ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕರ ಸೇವಾಂಜಲಿ ಟ್ರಸ್ಟ್ ಗೆ ಶಾಸಕರಿಂದ ರೂ.೫೦ ಸಾವಿರ ಸಹಾಯಧನ

ಸುದ್ದಿಗಳು News

Posted by vidyamaana on 2024-07-03 19:23:39 |

Share: | | | | |


ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕರ ಸೇವಾಂಜಲಿ ಟ್ರಸ್ಟ್ ಗೆ ಶಾಸಕರಿಂದ ರೂ.೫೦ ಸಾವಿರ ಸಹಾಯಧನ

ಪುತ್ತೂರು: ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕರ ಸೇವಾಂಜಲಿ ಟ್ರಸ್ಟ್ ಗೆ ಪುತ್ತೂರು ಶಾಸಕರಾದ ಅಶೋಕ್ ರೈಯವರು ರೂ. ೫೦ ಸಾವಿರ ಸಹಾಯಧನವನ್ನು ನೀಡಿದರು. ಮಂಗಳೂರು ಕೇಂದ್ರ ಕಚೇರಿಯನ್ನು ಹೊಂದಿರುವ ಈ ಟ್ರಸ್ಟ್ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಈ ಟ್ರಸ್ಟ್‌ನಲ್ಲಿ ಸದಸ್ಯರಾಗಿರುತ್ತಾರೆ.

ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಕ್ಷೇಮಾಭಿವೃದ್ದಿ ಟ್ರಸ್ಟ್ ಇದಾಗಿರುತ್ತದೆ. ಈ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಜಿಲ್ಲಾಧ್ಯಕ್ಷೆ ತಾರಾಬಲ್ಲಾಲ್, ಪುತ್ತೂರು ತಾಲೂಕು ಅಧ್ಯಕ್ಷೆ ಕಮಲ, ತಾಲೂಕು ಕಾರ್ಯದರ್ಶಿ ಪುಷ್ಪಾವತಿ, ಸೇವಾಂಜಲಿ ಟ್ರಸ್ಟ್ ಉಪಾಧ್ಯಕ್ಷೆ ಅರುಣಾ ಡಿ, ನಿರ್ದೇಶಕಿ ಮೀನಾಕ್ಷಿ ಉಪಸ್ಥಿತರಿದ್ದರು.

 Share: | | | | |


ನಿಲ್ಸಿ..- ಮದುವೆ ಸಮಾರಂಭಕ್ಕೆ ದಿಡೀರ್ ಎಂಟ್ರಿ ಕೊಟ್ಟ ಯುವತಿ

Posted by Vidyamaana on 2024-01-05 16:39:03 |

Share: | | | | |


ನಿಲ್ಸಿ..- ಮದುವೆ ಸಮಾರಂಭಕ್ಕೆ ದಿಡೀರ್ ಎಂಟ್ರಿ ಕೊಟ್ಟ ಯುವತಿ

ಮಂಗಳೂರು: ಮದುವೆ ನಡೆಯುತ್ತಿದ್ದ ವೇಳೆ ಏಕಾಏಕಿ ಕಲ್ಯಾಣ ಮಂಟಪಕ್ಕೆ (Wedding Function) ಬಂದ ಯುವತಿಯೊಬ್ಬಳು ವರ ತನಗೆ ಮದುವೆಯಾಗುವುದಾಗಿ ಮೋಸ ಮಾಡಿದ್ದಾನೆ ಎಂದು ಜಗಳವಾಡಿದ ಘಟನೆ ಮಂಗಳೂರಿನಲ್ಲಿ (Mangaluru) ನಡೆದಿದೆ.ಕಲ್ಯಾಣ ಮಂಟಪಕ್ಕೆ ಬಂದು ಗಲಾಟೆ ಮಾಡಿದ ಯುವತಿಯನ್ನು ಇಂದು ಮದುವೆಯಾಗುತ್ತಿರುವ ವರನ ಮಾಜಿ ಪ್ರೇಯಸಿ ಎಂದು ಹೇಳಲಾಗ್ತಿದ್ದು, ತನ್ನನ್ನು ಬಿಟ್ಟು ಬೇರೊಬ್ಬ ಯುವತಿಯ ಜೊತೆಗೆ ಮದುವೆಯಾಗುತ್ತಿರುವುದನ್ನು ಪ್ರಶ್ನಿಸಿ ಆಕೆ ಗಲಾಟೆ ಮಾಡಿದ್ದಾಳೆ ಎಂದು ತಿಳಿದು ಬಂದಿದೆ.ಅಂದ ಹಾಗೆ ಈ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ತಾಲೂಕಿನ ಬೀರಿ ಬಳಿ ನಡೆದಿದ್ದು, ಕೇರಳ ಮೂಲದ ಅಕ್ಷಯ್ ಎಂಬಾತನ ಮದುವೆ ಮಂಗಳೂರು ಮೂಲದ ಯುವತಿ ಜೊತೆ ನಡೆಯುತ್ತಿದ್ದಾಗ ಮೈಸೂರು ಮೂಲದ ಮಾಜಿ ಪ್ರೇಯಸಿ ಕಲ್ಯಾಣ ಮಂಟಪಕ್ಕೆ ಎಂಟ್ರಿಕೊಟ್ಟು ತನಗೆ ಅನ್ಯಾಯವಾಗಿದೆ, ನ್ಯಾಯ ಬೇಕು ಎಂದು ಆಗ್ರಹ ಮಾಡಿದ್ದಾಳೆ.ಕೇರಳದ ಕೊಝಿಕ್ಕೋಡ್ ಮೂಲದ ಅಕ್ಷಯ್ ಒಂದೂವರೆ ವರ್ಷದ ಹಿಂದೆ ಮೈಸೂರಿನ ಯುವತಿಯನ್ನು ಶಾದಿ ಡಾಟ್ ಕಾಮ್ ಮೂಲಕ ಪರಿಚಯ ಮಾಡಿಕೊಂಡಿದ್ದನು. ನಂತರ ವಿವಾಹವಾಗುವುದಾಗಿ ನಂಬಿಸಿ ಆಕೆಯನ್ನು ಅಲ್ಲಿಲ್ಲಿ ಸುತ್ತಾಡಿಸಿ ದೈಹಿಕ ಸಂಪರ್ಕ ನಡೆಸಿದ್ದಾನೆ. ನಂತರ ಆತ ವರಸೆ ಬದಲಾಯಿಸಿದ್ದು, ಆಕೆಯನ್ನು ಬಿಟ್ಟು ಬೇರೊಬ್ಬ ಯುವತಿಯ ಜೊತೆ ಮದುವೆಗೆ ಮುಂದಾಗಿದ್ದಾನೆ.ಅಂದಹಾಗೆ ಸಂತ್ರಸ್ತ ಯುವತಿ ಕಳೆದ ಡಿಸೆಂಬರ್ 26 ರಂದು ಅಕ್ಷಯ್ ವಿರುದ್ಧ ಕೇರಳದ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರದ ದೂರು ದಾಖಲಿಸಿದ್ದಾಳೆ. ಪ್ರಕರಣ ಸಂಬಂಧ ಅರೋಪಿ ಅಕ್ಷಯ್​ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ನ್ಯಾಯಾಲಯವು ವಜಾಗೊಳಿಸಿತ್ತು. ಈ ನಡುವೆ ಮಂಗಳೂರನ ಯುವತಿ ಜೊತೆ ಅಕ್ಷಯ್​ಗೆ ವಿವಾಹ ನಿಶ್ಚಯವಾಗಿದೆ.ಅಕ್ಷಯ್‌ಗೆ ಕರ್ನಾಟಕ-ಕೇರಳ ಗಡಿಭಾಗ ಬೀರಿಯ ಖಾಸಗಿ ಹಾಲ್​ನಲ್ಲಿ ಮದುವೆ ನಡೆಯುತ್ತಿರುವ ವಿಚಾರ ತಿಳಿದ ಬೆನ್ನಲ್ಲೇ ಉಳ್ಳಾಲ ಪೊಲೀಸರೊಂದಿಗೆ ಹಾಲ್‌ಗೆ ಆಗಮಿಸಿದ ಯುವತಿ ಕಲ್ಯಾಣ ಮಂಟಪದ ಮುಂಭಾಗದಲ್ಲಿ ಹೈಡ್ರಾಮ ನಡೆಸಿದ್ದಾಳೆ. ನಂತರ ಪೊಲೀಸರೇ ಆಕೆಯನ್ನು ಹಾಲ್ ಬಳಿಯಿಂದ ಕೇರಳದ ಮಂಜೇಶ್ವರ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.ಈ


ಮಧ್ಯೆ, ಆರೋಪಿಯನ್ನು ಅರೆಸ್ಟ್ ಮಾಡಿ ಅಂದರೆ ನನ್ನನ್ನೇ ಕರೆದುಕೊಂಡು ಹೋಗುತ್ತಿದ್ದಾರೆ ಎಂದು ಯುವತಿ ಆಕ್ರೋಶ ಹೊರಹಾಕಿದ್ದಾಳೆ. ನಂತರ ಅಕ್ಷಯ್ ಮಂಗಳೂರು ಯುವತಿಗೆ ತಾಳಿ ಕಟ್ಟಿದ್ದಾನೆ ಎಂದು ತಿಳಿದು ಬಂದಿದೆ.

ಆ. 19ರಂದು ಕೊಣಾಜೆ ಪಿಎ ಕಾಲೇಜಿನಲ್ಲಿ ಗ್ಯಾಜ್ಯುವೇಷನ್ ಡೇ

Posted by Vidyamaana on 2023-08-18 15:27:26 |

Share: | | | | |


ಆ. 19ರಂದು ಕೊಣಾಜೆ ಪಿಎ ಕಾಲೇಜಿನಲ್ಲಿ ಗ್ಯಾಜ್ಯುವೇಷನ್ ಡೇ

ಮಂಗಳೂರು: ಕೊಣಾಜೆ ಪಿಎ ಕಾಲೇಜ್ ಆಫ್ ಇಂಜಿನಿಯರಿಂಗ್’ನಲ್ಲಿ ಆ. 19ರಂದು ಬೆಳಿಗ್ಗೆ 9.30ಕ್ಕೆ ಪೇಸ್ ಅಡಿಟೋರಿಯಂನಲ್ಲಿ 2019-2023ರ ಬ್ಯಾಚ್ ಸ್ಟೂಡೆಂಟ್’ಗಳ ಗ್ರಾಜ್ಯುವೇಷನ್ ಡೇ ನಡೆಯಲಿದೆ.

ಕರ್ನಾಟಕ ವಿಧಾನಸಭೆಯ ಸ್ಪೀಕರ್ ಯು.ಟಿ. ಖಾದರ್ ಮುಖ್ಯ ಅತಿಥಿಯಾಗಿರುವರು. ಸುರತ್ಕಲ್ ಎನ್.ಐ.ಟಿ.ಕೆ. ಇದರ ಸಿ.ಎಸ್.ಇ. ವಿಭಾಗದ ಡಾ. ಮೋಹಿತ್ ಪಿ. ತಹಿಲಿಯಾನಿ ಗೌರವ ಅತಿಥಿಯಾಗಿರುವರು. ಸಂಸ್ಥೆಯ ಟ್ರಸ್ಟಿಗಳಾದ ಅಬ್ದುಲ್ ಲತೀಫ್, ಮೊಹಮ್ಮದ್ ಶಾಫಿ, ಮುಹಮ್ಮದ್ ಅಮೀನ್ ಇಬ್ರಾಹಿಂ, ಮುಹಮ್ಮದ್ ಸಲ್ಮಾನ್ ಇಬ್ರಾಹಿಂ, ಜುಬೈರ್ ಇಬ್ರಾಹಿಂ, ಬಿಲಾಲ್ ಇಬ್ರಾಹಿಂ, ಆದಿಲ್ ಇಬ್ರಾಹಿಂ, ಸಂಸ್ಥೆಯ ನಿರ್ದೇಶಕ ಅಹ್ಮದ್ ಕುಟ್ಟಿ, ಬೆಂಗಳೂರು ಪ್ರೆಸಿಡೆನ್ಸಿ ಯೂನಿವರ್ಸಿಟಿಯ ಡೀನ್ ಡಾ. ಅಬ್ದುಲ್ ಶರೀಫ್ ಉಪಸ್ಥಿತರಿರುವರು.

ಮಧ್ಯಾಹ್ನ 2 ಗಂಟೆಗೆ ರಾಜ್ಯ ವಿಧಾನಸಭೆಯ ಸ್ಪೀಕರ್ ಯು.ಟಿ. ಖಾದರ್ ಅವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಅಬ್ದುಲ್ಲ ಇಬ್ರಾಹಿಂ ಅಧ್ಯಕ್ಷತೆ ವಹಿಸಲಿದ್ದು, ಮಂಗಳೂರು ವಿಶ್ವವಿದ್ಯಾಲಯದ (ಈವ್ಯಾಲ್ಯುವೇಷನ್) ರಿಜಿಸ್ಟ್ರಾರ್ ಡಾ. ರಾಜು ಕೃಷ್ಣ ಚಲನ್ನವರ್ ಗೌರವ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಹೈ ಸೆಕ್ಯುರಿಟಿ ನಂಬರ್‌ ಪ್ಲೇಟ್‌ ನಲ್ಲಿ 700 ಕೋಟಿ ರೂ. ದೋಖಾ - ಲೋಕಾಯುಕ್ತಕ್ಕೆ ದೂರುದಾಖಲು!

Posted by Vidyamaana on 2024-01-13 08:23:37 |

Share: | | | | |


ಹೈ ಸೆಕ್ಯುರಿಟಿ ನಂಬರ್‌ ಪ್ಲೇಟ್‌ ನಲ್ಲಿ 700 ಕೋಟಿ ರೂ. ದೋಖಾ - ಲೋಕಾಯುಕ್ತಕ್ಕೆ ದೂರುದಾಖಲು!

ಬೆಂಗಳೂರು : ಉನ್ನತ ಸುರಕ್ಷತಾ ನೋಂದಣಿ ಫಲಕ (High security number plate) ಅಳವಡಿಕೆಯಲ್ಲಿ ನಕಲಿ ನಂಬರ್‌ ಪ್ಲೇಟ್‌ (Fake number plate) ಅಳವಡಿಕೆ ನಡೆಯುತ್ತಿರುವ ಆರೋಪ ಕೇಳಿಬಂದಿದೆ. ನಕಲಿ ನಂಬರ್‌ ಪ್ಲೇಟ್‌ ಬಳಸಿ ಪೊಲೀಸರು ಹಾಗೂ ಸರ್ಕಾರಕ್ಕೆ ವಂಚಿಸುತ್ತಿರುವವರ ಪ್ರಮಾಣ ದಿನೇದಿನೇ ಹೆಚ್ಚಾಗುತ್ತಿದ್ದು ಇವರ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ಲೋಕಾಯುಕ್ತಕ್ಕೆ (Lokayukta) ದೂರು ನೀಡಲಾಗಿದೆ.ಅಖಿಲ ಕರ್ನಾಟಕ ನಂಬರ್‌ ಪ್ಲೇಟ್‌ ತಯಾರಕರು ಹಾಗೂ ಮಾರಾಟಗಾರರ ಸಂಘದ ಅಧ್ಯಕ್ಷ ಎಸ್‌.ಎನ್‌ .ಜಿತೇಂದ್ರ ಲೋಕಾಯುಕ್ತ ಕಚೇರಿಯಲ್ಲಿ ಈ ಕುರಿತು ದೂರು ದಾಖಲಿಸಿದ್ದಾರೆ. 


2019 ಏ. 1 ಕ್ಕೂ ಮುನ್ನ ಖರೀದಿಸಿರುವ ವಾಹನಗಳಿಗೆ ಉನ್ನತ ಸುರಕ್ಷತಾ ನೋಂದಣಿ ಫಲಕ ಅಳವಡಿಸಬೇಕೆಂದು ಸಾರಿಗೆ ಇಲಾಖೆ ಆದೇಶಿಸಿತ್ತು. ಈ ಆದೇಶದ ಬಳಿಕ ನಕಲಿ ಪ್ಲೇಟ್‌ಗಳ ಹಾವಳಿಂದಾಗಿ ಸುಮಾರು 700 ಕೋಟಿ ರೂ. ಗಳಿಗೂ ಹೆಚ್ಚು ಭ್ರಷ್ಟಾಚಾರ ನಡೆದಿದೆ ಎಂದು ಜಿತೇಂದ್ರ ತಮ್ಮ ದೂರಿನಲ್ಲಿ ವಿವರಿಸಿದ್ದಾರೆ.

ಸೋಮೇಶ್ವರ ಕಡಲಿಗಿಳಿದ ಇಬ್ಬರು ವಿದ್ಯಾರ್ಥಿಗಳು ನೀರುಪಾಲು

Posted by Vidyamaana on 2023-12-09 20:01:00 |

Share: | | | | |


ಸೋಮೇಶ್ವರ ಕಡಲಿಗಿಳಿದ ಇಬ್ಬರು ವಿದ್ಯಾರ್ಥಿಗಳು ನೀರುಪಾಲು

ಉಳ್ಳಾಲ, ಡಿ.9: ಸೋಮೇಶ್ವರ ಸೋಮನಾಥ ದೇವಸ್ಥಾನದಲ್ಲಿ ಅನ್ನ ಪ್ರಸಾದ ಸ್ವೀಕರಿಸಿ ಸಮುದ್ರದಲ್ಲಿ ನೀರಾಟಕ್ಕಿಳಿದ ಆರು ಮಂದಿ ಪಿಯು ವಿದ್ಯಾರ್ಥಿಗಳಲ್ಲಿ ಇಬ್ಬರು ನೀರುಪಾಲಾದ ಘಟನೆ ಇಂದು ಮಧ್ಯಾಹ್ನ ನಡೆದಿದೆ‌. 


ಸೋಮೇಶ್ವರದ ಪರಿಜ್ಞಾನ ಪಿಯು ಕಾಲೇಜಿನ ದ್ವಿತೀಯ ಪಿಯು ಕಾಮರ್ಸ್ ವಿಭಾಗದ ವಿದ್ಯಾರ್ಥಿಗಳಾದ ಮಂಜೇಶ್ವರ, ಕುಂಜತ್ತೂರು ಅಡ್ಕ ನಿವಾಸಿ ಯಶ್ವಿತ್ (17) ಮತ್ತು ಕುಂಜತ್ತೂರು ಮಜಲ್ ನಿವಾಸಿ ಯುವರಾಜ್(17) ಸಮುದ್ರ ಪಾಲಾದವರು. ಶನಿವಾರ ಮಧ್ಯಾಹ್ನ ನಂತರ ಯಶ್ವಿತ್ ಮತ್ತು ಯುವರಾಜ್ ಸೇರಿ ಒಟ್ಟು ಆರು ವಿದ್ಯಾರ್ಥಿಗಳು ಸೋಮನಾಥ ದೇವಸ್ಥಾನದಲ್ಲಿ ಅನ್ನ ಪ್ರಸಾದ ಸ್ವೀಕರಿಸಿ ಸಮೀಪದ ಕಡಲ ಕಿನಾರೆಯಲ್ಲಿ ನೀರಾಟಕ್ಕಿಳಿದಿದ್ದಾರೆ. ಈ ವೇಳೆ ಯಶ್ವಿತ್ ಮತ್ತು ಯುವರಾಜನ್ನ ಕಡಲಿನ ರಕ್ಕಸ ಅಲೆಗಳು ಎಳೆದು ಹೋಗಿವೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿಗಳು ಮತ್ತು ಈಜು ತಜ್ಞರು ಭೇಟಿ ನೀಡಿದ್ದು ನೀರು ಪಾಲಾದ ವಿದ್ಯಾರ್ಥಿಗಳಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಉಳ್ಳಾಲ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವಂಚನೆ ಪ್ರಕರಣ: ಚೈತ್ರಾ ಕುಂದಾಪುರ ಸೆ. 23ರ ವರೆಗೆ ಸಿಸಿಬಿ ಕಸ್ಟಡಿಗೆ

Posted by Vidyamaana on 2023-09-13 17:16:46 |

Share: | | | | |


ವಂಚನೆ ಪ್ರಕರಣ: ಚೈತ್ರಾ ಕುಂದಾಪುರ ಸೆ. 23ರ ವರೆಗೆ ಸಿಸಿಬಿ ಕಸ್ಟಡಿಗೆ

ಬೆಂಗಳೂರು: ಬೈಂದೂರು ಬಿಜೆಪಿ ಟಿಕೆಟ್ ಆಕಾಂಕ್ಷಿ ಗೋವಿಂದ ಪೂಜಾರಿಗೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್ ಕೊಡಿಸುವುದಾಗಿ ಆಮಿಷವೊಡ್ಡಿ 7 ಕೋಟಿ ರುಪಾಯಿ ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಚೋದನಾಕಾರಿ ಭಾಷಣಕಾರ್ತಿ ಚೈತ್ರ ಕುಂದಾಪುರ, ಶ್ರೀಕಾಂತ್, ರಮೇಶ್, ಗಗನ್, ಪ್ರಜ್ವಲ್ ಹಾಗೂ ಧನರಾಜ್ನನ್ನು ಸೆಪ್ಟೆಂಬರ್ 23ರವರೆಗೆ ಸಿಸಿಬಿ ಕಸ್ಟಡಿಗೆ ನೀಡಿ ಬೆಂಗಳೂರಿನ 1ನೇ ಎಸಿಎಂಎಂ ಕೋರ್ಟ್ ಆದೇಶ ಹೊರಡಿಸಿದೆ.


ಕೆಲ ಸಮಯದಿಂದ ತಲೆಮರೆಸಿಕೊಂಡಿದ್ದ ಚೈತ್ರಾ ಕುಂದಾಪುರ ಉಡುಪಿ ಕೃಷ್ಣ ಮಠದ ಪಾರ್ಕಿಂಗ್ ಏರಿಯಾದಲ್ಲಿ ಬೆಂಗಳೂರಿನ ಸಿಸಿಬಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದು ಇಬ್ಬರು ಆರೋಪಿಗಳನ್ನು ಮಂಗಳವಾರ ವಶಕ್ಕೆ ಪಡೆದಿದ್ದಾರೆ.

ರೈತರು ಸಹಕಾರಿ ಸಂಸ್ಥೆಗಳಿಂದ ಪಡೆದ ಸಾಲಗಳ ಬಡ್ಡಿ ಮನ್ನಾಕ್ಕೆ ಸರಕಾರದ ನಿರ್ಧಾರ: ಅಧಿಸೂಚನೆ ಹೊರಡಿಸಿದ ಸರಕಾರ

Posted by Vidyamaana on 2024-03-16 10:22:14 |

Share: | | | | |


ರೈತರು ಸಹಕಾರಿ ಸಂಸ್ಥೆಗಳಿಂದ ಪಡೆದ ಸಾಲಗಳ ಬಡ್ಡಿ ಮನ್ನಾಕ್ಕೆ ಸರಕಾರದ ನಿರ್ಧಾರ: ಅಧಿಸೂಚನೆ ಹೊರಡಿಸಿದ ಸರಕಾರ

ಪುತ್ತೂರು: ಸಂಕಷ್ಟದಲ್ಲಿದ್ದ ರೈತರಿಗೆ ಸಂತೋಷದ ಸುದ್ದಿಯನ್ನು ರಾಜ್ಯ ಸರಕಾರ ನೀಡಿದ್ದು ರೈತರು ವಿವಿಧ ಸಹಕಾರಿ ಸಂಘಗಳಿಂದ ಕೃಷಿ ಮತ್ತು ಕೃಷಿ ಸಂಬಂಧಿತ ಸಾಲಗಳ ಬಡ್ಡಿಯನ್ನು ಮನ್ನಾ ಮಾಡಲು ಆದೇಶ ಹೊರಡಿಸಿದೆ, ದ ಕ ಮತ್ತು ಉಡುಪಿ ಜಿಲ್ಲೆಯ ರೈತರ ಸಂಕಷ್ಠಗಳ ಬಗ್ಗೆ ಕಳೆದ ವಿಧಾನಸಭಾ ಅಧಿವೇಶನದಲ್ಲಿ ಮಾತನಾಡಿದ್ದ ಪುತ್ತೂರಿನ ಶಾಶಕರಾದ ಅಶೋಕ್ ರೈಯರು ರೈತರ ಸಾಲದ ಮೇಲಿನ ಬಡ್ಡಿಯನ್ನು ಮನ್ನಾ ಮಾಡುವಂತೆ ಆಗ್ರಹಿಸಿದ್ದರು. ಇದೀಗ ಸರಕಾರ ಬಡ್ಡಿ ಮನ್ನಾ ಮಾಡಿ ಆದೇಶ ಹೊರಡಿಸಿದೆ.


 ರೈತರು ರಾಜ್ಯದ ಸಹಕಾರ ಸಂಘಗಳು ಅಂದರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು, ಲ್ಯಾಂಪ್ಸ್ ಸಹಕಾರ ಸಂಘಗಳು, ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕುಗಳು ಮತ್ತು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕುಗಳಿಂದ ಸಾಲ ಪಡೆದು ೨೦೨೩ ಡಿ.೩೧  ಕ್ಕೆ ಸುಸ್ತಿಯಾಗಿರುವ ಮಧ್ಯಮಾವಧಿ ಹಾಗೂ ದೀರ್ಘಾವಧಿ ಕೃಷಿ ಮತ್ತು ಕೃಷಿ ಸಂಬಂಧಿತ ಸಾಲಗಳ ಕಂತುಗಳ ಅಸಲನ್ನು ದಿನಾಂಕ:೨೯-೦೨-೨೦೨೪ ರೊಳಗೆ ಸಂಬಂಧಪಟ್ಟ ಪತ್ತಿನ ಸಹಕಾರ ಸಂಘ/ಬ್ಯಾಂಕುಗಳಿಗೆ ಪೂರ್ತಿಯಾಗಿ ಮರುಪಾವತಿಸಿದಲ್ಲಿ ಈ ಮೊತ್ತಕ್ಕೆ ಬಾಕಿಯಿರುವ ಬಡ್ಡಿಯನ್ನು ಮನ್ನಾ ಮಾಡಲು ಮತ್ತು ಈ ರೀತಿ ಮನ್ನಾ ಮಾಡಿದ ಬಡ್ಡಿ ಮೊಬಲಗನ್ನು ಸಹಕಾರ ಸಂಘಗಳಿಗೆ ಸರ್ಕಾರವು ಭರ್ತಿ ಮಾಡಲು ಕೆಲವು ಷರತ್ತಿಗೊಳಪಟ್ಟು ಮಂಜೂರಾತಿ ನೀಡಿ ಆದೇಶಿಸಲಾಗಿದೆ.


 ಯೋಜನೆಯಲ್ಲಿ ಸಹಕಾರ ಸಂಘಗಳು ಸಲ್ಲಿಸಿದ ಮಾಹಿತಿಯನ್ವಯ ದಿನಾಂಕ:೨೯-೦೨-೨೦೨೪ ರವರೆಗೆ ೨೯,೪೫೬ ರೈತರು ರೂ.೨೮೧.೮೮ ಕೋಟಿಗಳ ಸುಸ್ತಿ ಸಾಲವನ್ನು ಮರುಪಾವತಿಸಿದ್ದು ಇದರ ಮೇಲೆ ಸರ್ಕಾರದ ಬಡ್ಡಿ ರೂ.೨೧೪.೫೫ ಕೋಟಿಗಳಾಗಿರುತ್ತದೆ.


 ಬರಗಾಲ ಪರಿಸ್ಥಿತಿಯ ಹಿನ್ನೆಲೆಯಲ್ಲಿ ರೈತರ ಅನುಕೂಲಕ್ಕಾಗಿ ಸುಸ್ತಿ ಸಾಲಗಳ ಬಡ್ಡಿ ಮನ್ನಾ ಯೋಜನೆಯಡಿ ಸುಸ್ತಿ ಸಾಲಗಳ ಮರುಪಾವತಿ ಅವಧಿಯನ್ನು ದಿನಾಂಕ: ೩೧-೦೩-೨೦೨೪ ರವರೆಗೆ ವಿಸ್ತರಿಸುವಂತೆ ನಿಬಂಧಕರು ಕೋರಿದ್ದು . ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ ಸರ್ಕಾರದ ಆದೇಶ ಸಂಖ್ಯೆ:ಸಿಒ ೨೯೧ ಸಿಎಲ್‌ಎಸ್ ೨೦೨೩, ದಿನಾಂಕ:೨೦-೦೧-೨೦೨೪ ರ ಆದೇಶದಲ್ಲಿ ಬಡ್ಡಿಮನ್ನಾ ಮಾಡುವ ಯೋಜನೆಯಲ್ಲಿ ಬಡ್ಡಿ ಮನ್ನಾ ಸೌಲಭ್ಯವನ್ನು ಪಡೆಯಲು ರಾಜ್ಯದ ರೈತರು ಸಹಕಾರ ಸಂಘಗಳು ಅಂದರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು, ಲ್ಯಾಂಪ್ಸ್ ಸಹಕಾರ ಸಂಘಗಳು, ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕುಗಳು ಮತ್ತು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕುಗಳಿಂದ ಸಾಲ ಪಡೆದು ದಿನಾಂಕ:೩೧-೧೨-೨೦೨೩ ಕ್ಕೆ ಸುಸ್ತಿಯಾಗಿರುವ ಮಧ್ಯಮಾವಧಿ ಮತ್ತು ದೀರ್ಘಾವಧಿ ಕೃಷಿ ಸಂಬಂದಿತ ಸಾಲಗಳ ಕಂತುಗಳ ಅಸಲನ್ನು ಪಾವತಿಸಲು ನಿಗದಿಪಡಿಸಿದ್ದ ದಿನಾಂಕ:೨೯-೦೨-೨೦೨೪ನ್ನು ದಿನಾಂಕ:೩೧-೦೩-೨೦೨೪ ರವರೆಗೆ ವಿಸ್ತರಿಸಿ ಆದೇಶಿಸಿದೆ.



Leave a Comment: