ಮಂಗಳೂರು- ಸುಬ್ರಹ್ಮಣ್ಯ ಮಧ್ಯೆ ಪ್ಯಾಸೆಂಜರ್ ರೈಲು ಆರಂಭಿಸಲು ಸಂಸತ್ತಿನಲ್ಲಿ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಒತ್ತಾಯ

ಸುದ್ದಿಗಳು News

Posted by vidyamaana on 2024-07-24 16:52:02 |

Share: | | | | |


ಮಂಗಳೂರು- ಸುಬ್ರಹ್ಮಣ್ಯ ಮಧ್ಯೆ ಪ್ಯಾಸೆಂಜರ್ ರೈಲು ಆರಂಭಿಸಲು ಸಂಸತ್ತಿನಲ್ಲಿ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಒತ್ತಾಯ

ವದೆಹಲಿ : ಮಂಗಳೂರು- ಸುಬ್ರಹ್ಮಣ್ಯ ಮಧ್ಯೆ ಪ್ಯಾಸೆಂಜರ್ ರೈಲು ಆರಂಭಿಸಲು ಸಂಸತ್ತಿನಲ್ಲಿ ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಒತ್ತಾಯಿಸಿದರು.


ಈ ಹಿಂದೆ ಮಂಗಳೂರು- ಸುಬ್ರಹ್ಮಣ್ಯ ನಡುವೆ ಮೀಟರ್ ಗೇಜ್ ಹಳಿ ಇದ್ದಾಗ ಪ್ಯಾಸೆಂಜರ್ ರೈಲು ಓಡಾಟ ಇತ್ತು. ಬ್ರಾಡ್ ಗೇಜ್ ಹಳಿ ಮಾಡುವ ಸಲುವಾಗಿ 2005ರಲ್ಲಿ ಈ ರೈಲಿನ ಸಂಚಾರವನ್ನು ನಿಲ್ಲಿಸಲಾಗಿತ್ತು. ಆನಂತರ, ಬ್ರಾಡ್ ಗೇಜ್ ಹಳಿಯಾಗಿ ಪರಿವರ್ತನೆ ಮಾಡಲಾಗಿದೆ. ಅಂದು ಓಡುತ್ತಿದ್ದ ಪ್ಯಾಸೆಂಜರ್ ರೈಲು ಮಂಗಳೂರಿನಿಂದ ಕಬಕ- ಪುತ್ತೂರು ನಡುವೆ ಓಡಾಟ ನಡೆಸುತ್ತಿದ್ದು, ಅದನ್ನು ಸುಬ್ರಹ್ಮಣ್ಯದವರೆಗೆ ವಿಸ್ತರಣೆ ಮಾಡಬೇಕು.

ಮಂಗಳೂರು – ಸುಬ್ರಹ್ಮಣ್ಯ ಮಧ್ಯೆ ರೈಲು ಓಡಾಟವಾದರೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಲೆ, ಕಾಲೇಜಿಗೆ ಹೋಗುವವರಿಗೆ ಉಪಯೋಗವಾಗಲಿದೆ. ಗ್ರಾಮಾಂತರ ಪ್ರದೇಶವಾದ ಸುಳ್ಯದಿಂದ ಮಂಗಳೂರಿಗೆ ಪ್ರತಿದಿನ ಓಡಾಟ ಮಾಡುವವರಿದ್ದಾರೆ. ಅವರಿಗೂ ಉಪಯುಕ್ತ ಆಗಲಿದೆ. ಇದು ಸೌತ್ ವೆಸ್ಟರ್ನ್ ರೈಲ್ವೇ ವಿಭಾಗದಲ್ಲಿದ್ದು, ನಮ್ಮ ಜಿಲ್ಲೆಯ ಒಳಗೆ ಸಂಚರಿಸುವ ಏಕೈಕ ಪ್ಯಾಸೆಂಜರ್ ರೈಲಾಗಿದೆ.


ಜನಸಾಮಾನ್ಯರ ಹಿತದೃಷ್ಟಿಯಿಂದ ಈ ರೈಲನ್ನು ಸುಬ್ರಹ್ಮಣ್ಯದವರೆಗೂ ವಿಸ್ತರಣೆ ಮಾಡಬೇಕು ಎಂದು ರೈಲ್ವೇ ಸಚಿವರನ್ನು ಮನವಿ ಮಾಡಿದ್ದಾರೆ. ಇದಕ್ಕುತ್ತರಿಸಿದ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್, ಸೇನೆಯಿಂದ ನಿವೃತ್ತಿ ಪಡೆದು ಸಂಸದರಾಗಿರುವ ಕ್ಯಾಪ್ಟನ್ ಬ್ರಿಜೇಶ್ ಚೌಟ ಬಗ್ಗೆ ಗೌರವ ಹೊಂದಿದ್ದು, ರೈಲ್ವೇ ವಿಚಾರಗಳ ಬಗ್ಗೆ ಯಾವುದೇ ಮನವಿಯಿದ್ದರೂ ನನ್ನ ಕಚೇರಿಗೆ ಬಂದು ವೈಯಕ್ತಿಕವಾಗಿ ಚರ್ಚಿಸಬಹುದು. ಪರಿಹರಿಸಲು ಮುಕ್ತನಿದ್ದೇನೆ ಎಂದು ಹೇಳಿದರು.

 Share: | | | | |


ಪ್ರಯಾಣಿಕರ ಗಮನಕ್ಕೆ : ಸಕಲೇಶಪುರ-ಬಾಳ್ಳುಪೇಟೆ ನಡುವೆ ಭೂ ಕುಸಿತ, 10 ರೈಲುಗಳ ಸಂಚಾರ ರದ್ದು

Posted by Vidyamaana on 2024-08-12 09:22:11 |

Share: | | | | |


ಪ್ರಯಾಣಿಕರ ಗಮನಕ್ಕೆ : ಸಕಲೇಶಪುರ-ಬಾಳ್ಳುಪೇಟೆ ನಡುವೆ ಭೂ ಕುಸಿತ, 10 ರೈಲುಗಳ ಸಂಚಾರ ರದ್ದು

ಬೆಂಗಳೂರು : ಈಗಾಗಲೇ ಸಕಲೇಶಪುರ - ಬಾಳ್ಳುಪೇಟೆ ನಡುವೆ ರೈಲು ಹಳಿಗಳ ಮೇಲೆ ಭೂ ಕುಸಿತ ಉಂಟಾದ ಪರಿಣಾಮ ಐದು ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿತ್ತು. ಅಲ್ಲದೇ ಎರಡು ರೈಲುಗಳ ವೇಳೆ ಕಡಿತ, ಮತ್ತೆರಡು ರೈಲುಗಳ ಸಂಚಾರ ಮಾರ್ಗವನ್ನು ಬದಲಿಸಲಾಗಿತ್ತು. ಈ ಬೆನ್ನಲ್ಲೇ ಮತ್ತೆ 10 ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ.

ಈ ಕುರಿತಂತೆ ನೈರುತ್ಯ ರೈಲ್ವೆಯ ಮೈಸೂರು ವಿಭಾಗದ ಸಕಲೇಶಪುರ-ಬಾಳ್ಳುಪೇಟೆ ನಿಲ್ದಾಣಗಳ ನಡುವೆ ಭೂಕುಸಿತ ಸಂಭವಿಸಿದ ಕಾರಣ, ಈ ಕೆಳಗಿನ ರೈಲು ಸೇವೆಗಳನ್ನು ರದ್ದುಪಡಿಸಲಾಗಿದೆ ಎಂದು ತಿಳಿಸಿದೆ.


ರದ್ದುಗೊಂಡ ರೈಲುಗಳು

ಯಕ್ಷಗಾನಕ್ಕೂ ಬಂತು ನಾನು ಅಧ್ಯಕ್ಷ ಡೈಲಾಗ್

Posted by Vidyamaana on 2023-05-27 18:38:07 |

Share: | | | | |


ಯಕ್ಷಗಾನಕ್ಕೂ ಬಂತು ನಾನು ಅಧ್ಯಕ್ಷ ಡೈಲಾಗ್

     ಪತ್ತನಾಜೆಯೊಂದಿಗೆ ತುಳುನಾಡಿನ ಗಂಡುಕಲೆ ಯಕ್ಷಗಾನದ ಮೇಳಗಳು ತಮ್ಮ ಪ್ರದರ್ಶನವನ್ನು ಮುಗಿಸಿವೆ. ಇತ್ತೀಚಿನ ದಿನಗಳಲ್ಲಿ ಯಕ್ಷಗಾನದಲ್ಲಿ ಪ್ರಚಲಿತ ವಿದ್ಯಮಾನಗಳನ್ನು, ಚಲನಚಿತ್ರ ಮತ್ತು ರಾಜಕಾರಣದಲ್ಲಿ ವೈರಲ್ ಆಗುವ ಸಂಭಾಷಣೆಗಳನ್ನು ಪಾತ್ರೋಚಿತವಾಗಿ ಅಳವಡಿಸಿಕೊಂಡಿರುವುದನ್ನು ಯಕ್ಷಪ್ರಿಯರು ನೋಡಿದ್ದಾರೆ.

ಈ ಹಿಂದೆ ರಾಷ್ಟ್ರೀಯ ಪಕ್ಷವೊಂದರ ನಾಯಕರ ‘ಇವನರ್ವ..’ ಹೇಳಿಕೆ ಯಕ್ಷಗಾನದಲ್ಲೂ ವೈರಲ್ ಆಗಿ ಒಂದಿಷ್ಟು ವಿವಾದಕ್ಕೂ ಕಾರಣವಾಗಿತ್ತು. ಆ ಬಳಿಕ ಕಾಂತಾರ ಚಿತ್ರದ ಒಂದಷ್ಟು ಫೇಮಸ್ ಸಂಭಾಷಣೆಗಳೂ ಸಹ ಕೆಲವೊಂದು ಪ್ರಸಂಗಗಳಲ್ಲಿ ಯಕ್ಷ ಪಾತ್ರಧಾರಿಗಳು ಅಳವಡಿಸಿಕೊಂಡು ಯಕ್ಷಪ್ರಿಯರ ಶಿಳ್ಳೆ ಮತ್ತು ಚಪ್ಪಾಳೆಗಳನ್ನು ಗಿಟ್ಟಿಸಿಕೊಂಡಿದ್ದರು.

ಇದೀಗ ಅಂತದ್ದೇ ಒಂದು ಸಂಭಾಷಣೆ ಯಕ್ಷಗಾನ ಪ್ರದರ್ಶನವೊಂದರಲ್ಲಿ ಕೇಳಿಬಂದಿದ್ದು ಆ ಸಂಭಾಷಣೆಯ ತುಣುಕು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿದೆ. ಇತ್ತೀಚೆಗೆ ನಡೆದ ಕರ್ನಾಟಕ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಪ್ರಮುಖ ರಾಷ್ಟ್ರೀಯ ಪಕ್ಷವೊಂದರ ರಾಜ್ಯಾಧ್ಯಕ್ಷರು ಪಕ್ಷದ ಸಭೆಯೊಂದರಲ್ಲಿ ‘ಎಲ್ಲಾ ಕಡೆ ನೋಡ್ಕೊಂಡು ಬಂದಿದ್ದೇನೆ, ಯಾರಿಗೆ ಹೆಚ್ಚು ಚಪ್ಪಾಳೆ ಬೀಳುತ್ತೋ ಅವರಿಗೆ ಟಿಕೆಟ್ ಇಲ್ಲ.. ನಾನು ಅಧ್ಯಕ್ಷ..’ ಎಂಬ ಮಾತು ಆಮೇಲೆ ಚುನಾವಣಾ ಫಲಿತಾಂಶ ಬಂದ್ಮೇಲೆ ಒಟ್ರಾಶಿ ವೈರಲ್ ಆಗಿತ್ತು. ಅದನ್ನೇ ಕಟೀಲು 3ನೇ ಮೇಳದ ಪ್ರದರ್ಶನವೊಂದರಲ್ಲಿ ಕಲಾವಿದರಿಬ್ಬರ ನಡುವಿನ ಸಂಭಾಷಣೆಯಲ್ಲಿ ಬಂದು ನೆರೆದಿದ್ದ ಪ್ರೇಕ್ಷರನ್ನು ರಂಜಿಸಿದೆ.

ದೇವೇಂದ್ರ ಪಾತ್ರಧಾರಿ, ‘ನಾನು ಯಾರು ಬಲ್ಲೆಯಾ? ನಾನು ಅಧ್ಯಕ್ಷ.. ನಾನು ಒಂದು ಲೋಕಕ್ಕೆ ಮಾತ್ರವಲ್ಲ ಮೂರು ಲೋಕಕ್ಕೂ ಅಧ್ಯಕ್ಷ..’ ಎಂಬ ಮಾತನ್ನು ಹೇಳುವಾಗ ಇದಿರು ಪಾತ್ರಧಾರಿ ‘ಇಂದ್ರ..’ ಎಂದು ಕೈಮುಗಿದು ನಮಸ್ಕರಿಸಿ ಬಳಿಕ, ‘ನಾನು ಅಧ್ಯಕ್ಷ.. ನಾನು ಅಧ್ಯಕ್ಷ.. ಅಂತ ಹೇಳಿಕೊಂಡು ತಿರುಗಾಡಿದ್ರೆ ಸಾಲ್ದು ಅಧ್ಯಕ್ಷ ಪೀಠಕ್ಕೆ ಸರಿಯಾದ ಪ್ರವರ್ತನೆ ಬೇಕು, ಅದಲ್ದೇ ಹೋದ್ರೆ ಬರೇ ಅಧ್ಯಕ್ಷ ಅಂತ ಯಾರೂ ಕೈ ಮುಗಿಯೋದಿಲ್ಲ..’ ಎಂದು ಹೇಳುವಾಗ ಪ್ರೇಕ್ಷಕರಿಂದ ಭರ್ಜರಿ ಶಿಳ್ಳೆ ಬೀಳುತ್ತದೆ. ಇದೀಗ ಈ ವಿಡಿಯೋ ತುಣುಕನ್ನು ಹಲವರು ವಾಟ್ಸ್ಯಾಪ್ ಸ್ಟೇಟಸ್ ಹಾಕಿಕೊಂಡಿರುವುದ ಮಾತ್ರವಲ್ಲದೇ ತಮ್ಮ ಗ್ರೂಪುಗಳಲ್ಲಿ ಶೇರ್ ಮಾಡ್ತಿದ್ದಾರೆ.

ಬಡಗನ್ನೂರು: ದರೋಡೆಗೊಳಗಾದ ಮನೆಗೆ ಅರುಣ್ ಪುತ್ತಿಲ ಭೇಟಿ

Posted by Vidyamaana on 2023-09-08 12:50:48 |

Share: | | | | |


ಬಡಗನ್ನೂರು: ದರೋಡೆಗೊಳಗಾದ ಮನೆಗೆ ಅರುಣ್ ಪುತ್ತಿಲ ಭೇಟಿ

ಪುತ್ತೂರು: ಗ್ರಾಮ ಪಂಚಾಯತ್ ಮಾಜಿ ಸದಸ್ಯ ಮತ್ತು ಸ್ಥಳೀಯ ಕಾಂಗ್ರೆಸ್ ಮುಖಂಡ ಬಡಗನ್ನೂರು ಕುದ್ಕಾಡಿ ಗುರುಪ್ರಸಾದ್ ರೈ ಯವರ ಮನೆಗೆ ಸೆ.07ರ ಮುಂಜಾನೆ ನುಗ್ಗಿದ ಮುಸುಕುಧಾರಿ ದರೋಡೆಕೋರರ ಗುಂಪು ಮನೆಯಲ್ಲಿದ್ದವರನ್ನು ಕಟ್ಟಿಹಾಕಿ ಮನೆಯಲ್ಲಿದ್ದ ಹಣ ಮತ್ತು ಚಿನ್ನಾಭರಣಗಳನ್ನು ದೋಚಿ ಪರಾರಿಯಾದ ಘಟನೆಗೆ ಸಂಬಂಧಿಸಿದಂತೆ ಘಟನೆ ನಡೆದ ಮನೆಗೆ ನಿನ್ನೆ ರಾತ್ರಿ (ಸೆ.07) ಅರುಣ್ ಕುಮಾರ್ ಪುತ್ತಿಲ ಭೇಟಿ ನೀಡಿದರು.

ಈ ಸಂದರ್ಭದಲ್ಲಿಗುರುಪ್ರಸಾದ್ ರೈ ಮತ್ತು ಅವರ ತಾಯಿಯೊಂದಿಗೆ ಮಾತನಾಡಿದ ಪುತ್ತಿಲ ಅವರು ಮನೆಮಂದಿಗೆ ಧೈರ್ಯ ತುಂಬಿದರು. 

ಪುತ್ತೂರಿನ ಗ್ರಾಮಾಂತರ ಭಾಗದ ಹಲವು ಕಡೆಗಳಲ್ಲಿ ರಾತ್ರಿ ದರೋಡೆ ಪ್ರಕರಣಗಳು ನಡೆಯುತ್ತಿದ್ದು, ಪೊಲೀಸರು ಗ್ರಾಮಾಂತರ ಭಾಗದಲ್ಲಿರಾತ್ರಿ ಬೀಟ್ ವ್ಯವಸ್ಥೆ ಮಾಡಿ ಜನಸಾಮಾನ್ಯರಿಗೆ ಸೂಕ್ತ ರಕ್ಷಣೆ ನೀಡಬೇಕು ಮತ್ತು ಈ ಪ್ರಕರಣದ ಆರೋಪಿಗಳನ್ನು ಶೀಘ್ರ ಬಂಧಿಸಬೇಕು ಎಂದು ಇದೇ ಸಂದರ್ಭದಲ್ಲಿ ಪುತ್ತಿಲ ಪರಿವಾರ ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದೆ.

ಕೈಯಿಲ್ಲದಿದ್ದರು 3 ಪದಕ ಗೆದ್ದ ಶೀತಲ್ ದೇವಿ ಭೇಟಿಯಾದ ಪ್ರಧಾನಿ ಮೋದಿ

Posted by Vidyamaana on 2023-11-02 20:12:02 |

Share: | | | | |


ಕೈಯಿಲ್ಲದಿದ್ದರು 3 ಪದಕ ಗೆದ್ದ ಶೀತಲ್ ದೇವಿ ಭೇಟಿಯಾದ ಪ್ರಧಾನಿ ಮೋದಿ

ನವದೆಹಲಿ: ಚೀನಾದ ಹ್ಯಾಂಗ್‌ಝೌನಲ್ಲಿ ಇತ್ತೀಚೆಗೆ ನಡೆದ ಪ್ಯಾರಾ ಏಷ್ಯನ್ ಗೇಮ್ಸ್‌ನಲ್ಲಿ ಮೂರು ಪದಕಗಳನ್ನು ಗೆದ್ದು ಇತಿಹಾಸ ನಿರ್ಮಿಸಿದ 16 ವರ್ಷದ ಬಿಲ್ಲುಗಾರ್ತಿ ಶೀತಲ್ ದೇವಿ ಅವರನ್ನು ಪ್ರಧಾನಿ ನರೇಂದ್ರ ಮೋದಿ ಭೇಟಿ ಮಾಡಿದ್ದಾರೆ.ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಈ ಕುರಿತು ಟ್ವಿಟರ್ (ಎಕ್ಸ್‌)ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.ಪೂರ್ಣ ನಂಬಿಕೆಯ ಆಶೀರ್ವಾದಗಳು ಎಂದು ಪೋಸ್ಟ್‌ಗೆ ಶೀರ್ಷಿಕೆ ನೀಡಿದ್ದಾರೆ. ಕೈಯಿಲ್ಲದ ಶೀತಲ್ ದೇವಿ ತನ್ನ ಕಾಲುಗಳ ಬಳಸಿ ಬಿಲ್ಲುಹಿಡಿದು ಗುರಿಯತ್ತ ಬಾಣಗಳ ಹೊಡೆದಿದ್ದರು. ಈಕೆ ಕಾಲುಗಳ ಬಳಸಿದ್ದ ವಿಶ್ವದ ಏಕೈಕ ಬಿಲ್ಲುಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.



ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯ ಲೋಯಿ ಧಾರ್ ಎಂಬ ದೂರದ ಹಳ್ಳಿಯಿಂದ ಬಂದ ಶೀತಲ್ ದೇವಿ ಅವರು ಅಪರೂಪದ ಕಾಯಿಲೆಯಾದ ಫೋಕೊಮೆಲಿಯಾದೊಂದಿಗೆ ಜನಿಸಿದರು, ಇದು ಅಪಕ್ವ ಅಂಗಗಳಿಗೆ ಕಾರಣವಾಗುತ್ತದೆ. ಹೀಗಿದ್ದರೂ ಚಲಬಿಡದ ಛಲಬಿಡದೆ ಆಕೆ ಪ್ಯಾರಾ ಏಷ್ಯನ್ ಗೇಮ್ಸ್‌ನಲ್ಲಿ ಭಾಗಿಯಾಗಿ ಪದಕ ಗೆದ್ದಿದ್ದಾರೆ.2019 ರಲ್ಲಿ ಕಿಶ್ತ್ವಾರ್‌ನಲ್ಲಿ ನಡೆದ ಯುವ ಕ್ರೀಡಾಕೂಟದಲ್ಲಿ ಭಾರತೀಯ ಸೇನೆಯು ಆಕೆಯನ್ನು ಗುರುತಿಸಿತ್ತು. ಆರಂಭದಲ್ಲಿ ಆಕೆಗೆ ಪ್ರಾಸ್ಥೆಟಿಕ್ ತೋಳನ್ನು ಪಡೆಯುವ ಯೋಜನೆ ಇತ್ತು, ಆದರೆ ಅದು ಕಾರ್ಯರೂಪಕ್ಕೆ ಬರದಿದ್ದಾಗ, ಅವಳನ್ನು ಬಿಲ್ಲುಗಾರಿಕೆಗೆ ಪರಿಚಯಿಸಲಾಯಿತು. ಆರಂಭಿಕ ಅಡೆತಡೆಗಳ ಹೊರತಾಗಿಯೂ, ಶೀತಲ್ ಅವರು ಬಿಲ್ಲುಗಳನ್ನು ಸರಿಯಾಗಿ ಎತ್ತಿಕೊಳ್ಳಲು ತಿಂಗಳುಗಟ್ಟಲೆ ಅಭ್ಯಾಸ ಮಾಡಿದ್ದರು.

ಪುತ್ತೂರು : ಡಾ. ಎಂ.ಕೆ.ಪ್ರಸಾದ್ ಅವರ ಮನೆಗೆ ಭೇಟಿ ನೀಡಿದ ಸತ್ಯಜಿತ್ ಸುರತ್ಕಲ್

Posted by Vidyamaana on 2024-02-10 10:13:08 |

Share: | | | | |


ಪುತ್ತೂರು : ಡಾ. ಎಂ.ಕೆ.ಪ್ರಸಾದ್ ಅವರ ಮನೆಗೆ ಭೇಟಿ ನೀಡಿದ ಸತ್ಯಜಿತ್ ಸುರತ್ಕಲ್

ಪುತ್ತೂರು : ಲೋಕಸಭಾ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಿಂದ ಟಿಕೆಟ್ ಗೆ ಆಗ್ರಹಿಸುತ್ತಿರುವ ಸತ್ಯಜಿತ್ ಸುರತ್ಕಲ್ ಅವರು ಖ್ಯಾತ ವೈದ್ಯ ಡಾ.ಎಂ.ಕೆ. ಪ್ರಸಾದ್ ಅವರ ಮನೆಗೆ ಭೇಟಿ ನೀಡಿದರು.


ಪುತ್ತೂರಿನಲ್ಲಿ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡ ಅವರು ಬಳಿಕ ಡಾ.ಎಂ.ಕೆ. ಪ್ರಸಾದ್ ಅವರ ಮನೆಯಲ್ಲಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

ಮಾಜಿ ಮಾಡೆಲ್ ದಿವ್ಯಾ ಪಹುಜಾ ಹತ್ಯೆ ; ಕಾಲುವೆಯಲ್ಲಿ ಆಕೆಯ ಮೃತದೇಹ ಪತ್ತೆ

Posted by Vidyamaana on 2024-01-14 04:01:25 |

Share: | | | | |


ಮಾಜಿ ಮಾಡೆಲ್ ದಿವ್ಯಾ ಪಹುಜಾ ಹತ್ಯೆ ; ಕಾಲುವೆಯಲ್ಲಿ ಆಕೆಯ ಮೃತದೇಹ ಪತ್ತೆ

ಹರಿಯಾಣ, ಜ 14: ಹರಿಯಾಣದ ಗುರುಗ್ರಾಮ್‌ನ ಹೋಟೆಲ್‌ವೊಂದರಲ್ಲಿ ಹತ್ಯೆಗೀಡಾದ ಮಾಜಿ ಮಾಡೆಲ್ ದಿವ್ಯಾ ಪಹುಜಾ ಮೃತದೇಹವು ಫತೇಹಾಬಾದ್ ಜಿಲ್ಲೆಯ ಕಾಲುವೆಯಲ್ಲಿ ಪತ್ತೆಯಾಗಿದೆ. ಇಲ್ಲಿನ ತೋಹಾನಾದಲ್ಲಿರುವ ಭಾಕ್ರಾ ಕಾಲುವೆಯಿಂದ ಮೃತದೇಹವನ್ನು ಹೊರತೆಗೆಯಲಾಗಿದೆ ಎಂದು ಗುರುಗ್ರಾಮ್​ ಅಪರಾಧ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ವರುಣ್ ಕುಮಾರ್ ದಹಿಯಾ ತಿಳಿಸಿದ್ದಾರೆ.


ಜನವರಿ 2ರಂದು ಗುರುಗ್ರಾಮ್‌ನ ಹೋಟೆಲ್ ಕೊಠಡಿಯಲ್ಲಿ 27 ವರ್ಷದ ದಿವ್ಯಾ ಪಹುಜಾ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಅಶ್ಲೀಲ ಚಿತ್ರಗಳನ್ನಿಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡಿ ಹೋಟೆಲ್ ಮಾಲೀಕರಿಂದ ಹಣ ವಸೂಲಿ ಮಾಡಿದ್ದ ಕಾರಣಕ್ಕಾಗಿ ಕೊಲೆ ಮಾಡಲಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಆದರೆ, ದಿವ್ಯಾ ವಿರುದ್ಧ ಕೇಳಿ ಬಂದ ವಂಚನೆಯ ಆರೋಪವನ್ನು ಈಗಾಗಲೇ ಸಂತ್ರಸ್ತೆಯ ಕುಟುಂಬವು ತಳ್ಳಿಹಾಕಿದೆ.ಮತ್ತೊಂದೆಡೆ, ಹೋಟೆಲ್​ನಲ್ಲಿ ದಿವ್ಯಾ ಪಹುಜಾ ಅವರನ್ನು ಕೊಲೆ ಮಾಡಿ ಮೃತದೇಹವನ್ನು ಅಲ್ಲಿಂದ ಸಾಗಿಸಲಾಗಿತ್ತು. ಶವ ಸಾಗಿಸುವ ದೃಶ್ಯಗಳು ಸಿಸಿಟಿವಿಯಲ್ಲೂ ಸೆರೆಯಾಗಿದ್ದವು. ಇದರ ಆಧಾರದ ಮೇಲೆ ಐವರು ಆರೋಪಿಗಳು ಈ ಹತ್ಯೆಯಲ್ಲಿ ಭಾಗಿಯಾಗಿದ್ದನ್ನು ಪೊಲೀಸರು ಪತ್ತೆ ಹಚ್ಚಿದ್ದರು. ಈ ಪೈಕಿ ಹೋಟೆಲ್ ಮಾಲೀಕ ಅಭಿಜೀತ್ ಸಿಂಗ್, ನೇಪಾಳ ಮೂಲದ ಹೇಮರಾಜ್ ಮತ್ತು ಪಶ್ಚಿಮ ಬಂಗಾಳದ ಓಂಪ್ರಕಾಶ್ ಎಂಬುವರನ್ನು ಬಂಧಿಸಿ ವಿಚಾರಣೆ ನಡೆಸಲಾಗಿದೆ. ಇದೀಗ ಸುಮಾರು 10 ದಿನಗಳ ಬಳಿಕ ದಿವ್ಯಾ ಪಹುಜಾ ಮೃತದೇಹ ಪತ್ತೆಯಾಗಿದೆ.ದಿವ್ಯಾ ಪಹುಜಾ ಜನವರಿ 1ರ ನಂತರ ಕುಟುಂಬಸ್ಥರ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಆ ದಿನ ಹೋಟೆಲ್ ಮಾಲೀಕ ಅಭಿಜೀತ್ ಭೇಟಿಯಾಗಲು ದಿವ್ಯಾ ಹೋಗಿದ್ದರು. ಮರು ದಿನ ಎಂದರೆ, ಜನವರಿ 2ರಂದು ಬೆಳಗ್ಗೆ 11.50ರ ಸುಮಾರಿಗೆ ಅವರೊಂದಿಗೆ ನಾನು ಕೊನೆಯದಾಗಿ ಮಾತನಾಡಿರುವುದಾಗಿ ಸಹೋದರಿ ನೈನಾ ಪಹುಜಾ ಹೇಳಿದ್ದರು. ಇದಾದ ಬಳಿಕ ಜನವರಿ 5ರಂದು ಹೋಟೆಲ್‌ನ ಕೊಠಡಿಯಲ್ಲಿ ರಕ್ತದ ಕಲೆಗಳು ಪತ್ತೆಯಾಗಿದ್ದವು. ಇದರಿಂದ ಅನುಮಾನಗೊಂಡ ಪರಿಶೀಲಿಸಿದಾಗ ಹೋಟೆಲ್​ನಲ್ಲಿ ದಿವ್ಯಾರ ಉಂಗುರ, ಬೂಟು ಮತ್ತು ಇತರ ವಸ್ತುಗಳು ಪತ್ತೆಯಾಗಿದ್ದವು ಎಂದು ಪೊಲೀಸರಿಗೆ ನೈನಾ ದೂರು ಕೊಟ್ಟಿದ್ದರು.


ಅಲ್ಲದೇ, ಗ್ಯಾಂಗ್​ಸ್ಟರ್​ ಸಂದೀಪ್ ಗಡೋಲಿ ಎಂಬಾತನ ಕೊಲೆ ಪ್ರಕರಣದಲ್ಲಿ ದಿವ್ಯಾ ಪ್ರಮುಖ ಸಾಕ್ಷಿಯಾಗಿದ್ದರು. ಈ ಪ್ರಕರಣದಲ್ಲಿ ದಿವ್ಯಾ ಅವರಿಗೆ ಜೀವ ಬೆದರಿಕೆ ಇತ್ತು. ಗ್ಯಾಂಗ್​ಸ್ಟರ್​ನ ಸಂಬಂಧಿಕರು ದಿವ್ಯಾ ಅವರನ್ನು ಕೊಲೆ ಮಾಡಲು ಅಭಿಜೀತ್‌ಗೆ ಹಣ ಕೊಟ್ಟು ಸುಪಾರಿ ನೀಡಿದ್ದಾರೆ ಎಂದು ನೈನಾ ಪಹುಜಾ ತನ್ನ ದೂರಿನಲ್ಲಿ ತಿಳಿಸಿದ್ದರು. ಇದರ ಆಧಾರದ ಮೇಲೆ ಪೊಲೀಸರು ತನಿಖೆ ಆರಂಭಿಸಿದ್ದರು.


ಆಗ ದಿವ್ಯಾ ಅವರನ್ನು ಕೊಂದ ನಂತರ ಅಭಿಜೀತ್ ಆಕೆಯ ಶವವನ್ನು ಎಳೆದುಕೊಂಡು ಹೋಗುತ್ತಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದನ್ನು ಪೊಲೀಸರು ಪತ್ತೆ ಹಚ್ಚಿದ್ದರು. ಅಲ್ಲದೇ, ಶವವನ್ನು ನೀಲಿ ಬಿಎಂಡಬ್ಲ್ಯು ಕಾರಿನಲ್ಲಿ ಸಾಗಿಸುತ್ತಿರುವ ದೃಶ್ಯಗಳು ದಾಖಲಾಗಿದ್ದವು. ಇದನ್ನು ಆಧರಿಸಿ ಪೊಲೀಸರು ಹೋಟೆಲ್ ಮಾಲೀಕ ಅಭಿಜೀತ್ ಸೇರಿ ಮೂವರನ್ನು ಬಂಧಿಸಿದ್ದರು.


2016ರ ಫೆಬ್ರವರಿ 6ರಂದು ಮುಂಬೈನಲ್ಲಿ ಗ್ಯಾಂಗ್​ಸ್ಟರ್​ ಸಂದೀಪ್ ಗಡೋಲಿಯನ್ನು ಹರಿಯಾಣ ಪೊಲೀಸರು ಶೂಟೌಟ್‌ ಮಾಡಿದ್ದರು. ಆದರೆ, ಇದೊಂದು ನಕಲಿ ಎನ್‌ಕೌಂಟರ್ ಎಂದು ಹೇಳಲಾಗಿದೆ. ಎದುರಾಳಿ ಗುಂಪಿನ ವೀರೇಂದ್ರ ಕುಮಾರ್ ಅಲಿಯಾಸ್ ಬಿಂದರ್ ಗುಜ್ಜರ್ ಹರಿಯಾಣ ಪೊಲೀಸ್ ಅಧಿಕಾರಿಗಳೊಂದಿಗೆ ಸೇರಿಕೊಂಡು ಗಡೋಲಿಯನ್ನು ಕೊಲೆ ಮಾಡುವ ಸಂಚು ರೂಪಿಸಿದ್ದರು ಎಂಬ ಆರೋಪವಿತ್ತು.


ಇದಕ್ಕಾಗಿ ದಿವ್ಯಾ ಪಹುಜಾ ಮೂಲಕ ಸಂದೀಪ್ ಗಡೋಲಿಯನ್ನು ಹನಿ ಟ್ರ್ಯಾಪ್‌ ಮಾಡಲಾಗಿತ್ತು ಎಂಬ ಆರೋಪದ ಇತ್ತು. ಈ ಸಂಬಂಧ ಮುಂಬೈ ಪೊಲೀಸರು ದಿವ್ಯಾ, ಆಕೆಯ ತಾಯಿ ಮತ್ತು ಐವರು ಪೊಲೀಸ್ ಸಿಬ್ಬಂದಿ ಸೇರಿ ಇತರರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು. ಅಲ್ಲದೇ, ದಿವ್ಯಾರನ್ನು ಬಂಧಿಸಿ ಜೈಲಿಗೆ ಹಾಕಲಾಗಿತ್ತು. ಸುಮಾರು ಏಳು ವರ್ಷಗಳ ನಂತರ ಎಂದರೆ, 2023ರ ಜೂನ್​ನಲ್ಲಿ ಬಾಂಬೆ ಹೈಕೋರ್ಟ್ ದಿವ್ಯಾ ಅವರಿಗೆ ಜಾಮೀನು ನೀಡಿತ್ತು.

Recent News


Leave a Comment: