ಕಾಲೇಜು ಶುಲ್ಕ ಹಣದಲ್ಲಿ ದಂಡ ಕಟ್ಟಿದ ಯುವಕ.! PSI ಮಾಡಿದ್ದೇನು ಗೊತ್ತಾ..?

ಸುದ್ದಿಗಳು News

Posted by vidyamaana on 2024-07-25 06:35:41 |

Share: | | | | |


ಕಾಲೇಜು ಶುಲ್ಕ ಹಣದಲ್ಲಿ ದಂಡ ಕಟ್ಟಿದ ಯುವಕ.! PSI ಮಾಡಿದ್ದೇನು ಗೊತ್ತಾ..?

ಬಾಗಲಕೋಟೆ: ಬಾಗಲಕೋಟೆ ಜಿಲ್ಲೆ ಇಲಕಲ್ ನಗರದ ಕಂಠಿ ಸರ್ಕಲ್ ಬಳಿ ತ್ರಿಬಲ್ ರೈಡ್ ನಲ್ಲಿ ಬಂದ ಯುವಕರಿಗೆ ಪಿಎಸ್ ಐ ಬುದ್ದಿವಾದ ಹೇಳಿದ ಘಟನೆ ನಡೆದಿದೆ. ತ್ರಿಬಲ್ ರೈಡ್ ಮೂಲಕ ಕಾಲೇಜ್ ಅಡ್ಮಿಷನ್ ಗೆ ಹೊರಟಿದ್ದ ವಿದ್ಯಾರ್ಥಿಗಳನ್ನು ಇಳಕಲ್ ನಗರ ಠಾಣಾ ಮಹಿಳಾ ಪಿಎಸ್‌ಐ ಎಸ್.ಆರ್.ನಾಯಕ್ ಎಂಬವರು ಬಾಲಕನಿಗೆ ದಂಡ ಕಟ್ಟುವಂತೆ ಒತ್ತಾಯಿಸಿದ್ದರು.

ಆದ್ರೆ, ಕಣ್ಣೀರಿಟ್ಟ ಬಾಲಕ, ನನ್ನ ಬಳಿ ಹಣವಿಲ್ಲ ಆದರೆ, ಕಾಲೇಜು ಶುಲ್ಕ ಕಟ್ಟಲೆಂದು ಇಟ್ಟುಕೊಂಡಿರುವ ದುಡ್ಡಿದೆ ಅಷ್ಟೇ. ಅದನ್ನೇ ತಗೆದುಕೊಳ್ಳಿ ಎಂದು ಅಳುತ್ತ ದುಡ್ಡು ಕೊಟ್ಟಿದ್ದಾನೆ.

ಬಾಲಕನ ಹೇಳಿಕೆಯನ್ನು ಪರಿಶೀಲಿಸಿದ ಬಳಿಕ ಮಹಿಳಾ ಪಿಎಸ್‌ಐ ಅಪ್ಪಿಕೊಂಡು ಸಾಂತ್ವನ ತಿಳಿಸಿ, ತಮ್ಮ ಬಳಿಯಿದ್ದ ದಂಡದ ಹಣವನ್ನು ವಾಪಸ್ ಕೊಟ್ಟು, ಧೈರ್ಯ ತುಂಬಿದ್ದಾರೆ. ಪೋಷಕರು ಮಕ್ಕಳಿಗೆ ಬೈಕ್, ಸ್ಕೂಟರ್ ಕೊಡುವ ಮುನ್ನ ಹತ್ತು ಬಾರಿ ಎಚ್ಚರ ವಹಿಸಿ ಎಂದು ಮಹಿಳಾ ಪಿಎಸ್‌ಐ ಹೇಳಿದ್ದಾರೆ.

 Share: | | | | |


ಶಾಂತಾ ಪುತ್ತೂರುರವರಿಗೆ ಸೌರಭ ರತ್ನ ರಾಜ್ಯ ಪ್ರಶಸ್ತಿ

Posted by Vidyamaana on 2024-05-24 16:16:51 |

Share: | | | | |


ಶಾಂತಾ ಪುತ್ತೂರುರವರಿಗೆ ಸೌರಭ ರತ್ನ ರಾಜ್ಯ ಪ್ರಶಸ್ತಿ

ಕಥಾಬಿಂದು ಪ್ರಕಾಶನ ಮಂಗಳೂರು ಪಿ.ವಿ.ಪ್ರದೀಪ್ ಕುಮಾರ್ ಸಾರಥ್ಯ ದಲ್ಲಿ ಸಾಹಿತ್ಯ ಸಂಭ್ರಮ 2024, ಕವಿಗೋಷ್ಠಿ, ಸೌರಭರತ್ನ ರಾಜ್ಯ ಪ್ರಶಸ್ತಿ,ಪ್ರದಾನ, ಸಾಂಸ್ಕೃತಿಕ ಕಾರ್ಯಕ್ರಮ, ಕೃತಿಗಳ ಅನಾವರಣ, ಮೇ 26 ರಂದು ಭಾರತಿಶಾಲೆ ಮುಡಿಪು  ಬಂಟ್ವಾಳ ದಲ್ಲಿ ನಡೆಯಲಿದೆ.ಈ ಸಂದರ್ಭದಲ್ಲಿ ಬೊಳುವಾರು ನಿವಾಸಿಯಾಗಿದ್ದು ಸರಕಾರಿ ಪ್ರೌಢಶಾಲೆ ಕಬಕದಲ್ಲಿ ಶಿಕ್ಷಕಿಯಾಗಿರುವ ಶಾಂತಾ ಪುತ್ತೂರು ರವರಿಗೆ ಸೌರಭ ರತ್ನ ರಾಜ್ಯ ಪ್ರಶಸ್ತಿ ನೀಡಲಾಗುವುದೆಂದು ಕಥಾಬಿಂದು ಪಿ. ವಿ.ಪ್ರದೀಪ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

. ಬಹುಮುಖ ಪ್ರತಿಭೆ ಯ ಶಾಂತಾ ಪುತ್ತೂರು ರವರು ಬಿ.ಎ.,ಬಿ.ಎಡ್, ಕನ್ನಡ ಎಂ.ಎ.ಡಿಪ್ಲೋಮ ಇನ್  ಯೋಗ,ಡ್ರಾಯಿಂಗ್ ಹೈಯರ್ ಗ್ರೇಡ್ ಉತ್ತೀರ್ಣ ರಾಗಿರುತ್ತಾರೆ.ಬೊಳುವಾರು ನಿವಾಸಿಯಾಗಿರುವ ಇವರು ಶಿಕ್ಷಕಿಯಾಗಿ

   28ವರ್ಷ ಸೇವೆ ಸಲ್ಲಿಸಿದ್ದು ಪ್ರಸ್ತುತ ಸರಕಾರಿ ಪದವಿ ಪೂರ್ವ ಕಾಲೇಜು ಕಬಕ ಪ್ರೌಢಶಾಲಾ ವಿಭಾಗದಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.ಕವನಗಳನ್ನು, ಲೇಖನಗಳನ್ನು ಬರೆಯುವ ಹಾಗೂ ಚಿತ್ರ ಬಿಡಿಸುವ ಕರಕುಶಲ ವಸ್ತುಗಳ ತಯಾರಿಕೆ ಉತ್ತಮ ಪುಸ್ತಕ ಓದುವ ಹಾಗೂ ಸಂಗ್ರಹಿಸುವ ಹವ್ಯಾಸ ವನ್ನು ಹೊಂದಿದ್ದಾರೆ.ಓರ್ವ ಸಮರ್ಥ ಸಂಘಟಕಿಯಾಗಿರುವ ಇವರು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ವಿಟ್ಲ ಸ್ಥಳೀಯ ಸಂಸ್ಥೆ ಯ   ಜೊತೆಕಾರ್ಯದರ್ಶಿಯಾಗಿ ಸೇವೆ ,ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ ಶಾಂತಿವನ ಟ್ರಸ್ಟ್ ಧರ್ಮಸ್ಥಳ ಬಂಟ್ವಾಳ ತಾಲೂಕು ಯೋಗಸಂಘಟಕಿಯಾಗಿ  ಸುದೀರ್ಘ ಸೇವೆ ಸಲ್ಲಿಸಿದ್ದಾರೆ.ಕೇಂದ್ರಕನ್ನಡ ಸಾಹಿತ್ಯ ವೇದಿಕೆ ಕೇಂದ್ರಸಮಿತಿ ಬೆಂಗಳೂರು ಪುತ್ತೂರು ಘಟಕದ ಅಧ್ಯಕ್ಷೆ ಯಾಗಿ ಅಂತಾರಾಜ್ಯ ಮಟ್ಟದ ಕನ್ನಡ ನಾಡು ನುಡಿ ಸಂಸ್ಕೃತಿ ಕುರಿತಂತೆ ಕವನ ಸ್ಪರ್ಧೆ ಆಯೋಜನೆಯನ್ನು ಯಶಸ್ವಿ ಯಾಗಿಸಿದ್ದಾರೆ.ಅಂತಾರಾಜ್ಯ ಮಟ್ಟದ ಮಧು ಕವಿಗೋಷ್ಠಿ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಪುತ್ತೂರು ಘಟಕದಿಂದ ಸಂಯೋಜನೆ ಮಾಡಿದ್ದಾರೆ.ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಯಾಗಿ ಮೂಡಬಿದ್ರೆ, ಬಂಟ್ವಾಳ ಮೊದಲಾದ ಕಡೆ ‌ಸಾಹಿತ್ಯ ಕಮ್ಮಟ, ಕವಿಗೋಷ್ಠಿ ನಡೆಸಿರುತ್ತಾರೆ.ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು

ಬೆಳ್ಳುಳ್ಳಿ ಬೆಳೆ ಕಾಪಾಡಿಕೊಳ್ಳಲು ಸೂಪರ್ ಪ್ಲ್ಯಾನ್ ಮಾಡಿದ ಭೋಪಾಲ್ ನ ರಾಹುಲ್ಲಾ

Posted by Vidyamaana on 2024-02-23 14:23:21 |

Share: | | | | |


ಬೆಳ್ಳುಳ್ಳಿ ಬೆಳೆ ಕಾಪಾಡಿಕೊಳ್ಳಲು ಸೂಪರ್ ಪ್ಲ್ಯಾನ್ ಮಾಡಿದ ಭೋಪಾಲ್ ನ ರಾಹುಲ್ಲಾ

ಭೋಪಾಲ್: ಒಂದೆಡೆ ಸಿಲಿಂಡರ್ ಬೆಲೆ ಏರಿಕೆಯಿಂದ ಬೇಸತ್ತಿರುವ ಜನರು ಇದೀಗ ತರಕಾರಿ ಬೆಲೆ ಏರಿಕೆಯಿಂದ ಜೇಬು ಖಾಲಿ ಮಾಡಿಕೊಳ್ಳಲು ಆರಂಭಿಸಿದ್ದಾರೆ. ಈರುಳ್ಳಿ, ಆಲೂಗೆಡ್ಡೆ ಹೊರತುಪಡಿಸಿ ಉಳಿದ ತರಕಾರಿಗಳ ಬೆಲೆ ನಿಧಾನಕ್ಕೆ ಏರಿಕೆಯಾಗುತ್ತಿದೆ. ಅದರಲ್ಲಿ ಬೆಳ್ಳುಳ್ಳಿ ಬೆಲೆ ಗಗನಕ್ಕೆ ಏರಿದೆ.ಬೆಲೆ ಏರಿಕೆಯಾಗುತ್ತಿರುವಂತೆಯೇ ಬೆಳ್ಳುಳ್ಳು ಬೆಳೆದ ರೈತರು ಒಂದೆಡೆ ಖುಷಿ ಪಟ್ಟರೇ ಮತ್ತೊಂದೆಡೆ ಆತಂಕ ಪಡುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಬೆಳ್ಳುಳ್ಳಿಯ ಬೆಲೆ ಕೆಜಿಗೆ 300, 400 ರೂಪಾಯಿಯಿಂದ 500 ರೂಪಾಯಿಗೆ ತಲುಪಿದ್ದು ರೈತರು ಉತ್ತಮ ಆದಾಯ ಪಡೆಯುತ್ತಿದ್ದಾರೆ.

ಇದರ ಬೆನ್ನಲ್ಲೆ ಬೆಳೆ ಕಳ್ಳತನವಾಗುವ ಭಯ ಕೂಡ ಅನೇಕ ರೈತರಲ್ಲಿ ಕಾಣುತ್ತಿದೆ. ಇದಕ್ಕಾಗಿ ವಿನೂತನ ಪರಿಹಾರಗಳನ್ನು ಕಂಡುಕೊಳ್ಳುತ್ತಿದ್ದಾರೆ. ಇದೇ ಕಾರಣಕ್ಕೆ ಮಧ್ಯಪ್ರದೇಶದ ರೈತರೊಬ್ಬರು ತಮ್ಮ ಹೊಲಕ್ಕೆ ಸಂಪೂರ್ಣವಾಗಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿದ್ದಾರೆ. ಹೌದು.. ಮಧ್ಯಪ್ರದೇಶದ ರೈತ ರಾಹುಲ್ ದೇಶಮುಖ್ ತಮ್ಮ 13 ಎಕರೆ ಹೊಲದಲ್ಲಿ ಬೆಳ್ಳುಳ್ಳಿ ಬೆಳೆಯಲು 25 ಲಕ್ಷ ರೂಪಾಯಿ ಹೂಡಿಕೆ ಮಾಡಿದ್ದಾರೆ. ಮಾರುಕಟ್ಟೆಯಲ್ಲಿ ಈಗಾಗಲೇ ಬೆಳ್ಳುಳ್ಳಿ ಮಾರಾಟದಿಂದ ಸುಮಾರು 1 ಕೋಟಿ ರೂಪಾಯಿಗಳ ಗಮನಾರ್ಹ ಲಾಭವನ್ನು ಪಡೆದಿದ್ದಾರೆ.


ಹೀಗಾಗಿಯೇ ತಮ್ಮ ತಮ್ಮ ಬೆಳೆಯನ್ನು ರಕ್ಷಿಸಲು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿದ್ದಾರೆ. ತಮ್ಮ ಹೊಲದಲ್ಲಿ ರಾಹುಲ್ ದೇಶಮುಖ್ ಅವರು ಸೌರಶಕ್ತಿಯನ್ನು ಬಳಸಿಕೊಳ್ಳುವುದು ಮತ್ತು ಮೊಬೈಲ್ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವುದರ ಮೂಲಕ ತಮ್ಮ ಬೆಳೆಗಳನ್ನು ರಕ್ಷಿಸಿಕೊಳ್ಳುತ್ತಿದ್ದಾರೆ."ನಾಲ್ಕು ಎಕರೆ ಬೆಳ್ಳುಳ್ಳಿ ಬೆಳೆದ ಹೊಲದ ಮೇಲೆ ಮೂರು ಕ್ಯಾಮೆರಾಗಳನ್ನು ಅಳವಡಿಸಲಾಗಿದೆ" ಎಂದು ರಾಹುಲ್ ದೇಶಮುಖ್ ಹೇಳಿದ್ದಾರೆ. ಇನ್ನು, ಇವರಂತೆ ಬದ್ನೂರಿನ ಪವನ್ ಚೌಧರಿ ಎಂಬ ರೈತ ಕೂಡ 4 ಎಕರೆ ಬೆಳ್ಳುಳ್ಳಿ ಬೆಳೆಗೆ 4 ಲಕ್ಷ ಬಂಡವಾಳ ಹಾಕಿ 6 ಲಕ್ಷ ಲಾಭ ಗಳಿಸಿದ್ದು, ಭದ್ರತೆಗಾಗಿ ಮೂರು ಸಿಸಿಟಿವಿ ಕ್ಯಾಮೆರಾ ಅಳವಡಿಸಿದ್ದಾರೆ. "ನನ್ನ ಹೊಲದ ಮೇಲೆ ಕಣ್ಣಿಡಲು ನಾನು ಮೂರು ಸಿಸಿಟಿವಿ ಕ್ಯಾಮೆರಾಗಳನ್ನು ಹಾಕಿದ್ದೇನೆ. ಅವುಗಳಲ್ಲಿ ಎರಡು ನನಗೆ ಸೇರಿದ್ದು, ಒಂದು ಬಾಡಿಗೆಗೆ ಇದೆ. ನನ್ನ ಹೊಲಗಳಲ್ಲಿ ಬೆಳ್ಳುಳ್ಳಿ ಕಳ್ಳತನವಾಗುತ್ತಿದ್ದರಿಂದ ನಾನು ಈ ಕೆಲಸ ಮಾಡಬೇಕಾಯಿತು" ಎಂದು ತಿಳಿಸಿದ್ದಾರೆ.


ಸಾಮಾನ್ಯವಾಗಿ ಪ್ರತಿ ವರ್ಷ ಕೆ.ಜಿ.ಗೆ 80 ರೂ.ಗೆ ಮಾರಾಟವಾಗುತ್ತಿದ್ದ ಬೆಳ್ಳುಳ್ಳಿ ಈ ಋತುವಿನಲ್ಲಿ ಕೆಜಿಗೆ 300 ರೂಪಾಯಿಗಿಂತ ಹೆಚ್ಚು ಬೆಲೆ ಏರಿಕೆ ಕಂಡಿದೆ. ಬೆಲೆ ಏರಿಕೆಗೆ ಪ್ರಾಥಮಿಕ ಕಾರಣವೆಂದರೆ ಉತ್ಪಾದನೆ ಕಡಿಮೆಯಾಗಿರುವುದು. ಅಕ್ಟೋಬರ್ ಮತ್ತು ನವೆಂಬರ್‌ನಲ್ಲಿ ಹಲವಾರು ರಾಜ್ಯಗಳಲ್ಲಿ ಅಕಾಲಿಕ ಮಳೆಯಾಗಿದ್ದು ಕೂಡ ಬೆಲೆ ಏರಿಕೆಗೆ ಕಾರಣವಾಗಿದೆ.

ನವ ವಿವಾಹಿತೆ ನೇಣಿಗೆ ಶರಣು - ವರದಕ್ಷಿಣೆ ಕಿರುಕುಳ ಕಾರಣವೇ??

Posted by Vidyamaana on 2023-12-03 15:51:35 |

Share: | | | | |


ನವ ವಿವಾಹಿತೆ ನೇಣಿಗೆ ಶರಣು - ವರದಕ್ಷಿಣೆ ಕಿರುಕುಳ ಕಾರಣವೇ??

ಬೆಂಗಳೂರು: ಎರಡು ತಿಂಗಳ ಹಿಂದೆಷ್ಟೆ ಪ್ರೀತಿಸಿ ಮದುವೆಯಾಗಿದ್ದ ಮಹಿಳೆಯೊಬ್ಬರು ಅನುಮಾನಸ್ಪದವಾಗಿ ಸಾವನ್ನಪ್ಪಿದ್ದಾರೆ.



ಅನುಷಾ (23) ಅನುಮಾನಸ್ಪಾದವಾಗಿ ಸಾವನ್ನಪ್ಪಿದ್ದು, ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ನೇಣಿಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದೆ. ಮಂಡ್ಯ ಜಿಲ್ಲೆಯ ಮಳ್ಳವಳ್ಳಿ ಮೂಲದ ಪ್ರವೀಣ್ ಎಂಬಾತನನ್ನು ಪ್ರೀತಿಸಿ ಮದುವೆಯಾಗಿದ್ದರು. ಮಹದೇವಪುರದ ಪೊಲೀಸ್ ಠಾಣಾ ವ್ಯಾಪ್ತಿಯ ಸಿಂಗಯ್ಯಪಾಳ್ಯದಲ್ಲಿ ವಾಸವಾಗಿದ್ದರು.


ಅತ್ತೆ ನಾಗಮ್ಮ ಮತ್ತು ಸೋದರ ಮಾವ ರಾಜೇಶ್ ನಿಂದ ಕಿರುಕುಳ ನೀಡಲಾಗಿದೆ, ಪತಿಯ ಕುಟುಂಬದರಿಂದ ಯುವತಿಗೆ ಹಲ್ಲೆ ಯನ್ನೂ ನಡೆಸಲಾಗಿದೆ ಎಂಬ ಆರೋಪ ಮಾಡಲಾಗಿದೆ. ಮಹದೇವಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಹೊಸ ಡ್ರೆಸ್ ಧರಿಸಲು ಸಂಸತ್ತಿನ ಭದ್ರತಾ ಸಿಬ್ಬಂದಿಗಳು ನಕಾರ ಕಾರಣವೇನು ಗೊತ್ತಾ

Posted by Vidyamaana on 2023-09-21 09:49:36 |

Share: | | | | |


ಹೊಸ ಡ್ರೆಸ್ ಧರಿಸಲು ಸಂಸತ್ತಿನ ಭದ್ರತಾ ಸಿಬ್ಬಂದಿಗಳು ನಕಾರ ಕಾರಣವೇನು ಗೊತ್ತಾ

ನವದೆಹಲಿ:ಹೊಸ ಸಂಸತ್ತಿನ ಕಟ್ಟಡಕ್ಕಾಗಿ ಸರ್ಕಾರ ತಂದ ಹೊಸ ಬಟ್ಟೆಗಳನ್ನು ಸಂಸತ್ತಿನ ಭದ್ರತಾ ವಿಭಾಗವು ಇನ್ನು ಮುಂದೆ ಧರಿಸುವುದಿಲ್ಲ, ಹಲವಾರು ಭದ್ರತಾ ಸಿಬ್ಬಂದಿಗಳು ಬಟ್ಟೆಗಳ ವಸ್ತುವು ಸಿಂಥೆಟಿಕ್ ಮತ್ತು ಶಾಖವನ್ನು ಉಂಟುಮಾಡುತ್ತದೆ ಎಂದು ದೂರಿದರು.ಬುಧವಾರ ಬೆಳಿಗ್ಗೆ ತುರ್ತು ಸಭೆಯ ನಂತರ, ಹಳೆಯ ನೇವಿ ಬ್ಲೂ ಸಫಾರಿ ಸೂಟ್‌ಗಳನ್ನು ಧರಿಸಲು ನಿರ್ಧಾರ ತೆಗೆದುಕೊಳ್ಳಲಾಯಿತು.ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಫ್ಯಾಶನ್ ಟೆಕ್ನಾಲಜಿಯ ವಿನ್ಯಾಸಗಳೊಂದಿಗೆ ಟೇಬಲ್ ಆಫೀಸ್, ನೋಟಿಸ್ ಆಫೀಸ್ ಮತ್ತು ಪಾರ್ಲಿಮೆಂಟರಿ ರಿಪೋರ್ಟಿಂಗ್ ವಿಭಾಗಗಳಲ್ಲಿನ ಸಿಬ್ಬಂದಿ ಸದಸ್ಯರು ಮತ್ತು ಭದ್ರತಾ ಸಿಬ್ಬಂದಿಯ ಬಟ್ಟೆಗಳನ್ನು ಸರ್ಕಾರ ಬದಲಾಯಿಸಿದೆ. ಟೇಬಲ್, ನೋಟಿಸ್ ಮತ್ತು ಸಂಸದೀಯ ವರದಿ ವಿಭಾಗಗಳ ಅಧಿಕಾರಿಗಳ ಶರ್ಟ್‌ಗಳ ಮೇಲೆ ಕಮಲದ ಚಿತ್ರಗಳು ವಿರೋಧ ಪಕ್ಷಗಳ ಆಕ್ರೋಶಕ್ಕೆ ಕಾರಣವಾಗಿವೆ.


ಭದ್ರತಾ ಸಿಬ್ಬಂದಿಯ ಸದಸ್ಯರಿಗೆ ಅವರು ಧರಿಸಿದ್ದ ನೇವಿ ಬ್ಲೂ ಸಫಾರಿ ಸೂಟ್‌ಗಳ ಬದಲಿಗೆ ಮಿಲಿಟರಿ ಶೈಲಿಯ ಮರೆಮಾಚುವ ಉಡುಪುಗಳನ್ನು ನೀಡಲಾಯಿತು. ಆದಾಗ್ಯೂ, ಹಲವಾರು ಸಿಬ್ಬಂದಿಗಳಿಂದ ದೂರುಗಳ ನಂತರ, ಮುಂದಿನ ಸೂಚನೆಯವರೆಗೆ ಸಫಾರಿ ಸೂಟ್‌ಗಳಿಗೆ ಹಿಂತಿರುಗಲು ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.


ಸೆಕ್ರೆಟರಿಯಟ್ ನೌಕರರು, ಮೊದಲು ಬಂಧಗಳಧರಿಸುತ್ತಾರೆ, ಈಗ ಮೆಜೆಂಟಾ ಬಣ್ಣದ ನೆಹರೂ ಜಾಕೆಟ್‌ಗಳು, ಕಮಲದ ಮೋಟಿಫ್‌ಗಳ ಕೆನೆ ಬಣ್ಣದ ಶರ್ಟ್‌ಗಳು ಮತ್ತು ಖಾಕಿ ಪ್ಯಾಂಟ್‌ಗಳನ್ನು ನೀಡಲಾಗುತ್ತದೆ. ಸದನದ ಮಹಡಿಯಲ್ಲಿದ್ದ ಮಾರ್ಷಲ್‌ಗಳಿಗೆ ಮಣಿಪುರಿ ಪೇಟಗಳನ್ನು ನೀಡಲಾಯಿತು.


ಹೊಸ ಕಟ್ಟಡಕ್ಕೆ ಸ್ಥಳಾಂತರಗೊಂಡ ಬಳಿಕವೂ ಸಮವಸ್ತ್ರ ಬದಲಾವಣೆ ಬಗ್ಗೆ ಲೋಕಸಭೆಯ ಕೆಲ ಸದಸ್ಯರು ದೂರಿದರು ಎಂದು ಮೂಲಗಳು ತಿಳಿಸಿವೆ. "ಲೋಕಸಭೆಯ ಹಲವಾರು ಸದಸ್ಯರು ತಮ್ಮ ಆಸನ ವ್ಯವಸ್ಥೆಗಳ ಬಗ್ಗೆ ಆಕ್ಷೇಪಣೆಗಳನ್ನು ಎತ್ತಿದ್ದಾರೆ, ಏಕೆಂದರೆ ಕೆಲವರು ಮುಂಭಾಗಕ್ಕೆ ತೆರಳಿದರು ಮತ್ತು ಅನೇಕರು ಹಿಂದೆ ಸರಿಯಬೇಕಾಯಿತು" ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಶುಕ್ರವಾರ ಮುಕ್ತಾಯಗೊಳ್ಳಲಿರುವ ಐದು ದಿನಗಳ ಅಧಿವೇಶನವು ಮಂಗಳವಾರ ಹೊಸ ಕಟ್ಟಡಕ್ಕೆ ಪರಿವರ್ತನೆಯನ್ನು ಕಂಡಿದೆ. ಕೆಲವು ಕಾಮಗಾರಿಗಳು ಇನ್ನೂ ಹಳೆಯ ಕಟ್ಟಡದ ಹಿನ್ನಲೆಯಲ್ಲಿ ಬಾಕಿ ಇವೆ ಎಂದು ಸಚಿವರೊಬ್ಬರ ಸಿಬ್ಬಂದಿ ತಿಳಿಸಿದರು

ಉತ್ತರಕರ್ನಾಟಕ ಭಾಗದ SSLC ಪರೀಕ್ಷೆಯಲ್ಲಿ ಮಾಸ್ ಕಾಪಿ ಆಗ್ತಿತ್ತು : MLC ಅಭ್ಯರ್ಥಿ ಭೋಜೇಗೌಡ ಆರೋಪ

Posted by Vidyamaana on 2024-05-19 17:56:29 |

Share: | | | | |


ಉತ್ತರಕರ್ನಾಟಕ ಭಾಗದ SSLC ಪರೀಕ್ಷೆಯಲ್ಲಿ ಮಾಸ್ ಕಾಪಿ ಆಗ್ತಿತ್ತು : MLC ಅಭ್ಯರ್ಥಿ ಭೋಜೇಗೌಡ ಆರೋಪ

ಮಂಗಳೂರು : ಪ್ರತಿವರ್ಷ ನಡೆಯುವ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉತ್ತರ ಕರ್ನಾಟಕದ ಭಾಗದ ಎಲ್ಲಾ ವಿದ್ಯಾರ್ಥಿಗಳು ಮಾಸ್ ಕಾಪಿ ಮಾಡುತ್ತಿದ್ದರು ಎಂದು ಎಂಎಲ್ಸಿ ಬೋಜೆ ಗೌಡ ಗಂಭೀರವಾದಂತ ಆರೋಪವನ್ನು ಮಾಡಿದ್ದಾರೆ.ಮಂಗಳೂರಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಇದು ವಿದ್ಯಾರ್ಥಿಗಳ ಭವಿಷ್ಯದ ವಿದ್ಯಾಭ್ಯಾಸಕ್ಕೆ ಮಾರಕವಾಗುತ್ತಿತ್ತು.ಈ ಹಿನ್ನಲೆ ನೈರುತ್ಯ ಕ್ಷೇತ್ರಗಳಿಗೆ ಪರೀಕ್ಷೆ ಸಮಯ ಅನ್ಯಾಯ ಆಗುತ್ತಿರುವ ಬಗ್ಗೆ ವಿಧಾನ ಪರಿಷತ್‌ನಲ್ಲಿ ಹೇಳಿದ್ದೆ. ಜೊತೆಗೆ ಪರೀಕ್ಷೆ ವೇಳೆ ಸಿಸಿಟಿವಿ ಅಳವಡಿಕೆ ಕುರಿತು ಪರಿಷತ್​​ನಲ್ಲಿ ಆಗ್ರಹಿಸಿದ್ದೆ ಎಂದರು.

ತುರ್ತು ಕಾಮಗಾರಿ ನಿಮಿತ್ತ ಇಂದು ವಿದ್ಯುತ್ ನಿಲುಗಡೆ.

Posted by Vidyamaana on 2023-06-12 22:48:04 |

Share: | | | | |


ತುರ್ತು ಕಾಮಗಾರಿ ನಿಮಿತ್ತ ಇಂದು ವಿದ್ಯುತ್ ನಿಲುಗಡೆ.

ಪುತ್ತೂರು: ತುರ್ತು ಕಾಮಗಾರಿ ನಿಮಿತ್ತ 110/33/11ಕೆ ಪುತ್ತೂರು ವಿದ್ಯುತ್ ಕೇಂದ್ರದಿಂದ ಹೊರಡುವ ಟೌನ್ ಓಲ್ಡ್ ಮತ್ತು ದರ್ಬೆ ಫೀಡರ್‌ನಲ್ಲಿ ಜೂ.13ರಂದು ಪೂರ್ವಾಹ್ನ 10ರಿಂದ ಅಪರಾಹ್ನ 1ರವರೆಗೆ ವಿದ್ಯುತ್‌ ನಿಲುಗಡೆ ಮಾಡಲಾಗುವುದು. ಆದುದರಿಂದ, 110/33/11 ಕೆ.ವಿ ಪುತ್ತೂರು ವಿದ್ಯುತ್ ಕೇಂದ್ರದಿಂದ ಹೊರಡುವ ಈ ಮೇಲೆ ತಿಳಿಸಿದ ಫೀಡರ್‌ನಿಂದ ವಿದ್ಯುತ್‌ ಸರಬರಾಜಾಗುವ ನಗರಸಭಾ ವ್ಯಾಪ್ತಿ (ಪುತ್ತೂರು ಪೇಟೆ)ಯ ವಿದ್ಯುತ್ ಬಳಕೆದಾರರು ಸಹಕರಿಸಬೇಕು.

33ಕೆವಿ ಮಾಡಾವು-ಬೆಳ್ಳಾರೆ-ಗುತ್ತಿಗಾರು-ಸುಬ್ರಹ್ಮಣ್ಯ ಮತ್ತು 33 ಕೆ.ವಿ ಮಾಡಾವು-ಬೆಳ್ಳಾರೆ ವಿದ್ಯುತ್ ಮಾರ್ಗದ ಪಾಲನಾ ಕಾರ್ಯ ಹಮ್ಮಿಕೊಂಡಿರುವುದರಿಂದ ಜೂ.13ರಂದು ಪೂರ್ವಾಹ್ನ 10 ರಿಂದ ಸಾಯಂಕಾಲ 5ರವರೆಗೆ 33 ಕೆ.ವಿ ಮಾಡಾವು-ಬೆಳ್ಳಾರೆ -ಗುತ್ತಿಗಾರು-ಸುಬ್ರಹ್ಮಣ್ಯ ಮತ್ತು 33 ಕೆ.ವಿ ಮಾಡಾವು-ಬೆಳ್ಳಾರೆ ವಿದ್ಯುತ್‌ ಮಾರ್ಗದ ವಿದ್ಯುತ್ ನಿಲುಗಡೆ ಮಾಡಲಾಗುವುದು. ಆದ್ದರಿಂದ 33/11ಕೆವಿ ಬೆಳ್ಳಾರೆ ಮತ್ತು ಗುತ್ತಿಗಾರು ವಿದ್ಯುತ್‌ ಉಪಕೇಂದ್ರದಿಂದ ಹೊರಡುವ ಎಲ್ಲಾ 11 ಕೆ.ವಿ ಫೀಡರ್‌ಗಳಿಂದ ವಿದ್ಯುತ್‌ ಸರಬರಾಜಾಗುವ ವಿದ್ಯುತ್‌ ಬಳಕೆದಾರರೂ ಸಹಕರಿಸಬೇಕೆಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.



Leave a Comment: