದರೂ ಪ್ರಯೋಜನವಾಗಲಿಲ್ಲ. ಪೋಷಕರ ರೋದನ ಮುಗಿಳುಮುಟ್ಟಿದ್ದು, ಮಕ್ಕಳ ಚಲನವಲನ ಬಗ್ಗೆ ಹೆಚ್ಚಿನ ನಿಗಾ ಅಗತ್ಯ ಎಂದು ಪೊಲೀಸರು ನಾಗರಿಕರಿಗೆ ಸಲಹೆ ನೀಡಿದ್ದಾರೆ.

ಹುಚ್ಚ ಅವನು ಎತ್ತಿಕೊಂಡು ಹೊರಗೆ ಹಾಕ್ರೀ... ಶಾಸಕ ವೇದವ್ಯಾಸ್ ಕಾಮತ್ ಬಗ್ಗೆ ಕಾಂಗ್ರೆಸ್ ಸದಸ್ಯರ ಆಕ್ರೋಶ

Posted by Vidyamaana on 2024-02-21 13:12:27 |

Share: | | | | |


ಹುಚ್ಚ ಅವನು  ಎತ್ತಿಕೊಂಡು ಹೊರಗೆ ಹಾಕ್ರೀ... ಶಾಸಕ ವೇದವ್ಯಾಸ್ ಕಾಮತ್ ಬಗ್ಗೆ ಕಾಂಗ್ರೆಸ್ ಸದಸ್ಯರ ಆಕ್ರೋಶ

ಬೆಂಗಳೂರು, ಫೆ.20: ವಿಧಾನಸಭೆ ಅಧಿವೇಶನದಲ್ಲಿ ಕೇಂದ್ರ ಸರಕಾರ ಅನುದಾನ ತಾರತಮ್ಯ ಮಾಡ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿವರಣೆ ಕೊಡುತ್ತಿದ್ದಾಗ, ಎದ್ದು ನಿಂತು ವಿರೋಧಿಸಿದ್ದಕ್ಕೆ ಮಂಗಳೂರಿನ ಬಿಜೆಪಿ ಶಾಸಕ ವೇದವ್ಯಾಸ ಕಾಮತ್ ಅವರನ್ನು ಕಾಂಗ್ರೆಸ್ ಶಾಸಕರು ಹುಚ್ಚ ಎಂದು ರೇಗಿಸಿದ ಘಟನೆ ನಡೆದಿದೆ.


ಫುಡ್ ಕಾರ್ಪೊರೇಶನ್ ಕಡೆಯಿಂದ ನಾವು ಅಕ್ಕಿ ಕೇಳಿದ್ದೆವು. ಅದರ ಮ್ಯಾನೇಜರ್ ಓಕೆಯೆಂದು ಹೇಳಿದ್ದೂ ಆಗಿತ್ತು. ಆದರೆ ಕೇಂದ್ರ ಸರಕಾರದವರು ರಾಜಕೀಯ ಕಾರಣಕ್ಕೆ ರಾಜ್ಯಕ್ಕೆ ಅಕ್ಕಿ ಕೊಡಲಿಲ್ಲ ಎಂದು ಸಿದ್ದರಾಮಯ್ಯ ಹೇಳಿದಾಗ, ವಿರೋಧಿಸಿದ ವಿಪಕ್ಷ ನಾಯಕ ಅಶೋಕ್, ನೀವು ಗ್ಯಾರಂಟಿ ಘೋಷಣೆ ಮಾಡಿದಾಗ ಕೇಂದ್ರವನ್ನು ಕೇಳಿದ್ರಾ.. ಆನಂತರ ಕೇಂದ್ರ ಅಕ್ಕಿ ಕೊಡಲಿಲ್ಲ ಎಂದರೆ ಹೇಗೆ. ಅಕ್ಕಿಯನ್ನು ಮ್ಯಾನೇಜರ್ ಕೊಡೋದಾ ಎಂದು ಛೇಡಿಸಿದರು.


ಪ್ರತಿಕ್ರಿಯಿಸಿದ ಸ್ಪೀಕರ್ ಯುಟಿ ಖಾದರ್, ಆಹಾರ ಭದ್ರತಾ ನಿಗಮ ಅನ್ನೋದು ಸ್ವತಂತ್ರ ಸಂಸ್ಥೆ ಎಂದು ಹೇಳಲು ಹೊರಟಾಗ ಎದ್ದು ನಿಂತ ವೇದವ್ಯಾಸ ಕಾಮತ್, ಸ್ವತಂತ್ರ ಸಂಸ್ಥೆಯಲ್ಲ. ಕೇಂದ್ರಕ್ಕೆ ಅಧಿಕಾರ ಇದೆಯೆಂದು ಹೇಳಲು ಹೊರಟರು. ಕಾಂಗ್ರೆಸ್ ಶಾಸಕರು ಅದಕ್ಕೆ ವಿರೋಧಿಸಿ ಗದ್ದಲ ಎಬ್ಬಿಸಿದ್ದಾರೆ. ಏಯ್ ಹುಚ್ಚಾ ಅವನು. ಹೊರಗೆ ಹಾಕಿ ಎಂದು ಕೂಗಿದ್ದಾರೆ. ಇದರಿಂದ ಕುಪಿತರಾದ ವೇದವ್ಯಾಸ್ ಅವರನ್ನು ಖಾದರ್ ಕುಳಿತುಕೊಳ್ಳುವಂತೆ ಮನವಿ ಮಾಡಿದ್ದಾರೆ. ಹುಚ್ಚ ನೀವು ಎಂದು ವೇದವ್ಯಾಸ್ ಹೇಳಿದ್ದಕ್ಕೆ ಖಾದರ್ ಗರಂ ಆಗಿದ್ದು ನೀವೊಮ್ಮೆ ಕೂತ್ಕೊಳ್ಳಿ ಮಾರ್ರೆ, ಸರಿಯಾಗಿ ತಿಳಿದುಕೊಳ್ಳದೆ ಮಾತಾಡಬೇಡಿ ಎಂದಿದ್ದಾರೆ.


ಇದನ್ನು ಕೇಳಿದ ಆಡಳಿತ ಪಕ್ಷದ ಸದಸ್ಯರು, ವೇದವ್ಯಾಸ ಗುರಿಯಾಗಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಭಾಧ್ಯಕ್ಷ ಪೀಠಕ್ಕೆ ಗೌರವ ಕೊಡಬೇಕಲ್ಲ. ಹುಚ್ಚ ಅಂತಾನೆ, ಅವನನ್ನು ಎತ್ತಿ ಹೊರಗೆ ಹಾಕ್ರೀ ಎಂದು ಗದ್ದಲ ಎಬ್ಬಿಸಿದ್ದಾರೆ. ಮುಖ್ಯಮಂತ್ರಿ ಮಾತಾಡೋವಾಗ ನಡುವೆ ಬಾಯಿ ಹಾಕ್ತಾನೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಹುಚ್ಚ ಅವನು ಎಂದು ಹೇಳಿದ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದೆ.

ಬಂಟ್ವಾಳ: ಲಾರಿ - ಕೆಎಸ್ಸಾರ್ಟಿಸಿ ಬಸ್ ಢಿಕ್ಕಿ; ವಿದ್ಯಾರ್ಥಿನಿ ಸೇರಿ ಎಂಟು ಮಂದಿಗೆ ಗಾಯ

Posted by Vidyamaana on 2024-05-30 14:35:04 |

Share: | | | | |


ಬಂಟ್ವಾಳ: ಲಾರಿ - ಕೆಎಸ್ಸಾರ್ಟಿಸಿ ಬಸ್ ಢಿಕ್ಕಿ; ವಿದ್ಯಾರ್ಥಿನಿ ಸೇರಿ ಎಂಟು ಮಂದಿಗೆ ಗಾಯ

ಬಂಟ್ವಾಳ : ಲಾರಿಯೊಂದು ಕೆಎಸ್ಸಾರ್ಟಿಸಿ ಬಸ್ ಗೆ ಢಿಕ್ಕಿಯಾದ ಪರಿಣಾಮ ಬಸ್ಸಿನಲ್ಲಿದ್ದ ವಿದ್ಯಾರ್ಥಿನಿ ಸೇರಿದಂತೆ ಒಟ್ಟು ಎಂಟು ಮಂದಿ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ವಗ್ಗ ಸಮೀಪದ ಕಾಡುಬೆಟ್ಟು ಕ್ರಾಸ್ ಬಳಿ ನಡೆದಿದೆ.ಬಸ್ ಚಾಲಕ ಉಮೇಶ್, ಪ್ರಯಾಣಿಕರಾದ ನಳಿನಿ ಬೆಳ್ತಂಗಡಿ, ವಿದ್ಯಾರ್ಥಿ‌ನಿ ಮಧುರಾ ಇರ್ವತ್ತೂರು, ರಕ್ಷಣ್ ವೇಣು ಗೋಪಾಲ ಕಾವಳಪಡೂರು, ತಾರಾನಾಥ ಗರ್ಡಾಡಿ, ರೋಹಿಣಿ ಮದ್ದಡ್ಕ, ಲಾರಿ ಚಾಲಕ ಚಿತ್ರದುರ್ಗ ಸಮೀಪದ ಹಿರಿಯೂರಿ‌ನ ಮಹೇಶ್ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ಮೇಕಪ್ ಹಾಗೂ ಪೋನ್ ಗೀಳು: ಹೆಂಡತಿಯ ಕಾಟ ತಾಳಲಾರದೆ ಪತಿ ಆತ್ಮಹತ್ಯೆ

Posted by Vidyamaana on 2024-07-17 14:27:21 |

Share: | | | | |


ಮೇಕಪ್ ಹಾಗೂ ಪೋನ್ ಗೀಳು: ಹೆಂಡತಿಯ ಕಾಟ ತಾಳಲಾರದೆ ಪತಿ ಆತ್ಮಹತ್ಯೆ

ಬೆಂಗಳೂರು ಗ್ರಾಮಾಂತರ: ಪತ್ನಿಯ ಡ್ರೆಸ್ ಹಾಗೂ ಮೇಕಪ್ ಗಾಗಿ ಗಲಾಟೆ ನಡೆದಿದ್ದು, ಪತಿ, ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ(Nelamangala)ದ ತೊಣಚಿನಕುಪ್ಪೆ ಗ್ರಾಮದಲ್ಲಿ ನಡೆದಿದೆ.ಅಸ್ಸಾಂ ಮೂಲದ ಗುಲ್ಜರ್ ಹುಸೇನ್ ಚೌದರಿ (28) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ

ಪುತ್ತೂರು; ತಾಲೂಕು ಆಸ್ಪತ್ರೆಯಲ್ಲಿ ವಿದ್ಯುತ್ ಅವಘಡದಿಂದ ಬೆಂಕಿ - ತಪ್ಪಿದ ಬಾರಿ ದುರಂತ

Posted by Vidyamaana on 2023-12-23 04:37:41 |

Share: | | | | |


ಪುತ್ತೂರು; ತಾಲೂಕು ಆಸ್ಪತ್ರೆಯಲ್ಲಿ ವಿದ್ಯುತ್ ಅವಘಡದಿಂದ ಬೆಂಕಿ - ತಪ್ಪಿದ ಬಾರಿ ದುರಂತ

ಪುತ್ತೂರು: ತಾಲೂಕು ಸಾರ್ವಜನಿಕ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಅಗ್ನಿಶಾಮಕದಳ ಬೆಂಕಿ ನಂದಿಸವಲ್ಲಿ ಯಶಸ್ಸಿಯಾಗಿದೆ.


ಹವಾನಿಯಂತ್ರಿತ ಘಟಕದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡು ಬೆಂಕಿ ತಗುಲಿದ್ದು, ತಕ್ಷಣ ತೀವ್ರ ನಿಗಾ ಘಟಕದಲ್ಲಿದ್ದ ರೋಗಿಗಳನ್ನು ಸುರಕ್ಷಿತ ಸ್ಥಳಕ್ಕೆ ವರ್ಗಾವಣೆ ಮಾಡಲಾಗಿದೆ. ಅಗ್ನಿ ಶಾಮಕ ದಳದ ನೆರವಿನಿಂದ ಬೆಂಕಿ ನಂದಿಸುವ ಕೆಲಸ ವಾಗಿದೆ.


ಈ ಕುರಿತು ಪ್ರತಿಕ್ರಿಯಿಸಿರುವ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಆಶಾ ಪುತ್ತೂರಾಯ ಅವರು, " ಹವಾನಿಯಂತ್ರಿತ ಘಟಕದ ಚಿಪ್ಪು ಒಡೆದ ಪರಿಣಾಮ ಬೆಂಕಿ ಕಾಣಿಸಿಕೊಂಡಿದೆ, ಹವಾನಿಯಂತ್ರಿತ ಯಂತ್ರ ಸಹಿತ ಅದರ ಬಳಿ ಇದ್ದ ಕೆಲವು ಉಪಕರಣಕ್ಕೆ ಹಾನಿಯಾಗಿದೆ. ತಿವ್ರ ನಿಗಾ ಘಟಕದಲ್ಲಿ ಇಬ್ಬರು ರೋಗಿಗಳಿದ್ದು, ಅವರನ್ನು ಸುರಕ್ಷಿತ ಸ್ಥಳಕ್ಕೆ ವರ್ಗಾವಣೆ ಮಾಡಲಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ.ಮಾಹಿತಿ ತಿಳಿಯುತ್ತಲೇ ಘಟನಾ ಸ್ಥಳಕ್ಕೆ ಶಾಸಕ ಅಶೋಕ್‌ ರೈಯವರು ಧಾವಿಸಿದ್ದಾರೆ. ಪುತ್ತೂರಿನ ವಿಹಿಂಪ ಕಛೇರಿಯಲ್ಲಿ ತಂಗಿದ್ದ ದತ್ತ ಮಾಲಾಧಾರಿಗಳು, ಹಾಗೂ ಸ್ಥಳೀಯ ಯುವಕರು ಬೆಂಕಿ ನಂದಿಸಲು ಅಗ್ನಿ ಶಾಮಕ ದಳಕ್ಕೆ ನೆರವಾಗಿದ್ದಾರೆ ಎಂದು ತಿಳಿದು ಬಂದಿದೆ.ತಡ ರಾತ್ರಿ 12:30 ರಿಂದ 1 ಗಂಟೆಯ ಸುಮಾರಿಗೆ ಘಟನೆ ನಡೆದಿದೆ. ತಕ್ಷಣವೇ ಅಗ್ನಿಶಾಮಕ ದಳದವರು ಬೆಂಕಿ ನಂದಿಸಿ ದೋಡ್ಡ ಅನಾಹುತ ತಪ್ಪಿತು. ಬೆಂಕಿ ಕಾಣಿಸಿಕೊಂಡ ತಕ್ಷಣವೇ ಅಸ್ಪತ್ರೆ ಅಡಳಿತ ಅಧಿಕಾರಿ ಡಾ.ಅಶಾ ಪುತ್ತೂರಾಯ ಮತ್ತು ಅಸ್ಪತ್ರೆ ಸಿಬಂದಿಗಳು ರೋಗಿಗಳನ್ನು ಬೆಂಕಿ ತಗುಲಿದ ಕೋಠಡಿಯಿಂದ ತೆರವುವಗೊಳಿಸಿದ್ದರು .


ವಿಷಯ ತಿಳಿದ ತಕ್ಷಣವೇ ಪುತ್ತೂರು ವಿಶ್ವಹಿಂದೂ ಪರಿಷದ್‌ ಕಾರ್ಯಲಾಯದಲ್ಲಿ ಇದ್ದ ಬಜರಂಗದಳದ ದತ್ತ ಮಾಲಾದರಿಗಳು ಸ್ಥಳಕ್ಕೆ ಅಗಮಿಸಿ ಇಡಿ ಅಸ್ಪತ್ರೆಯಲ್ಲಿ ಬೂದಿಗಳಿಂದ ಕೂಡಿದ ಕೊಠಡಿಗಳನ್ನು ನೀರಿನಿಂದ ಸ್ವಚ್ಚಗೊಳಿಸಿದ್ದಾರೆ.ಮಂಗಳೂರಿನಲ್ಲಿದ್ದ ಪುತ್ತೂರಿನ ಶಾಸಕರಿಗೆ ವಿಷಯ ತಿಳಿದ ತಕ್ಷಣವೇ ಮಂಗಳೂರಿನಿಂದ ಪುತ್ತೂರು ಸರಕಾರಿ ಅಸ್ಪತ್ರೆಗೆ ಅಶೋಕ್ ರೈ ದೌಡಯಿಸಿದ್ದಾರೆ



Leave a Comment: