ನಕಲಿ ಚಿನ್ನ ದ ಆಸೆಗೆ ತುಮಕೂರಿನಲ್ಲಿ ಬಲಿಯಾದರೇ ಬೆಳ್ತಂಗಡಿಯ ಮೂವರು?

ಸುದ್ದಿಗಳು News

Posted by vidyamaana on 2024-03-23 10:38:46 |

Share: | | | | |


ನಕಲಿ ಚಿನ್ನ ದ ಆಸೆಗೆ ತುಮಕೂರಿನಲ್ಲಿ ಬಲಿಯಾದರೇ ಬೆಳ್ತಂಗಡಿಯ ಮೂವರು?

ಬೆಳ್ತಂಗಡಿ : ತುಮಕೂರಿನಲ್ಲಿ ಕಾರಿಗೆ ಬೆಂಕಿ ಹಚ್ಚಿ ಕೆರೆಗೆ ತಳ್ಳಿದ ಪ್ರಕರಣದಲ್ಲಿ ಮೂವರು ಸಾವನ್ನಪ್ಪಿದ ಸಂಬಂಧಪಟ್ಟಂತೆ ಆರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ಪ್ರಕರಣದ‌ ಪ್ರಮುಖ ರೂವಾರಿ ತುಮಕೂರಿನ ಸ್ವಾಮಿ ಮತ್ತು ಐದು ಜನರನ್ನು ಕೋರಾ ಪೊಲೀಸರು ಮಾ.22 ರಂದು ರಾತ್ರಿ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ತುಮಕೂರಿಗೆ ಕಳೆದ ಹನ್ನೊಂದು ದಿನದ ಹಿಂದೆ ವ್ಯವಹಾರ ಸಂಬಂಧ ಮದಡ್ಕದ ರಫೀಕ್ ಎಂಬವರ ಮಾಲೀಕತ್ವದ ಎಸ್ ಪ್ರೆಸ್ ಕಾರಿನಲ್ಲಿ ಬೆಳ್ತಂಗಡಿ ತಾಲೂಕಿನ ನಡ ಗ್ರಾಮದ ಟಿ.ಬಿ.ಕ್ರಾಸ್ ನಿವಾಸಿ ಆಟೋ ಚಾಲಕ ಸಾಹುಲ್ ಹಮೀದ್(45) , ಕುವೆಟ್ಟು ಗ್ರಾಮದ ಮದಡ್ಕ ನಿವಾಸಿ ಇಸಾಕ್(56) , ಶಿರ್ಲಾಲು ಗ್ರಾಮದ ಸಿದ್ದಿಕ್(34) ಮೂವರು ಬಾಡಿಗೆ ಮಾಡಿಕೊಂಡು ಹೋಗಿದ್ದರು ಎಂದು ಗುರುತಿಸಿದ್ದಾರೆ.

ಇನ್ನು ಮೂರು ಜನ ಮೃತರೆಲ್ಲಾ ನಕಲಿ ಚಿನ‌್ನದ ದಂಧೆಯ ಆಸೆಗೆ ಬಲಿಯಾಗಿದ್ದಾರೆ ಅನ್ನೋದು ಪ್ರಾಥಮಿಕ ವಿಚಾರಣೆ ವೇಳೆ ಗೊತ್ತಾಗಿದೆ. ನಮ್ಮ ಜಾಗದಲ್ಲಿ ಕೃಷಿ ಮಾಡುವಾಗ ಚಿನ್ನದ ಹಂಡೆ ಸಿಕ್ಕಿದೆ ಕಡಿಮೆ ಚಿನ್ನವನ್ನು ಬೆಲೆಗೆ ನೀಡುತ್ತೇವೆ ಎಂದು ಸುಳ್ಳು ಹೇಳಿ ಮೂವರನ್ನು ಕರೆಸಿ ಹಣ ದೋಚುವ ಪ್ಲ್ಯಾನ್ ಮಾಡಿ ಕರೆಸಿಕೊಂಡು ನಂತರ ಕೈಕಾಲು ಕಟ್ಟಿ ಹಾಕಿ ಕಾರಿಗೆ ಬೆಂಕಿ ಹಚ್ಚಿ ಕೊಲೆ ಮಾಡಲಾಗಿದೆ ಎನ್ನಲಾಗಿದೆ.

ಪ್ರಕರಣದ ಪ್ರಮುಖ ರೂವಾರಿ ತುಮಕೂರಿನ ಸ್ವಾಮಿ ಮತ್ತು ಇತರ ಐದು ಜನ ಸೇರಿ ಒಟ್ಟು ಆರು ಜನರನ್ನು ವಶಕ್ಕೆ ಪಡೆದಿರುವ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. 


ಕೋರಾ ಪೊಲೀಸ್ ಠಾಣೆಯಲ್ಲಿ ಮಾ.22 ರಂದು ಸುಮೊಟೋ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದು. ಇನ್ನು ಮೂವರ ಶವ ಸಂಪೂರ್ಣವಾಗಿ ಸುಟ್ಟಿರುವ ಕಾರಣ ಗುರುತು ಪತ್ತೆಹಚ್ಚಲು ಡಿಎನ್ಎ ಪರೀಕ್ಷೆ ಬಳಿಕ ಮನೆಮಂದಿಗೆ ಶವ ಬಿಟ್ಟು ಕೊಡಲಿದ್ದಾರೆ. ಡಿಎನ್ಎ ವರದಿ ಬರಲು ಸುಮಾರು ಒಂದು ವಾರ ಬೇಕಾಗುತ್ತದೆ ಎಂದು ಪೊಲೀಸರು ಮನೆಯವರಿಗೆ ತಿಳಸಿದ್ದಾರೆ.

 Share: | | | | |


ತೊಕ್ಕೊಟ್ಟಿನ ಹೆದ್ದಾರಿಯಲ್ಲಿ ಕಾರು ನಿಲ್ಲಿಸಿ ತಡೆಬೇಲಿಯಿಂದ ನದಿಗೆ ಹಾರಿದ ಉದ್ಯಮಿ ಪ್ರಸನ್ನ

Posted by Vidyamaana on 2023-10-30 16:32:20 |

Share: | | | | |


ತೊಕ್ಕೊಟ್ಟಿನ ಹೆದ್ದಾರಿಯಲ್ಲಿ ಕಾರು ನಿಲ್ಲಿಸಿ ತಡೆಬೇಲಿಯಿಂದ ನದಿಗೆ ಹಾರಿದ ಉದ್ಯಮಿ ಪ್ರಸನ್ನ

ಉಳ್ಳಾಲ: ಕಾಫಿಡೇ ಮಾಲೀಕ ಸಿದ್ದಾರ್ಥ ಸಾವಿಗೆ ಶರಣಾದ ಸ್ಥಳದಲ್ಲಿಯೇ ಮತ್ತೊಬ್ಬ ಉದ್ಯಮಿ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.


ಕಳೆದ ನಾಲ್ಕು ವರ್ಷಗಳ ಹಿಂದೆ ಅಂತಾರಾಷ್ಟ್ರೀಯವಾಗಿ ಪ್ರಸಿದ್ಧಿ ಪಡೆದ ಉದ್ಯಮಗಳಲ್ಲಿ ಒಂದಾಗಿದ್ದ ಕಾಫಿಡೇ ಮಾಲೀಕ ಸಿದ್ದಾರ್ಥ ಅವರು ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆಗೆ ಶರಣಾದ ಸ್ಥಳದಲ್ಲಿಯೇ ಇಂದು ಮತ್ತೊಬ್ಬ ಉದ್ಯಮಿ ತನ್ನ ಕಾರನ್ನು ನಿಲ್ಲಿಸಿ ನದಿಗೆ ಹಾರಿ ಸಾವಿಗೆ ಶರಣಾಗಿದ್ದಾನೆ. ಕಾಫಿಡೇ ಮಾಲೀಕ ಸಿದ್ದಾರ್ಥ ಅವರ ಆತ್ಮಹತ್ಯೆ ಬೆನ್ನಲ್ಲಿಯೇ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆಗೆ ಶರಣಾಗುವ ಪ್ರಕರಣಗಳು ಹೆಚ್ಚಾಗಿದ್ದವು. ಈ ಹಿನ್ನೆಲೆಯಲ್ಲಿ ನೇತ್ರಾವತಿ ನದಿಯ ಪಕ್ಕದಲ್ಲಿರುವ ಸೇತುವೆಯ ಆಚೆ-ಈಚೆ ಬೇಲಿಯನ್ನು ನಿರ್ಮಾಣ ಮಾಡಲಾಗಿತ್ತು. ತಂತಿ ಬೇಲಿ ಹಾಗೂ ತಡೆಗೋಡೆ ನಿರ್ಮಾಣ ಮಾಡಿದರೂ ಅದನ್ನು ಮುರಿದು ಆತ್ಮಹತ್ಯೆ ಮಾಡಿಕೊಳ್ಳಲಾಗಿದೆ. ಸೋಮವಾರ ಬೆಳಗ್ಗೆ ಉದ್ಯಮಿಯೊಬ್ಬ ಉಳ್ಳಾಲದ ನೇತ್ರಾವತಿ ಸೇತುವೆಯಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈಗ ತಂತಿ ಬೇಲಿ ನಿರ್ಮಾಣ ಮಾಡಿದ ನಂತರ ಮೂರು ವರ್ಷಗಳ ಬಳಿಕ ಮತ್ತೆ ನೇತ್ರಾವತಿ ಸೇತುವೆ ಆತ್ಮಹತ್ಯೆ ಘಟನೆ ನಡೆದಿದೆ.




ಚಿಕ್ಕಮಗಳೂರಿನ ಗೋಕುಲ್ ಫಾರ್ಮ್ ನಿವಾಸಿ ಪ್ರಸನ್ನ (37) ಆತ್ಮಹತ್ಯೆ ತೊಕ್ಕೊಟ್ಟಿನಿಂದ ಮಾಡಿಕೊಂಡ ಯುವಕನಾಗಿದ್ದಾನೆ. ಮಂಗಳೂರಿಗೆ ಬರುವ ದಾರಿಯಲ್ಲಿ ರಾಷ್ಟ್ರೀಯ ಹೆದ್ದಾರಿ 66ರ ಬಳಿ ಕಾರು ನಿಲ್ಲಿಸಿ ತಡೆಬೇಲಿಯ ಬದಿಯಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕಳೆದ 3 ವರ್ಷಗಳಿಂದ ಆತ್ಮಹತ್ಯೆಗಳಿಂದ ನಿರಾತಂಕವಾಗಿದ್ದ ಉಳ್ಳಾಲದ ನೇತ್ರಾವತಿ ಸೇತುವೆಯಲ್ಲಿ ಮೂರು ವರ್ಷಗಳ ಬಳಿಕ ಆತ್ಮಹತ್ಯೆ ಪ್ರಕರಣ ವರದಿಯಾಗಿದೆ.

ವಿದ್ಯಾಮಾತಾ ಅಕಾಡೆಮಿಯಲ್ಲಿ ಈ ಪರೀಕ್ಷೆಗಳಿಗೆ ತರಬೇತಿ ಪ್ರಾರಂಭ ಇಲ್ಲಿದೆ ನೋಡಿ ಫುಲ್ ಡಿಟೇಲ್ಸ್

Posted by Vidyamaana on 2023-10-27 07:15:15 |

Share: | | | | |


ವಿದ್ಯಾಮಾತಾ ಅಕಾಡೆಮಿಯಲ್ಲಿ ಈ ಪರೀಕ್ಷೆಗಳಿಗೆ ತರಬೇತಿ ಪ್ರಾರಂಭ ಇಲ್ಲಿದೆ ನೋಡಿ ಫುಲ್ ಡಿಟೇಲ್ಸ್

ಪುತ್ತೂರು :ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ ಮತ್ತು ವಾಣಿಜ್ಯ ತೆರಿಗೆ ಪರಿವೀಕ್ಷಕ ಹುದ್ದೆಗಳ ಲಿಖಿತ ಪರೀಕ್ಷೆಗೆ ತರಬೇತಿ ವಿದ್ಯಾಮಾತಾ ಅಕಾಡೆಮಿಯ ಪುತ್ತೂರು ಮತ್ತು ಸುಳ್ಯದಲ್ಲಿ ಪ್ರಾರಂಭವಾಗಲಿದೆ 

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಕಾನ್ಸ್ಟೇಬಲ್ ನೇಮಕಾತಿ ಪರೀಕ್ಷೆಯು ದಿನಾಂಕ 19/11/2023 ರಂದು ಹಾಗೂ ಕೆ.ಪಿ.ಎಸ್.ಸಿ ನೇಮಕಾತಿಯ ವಾಣಿಜ್ಯ ತೆರಿಗೆ ಪರಿವೀಕ್ಷಕ ಹುದ್ದೆಗೆ ಲಿಖಿತ ಪರೀಕ್ಷೆಯು ದಿನಾಂಕ 4/11/2023 ಮತ್ತು 5 /11 /2023ರಂದು ನಡೆಯಲಿದ್ದು, ಈ ಎರಡು ನೇಮಕಾತಿಗಳ ಅಂತಿಮ ಹಂತದ ಪೂರ್ವ ತಯಾರಿಯ ತರಬೇತಿಯು ವಿದ್ಯಾಮಾತಾ ಅಕಾಡೆಮಿಯಲ್ಲಿ ಪ್ರಾರಂಭಗೊಂಡಿದ್ದು, ಆಸಕ್ತ ಅಭ್ಯರ್ಥಿಗಳು ವಿದ್ಯಾಮಾತಾ ಅಕಾಡೆಮಿಯಲ್ಲಿ ತರಬೇತಿಯನ್ನು ಪಡೆದುಕೊಳ್ಳಬಹುದಾಗಿದೆ. 

 ಹೆಚ್ಚಿನ ಮಾಹಿತಿಗಾಗಿ,

 ವಿದ್ಯಾಮಾತಾ ಅಕಾಡೆಮಿಯ ಪುತ್ತೂರು,  ಹಿಂದುಸ್ತಾನ್ ಕಾಂಪ್ಲೆಕ್ಸ್, ಒಂದನೇ ಮಹಡಿ, ಎಪಿಎಂಸಿ ರಸ್ತೆ ,ಸಿಟಿ ಆಸ್ಪತ್ರೆ ಹತ್ತಿರ, ಪುತ್ತೂರು ದ.ಕ.- 574201.

962 046869/9148935808


ವಿದ್ಯಾಮಾತಾ ಅಕಾಡೆಮಿ ಸುಳ್ಯ,

ಟಿ.ಎ.ಪಿ.ಸಿ.ಎಂ.ಎಸ್ ಬಿಲ್ಡಿಂಗ್ ಕಾರ್ ಸ್ಟ್ರೀಟ್ ಸುಳ್ಯ ದಕ್ಷಿಣಕನ್ನಡ.

9448527606 ಅನ್ನು ಸಂಪರ್ಕಿಸಲು ಪ್ರಕಟಣೆಯು ತಿಳಿಸಿದೆ.

ಪ್ರಾಣಿ ಸಾಕಾಣೆದಾರರಿಗೆ ಗುಡ್ ನ್ಯೂಸ್ – ತಾಲೂಕಿಗೆ ಬಂತು ಪಶು ಸಂಜೀವಿನಿ ಆಂಬುಲೆನ್ಸ್

Posted by Vidyamaana on 2023-08-06 15:16:43 |

Share: | | | | |


ಪ್ರಾಣಿ ಸಾಕಾಣೆದಾರರಿಗೆ ಗುಡ್ ನ್ಯೂಸ್ – ತಾಲೂಕಿಗೆ ಬಂತು ಪಶು ಸಂಜೀವಿನಿ ಆಂಬುಲೆನ್ಸ್

ಪುತ್ತೂರು: ಪಶುಗಳಿಗೆ ಸೇರಿದಂತೆ ಯಾವುದೇ ಪ್ರಾಣಿಗಳಿಗೆ ತೊಂದರೆಯಾದಲ್ಲಿ ವೈದ್ಯರು ಸ್ಥಳಕ್ಕೆ ತೆರಳಿ ಚಿಕಿತ್ಸೆ ನೀಡಿ ಮೂಕಪ್ರಾಣಿಗಳನ್ನು ಸಲಹುವ ವ್ಯವಸ್ಥೆಗೆ ರಾಜ್ಯದ ಕಾಂಗ್ರೆಸ್ ಸರಕಾರದಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಒಟ್ಟು 10 ಪಶು ಸಂಜೀವಿನಿ ಆಂಬುಲೆನ್ಸ್ ವ್ಯವಸ್ಥೆಯನ್ನು ಜಾರಿಗೆ ತಂದಿದ್ದು ಇದರಿಂದ ಪಶು ಸಾಕಾಣಿಕೆದಾರರಿಗೆ ಪ್ರಯೋಜನವಾಗಲಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.


ಪುತ್ತೂರಿಗೆ ಆಗಮಿಸಿದ ಅಂಬುಲೆನ್ಸ್ ವ್ಯವಸ್ಥೆಯನ್ನು ಉದ್ಘಾಟಿಸಿ ಮಾತನಾಡಿದ ಶಾಸಕರು, ‘ಮೂಕ ಪ್ರಾಣಿಗಳಿಗೆ ಚಿಕಿತ್ಸೆ ನೀಡುವ ಏಕೈಕ ಉದ್ದೇಶದಿಂದ ಈ ವ್ಯವಸ್ಥೆಯನ್ನು ಸರಕಾರ ಜಾರಿಗೆ ತಂದಿದೆ. ಪ್ರಾಣಿಗಳಿಗೆ ಅನಾರೋಗ್ಯ ಕಂಡುಬಂದಲ್ಲಿ ಟೋಲ್ ಫ್ರೀ ನಂಬರಿಗೆ ಕರೆ ಮಾಡಿದರೆ ಸ್ಥಳಕ್ಕೆ ಬಂದು ನಿಮ್ಮ ಪ್ರಾಣಿಗಳನ್ನು ಆಂಬುಲೆನ್ಸ್ ಮೂಲಕ ಕರೆದೊಯ್ಯಲಾಗುತ್ತದೆ ಬಳಿಕ ಅದಕ್ಕೆ ಸೂಕ್ತ ಚಿಕಿತ್ಸೆ ನೀಡಿ ಅವುಗಳನ್ನು ನಿಮ್ಮ ಮನೆ ಬಾಗಿಲಿಗೆ ಒಪ್ಪಿಸಲಾಗುತ್ತದೆ.


ಮನುಷ್ಯರ ಹಾಗೇ ಪ್ರಾಣಿಗಳು ಎಂಬ ಭಾವನೆ ನಮ್ಮಲ್ಲಿರಬೇಕು, ಪ್ರಾಣಿಗಳಿಗೆ ಅನಾರೋಗ್ಯ ಕಂಡು ಬಂದಲ್ಲಿ ಅವುಗಳಿಗೆ ಎಲ್ಲಾ ಪಶು ವೈದ್ಯಕೀಯ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆಯನ್ನು ಸರಕಾರದ ವತಿಯಿಂದ ನೀಡಲಾಗುತ್ತಿದೆ ರೈತರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.


ಈ ಸಂದರ್ಭದಲ್ಲಿ ಇಂಟಕ್ ಅಧ್ಯಕ್ಷರಾದ ಜಯಪ್ರಕಾಶ್ ಬದಿನಾರ್, ಉದ್ಯಮಿಗಳಾದ ರಿತೇಶ್ ಶೆಟ್ಟಿ, ನಗರ ಯುವ ಕಾಂಗ್ರೆಸ್ ಕಾರ್ಯದರ್ಶಿ ಅಖಿಲ್ ಸಾಮೆತ್ತಡ್ಕ, ಉದ್ಯಮಿ ನಿಹಾಲ್ ಶೆಟ್ಟಿ, ಪ್ರಗತಿಪರ ಕೃಷಿಕರಾದ ರಾಕೇಶ್ ಬಡಗನ್ನೂರು, ಅಶ್ವಿನ್ ಬಡಗನ್ನೂರು ಮತ್ತಿತರರು ಉಪಸ್ತಿತರಿದ್ದರು.

ಬಿಜೆಪಿ ಸೇರಿದ ಮಂಗಳೂರಿನ ಮಾಜಿ ಮೇಯರ್ ಕವಿತಾ ಸನಿಲ್

Posted by Vidyamaana on 2024-04-20 16:57:34 |

Share: | | | | |


ಬಿಜೆಪಿ ಸೇರಿದ ಮಂಗಳೂರಿನ ಮಾಜಿ ಮೇಯರ್ ಕವಿತಾ ಸನಿಲ್

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ ಮಾಜಿ ಮೇಯರ್, ಕಾಂಗ್ರೆಸ್ ನಾಯಕಿ ಕವಿತಾ ಸನಿಲ್ ಶನಿವಾರ ಬಂಟ್ವಾಳದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾದರು.

ಅಕ್ರಮ ಸಕ್ರಮಕ್ಕೆ ಅರ್ಜಿ ಸಲ್ಲಿಸಿ ಎಲ್ಲವನ್ನೂ ಕಳೆದುಕೊಂಡ ಬನ್ನೂರಿನ ಮಹಿಳೆ...

Posted by Vidyamaana on 2023-04-27 08:55:55 |

Share: | | | | |


ಅಕ್ರಮ ಸಕ್ರಮಕ್ಕೆ ಅರ್ಜಿ ಸಲ್ಲಿಸಿ ಎಲ್ಲವನ್ನೂ ಕಳೆದುಕೊಂಡ ಬನ್ನೂರಿನ ಮಹಿಳೆ...

ಪುತ್ತೂರು: ಕಳೆದ ಕೆಲವು ತಿಂಗಳ ಹಿಂದೆ ಅಕ್ರಮಸಕ್ರಮಕ್ಕೆ ಅರ್ಜಿ ಸಲ್ಲಿಸಿದ ಮಹಿಳೆಯೋರ್ವರು ಅಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ಲಂಚ ನೀಡಿ ತನ್ನ ಸಂಪತ್ತೆಲ್ಲವನ್ನೂ ಕಳೇದುಕೊಂಡಿದ್ದಾರೆ ಎಂದು ಪುತ್ತೂರು ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ರೈ ಸುಳ್ಯಪದವಿನಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಆರೋಪಿಸಿದ್ದಾರೆ.

ತನ್ನ ಸ್ವಾಧೀನದಲ್ಲಿರುವ ಒಂದು ಎಕ್ರೆ ಜಾಗವನ್ನು ಸಕ್ರಮ ಮಾಡಿಕೊಡುವಂತೆ ಪುತ್ತೂರು ಹೊರವಲಯದ ಬನ್ನೂರು ನಿವಾಸಿ ಮಹಿಳೆಯೋರ್ವರು ಅರ್ಜಿ ಹಾಕಿದ್ದರು. ಇವರು ಸಲ್ಲಿಸಿದ ಅರ್ಜಿ ತಾಲೂಕು ಕಚೇರಿಗೆ ತಲುಪಿದಾಗ ಇವರಿಗೆ ಕರೆ ಬರುತ್ತದೆ. ಕಚೇರಿಗೆ ತೆರಳಿದಾಗ ಇವರ ಬಳಿ ಹಣ ಕೇಳುತ್ತಾರೆ. ಒಂದು ಎಕ್ರೆಗೆ ಎರಡು ಲಕ್ಷ ನೀಡಿದರೆ ಮಾತ್ರ ನಿಮ್ಮದು ಸಕ್ರಮವಾಗುತ್ತದೆ ಎಂದು ತಿಳಿಸಿದ್ದಾರೆ. ವಿದಿ ಇಲ್ಲದೆ ಮಹಿಳೆ ತನ್ನ ಮನೆಯಲ್ಲಿದ್ದ ಎರಡು ಸಾಕು ದನಗಳನ್ನು ಮಾರಿದ ಹಣ ಸೇರಿಸಿ ಒಟ್ಟು ೬೦ ಸಾವಿರ ಸಂಬಂಧಪಟ್ಟವರ ಕೈಗೆ ನೀಡಿದ್ದು ಆಬಳಿಕ ಉಳಿದ ಮೊತ್ತವನ್ನು ನೋಡುವಂತೆ ಮತ್ತು ಬಾಕಿ ಮೊತ್ತವನ್ನು ನೀಡದೇ ಇದ್ದಲ್ಲಿ ನಿಮ್ಮ ಫೈಲು ಮುಂದೆ ಹೋಗುವುದಿಲ್ಲ ಎಂದು ತಿಳಿಸಿದ್ದಾರೆ. ಆರ್ಥಿಕವಾಗಿ ಬಡತನದಲ್ಲಿರುವ ಮಹಿಳೆ ಹಣ ನೀಡದ ಕಾರಣಕ್ಕೆ ಅವರ ಫೈಲು ಪೆಂಡಿಂಗ್ ಆಗಿದೆ. ಆಬಳಿಕ ಮಹಿಳೆ ತನ್ನ ಕಚೇರಿಗೆ ಬಂದು ವಿಷಯ ತಿಳಿಸಿದ್ದಾರೆ. ಎಲ್ಲವನ್ನೂ ಕಳೆದುಕೊಂಡ ಮಹಿಳೆ ಕಚೇರಿಯಲ್ಲಿ ಬಂದು ಕಣ್ಣೀರು ಹಾಕಿ ಸಂಬಂಧಿಸಿದವರಿಗೆ ಹಿಡಿಶಾಪ ಹಾಕುತ್ತಿದ್ದರು. ಅವರನ್ನು ಸಮಾಧಾನಿಸಿ ದನ ಖರೀದಿ ಮಾಡುವಂತೆ ಆರ್ಥಿಕವಾಗಿ ನೆರವು ನೀಡಿದ್ದು ಮಾತ್ರವಲ್ಲದೆ ಕಾಂಗ್ರೆಸ್‌ಗೆ ಆಶೀರ್ವಾದ ಮಾಡಿ ನಿಮ್ಮ ಅಕ್ರಮ ಸಕ್ರಮ ಫೈಲನ್ನು ನಿಮ್ಮ ಮನೆ ಬಾಗಿಲಿಗೆ ತಲುಪಿಸುವುದಾಗಿ ಭರವಸೆ ನೀಡಿದ್ದೇನೆ. ಇಂಥಹ ಸಾವಿರಾರು ಫೈಲುಗಳು ತಾಲೂಕು ಕಚೇರಿಯಲ್ಲಿದ್ದು ಎಲ್ಲವೂ ಮೈ ಕೊಡವಿ ಮೇಲೆ ಬರಲು ಜನರ ಆಶೀರ್ವಾದ ಬೇಕು ಎಂದು  ಎಂದು ಸಭೆಯಲ್ಲಿ ಅಶೋಕ್ ರೈ ಮನವಿ ಮಾಡಿದರು.

2000 ರೂಪಾಯಿ ನೋಟ್‌ ಹಿಂಪಡೆದ ಆರ್‌ಬಿಐ

Posted by Vidyamaana on 2023-05-19 14:41:54 |

Share: | | | | |


2000 ರೂಪಾಯಿ ನೋಟ್‌ ಹಿಂಪಡೆದ ಆರ್‌ಬಿಐ

ನವದೆಹಲಿ : (Rs 2000 Currency Note) ಭಾರತೀಯ ರಿಸರ್ವ್‌ ಬ್ಯಾಂಕ್‌ 2000 ರೂಪಾಯಿ ಮುಖ ಬೆಲೆಯ ನೋಟ್‌ ನ್ನು ಹಿಂಪಡೆದಿದೆ. 2000 ರೂಪಾಯಿ ನೋಟಿನ ಚಲಾವಣೆ ಈ ಕ್ಷಣದಿಂದಲೇ ಸ್ಥಗಿತವಾಗಲಿದೆ. ಆದರೆ 2000 ರೂಪಾಯಿ ನೋಟು ಹೊಂದಿದ್ದವರು ಬ್ಯಾಂಕುಗಳಿಗೆ ತೆರಳಿ ಸೆಪ್ಟೆಂಬರ್ 30 2023ರ ಒಳಗಾಗಿ ನೋಟನ್ನು ಬದಲಾಯಿಸಿಕೊಳ್ಳಲು ಅವಕಾಶವನ್ನು ಕಲ್ಪಿಸಲಾಗಿದೆ ಎಂದು ಆರ್‌ಬಿಐ ತಿಳಿಸಿದೆ.2000 ರೂಪಾಯಿಯ ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯಲು ಭಾರತೀಯ ರಿಸರ್ವ್ ಬ್ಯಾಂಕ್ ನಿರ್ಧರಿಸಿದೆ. ಆದರೆ ಕರೆನ್ಸಿ ನೋಟುಗಳ ಚಲಾವಣೆ ಸೆಪ್ಟೆಂಬರ್ 30 ರವರೆಗೆ ಕಾನೂನುಬದ್ಧವಾಗಿ ಮುಂದುವರಿಯುತ್ತದೆ . ಸೆಪ್ಟೆಂಬರ್ 30, 2023 ರವರೆಗೆ 2,000 ರೂ ನೋಟುಗಳಿಗೆ ಠೇವಣಿ ಮತ್ತು/ಅಥವಾ ವಿನಿಮಯ ಸೌಲಭ್ಯವನ್ನು ಒದಗಿಸುವಂತೆ RBI ಬ್ಯಾಂಕ್‌ಗಳನ್ನು ಕೇಳಿದೆ.ಆದರೆ ಬ್ಯಾಂಕುಗಳು ಯಾವುದೇ ಕಾರಣಕ್ಕೂ ಈ ನೋಟುಗಳನ್ನು ಚಲಾವಣೆ ಮಾಡುವಂತಿಲ್ಲ ಎಂದು ಸ್ಪಷ್ಟವಾಗಿ ಸುತ್ತೋಲೆಯಲ್ಲಿ ತಿಳಿಸಿದ. ಎರಡು ಸಾವಿರ ರೂಪಾಯಿಯ ನೋಟು ಹೊಂದಿದ್ದವರು ಆತಂಕ ಪಡುವ ಅಗತ್ಯವಿಲ್ಲ. ಇನ್ನು ಕಳೆದ ಒಂದು ವರ್ಷಗಳಿಗೂ ಅಧಿಕ ಕಾಲದಿಂದಲೂ ಎರಡು ಸಾವಿರ ರೂಪಾಯಿಯ ನೋಟು ಎಟಿಎಂ, ಬ್ಯಾಂಕ್‌ ಶಾಖೆಗಳಲ್ಲಿಯೂ ಲಭ್ಯವಾಗುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ ಈ ಹಿಂದೆಯೇ ಎರಡು ಸಾವಿರ ರೂಪಾಯಿಯ ನೋಟು ಬ್ಯಾನ್‌ ಆಗುತ್ತದೆ ಎಂಬ ಮಾತುಗಳು ಕೇಳಿಬಂದಿತ್ತು. ಆದರೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಈ ಕುರಿತು ಯಾವುದೇ ಯೋಚನೆಯೂ ಕೇಂದ್ರ ಸರಕಾರದ ಮುಂದಿಲ್ಲ ಎಂದು ತಿಳಿಸಿದ್ದರು.

ಈ ಹಿಂದೆ ದೇಶದಲ್ಲಿ ನೋಟು ಅಮಾನ್ಯೀಕರಣದ ನಂತರ ಎರಡು ಸಾವಿರ ಮುಖಬೆಲೆಯ ನೋಟುಗಳನ್ನು ಆರ್‌ಬಿಐ ಚಲಾವಣೆಗೆ ತಂದಿತ್ತು. ಸುಮಾರು ಆರು ವರ್ಷಗಳ ತರುವಾಯ ಆರ್‌ಬಿಐ ಎರಡು ಸಾವಿರ ಮುಖ ಬೆಲೆಯ ನೋಟುಗಳ ಚಲಾವಣೆಯನ್ನು ರದ್ದು ಮಾಡಿದೆ. ಸಪ್ಟೆಂಬರ್‌ ವರೆಗೂ ನೋಟುಗಳು ಚಲಾವಣೆಯಲ್ಲಿ ಇರಲಿದ್ದು, ನಂತರದಲ್ಲಿ ಸಂಪೂರ್ಣವಾಗಿ ನೋಟುಗಳ ಚಲಾವಣೆ ರದ್ದಾಗಲಿದೆ.



Leave a Comment: