ಚಾಲಕನ ನಿಯಂತ್ರಣ ತಪ್ಪಿ ಮನೆ ಮೇಲೆ ಬಿದ್ದ ಪಿಕಪ್ ವಾಹನ

ಸುದ್ದಿಗಳು News

Posted by vidyamaana on 2023-07-14 03:02:36 | Last Updated by Vidyamaana on 2023-09-05 09:08:10

Share: | | | | |


ಚಾಲಕನ ನಿಯಂತ್ರಣ ತಪ್ಪಿ ಮನೆ ಮೇಲೆ ಬಿದ್ದ ಪಿಕಪ್ ವಾಹನ

ವಿಟ್ಲ: ಪರಿಯಲ್ಲಡ್ಕ – ಸಾರಡ್ಕ ರಸ್ತೆಯ ಕೂರೇಲು ಎಂಬಲ್ಲಿ ಪಿಕಪ್ ರಸ್ತೆಯಿಂದ ಮನೆಯ ಮೇಲೆ ಬಿದ್ದಿದ್ದು, ಮನೆಯ ಒಳಗೆ ಮಹಿಳೆ ಸಿಲುಕಿ ಹಾಕಿಕೊಂಡಿದ್ದಾರೆ.ಕೂರೇಲು ಮಧ್ಯದ ಅಂಗಡಿಯ ಸಮೀಪದಲ್ಲಿ ರಸ್ತೆಯಿಂದ ಕೆಳಗಿದ್ದ ಮನೆಗೆ ಜು.14 ರ ಬೆಳಗ್ಗಿನ ಜಾವ ಚಾಲಕ ನಿಯಂತ್ರಣ ತಪ್ಪಿದ ಪಿಕಪ್ ಮನೆಯ ಮೇಲೆ ಬಿದ್ದಿದೆಅಪಘಾತದಿಂದ ಹಂಚಿನ ಮನೆ ಸಂಪೂರ್ಣ ಹಾನಿಯಾಗಿದೆ. ಪಿಕಪ್ ಕೋಳಿ ಸಾಗಟ ನಡೆಸುತಿತ್ತು. ಅಪಘಾತದಿಂದ ನೂರಾರು ಕೋಳಿಗಳು ಸತ್ತಿದೆ. ಅಪಘಾತ ನಡೆದಾಗ ಮನೆಯ ಒಳಗೆ ಮಹಿಳೆ ಮಲಗಿದ್ದರು, ಮಹಿಳೆಗೆ ಗಂಭೀರ ಗಾಯವಾದ ಪರಿಸ್ಥಿಯಲಿದ್ದಾರೆ.ಪಿಕಪ್ ವಾಹನವನ್ನು ತೆರವು ಮಾಡಡೆ, ಮಹಿಳೆಯನ್ನು ಹೊರಗೆ ತೆಗೆಯಲು ಸಾಧ್ಯವಿಲ್ಲದ ಸ್ಥಿತಿ ನಿರ್ಮಾಣವಾಗಿದೆ.

ಸ್ಥಳದಲ್ಲಿ ವಿಟ್ಲ ಪೊಲೀಸರು, ತುರ್ತು ಸೇವಾ ವಾಹನ ಬೀಡು ಬಿಟ್ಟಿದ್ದು, ಕ್ರೇನ್ ಬಳಸಿ ವಾಹನ ಮೇಲೆತ್ತುವ ಕಾರ್ಯಾಚರಣೆ ನಡೆಯುತ್ತಿದೆ.

 Share: | | | | |


ಅಂಬಿಕಾ ಶಿಕ್ಷಣ ಸಂಸ್ಥೆಗಳಿಂದ ನಿವೃತ್ತ ಯೋಧ ಹವಾಲ್ದಾರ್ ವಿಶ್ವನಾಥ ಶೆಣೈ ಅವರಿಗೆ ಸನ್ಮಾನ

Posted by Vidyamaana on 2022-12-15 14:31:23 |

Share: | | | | |


ಅಂಬಿಕಾ ಶಿಕ್ಷಣ ಸಂಸ್ಥೆಗಳಿಂದ ನಿವೃತ್ತ ಯೋಧ ಹವಾಲ್ದಾರ್ ವಿಶ್ವನಾಥ ಶೆಣೈ ಅವರಿಗೆ ಸನ್ಮಾನ

ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ನ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ಭಾರತೀಯ ಸೇನೆಯಿಂದ ಇತ್ತೀಚೆಗೆ ನಿವೃತ್ತಿಗೊಂಡ ಯೋಧ ಹವಾಲ್ದಾರ್ ನಂದಾವರ ವಿಶ್ವನಾಥ ಶೆಣೈ ಅವರನ್ನು ಅಭಿನಂದಿಸಿ ಸನ್ಮಾನಿಸಲಾಯಿತು. ಬಪ್ಪಳಿಗೆಯ ಅಂಬಿಕಾ ಕ್ಯಾಂಪಸ್‌ನ ಶ್ರೀ ಶಂಕರ ಸಭಾಭವನದಲ್ಲಿ ಶನಿವಾರ ಕಾರ್ಯಕ್ರಮ ನಡೆಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಹವಾಲ್ದಾರ್ ವಿಶ್ವನಾಥ ಶೆಣೈ, ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುವುದಕ್ಕೆ ಅವಕಾಶ ದೊರಕುವುದೇ ಒಂದು ಅಪೂರ್ವ ಸಂಗತಿ. ಇತ್ತೀಚೆಗೆ ಅಗ್ನಿವೀರ್ ಎಂಬ ಯೋಜನೆಯ ಮೂಲಕ ಯುವಶಕ್ತಿ ಭಾರತೀಯ ಸೈನ್ಯವನ್ನು ಸೇರಿಕೊಳ್ಳುವುದಕ್ಕೆ ಅವಕಾಶಗಳು ತೆರೆದುಕೊಂಡಿವೆ ಎಂದರಲ್ಲದೆ ಈಚೆಗಿನ ದಿನಗಳಲ್ಲಿ ರಾಷ್ಟ್ರದ ಗಡಿ ವಿಚಾರಗಳಲ್ಲಿ ಕೇಂದ್ರ ಸರ್ಕಾರ ಸಾಕಷ್ಟು ಮುತುವರ್ಜಿ ವಹಿಸುತ್ತಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ, ನಾವಿಂದು ಸುಖವಾದ ಜೀವನ ಸಾಗಿಸುವಲ್ಲಿ ವೀರಯೋಧರ ತ್ಯಾಗವಿದೆ. ಹೆತ್ತ ತಂದೆತಾಯಿಗಿಂತ, ಮಡದಿ ಮಕ್ಕಳಿಗಿಂತಲೂ ದೇಶವೇ ಮುಖ್ಯ ಎಂಬ ಭಾವನೆಯಿಂದ ರಾಷ್ಟ್ರಕ್ಕಾಗಿಯೇ ತನ್ನನ್ನು ತಾನು ಸಮರ್ಪಿಸುವ ಯೋಧನಿಗೆ ಗೌರವ ನೀಡಬೇಕಾದದ್ದು ಭಾರತೀಯರೆಲ್ಲರÀ ಕರ್ತವ್ಯ. ಪ್ರತಿಯೊಬ್ಬನೂ ದೇಶದ ವೀರ ಯೋಧ ತಾನಾಗುವುದಕ್ಕೆ ಸಾಧ್ಯವೇ ಎಂದು ಕೇಳಿಕೊಳ್ಳಬೇಕಿದೆ. ತನ್ಮೂಲಕ ಭಾರತಾಂಬೆಯ ಸೇವೆಗೆ ಮನಮಾಡಬೇಕಿದೆ ಎಂದರು.

ಪಕ್ಷದ ಪರ ಪ್ರಚಾರ ಮಾಡುತ್ತಿರುವ ಗ್ರಂಥ ಪಾಲಕರನ್ನು ಕೆಲಸದಿಂದ ವಜಾ ಮಾಡಿ: ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ ಆಗ್ರಹ.

Posted by Vidyamaana on 2023-05-31 07:40:17 |

Share: | | | | |


ಪಕ್ಷದ ಪರ ಪ್ರಚಾರ ಮಾಡುತ್ತಿರುವ ಗ್ರಂಥ ಪಾಲಕರನ್ನು ಕೆಲಸದಿಂದ ವಜಾ ಮಾಡಿ: ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ ಆಗ್ರಹ.

ಪುತ್ತೂರು: ಪುತ್ತೂರು ಸರಕಾರಿ ಪದವಿಪೂರ್ವ ಕಾಲೇಜಿನ ಗ್ರಂಥಪಾಲಕ ಪ್ರವೀಣ್ ವಗ್ಗ ಒಂದು ರಾಜಕೀಯ ಪಕ್ಷದ ಪರ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡುತ್ತಿದ್ದು ತಕ್ಷಣ ಅವರನ್ನು ಕೆಲಸದಿಂದ ವಜಾ ಮಾಡಬೇಕು ಎಂದು ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ ಆಗ್ರಹಿಸಿದೆ.

ಸರಕಾರಿ ಒದ್ಯೋಗಿಯಾಗಿದ್ದ ಈ ರೀತಿಯಾಗಿ ಒಂದು ಪಕ್ಷದ ಪರ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡುವುದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತಪ್ಪು. ಯಾವುದೇ ಪಕ್ಷದ ಪರ ಇರುವಂತಿಲ್ಲ. ಬೇರೆ ಬೇರೆ ಧರ್ಮ ಜಾತಿಗಳ ವಿದ್ಯಾರ್ಥಿಗಳರುವ ಈ ಕಾಲೇಜನಲ್ಲಿ ಒಬ್ಬರು ಅಧ್ಯಾಪಕರು ಈ ರೀತಿ ನಡೆದುಕೊಂಡಿರುವುದು ತಪ್ಪು ಇದನ್ನು ಗಂಭಿರವಾಗಿ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒಕ್ಕೂಟ ಆಗ್ರಹಿಸಿದೆ.

ಈ ಕುರಿತು ಪುತ್ತೂರು ನಗರ ಠಾಣೆ ಹಾಗೂ ಪುತ್ತೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಿಗೆ ಮನವಿ ಮಾಡಿದೆ.

ಯುದ್ಧ ಪೀಡಿತ ಗಾಜಾಗೆ ನೆರವು ಕಳುಹಿಸಿದ ಭಾರತ: ಈಜಿಪ್ಟ್​ನ ರಫಾ ಗಡಿಯ ಮೂಲಕ ರವಾನೆ

Posted by Vidyamaana on 2023-10-22 11:50:11 |

Share: | | | | |


ಯುದ್ಧ ಪೀಡಿತ ಗಾಜಾಗೆ ನೆರವು ಕಳುಹಿಸಿದ ಭಾರತ: ಈಜಿಪ್ಟ್​ನ ರಫಾ ಗಡಿಯ ಮೂಲಕ ರವಾನೆ

ವದೆಹಲಿ: ಯುದ್ಧಪೀಡಿತ ಗಾಜಾಗೆ ಜಗತ್ತಿನಾದ್ಯಂತ ನೆರವಿನ ಮಹಾಪೂರ ಹರಿದು ಬರುತ್ತಿದ್ದು, ಇಂದು ಭಾರತವು ಮಾನವೀಯ ಆಧಾರದ ಮೇಲೆ ವೈದ್ಯಕೀಯ ಅಗತ್ಯಗಳು ಮತ್ತು ವಿಪತ್ತು ಪರಿಹಾರ ವಸ್ತುಗಳನ್ನು ಕಳುಹಿಸಿಕೊಟ್ಟಿದೆ.. ಯುದ್ಧದ ಪರಿಣಾಮ ಲಕ್ಷಾಂತರ ನಾಗರಿಕರು ನಿರ್ಗತಿಕರಾಗಿದ್ದು, ತನ್ನ ಮಿತ್ರ ಅಮೆರಿಕದ ಮನವಿ ಮೇರೆಗೆ ಅಲ್ಲಿನ ಜನರಿಗೆ ನೆರವು ಒದಗಿಸಲು ಇಸ್ರೇಲ್​ ಒಪ್ಪಿಕೊಂಡಿದೆ.


ಭಾರತ ಕಳುಹಿಸಿಕೊಟ್ಟಿರುವ ಅಗತ್ಯ ವಸ್ತುಗಳಲ್ಲಿ ಜೀವ ಉಳಿಸುವ ಔಷಧಿಗಳು, ಶಸ್ತ್ರಚಿಕಿತ್ಸಾ ವಸ್ತುಗಳು, ಟೆಂಟ್‌ಗಳು, ಮಲಗುವ ಚೀಲಗಳು, ಟಾರ್ಪೌಲಿನ್‌ಗಳು, ನೈರ್ಮಲ್ಯ ಉಪಯುಕ್ತತೆಗಳು ಮತ್ತು ಇತರ ಅಗತ್ಯ ವಸ್ತುಗಳ ಜೊತೆಗೆ ನೀರು ಶುದ್ಧೀಕರಣ ಮಾತ್ರೆಗಳನ್ನು ಒಳಗೊಂಡಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್​ ಬಾಗ್ಚಿ ಎಕ್ಸ್​ ಮೂಲಕ ತಿಳಿಸಿದ್ದಾರೆ.


ಗಾಜಾವನ್ನು ಸಂಪೂರ್ಣ ವಶಕ್ಕೆ ಪಡೆದಿರುವುದಾಗಿ ಇಸ್ರೇಲ್​ ಘೋಷಣೆ ಮಾಡಿದ್ದು, ನೀರು, ವಿದ್ಯುತ್​, ಇಂಧನ ಮತ್ತು ಆಹಾರ ಪೂರೈಕೆಯನ್ನು ಸ್ಥಗಿತಗೊಳಿಸಿದ್ದು, ದೀರ್ಘಕಾಲ ಕೊರತೆಯನ್ನು ಸೃಷ್ಟಿಸುತ್ತಿದೆ. ಇಸ್ರೇಲ್​​ ನಿಯಂತ್ರಣಕ್ಕೆ ಒಳಗಾಗದ ರಫಾ ಗಡಿ ಒಂದೇ ಗಾಜಾಗೆ ಇರುವ ಏಕೈಕ ಮಾರ್ಗವಾಗಿದೆ. ತಮ್ಮ ಮಿತ್ರ ದೇಶವಾಗಿರುವ ಯುನೈಟೆಡ್​ ಸ್ಟೇಟ್ಸ್​ ಮನವಿಯ ಮೇರೆಗೆ ಈಜಿಪ್ಟ್​ನಿಂದ ಗಾಜಾಗೆ ನೆರವು ಸಾಗಿಸಲು ಇಸ್ರೇಲ್​ ಅನುಮತಿಸಿದೆ. ಭಾರತ ಕಳುಹಿಸಿಕೊಟ್ಟಿರುವ ಅಗತ್ಯ ವಸ್ತುಗಳು ರಫಾ ಗಡಿಯ ಮೂಲಕ ಗಾಜಾಗೆ ತಲುಪಲಿದೆ.


ವಿಶ್ವಸಂಸ್ಥೆಯ ವಿವಿಧ ಏಜೆನ್ಸಿಗಳಿಂದ ಬಂದ ನೆರವನ್ನು ಗಾಜಾಗೆ ತಲುಪಿಸುವ ಜವಾಬ್ದಾರಿಯನ್ನು ಈಜಿಪ್ಟಿನ ರೆಡ್ ಕ್ರೆಸೆಂಟ್‌ ಕಚೇರಿಯು ಹೊತ್ತಿದೆ. ನಿನ್ನೆ ಇಪ್ಪತ್ತು ಟ್ರಕ್‌ಗಳು ಈಜಿಪ್ಟಿನ ಟರ್ಮಿನಲ್ ಅನ್ನು ಪ್ರವೇಶಿಸಿದ್ದವು. ಪ್ಯಾಲೆಸ್ತೀನ್​ ಕಡೆಯ 36 ಖಾಲಿ ಟ್ರೇಲರ್‌ಗಳು ಟರ್ಮಿನಲ್‌ಗೆ ಪ್ರವೇಶಿಸಿ ಈಜಿಪ್ಟಿನ ಕಡೆಗೆ ಹೋಗಿ, ನೆರವನ್ನು ಲೋಡ್ ಮಾಡಿಕೊಂಡು ರಫಾ ಗಡಿಯ ಮೂಲಕ ಗಾಜಾಗೆ ತೆರಳಿದವು. ವಿಶ್ವಸಂಸ್ಥೆಯ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಸಹ ಶುಕ್ರವಾರ ಈಜಿಪ್ಟ್ ಕ್ರಾಸಿಂಗ್ ಬದಿಗೆ ಭೇಟಿ ನೀಡಿ ನೆರವು ವಿತರಣೆಯ ಸಿದ್ಧತೆಗಳನ್ನು ಮೇಲ್ವಿಚಾರಣೆ ಮಾಡಿದರು. ಇವು ಕೇವಲ ಟ್ರಕ್​ಗಳಲ್ಲ, ಜೀವರಕ್ಷಕಗಳು ಎಂದು ಮಾಧ್ಯಮಗಳಿಗೆ ಇದೇ ಸಂದರ್ಭದಲ್ಲಿ ತಿಳಿಸಿದರು.


ಅ.7ರ ದಾಳಿಗೆ ಪ್ರತಿಯಾಗಿ ಇಸ್ರೇಲ್​ ನಡೆಸುತ್ತಿರುವ ದಾಳಿಗೆ ಗಾಜಾ ಸಂಪೂರ್ಣ ನಲುಗಿ ಹೋಗಿದೆ. ವೆಸ್ಟ್​ ಬ್ಯಾಂಕ್​ನಲ್ಲೂ ಇಸ್ರೇಲ್​ ರಕ್ಷಣಾ ಪಡೆಗಳು ದಾಳಿ ನಡೆಸುತ್ತಿವೆ. ಇಸ್ರೇಲ್​ ನಡೆಸಿದ ಬಾಂಬ್​ ದಾಳಿಯಲ್ಲಿ ಈವರೆಗೂ 4300ಕ್ಕೂ ಅಧಿಕ ಮಂದಿ ಪ್ಯಾಲೆಸ್ತೀನ್​ನಲ್ಲಿ ಮೃತಪಟ್ಟಿದ್ದಾರೆ. ಅದರಲ್ಲಿ ಹೆಚ್ಚಿನವರು ನಾಗರಿಕರು ಎಂದು ಹಮಾಸ್ ನಡೆಸುವ ಆರೋಗ್ಯ ಸಚಿವಾಲಯ ತಿಳಿಸಿದೆ.


ಇಸ್ರೇಲ್​ ಮತ್ತು ಹಮಾಸ್​ ನಡುವಿನ ಯುದ್ಧವೂ ಎರಡು ವಾರಗಳನ್ನು ಪೂರೈಸಿ ಮೂರನೇ ವಾರಕ್ಕೆ ಕಾಲಿಟ್ಟಿದ್ದರೂ ಕದನ ಕಾರ್ಮೋಡ ಮಾತ್ರ ತಿಳಿಯಾಗಿಲ್ಲ. ಈಜಿಪ್ಟ್​​ನಲ್ಲಿ ನಡೆದ ಶಾಂತಿ ಶೃಂಗಸಭೆಯಲ್ಲಿ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಅವರು ಮಾನವೀಯ ಕದನ ವಿರಾಮಕ್ಕಾಗಿ ಒತ್ತಾಯಿಸಿದ್ದಾರೆ. ಆದರೂ ಇಸ್ರೇಲ್​ ಮಾತ್ರ ಗಾಜಾ ಮೇಲಿನ ತನ್ನ ದಾಳಿಯನ್ನು ಮಾತ್ರ ಮುಂದುವರಿಸಿದೆ

ಉಳ್ಳಾಲ :ತೌಡುಗೋಳಿ ನಿವಾಸಿ ವಿವಾಹಿತೆ ಉಳ್ಳಾಲ ಮೂಲದ ಸುಜಾತಾ ಶೆಟ್ಟಿ ಪುಣೆಯಲ್ಲಿ ಅನುಮಾನಸ್ಪದ ಸಾವು

Posted by Vidyamaana on 2023-10-11 15:42:04 |

Share: | | | | |


ಉಳ್ಳಾಲ :ತೌಡುಗೋಳಿ ನಿವಾಸಿ ವಿವಾಹಿತೆ ಉಳ್ಳಾಲ ಮೂಲದ ಸುಜಾತಾ ಶೆಟ್ಟಿ ಪುಣೆಯಲ್ಲಿ ಅನುಮಾನಸ್ಪದ ಸಾವು

ಉಳ್ಳಾಲ : ನಾಲ್ಕು ತಿಂಗಳ ಹಿಂದೆಯಷ್ಟೇ ವಿವಾಹವಾಗಿದ್ದ ತೌಡುಗೋಳಿ ಕ್ರಾಸ್ ಗುರಿಕಾರಮೂಲೆ ನಿವಾಸಿ ನಾರಾಯಣ ಶೆಟ್ಟಿ ಎಂಬವರ ಪುತ್ರಿ ಸುಜಾತ ಶೆಟ್ಟಿ (38) ಎಂಬವರು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ಪುಣೆಯ ಭಾರತೀಯ ವಿದ್ಯಾಪೀಠ ಎಂಬಲ್ಲಿ ನಡೆದಿದೆ.

ಪಜೀರು ಪಾನೇಲ ನಿವಾಸಿ ಪುಣೆಯಲ್ಲಿ ಕ್ಯಾಂಟೀನ್ ನಡೆಸುತ್ತಿದ್ದ ಸುರೇಶ್ ಕೈಯ್ಯ ಎಂಬವರಿಗೆ ನಾಲ್ಕು ತಿಂಗಳ ಹಿಂದೆಯಷ್ಟೇ ಸುಜಾತಾ ಅವರನ್ನು ವಿವಾಹ ಮಾಡಿಕೊಡಲಾಗಿತ್ತು. ಅ.8 ರಂದು ಸುಜಾತ ಮೃತದೇಹ ಭಾರತೀಯ ವಿದ್ಯಾಪೀಠದಲ್ಲಿರುವ ಮನೆಯೊಳಗೆ ಅನುಮಾನಸ್ಪದ ರೀತಿಯಲ್ಲಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಕಂಡುಬಂದಿತ್ತು. ಈ ಬಗ್ಗೆ ಅಲ್ಲಿನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಮೃತದೇಹವನ್ನು ಶವಮಹಜರಿಗೆ ಕಳುಹಿಸಲಾಗಿತ್ತು. ಅ.9 ರಂದು ತೌಡುಗೋಳಿ ಸಮೀಪ ಸುಜಾತ ಅವರ ಅಂತಿಮ ಸಂಸ್ಕಾರ ನೆರವೇರಿದ್ದು, ಮನೆಮಂದಿ ಸುರೇಶ್ ವಿರುದ್ಧ ಅನುಮಾನ ವ್ಯಕ್ತಪಡಿಸಿದ್ದಾರೆ. ಶವಮಹಜರು ವರದಿ ಬಂದ ಬಳಿಕವಷ್ಟೇ ಪ್ರಕರಣದ ಸತ್ಯಾಸತ್ಯತೆ ಹೊರಬೀಳಲಿದೆ. ಸುಜಾತಾ ಅವರು ತೊಕ್ಕೊಟ್ಟು ಬ್ಯೂಟಿಪಾರ್ಲರ್ ನಲ್ಲಿ ಈ ಹಿಂದೆ ಬ್ಯೂಟೀಷಿಯನ್ ಆಗಿ ಕೆಲಸ‌ನಿರ್ವಹಿಸುತ್ತಿದ್ದರು.

ಮರ್ಧಾಳ ಮಸೀದಿಯ ಕಾಂಪೌಂಡ್ ಒಳಗೆ ನುಗ್ಗಿ ಘೋಷಣೆ ಕೂಗಿದ ಪ್ರಕರಣ

Posted by Vidyamaana on 2023-09-25 18:02:25 |

Share: | | | | |


ಮರ್ಧಾಳ ಮಸೀದಿಯ ಕಾಂಪೌಂಡ್ ಒಳಗೆ ನುಗ್ಗಿ ಘೋಷಣೆ ಕೂಗಿದ ಪ್ರಕರಣ

ಕಡಬ: ರಾತ್ರಿ ವೇಳೆ ಬೈಕ್ ನಲ್ಲಿ ಆಗಮಿಸಿದ ಕಿಡಿಗೇಡಿಗಳಿಬ್ಬರು ಮಸೀದಿಯ ಕಾಂಪೌಂಡ್ ಒಳಗೆ ನುಗ್ಗಿ ಜೈಶ್ರೀರಾಂ ಘೋಷಣೆ ಕೂಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.



ಬಂಧಿತ ಆರೋಪಿಯನ್ನು ಬಿಳಿನೆಲೆ ಸೂಡ್ಲು ನಿವಾಸಿ ಕೀರ್ತನ್ (25) ಎಂದು ಗುರುತಿಸಲಾಗಿದೆ. ಮತ್ತೋರ್ವ ಆರೋಪಿ ಕೈಕಂಬ ನಡ್ತೋಟ ನಿವಾಸಿ ಸಚಿನ್ ಪರಾರಿಯಾಗಿದ್ದು, ಆತನ ಪತ್ತೆಗೆ ಬಲೆ ಬೀಸಲಾಗಿದೆ.



ರವಿವಾರ ರಾತ್ರಿ ಸುಮಾರು 11 ಗಂಟೆಯ ವೇಳೆಗೆ ಕಡಬ ಠಾಣಾ ವ್ಯಾಪ್ತಿಯ ಮರ್ಧಾಳ ಬದ್ರಿಯಾ ಜುಮಾ ಮಸೀದಿಯ ಕಾಂಪೌಂಡ್ ಒಳಗೆ ಬೈಕಿನಲ್ಲಿ ಬಂದ ಇಬ್ಬರು ಕಿಡಿಗೇಡಿಗಳು ಮಸೀದಿಯ ವರಾಂಡದಲ್ಲಿ ಬೈಕನ್ನು ಹಿಂತಿರುಗಿಸಿ ತೆರಳಿರುವುದು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಜೈಶ್ರೀರಾಂ ಘೋಷಣೆ ಕೂಗಿದ್ದಾರೆ ಎನ್ನಲಾಗಿದ್ದು, ಮಸೀದಿಯಲ್ಲಿದ್ದ ಧರ್ಮಗುರುಗಳನ್ನು ಕಂಡು ತಕ್ಷಣವೇ ಹಿಂತಿರುಗಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.

ವಿದ್ಯುತ್‌ ಕಂಬಕ್ಕೆ ಆಟೋ ರಿಕ್ಷಾ ಢಿಕ್ಕಿ;ವಿವಾಹ ನಿಶ್ಚಿತಾರ್ಥವಾಗಿದ್ದ ಯುವತಿ ಮೃತ್ಯು ಹಲವರಿಗೆ ಗಾಯ

Posted by Vidyamaana on 2023-09-18 09:15:17 |

Share: | | | | |


ವಿದ್ಯುತ್‌ ಕಂಬಕ್ಕೆ ಆಟೋ ರಿಕ್ಷಾ ಢಿಕ್ಕಿ;ವಿವಾಹ ನಿಶ್ಚಿತಾರ್ಥವಾಗಿದ್ದ   ಯುವತಿ ಮೃತ್ಯು ಹಲವರಿಗೆ ಗಾಯ

ಬಜಪೆ: ಗುರುಪುರ-ಬಂಗ್ಲೆಗುಡ್ಡೆ ಅಣೆಬಳಿಯ ಒಳ ರಸ್ತೆಯಲ್ಲಿ ಬಂಗ್ಲೆಗುಡ್ಡೆಯಿಂದ ಗುರುಪುರ ಪೇಟೆಗೆ ಬರುವಾಗ ಚಾಲಕನ ನಿಯಂತ್ರಣ ತಪ್ಪಿದ ಆಟೋರಿಕ್ಷಾ ವಿದ್ಯುತ್‌ ಕಂಬಕ್ಕೆ ಢಿಕ್ಕಿ ಹೊಡೆದ ಕಾರಣ ಯುವತಿಯೋರ್ವಳು ಸ್ಥಳದಲ್ಲಿಯೇ ಮೃತಪಟ್ಟು, ಮೂವರು ಗಾಯಗೊಂಡ ಘಟನೆ ರವಿವಾರ ಮಧ್ಯಾಹ್ನ 2 ಗಂಟೆಗೆ ಸಂಭವಿಸಿದೆ.ಅರ್ಕುಳ ತುಪ್ಪೆಕಲ್ಲಿನ ಕುಟುಂಬವೊಂದು ಆಟೋ ರಿಕ್ಷಾ ಮೂಲಕ ಅದ್ಯಪಾಡಿ ದೇವಸ್ಥಾನಕ್ಕೆ ತೆರಳಿ ಹಿಂದಿರುತ್ತಿದ್ದ ವೇಳೆ ಗುರುಪುರ ಬಂಗ್ಲೆಗುಡ್ಡೆ ಇಳಿಜಾರು ರಸ್ತೆಯಾಗಿ ಅಣೆಬಳಿಯ ತಿರುವಿನಲ್ಲಿ ಆಟೋ ರಿಕ್ಷಾ ವಿದ್ಯುತ್‌ ಕಂಬಕ್ಕೆ ಢಿಕ್ಕಿ ಹೊಡೆದಿತ್ತು. ಯುವತಿ ಅರ್ಕುಳ ತುಪ್ಪೆಕಲ್ಲು ನಿವಾಸಿ ಪ್ರೀತಿ ಸಪಲಿಗ (25) ಮೃತಪಟ್ಟು, ಚಾಲಕ ಸಹಿತ 5 ಮಂದಿ ಗಾಯಗೊಂಡಿದ್ದಾರೆ.ಪ್ರೀತಿಯವರ ತಾಯಿ ಮೀನಾಕ್ಷಿ (55), ತಂಗಿ ಸ್ವಾತಿ (23), ಅತ್ತಿಗೆ ಶೋಭಾ (37), ಶೋಭಾ ಅವರ ಪುತ್ರ ಭವಿಷ್‌ (9) ಹಾಗೂ ಆಟೋ ಚಾಲಕ ಪದ್ಮನಾಭ ಗಾಯಗೊಂಡಿದ್ದಾರೆ. ಪ್ರಸ್ತುತ ಮೀನಾಕ್ಷಿ ಅವರ ಸ್ಥಿತಿ ಗಂಭೀರವಾಗಿದ್ದು, ಉಳಿದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ. ಗಾಯಾಳುಗಳು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಕರಣ ಬಜಪೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣದಾಖಲಾಗಿದೆ.ವಿವಾಹ ನಿಶ್ಚಿತಾರ್ಥವಾಗಿತ್ತು

ಮೃತ ಯುವತಿ ಪ್ರಿಯಾ ಅವರಿಗೆ ವಿವಾಹ ನಿಶ್ಚಿತಾರ್ಥವಾಗಿದ್ದು, ಮುಂದಿನ ವರ್ಷ ಜ. 4ರಂದು ಮದುವೆಗೆ ದಿನ ನಿಗದಿಯಾಗಿತ್ತು. ಈ ಹಿನ್ನೆಲೆಯಲ್ಲಿ ಮನೆಮಂದಿ ಮದುವೆಯ ಸಿದ್ಧತೆಗಳನ್ನು ಕೂಡ ಮಾಡಿಕೊಂಡಿದ್ದರು. ಈ ನಡುವೆ ದುರ್ಘ‌ಟನೆ ಸಂಭವಿಸಿದೆ.



Leave a Comment: