ಮಂಗಳೂರಲ್ಲಿ ಮಣ್ಣು ಕುಸಿತ ಪ್ರಕರಣ : ಓರ್ವ ಕಾರ್ಮಿಕನ ರಕ್ಷಣೆ

ಸುದ್ದಿಗಳು News

Posted by vidyamaana on 2024-07-03 16:20:08 |

Share: | | | | |


ಮಂಗಳೂರಲ್ಲಿ ಮಣ್ಣು ಕುಸಿತ ಪ್ರಕರಣ : ಓರ್ವ ಕಾರ್ಮಿಕನ ರಕ್ಷಣೆ

ಮಂಗಳೂರು : ಮಂಗಳೂರಿನ ಬಲ್ಮಠದಲ್ಲಿ ನಿರ್ಮಾಣ ಹಂತದ ಕಟ್ಟಡದಲ್ಲಿ ಮಣ್ಣು ಕುಸಿತದಿಂದ ಮಣ್ಣಿನ ಅಡಿಯಲ್ಲಿ ಇಬ್ಬರು ಕಾರ್ಮಿಕರು ಸಿಲುಕಿದ್ದರು. ಇದೀಗ ಮಣ್ಣಿನ ಅಡಿ ಸಿಲುಕಿದ್ದ ಕಾರ್ಮಿಕರ ಪೈಕಿ ಒಬ್ಬನನ್ನು ರಕ್ಷಣೆ ಮಾಡಲಾಗಿದೆ.ಹೌದು ಇಂದು ಮಂಗಳೂರಿನ ಬಲ್ಮಠದಲ್ಲಿ ನಿರ್ಮಾಣ ಹಂತದ ಕಟ್ಟಡದಲ್ಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದರು

ಈ ವೇಳೆ 20 ಅಡಿ ಅಡಿ ಆಳದಲ್ಲಿ ಇಬ್ಬರು ಕಾರ್ಮಿಕರು ಇದ್ದು ತಕ್ಷಣ ಮಣ್ಣು ಕುಸಿತವಾಗಿದೆ. ಇವಳೇ ಇಬ್ಬರು ಕಾರ್ಮಿಕರು ಮಣ್ಣಿನ ಆಡಿ ಸಿಕ್ಕಿದ್ದಾರೆ ತಕ್ಷಣ ಘಟನಾ ಸ್ಥಳಕ್ಕೆ ಎಸ್‌ಡಿಆರ್‌ಎಫ್ ತಂಡ ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿ ಒಬ್ಬನನ್ನು ರಕ್ಷಣೆ ಮಾಡಿದ್ದಾರೆ.

ಆದರೆ ಇನ್ನೊಬ್ಬ ಕಾರ್ಮಿಕನ ರಕ್ಷಣೆಗೆ ಕಾರ್ಯಾಚರಣೆ ಮುಂದುವರೆದಿದ್ದು ಈ ವೇಳೆ ಮಳೆ ಕಾರ್ಯಾಚರಣೆಗೆ ಅಡ್ಡಿ ಪಡಿಸುತ್ತಿದೆ. ಜೋರಾದ ಮಳೆಯಿಂದ ಇದೀಗ ಕಾರ್ಯಾಚರಣೆಗೆ ತೊಂದರೆ ಉಂಟಾಗುತ್ತಿದೆ. ರಕ್ಷಿತ ಕಾರ್ಮಿಕನನ್ನು ತಕ್ಷಣ ಆಂಬುಲೆನ್ಸ್ ನಲ್ಲಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಗಡನಾಸ್ ತಳಕ್ಕೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ, ಮುಲ್ಲೈ ಮುಗಿಲನ್   ಹಾಗೂ ಇತರೆ ಅಧಿಕಾರಿಗಳು ಸ್ಥಳದಲ್ಲಿ ಇದ್ದಾರೆ.

 Share: | | | | |


ತೆವಳಿಕೊಂಡು ರಸ್ತೆ ದಾಟುತ್ತಿದ್ದ ವಿಕಲಚೇತನರ ಮೇಲೆ ಹರಿದ ಕಾರು; ಚಿಕಿತ್ಸೆ ಫಲಿಸದೆ ಮೃತ್ಯು

Posted by Vidyamaana on 2023-12-16 15:17:00 |

Share: | | | | |


ತೆವಳಿಕೊಂಡು ರಸ್ತೆ ದಾಟುತ್ತಿದ್ದ ವಿಕಲಚೇತನರ ಮೇಲೆ ಹರಿದ ಕಾರು; ಚಿಕಿತ್ಸೆ ಫಲಿಸದೆ ಮೃತ್ಯು

ಕಡಬ: ತೆವಳಿಕೊಂಡು ರಸ್ತೆ ದಾಟುತ್ತಿದ್ದ ವಿಕಲಚೇತನರೊಬ್ಬರ ಮೇಲೆ ಕಾರೊಂದು ಹರಿದ ಪರಿಣಾಮ ಗಂಭೀರ ಗಾಯಗೊಂಡು ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟ ಘಟನೆ ಕಡಬದ ಮುಖ್ಯ ಪೇಟೆಯಲ್ಲಿ ಡಿ.15ರ ಶುಕ್ರವಾರ ರಾತ್ರಿ ನಡೆದಿದೆ.ಕಡಬದ ಅಂಗಡಿ ಮನೆ ನಿವಾಸಿ ಧರ್ಣಪ್ಪ ಮೃತಪಟ್ಟವರು.ವಿಕಲಚೇತನರಾಗಿದ್ದ ಅವರು ಶುಕ್ರವಾರ ಸಾಯಂಕಾಲ ರಸ್ತೆ ದಾಟಲು ಯತ್ನಿಸುತ್ತಿದ್ದಾಗ ಮಂಗಳೂರಿನಿಂದ ಸುಬ್ರಹ್ಮಣ್ಯಕ್ಕೆ ತೆರಳುತ್ತಿದ್ದ ಕಾರು ಢಿಕ್ಕಿ ಹೊಡೆದಿದೆ ಎನ್ನಲಾಗಿದೆ.


ಅಪಘಾತದ ರಭಸಕ್ಕೆ ತಲೆ ಹಾಗೂ ಕಾಲಿಗೆ ಗಂಭೀರ ಗಾಯವಾಗಿದ್ದು, ಕೂಡಲೇ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆಗೆ ಸ್ಪಂದಿಸದೆ ಅವರು ಮೃತಪಟ್ಟಿದ್ದಾರೆ.ಮೃತರ ಸಹೋದರ ನೀಡಿದ ದೂರಿನಂತೆ ಕಾರು ಚಾಲಕನ ವಿರುದ್ಧ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಡಗನ್ನೂರು ಗ್ರಾ.ಪಂ. ಮಾಜಿ ಸದಸ್ಯರ ಮನೆಯಲ್ಲಿ ದರೋಡೆ

Posted by Vidyamaana on 2023-09-07 15:14:22 |

Share: | | | | |


ಬಡಗನ್ನೂರು ಗ್ರಾ.ಪಂ. ಮಾಜಿ ಸದಸ್ಯರ ಮನೆಯಲ್ಲಿ ದರೋಡೆ

ಪುತ್ತೂರು: ಬಡಗನ್ನೂರು ಗ್ರಾಪಂ ಸದಸ್ಯ ಗುರುಪ್ರಸಾದ್ ಅವರ ಮನೆಗೆ ತಡರಾತ್ರಿ ನುಗ್ಗಿದ ಮುಸುಕುಧಾರಿಗಳ ತಂಡ ನಡೆಸಿದ ದರೋಡೆ ಪ್ರಕರಣದ ತನಿಖೆಗಾಗಿ ವಿಶೇಷ ತಂಡ ರಚಿಸಲಾಗುವುದು ಎಂದು ಎಸ್ಪಿ ರಿಷ್ಯಂತ್ ಸಿ.ಬಿ. ತಿಳಿಸಿದ್ದಾರೆ.

ಬಡಗನ್ನೂರು ಗ್ರಾಪಂ ಮಾಜಿ ಸದಸ್ಯ ಗುರುಪ್ರಸಾದ್ ಅವರ ಮನೆ ಪರಿಶೀಲಿಸಿ ಮಾಧ್ಯಮದೊಂದಿಗೆ ಅವರು ಮಾತನಾಡಿದರು.

ತಡರಾತ್ರಿ ಮನೆಯೊಳಗೆ ನುಗ್ಗಿದ ದರೋಡರಕೋರರ ಗುಂಪು, ಗುರುಪ್ರಸಾದ್, ಅವರ ತಾಯಿ ಹಾಗೂ ಮನೆಯವರನ್ನು ಕಟ್ಟಿ ಹಾಕಿದೆ. ಬಳಿಕ ಮೊಬೈಲ್ಗಳನ್ನು ನೀರಿಗೆ ಎಸೆದು, ದರೋಡೆ ನಡೆಸಿದೆ. ದರೋಡೆ ನಡೆಸಿದ ಬಳಿಕ ಬಂಧಮುಕ್ತಗೊಳಿಸಿ ತೆರಳಿದೆ. ಕೃತ್ಯ ಎಸಗಿದವರ ಬಗ್ಗೆ ಸುಳಿವು ಸಿಕ್ಕಿಲ್ಲ. ಹಾಗಾಗಿ ವಿಶೇಷ ತಂಡ ರಚಿಸಲಾಗುವುದು ಎಂದು ತಿಳಿಸಿದರು‌

ರಾತ್ರಿ ಸುಮಾರು 2 ಗಂಟೆ ವೇಳೆಗೆ ಕೃತ್ಯ ಎಸಗಿದ್ದು, 25 ಪವನ್ ಚಿನ್ನಾಭರಣ, 40 ಸಾವಿರ ರೂ. ನಗದು ಕಳವಾಗಿದೆ ಎನ್ನಲಾಗಿದೆ. ಈ ಬಗ್ಗೆ ಎಸ್ಪಿ ಅವರಲ್ಲಿ‌ ಪ್ರಶ್ನಿಸಿದಾಗ, ಇದರ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ಮುಂದೆ ಸ್ಪಷ್ಟ ಮಾಹಿತಿ ನೀಡಲಾಗುವುದು ಎಂದು ತಿಳಿಸಿದರು.

ಸ್ಥಳಕ್ಕೆ ಐಜಿ, ಎಸ್ಪಿ,ಡಿ ವೈ ಎಸ್ ಪಿ ಸಹಿತ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಶ್ವಾನದಳ, ಬೆರಳಚ್ಚುಗಾರರು ಪೊಲೀಸರೊಂದಿಗೆ ಕೈಜೋಡಿಸಿದ್ದಾರೆ.

ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ನೀಡದ ಸುಪ್ರೀಂ ಕೋರ್ಟ್‌: ನನ್ನೆಲ್ಲಾ ಪ್ಲ್ಯಾನ್‌ ಉಲ್ಟಾ ಆಯಿತು ಎಂದ ಖ್ಯಾತ ಅಥ್ಲೀಟ್‌!

Posted by Vidyamaana on 2023-10-19 09:23:38 |

Share: | | | | |


ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ನೀಡದ ಸುಪ್ರೀಂ ಕೋರ್ಟ್‌: ನನ್ನೆಲ್ಲಾ ಪ್ಲ್ಯಾನ್‌ ಉಲ್ಟಾ ಆಯಿತು ಎಂದ ಖ್ಯಾತ ಅಥ್ಲೀಟ್‌!

  ಸುಪ್ರೀಂ ಕೋರ್ಟ್‌ ಮಂಗಳವಾರ ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ನೀಡಲು ನಿರಾಕರಿಸಿದ್ದು, ಇದರ ಬೆನ್ನಲ್ಲೇ ದೇಶದ ಪ್ರಮುಖ ಸಲಿಂಗಿ ಜೋಡಿಗಳಲ್ಲಿ ಆತಂಕ ಶುರುವಾಗಿದೆ.ಈ ಕುರಿತು ಭಾರತದ ಖ್ಯಾತ ಸ್ಪ್ರಿಂಟರ್‌ ಹಾಗೂ ಒಲಿಂಪಿಯನ್‌ ದ್ಯುತಿ ಚಂದ್‌ ಬೇಸರ ವ್ಯಕ್ತಪಡಿಸಿದ್ದು, ಸುಪ್ರೀಂ ಕೋರ್ಟ್‌ ತೀರ್ಪು ನನ್ನೆಲ್ಲಾ ಪ್ಲ್ಯಾನ್‌ಗಳನ್ನು ಉಲ್ಟಾ ಮಾಡಿದೆ ಎಂದು ಅವರು ಹೇಳಿದ್ದಾರೆ.ಸುಪ್ರೀಂ ಕೋರ್ಟ್‌ ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ನೀಡಲು ಸುಪ್ರೀಂ ಕೋರ್ಟ್‌ನ ಸಾಂವಿಧಾನಿಕ ಪೀಠ ನಿರಾಕರಿಸಿದೆ.ಇದರಿಂದ ತೀರ್ಪು ನಿರೀಕ್ಷೆಯಲ್ಲಿದ್ದ ದೇಶದ ಪ್ರಮುಖ ಸಲಿಂಗ ಜೋಡಿಗಳಿಗೆ ಇದರಿಂದ ದೊಡ್ಡ ಆಘಾತವಾಗಿದೆ.


ನಾನು ನನ್ನ ಜೊತೆಗಾರ್ತಿ ಮೊನಾಲಿಸಾರನ್ನು ಮದುವೆಯಾಗುವ ಎಲ್ಲಾ ಪ್ಲ್ಯಾನ್‌ ಮಾಡಿದ್ದೆ. ಆದರೆ, ಸುಪ್ರೀಂ ಕೋರ್ಟ್‌ ತೀರ್ಪು ಈ ಪ್ಲ್ಯಾನ್‌ಗಳನ್ನು ಹಾಳು ಮಾಡಿದೆ ಎಂದು ದ್ಯುತಿ ಚಂದ್‌ ಹೇಳಿದ್ದಾರೆ.

ನಾನು ಹಾಗೂ ಮೋನಾಲಿಸಾ ಕಳೆದ ಐದು ವರ್ಷಗಳಿಂದ ಜೊತೆಯಾಗಿ ಬದುಕುತ್ತಿದ್ದೇವೆ. ವಯಸ್ಕರಾರಿಗೂ ನಾವು ತುಂಬಾ ಸಂತೋಷದಿಂದ ಬದುಕುತ್ತಿದ್ದೇವೆ . ನಮ್ಮ ಬದುಕಿನಲ್ಲಿ ನಮ್ಮದೇ ಆದಂಥ ಸ್ವಂಥ ನಿರ್ಧಾರಗಳನ್ನು ಮಾಡಲು ನಾವೀಗ ಶಕ್ತರಾಗಿದ್ದೇವೆ. ಸಲಿಂಗ ವಿವಾಹವನ್ನು ಮಾನ್ಯ ಮಾಡಿ ಸಂಸತ್ತು ಹೊಸ ಕಾನೂನು ಜಾರಿ ಮಾಡಲಿದೆ ಎನ್ನುವ ವಿಶ್ವಾಸ ನಮಗಿದೆ ಎಂದು ದ್ಯುತಿ ತಿಳಿಸಿದ್ದಾರೆ.2019ರ ಮೇ ತಿಂಗಳಲ್ಲಿ ಭಾರತದಲ್ಲಿ ಮುಕ್ತವಾಗಿ ಹೇಳಿಕೊಂಡ ದೇಶದ ಮೊದಲ ಲೆಸ್ಬಿಯನ್‌ ಅಥ್ಲೀಟ್‌ ಆಗಿ ದ್ಯುತಿ ಚಂದ್‌ ಗುರುತಿಸಿಕೊಂಡರು. ಇದಕ್ಕಾಗಿ ಅವರು ತಮ್ಮ ಕುಟುಂಬದಿಂದ ದೊಡ್ಡ ಮಟ್ಟದ ಟೀಕೆ ಎದುರಿಸಿದ್ದರು.


2021 ರಲ್ಲಿ ಬರ್ಮಿಂಗ್ಹ್ಯಾಮ್‌ನಲ್ಲಿ ಕ್ವೀನ್ಸ್ ಬ್ಯಾಟನ್‌ನಲ್ಲಿ ಭಾಗವಹಿಸಿದ್ದಲ್ಲದೇ, ಕಾಮನ್‌ವೆಲ್ತ್ ದೇಶಗಳಲ್ಲಿ ಹೋಮೋಫೋಬಿಯಾ ಬಗ್ಗೆ ಬೆಳಕು ಚೆಲ್ಲುವ ಅವಕಾಶವನ್ನು ಪಡೆದರು.


2022 ರ ಕಾಮನ್‌ವೆಲ್ತ್ ಗೇಮ್ಸ್‌ನ ಉದ್ಘಾಟನಾ ಸಮಾರಂಭದಲ್ಲಿ LGBTQIA+ ಧ್ವಜವನ್ನು ಹಿಡಿದಿದ್ದ ದ್ಯುತಿ ಅವರು ಹೋಮೋಫೋಬಿಯಾ ವಿರುದ್ಧ ಪ್ರಬಲ ಸಂದೇಶವನ್ನು ಕಳುಹಿಸಿದ್ದರು.2015 ರಲ್ಲಿ ಸ್ಪೋರ್ಟ್ಸ್ ಆರ್ಬಿಟ್ರೇಷನ್ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ ಐಎಎಎಫ್‌ ವಿರುದ್ಧ ದ್ಯುತಿ ಚಂದ್‌ ಲಿಂಗ ಪ್ರಕರಣವನ್ನು ಗೆದ್ದಿದ್ದರು. ಒಂದು ವರ್ಷಅಮಾನತುಗೊಂಡ ನಂತರ ಅವರಿಗೆ ಸ್ಪರ್ಧಿಸಲು ಅವಕಾಶ ನೀಡಲಾಯಿತು.

ಸಿಎಎಸ್‌ ಎರಡು ವರ್ಷಗಳವರೆಗೆ ಐಎಎಎಫ್‌ ನೀತಿಯನ್ನು ಅಮಾನತುಗೊಳಿಸಿತು. ನಂತರ ವಿಶ್ವ ಅಥ್ಲೆಟಿಕ್ಸ್‌ ಸಂಸ್ಥೆಯು ನೀತಿಯನ್ನು ಬದಲಾಯಿಸಿತು, ಇದು ಈಗ 400m ನಿಂದ 1500m ವ್ಯಾಪ್ತಿಯಲ್ಲಿ ಸ್ಪರ್ಧಿಸುವ ಮಹಿಳಾ ಅಥ್ಲೀಟ್‌ಗಳಿಗೆ ಮಾತ್ರ ಅನ್ವಯಿಸುತ್ತದೆ, 100m ಮತ್ತು 200m ನಲ್ಲಿ ಸ್ಪರ್ಧಿಸುವ ದ್ಯುತಿಯನ್ನು ತನ್ನ ವ್ಯಾಪ್ತಿಯಿಂದ ಹೊರಗಿಟ್ಟಿತು.


ಮೊನಾಲಿಸಾ ಕುರಿತು ಹೇಳುದಾದರೆ , ತನ್ನ ಗ್ರಾಮದಲ್ಲಿ ಖುದುರ್ಕುನಿ ಪೂಜೆಯ ಸಮಯದಲ್ಲಿ ದ್ಯುತಿ ಚಂದ್‌ರನ್ನು ಮೊದಲು ಭೇಟಿಯಾಗಿದ್ದರು ಮತ್ತು ಬಿಎ ಪದವಿಯನ್ನು ಪೂರ್ಣಗೊಳಿಸಿದ ನಂತರ ದಂಪತಿಗಳು ಒಟ್ಟಿಗೆ ವಾಸ ಮಾಡಲು ಆರಂಭಿಸಿದ್ದಾರೆ.

ನರಿಮೊಗರು ಗ್ರಾ.ಪಂ ಅಧ್ಯಕ್ಷೆಯಾಗಿ ಹರಿಣಿ ಉಪಾಧ್ಯಕ್ಷರಾಗಿ ಉಮೇಶ್ ಆಯ್ಕೆ

Posted by Vidyamaana on 2023-08-11 10:24:27 |

Share: | | | | |


ನರಿಮೊಗರು ಗ್ರಾ.ಪಂ ಅಧ್ಯಕ್ಷೆಯಾಗಿ ಹರಿಣಿ ಉಪಾಧ್ಯಕ್ಷರಾಗಿ ಉಮೇಶ್ ಆಯ್ಕೆ

ಪುತ್ತೂರು: ನರಿಮೊಗರು ಗ್ರಾಮ ಪಂಚಾಯತ್ ಅಧ್ಯಕ್ಷೆ ಮತ್ತು ಉಪಾಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಸದಸ್ಯರು ಆಯ್ಕೆಯಾಗಿದ್ದಾರೆ.


ಅಧ್ಯಕ್ಷೆಯಾಗಿ ಹರಿಣಿ ಅವರು ಆಯ್ಕೆಯಾಗಿದ್ದು, ಉಪಾಧ್ಯಕ್ಷರಾಗಿ ಉಮೇಶ್ ಆಯ್ಕೆಯಾಗಿದ್ದಾರೆಈ ಸಂದರ್ಭದಲ್ಲಿ ಮಾಜಿ ಶಾಸಕ ಸಂಜೀವ ಮಠದೂರು,ನರಿಮೊಗರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ವಿದ್ಯಾ, ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು,ನರಿಮೊಗರು ಗ್ರಾಮ ಗ್ರಾಮ ಪಂಚಾಯತ್ ನಿಕಟಪೂರ್ವ ಉಪಾಧ್ಯಕ್ಷ ಸುಧಾಕರ್ ಕುಲಾಲ್, ನವೀನ್ ರೈ ಶಿಬರ, ಹಾಗೂ ಪಚಾಯತ್ ಸದಸ್ಯರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಅಂತಾರಾಷ್ಟ್ರೀಯ ಮಹಿಳಾ ಕಬಡ್ಡಿ ಕ್ರೀಡಾಪಟು ಧನಲಕ್ಷ್ಮಿ ಬೆಂಗಳೂರಿನಲ್ಲಿ ಆತ್ಮಹತ್ಯೆ

Posted by Vidyamaana on 2023-10-26 20:47:47 |

Share: | | | | |


ಅಂತಾರಾಷ್ಟ್ರೀಯ ಮಹಿಳಾ ಕಬಡ್ಡಿ ಕ್ರೀಡಾಪಟು ಧನಲಕ್ಷ್ಮಿ ಬೆಂಗಳೂರಿನಲ್ಲಿ ಆತ್ಮಹತ್ಯೆ

ಬೆಂಗಳೂರು, ಅ.26: ಅಂತಾರಾಷ್ಟ್ರೀಯ ಮಹಿಳಾ ಕಬಡ್ಡಿ ಕ್ರೀಡಾಪಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ಗ್ರಾಮಾಂತರದ ನೆಲಮಂಗಲದ ಅರಿಶಿನಕುಂಟೆಯಲ್ಲಿ ವರದಿಯಾಗಿದೆ.


ಅರಿಶಿನಕುಂಟೆಯ ಆದರ್ಶನಗರದ ಮನೆಯಲ್ಲಿ ಅಂತಾರಾಷ್ಟ್ರೀಯ ಕಬಡ್ಡಿ ಕ್ರೀಡಾಪಟು ಧನಲಕ್ಷ್ಮಿ(25) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.


ಎರಡು ದಿನಗಳ ಹಿಂದೆ ಸ್ನೇಹಿತರೊಂದಿಗೆ ಮೈಸೂರು ದಸರಾ ನೋಡಿಕೊಂಡು ಬಂದಿದ್ದ ಧನಲಕ್ಷ್ಮೀ, ತಂದೆ ಹಾಗೂ ತಮ್ಮ ಮನೆಯಲ್ಲಿರುವಾಗಲೇ ರೂಮ್‍ನಲ್ಲಿ ನೇಣು ಬಿಗಿದುಕೊಂಡಿದ್ದು, ಅನುಮಾನಗೊಂಡ ತಂದೆ ರೂಮ್‍ಗೆ ಹೋಗಿ ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.


ಮೂಲತಃ ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ಕೆ.ತಿಮ್ಮಲಾಪುರದ ಧನಲಕ್ಷ್ಮೀ ಕುಟುಂಬ, 5 ವರ್ಷದಿಂದ ನೆಲಮಂಗಲದ ಅರಿಶಿನಕುಂಟೆಯ ಆದರ್ಶನಗರದಲ್ಲಿ ಬಾಡಿಗೆಗೆ ಮನೆ ಮಾಡಿಕೊಂಡು ವಾಸವಿದ್ದರು. ಅಂತಾರಾಷ್ಟ್ರೀಯ ಮಟ್ಟದಲ್ಲಿ 3 ಬಾರಿ ಕಬ್ಬಡಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಧನಲಕ್ಷ್ಮಿ, ಕಾಡುಗೋಡಿ ಖಾಸಗಿ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.


ಈ ಬಗ್ಗೆ ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಯಾವುದೋ ವಿಚಾರದಲ್ಲಿ ಮನನೊಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಮೃತ ಯುವತಿಯ ಪೋಷಕರು ದೂರಿನಲ್ಲಿ ತಿಳಿಸಿದ್ದಾರೆ

ಕೊಡಗು: ಕರ್ನಾಟಕದ 32 ಮೀ. ಉದ್ದದ ಗಾಜಿನ ಸೇತುವೆ ಉದ್ಘಾಟನೆ: ದ.ಭಾರತದ 2ನೇ ಸ್ಕಯ್ ವಾಕ್ ಬ್ರಿಡ್ಜ್

Posted by Vidyamaana on 2023-06-13 02:18:12 |

Share: | | | | |


ಕೊಡಗು: ಕರ್ನಾಟಕದ 32 ಮೀ. ಉದ್ದದ ಗಾಜಿನ ಸೇತುವೆ ಉದ್ಘಾಟನೆ: ದ.ಭಾರತದ 2ನೇ ಸ್ಕಯ್ ವಾಕ್ ಬ್ರಿಡ್ಜ್

ಮಡಿಕೇರಿ ಜೂ.12 : ಮಡಿಕೇರಿ ಹೊರವಲಯದ ಉಡೋತ್ ಮೊಟ್ಟೆಯ ಪಪ್ಪೀಸ್ ಪ್ಲಾಂಟೇಷನ್‌ನಲ್ಲಿ ಸುಮಾರು 32 ಮೀಟರ್ ಉದ್ದದ 2 ಮೀಟರ್ ಅಗಲದ 78 ಅಡಿ ಎತ್ತರದಲ್ಲಿರುವ ಗ್ಲಾಸ್ ಸ್ಕೈ ವಾಕ್ ಬ್ರಿಡ್ಜ್ ಪ್ರವಾಸಿಗರ ಗಮನ ಸೆಳೆಯುತ್ತಿದೆ.

ಸುಮಾರು 5 ಟನ್ ಬಾರ ಹೊರುವ ಸಾಮರ್ಥ್ಯದ ಈ ಸೇತುವೆಯಲ್ಲಿ ಒಮ್ಮೆಗೆ 40-50 ಮಂದಿ ನಿಂತು ಪ್ರಕೃತಿಯ ಸೌಂದರ್ಯ ಸವಿಯಬಹುದು. ಇದು ಕರ್ನಾಟಕದ ಮೊದಲ ಉದ್ದದ ಗ್ಲಾಸ್ ಸೇತುವೆಯಾಗಿದ್ದು, ವಿರಾಜಪೇಟೆ ಕ್ಷೇತ್ರದ ಶಾಸಕ ಹಾಗೂ ಸಿಎಂ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಉದ್ಘಾಟಿಸಿದರು.

ನಂತರ ಮಾತನಾಡಿದ ಪೊನ್ನಣ್ಣ, ಕೊಡಗು ಪ್ರಕೃತಿ ದತ್ತವಾದ ನಿಸರ್ಗಕ್ಕೆ ಧಕ್ಕೆಯಾಗದ ವಿಚಾರವನ್ನು ಹೊರತುಪಡಿಸಿ ಅಭಿವೃದ್ಧಿ ಪಡಿಸಬೇಕು ಎಂದರು.

ಈ ಅಪರೂಪದ ಯೋಜನೆಯಿಂದ ಜಿಲ್ಲೆಯಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗಲಿದೆ. ಜೊತೆಗೆ ಅವಲಂಬಿತರಿಗೆ ಉದ್ಯೋಗವಕಾಶ ದೊರೆಯಲಿದೆ ಎಂದು ತಿಳಿಸಿದರು.

ಕಾರ್ಯಕ್ರಮ ನಿರೂಪಿಸಿ ಮಾತನಾಡಿದ ಕಾಂಗ್ರೆಸ್ ವಕ್ತಾರ ತೆನ್ನಿರಾ ಮೈನಾ, ಭಾರತದ ಸ್ಟ್ರಾಟ್ ಲ್ಯಾಂಡ್ ದಕ್ಷಿಣದ ಕಾಶ್ಮೀರ ಎಂದು ಕರೆಸಿಕೊಂಡಿರುವ ಕೊಡಗು ಜಿಲ್ಲೆಯಲ್ಲಿ ಇಂತಹ ಒಂದು ಅದ್ಭುತ ಯೋಜನೆ ಸ್ಥಾಪಿತವಾಗಿರುವುದು ಪ್ರವಾಸೋದ್ಯಮಕ್ಕೆ ಅಶೋದಯಕ ಬೆಳವಣಿಗೆ ಎಂದು ತಿಳಿಸಿದರು.ಟಿಕೆಟ್ ಕೌಂಟರನ್ನು ಮಡಿಕೇರಿ ನಗರಸಭೆ ಮಾಜಿ ಅಧ್ಯಕ್ಷ ಹೆಚ್.ಎಂ.ನಂದಕುಮಾರ್, ಪ್ಲೆಂಟೇಷನ್‌ನ ವಾಕ್ ಪಾಟ್‌ಅನ್ನು ಕೇಕಡ ಗಣಪತಿ ಹಾಗೂ ದೇವಯ್ಯ ಉದ್ಘಾಟಿಸಿದರು. ಫೋಟೋ ಪಾಯಿಂಟನ್ನು ಉದ್ಯಾಮಿ ಗ್ರೀನ್ ಲ್ಯಾಂಡ್ ಶರಿನ್ ಉದ್ಘಾಟಿಸಿದರು.

ಈ ಸಂದರ್ಭ ಓಂಕಾರೇಶ್ವರ ದೇವಾಲಯದ ಮಾಜಿ ಅಧ್ಯಕ್ಷ ಪುಲಿಯಂಡ ಜಗದೀಶ್, ತುಳುವೆರ ಒಕ್ಕೂಟದ ಜಿಲ್ಲಾ ಖಜಾಂಚಿ ಪ್ರಭುರೈ, ಬೆಟ್ಟಗೇರಿ ಗ್ರಾ.ಪಂ ಸದಸ್ಯ ಗೋಪಾಲ, ಪ್ರಮುಖರಾದ ಮುಂಜಂದಿರ ಚಿಕ್ಕು ಕಾರ್ಯಪ್ಪ, ಅಜ್ಜಿಕುಟೀರ ನರೇನ್ ಕಾರ್ಯಪ್ಪ, ಮಿದೇರಿರ ನವೀನ್ ಹಾಜರಿದ್ದರು.



Leave a Comment: