ತುಮಕೂರಿನಲ್ಲಿ ಮೂವರಿದ್ದ ಕಾರಿಗೆ ಬೆಂಕಿ ಹಚ್ಚಿದ ಪ್ರಕರಣಕ್ಕೊಂದು ರೋಚಕ ಟ್ವಿಸ್ಟ್!

ಸುದ್ದಿಗಳು News

Posted by vidyamaana on 2024-03-23 15:52:34 | Last Updated by Vidyamaana on 2024-03-23 15:52:34

Share: | | | | |


ತುಮಕೂರಿನಲ್ಲಿ ಮೂವರಿದ್ದ ಕಾರಿಗೆ ಬೆಂಕಿ ಹಚ್ಚಿದ ಪ್ರಕರಣಕ್ಕೊಂದು ರೋಚಕ ಟ್ವಿಸ್ಟ್!

ಬೆಳ್ತಂಗಡಿ : ತುಮಕೂರಿನಲ್ಲಿ ಕಾರಿಗೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ ಕಾರಿನೊಳಗಿದ್ದ ಮೂವರು ಸಾವನ್ನಪ್ಪಿದ ಸಂಬಂಧಿಸಿದಂತೆ ಮೂವರು ಸೇರಿ 50 ಲಕ್ಷ ಮಿಕ್ಕಿ ಹಣ ತುಮಕೂರು ಹೋಗುವಾಗ ತೆಗೆದುಕೊಂಡು ಹೋಗಿದ್ದರು ಎಂದು ಕುಟುಂಬ ಸದಸ್ಯರು ಕೋರಾ ಪೊಲೀಸರ ವಿಚಾರಣೆ ವೇಳೆ ಮಾಹಿತಿ ನೀಡಿದ್ದಾರೆ.

*💥Whats App Group ಗೆ ಸೇರಲು ಕ್ಲಿಕ್ ಮಾಡಿ

*ಹಣ ತೆಗೆದುಕೊಂಡು ಹೋದ ವಿಚಾರ*:  ಇನ್ನೂ ಕಾರಿನಲ್ಲಿ ಹೋಗುವಾಗ ಮದಡ್ಕದ ಇಸಾಕ್ ಉಜಿರೆಯಲ್ಲಿದ್ದ ಸ್ವಂತ ಮನೆಯನ್ನು ಮಾರಾಟ ಮಾಡಿದ ಹಣ ಮತ್ತು ಮಗಳ ಚಿನ್ನವನ್ನು ಅಡವಿಟ್ಟು ಸುಮಾರು 35 ಲಕ್ಷ ಹಣವನ್ನು ತೆಗೆದುಕೊಂಡು ಹೋಗಿದ್ದರು ಎಂದು ಇಸಾಕ್ ಪತ್ನಿ ಕೋರಾ ಪೊಲೀಸ್ ಠಾಣೆಯಲ್ಲಿ ಮಾ.23 ರಂದು ಪೊಲೀಸ್ ವಿಚಾರಣೆ ವೇಳೆ ಹೇಳಿಕೆಯನ್ನು ನೀಡಿದ್ದಾರೆ. ಇನ್ನೂ ಶಿರ್ಲಾಲು ಸಿದ್ದಿಕ್ ಮತ್ತು ಟಿ.ಬಿ.ಕ್ರಾಸ್ ಸಾಹುಲ್ ಹಮೀದ್ ಕೂಡ ಸ್ನೇಹಿತರ ಮೂಲಕ ಪಡೆದ ಸುಮಾರು 15 ಲಕ್ಷಕ್ಕೂ ಮಿಕ್ಕಿ ಹಣ ತುಮಕೂರು ಹೋಗುವಾಗ ತೆಗೆದುಕೊಂಡು ಹೋಗಿದ್ದರು ಎಂದು ಮನೆಯವರು ಹೇಳಿಕೆ ನೀಡಿದ್ದಾರೆ. ಒಟ್ಟು ಮೂವರ ಬಳಿ 50 ಲಕ್ಷಕ್ಕೂ ಮಿಕ್ಕಿ ಹಣ ತುಮಕೂರು ಹೋಗುವಾಗ ಇತ್ತು ಎನ್ನಲಾಗಿದೆ.

ತುಮಕೂರಿಗೆ ಕಳೆದ ಹನ್ನೊಂದು ದಿನದ ಹಿಂದೆ ವ್ಯವಹಾರ ಸಂಬಂಧ ಮದಡ್ಕದ ರಫೀಕ್ ಎಂಬವರ ಮಾಲೀಕತ್ವದ ಎಸ್ ಪ್ರೆಸ್ ಕಾರಿನಲ್ಲಿ ಬೆಳ್ತಂಗಡಿ ತಾಲೂಕಿನ ನಡ ಗ್ರಾಮದ ಟಿ.ಬಿ.ಕ್ರಾಸ್ ನಿವಾಸಿ ಆಟೋ ಚಾಲಕ ಸಾಹುಲ್ ಹಮೀದ್(45) , ಕುವೆಟ್ಟು ಗ್ರಾಮದ ಮದಡ್ಕ ನಿವಾಸಿ ಇಸಾಕ್(56) , ಶಿರ್ಲಾಲು ಗ್ರಾಮದ ಸಿದ್ದಿಕ್(34) ಮೂವರು ಬಾಡಿಗೆ ಮಾಡಿಕೊಂಡು ಹೋಗಿದ್ದರು ಎಂದು ಹೇಳಲಾಗಿದೆ.

ಮೂವರು ಕೂಡ ನಕಲಿ ಚಿನ‌್ನದ ದಂಧೆಯ ಆಸೆಗೆ ಬಲಿಯಾಗಿದ್ದಾರೆ ಅನ್ನೋದು ಪ್ರಾಥಮಿಕ ವಿಚಾರಣೆ ವೇಳೆ ಗೊತ್ತಾಗಿದೆ. ನಮ್ಮ ಜಾಗದಲ್ಲಿ ಕೃಷಿ ಮಾಡುವಾಗ ಚಿನ್ನದ ಹಂಡೆ ಸಿಕ್ಕಿದೆ ಕಡಿಮೆ ಚಿನ್ನವನ್ನು ಬೆಲೆಗೆ ನೀಡುತ್ತೇವೆ ಎಂದು ಸುಳ್ಳು ಹೇಳಿ ಮೂವರನ್ನು ಕರೆಸಿ ಹಣ ದೋಚುವ  ಪ್ಲ್ಯಾನ್ ಮಾಡಿ ಕರೆಸಿಕೊಂಡು ಮಾ.21 ರಂದು ರಾತ್ರಿ ನಂತರ ಕೈಕಾಲು ಕಟ್ಟಿ ಹಾಕಿ ಕಾರಿಗೆ ಬೆಂಕಿ ಹಚ್ಚಿ ಕೊಲೆ ಮಾಡಿ ನಂತರ ಹಣವನ್ನು ದೋಚಿದ್ದಾರೆ ಎನ್ನಲಾಗಿದೆ. ಇನ್ನೂ ಪ್ರಕರಣ ಸಂಬಂಧ ಪ್ರಮುಖ ರೂವಾರಿ ತುಮಕೂರಿನ ಸ್ವಾಮಿ ಸೇರಿ ಆರು ಜನರನ್ನು ಮೊಬೈಲ್ ಕಾಲ್ ಡಿಟೈಲ್ಸ್ ಮೂಲಕ  ಕಾರ್ಯಾಚರಣೆ ನಡೆಸಿ ಮಾ.22 ರಂದು ರಾತ್ರಿ ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.

ಕೋರಾ ಪೊಲೀಸ್ ಠಾಣೆಯಲ್ಲಿ ಮಾ.22 ರಂದು ಸುಮೊಟೋ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಬೆಂಕಿಗಾಹುತಿಯಾದ ಕಾರನ್ನು ಕೋರಾ ಪೊಲೀಸ್ ಠಾಣೆಗೆ ತೆಗೆದುಕೊಂಡು ಬಂದಿದ್ದು. ಮೂವರ ಶವ ಸರಕಾರಿ ಆಸ್ಪತ್ರೆಯಲ್ಲಿ ಡಿಎನ್ಎ ಪರೀಕ್ಷೆ ಮಾಡಿದ ಬಳಿಕ ಮುಂದಿನ ಗುರುವಾರ ಅಥವಾ ಶುಕ್ರವಾರ ಮೃತದೇಹವನ್ನು ಗುರುತು ಪತ್ತೆಯಾದ ಬಳಿಕ ಅವರ ಕಟುಂಬ ಸದಸ್ಯರಿಗೆ ನೀಡಲಾಗುವುದು ಎಂದು ವೈದ್ಯರು ತಿಳಿಸಿದ್ದಾರೆ.


 Share: | | | | |


ಮನೆಯಲ್ಲೇ ನೇಣಿಗೆ ಶರಣಾದ ಯುವ ವೈದ್ಯೆ ಡಾ. ಪಲ್ಲವಿ

Posted by Vidyamaana on 2023-06-07 06:40:25 |

Share: | | | | |


ಮನೆಯಲ್ಲೇ ನೇಣಿಗೆ ಶರಣಾದ ಯುವ ವೈದ್ಯೆ ಡಾ. ಪಲ್ಲವಿ

ನೀರ್ಚಾಲು: ಕನ್ಯಪ್ಪಾಡಿ ನಿವಾಸಿ ಕ್ಯಾಂಪ್ಕೋ ಸಂಸ್ಥೆಯ ನಿವೃತ್ತ ಉದ್ಯೋಗಿ ಗೋಪಾಲಕೃಷ್ಣ ಭಟ್‌ ಅವರ ಪುತ್ರಿ ಯುವ ವೈದ್ಯೆ 25 ವರ್ಷ ಪ್ರಾಯದ ಡಾ| ಪಲ್ಲವಿ ಜಿ.ಕೆ. ಮನೆಯ ಕಿಟಕಿ ಸರಳಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ.

ಜೂ. 5ರಂದು ರಾತ್ರಿ ಊಟ ಮಾಡಿ ಮಲಗಿದ್ದ ಡಾ. ಪಲ್ಲವಿ ಮಂಗಳವಾರ ಬೆಳಗ್ಗೆ ಎದ್ದಿರಲಿಲ್ಲ. ಇದರಿಂದ ಮನೆಯವರು ಕೊಠಡಿಯ ಬಾಗಿಲು ತೆರೆದು ನೋಡಿದಾಗ ಕಿಟಕಿ ಸರಳಿಗೆ ನೇಣು ಬಿಗಿದಿದ್ದ ಸ್ಥಿತಿಯಲ್ಲಿ ಪಲ್ಲವಿ ಮೃತದೇಹ ಪತ್ತೆಯಾಗಿದೆ.

ಧಾರವಾಡದ ಎಸ್‌ಡಿಎಂ ಕಾಲೇಜಿನಲ್ಲಿ ಎಂಬಿಬಿಎಸ್‌ ಕೋರ್ಸ್‌ ಪೂರ್ತಿಗೊಳಿಸಿದ್ದ ಪಲ್ಲವಿ ಬಳಿಕ ರೂರಲ್‌ ಸರ್ವೀಸ್‌ನ ಅಂಗವಾಗಿ ಸುಳ್ಯ ತಾಲೂಕು ಆಸ್ಪತ್ರೆಯಲ್ಲಿ ನೇಮಕಗೊಂಡಿದ್ದರು. ಬಳಿಕ ಎಂ.ಡಿ. ಕೋರ್ಸ್‌ನ ಪರೀಕ್ಷೆ ಬರೆಯಲು ಅಲ್ಲಿಂದ ರಜೆಯಲ್ಲಿ ತೆರಳಿದ್ದವರು ಪರೀಕ್ಷೆ ಮುಗಿಸಿ ಬಳಿಕ ಮನೆಗೆ ಬಂದಿದ್ದರು.

ಆತ್ಮಹತ್ಯೆ ಮಾಡಿಕೊಳ್ಳಲು ನಿಖರ ಕಾರಣ ತಿಳಿದು ಬಂದಿಲ್ಲ. ಬದಿಯಡ್ಕ ಪೊಲೀಸರು ಮೃತದೇಹದ ಮಹಜರು ನಡೆಸಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಕಾಸರಗೋಡು ಜನರಲ್‌ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಘಟನೆಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ.

ಓಮ್ನಿ – ಬೈಕ್ ಢಿಕ್ಕಿ: ಗಂಭೀರ ಗಾಯಗೊಂಡಿದ್ದ ಸವಾರ ಕೆಮ್ಮಾಯಿ ನಿವಾಸಿ ನಾರಾಯಣ್ ಮೃತ್ಯು

Posted by Vidyamaana on 2023-08-14 16:18:39 |

Share: | | | | |


ಓಮ್ನಿ – ಬೈಕ್ ಢಿಕ್ಕಿ: ಗಂಭೀರ ಗಾಯಗೊಂಡಿದ್ದ ಸವಾರ  ಕೆಮ್ಮಾಯಿ ನಿವಾಸಿ  ನಾರಾಯಣ್ ಮೃತ್ಯು

ಪುತ್ತೂರು: ಮುಕ್ರಂಪಾಡಿಯಲ್ಲಿ ನಡೆದ ಒಮ್ನಿ ಕಾರು ಹಾಗೂ ಬೈಕ್ ನಡುವಿನ ಅಪಘಾತದಲ್ಲಿ ಸವಾರ ಮೃತಪಟ್ಟ ಬಗ್ಗೆ ವರದಿಯಾಗಿದೆ.


ಮೃತಪಟ್ಟವರನ್ನು ಮೂಲತಃ ಕೆಮ್ಮಾಯಿ ನಿವಾಸಿ, ಉಪ್ಪಳಿಗೆಯ ಅಜಲಡ್ಕದಲ್ಲಿ ವಾಸವಾಗಿರುವ ನಾರಾಯಣ್ ಎಂದು ಗುರುತಿಸಲಾಗಿದೆ. ಇವರಿಗೆ ಸುಮಾರು 28 ವರ್ಷ ಎಂದು ಅಂದಾಜಿಸಲಾಗಿದೆ.


ಅಜಲಡ್ಕದ ತನ್ನ ಚಿಕ್ಕಪ್ಪನ ಮನೆಯಲ್ಲಿದ್ದುಕೊಂಡು, ಅಡಿಕೆ ತೆಗೆಯುವ, ಅಡಿಕೆಗೆ ಮದ್ದು ಬಿಡುವ ಕೆಲಸ ಮಾಡಿಕೊಂಡಿದ್ದರು ನಾರಾಯಣ್.

ಆ. 13ರ ರಾತ್ರಿ ಮುಕ್ರಂಪಾಡಿಯಲ್ಲಿ ಬೈಕ್ ಮತ್ತು ಮಾರುತಿ ಒಮ್ನಿ ನಡುವೆ ಭೀಕರ ಅಪಘಾತ ಸಂಭವಿಸಿತ್ತು. ಅಡ್ಡ ಬಂದ ನಾಯಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋದಾಗ, ಎದುರು ಬಂದ ಒಮ್ನಿ ಕಾರಿಗೆ ಬೈಕ್ ಢಿಕ್ಕಿಯಾಗಿತ್ತು ಎಂದು ಹೇಳಲಾಗಿದೆ.


ಗಂಭೀರವಾಗಿ ಗಾಯಗೊಂಡಿದ್ದ ನಾರಾಯಣ್ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಕರೆದೊಯ್ದಿದ್ದು, ಸೋಮವಾರ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಧರ್ಮಾಧಾರಿತ ರಾಜಕೀಯ ಹತ್ಯಾ ಪ್ರಕರಣದ ತನಿಖೆಗೆ ಎಸ್‌ಐಟಿ ರಚಿಸಿ: ರಮಾನಾಥ ರೈ ಆಗ್ರಹ

Posted by Vidyamaana on 2023-05-27 08:55:58 |

Share: | | | | |


ಧರ್ಮಾಧಾರಿತ ರಾಜಕೀಯ ಹತ್ಯಾ ಪ್ರಕರಣದ ತನಿಖೆಗೆ ಎಸ್‌ಐಟಿ ರಚಿಸಿ: ರಮಾನಾಥ ರೈ ಆಗ್ರಹ

ಮಂಗಳೂರು: ದ.ಕ. ಜಿಲ್ಲೆಯಲ್ಲಿ ಈ ವರೆಗೆ ನಡೆದಿರುವ ಧರ್ಮಾಧಾರಿತ ಮತ್ತು ರಾಜಕೀಯ ಪ್ರೇರಿತ ಹತ್ಯಾ ಪ್ರಕರಣಗಳ ತನಿಖೆಗೆ ಪೊಲೀಸರ ವಿಶೇಷ ತನಿಖಾ ತಂಡ ರಚಿಸುವಂತೆ ಮಾಜಿ ಸಚಿವ ಬಿ.ರಮಾನಾಥ ರೈ ರಾಜ್ಯ ಸರಕಾರವನ್ನು ಆಗ್ರಹಿಸಿದ್ದಾರೆ.

ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ನಡೆದಿರುವ ರಾಜಕೀಯ ಪ್ರೇರಿತ ಹತ್ಯಾ ಪ್ರಕರಣಗಳನ್ನು ಸರಕಾರ ಗಂಭೀರವಾಗಿ ಪರಿಗಣಿಸಬೇಕಾಗಿದೆ. ಮುಂದೆ ಈ ರೀತಿಯ ಘಟನೆಗಳು ನಡೆಯಬಾರದು ಎಂದರು.

ಧರ್ಮಾಧಾರಿತ ರಾಜಕೀಯ ಹತ್ಯೆಗಳು ಜಿಲ್ಲೆಯಲ್ಲಿ ತುಂಬಾ ಆಗಿದೆ. ಹಿಂದೂ ಮತ್ತು ಮುಸ್ಲಿಮ್ ಸಮುದಾಯದ ಆನೇಕ ಮಂದಿ ಅಮಾಯಕರು ಬಲಿಯಾಗಿದ್ದಾರೆ. ಕೇವಲ ವೋಟಿಗಾಗಿ ಅಮಾಯಕ ಹರೀಶ್‌ ಪೂಜಾರಿಯ ಕೊಲೆಯಾಗಿದೆ. ಶರತ್ ಮಡಿವಾಳ, ಅಶ್ರಫ್, ಜಲೀಲ್‌, ಪ್ರವೀಣ್ ನೆಟ್ಟಾರು, ಮಸೂದ್, ಫಾಝಿಲ್, ಪ್ರಶಾಂತ್, ಬಾಳಿಗಾ, ಹರೀಶ್‌ ಪೂಜಾರಿ ಹೀಗೆ ಆನೇಕ ಮಂದಿಯ ಹತ್ಯೆ ಆಗಿದೆ. ಈ ಎಲ್ಲ ಹತ್ಯೆಗಳಲ್ಲಿ ಕಾಂಗ್ರೆಸ್‌ನ ಯಾವನೇ ಒಬ್ಬ ಕಾರ್ಯಕರ್ತ ಭಾಗಿಯಾಗಿಲ್ಲ. ಆರೋಪ ಪಟ್ಟಿಯಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತನ ಹೆಸರಿಲ್ಲ. ಬಿಜೆಪಿ ಮತ್ತು ಎಸ್‌ಡಿಎಪಿಯ ಕೆಲವು ಮಂದಿ ಹತ್ಯೆಯಲ್ಲಿ ಭಾಗಿಯಾಗಿ ರುವುದು ಬೆಳಕಿಗೆ ಬಂದಿದೆ ಎಂದರು.

ಜಿಲ್ಲೆಯಲ್ಲಿ ನಡೆದಿರುವ ಧರ್ಮಾಧಾರಿತ ರಾಜಕೀಯ ಹತ್ಯಾ ಪ್ರಕರಣಗಳಲ್ಲಿ ಬಲಿಯಾದವರ ಪಟ್ಟಿಯನ್ನು ಸರಕಾರ ತಯಾರಿಸಬೇಕು. ಪ್ರತಿಯೊಂದು ಹತ್ಯಾ ಪ್ರಕರಣದ ನಿಷ್ಪಕ್ಷ ತನಿಖೆಯಾಗಬೇಕು. ಹತ್ಯಾ ಪ್ರಕರಣಗಳಲ್ಲಿ ಯಾರೆಲ್ಲ ಭಾಗಿ ಯಾಗಿದ್ದಾರೆ ಎಂಬ ವಿಚಾರ ಹೊರಬರಬೇಕು ಮತ್ತು ಅವರಿಗೆತಕ್ಕ ಶಿಕ್ಷೆಯಾಗಬೇಕು. ವಿಶೇಷ ತನಿಖಾ ತಂಡದ ನೇತೃತ್ವವನ್ನು ಡಾ.ಎ.ಸುಬ್ರಹ್ಮಣೇಶ್ವರ ರಾವ್ ಅವರಂತಹ ಹಿರಿಯ ಐಪಿಎಸ್ ಅಧಿಕಾರಿಗಳಿಗೆ ನೀಡಬೇಕು ಎಂದು ಆಗ್ರಹಿಸಿದರು.

ಬಿಜೆಪಿ ಸರಕಾರ ಇದ್ದಾಗ ಯಾವುದೇ ಹತ್ಯೆಗಳು ಆಗಿಲ್ಲ ಎಂದು ಬಿಜೆಪಿ ವಾದ. ಜನರನ್ನು ತಪ್ಪು ದಾರಿಗೆಳೆಯುವ ಪ್ರಯತ್ನವನ್ನು ಬಿಜೆಪಿ ಮಾಡುತ್ತಿದೆ. ಇಲ್ಲಿ ಹತ್ಯೆ ಮಾಡಿದವರು ಯಾರು ಎನ್ನುವುದು ಮುಖ್ಯ. ಕಾಂಗ್ರೆಸ್ ಸರಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದೆ. ಮತೀಯ ಶಕ್ತಿಗಳು ಅಹಿತಕರ ಘಟನೆಯನ್ನು ಸೃಷ್ಟಿಸುವ ಸಾಧ್ಯತೆ ಇದೆ. ಹೀಗಾಗಿ ಸರಕಾರ ದ.ಕ. ಜಿಲ್ಲೆಯಲ್ಲಿ ಹಿಂದೆ ನಡೆದಿರುವ ಧರ್ಮಾಧಾರಿತ ಮತ್ತು ರಾಜಕೀಯ ಪ್ರೇರಿತ ಹತ್ಯಾ ಪ್ರಕರಣಗಳನ್ನು ಸರಕಾರ ಗಂಭೀರವಾಗಿ ಪರಿಗಣಿಸಬೇಕು. ಮುಂದೆ ಇಂತಹ ಘಟನೆಗಳು ಮರುಕಳಿಸಬಾರದು. ಜಿಲ್ಲೆಯ ಶಾಂತಿ, ಸಾಮರಸ್ಯಕ್ಕೆ ಧಕ್ಕೆಯಾಗಬಾರದು ಎಂದರು.

ಕಾಂಗ್ರೆಸ್ ಸಮಾಲೋಚನಾ ಸಭೆಯಲ್ಲಿ ಸೋಲು – ಗೆಲುವಿನ ಲೆಕ್ಕಾಚಾರ

Posted by Vidyamaana on 2023-05-30 09:10:06 |

Share: | | | | |


ಕಾಂಗ್ರೆಸ್ ಸಮಾಲೋಚನಾ ಸಭೆಯಲ್ಲಿ ಸೋಲು – ಗೆಲುವಿನ ಲೆಕ್ಕಾಚಾರ

ಪುತ್ತೂರು: ವಿಧಾನಸಭಾ ಚುನಾವಣೆಯಲ್ಲಿ ಸೋಲು – ಗೆಲುವಿನ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮಂಗಳೂರು ಜಿಲ್ಲಾ ಕಚೇರಿಯಲ್ಲಿ ಸಮಾಲೋಚನಾ ಸಭೆ ನಡೆಯಿತು.

ಜಿಲ್ಲಾ  ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಸೋಲು – ಗೆಲುವಿನ ಬಗ್ಗೆ ವಿಮರ್ಶೆ ನಡೆಯಿತು.

ಪುತ್ತೂರು ಶಾಸಕ ಅಶೋಕ್ ರೈ, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ ಭಂಡಾರಿ ಸಹಿತ ಜಿಲ್ಲೆ ಹಾಗೂ ವಿಧಾನಸಭಾ ಕ್ಷೇತ್ರಗಳ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.

ನಾಮಪತ್ರ ಸಲ್ಲಿಸಿದ ಬಿಜೆಪಿ ಅಭ್ಯರ್ಥಿ ರಾಜೇಶ್ ನಾಯ್ಕ್

Posted by Vidyamaana on 2023-04-15 14:44:59 |

Share: | | | | |


ನಾಮಪತ್ರ ಸಲ್ಲಿಸಿದ ಬಿಜೆಪಿ ಅಭ್ಯರ್ಥಿ ರಾಜೇಶ್ ನಾಯ್ಕ್

ಬಂಟ್ವಾಳ: ಬಂಟ್ವಾಳ ಬಿಜೆಪಿ ಅಭ್ಯರ್ಥಿ, ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಶನಿವಾರ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಪ್ರಾರ್ಥನೆಗೈದು ಸಹಸ್ರಾರು ಕಾರ್ಯಕರ್ತ ರೊಂದಿಗೆ ಕಾಲ್ನಡಿಗೆಯ ಮೂಲಕ ಸಾಗಿ ಬಿ.ಸಿ.ರೋಡಿನ ತಾಲೂಕು ಆಡಳಿತ ಸೌಧದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು.

ನೈಟಿ ಧರಿಸಿ ಕಳ್ಳತನಕ್ಕೆ ಬಂದ ವಿಚಿತ್ರ ಕಳ್ಳ ಸಿಸಿಟಿವಿಯಲ್ಲಿ ದೃಶ್ಯ ಸೆರೆ

Posted by Vidyamaana on 2024-02-21 16:39:35 |

Share: | | | | |


ನೈಟಿ ಧರಿಸಿ ಕಳ್ಳತನಕ್ಕೆ ಬಂದ ವಿಚಿತ್ರ ಕಳ್ಳ ಸಿಸಿಟಿವಿಯಲ್ಲಿ ದೃಶ್ಯ ಸೆರೆ

ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ (Bengaluru) ವಿಚಿತ್ರ ಕಳ್ಳನೊಬ್ಬ (Thief) ಪ್ರತ್ಯಕ್ಷವಾಗಿದ್ದಾನೆ. ರಾತ್ರಿ ಹೊತ್ತು ನೈಟಿ ಹಾಕ್ಕೊಂಡು ಅಪಾರ್ಟ್‌ಮೆಂಟ್‌ಗೆ (Apartment) ನುಗ್ಗಿ ಶೂ ಕಳ್ಳತನ ಮಾಡಿ ಪರಾರಿಯಾಗ್ತಿದ್ದಾನೆ

ನೈಟಿ ಧರಿಸಿ ಕಳ್ಳತನಕ್ಕೆ ಬಂದ ವಿಚಿತ್ರ ಕಳ್ಳ; ಸಿಸಿಟಿವಿಯಲ್ಲಿ ದೃಶ್ಯ ಸೆರೆ

ವಿಚಿತ್ರ ಕಳ್ಳನ ದೃಶ್ಯ ಸಿಸಿಟಿವಿಯಲ್ಲಿ (CCTV Visuals) ಸೆರೆಯಾಗಿದೆ.ಈ ಬಗ್ಗೆ ಅನಿಲ್ ಕುಮಾರ್ ಎಂಬುವವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದು, ಕಳ್ಳನನ್ನ ಅದಷ್ಟು ಬೇಗ ಹಿಡಿಯಿರಿ ಎಂದು ಒತ್ತಾಯಿಸಿದ್ದಾರೆ.



Leave a Comment: