ಪುತ್ತೂರಿನ ಪ್ರತಿಷ್ಠಿತ ಕಲ್ಲೇಗ ಟೈಗರ್ಸ್ ಮುಖ್ಯಸ್ಥ ಅಕ್ಷಯ್ ಕಲ್ಲೇಗ ತಡರಾತ್ರಿ ಬರ್ಬರ ಹತ್ಯೆ

ಸುದ್ದಿಗಳು News

Posted by vidyamaana on 2023-11-07 04:42:13 |

Share: | | | | |


ಪುತ್ತೂರಿನ ಪ್ರತಿಷ್ಠಿತ ಕಲ್ಲೇಗ ಟೈಗರ್ಸ್ ಮುಖ್ಯಸ್ಥ ಅಕ್ಷಯ್ ಕಲ್ಲೇಗ ತಡರಾತ್ರಿ ಬರ್ಬರ ಹತ್ಯೆ

ಪುತ್ತೂರು: ಪುತ್ತೂರಿನ ನಗರದಲ್ಲಿ ತಲವಾರ್ ನಲ್ಲಿ ಕಡಿದು ಕಲ್ಲೇಗ ಟೈಗರ್ಸ್ ನ ಪ್ರಮುಖ ನಾಯಕನನ್ನು ಹತ್ಯೆ ಮಾಡಿದ ಘಟನೆ ಇದೀಗ ನಡೆದಿದೆ.


ಟೈಗರ್ಸ್ ನ ಮುಖ್ಯಸ್ಥ ಅಕ್ಷಯ್ ಕಲ್ಲೇಗ ಅವರನ್ನು ಹತ್ಯೆಗೀಡಾದ ಯುವಕ. ಈತ ಪುತ್ತೂರಿನ ನಗರದಲ್ಲಿ ಇದ್ದಾಗ ತಂಡಯೊಂದು ಆಗಮಿಸಿ ಯದ್ವಾತದ್ವ ತಲವಾರ್ ನಲ್ಲಿ ದಾಳಿ ನಡೆಸಿ, ಹತ್ಯೆ ಮಾಡಿದೆ. ಸ್ಥಳಕ್ಕೆ ಆಗಮಿಸಿದ ಪುತ್ತೂರು ನಗರ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

 Share: | | | | |


ಹಾವಿಗೆ ಡೀಸೆಲ್ ಎರಚಿದ ವ್ಯಕ್ತಿಗೆ ವಾರ ಕಳೆಯುವಷ್ಟರಲ್ಲಿ ದೋಷ ; ಮೈ ಉರಿಯಲ್ಲಿ ನರಳಿದ ಬೆಳಗಾವಿ ಮೂಲದ ವ್ಯಕ್ತಿ !

Posted by Vidyamaana on 2023-09-16 19:57:23 |

Share: | | | | |


ಹಾವಿಗೆ ಡೀಸೆಲ್ ಎರಚಿದ ವ್ಯಕ್ತಿಗೆ ವಾರ ಕಳೆಯುವಷ್ಟರಲ್ಲಿ ದೋಷ ; ಮೈ ಉರಿಯಲ್ಲಿ ನರಳಿದ ಬೆಳಗಾವಿ ಮೂಲದ ವ್ಯಕ್ತಿ !

ಮಂಗಳೂರು, ಸೆ.16: ವಾರದ ಹಿಂದೆ ನಾಗರ ಹಾವಿಗೆ ಡೀಸೆಲ್ ಎರಚಿ ಹಾವನ್ನು ನರಳುವಂತೆ ಮಾಡಿದ್ದ ವ್ಯಕ್ತಿಯೊಬ್ಬ ಈಗ ಆ ಹಾವಿನಂತೆಯೇ ಉರಿಯಿಂದ ನರಳತೊಡಗಿದ ಘಟನೆ ಕಿನ್ನಿಗೋಳಿಯಲ್ಲಿ ನಡೆದಿದೆ.   


ಕಿನ್ನಿಗೋಳಿಯ ಬಹುಮಹಡಿ ಕಟ್ಟಡದ ಸಮೀಪ ಸೆ.5ರಂದು ನಾಗರ ಹಾವು ಕಂಡುಬಂದಿತ್ತು. ಕಟ್ಟಡದಲ್ಲಿ ವಾಚ್ ಮೇನ್ ಆಗಿದ್ದ ಬೆಳಗಾವಿ ಮೂಲದ ವ್ಯಕ್ತಿ ಹಾವಿಗೆ ಡೀಸೆಲ್ ಎರಚಿದ್ದು, ಕೂಡಲೇ ಹಾವು ಮೈ ಉರಿಯಿಂದ ಒದ್ದಾಡತೊಡಗಿತ್ತು. ಸ್ಥಳೀಯರು ಬಳಿಕ ಉರಗ ರಕ್ಷಕ ಯತೀಶ್ ಕಟೀಲು ಅವರಿಗೆ ವಿಷಯ ತಿಳಿಸಿದ್ದರು. ಅವರು ಹಾವನ್ನು ಹಿಡಿದು ಚಿಕಿತ್ಸೆ ನೀಡಿದ್ದಲ್ಲದೆ, ಮೈಗೆ ಶಾಂಪೂ ಹಾಕಿ ತೊಳೆದು ಶುಚಿ ಮಾಡಿದ್ದರು. ಆನಂತರ ಹಾವನ್ನು ಕಾಡಿಗೆ ಬಿಟ್ಟು ಬಂದಿದ್ದರು.‌ 


ಆದರೆ ಹಾವಿಗೆ ಡಿಸೇಲ್ ಎರಚಿದ್ದ ಕಾರ್ಮಿಕ ವ್ಯಕ್ತಿಗೆ ವಾರ ಕಳೆಯುವಷ್ಟರಲ್ಲಿ ಮೈ ಉರಿ ಬರತೊಡಗಿದೆ. ಮೈಯಲ್ಲಿ ಕೆಂಪು ಬೊಕ್ಕ ಕಂಡುಬಂದಿದ್ದು ಉರಿಯಿಂದ ನರಳಲು ಶುರು ಮಾಡಿದ್ದ. ಬಳಿಕ ಆತನ ಕುಟುಂಬಸ್ಥರು ಊರಿಗೆ ಮರಳಲು ತಿಳಿಸಿದಂತೆ, ಕುಟುಂಬ ಸಮೇತ ವಾಚ್ ಮೆನ್ ಕೆಲಸ ಬಿಟ್ಟು ಊರಿಗೆ ತೆರಳಿದ್ದಾರೆ. 


ತುಳುನಾಡಿನಲ್ಲಿ ನಾಗರ ಹಾವನ್ನು ದೇವರೆಂದೇ ಪೂಜಿಸುತ್ತಾರೆ. ಹಾವಿಗೆ ಕಲ್ಲು ಹೊಡೆಯುವುದು, ಬಿಸಿ ನೀರು ಎರಚಿದರೂ ದೋಷ ಬರುತ್ತೆ ಎಂಬ ನಂಬಿಕೆಯಿದೆ. ಬೆಳಗಾವಿಯ ವ್ಯಕ್ತಿ ಡೀಸೆಲ್ ಎರಚಿದ್ದರಿಂದ ಹಾವು ಉರಿಯಿಂದ ಸಾಯುವ ಸ್ಥಿತಿ ಬಂದಿತ್ತು. ಇದೇ ಕಾರಣದಿಂದ ಹಾವಿನ ದೋಷ ಆ ವ್ಯಕ್ತಿಗೆ ತಾಗಿದೆ ಎನ್ನುವ ಮಾತು ಸ್ಥಳೀಯರಿಂದ ಕೇಳಿಬಂದಿದೆ.‌

ಬಿಜೆಪಿ ಸೇರಿದ ಮಂಗಳೂರಿನ ಮಾಜಿ ಮೇಯರ್ ಕವಿತಾ ಸನಿಲ್

Posted by Vidyamaana on 2024-04-20 16:57:34 |

Share: | | | | |


ಬಿಜೆಪಿ ಸೇರಿದ ಮಂಗಳೂರಿನ ಮಾಜಿ ಮೇಯರ್ ಕವಿತಾ ಸನಿಲ್

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ ಮಾಜಿ ಮೇಯರ್, ಕಾಂಗ್ರೆಸ್ ನಾಯಕಿ ಕವಿತಾ ಸನಿಲ್ ಶನಿವಾರ ಬಂಟ್ವಾಳದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾದರು.

ಮಂಗಳೂರು : ಮೊಬೈಲ್ ನೋಡುತ್ತಾ ಚಾಲಕ ಬಸ್ ಚಲಾಯಿಸಿದ ಪ್ರಕರಣ

Posted by Vidyamaana on 2023-07-25 06:48:33 |

Share: | | | | |


ಮಂಗಳೂರು : ಮೊಬೈಲ್ ನೋಡುತ್ತಾ ಚಾಲಕ ಬಸ್ ಚಲಾಯಿಸಿದ ಪ್ರಕರಣ

ಮಂಗಳೂರಿನಲ್ಲಿ ಮೊಬೈಲ್ ನೋಡುತ್ತಾ ಚಾಲಕ ಬಸ್ ಚಲಾಯಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪಿತಸ್ಥ ಬಸ್ ಚಾಲಕನ ವಿರುದ್ಧ ಕ್ರಮಕ್ಕೆ ಪೊಲೀಸ್ ಕಮೀಷನರ್ ಕುಲದೀಪ್ ಕುಮಾರ್ ಜೈನ್ ಸೂಚಿಸಿದ್ದಾರೆ.ಬಸ್ ಚಾಲಕನ ವಿರುದ್ಧ ದಕ್ಷಿಣ ಟ್ರಾಫಿಕ್ ಪೊಲೀಸ್ ಠಾಣೆ ಕ್ರಮ ಕೈಗೊಂಡಿದೆ. ಅಲ್ಲದೇ ಚಾಲಕನ ಡಿಎಲ್ ಅನ್ನು ರದ್ದುಗೊಳಿಸುವಂತೆ ಆರ್‌ಟಿಒಗೆ ಸೂಚಿಸಿರುವುದಾಗಿ ತಿಳಿಸಿದ್ದಾರೆ ಅವರು ತಿಳಿಸಿದ್ದಾರೆ.


42 ನಂಬರಿನ ಸೈಂಟ್ ಆಂಟನಿ ಬಸ್ ಚಾಲಕ ನಿರ್ಲಕ್ಷ್ಯ ರೀತಿಯಲ್ಲಿ ಮೊಬೈಲ್ ಉಪಯೋಗಿಸುತ್ತ ಬಸ್ ಚಲಾಯಿಸಿದ್ದಾರೆ. ನೇತ್ರಾವತಿ ಸೇತುವೆಯಿಂದ ಮೊಬೈಲ್ ನೋಡಲು ಆರಂಭಿಸಿದ ಚಾಲಕ ತೊಕ್ಕೊಟ್ಟು ವರೆಗೂ ಮೊಬೈಲ್ ಹಿಡಿದುಕೊಂಡು ಬಸ್ ಚಲಾಯಿಸಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಬಸ್‌ನಲ್ಲಿ ಅಧಿಕ ಪ್ರಯಾಣಿಕರಿದ್ದರು ಎಂಬುದನ್ನು ವಿಡಿಯೋ ಮಾಡಿದ ಪ್ರಯಾಣಿಕ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ರಸ್ತೆಗಿಂತ ಹೆಚ್ಚಾಗಿ ಮೊಬೈಲ್ ಅನ್ನೇ ಚಾಲಕ ವೀಕ್ಷಿಸುತ್ತಿರುವುದು ಜನರ ಕಳವಳಕ್ಕೆ ಕಾರಣವಾಗಿದೆ. ಸಾರಿಗೆ ಅಧಿಕಾರಿಗಳು ಬಸ್ ಪರ್ಮಿಟ್ ರದ್ದುಗೊಳಿಸಬೇಕು ಹಾಗೂ ಸಂಚಾರಿ ಪೊಲೀಸರು ಚಾಲಕನ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಬೆಳ್ತಂಗಡಿ : ರಿಕ್ಷಾ ಪಲ್ಟಿ; ಹಲವರಿಗೆ ಗಾಯ

Posted by Vidyamaana on 2024-06-23 21:03:09 |

Share: | | | | |


ಬೆಳ್ತಂಗಡಿ : ರಿಕ್ಷಾ ಪಲ್ಟಿ; ಹಲವರಿಗೆ ಗಾಯ

ಬೆ ಳ್ತಂಗಡಿ: ಕನ್ಯಾಡಿ ಗ್ರಾಮದ ಗುರಿಪಳ್ಳದ ಕೊಡ್ಡೋಳು ಸಮೀಪ ಚಲಿಸುತ್ತಿದ್ದ ರಿಕ್ಷಾದ ಚಕ್ರಕ್ಕೆ ರಸ್ತೆ ಬದಿ ಕಟ್ಟಲಾಗಿದ್ದ ಜಾನುವಾರಿನ ಹಗ್ಗ ಸಿಲುಕಿ ರಿಕ್ಷಾ ಪಲ್ಟಿಯಾದ ಘಟನೆ ರವಿವಾರ ನಡೆದಿದೆ.

ರಿಕ್ಷಾ ಚಾಲಕ ಸ್ಥಳೀಯ ರಾಮಣ್ಣಗೌಡ ಗಂಭೀರ ಗಾಯಗೊಂಡಿದ್ದು ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದಾರೆ.

ರಾಜ್ಯ ಸರ್ಕಾರ ರೈತರನ್ನು ಕಡೆಗಸುತ್ತಿದೆ

Posted by Vidyamaana on 2023-10-11 16:09:52 |

Share: | | | | |


ರಾಜ್ಯ ಸರ್ಕಾರ ರೈತರನ್ನು ಕಡೆಗಸುತ್ತಿದೆ

ಪುತ್ತೂರು : ಕರ್ನಾಟಕದಲ್ಲಿ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೇಸ್ ಸರಕಾರ ಅಸ್ತಿತ್ವಕ್ಕೆ ಬಂದು 6 ತಿಂಗಳಾಯಿತು ಕರ್ನಾಟಕದ ಜನತೆ ಬಹುಮತದ ಸರಕಾರ ಚುನಾಯಿಸಿ ಕಳುಹಿಸಿ ಜನಹಿತವನ್ನು ಕಾಪಾಡಬಹುದು ಎಂದು ನಂಬಿದ್ದರು. ಆದರೇ ಕಳೆದ 6 ತಿಂಗಳಿನಿಂದ ದೇಶದ ಬೆನ್ನೆಲುಬು ಎನ್ನುವ ರೈತರನ್ನು ಸಂಪೂರ್ಣ ಕಡೆಗಣಿಸುವ ಕೆಲಸ ಆಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕ ಸಂಜೀವ ಮಠಂದೂರು ಹೇಳಿದರು.


ರೈತರಿಗೆ ಪ್ರಣಾಳಿಕೆ ಹಾಗೂ ಸರಕಾರದ ಆದೇಶಗಳು ಮರಿಚಿಕೆಗಳಾಗಿದೆ. ರೈತರಿಗೆ ಬಡ್ಡಿ ರಹಿತ ಸಾಲ 3 ಲಕ್ಷದಿಂದ 5 ಲಕ್ಷಕ್ಕೆ ಏರಿಕೆ ಹಾಗೂ ಶೇ 3 ರ ಬಡ್ಡಿ ದರದಲ್ಲಿ, 10 ರಿಂದ 15 ಲಕ್ಷಕ್ಕೆ ಏರಿಕೆ ಮಾಡಿರುವ ಆದೇಶ ಬಂದು 2 ತಿಂಗಳು ಕಳೆದರೂ ಜಾರಿಯಾಗಿಲ್ಲ, ಹಾಲು ಉತ್ಪಾದಕರಿಗೆ ಪ್ರತೀ ಲೀಟರ್ ಗೆ 5 ರೂಪಾಯಿಂದ 7 ರೂಪಾಯಿಗೆ ಹೆಚ್ಚಳ., ಜಾನುವಾರು ಖರೀದಿಗೆ 3 ಲಕ್ಷದ ಶೂನ್ಯ ಬಡ್ಡಿದರದ ಸಾಲ, ಮೀನುಗಾರ ಮಹಿಳೆಯರಿಗೆ 3 ಲಕ್ಷ ಬಡ್ಡಿ ರಹಿತ ಸಾಲ ಘೋಷಣೆಯಾಗಿಯೇ ಉಳಿದಿದೆ.



ದ.ಕ ಜಿಲ್ಲೆಯಲ್ಲಿ 1,50,000 ರೈತರಿಗೆ ಕೇಂದ್ರ ಸರಕಾರ 6,000 ಕಿಸಾನ್ ಸಮ್ಮಾನ್ ನಿಧಿ ನೀಡುತ್ತಿದ್ದು, ಈ ಹಿಂದಿನ ಬಿಜೆಪಿ ನೇತೃತ್ವದ ರಾಜ್ಯ ಸರಕಾರ 4,000 ನೀಡುತ್ತಿತ್ತು, ಇದನ್ನು ಈಗಿನ ಸರಕಾರ ನಿಲ್ಲಿಸಿರುತ್ತದೆ. ಬಿಜೆಪಿ ಸರಕಾರ ರೈತರ ಮಕ್ಕಳ ವಿದ್ಯಾಭ್ಯಾಸಕ್ಕೆ ದ.ಕ ಜಿಲ್ಲೆಯಲ್ಲಿ ಸುಮಾರು 24,000 ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ರೈತ ವಿದ್ಯಾನಿಧಿ 4,000 ದಿಂದ 11,000 ತನಕ ಈ ಶೈಕ್ಷಣಿಕ ವರ್ಷದಲ್ಲಿ ಯಾವೊಬ್ಬ ರೈತರ ಮಕ್ಕಳಿಗೂ ಪಾವತಿಯಾಗಿಲ್ಲ.


ಕಳೆದ ವರ್ಷ ರೈತರ ನೀರಾವರಿ ಪಂಪ್ ಸೆಡ್‌ಗಳಿಗೆ ನಿರಂತರ ವಿದ್ಯುತ್ ನೀಡುತ್ತಿದ್ದರೆ., ಮುಖ್ಯಮಂತ್ರಿ ಸಿದ್ದರಾಮಯ್ಯ ನವರ ನೇತೃತ್ವದ ಸರಕಾರ ದಿನದ 7 ಗಂಟೆ ವಿದ್ಯುತ್ ಕೊಡುತ್ತೇನೆ ಎಂದು ಭರವಸೆ ನೀಡಿ ಹಗಲು 3 ಗಂಟೆ ರಾತ್ರಿ 4 ಗಂಟೆ ಭರವಸೆಯೇ ಹೊರತು ರೈತ ಇಂದು ಕತ್ತಲೆಯಲ್ಲಿದ್ದಾನೆ ಎಂದರು.


ಕಾಂಗ್ರೆಸ್ ಸರಕಾರ ರೈತರಿಗೆ ಚಳ್ಳೆ ಹಣ್ಣು ತಿನ್ನಿಸಿ ರೈತರನ್ನು ಸಾಲದ ಕೂಪಕ್ಕೆ ತಳ್ಳುತ್ತಿದೆ. ಇವತ್ತು ಕರ್ನಾಟಕದಲ್ಲಿ ರೈತ ವಿರೋಧಿ ಸರಕಾರ ಆಡಳಿತ ಮಾಡುತ್ತಿದ್ದು, ಹಣದುಬ್ಬರ, ಬೆಲೆ ಏರಿಕೆ, ಬರ ಇದರಿಂದ ರೈತರನ್ನು ಮತ್ತಷ್ಟು ಸಂಕಷ್ಟಕ್ಕೆ ಎಡೆ ಮಾಡಿಕೊಟ್ಟಿದೆ.


ರೈತರಿಗೆ ಘೋಷಣೆ ಮಾಡಿದ ಭರವಸೆಯನ್ನು ಈಡೇರಿಸದೇ ಹೋದರೆ ಮುಂದಿನ ದಿನಗಳಲ್ಲಿ ರೈತರು ಬೀದಿಗಿಳಿದು ಹೋರಾಡುವ ಅನಿವಾರ್ಯತೆ ಬರಬಹುದು ಎಂದು ರಾಜ್ಯಕ್ಕೆ ಎಚ್ಚರಿಕೆಯನ್ನು ನೀಡಿದರು.


ಪತ್ರಿಕಾಗೋಷ್ಠಿಯಲ್ಲಿ ಶಶಿಕುಮಾರ್ ರೈ ಬಾಲ್ಯೊಟ್ಟು, ಕೃಷ್ಣ ಕುಮಾರ್ ರೈ ಕೆದಂಬಾಡಿಗುತ್ತು, ಪ್ರಸಾದ್ ಕೆ.ವಿ., ಉಪಸ್ಥಿತರಿದ್ದರು.

ಮುನ್ನಡೆ ಕಾಯ್ದುಕೊಂಡ ಅಶೋಕ್ ಕುಮಾರ್ ರೈ

Posted by Vidyamaana on 2023-05-13 03:52:29 |

Share: | | | | |


ಮುನ್ನಡೆ ಕಾಯ್ದುಕೊಂಡ ಅಶೋಕ್ ಕುಮಾರ್ ರೈ

ಪುತ್ತೂರು: ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಅವರು ಮುನ್ನಡೆ ಕಾಯ್ದುಕೊಂಡಿದ್ದಾರೆ.

ಸುರತ್ಕಲ್ ನಲ್ಲಿ ನಡೆಯುತ್ತಿರುವ ಮತ ಎಣಿಕೆಯಲ್ಲಿ ಪ್ರಾರಂಭದಿಂದಲೂ ಅಶೋಕ್ ಕುಮಾರ್ ರೈ ಮುನ್ನಡೆ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಸುಮಾರು ಸಾವಿರಕ್ಕೂ ಅಧಿಕ ಮತಗಳಿಂದ ಅಶೋಕ್ ಕುಮಾರ್ ರೈ ಮೇಲುಗೈ ಸಾಧಿಸುತ್ತಿದ್ದಾರೆ. ಅಶೋಕ್ ಕುಮಾರ್ ರೈ 3996 ಮತ ಪಡೆದುಕೊಂಡಿದ್ದು, ಅರುಣ್ ಕುಮಾರ್ ಪುತ್ತಿಲ 2962 ಮತ, ಆಶಾ ತಿಮ್ಮಪ್ಪ 2393 ಮತ ಬಾಚಿಕೊಂಡಿದ್ದಾರೆ‌



Leave a Comment: