ವಿವಾಹಿತ ಯುವಕನ ಜತೆ ವಿದ್ಯಾರ್ಥಿನಿ ಲವ್, ಕೆರೆಗೆ ಹಾರಿ ಇಬ್ಬರೂ ಆತ್ಮಹತ್ಯೆ!

ಸುದ್ದಿಗಳು News

Posted by vidyamaana on 2024-07-03 13:36:16 |

Share: | | | | |


ವಿವಾಹಿತ ಯುವಕನ ಜತೆ ವಿದ್ಯಾರ್ಥಿನಿ ಲವ್, ಕೆರೆಗೆ ಹಾರಿ ಇಬ್ಬರೂ ಆತ್ಮಹತ್ಯೆ!

ಬೆಂಗಳೂರು (ಜು.3): ಇಲ್ಲಿನ ಹೊರವಲಯದ ನೈಸ್ ರಸ್ತೆ ಸಮೀಪದ ಕೆರೆಗೆ ಹಾರಿ ಯುವ ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಕಾಲೇಜು ವಿದ್ಯಾರ್ಥಿನಿ ಅಂಜನಾ(20) ಮತ್ತು ಶ್ರೀಕಾಂತ್(25) ಸಾವನ್ನಪ್ಪಿರುವ ದುರ್ದೈವಿಗಳಾಗಿದ್ದಾರೆ. ಜುಲೈ 1ರಂದು ಪ್ರೇಮಿಗಳು ನಾಪತ್ತೆಯಾಗಿದ್ದರು.

ಕಳೆದ ಕೆಲ ವರ್ಷಗಳಿಂದ ಇಬ್ಬರು ಪರಸ್ಪರ ಪ್ರೀತಿಸ್ತಿದ್ದರು. ಆದರೆ ಯುವಜೋಡಿಯ ಪ್ರೀತಿಗೆ ವಿದ್ಯಾರ್ಥಿನಿ ಪೋಷಕರಿಂದ ವಿರೋಧ ವ್ಯಕ್ತವಾಗಿತ್ತು. ವಿದ್ಯಾರ್ಥಿನಿ ತಲಘಟ್ಟಪುರ ಸಮೀಪದ ಅಂಜನಾಪುರ ಬಳಿ ವಾಸವಿದ್ದಳು. ಯುವಕ ಶ್ರೀಕಾಂತ್ ಕೋಣನಕುಂಟೆ ನಿವಾಸಿಯಾಗಿದ್ದ. ಇಬ್ಬರೂ ನಾಪತ್ತೆಯಾಗಿದ್ದರು. ನಾಪತ್ತೆ ಹಿನ್ನಲೆ ಎರಡೂ ಕಡೆಯವರ ಪೋಷಕರು ಕೋಣನಕುಂಟೆ ಮತ್ತು ತಲಘಟ್ಟಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಇದೀಗ ಇಬ್ಬರೂ ಶವವಾಗಿ ಪತ್ತೆಯಾಗಿದ್ದಾರೆ. ನಮ್ಮ ಸಾವಿಗೆ ನಾವೇ ಕಾರಣ ಎಂದು ಡೆತ್ ನೋಟ್ ಬರೆದಿಟ್ಟು ಜೋಡಿ ಆತ್ಮಹತ್ಯೆ ಮಾಡಿಕೊಂಡಿದೆ.

ಮದುವೆಯಾಗಿದ್ದ ಶ್ರೀಕಾಂತ್!

ಶ್ರೀಕಾಂತ್ ಗೆ ಬೇರೊಬ್ಬರ ಜೊತೆಗೆ ವಿವಾಹವಾಗಿದೆ. ಆದರೂ ಅಂಜನಾಳನ್ನ ಪ್ರೀತಿ ಮಾಡ್ತಿದ್ದ. ಇಬ್ಬರು ಒಟ್ಟಿಗೆ ಬದುಕಲು ಅವಕಾಶ ಇಲ್ಲ ಎಂದು ಸಾಯೋ ನಿರ್ಧಾರ ಮಾಡಿದ್ದಾರೆ. ಮೊದಲು ಶ್ರೀಕಾಂತ್ ಮೃತದೇಹ ಕೆರೆಯಲ್ಲಿ ಕಾಣಿಸಿದೆ. ಆತನನ್ನ ಮೇಲೆತ್ತಿದ್ದ ನಂತರ ಅಂಜನಾ ಮೃತದೇಹ ಕೂಡ ಮೇಲೆ ಬಂದಿದೆ. ಅಂಜನಾ ಮೃತದೇಹದ ಬಗ್ಗೆ ಪೊಲೀಸರಿಗೂ ಮಾಹಿತಿ ಇರುದಿಲ್ಲ. ಇಬ್ಬರು ಕೈಗೆ ಹಗ್ಗ ಕಟ್ಟಿಕೊಂಡಿದ್ದರಿಂದ ಇಬ್ಬರ ಮೃತದೇಹ ಒಟ್ಟಿಗೆ ಸಿಕ್ಕಿದೆ. ಮೊಬೈಲ್ ನಲ್ಲಿ ವೀಡಿಯೊ ಮಾಡಿರುವ ಯುವತಿ ಅಂಜನಾ ಅದನ್ನ ಆಟೋದಲ್ಲಿ ಬಿಟ್ಟು ಶ್ರೀಕಾಂತ್ ಜೊತೆಗೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ನಮ್ಮ ಸಾವಿಗೆ ಯಾರು ಕಾರಣ ಅಲ್ಲ. ನಾವಿಬ್ಬರು ಒಟ್ಟಿಗೆ ಬದುಕಲು ಆಗಲ್ಲ. ಹಾಗಾಗಿ ಸಾಯ್ತಿದ್ದೇವೆ ಎಂದು ವಿಡಿಯೋ ಮಾಡಿದ್ದಾಳೆ. ಮೊಬೈಲ್ ವಶಕ್ಕೆ ಪಡೆದುಕೊಂಡಿರೊ ತಲಘಟ್ಟಪುರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

 Share: | | | | |


ಪೊಲೀಸ್ ಠಾಣೆಯಲ್ಲೇ ಪತ್ನಿಯ ಕೊಲೆಗೆ ಯತ್ನಿಸಿದ ಪತಿ

Posted by Vidyamaana on 2023-11-21 16:38:20 |

Share: | | | | |


ಪೊಲೀಸ್ ಠಾಣೆಯಲ್ಲೇ ಪತ್ನಿಯ ಕೊಲೆಗೆ ಯತ್ನಿಸಿದ ಪತಿ

ಹಾಸನ: ಪೊಲೀಸ್ ಠಾಣೆಯಲ್ಲೇ ವ್ಯಕ್ತಿಯೊಬ್ಬ ತನ್ನ ಪತ್ನಿಯ ಕೊಲೆಗೆ ಯತ್ನಿಸಿದ ಘಟನೆ ಹಾಸನದಲ್ಲಿ ಸೋಮವಾರ ನಡೆದಿದೆ.ಕಿರುಕುಳದಿಂದ ಬೇಸತ್ತು ಪತ್ನಿ ದೂರು ನೀಡಲು ಪೊಲೀಸ್ ಠಾಣೆಗೆ ಹೋಗಿದ್ದ ಸಂದರ್ಭದಲ್ಲಿ ಘಟನೆ ನಡೆದಿದೆ.ಹರೀಶ್​ (34) ಪ್ರಕರಣದ ಆರೋಪಿ. ಶಿಲ್ಪಾ ಗಂಡನಿಂದ ಹಲ್ಲೆಗೊಳಗಾದವರು. 


ಹರೀಶ್ ಮತ್ತು​ ಶಿಲ್ಪಾ ಕಳೆದ 6 ವರ್ಷಗಳ ಹಿಂದೆ ಮದುವೆಯಾಗಿದ್ದರು. ಹಾಸನದ ಕೈಗಾರಿಕಾ ಪ್ರದೇಶದ ಸಮೀಪವಿರುವ ಬಿಟ್ಟಗೌಡನಹಳ್ಳಿಯಲ್ಲಿ ವಾಸವಿದ್ದರು. ಪತ್ನಿ ವಿರುದ್ಧ ಆರೋಪಿ ಅನುಮಾನ ಪಡುತ್ತಿದ್ದ. ಈ ನಡೆಯನ್ನು ಪ್ರಶ್ನಿಸಿದರೆ ಹಲ್ಲೆ ಮಾಡುತ್ತಿದ್ದ. ಹೀಗೆ ಪ್ರತಿನಿತ್ಯದ ಕಿರುಕುಳದಿಂದ ನೊಂದ ಶಿಲ್ಪಾ ಕೊನೆಗೆ ಪೊಲೀಸ್ ಠಾಣೆಗೆ ದೂರು ನೀಡಲು ತೆರಳಿದ್ದರು.


ದೂರಿನಂತೆ ಪೊಲೀಸರು ಆರೋಪಿಯನ್ನು ಕರೆಯಿಸಿ ಬುದ್ಧಿ ಹೇಳಲು ಮುಂದಾಗಿದ್ದರು. ಈ ವೇಳೆ ಪಿಎಸ್‌ಐ ಉಮಾ ಅವರು ಹರೀಶ್​ನನ್ನು ವಿಚಾರಣೆ ಮಾಡುತ್ತಿದ್ದರು. ಇದರಿಂದ ಕುಪಿತನಾದ ಆತ ಪೊಲೀಸರೆದುರೇ ಪತ್ನಿಯ ಹತ್ಯೆ ಮುಂದಾದ. ತಾನು ಮೊದಲೇ ತಂದಿದ್ದ ಚಾಕುವಿನಿಂದ ಕುತ್ತಿಗೆ ಕೊಯ್ದಿದ್ದಾನೆ.ತಕ್ಷಣ ಪೊಲೀಸರು ಮಧ್ಯಪ್ರವೇಶಿಸಿ ಚಾಕು ಕಿತ್ತುಕೊಂಡಿದ್ದಾರೆ.


ಗಾಯಾಳು ಶಿಲ್ಪಾಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹರೀಶ್‌ ವಿರುದ್ಧ ಹಾಸನ ಮಹಿಳಾ ಪೊಲೀಸ್‌ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿದೆ.

ಕಟೀಲು ದೇವಳದ ಮುಂಭಾಗ ಹೊತ್ತಿ ಉರಿದ ಬಸ್

Posted by Vidyamaana on 2023-05-17 10:52:40 |

Share: | | | | |


ಕಟೀಲು ದೇವಳದ ಮುಂಭಾಗ ಹೊತ್ತಿ ಉರಿದ ಬಸ್

ಕಟೀಲು: ಶ್ರೀ ದುರ್ಗಾಪರಮೇಶ್ವರೀ ದೇವಳದ ಮುಂಭಾಗದಲ್ಲಿ  ಬಸ್ ಹೊತ್ತಿ ಉರಿದ ಘಟನೆ ಬುಧವಾರ ಮಧ್ಯಾಹ್ನ ವರದಿಯಾಗಿದೆ.

ಬೆಂಕಿಗೆ ಆಹುತಿಯಾದ ಬಸ್ ಎಂಆರ್‌ಪಿಯಲ್ ಗೆ ಸೇರಿದ್ದು ಎನ್ನಲಾಗಿದೆ. ಇದು ಕಟೀಲು ದೇವಸ್ಥಾನದ ಮುಂಭಾಗವಾಗಿ ಮಂಗಳೂರು ಕಡೆ ತೆರಳುತ್ತಿದ್ದ ಸಂದರ್ಭ ಬಸ್ ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ ಎಂದು ತಿಳಿದು ಬಂದಿದೆ.

ಘಟನೆಗೆ ಬಸ್ಸಿನಲ್ಲಿ ನಡೆದ ಶಾರ್ಟ್ ಸರ್ಕ್ಯೂಟ್ ಕಾರಣ ಎನ್ನಲಾಗಿದೆ. ತಕ್ಷಣ ಎಚ್ಚೆತ್ತುಕೊಂಡ ದೇವಸ್ಥಾನದ ಸಿಬ್ಬಂದಿ ಮತ್ತು ಸ್ಥಳೀಯರು ಬೆಂಕಿಯನ್ನು ನಂದಿಸುವಲ್ಲಿ ಸಫಲರಾಗಿದ್ದು ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.


ಬೆಳ್ತಂಗಡಿ : ಉಜಿರೆಯ ಖಾಸಗಿ ಲಾಡ್ಜ್ ನಲ್ಲಿ ಶಿವಮೊಗ್ಗ ಮೂಲದ ಕಾರ್ತಿಕ್ ಆತ್ಮಹತ್ಯೆ

Posted by Vidyamaana on 2023-06-29 09:17:37 |

Share: | | | | |


ಬೆಳ್ತಂಗಡಿ : ಉಜಿರೆಯ ಖಾಸಗಿ ಲಾಡ್ಜ್ ನಲ್ಲಿ ಶಿವಮೊಗ್ಗ ಮೂಲದ ಕಾರ್ತಿಕ್ ಆತ್ಮಹತ್ಯೆ

ಬೆಳ್ತಂಗಡಿ : ಶಿವಮೊಗ್ಗದ ಅವಿವಾಹಿತ ಯುವಕನೊಬ್ಬ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಉಜಿರೆಯ ಖಾಸಗಿ ಲಾಡ್ಜ್ ನ ರೂಂನಲ್ಲಿ ನಡೆದಿದೆ.ಜೂನ್ 26 ರಂದು ಶಿವಮೊಗ್ಗ ಜಿಲ್ಲೆಯ ಅವಿವಾಹಿತ ಯುವಕ ಕಾರ್ತಿಕ್ (29) ಎಂಬಾತ ಉಜಿರೆಯ ಖಾಸಗಿ ಲಾಡ್ಜ್ ನಲ್ಲಿ ರೂಂ ಬುಕ್ ಮಾಡಿದ್ದು. ರೂಂ ನಂಬರ್ 303 ರಲ್ಲಿ ರೂಂ ಪಡೆದುಕೊಂಡು ಉಳಿದುಕೊಂಡಿದ್ದು. ಜೂನ್ 28 ರಂದು ರೂಂ ಒಳಗೆ ಹಗ್ಗವನ್ನು ಪ್ಯಾನ್ ಗೆ ಹಾಕಿ ಪ್ಲಾಸ್ಟಿಕ್ ಚೆಯರ್ ನಲ್ಲಿ ನಿಂತುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಜೂನ್ 29 (ಇಂದು) ರೂಂ ನಿಂದ ಕಾರ್ತಿಕ್ ಹೊರಬಾರದೆ ಇದ್ದಾಗ ಲಾಡ್ಜ್ ಸಿಬ್ಬಂದಿ ಬಾಗಿಲು ಎಷ್ಟೇ ಬಡಿದರು  ಒಳಗಡೆಯಿಂದ ಮಾತನಾಡದೇ ಇದ್ದಾಗ ಅನುಮಾನದಿಂದ ಬೆಳ್ತಂಗಡಿ ಪೊಲೀಸರಿಗೆ ಮಾಹಿತಿ ನೀಡಿದ್ದು. ಅದರಂತೆ ಬೆಳ್ತಂಗಡಿ ಸಬ್ ಇನ್ಸ್ಪೆಕ್ಟರ್ ಆನಂದ್ ಮತ್ತು ತಂಡ ಲಾಡ್ಜ್ ಗೆ ತೆರಳಿ ಬಾಗಿಲು ಮುರಿದು ಒಳಹೋದಾಗ ಆತ್ಮಹತ್ಯೆ ಮಾಡಿಕೊಂಡಿದ್ದು ಬೆಳಕಿಗೆ ಬಂದಿದೆ.ಆತ್ಮಹತ್ಯೆ ಮಾಡಿಕೊಂಡ ಕಾರ್ತಿಕ್ ಮನೆಯ ವಿಳಾಸ ಪತ್ತೆಯಾಗಿದ್ದು ಮನೆಯವರನ್ನು ಬೆಳ್ತಂಗಡಿ ಪೊಲೀಸರು ಸಂಪರ್ಕಿಸಿದ್ದು. ಸಂಜೆ ವೇಳೆಗೆ ಕಾರ್ತಿಕ್ ಮನೆಯವರು ಪೊಲೀಸ್ ಠಾಣೆಗೆ ತಲುಪಲಿದ್ದಾರೆ. ಶವವನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಯ ಶವಗಾರಕ್ಕೆ ಸಾಗಿಸಲಾಗಿದೆ. ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪತ್ರಕರ್ತರಿಗೆ ಉಚಿತ ಬಸ್ ಪಾಸ್ ಘೋಷಣೆ: ರಾಮಲಿಂಗಾರೆಡ್ಡಿಗೆ ಕೆಯುಡಬ್ಲ್ಯೂಜೆ ವತಿಯಿಂದ ಸನ್ಮಾನ

Posted by Vidyamaana on 2024-02-23 15:05:42 |

Share: | | | | |


ಪತ್ರಕರ್ತರಿಗೆ ಉಚಿತ ಬಸ್ ಪಾಸ್ ಘೋಷಣೆ: ರಾಮಲಿಂಗಾರೆಡ್ಡಿಗೆ ಕೆಯುಡಬ್ಲ್ಯೂಜೆ ವತಿಯಿಂದ ಸನ್ಮಾನ

ಬೆಂಗಳೂರು: ರಾಜ್ಯ ಬಜೆಟ್​ನಲ್ಲಿ ರಾಜ್ಯದ ಪತ್ರಕರ್ತರಿಗೆ ಉಚಿತ ಗ್ರಾಮೀಣ ಬಸ್​ ಪಾಸ್ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ಸಾರಿಗೆ ಸಚಿವ‌ ರಾಮಲಿಂಗಾರೆಡ್ಡಿ‌ ಅವರನ್ನು ವಿಧಾನಸೌಧದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (ಕೆಯುಡಬ್ಲ್ಯೂಜೆ)ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರು ಸನ್ಮಾನಿಸಿದರು.


ಈ ಸಂದರ್ಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ, ಬೆಂಗಳೂರು ನಗರ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ನರೇಂದ್ರ ಪಾರೆಕಟ್, ಜಿಲ್ಲಾ ಘಟಕದ ಉಪಾಧ್ಯಕ್ಷ ಕೆ.ಎಂ. ಜಿಕ್ರಿಯಾ ಉಪಸ್ಥಿತರಿದ್ದರು.


ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು ದಾವಣಗೆರೆಯಲ್ಲಿ ಹಮ್ಮಿಕೊಂಡಿದ್ದ 38 ನೇ ರಾಜ್ಯ ಪತ್ರಕರ್ತರ ಸಮ್ಮೇಳನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸಾರಿಗೆ ಸಚಿವರಾದ ರಾಮಲಿಂಗಾ ರೆಡ್ಡಿಯವರು ಕೆಯುಡಬ್ಲ್ಯೂಜೆ ಬೇಡಿಕೆಗೆ ಸ್ಪಂದಿಸಿ ಭರವಸೆ ನೀಡಿದ್ದರು.

ಮೃತ ಕಾಂಗ್ರೆಸ್ ಕಾರ್ಯಕರ್ತನ ಮನೆಗೆ ಶಾಸಕ ಅಶೋಕ್ ರೈ ಭೇಟಿ

Posted by Vidyamaana on 2024-01-26 18:40:39 |

Share: | | | | |


ಮೃತ ಕಾಂಗ್ರೆಸ್ ಕಾರ್ಯಕರ್ತನ ಮನೆಗೆ ಶಾಸಕ ಅಶೋಕ್ ರೈ ಭೇಟಿ

ಪುತ್ತೂರು: ಜ.25 ರಂದು ಮೃತಪಟ್ಟ ಅರಿಯಡ್ಕ ಗ್ರಾಮದ ಕುಂಜೂರು ಪನೆಕ್ಕಲ್ ನಿವಾಸಿ ರವೀಂದ್ರ ಮಣಿಯಾಣಿಯವರ ಮನೆಗೆ ಶಾಸಕರಾದ ಅಶೋಕ್ ರೈ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು.

ರವೀಂದ್ರ ಅವರ ಕುಟುಂಬಕ್ಕೆ ಸಾಂತ್ವನ ಹೇಳಿದ ಶಾಸಕರು ಸಂಕಷ್ಟದಲ್ಲಿರುವ ಕುಟುಂಬಕ್ಕೆ ಆರ್ಥಿಕ ನೆರವು ನೀಡಿ.ಮೃತ ಕಾರ್ಯ ಕರ್ತನ ಮಕ್ಕಳ ವಿದ್ಯಾಬ್ಯಾಸಕ್ಕೆ ನೆರವು ನೀಡುವುದಾಗಿ ಶಾಸಕರು ತಿಳಿಸಿದರು.

ನಾಪತ್ತೆಯಾಗಿದ್ದ ವಿದ್ಯಾರ್ಥಿ ಅಂಕಿತ್ ನಾಯಕ್ ಬೆಂಗಳೂರಿನಲ್ಲಿ ಪತ್ತೆ

Posted by Vidyamaana on 2023-06-26 17:14:25 |

Share: | | | | |


ನಾಪತ್ತೆಯಾಗಿದ್ದ ವಿದ್ಯಾರ್ಥಿ ಅಂಕಿತ್ ನಾಯಕ್ ಬೆಂಗಳೂರಿನಲ್ಲಿ ಪತ್ತೆ

ವಿಟ್ಲ: ನಾಪತ್ತೆಯಾಗಿದ್ದ ವಿದ್ಯಾರ್ಥಿ ಅಂಕಿತ್ ನಾಯಕ್ (17) ಬೆಂಗಳೂರಿನಲ್ಲಿ ಪತ್ತೆಯಾಗಿದ್ದಾನೆ ಎಂದು ತಿಳಿದುಬಂದಿದೆ.

ಮಂಜೇಶ್ವರ ಠಾಣಾ ವ್ಯಾಪ್ತಿಯ ಅನಂತಗಿರಿ ನಿವಾಸಿ, ಅಡ್ಯನಡ್ಕ ಜೂನಿಯರ್ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿ ಅಂಕಿತ್ ನಾಯಕ್ (17) ನಾಪತ್ತೆಯಾಗಿದ್ದ ಬಾಲಕ. ಭಾನುವಾರ ಸಂಜೆಯಿಂದ ಬಾಲಕ ನಾಪತ್ತೆಯಾಗಿದ್ದು, ಮಂಜೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಬಾಲಕ ಪತ್ತೆಯಾಗಿದ್ದಾನೆ ಎಂದು ತಿಳಿದುಬಂದಿದೆ.



Leave a Comment: