ಪಿಜಿ ಯುವತಿಯ ಬರ್ಬರ ಹತ್ಯೆ ಕೇಸ್‌ಗೆ ಟ್ವಿಸ್ಟ್

ಸುದ್ದಿಗಳು News

Posted by vidyamaana on 2024-07-25 09:34:49 |

Share: | | | | |


ಪಿಜಿ ಯುವತಿಯ ಬರ್ಬರ ಹತ್ಯೆ ಕೇಸ್‌ಗೆ ಟ್ವಿಸ್ಟ್

ಬೆಂಗಳೂರು : ಕೋರಮಂಗಲದ ಲೇಡಿಸ್ ಪಿಜಿ ಒಳಗೆ ನುಗ್ಗಿ ಯುವತಿಯ ಬರ್ಬರ ಹತ್ಯೆ ಪ್ರಕರಣಕ್ಕೆ ಹೊಸ ಟ್ವಿಸ್ಟ್‌ ಸಿಕ್ಕಿದ್ದು, ಈ ಬಗ್ಗೆ ಪೊಲೀಸರು ಮಹತ್ವದ ಮಾಹಿತಿ ನೀಡಿದ್ದಾರೆ. ಮೃತ ಯುವತಿಯನ್ನು ಬಿಹಾರದ ಕೃತಿ ಕುಮಾರಿ‌ (24) ಎಂದು ಗುರುತಿಸಲಾಗಿದ್ದು, ಆಕೆಯ ಪ್ರಿಯತಮನೇ ಕೊಲೆಗಾರ ಎಂದು ಪೊಲೀಸರು ತಿಳಿಸಿದ್ದಾರೆ .

ಕೃತಿ ಕುಮಾರಿ ತಾನು ಪ್ರೀತಿಸುತ್ತಿದ್ದ ಯುವಕನಿಂದಲೇ ಕೊಲೆಯಾಗಿದ್ದಾರೆ. ರಾತ್ರಿ 11:30ಕ್ಕೆ ಕೃತಿ ಕುಮಾರಿಯೇ ಯುವಕನನ್ನು ಕರೆದುಕೊಂಡು ಬಂದಿರುವ ಬಗ್ಗೆ ಮೇಲ್ನೋಟಕ್ಕೆ ಮಾಹಿತಿ ಸಿಕ್ಕಿದೆ. ಪಿಜಿಯಿಂದ ಹೊರ ಬಂದ ಕೃತಿ ತನ್ನ ಪ್ರಿಯತಮನ ಜತೆ ರಾತ್ರಿ ಊಟ ಮಾಡಿದ್ದರು. ಊಟ ಮುಗಿಸಿದ ಕೃತಿ ತನ್ನೊಂದಿಗೆ ಯುವಕನ್ನು ಪಿಜಿಗೆ ಕರೆತಂದಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಕೃತಿಯ ರೂಂಗೆ ಆಗಮಿಸಿದ್ದ ವೇಳೆ ಇಬ್ಬರ ಮಧ್ಯೆ ಗಲಾಟೆಯಾಗಿ ಕೊಲೆಯಾಗಿರುವ ಶಂಕೆ ಇದೆ.

ಪಿಜಿಯ ಸಿಸಿಟಿವಿ ಎಲ್ಲವನ್ನು ಕೂಡ ಪರಿಶೀಲನೆ ನಡೆಸಿದ್ದೇವೆ. ಪಿಜಿಯ ನಿರ್ಲಕ್ಷ್ಯತನದ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಆರೋಪಿ ಪತ್ತೆಗಾಗಿ ಪೊಲೀಸರ ವಿಶೇಷ ತಂಡವನ್ನ ರಚನೆ ಮಾಡಲಾಗಿದೆ ಎಂದಿದ್ದಾರೆ

 Share: | | | | |


ರಾತೋರಾತ್ರಿ ಅಂಗನವಾಡಿಗೆ ನುಗ್ಗಿದ ಕಿಡಿಗೇಡಿಗಳಿಂದ ಆಮ್ಲೆಟ್ ಸೇವೆ

Posted by Vidyamaana on 2024-03-19 11:30:46 |

Share: | | | | |


ರಾತೋರಾತ್ರಿ ಅಂಗನವಾಡಿಗೆ ನುಗ್ಗಿದ ಕಿಡಿಗೇಡಿಗಳಿಂದ ಆಮ್ಲೆಟ್ ಸೇವೆ

ಪುತ್ತೂರು: ಕಳೆದ ಹಲವಾರು ತಿಂಗಳಿಂದ ನೆಲ್ಲಿಕಟ್ಟೆ ಪರಿಸರದ ಶಾಲೆ, ಆರೋಗ್ಯ ಕೇಂದ್ರಗಳಲ್ಲಿ ಚಿಲ್ಲರೆ ಕಳವು, ಸೊತ್ತುಗಳಿಗೆ ಹಾನಿ ಮಾಡುವ ಪ್ರಕರಣ ಸೇರಿ ಸದಾ ಒಂದಿಲ್ಲೊಂದು ಅವಾಂತರ ನಡೆಯುತ್ತಿದ್ದು, ಇದೀಗ ಅಂಗನವಾಡಿ ಕೇಂದ್ರದ ಬೀಗ ಮುರಿದು ಒಳನುಗ್ಗಿದ ಕಿಡಿಗೇಡಿಗಳು ಪುಟಾಣಿಗಳಿಗೆಂದು ಇಡಲಾಗಿದ್ದ ಕೋಳಿ ಮೊಟ್ಟೆಗಳನ್ನು ಅಮೈಟ್ ಮಾಡಿ ತಿಂದು ತೆರಳಿರುವ ಘಟನೆ ಮಾ.18ರಂದು ಬೆಳಕಿಗೆ ಬಂದಿದೆ.


ನೆಲ್ಲಿಕಟ್ಟೆಯ ಶ್ರೀ ರಾಮಕೃಷ್ಣ ಸಮಾಜ ಸೇವಾ ಸಂಸ್ಥೆಯ ಬಳಿಯ ಅಂಗನವಾಡಿ ಕೇಂದ್ರಕ್ಕೆ ಬೆಳಿಗ್ಗೆ ಅಂಗನವಾಡಿ ಕಾರ್ಯಕರ್ತೆ ಬಂದಾಗ ಕೇಂದ್ರದ ಬಾಗಿಲ ಬೀಗ ಒಡೆದಿತ್ತು. ಒಳಗೆ ನೋಡಿದಾಗ ಅಡುಗೆ ಕೋಣೆಯಲ್ಲಿ ಪುಟಾಣಿಗಳಿಗೆಂದು ದಾಸ್ತಾನಿರಿಸಲಾಗಿದ್ದ ಮೊಟ್ಟೆಗಳು ಒಡೆದಿದ್ದು, ಪಕ್ಕದಲ್ಲಿರುವ ಗ್ಯಾಸ್ ಸ್ಟವ್ ನ ಬಾನಲೆಯಲ್ಲಿ ಅಮ್ಮೆಟ್ ತುಂಡು ಇರುವುದು ಕಂಡುಬಂದಿದೆ. ಯಾರೋ ಕಿಡಿಗೇಡಿಗಳು ರಾತ್ರಿ ವೇಳೆ ಅಂಗನವಾಡಿಗೆ ನುಗ್ಗಿ ಅಮ್ಮೆಟ್ ಮಾಡಿ ತಿಂದು ಹೋಗಿದ್ದಾರೆ. ಘಟನೆ ಕುರಿತು ಪೊಲೀಸರು ಬಂದು ಮಾಹಿತಿ ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ. ವಾರದ ಹಿಂದೆಯಷ್ಟೆ ಪಕ್ಕದ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಿಡಿಗೇಡಿಗಳು ಸೊತ್ತುಗಳನ್ನು ನಾಶ ಮಾಡಿ ಗಲೀಜು ಮಾಡಿದ್ದರು.

ವಕೀಲರೊಬ್ಬರ ಮೇಲೆ ಪೊಲೀಸರ ಹಲ್ಲೆ ಆರೋಪ

Posted by Vidyamaana on 2023-12-02 08:20:47 |

Share: | | | | |


ವಕೀಲರೊಬ್ಬರ ಮೇಲೆ ಪೊಲೀಸರ ಹಲ್ಲೆ ಆರೋಪ

ಚಿಕ್ಕಮಗಳೂರು: ಬೈಕ್ ಓಡಿಸುವಾಗ ಹೆಲ್ಮೆಟ್ ಹಾಕಿಲ್ಲದ ಕಾರಣಕ್ಕಾಗಿ ಪೊಲೀಸರು ವಕೀಲನನ್ನು ಠಾಣೆಗೆ ಕರೆದುಕೊಂಡು ಹೋಗಿ ಮನಸ್ಸೋ ಇಚ್ಛೆ ಹಲ್ಲೆ ನಡೆಸಿರುವ ಘಟನೆ ಗುರುವಾರ ರಾತ್ರಿ ಟೌನ್ ಪೊಲೀಸ್ ಠಾಣೆಯಲ್ಲಿ ನಡೆದಿತ್ತು. ಈ ಘಟನೆಯಲ್ಲಿ ಯುವ ವಕೀಲ ಎನ್.ಟಿ ಪ್ರೀತಂ ತೀವ್ರವಾಗಿ ಗಾಯಗೊಂಡಿದ್ದರು.ಈ ಘಟನೆ ಸಂಬಂಧ 6 ಪೊಲೀಸರನ್ನು ಅಮಾನುತುಗೊಳಿಸಲಾಗಿದೆ.


ಹೆಲ್ಮೆಟ್ ಹಾಕಿರದ ಕಾರಣಕ್ಕೆ ವಕೀಲನನ್ನೇ ಥಳಿಸಿದ ಘಟನೆ ಸಂಬಂಧಿಸಿದಂತೆ ಚಿಕ್ಕಮಗಳೂರಿನ ಟೌನ್ ಪೊಲೀಸ್ ಠಾಣೆಯ ಪಿಎಸ್‌ಐ ಮಹೇಶ್ ಪೂಜಾರಿ, ಎಎಸ್‌ಐ ರಾಮಪ್ಪ, ಮುಖ್ಯ ಪೇದೆ ಶಶಿಧರ, ಪೇದೆಗಳಾದ ಗುರುಪ್ರಸಾದ್, ಬಿ.ಕೆ ನಿಖಿಲ್ ಹಾಗೂ ವಿ.ಟಿ ಯುವರಾಜ ಅವರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿಕ್ರಂ ಅಮಟೆ ಅಮಾನತುಗೊಳಿಸಿ ಶುಕ್ರವಾರ ಆದೇಶಿಸಿದ್ದಾರೆ.ಗುರುವಾರ ರಾತ್ರಿ ಯುವ ವಕೀಲ ಪ್ರೀತಂ ಮಾರ್ಕೆಟ್ ರಸ್ತೆಯಲ್ಲಿ ಬೈಕಿನಲ್ಲಿ ಹೋಗುತ್ತಿದ್ದಾಗ ಟೌನ್ ಠಾಣೆಯ ಮಫ್ತಿಯಲ್ಲಿದ್ದ ಪೊಲೀಸರು ಬೈಕ್ ನಿಲ್ಲಿಸಿ ಹೆಲ್ಮೆಟ್ ಎಲ್ಲಿ ಎಂದು ಕೇಳುತ್ತಲೇ ಬೈಕಿನ ಕೀಯನ್ನು ತೆಗೆದುಕೊಂಡು, ಪೊಲೀಸ್ ಠಾಣೆ ಒಳಗೆ ಹೋಗಿದ್ದಾರೆ. ಠಾಣೆಯೊಳಗೆ ಹೋಗುತ್ತಿದ್ದಂತೆ ಪೊಲೀಸರು ಲಾಠಿ, ಪೈಪ್ ಗಳಿಂದ ಹಿಗ್ಗಾಮುಗ್ಗಾ ಥಳಿಸಿದ್ದಾರೆ ಎನ್ನಲಾಗಿದೆ. ಈ ಘಟನೆ ಸಂಬಂಧ ಡಿ.5ರೊಳಗೆ ವರದಿ ನೀಡುವಂತೆ ಹೈಕೋರ್ಟ್ ಸೂಚಿಸಿದೆ.

BREAKING :ಮಹಿಳಾ ದಿನಾಚರಣೆ ಪ್ರಯುಕ್ತ ಭರ್ಜರಿ ಗಿಫ್ಟ್ ನೀಡಿದ ಮೋದಿ : LPG ಸಿಲಿಂಡರ್ ದರದಲ್ಲಿ 100ರೂ.ಇಳಿಕೆ

Posted by Vidyamaana on 2024-03-08 10:56:24 |

Share: | | | | |


BREAKING :ಮಹಿಳಾ ದಿನಾಚರಣೆ ಪ್ರಯುಕ್ತ ಭರ್ಜರಿ ಗಿಫ್ಟ್ ನೀಡಿದ ಮೋದಿ : LPG ಸಿಲಿಂಡರ್ ದರದಲ್ಲಿ 100ರೂ.ಇಳಿಕೆ

ನವದೆಹಲಿ : ಇಂದು ಮಹಿಳಾ ದಿನಾಚಾರಣೆ ಅಂಗವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಯವರು ದೇಶದ ಎಲ್ಲಾ ಮಹಿಳೆಯರಿಗೆ ಭರ್ಜರಿ ಗಿಫ್ಟ್ ನೀಡಿದ್ದು ಇದೀಗ ಎಲ್‌ಪಿಜಿ ಸಿಲಿಂಡರ್ಗಳ ದರದ ಮೇಲಿನ 100 ರೂಪಾಯಿಯನ್ನು ಕಡಿತಗೊಳಿಸಿದ್ದಾರೆ. ಈ ಕುರಿತು ಅವರು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.ಸಾಮಾಜಿಕ ಜಾಲತಾಣದಲ್ಲಿ ಅವರು, ಇಂದು, ಮಹಿಳಾ ದಿನದಂದು, ನಮ್ಮ ಸರ್ಕಾರವು ಎಲ್ಪಿಜಿ ಸಿಲಿಂಡರ್ ಬೆಲೆಯನ್ನು ರೂ. 100. ಗೆ ಇಳಿಸಿದ್ದೇವೆ. ಇದು ದೇಶದಾದ್ಯಂತ ಲಕ್ಷಾಂತರ ಕುಟುಂಬಗಳ ಮೇಲೆ ಆರ್ಥಿಕ ಹೊರೆಯನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ, ವಿಶೇಷವಾಗಿ ನಮ್ಮ ನಾರಿ ಶಕ್ತಿಗೆ ಪ್ರಯೋಜನವನ್ನು ನೀಡುತ್ತದೆ.ಅಡುಗೆ ಅನಿಲವನ್ನು ಹೆಚ್ಚು ಕೈಗೆಟುಕುವಂತೆ ಮಾಡುವ ಮೂಲಕ, ನಾವು ಕುಟುಂಬಗಳ ಯೋಗಕ್ಷೇಮವನ್ನು ಬೆಂಬಲಿಸಲು ಮತ್ತು ಆರೋಗ್ಯಕರ ವಾತಾವರಣವನ್ನು ಖಚಿತಪಡಿಸಿಕೊಳ್ಳಲು ಗುರಿಯನ್ನು ಹೊಂದಿದ್ದೇವೆ. ಇದು ಮಹಿಳೆಯರನ್ನು ಸಬಲೀಕರಣಗೊಳಿಸುವ ಮತ್ತು ಅವರಿಗೆ ಸುಲಭವಾಗಿ ಬದುಕುವ ಖಾತ್ರಿಪಡಿಸುವ ನಮ್ಮ ಬದ್ಧತೆಗೆ ಅನುಗುಣವಾಗಿದೆ ಎಂದು ತಿಳಿಸಿದ್ದಾರೆ

ಬುದ್ದಿ ಹೇಳಿದ್ದಕ್ಕೆ ಶಿಕ್ಷಕನಿಗೆ ಮಾರಕಾಸ್ತ್ರ ಹಿಡಿದು ವಿದ್ಯಾರ್ಥಿ ಬೆದರಿಕೆ

Posted by Vidyamaana on 2023-08-25 08:59:25 |

Share: | | | | |


ಬುದ್ದಿ ಹೇಳಿದ್ದಕ್ಕೆ ಶಿಕ್ಷಕನಿಗೆ ಮಾರಕಾಸ್ತ್ರ ಹಿಡಿದು ವಿದ್ಯಾರ್ಥಿ ಬೆದರಿಕೆ

ಮಂಡ್ಯ: ತರಗತಿಗೆ ಹಾಜರಾಗದ ಬಗ್ಗೆ ಪೋಷಕರಿಗೆ ಮಾಹಿತಿ ನೀಡಿದ್ದಕ್ಕೆ ವಿದ್ಯಾರ್ಥಿಯೊಬ್ಬ ಶಿಕ್ಷಕರ ಎದುರು ಲಾಂಗ್ ಝಳಪಿಸಿದ ಘಟನೆ ನಾಗಮಂಗಲದಲ್ಲಿ ನಡೆದಿದೆ.

ನಗರದ ಖಾಸಗಿ ಕಾಲೇಜಿನಲ್ಲಿ ಡಿಪ್ಲೋಮಾ ವ್ಯಾಸಾಂಗ ಮಾಡುತ್ತಿದ್ದ ವಿದ್ಯಾರ್ಥಿಯೊಬ್ಬ ತರಗತಿಗೆ ಸರಿಯಾಗಿ ಹಾಜರಾಗುತ್ತಿರಲಿಲ್ಲ. ಈ ಬಗ್ಗೆ ಉಪನ್ಯಾಸಕರೊಬ್ಬರು ತಿಳುವಳಿಕೆ ಹೇಳುವಂತೆ ಪೋಷಕರಿಗೆ ಮಾಹಿತಿ ನೀಡಿದ್ದಾರೆ. ಇದರಿಂದ ಕೋಪಗೊಂಡ ವಿದ್ಯಾರ್ಥಿ ತಲವಾರು ಹಿಡಿದು ಉಪನ್ಯಾಸಕರಿಗೆ ಬೆದರಿಕೆ ಹಾಕಿದ್ದಾನೆ. ಬೆದರಿಕೆ ಹಾಕುತ್ತಿರುವ ವೀಡಿಯೋ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.


ಈ ಸಂಬಂಧ ಬೆಳ್ಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ರಿಲೀಸ್

Posted by Vidyamaana on 2023-04-11 20:45:43 |

Share: | | | | |


ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ರಿಲೀಸ್

ಪುತ್ತೂರು: ರಾಜಕೀಯ ಜಂಜಾಟಕ್ಕೆ ಕಾರಣವಾಗಿದ್ದ ಪುತ್ತೂರು ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷೆ ಆಶಾ ತಿಮ್ಮಪ್ಪ ಅವರನ್ನು ಕಣಕ್ಕಿಳಿಸಲಾಗಿದೆ.

ಮಹಿಳೆಯ ಚಿನ್ನದ ಸರ ಎಗರಿಸಿದ್ದ ಬಿಸಿರೋಡ್ ಮೂಲದ ಜುಬೈರ್ ಸಹಿತ ಕುಖ್ಯಾತ ಕಳ್ಳರಿಬ್ಬರ ಸೆರೆ

Posted by Vidyamaana on 2024-02-24 21:28:02 |

Share: | | | | |


ಮಹಿಳೆಯ ಚಿನ್ನದ ಸರ ಎಗರಿಸಿದ್ದ ಬಿಸಿರೋಡ್ ಮೂಲದ ಜುಬೈರ್ ಸಹಿತ  ಕುಖ್ಯಾತ ಕಳ್ಳರಿಬ್ಬರ ಸೆರೆ

ಮಂಗಳೂರು, ಫೆ.24: ಬಜಾಲ್ ಜೆಎಂ ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಮಹಿಳೆಯೊಬ್ಬರ ಚಿನ್ನದ ಸರ ಕಿತ್ತುಕೊಂಡು ಹೋಗಿದ್ದ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ಬೆನ್ನು ಹತ್ತಿದ ಪೊಲೀಸರು ಕೇರಳ ಮೂಲದ ಅಂತಾರಾಜ್ಯ ಸರಗಳ್ಳರನ್ನು ಬಂಧಿಸಿದ್ದಾರೆ.

ಮೂಲತಃ ಕಾಸರಗೋಡು ಜಿಲ್ಲೆಯ ಚೆರ್ಕಳ ನಿವಾಸಿ, ಬಂಟ್ವಾಳದ ಮಿತ್ತಬೈಲ್ ಶಾಂತಿಯಂಗಡಿಯಲ್ಲಿ ನೆಲೆಸಿದ್ದ ಮೊಹಮ್ಮದ್ ಆಲಿ (32) ಮತ್ತು ಬಿಸಿ ರೋಡ್ ಶಾಂತಿಯಂಗಡಿ ನಿವಾಸಿ ಜುಬೈರ್ (32) ಬಂಧಿತರು.


ಇವರು ರಸ್ತೆಯಲ್ಲಿ ನಡೆದುಹೋಗುತ್ತಿದ್ದ ಮಹಿಳೆಯ ಕುತ್ತಿಗೆಯಿಂದ 16 ಗ್ರಾಮ್ ತೂಕದ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದರು. ಆರೋಪಿಗಳನ್ನು ಬಂಧಿಸಿ, ಚಿನ್ನದ ಸರವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿ ಮೊಹಮ್ಮದ್ ಆಲಿ ವಿರುದ್ಧ ಕಾಸರಗೋಡು ಜಿಲ್ಲೆಯ ಬದಿಯಡ್ಕ, ಮಂಜೇಶ್ವರ, ಬಂಟ್ವಾಳ, ವಿಟ್ಲ, ಮಂಗಳೂರಿನ ಬರ್ಕೆ ಠಾಣೆಗಳಲ್ಲಿ ಮನೆ ಕಳವು., ಸರ ಸುಲಿಗೆ, ಜೈಲಿನಲ್ಲಿ ಹೊಡೆದಾಟ ಸೇರಿ 15 ಪ್ರಕರಣ ದಾಖಲಾಗಿದೆ. ಕಂಕನಾಡಿ ನಗರ ಠಾಣೆಯ ಇನ್ಸ್ ಪೆಕ್ಟರ್ ಟಿಡಿ ನಾಗರಾಜ್ ನೇತೃತ್ವದಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.



Leave a Comment: