ಲಿಂಗನಮಕ್ಕಿ ಜಲಾಶಯದಿಂದ ಯಾವುದೇ ಕ್ಷಣದಲ್ಲಿ ನದಿಗೆ ನೀರು

ಸುದ್ದಿಗಳು News

Posted by vidyamaana on 2024-07-25 16:34:52 |

Share: | | | | |


ಲಿಂಗನಮಕ್ಕಿ ಜಲಾಶಯದಿಂದ ಯಾವುದೇ ಕ್ಷಣದಲ್ಲಿ ನದಿಗೆ ನೀರು

ಶಿವಮೊಗ್ಗ: ಲಿಂಗನಮಕ್ಕಿ ಜಲಾಶಯದಿಂದ ಯಾವುದೇ ಕ್ಷಣದಲ್ಲಿ ನದಿಗೆ ನೀರು ಹರಿಸಲಾಗುತ್ತದೆ. ಹೀಗಾಗಿ ನದಿ ಪಾತ್ರದಲ್ಲಿ ವಾಸಿಸುತ್ತಿರುವ ಜನರು ತಮ್ಮ ಜಾನುವಾರುಗಳೊಂದಿಗೆ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಕರ್ನಾಟಕ ವಿದ್ಯುತ್ ನಿಗಮದ ಕಾರ್ಯ ನಿರ್ವಾಹಕ ಎಂಜಿನಿಯರ್ ಬುಧವಾರ ಮುನ್ನೆಚ್ಚರಿಕೆ ನೀಡಿದ್ದಾರೆ

ಕಾರ್ಗಲ್ ನ ಲಿಂಗನಮಕ್ಕಿ ಜಲಾಶಯದ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿರುವ ಕಾರಣ ಜಲಾಶಯಕ್ಕೆ ಸದ್ಯ 60 ಸಾವಿರ ಕ್ಯುಸೆಕ್ ಒಳಹರಿವು ಇದೆ.

Additional Image


ಜಲಾಶಯದ ಗರಿಷ್ಠ ಮಟ್ಟ 1819 ಅಡಿಗಳು ಇದ್ದು, ಜಲಾಶಯದಲ್ಲಿ ಈಗ 1801. 20 ಅಡಿ ನೀರಿನ ಸಂಗ್ರಹ ಇದೆ. ಮಳೆ ಹೆಚ್ಚಿರುವುದರಿಂದ ಜಲಾಶಯದ ಮಟ್ಟ ಶೀಘ್ರವೇ ಗರಿಷ್ಠ ಮಟ್ಟ ತಲುಪುವ ಸಾಧ್ಯತೆ ಇದೆ.


ಅಣೆಕಟ್ಟೆಯ ಸುರಕ್ಷತೆಯ ದೃಷ್ಟಿಯಿಂದ ಯಾವುದೇ ಕ್ಷಣದಲ್ಲಿ ನದಿಗೆ ನೀರು ಹರಿಸಬಹುದು ಎಂದು ಕೆಪಿಸಿಎಲ್‌ ಪ್ರಕಟಣೆಯಲ್ಲಿ ತಿಳಿಸಿದೆ.

 Share: | | | | |


ಖರ್ಗೆ ಸಮ್ಮುಖದಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾದ ಮಾಜಿ ಸಿಎಂ ಜಗದೀಶ್‌ ಶೆಟ್ಟರ್

Posted by Vidyamaana on 2023-04-17 04:18:37 |

Share: | | | | |


ಖರ್ಗೆ ಸಮ್ಮುಖದಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾದ ಮಾಜಿ ಸಿಎಂ ಜಗದೀಶ್‌ ಶೆಟ್ಟರ್

ಬೆಂಗಳೂರು: ಬಿಜೆಪಿ ಟಿಕೆಟ್‌ ನಿರಾಕರಣೆಯಿಂದ ತೀವ್ರ ಅಸಮಾಧಾನಗೊಂಡು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ಸೋಮವಾರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್‌ ಖರ್ಗೆ ಅವರ ಸಮ್ಮುಖದಲ್ಲಿ ಅಧಿಕೃತವಾಗಿ ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾದರು.ಖರ್ಗೆ ಅವರು ಶೆಟ್ಟರ್‌ ಅವರಿಗೆ ಕಾಂಗ್ರೆಸ್‌ ಪಕ್ಷದ ಶಾಲು ಹೊದಿಸಿ, ಬಾವುಟ ನೀಡಿ ಪಕ್ಷಕ್ಕೆ ಬರಮಾಡಿಕೊಂಡರು.ಕೆಪಿಸಿಸಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷರಾದ ಡಿಕೆ ಶಿವಕುಮಾರ್‌, ಶೆಟ್ಟರ್‌ ಒಬ್ಬರ ಶ್ರೇಷ್ಠ, ಹಾಗೂ ಸರಳ, ಸಜ್ಜನಿಕೆಯ ರಾಜಕಾರಣಿ, ಒಂದೇ ಒಂದು ಕಪ್ಪು ಚುಕ್ಕೆ ಇಲ್ಲದೆ ಕೆಲಸ ಮಾಡಿಕೊಂಡು ಬಂದಿದ್ದಾರೆ. ರಾಜ್ಯದ ಸಿಎಂ ಆಗಿ, ಸ್ಪೀಕರ್‌ ಆಗಿ ಕೆಲಸ ಮಾಡಿದ್ದಾರೆ ಎಂದರು.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್‌ ಖರ್ಗೆ ಅವರು ಮಾತನಾಡಿ, ಜಗದೀಶ್‌ ಶೆಟ್ಟರ್‌ ಯೊಬ್ಬ ಉತ್ತಮ ನಾಯಕ. ಅವರು ನಮ್ಮ ಪಕ್ಷದ ತತ್ವ ಸಿದ್ದಾಂತ ಒಪ್ಪಿ ಶೆಟ್ಟರ್‌ ಕಾಂಗ್ರೆಸ್‌ ಸೇರುತ್ತಿದ್ದಾರೆ. ಶೆಟ್ಟರ್‌ ಪಕ್ಷ ಸೆರ್ಪಡೆಯಿಂದ ಉತ್ತರ ಕರ್ನಾಟಕದ ಭಾಗಕ್ಕೆ ಶಕ್ತಿ. ಶೆಟ್ಟರ್‌ ಅಭಯ್‌ ಸಿಂಗ್‌ ಪಾಟೀಲ್‌ ಸೇರಿ, ಹಲವು ನಾಯಕರು ಕಾಂಗ್ರೆಸ್‌ ಸೆರ್ಪಡೆಯಾಗುತ್ತಿದ್ದಾರೆ. ಶೆಟ್ಟರ್‌ ಬಿಜೆಪಿ ಪಕ್ಷವನ್ನು ಕಟ್ಟಿ ಬೆಳೆಸಿದ್ದಾರೆ. ಅದೇ ರೀತಿ ನಮ್ಮ ಪಕ್ಷದಲ್ಲೂ ಕೆಲಸ ಮಾಡುತ್ತಾರೆ ಎನ್ನುವ ವಿಶ್ವಾಸವಿದೆ.  ಕರ್ನಾಟಕದಲ್ಲಿ ನಾವು 150 ಸ್ಥಾನವನ್ನು ಗೆದ್ದೇ ಗೆಲ್ಲುತ್ತೇವೆ. ಕಾಂಗ್ರೆಸ್‌ ಪಕ್ಷಕ್ಕೆ ಜಗದೀಶ್‌ ಶೆಟ್ಟರ್‌ ಅವರನ್ನು ಸ್ವಾಗತಿಸುತ್ತೇನೆ ಎಂದರು.ಪಕ್ಷ ಸೇರ್ಪಡೆಯಾದ ಬಳಿಕ ಮಾತನಾಡಿದ ಜಗದೀಶ್‌ ಶೆಟ್ಟರ್‌,  ನಾನು ಬಿಜೆಪಿ ಬಿಟ್ಟು, ಕಾಂಗ್ರೆಸ್‌ ಸೇರಿರುವುದು ಬಹಳ ಜನಕ್ಕೆ ಅಚ್ಚರಿಯಾಗಿದೆ. ನಾನು ಬಿಜೆಪಿಯನ್ನು ಕಟ್ಟಿ ಬೆಳೆಸಿದ ವ್ಯಕ್ತಿ.  ಬಿಜೆಪಿ ನನಗೆ ಎಲ್ಲ ರೀತಿಯ ಗೌರವವನ್ನು ಕೊಟ್ಟಿದೆ. ಅದಕ್ಕೆ ಪ್ರತಿಯಾಗಿ ಪಕ್ಷ ಕೊಟ್ಟ ಜವಾಬ್ದಾರಿಯನ್ನು ನಾನು ನಿಭಾಯಿಸಿದ್ದೇನೆ. ಹಿರಿಯ ನಾಯಕನನ್ನು ಪಕ್ಷ ನಡೆಸಿಕೊಂಡ ರೀತಿಯಿಂದ ನೋವಾಗಿದೆ. ಜನರ ಆರ್ಶೀವಾದದಿಂದ ನಿರಂತರವಾಗಿ ಗೆಲ್ಲುತ್ತಾ ಬಂದಿದ್ದೇನೆ. ಈ ಬಾರಿ ಟಿಕೆಟ್‌ ಸಿಗುವ ವಿಶ್ವಾಸವಿತ್ತು. ಆದರೆ ಟಿಕೆಟ್‌ ಇಲ್ಲ ಎಂದಾಗ ತುಂಬಾ ಬೇಸರವಾಯಿತು. ಮೊದಲೇ ಟಿಕೆಟ್‌ ಇಲ್ಲ ಎಂದಿದ್ದರೆ, ಬೇಜಾರ್‌ ಆಗುತ್ತಿರಲಿಲ್ಲ. ಹಿರಿಯ ನಾಯಕನನ್ನು ಪಕ್ಷ ನಡೆಸಿಕೊಂಡ ರೀತಿಯಿಂದ ಬೇಸರವಾಗಿದೆ. ಬಿಜೆಪಿ ಪಕ್ಷ ಕಟ್ಟಿದ ನಾಯಕನಿಗೆ ಬೆಲೆ ಸಿಗಲಿಲ್ಲ. ಕಳೆದ 6 ತಿಂಗಳಿನಿಂದ ಪಕ್ಷ ನನ್ನನು ಕಡೆಗಣನೆ ಮಾಡಿದೆ. ಪಕ್ಷ ನನ್ನನು ಒತ್ತಾಯಪೂರ್ವಕವಾಗಿ ಹೊರ ಹಾಕಿದೆ. ಹಾಗಾಗಿ ನಾನು ಕಾಂಗ್ರೆಸ್‌ ನ ತತ್ವ ಸಿದ್ದಾಂತವನ್ನು ಒಪ್ಪಿ, ಕಾಂಗ್ರೆಸ್‌ ಸೇರ್ಪಡೆಯಾಗಿದ್ದೇನೆ ಎಂದರು.

ಸಂಸದ ಡಿವಿ ಸದಾನಂದ ಗೌಡ ನಡೆ ನಿಗೂಢ: ಬೆಂಗಳೂರಿನಿಂದ ಸುಳ್ಯಕ್ಕೆ ತೆರಳಿದ DVS

Posted by Vidyamaana on 2024-03-20 17:31:58 |

Share: | | | | |


ಸಂಸದ ಡಿವಿ ಸದಾನಂದ ಗೌಡ ನಡೆ ನಿಗೂಢ: ಬೆಂಗಳೂರಿನಿಂದ ಸುಳ್ಯಕ್ಕೆ ತೆರಳಿದ DVS

ಬೆಂಗಳೂರು : ಸಂಸದ ಡಿವಿ ಸದಾನಂದ ಗೌಡರ (DV S

non

ananda Gowda) ನಡೆ ಇನ್ನೂ ನಿಗೂಢವಾಗಿದ್ದು ಬೆಂಗಳೂರಿನಿಂದ ಸುಳ್ಯಕ್ಕೆ (Sullia) ಪ್ರಯಾಣಿಸಿದ್ದಾರೆ.ಬೆಂಗಳೂರು ಉತ್ತರ (Bengaluru North) ಕ್ಷೇತ್ರದ ಟಿಕೆಟ್‌ ಆಕಾಂಕ್ಷಿಯಾಗಿದ್ದ ಸದಾನಂದ ಗೌಡ ಇಂದು ಬೆಳಗ್ಗೆಯೇ ಸುಳ್ಯದತ್ತ ಪ್ರಯಾಣಿಸಿದ್ದು ಕುಟುಂಬಸ್ಥರು, ಸಂಬಂಧಿಕರ ಜತೆ ಸಮಾಲೋಚನೆ ನಡೆಸಲಿದ್ದಾರೆ.ಮಾರ್ಚ್‌ 18 ರಂದು ಹುಟ್ಟುಹಬ್ಬ ಆಚರಿಸಿದ್ದ ವೇಳೆ ನಾನು ನಾಳೆ ಸುದ್ದಿಗೋಷ್ಠಿ ನಡೆಸಿ ಮುಂದಿನ ನಡೆಯ ಬಗ್ಗೆ ಹೇಳುತ್ತೇನೆ ಎಂದು ತಿಳಿಸಿದ್ದರು. ಆದರೆ ಅವರು ಸುದ್ದಿಗೋಷ್ಠಿ ನಡೆಸಿರಲಿಲ್ಲ. ‌ ಹೀಗಾಗಿ ಇಂದು ಸುದ್ದಿಗೋಷ್ಠಿ ನಡೆಸಲಿದ್ದಾರೆ ಎನ್ನಲಾಗಿತ್ತು.


ಸದಾನಂದ ಗೌಡ ಗುರುವಾರ ಬೆಂಗಳೂರಿಗೆ (Bengaluru) ವಾಪಸ್‌ ಆಗಲಿದ್ದಾರೆ ಎನ್ನಲಾಗಿದೆ. ಬೆಂಗಳೂರಿಗೆ ಬಂದ ನಂತರ ಮುಂದಿನ ರಾಜಕೀಯ ನಡೆಯ ಬಗ್ಗೆ ಸುದ್ದಿಗೋಷ್ಠಿ ನಡೆಸುವ ಸಾಧ್ಯತೆಯಿದೆ


ಬೆಂಗಳೂರು ಉತ್ತರ ಕ್ಷೇತ್ರದ ಟಿಕೆಟ್‌ ಕೈ ತಪ್ಪಿದರಿಂದ ಅಸಮಾಧಾನಗೊಂಡಿರುವ ಡಿವಿಎಸ್‌ ಮೈಸೂರಿನಿಂದ (Mysuru) ಕಾಂಗ್ರೆಸ್‌ ಅಭ್ಯರ್ಥಿಯಾಗಲಿದ್ದಾರೆ ಎನ್ನಲಾಗುತ್ತಿದೆ. ಆದರೆ ಇಲ್ಲಿಯವರೆಗೆ ಯಾರೂ ಈ ವಿಚಾರವನ್ನು ಅಧಿಕೃತಗೊಳಿಸಿಲ್ಲ.


ಮಾಧ್ಯಮಗಳ ಜೊತೆ ಮಾತನಾಡಿದ್ದ ಸದಾನಂದ ಗೌಡ ಕಾಂಗ್ರೆಸ್‌ ನಾಯಕರು (Congress) ನನ್ನನ್ನು ಸಂಪರ್ಕಿಸಿದ್ದು ನಿಜ ಎಂದು ಒಪ್ಪಿಕೊಂಡಿದ್ದರು.

ಜಾಗದ ವಿವಾದ ಸಹಿತ ಅಯೋಧ್ಯಾ ಮಂತ್ರಾಕ್ಷತೆ ಕಾರಣಕ್ಕೇ ಹಲ್ಲೆ ನಡೆಸಲಾಗಿದೆ ಹಲ್ಲೆಗೊಳಗಾದ ಸಂತೋಷ್ ಬಿ.ಕೆ. ಪತ್ರಿಕಾಗೋಷ್ಠಿಯಲ್ಲಿ ಆರೋಪ

Posted by Vidyamaana on 2024-01-18 07:28:03 |

Share: | | | | |


ಜಾಗದ ವಿವಾದ ಸಹಿತ ಅಯೋಧ್ಯಾ ಮಂತ್ರಾಕ್ಷತೆ ಕಾರಣಕ್ಕೇ ಹಲ್ಲೆ ನಡೆಸಲಾಗಿದೆ  ಹಲ್ಲೆಗೊಳಗಾದ ಸಂತೋಷ್ ಬಿ.ಕೆ. ಪತ್ರಿಕಾಗೋಷ್ಠಿಯಲ್ಲಿ ಆರೋಪ

ಪುತ್ತೂರು: ಜಾಗದ ವಿವಾದ ಸಹಿತ ಅಯೋಧ್ಯೆಯ ಮಂತ್ರಾಕ್ಷತೆ ವಿತರಣಾ ಜವಾಬ್ದಾರಿ ನಮಗೆ ನೀಡಲಿಲ್ಲ ಎಂಬ ಕಾರಣಕ್ಕೆ ಪುತ್ತಿಲ ಪರಿವಾರದಲ್ಲಿ ಗುರುತಿಸಿಕೊಂಡವರಿಂದ ನಮಗೆ ಹಲ್ಲೆ ನಡೆದಿದೆ ಎಂದು ಸೋಮವಾರ ರಾತ್ರಿ ಹಲ್ಲೆಗೊಳಗಾದ ಮುಂಡೂರು ನಿವಾಸಿ ಸಂತೋಷ್ ಬಿ.ಕೆ. ಆರೋಪಿಸಿದ್ದಾರೆ.


ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಮುಂಡೂರು ಪರಿಸರದಲ್ಲಿ ಅಕ್ಷತೆ ವಿತರಣೆ ಜವಾಬ್ದಾರಿಯನ್ನು ನನಗೆ ನೀಡಲಾಗಿದ್ದು, ಶುಕ್ರವಾರ ಮಂತ್ರಾಕ್ಷತೆ ವಿತರಿಸಿ ಉಳಿದ ಮಂತ್ರಾಕ್ಷತೆಯನ್ನು ಮುಂಡೂರು ಶ್ರೀ ಮೃತ್ಯುಂಜಯೇಶ್ವರ ದೇವಸ್ಥಾನದಲ್ಲಿ ಇಟ್ಟಿದ್ದೇವು. ಅದೇ ರಾತ್ರಿ ಪುತ್ತಿಲ ಪರಿವಾರದವರು ನಮ್ಮಲ್ಲಿ ಕೇಳದೆ ಮಂತ್ರಾಕ್ಷತೆಯನ್ನು ದೇವಸ್ಥಾನದಿಂದ ತೆಗೆದುಕೊಂಡು ಹೋಗಿ ವಿತರಿಸಿದ್ದಾರೆ. ಇದೆಲ್ಲಾ ನಡೆದ ಬಳಿಕ ಸೋಮವಾರ ಕುಕ್ಕಿನಡ್ಕ ದೇವಸ್ಥಾನದಲ್ಲಿ ಮಂತ್ರಾಕ್ಷತೆ ಕುರಿತು ಸಭೆ ನಡೆದಿದ್ದು, ಸಭೆ ಮುಗಿಸಿ ರಾತ್ರಿ ಮನೆಗೆ ಹೋಗುವಾಗ ಕಾಲುದಾರಿಯಲ್ಲಿ ಧನಂಜಯ, ಕೇಶವ ಹಾಗೂ ಜಗದೀಶ್ ಎಂಬವರು ಏಕಾಏಕಿ ಕಬ್ಬಿಣದ ರಾಡು ಹಾಗೂ ಹೆಲ್ಮೆಟ್ ನಿಂದ ಹಲ್ಲೆ ಮಾಡಿದ್ದಾರೆ. ಬೊಬ್ಬೆ ಕೇಳಿ ನನ್ನ ತಾಯಿ ಸವಿತಾ ಅವರು ಸ್ಥಳಕ್ಕೆ ಬಂದಾಗ ಅವರನ್ನು ದೂಡಿ ಹಾಕಿದ್ದಾರೆ. ಪರಿಣಾಮ ಅವರಿಗೂ ಗಾಯವಾಗಿದೆ ಎಂದು ತಿಳಿಸಿದರು.




ಇದಲ್ಲದೆ ನಾಡಾಜೆ – ಬರೆಕೊಲಾಡಿ ರಸ್ತೆ ವಿವಾದವಿದ್ದು, ರಸ್ತೆಗಾಗಿ ನಮ್ಮ ವರ್ಗ ಜಾಗವನ್ನು ಬಳಸಿಕೊಂಡಿದ್ದರು. ಇದೇ ರಸ್ತೆಯನ್ನು ಮೂರು ವರ್ಷದ ಹಿಂದೆ ಬಂದ್ ಮಾಡಿದ್ದರು. ಬಳಿಕ ಜಾಗದ ವಿವಾದ ಮತ್ತೆ ಮತ್ತೆ ಮರುಕಳಿಸಿತ್ತು. ಈ ಘಟನೆಯಲ್ಲಿ ಸಂಪೂರ್ಣ ಪುತ್ತಿಲ ಪರಿವಾರದ ಕೈವಾಡವಿದೆ. ಈ ಕುರಿತು ಎಲ್ಲಿ ಬೇಕಾದರೂ ಬಂದು ನಾನು ಪ್ರಮಾಣ ಮಾಡುತ್ತೇನೆ ಎಂದು ಅವರು ತಿಳಿಸಿದರು.

Breaking: ಬಿಜೆಪಿಯಿಂದ ಮಾಜಿ ಸಚಿವ ಕೆಎಸ್‌ ಈಶ್ವರಪ್ಪ ಆರು ವರ್ಷ ಉಚ್ಛಾಟನೆ

Posted by Vidyamaana on 2024-04-22 21:31:47 |

Share: | | | | |


Breaking: ಬಿಜೆಪಿಯಿಂದ ಮಾಜಿ ಸಚಿವ ಕೆಎಸ್‌ ಈಶ್ವರಪ್ಪ ಆರು ವರ್ಷ ಉಚ್ಛಾಟನೆ

ಬೆಂಗಳೂರು; ಬಿಜೆಪಿಯಿಂದ ಮಾಜಿ ಸಚಿವ ಕೆ ಎಸ್ಈಶ್ವರಪ್ಪ ಅವರನ್ನು 6 ವರ್ಷಗಳ ಕಾಲ ಉಚ್ಛಾಟನೆ ಮಾಡಿ ಬಿಜೆಪಿ ಶಿಸ್ತು ಸಮಿತಿ ಆದೇಶ ಹೊರಡಿಸಿದೆ.

ಪುತ್ತೂರು : ಮೆಸ್ಕಾಂ ತುರ್ತು ಕಾಮಗಾರಿ: ಇಂದು (ಜುಲೈ 04) ವಿದ್ಯುತ್ ನಿಲುಗಡೆ!!!

Posted by Vidyamaana on 2023-07-03 23:42:26 |

Share: | | | | |


ಪುತ್ತೂರು : ಮೆಸ್ಕಾಂ ತುರ್ತು ಕಾಮಗಾರಿ: ಇಂದು (ಜುಲೈ 04) ವಿದ್ಯುತ್ ನಿಲುಗಡೆ!!!

ಪುತ್ತೂರು: ತುರ್ತು ಕಾಮಗಾರಿ ನಿಮಿತ್ತ 33/11 ಕೆವಿ ಕ್ಯಾಂಪ್ಟ್ ವಿದ್ಯುತ್‌ ಉಪಕೇಂದ್ರದಿಂದ ಹೊರಡುವ ಮುಕ್ರಂಪಾಡಿ, ಮುಕ್ವೆ ಮತ್ತು ಮುಂಡೂರು ಫೀಡರ್‌ನಲ್ಲಿ ಜು.4ರಂದು ಪೂರ್ವಾಹ್ನ ಗಂಟೆ 10ರಿಂದ ಅಪರಾಹ್ನ 4ರ ವರೆಗೆ ವಿದ್ಯುತ್ ನಿಲುಗಡೆ ಮಾಡಲಾಗುವುದು. ಆದುದರಿಂದ 33/11ಕೆವಿ ಕ್ಯಾಂಪ್ಕೋ ವಿದ್ಯುತ್ ಉಪಕೇಂದ್ರದಿಂದ ಹೊರಡುವ ಮೇಲೆ ತಿಳಿಸಿದ ಫೀಡರ್‌ನಿಂದ ವಿದ್ಯುತ್ ಸರಬರಾಜಾಗುವ ಕೂರ್ನಡ್ಕ, ಕೆಮ್ಮಿಂಜೆ, ಮರೀಲ್, ಮುಕ್ರಂಪಾಡಿ, ಮೊಟ್ಟೆತ್ತಡ್ಕ, ಮುಂಡೂರು ಮತ್ತು ಸಂಪ್ಯ ಪರಿಸರದ ವಿದ್ಯುತ್ ಬಳಕೆದಾರರು ಗಮನಿಸಿ ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

Mangaluru ಪಬ್‌ನಲ್ಲಿ ಮಹಿಳೆಗೆ ಕಿರುಕುಳ: ಪುತ್ತೂರಿನ ನಾಲ್ವರ ಬಂಧನ

Posted by Vidyamaana on 2024-08-06 07:29:11 |

Share: | | | | |


Mangaluru ಪಬ್‌ನಲ್ಲಿ ಮಹಿಳೆಗೆ ಕಿರುಕುಳ: ಪುತ್ತೂರಿನ ನಾಲ್ವರ ಬಂಧನ

ಮಂಗಳೂರು : ಪಾಂಡೇಶ್ವರದ ಪಬ್‌ನಲ್ಲಿ ಮಹಿಳೆಗೆ ಕಿರುಕುಳ ನೀಡಿದ ಆರೋಪದಲ್ಲಿ ಪುತ್ತೂರು ನಿವಾಸಿಗಳಾದ ಮಹೇಶ್‌ (28), ವಿನಯ್‌ (30), ನಿತೇಶ್‌ (32) ಮತ್ತು ಪ್ರಿತೇಶ್‌ (33) ಅವರನ್ನು ಪೊಲೀಸರು ಬಂಧಿಸಿದ್ದಾರೆ.ಶನಿವಾರ ಮಹಿಳೆಯೊಬ್ಬರು ಗೆಳತಿ ಜತೆ ಪಬ್‌ಗ ಹೋಗಿದ್ದರು.



Leave a Comment: