ಸಿಎಂ ಸಿದ್ದರಾಮಯ್ಯರನ್ನು‌ ಭೇಟಿಯಾದ ಶಾಸಕ ಆಶೋಕ್ ರೈ

ಸುದ್ದಿಗಳು News

Posted by vidyamaana on 2024-07-03 19:44:44 |

Share: | | | | |


ಸಿಎಂ ಸಿದ್ದರಾಮಯ್ಯರನ್ನು‌ ಭೇಟಿಯಾದ ಶಾಸಕ ಆಶೋಕ್ ರೈ

ಪುತ್ತೂರು: ಪುತ್ತೂರು ಶಾಸಕರಾದ ಅಶೋಕ್ ರೈ ಯವರು ಬುಧವಾರದಂದು ಬೆಂಗಳೂರಿನಲ್ಲಿ ಸಿ ಎಂ‌ನಿವಾಸದಲ್ಲಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಪುತ್ತೂರಿಗೆ‌ಮೆಡಿಕಲ್ ಕಾಲೇಜು ಮತ್ತು ಕ್ಷೇತ್ರಕ್ಕೆ ಹೆಚ್ಚು ಅನುದಾನ ನೀಡುವಂತೆ ಮನವಿ ಮಾಡಿದರು.

   ಸಿದ್ದರಾಮಯ್ಯ ಅವರೊಂದಿಗೆ ಮಾತುಕತೆ ನಡೆಸಿದ ಶಾಸಕರು ಪುತ್ತೂರಿಗೆ ಮೆಡಿಕಲ್ ಕಾಲೇಜು ಬೇಡಿಕೆಯನ್ನು ನೆನಪಿಸಿದರು. ಬಜೆಟ್ ನಲ್ಲಿ ಈ ಬಾರಿ ಅನುಮೋದನೆಯಾಗಬೇಕು ಮತ್ತು ತನ್ನ ಕ್ಷೇತ್ರದ ಜನರ ಬಹುಕಾಲದ ಬೇಡಿಕೆಯಾದ ಮೆಡಿಕಲ್ ಕಾಲೇಜನ್ನು ಮಂಜೂರು ಮಾಡುವಂತೆ ಮನವಿ ಮಾಡಿದರು. ಕಳೆದ ಬಜೆಟ್ ನಲ್ಲಿ ಅನುಮೋದನೆಯಾಗಬಹುದು ಎಂಬ ನಿರೀಕ್ಷೆ ಇತ್ತು ಆದರೆ ಗ್ಯಾರಂಟಿ ಯೋಜನೆಗೆ ಬಜೆಟ್ ನಲ್ಲಿ ಹೆಚ್ಚು ಅನುದಾನ ಇರಿಸಿದ ಕಾರಣ ನಾನು ಹೆಚ್ಚು ಒತ್ತಡ ಹಾಕಿರಲಿಲ್ಲ. ಮೆಡಿಕಲ್ ಕಾಲೇಜು ಆಗಬೇಕು‌ಎಂಬುದು‌ ನನ್ನ ಮತ್ತು ನನ್ನ ಕ್ಷೇತ್ರದ ಜನರ ಕನಸಾಗಿದೆ ಅದನ್ನು ನನಸು‌ಮಾಡಿಕೊಡಬೇಕು ಎಂದು ಸಿ ಎಂ ಅವರಲ್ಲಿ ಶಾಸಕರು ವಿನಂತಿಸಿದರು.

ಕಾಲೇಜು‌ನಿರ್ಮಾಣಕ್ಕೆ ಈಗಾಗಲೇ ಜಾಗ ಗುರುತಿಸಲಾಗಿದೆ ಎಂದೂ ಶಾಸಕರು ಸಿಎಂ ಅವರಲ್ಲಿ ತಿಳಿಸಿದರು.

ಹೆಚ್ಚು‌ಅನುದಾನ ಕೊಡಿ

ನನ್ನ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ದಿ ಕೆಲಸಗಳು ಆಗಬೇಕಿದೆ. ರಸ್ತೆ, ಸರಕಾರಿ ಕಟ್ಟಡಗಳು, ಶಾಲಾ ,ಕಾಲೇಜು ಕಟ್ಟಡಗಳು, ತಡೆಗೋಡೆ ,ಬೃಹತ್ ಅಣೆಕಟ್ಟುಗಳು ಸೇರಿದಂತೆ ಕ್ಷೇತ್ರದ ಜನರಿಂದ ದಿನದಿಂದ ದಿನಕ್ಕೆ ಕಾಮಗಾರಿಯ ಬೇಡಿಕೆಗಳು ಬರುತ್ತಿದ್ದು ಈಗ ಬರುತ್ತಿರುವ ಅನುದಾನವನ್ನು ಹೆಚ್ಚು ಪ್ರಮಾಣದಲ್ಲಿ ಹಂಚಿಕೆ ಮಾಡಲು ಸಾಧ್ಯವಾಗುತ್ತಿಲ್ಲ. ಅನೇಕ ವರ್ಷಗಳಿಂದ ಇರುವ ಕೆಲವೊಂದು ಕಾಮಗಾರಿ ಬೇಡಿಕೆಗಳಿಗೆ ಅನುದಾನವನ್ನು‌ನೀಡಬೇಕಿದೆ ಈ ಕಾರಣಕ್ಕೆ ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ಹೆಚ್ಚು ಅನುದಾನ ನೀಡುವಂತೆ ಶಾಸಕರು‌ಮನವಿ ಸಲ್ಲಿಸಿದರು.

 Share: | | | | |


ಮೊಬೈಲ್ ನಲ್ಲಿ ಹೊಡೆದು ಅತ್ತೆಯನ್ನು ಕೊಂದ ಪಾಪಿ ಸೊಸೆ

Posted by Vidyamaana on 2024-05-03 22:21:22 |

Share: | | | | |


ಮೊಬೈಲ್ ನಲ್ಲಿ ಹೊಡೆದು ಅತ್ತೆಯನ್ನು ಕೊಂದ ಪಾಪಿ ಸೊಸೆ

ಮಡಿಕೇರಿ: ಅತ್ತೆಯನ್ನು ಸೊಸೆಯೇ ಹತ್ಯೆ ಮಾಡಿದ ನಿಗೂಢ ರಹಸ್ಯಕಾರಿ ಸಿನಿಮಾ ಮಾದರಿ ಘಟನೆ ಮಡಿಕೇರಿಯಲ್ಲಿ ನಡೆದಿದ್ದು, ಸಹಜ ಸಾವು ಎಂದು ನಂಬಲಾಗಿದ್ದ ಪ್ರಕರಣ ತಿರುವು ಪಡೆದುಕೊಂಡು ಕೊಲೆ ಎಂಬುದು ಬಯಲಾಗಿ ಆರೋಪಿತೆಯನ್ನು ಪೊಲೀಸರು ಬಂಧಿಸಿದ್ದಾರೆ.


ಮಡಿಕೇರಿ ತಾಲೂಕಿನ ಮರಗೋಡಿನ ನಿವಾಸಿ ಪೂವಮ್ಮ (73) ಎಂಬವರನ್ನು ಹತ್ಯೆ ಮಾಡಲಾಗಿದ್ದು, ಕೊಲೆ ಆರೋಪದಲ್ಲಿ ಸೊಸೆ ಬಿಂದು (26) ಎಂಬಾಕೆಯನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಬೆಳಕಿಗೆ ಬಂದಿದ್ದು ಹೇಗೆ?

ಪೂವಮ್ಮ ಅವರ ಪುತ್ರ ಶಿಕ್ಷಕರಾಗಿರುವ ಪ್ರಸನ್ನ, ಪತ್ನಿ ಬಿಂದು ಮತ್ತು ಒಂದು ವರ್ಷದ ಪುತ್ರಿಯೊಂದಿಗೆ ವಾಸವಾಗಿದ್ದರು. ಅತ್ತೆ ಮತ್ತು ಸೊಸೆ ನಡುವೆ ತೀವ್ರ ಮನಸ್ತಾಪ ಇತ್ತು ಎಂದು ತಿಳಿದು ಬಂದಿದೆ.

ರಾಜ್ಯದಲ್ಲೇ ಪ್ರಥಮ ಬಾರಿಗೆ ಪ್ರಕೃತಿ ಚಿಕಿತ್ಸಾ ವಿಭಾಗ ಆರಂಭಿಸಿರುವುದು ಶ್ಲಾಘನೀಯ : ಜಿಲ್ಲಾಧಿಕಾರಿ

Posted by Vidyamaana on 2023-03-26 04:30:14 |

Share: | | | | |


ರಾಜ್ಯದಲ್ಲೇ ಪ್ರಥಮ ಬಾರಿಗೆ ಪ್ರಕೃತಿ ಚಿಕಿತ್ಸಾ ವಿಭಾಗ ಆರಂಭಿಸಿರುವುದು ಶ್ಲಾಘನೀಯ : ಜಿಲ್ಲಾಧಿಕಾರಿ

ಮಂಗಳೂರು: ನಗರದ ವೆನ್ಲಾಕ್ ಆಸ್ಪತ್ರೆಯ ಆವರಣದಲ್ಲಿರುವ ಆಯುಷ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ರಾಜ್ಯದಲ್ಲೇ ಪ್ರಥಮ ಬಾರಿಗೆ ಪ್ರಕೃತಿ ಚಿಕಿತ್ಸಾ ವಿಭಾಗ ಆರಂಭಿಸಿರುವುದು ಶ್ಲಾಘನೀಯ ಎಂದು ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್. ಹೇಳಿದ್ದಾರೆ.

ಮಾರ್ಚ್ 25ರ ಶನಿವಾರ ನಗರದ ವೆನ್ಲಾಕ್ ಆಯುಷ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ 20 ಲಕ್ಷ ರೂ. ವೆಚ್ಚದ ಅತ್ಯಾಧುನಿಕ ನ್ಯಾಚುರೋಪತಿ ಉಪಕರಣಗಳ ಹಸ್ತಾಂತರ ಮತ್ತು ನೂತನ ಪ್ರಕೃತಿ ಚಿಕಿತ್ಸಾ ವಿಭಾಗಕ್ಕೆ ಚಾಲನೆ ನೀಡಿ ಅವರು ಶನಿವಾರ ಮಾತನಾಡಿದರು.

ಮುಂಬರುವ ದಿನಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ತಾಲೂಕು ಪ್ರದೇಶಗಳಾದ ಸುಳ್ಯ, ಪುತ್ತೂರು, ಬಂಟ್ವಾಳ, ಬೆಳ್ತಂಗಡಿ ಆಸ್ಪತ್ರೆಗಳಲ್ಲೂ ಪ್ರಕೃತಿ ಚಿಕಿತ್ಸೆ ಆರಂಭಿಸಲು ಜಿಲ್ಲಾಡಳಿತದಿಂದ ಅಗತ್ಯ ಸಹಕಾರ ಹಾಗೂ ನೆರವು ನೀಡಲಾಗುವುದು ಎಂದವರು ಹೇಳಿದರು.ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಈ ರೀತಿಯ ಪ್ರಕೃತಿ ಚಿಕಿತ್ಸೆಗೆ ಅನುಕೂಲವಾಗಬೇಕಾದ ಭೂಮಿ ಮತ್ತು ಮೂಲ ಸೌಲಭ್ಯಕ್ಕೆ ಜಿಲ್ಲಾಡಳಿತ ಸಹಕಾರ ನೀಡಲಿದೆ ಎಂದ ಅವರು, ಇತ್ರೀಚೆಗೆ ಆಯುರ್ವೇದ, ನ್ಯಾಚುರೋಪತಿ, ಯುನಾನಿ ಚಿಕಿತ್ಸೆಗೆ ಹೆಚ್ಚಿನ ಬೇಡಿಕೆ ಇದೆ. ಸರ್ಕಾರಿ ಆಯುಷ್ ಆಸ್ಪತ್ರೆಯೊಂದರಲ್ಲಿ ಸುಸಜ್ಜಿತವಾದ ಪ್ರಕೃತಿ ಚಿಕಿತ್ಸಾ ವಿಭಾಗ ಆರಂಭಿಸಿರುವುದು ನಗರದ ಬಡ ರೋಗಿಗಳಿಗೆ ವರವಾಗಿದೆ. ಜಿಲ್ಲೆಯ ಗ್ರಾಮೀಣ ಪ್ರದೇಶದ ಜನರಿಗೂ ಈ ಸೌಲಭ್ಯ ದೊರೆಯಬೇಕು. ಇದಕ್ಕಾಗಿ ತಾಲೂಕು ಮಟ್ಟದಲ್ಲಿ ಕಟ್ಟಡ, ಮೂಲ ಸೌಲಭ್ಯ ಒದಗಿಸಲಾಗುವುದು ಎಂದರು.

ಆಯುಷ್ ಆಸ್ಪತ್ರೆಗೆ ಮಂಗಳೂರು ಕೆಮಿಕಲ್ಸ್ ಮತ್ತು ಫರ್ಟಿಲೈಸರ್ಸ್ ಲಿಮಿಟೆಡ್ (ಎಂಸಿಎಫ್) ಸುಮಾರು 20 ಲಕ್ಷ ರೂ. ಮೌಲ್ಯದ ಅತ್ಯಾಧುನಿಕ ಪ್ರಕೃತಿ ಚಿಕಿತ್ಸೆ ಸಂಬಂಧಿತ ಉಪಕರಣಗಳನ್ನು ಒದಗಿಸಿದೆ. ಈ ಮೂಲಕ ಎಂಸಿಎಫ್ ಸಿಎಸ್‌ಆರ್ ನಿಧಿ ಉತ್ತಮ ಕಾರ್ಯಕ್ಕೆ ವಿನಿಯೋಗವಾಗಿದೆ ಎಂದು ಜಿಲ್ಲಾಧಿಕಾರಿಯವರು ಅಭಿಪ್ರಾಯಪಟ್ಟರು.

ಪುತ್ತೂರು : ಬಾಯ್ದೆರೆದ ಹೊಂಡ: ಸೇತುವೆಯಲ್ಲಿದೆ ಅಪಾಯ ನೋಡ

Posted by Vidyamaana on 2024-06-06 11:51:22 |

Share: | | | | |


ಪುತ್ತೂರು : ಬಾಯ್ದೆರೆದ ಹೊಂಡ: ಸೇತುವೆಯಲ್ಲಿದೆ ಅಪಾಯ ನೋಡ

ಪುತ್ತೂರು: ಇಲ್ಲಿನ ಎಪಿಎಂಸಿ ರಸ್ತೆಯಲ್ಲಿರುವ ಆದರ್ಶ ಆಸ್ಪತ್ರೆ ಸಮೀಪದ ಸೇತುವೆ ಮೇಲೆ ಹೊಂಡವೊಂದು ಬಾಯ್ದೆರೆದು ಕೂತಿದೆ. ದಿನದಿಂದ ದಿನಕ್ಕೆ ಗಾತ್ರ ಹಿಗ್ಗಿಸಿಕೊಳ್ಳುತ್ತಿದ್ದು, ವಾಹನ ಸವಾಹರರಿಗೆ, ಪಾದಚಾರಿಗಳಿಗೆ ಅಪಾಯಕಾರಿಯಾಗಿ ಪರಿಣಮಿಸುತ್ತಿದೆ.

ರೈಲ್ವೆ ಮಂಡಳಿಯ CEO ಆಗಿ ಜಯ ವರ್ಮಾ ಸಿನ್ಹಾ ನೇಮಕ

Posted by Vidyamaana on 2023-09-01 01:56:48 |

Share: | | | | |


ರೈಲ್ವೆ ಮಂಡಳಿಯ CEO ಆಗಿ ಜಯ ವರ್ಮಾ ಸಿನ್ಹಾ ನೇಮಕ

ಹೊಸದಿಲ್ಲಿ: ಭಾರತೀಯ ರೈಲ್ವೇ ಮಂಡಳಿಯ ನೂತನ ಅಧ್ಯಕ್ಷ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ (CEO) ಜಯ ವರ್ಮಾ ಸಿನ್ಹಾ ಅವರನ್ನು ಕೇಂದ್ರ ಸರ್ಕಾರ ನೇಮಿಸಿದೆ.


ರೈಲ್ವೆ ಇತಿಹಾಸದಲ್ಲಿ ಈ ಹುದ್ದೆಗೇರಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೂ ಇವರು ಪಾತ್ರರಾಗಿದ್ದಾರೆ. ಆಗಸ್ಟ್ 31 ರ ದಿನಾಂಕದ ಆದೇಶದಲ್ಲಿ, ಜಯ ಸಿನ್ಹಾ ಅವರು ಸೆಪ್ಟೆಂಬರ್ 1ರಂದು ಅಥವಾ ನಂತರ ಅಧಿಕಾರ ವಹಿಸಿಕೊಳ್ಳುತ್ತಾರೆ ಎಂದು ಸರ್ಕಾರ ಹೇಳಿದೆ. ಅವರ ಅಧಿಕಾರಾವಧಿಯು ಆಗಸ್ಟ್ 31, 2024 ರಂದು ಕೊನೆಗೊಳ್ಳಲಿದೆ. ಈ ಹಿಂದೆ ಅಧ್ಯಕ್ಷರು ಮತ್ತು ಸಿಇಒ ಆಗಿದ್ದ ಅನಿಲ್ ಕುಮಾರ್ ಲಹೋಟಿ ಅಧಿಕಾರವಧಿಯ ನಂತರ ಸಿನ್ಹಾ ಅಧಿಕಾರ ವಹಿಸಿಕೊಳ್ಳಲಿದ್ದಾರೆ.


ಜಯ ವರ್ಮಾ ಸಿನ್ಹಾ ಅವರು ಭಾರತೀಯ ರೈಲ್ವೆ ಸಂಚಾರ ಸೇವೆಯ 1986 ರ ಬ್ಯಾಚ್ ಅಧಿಕಾರಿ. ಅವರು ಪ್ರಸ್ತುತ ರೈಲ್ವೆ ಮಂಡಳಿಯಲ್ಲಿ ಸದಸ್ಯ (ಕಾರ್ಯಾಚರಣೆ ಮತ್ತು ವ್ಯವಹಾರ ಅಭಿವೃದ್ಧಿ) ಸ್ಥಾನವನ್ನು ಹೊಂದಿದ್ದಾರೆ. ಸಿನ್ಹಾ ಅವರು ರೈಲ್ವೇ ಮಂಡಳಿಯ (ಸಂಚಾರ ಸಾರಿಗೆ) ಹೆಚ್ಚುವರಿ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ.


ಅಲಹಾಬಾದ್ ವಿಶ್ವವಿದ್ಯಾನಿಲಯದಿಂದ ಪದವಿ ಪಡೆದಿರುವ ಸಿನ್ಹಾ 35 ವರ್ಷಗಳಿಂದ ರೈಲ್ವೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ವಿಜಿಲೆನ್ಸ್, ಮಾಹಿತಿ ತಂತ್ರಜ್ಞಾನ ಮತ್ತು ಭಾರತೀಯ ರೈಲ್ವೆಯ ಕಾರ್ಯಾಚರಣೆಯ ಅಂಶಗಳನ್ನು ಒಳಗೊಂಡಂತೆ ರೈಲ್ವೆಯ ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.


ಬಾಲಸೋರ್ ರೈಲು ಅಪಘಾತದ ನಂತರ ಜಯಾ ಅವರು ಸದಸ್ಯರಾಗಿ (ಕಾರ್ಯಾಚರಣೆಗಳು ಮತ್ತು ವ್ಯವಹಾರ ಅಭಿವೃದ್ಧಿ) ರೈಲ್ವೆಯ ಮಾಧ್ಯಮ ತೊಡಗಿಸಿಕೊಳ್ಳುವಿಕೆಗಳಲ್ಲಿ ಮುಂಚೂಣಿಯಲ್ಲಿದ್ದರು. ಸುಮಾರು 300 ಜನರ ಸಾವಿಗೆ ಕಾರಣವಾದ ರೈಲು ಅಪಘಾತದ ನಂತರದ ಸಂಕೀರ್ಣ ಸಿಗ್ನಲಿಂಗ್ ವ್ಯವಸ್ಥೆಯನ್ನು ಅವರು ವಿವರಿಸಿದ್ದರು.


ಸಿನ್ಹಾ ಅವರು ಬಾಂಗ್ಲಾದೇಶದ ಢಾಕಾದಲ್ಲಿರುವ ಭಾರತದ ಹೈ ಕಮಿಷನ್‌ನಲ್ಲಿ ರೈಲ್ವೇ ಸಲಹೆಗಾರರ ಪಾತ್ರವನ್ನು ವಹಿಸಿಕೊಂಡು ಅಲ್ಲಿ ಅವರು ನಾಲ್ಕು ವರ್ಷಗಳ ಕಾಲ ಕೆಲಸ ಮಾಡಿದರು. ಕೋಲ್ಕತ್ತಾ ಮತ್ತು ಢಾಕಾ ನಡುವೆ ಕಾರ್ಯನಿರ್ವಹಿಸುವ ಮೈತ್ರೀ ಎಕ್ಸ್‌ಪ್ರೆಸ್‌ನ ಉದ್ಘಾಟನೆಯು ಬಾಂಗ್ಲಾದೇಶದಲ್ಲಿ ಅವರ ಅಧಿಕಾರಾವಧಿಯಲ್ಲಿ ನಡೆಯಿತು. ಹೆಚ್ಚುವರಿಯಾಗಿ, ಅವರು ಪೂರ್ವ ರೈಲ್ವೆಯೊಳಗಿನ ಸೀಲ್ದಾ ವಿಭಾಗಕ್ಕೆ ವಿಭಾಗೀಯ ರೈಲ್ವೆ ವ್ಯವಸ್ಥಾಪಕರ ಸ್ಥಾನವನ್ನು ಹೊಂದಿದ್ದರು.


2017 ರಲ್ಲಿ, ಜಯ ವರ್ಮ ಸಿನ್ಹಾ ಅವರು ಆಗ್ನೇಯ ರೈಲ್ವೆಯ ಪ್ರಧಾನ ಮುಖ್ಯ ವಾಣಿಜ್ಯ ವ್ಯವಸ್ಥಾಪಕರಾಗಿ ಅಧಿಕಾರ ವಹಿಸಿಕೊಂಡರು. ಇದಕ್ಕೂ ಮೊದಲು, ಅವರು ಆಗ್ನೇಯ ರೈಲ್ವೆಯ ಹಿರಿಯ ಉಪ ಜನರಲ್ ಮ್ಯಾನೇಜರ್ ಮತ್ತು ಮುಖ್ಯ ವಿಜಿಲೆನ್ಸ್ ಅಧಿಕಾರಿಯಾಗಿದ್ದರು.

ಬಿಲ್ಲವ ಯವ ಸಮಾಜ ವತಿಯಿಂದ ಶಾಸಕರಿಗೆ ಅಭಿನಂದನಾ ಕಾರ್ಯಕ್ರಮ

Posted by Vidyamaana on 2023-08-28 14:48:05 |

Share: | | | | |


ಬಿಲ್ಲವ ಯವ ಸಮಾಜ ವತಿಯಿಂದ ಶಾಸಕರಿಗೆ ಅಭಿನಂದನಾ ಕಾರ್ಯಕ್ರಮ

ಪುತ್ತೂರು: ಬಿಲ್ಲವ ಯುವ ಸಮಾಜ ಪುತ್ತೂರು ಇದರ ವತಿಯಿಂದ ಪುತ್ತೂರು ಶಾಸಕರಾದ ಅಶೋಕ್ ರೈಯವರಿಗೆ ಅಭಿನಂದನೆ ಸಲ್ಲಿಸಲಾಯಿತು. ಶಾಸಕರ ನೂತನ ಕಚೇರಿ ಶುಭಾರಂಭ ಕಾರ್ಯಕ್ರಮದ ಬಳಿಕ ಯುವ ವೇದಿಕೆಯ ವತಿಯಿಂದ ಶಾಸಕರ ಕಚೇರಿಯಲ್ಲಿ ಅಭಿನಂದನೆ ಸಲ್ಲಿಸಲಾಯಿತು. ಕ್ಷೇತ್ರದ ಅಭಿವೃದ್ದಿಗೆ ಇನ್ನಷ್ಟು ಒತ್ತು ನೀಡುವ ಮೂಲಕ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಬಡವರ ಕೆಲಸಗಳು ಸೇರಿದಂತೆ ಪ್ರಮುಖ ಬೇಡಿಕೆಗಳನ್ನು ಈಡೇರಿಸುವ ಕೆಲಸ ನಿಮ್ಮಿಂದಾಗಲಿ ಎಂದು ಬಿಲ್ಲವ ಯುವ ಸಮಾಜದ ಮುಖಂಡರು ಶಾಸಕರಲ್ಲಿ ವಿನಂತಿಸಿದರು. ಈ ಸಂದರ್ಭದಲ್ಲಿ ಕೋಡಿಂಬಾಡಿ ಗ್ರಾಪಂ ಉಪಾಧ್ಯಕ್ಷರಾದ ಜಯಪ್ರಕಾಶ್ ಬದಿನಾರ್, ಕಿರಣ್‌ಬಸಂತಕೋಡಿ, ದಿನೇಶ್ ಕರ್ಕೆರಾ ಕೋಲಾಡಿ, ಚಂಧ್ರಶೇಖರ್ ಕಲ್ಲಗುಡ್ಡೆ, ಚಂದ್ರಕಲಾ ಮುಕ್ವೆ, ಮೋಹನ್ ಗುರ್ಜಿನಡ್ಕ, ಕೇಶವ ಅರ್ಕ, ಮೋಹನ್ ಪೂಜಾರಿ ಪುಣಚ, ಅಶೋಕ್ ಪೂಜಾರಿ ಬೊಳ್ಳಾಡಿ, ಕೃಷ್ಣಪ್ಪ ಕಲಾವಿದ, ಎಲ್ಯಣ್ಣ ಪೂಜಾರಿ ಮಿರುಂಡ, ನಾರಾಯಣ ಪೂಜಾರಿ ಬದಿಗುಡ್ಡೆ ಮೊದಲಾದವರು ಉಪಸ್ತಿತರಿದ್ದರು. ನೆನಪಿನ ಕಾಣಿಕೆಯಾಗಿ ಬ್ರಹ್ಮಶ್ರೀ ನಾರಾಯಣಗುರುಗಳ ಭಾವಚಿತ್ರವನ್ನು ಕೊಡುಗೆಯಾಗಿ ನೀಡಿದರು.

ತಾಂತ್ರಿಕ ದೋಷ: ಬಾಹ್ಯಾಕಾಶ ನಿಲ್ದಾಣದಲ್ಲಿಯೇ ಉಳಿದ ಸುನಿತಾ ವಿಲಿಯಮ್ಸ್

Posted by Vidyamaana on 2024-06-29 11:21:28 |

Share: | | | | |


ತಾಂತ್ರಿಕ ದೋಷ: ಬಾಹ್ಯಾಕಾಶ ನಿಲ್ದಾಣದಲ್ಲಿಯೇ ಉಳಿದ ಸುನಿತಾ ವಿಲಿಯಮ್ಸ್

ವಾಷಿಂಗ್ಟನ್: ತಾಂತ್ರಿಕ ತೊಂದರೆ ಕಾಣಿಸಿಕೊಂಡ ಹಿನ್ನೆಲೆ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಮತ್ತು ಅವರ ಸಹಯಾತ್ರಿ ಬಚ್‌ ವಿಲ್ಮೋರ್ ಅವರು ಇನ್ನು ಕೆಲ ದಿನಗಳ ಕಾಲ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿಯೇ ಉಳಿಯಲಿದ್ದಾರೆ ಎಂದು ನಾಸಾ ತಿಳಿಸಿದೆ.ಜೂನ್ 5ರಂದು ಸುನಿತಾ ಮತ್ತು ವಿಲ್ಮೋರ್‌ ಅವರಿದ್ದ ಸ್ಟಾರ್‌ಲೈನರ್‌ ನೌಕೆಯನ್ನು ಫ್ಲಾರಿಡಾದ ಕೇಪ್‌ ಕ್ಯಾನವೆರಲ್‌ ಸ್ಪೇಸ್‌ ಫೋರ್ಸ್‌ ಕೇಂದ್ರದಿಂದ ಉಡಾವಣೆ ಮಾಡಲಾಗಿತ್ತು.

ಜೂನ್ 6ರ ಮಧ್ಯಾಹ್ನ 1.34ಕ್ಕೆ ಗಗನನೌಕೆಯನ್ನು ಬಾಹ್ಯಾಕಾಶ ನಿಲ್ದಾಣಕ್ಕೆ ಡಾಕ್‌ (ಕೂಡಿಕೊಳ್ಳುವ ಪ್ರಕ್ರಿಯೆ) ಮಾಡಲಾಗಿತ್ತು. 

ತಾಂತ್ರಿಕ ದೋಷಕ್ಕೆ ಕಾರಣಗಳೇನು ಎಂಬ ಬಗ್ಗೆ ಪರೀಕ್ಷೆಗಳು ನಡೆಯುತ್ತಿದ್ದು, ಗಗನಯಾತ್ರಿಗಳು ಸುರಕ್ಷಿತವಾಗಿದ್ದಾರೆ ಎಂದು ನಾಸಾ ತಿಳಿಸಿದೆ. ಆದರೆ, ಗಗನಯಾತ್ರಿಗಳು ಯಾವಾಗ ಭೂಮಿಗೆ ಹಿಂದಿರುಗಲಿದ್ದಾರೆ ಎಂಬ ಬಗ್ಗೆ ಮಾಹಿತಿ ನೀಡಿಲ್ಲ.



Leave a Comment: