ಎಸ್ ಪಿ ಆವರಣದಲ್ಲೇ ಪತ್ನಿಯನ್ನು ಇರಿದು ಕೊಂದ ಪೊಲೀಸ್ ಕಾನ್‌ಸ್ಟೇಬಲ್

ಸುದ್ದಿಗಳು News

Posted by vidyamaana on 2024-07-01 12:44:53 |

Share: | | | | |


ಎಸ್ ಪಿ ಆವರಣದಲ್ಲೇ ಪತ್ನಿಯನ್ನು ಇರಿದು ಕೊಂದ ಪೊಲೀಸ್ ಕಾನ್‌ಸ್ಟೇಬಲ್

ಹಾಸನ: ಪೊಲೀಸ್‌ ಕಾನ್‌ಸ್ಟೇಬಲ್‌ (Police Constable) ಒಬ್ಬ ತನ್ನ ಪತ್ನಿಯನ್ನು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳ (SP) ಕಚೇರಿ ಆವರಣದಲ್ಲೇ ಇರಿದು (Stabbed) ಕೊಂದುಹಾಕಿದ (Murder Case) ಘಟನೆ ಹಾಸನದಲ್ಲಿ ನಡೆದಿದೆ.ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಈ ಕಾನ್‌ಸ್ಟೇಬಲ್‌, ಪತ್ನಿಗೆ ಚಾಕುವಿನಿಂದ ಇರಿದಿದ್ದಾನೆ.

ಕಳೆದ ನಾಲ್ಕೈದು ದಿನಗಳಿಂದ ಗಂಡ-ಹೆಂಡತಿ ನಡುವೆ ಜಗಳ ನಡೆದಿತ್ತು. ಪೊಲೀಸ್ ಗಂಡನ ವಿರುದ್ಧ ದೂರು ನೀಡಲೆಂದು ಪತ್ನಿ ಮಮತಾ(37) ಹಾಸನದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಗೆ ಆಗಮಿಸಿದ್ದರು. ಇದೇ ವೇಳೆ, ಹಿಂಬಾಲಿಸಿ ಬಂದಿದ್ದ ಲೋಕನಾಥ್ ಹಾಸನ ಎಸ್ಪಿ ಕಚೇರಿ ಎದುರಲ್ಲೇ ಪತ್ನಿಯ ಎದೆಗೆ ಚಾಕುವಿನಿಂದ ಇರಿದು ಪರಾರಿಯಾಗಲು ಯತ್ನಿಸಿದ್ದಾನೆ.‌

ಮಹಿಳೆಯನ್ನು ಕೂಡಲೇ ಪೊಲೀಸರು ಆಸ್ಪತ್ರೆಗೆ ಒಯ್ದಿದ್ದು ಅಷ್ಟರಲ್ಲಿ ಸಾವು ಕಂಡಿದ್ದಾಳೆ.‌ ಆರೋಪಿ ಪತಿ ಲೋಕನಾಥ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹಾಸನ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

 Share: | | | | |


ಅಡ್ಕಸ್ಥಳ : ಕೆ.ಎಸ್.ಆರ್.ಟಿ.ಸಿ ಬಸ್ ಹಾಗೂ ಪಿಕಪ್ ವಾಹನದ ನಡುವೆ ಅಪಘಾತ

Posted by Vidyamaana on 2023-09-26 13:02:56 |

Share: | | | | |


ಅಡ್ಕಸ್ಥಳ : ಕೆ.ಎಸ್.ಆರ್.ಟಿ.ಸಿ ಬಸ್ ಹಾಗೂ ಪಿಕಪ್ ವಾಹನದ ನಡುವೆ ಅಪಘಾತ

ಕಾಸರಗೋಡು: ರಸ್ತೆ ಬದಿ ನಿಲ್ಲಿಸಿದ್ದ ಪಿಕಪ್ ಗೆ ಕೆಎಸ್ಸಾರ್ಟಿಸಿ ಬಸ್ ಢಿಕ್ಕಿ ಹೊಡೆದ ಪರಿಣಾಮ ಪಿಕಪ್‌ ಚಾಲಕ ಮೃತ ಪಟ್ಟ ಘಟನೆ ಕೇರಳ ಕರ್ನಾಟಕ ಗಡಿ ಪ್ರದೇಶವಾದ ಅಡ್ಕಸ್ಥಳದ ಸಮೀಪ ಮಂಗಳವಾರ ನಡೆದಿದೆ.


ಮೃತ ಚಾಲಕನನ್ನು ಪೆರ್ಲ ಮಣಿಯಂಪಾರೆ ಪಜ್ಜನದ ಮುಸ್ತಫಾ ( 43) ಎಂದು ಗುರುತಿಸಲಾಗಿದೆ. ಬಸ್ ನ ಎದುರಿನಿಂದ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲೆತ್ನಿಸಿದಾಗ ರಸ್ತೆ ಬದಿ ನಿಲ್ಲಿಸಿದ್ದ ಅಡಿಕೆ ಗಿಡ ಸಾಗಾಟದ ಪಿಕಪ್ ಗೆ ಬಸ್ಸು ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.


ಘಟನೆಯಲ್ಲಿ ತಲೆಗೆ ಗಂಭೀರ ಗಾಯಗೊಂಡ ಮುಸ್ತಫಾ ಅವರನ್ನು ಮಂಗಳೂರಿನ ಆಸ್ಪತ್ರೆಗೆ ಕೊಂಡೊಯ್ದರೂ ಜೀವ ಉಳಿಸಲಾಗಲಿಲ್ಲ ಎಂದು ತಿಳಿದು ಬಂದಿದೆ.


ಪಿಕಪ್ ವ್ಯಾನ್ ನಲ್ಲಿದ್ದ ಇನ್ನೋರ್ವ ಗಾಯಗೊಂಡಿದ್ದು, ಬದಿಯಡ್ಕ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದಾರೆ.

ಕೋಟಿ – ಚೆನ್ನಯ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣ ಮುಂಭಾಗ ನೋ ಪಾರ್ಕಿಂಗ್

Posted by Vidyamaana on 2023-04-08 12:08:31 |

Share: | | | | |


ಕೋಟಿ – ಚೆನ್ನಯ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣ ಮುಂಭಾಗ ನೋ ಪಾರ್ಕಿಂಗ್

ಪುತ್ತೂರು: ಇತ್ತೀಚೆಗಷ್ಟೇ ಪುತ್ತೂರು ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣಕ್ಕೆ ಕೋಟಿ – ಚೆನ್ನಯ ಅವಳಿ ವೀರರ ಹೆಸರನ್ನು ನಾಮಕರಣ ಮಾಡಲಾಗಿದೆ. ಆ ಸಂದರ್ಭ ಬಸ್ ನಿಲ್ದಾಣ ಮುಂಭಾಗ ಹಾಕಲಾಗಿದ್ದ ನೋ ಪಾರ್ಕಿಂಗ್ ಬ್ಯಾರಿಕೇಡ್ ಇನ್ನೂ ತೆರವಾಗಿಲ್ಲ. ಪರಿಣಾಮ, ಬಸ್ ನಿಲ್ದಾಣಕ್ಕೆ ಆಗಮಿಸುವ ಪ್ರಯಾಣಿಕರು ಅನ್ಯಥಾ ಸಮಸ್ಯೆ ಎದುರಿಸುತ್ತಿದ್ದಾರೆ.

ಅರ್ಲಪದವು ಗುತ್ತಿಗೆದಾರ ವಿಜಯ್ ಕುಮಾರ್ ಆತ್ಮಹತ್ಯೆ

Posted by Vidyamaana on 2024-01-01 22:13:21 |

Share: | | | | |


ಅರ್ಲಪದವು ಗುತ್ತಿಗೆದಾರ ವಿಜಯ್ ಕುಮಾರ್ ಆತ್ಮಹತ್ಯೆ

ಪುತ್ತೂರು: ಪಾಣಾಜೆ ಗ್ರಾಮದ ಆರ್ಲಪದವು ನಿವಾಸಿ, ಮೇಸ್ತ್ರಿ ಕಂ ಗುತ್ತಿಗೆದಾರ ವಿಜಯ್ ಕುಮಾರ್ (38 ವ.) ಸೋಮವಾರ ಸಂಜೆ ಸ್ವಗೃಹದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಭಾನುವಾರ ಪುತ್ತೂರಿನಲ್ಲಿ ನಡೆದ ಮರಾಟಿ ಸಂಘದ ವಾರ್ಷಿಕ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು. ವಿಜಯ್ ಕುಮಾರ್ ಅವರಿಗೆ ವಿವಾಹ ನಡೆಸಲು ಮನೆಯವರು ಸಿದ್ಧತೆ ನಡೆಸಿಕೊಂಡಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ.

ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಪೊಲೀಸರು ಸ್ಥಳಕ್ಕೆ ಆಗಮಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮೃತರು ತಂದೆ ಶಿವಪ್ಪ ನಾಯ್ಕ, ತಾಯಿ ಲಲಿತಾ, ಅಣ್ಣ, ಅಕ್ಕಾ, ಕುಟುಂಬಸ್ಥರನ್ನು ಅಗಲಿದ್ದಾರೆ.

ಮಾರ್ಚ್ 24ರಂದು ಆಶ್ಲೇಷ ಬಲಿ, ಧಾರ್ಮಿಕ ಸಭೆ

Posted by Vidyamaana on 2023-03-21 07:26:17 |

Share: | | | | |


ಮಾರ್ಚ್ 24ರಂದು ಆಶ್ಲೇಷ ಬಲಿ, ಧಾರ್ಮಿಕ ಸಭೆ

ಪುತ್ತೂರು: ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಸಂಬಂಧಪಟ್ಟ ಬೊಳುವಾರಿನ ಸ್ಥಳದಲ್ಲಿ ಮಾರ್ಚ್ 24ರಂದು ಜನಜಾಗೃತಿ ಸಭೆ, ಆಶ್ಲೇಷ ಬಲಿ, ಧಾರ್ಮಿಕ ಸಭೆ, ಅರ್ಧ ಏಕಾಹ ಭಜನೆ ನಡೆಯಲಿದೆ ಎಂದು ಹಿಂಜಾವೇ ಮಂಗಳೂರು ವಿಭಾಗ ಸಹಸಂಚಾಲಕ ಅಜಿತ್ ರೈ ಹೊಸಮನೆ ಹೇಳಿದರು.

ಪ್ರೆಸ್ ಕ್ಲಬ್ಬಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಿಗ್ಗೆ ೬ರಿಂದ ಧಾರ್ಮಿಕ ಕಾರ್ಯಕ್ರಮ ಆರಂಭಗೊಳ್ಳಲಿದ್ದು, ಸಂಜೆ ೭ಕ್ಕೆ ಜನಜಾಗೃತಿ ಸಭೆ ಆಯೋಜಿಸಲಾಗಿದೆ. ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಕರಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ, ಪುತ್ತೂರು ಆದರ್ಶ ಆಸ್ಪತ್ರೆ ವೈದ್ಯ ಡಾ. ಎಂ.ಕೆ. ಪ್ರಸಾದ್ ಭಂಡಾರಿ ಅಧ್ಯಕ್ಷತೆ ವಹಿಸುವರು. ಧಾರ್ಮಿಕ ಮುಖಂಡ ವೇದಮೂರ್ತಿ ಕುಂಟಾರು ರವೀಶ ತಂತ್ರಿ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಹಿಂಜಾವೇ ಕರ್ನಾಟಕ ದಕ್ಷಿಣ ಪ್ರಾಂತ ಸಂಪರ್ಕ ಪ್ರಮುಖ್ ರವಿರಾಜ್ ಕಡಬ, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ್ ರಾನ್ ಸುಳ್ಳಿ ಮುಖ್ಯ ಅತಿಥಿಯಾಗಿರುವರು ಎಂದರು.

ಮಾರ್ಚ್ 24ರಂದು ಬೆಳಿಗ್ಗೆ 6ಕ್ಕೆ ಗಣಪತಿ ಹೋಮ ನಡೆಯಲಿದೆ. 7 ಗಂಟೆಗೆ ಅರ್ಧ ಏಕಾಹ ಭಜನೆ ಆರಂಭಗೊಳ್ಳಲಿದ್ದು, ಸಂಜೆ 6ಕ್ಕೆ ಆಶ್ಲೇಷ ಬಲಿ ಆರಂಭಗೊಳ್ಳಲಿದೆ. ಸಂಜೆ 7ಕ್ಕೆ ಜನಜಾಗೃತಿ ಸಭೆ ನಡೆಯಲಿದ್ದು, ರಾತ್ರಿ 8ಕ್ಕೆ ಪ್ರಸಾದ ವಿತರಣೆ, ಅನ್ನಸಂತರ್ಪಣೆ ಜರಗಲಿದೆ ಎಂದು ವಿವರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ತಾಲೂಕು ಸಂಚಾಲಕ ದಿನೇಶ್ ಪಂಜಿಗ, ಸದಸ್ಯ ಪುಷ್ಪರಾಜ್ ದರ್ಬೆ ಉಪಸ್ಥಿತರಿದ್ದರು.

ಪತ್ರಕರ್ತರಿಗೆ ಉಚಿತ ಬಸ್ ಪಾಸ್ ಘೋಷಣೆ: ರಾಮಲಿಂಗಾರೆಡ್ಡಿಗೆ ಕೆಯುಡಬ್ಲ್ಯೂಜೆ ವತಿಯಿಂದ ಸನ್ಮಾನ

Posted by Vidyamaana on 2024-02-23 15:05:42 |

Share: | | | | |


ಪತ್ರಕರ್ತರಿಗೆ ಉಚಿತ ಬಸ್ ಪಾಸ್ ಘೋಷಣೆ: ರಾಮಲಿಂಗಾರೆಡ್ಡಿಗೆ ಕೆಯುಡಬ್ಲ್ಯೂಜೆ ವತಿಯಿಂದ ಸನ್ಮಾನ

ಬೆಂಗಳೂರು: ರಾಜ್ಯ ಬಜೆಟ್​ನಲ್ಲಿ ರಾಜ್ಯದ ಪತ್ರಕರ್ತರಿಗೆ ಉಚಿತ ಗ್ರಾಮೀಣ ಬಸ್​ ಪಾಸ್ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ಸಾರಿಗೆ ಸಚಿವ‌ ರಾಮಲಿಂಗಾರೆಡ್ಡಿ‌ ಅವರನ್ನು ವಿಧಾನಸೌಧದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (ಕೆಯುಡಬ್ಲ್ಯೂಜೆ)ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರು ಸನ್ಮಾನಿಸಿದರು.


ಈ ಸಂದರ್ಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ, ಬೆಂಗಳೂರು ನಗರ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ನರೇಂದ್ರ ಪಾರೆಕಟ್, ಜಿಲ್ಲಾ ಘಟಕದ ಉಪಾಧ್ಯಕ್ಷ ಕೆ.ಎಂ. ಜಿಕ್ರಿಯಾ ಉಪಸ್ಥಿತರಿದ್ದರು.


ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು ದಾವಣಗೆರೆಯಲ್ಲಿ ಹಮ್ಮಿಕೊಂಡಿದ್ದ 38 ನೇ ರಾಜ್ಯ ಪತ್ರಕರ್ತರ ಸಮ್ಮೇಳನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸಾರಿಗೆ ಸಚಿವರಾದ ರಾಮಲಿಂಗಾ ರೆಡ್ಡಿಯವರು ಕೆಯುಡಬ್ಲ್ಯೂಜೆ ಬೇಡಿಕೆಗೆ ಸ್ಪಂದಿಸಿ ಭರವಸೆ ನೀಡಿದ್ದರು.

ನವೆಂಬರ್ 25– 26ರಂದು ಬೆಂಗಳೂರು ಕಂಬಳ: 125ಕ್ಕೂ ಅಧಿಕ ಜೋಡಿ ಕೋಣಗಳು ಭಾಗಿ:ಅಶೋಕ್ ಕುಮಾರ್ ರೈ

Posted by Vidyamaana on 2023-10-01 07:48:11 |

Share: | | | | |


ನವೆಂಬರ್ 25– 26ರಂದು ಬೆಂಗಳೂರು ಕಂಬಳ: 125ಕ್ಕೂ ಅಧಿಕ ಜೋಡಿ ಕೋಣಗಳು ಭಾಗಿ:ಅಶೋಕ್ ಕುಮಾರ್ ರೈ

ಮಂಗಳೂರು: ‘ಬೆಂಗಳೂರಿನ ಅರಮನೆ ಮೈದಾನದಲ್ಲಿ ಮುಂಬರುವ ನ.25 ಮತ್ತು 26ರಂದು ನಡೆಯಲಿರುವ ಕಂಬಳದಲ್ಲಿ 125 ಜೋಡಿಯಿಂದ 130 ಜೋಡಿ ಕೋಣಗಳು ಭಾಗವಹಿಸಲಿವೆ. ಈ ಕೋಣಗಳನ್ನು ನ. 23ರಂದು ಇಲ್ಲಿಂದ ಬೆಂಗಳೂರಿಗೆ ಮೆರವಣಿಗೆಯಲ್ಲಿ ಕೊಂಡೊಯ್ಯಲಾಗುತ್ತದೆ’ ಎಂದು ಬೆಂಗಳೂರು ಕಂಬಳ ಸಮಿತಿಯ ಅಧ್ಯಕ್ಷರೂ ಆಗಿರುವ ಶಾಸಕ ಅಶೋಕ ಕುಮಾರ್‌ ರೈ ತಿಳಿಸಿದರು.


ಬೆಂಗಳೂರು ಕಂಬಳಕ್ಕೆ ಕೋಣಗಳನ್ನು ಕೊಂಡೊಯ್ಯುವ ಕುರಿತು ಅವುಗಳನ್ನು ಸಾಕುವ ಯಜಮಾನರ ಜೊತೆ ಇಲ್ಲಿ ಶನಿವಾರ ಸಭೆ ನಡೆಸಿದ ಬಳಿಕ ಅವರು ಸುದ್ದಿಗಾರರ ಜೊತೆ ಮಾತನಾಡಿದರು.ಕಂಬಳ ಕೋಣಗಳನ್ನು ಸಾಕುವ 130 ಯಜಮಾನರು ಬೆಂಗಳೂರು ಕಂಬಳದಲ್ಲಿ ಭಾಗವಹಿಸಲು ಸಮ್ಮತಿಸಿದ್ದಾರೆ. ಕೋಣಗಳನ್ನು ಲಾರಿಗಳಲ್ಲಿ ಕೊಂಡೊಯ್ಯಲಾಗುತ್ತದೆ. ಪಶು ಆಂಬುಲೆನ್ಸ್‌ಗಳು ಹಾಗೂ ಪಶುವೈದ್ಯರು ಜೊತೆಯಲ್ಲೇ ಇರುತ್ತಾರೆ. ಬೆಂಗಾವಲು ವಾಹನಗಳನ್ನೂ ಒದಗಿಸಲಿದ್ದೇವೆ. ಮೆರವಣಿಗೆ ಮೂಲಕ ಸಾಗುವ ಈ ಕೋಣಗಳಿಗೆ ಹಾಸನದಲ್ಲಿ ಎರಡು ಗಂಟೆ ವಿಶ್ರಾಂತಿ ಒದಗಿಸಲಾಗುತ್ತದೆ. ಅಲ್ಲಿ ತುಳುಕೂಟದವರು ಈ ಕೋಣಗಳನ್ನು ಬರಮಾಡಿಕೊಳ್ಳಲಿದ್ದಾರೆ’ ಎಂದರು.


‘ಕೋಣಗಳಿಗೆ ಕಂಬಳಕ್ಕೆ ಮುನ್ನ ಒಂದು ದಿನದ ವಿಶ್ರಾಂತಿ ಸಿಗಲಿದೆ. ಕೋಣಗಳು ಹಾಗೂ ಅವುಗಳ ಯಜಮಾನರು ಉಳಿದುಕೊಳ್ಳುವುದಕ್ಕೆ ಬೆಂಗಳೂರಿನಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ. ಕೋಣಗಳಿಗೆ ಕುಡಿಯುವ ನೀರು ಹಾಗೂ ಮೇವುಗಳನ್ನೂ ಇಲ್ಲಿಂದಲೇ ಕೊಂಡೊಯ್ಯಲಾಗುತ್ತದೆ. ಕಂಬಳಕ್ಕೂ ನಾಲ್ಕೈದು ದಿನ ಮುನ್ನವೇ ತಜ್ಞರು ಕರೆ ಯೋಗ್ಯವಾಗಿದೆಯೇ ಎಂಬುದನ್ನು ಪರಿಕ್ಷಿಸಲಿದ್ದಾರೆ’ ಎಂದು ಮಾಹಿತಿ ನೀಡಿದರು.


ತಾರಾ ಮೆರುಗು: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಂಬಳವನ್ನು ಉದ್ಘಾಟಿಸಲು ಒಪ್ಪಿದ್ದಾರೆ. ಬೆಂಗಳೂರು ಕಂಬಳ ಸಮಿತಿಯ ಗೌರವಾಧ್ಯಕ್ಷರಾಗಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಸಹಿತ ಅನೇಕ ಸಚಿವರು, ಉನ್ನತ ಅಧಿಕಾರಿಗಳು ಭಾಗವಹಿಸಲಿದ್ದಾರೆ. ಬೆಂಗಳೂರು ಕಂಬಳದಲ್ಲಿ ತಾರಾ ಮೆರುಗು ಇರಲಿದೆ. ನಟಿ ಐಶ್ವರ್ಯ ರೈ ಹಾಗೂ ನಟ ರಜನಿಕಾಂತ್‌ ಅವರನ್ನು ಸಂಪರ್ಕಿಸಲಾಗಿದ್ದು, ಅವರೂ ಭಾಗವಹಿಸುವ ನಿರೀಕ್ಷೆ ಇದೆ.ಬಾಲಿವುಡ್‌ ಹಾಗೂ ಸ್ಯಾಂಡರ್‌ವುಡ್‌ನ ಖ್ಯಾತ ತಾರೆಯರು ಭಾಗವಹಿಸಲಿದ್ದಾರೆ. ನಟ ರಿಷಬ್‌ ಶೆಟ್ಟಿ, ಅನುಷ್ಕಾ ಶೆಟ್ಟಿ, ಸಂಗೀತ ನಿರ್ದೇಶಕ ಗುರುಕಿರಣ್‌ ಭಾಗವಹಿಸಲು ಒಪ್ಪಿದ್ದಾರೆ. ಈ ಕಂಬಳದ ನೇರ ಪ್ರಸಾರಕ್ಕೆ ಸ್ಪೋರ್ಟ್ಸ್ ಚಾನೆಲ್‌ಗಳು ಸಂಪರ್ಕಿಸಿವೆ’ ಎಂದರು.


‘ತಮ್ಮ ಹೆಸರಿನಲ್ಲಿ ಕಂಬಳ ಕೋಣ ಓಡಿಸುವಂತೆ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್‌, ಸಚಿವ ಡಾ.ಎಂ.ಸಿ.ಸುಧಾಕರ್‌ ಕೋರಿದ್ದರೆ. ಸಾಮಾನ್ಯವಾಗಿ ಕಂಬಳ ಕೋಣಗಳ ಮಾಲೀಕರು ತಮ್ಮ ಕೋಣಗಳನ್ನು ಬೇರೆಯವರ ಹೆಸರಿನಲ್ಲಿ ಒಡಿಸುವುದನ್ನು ಇಷ್ಟಪಡುವುದಿಲ್ಲ. ಅವರು ಒಪ್ಪಿದರೆ ಅವಕಾಶ ಕಲ್ಪಿಸುತ್ತೇವೆ’ ಎಂದು ತಿಳಿಸಿದರು.


‘ಕಂಬಳವನ್ನು 7 ಲಕ್ಷದಿಂದ 9 ಲಕ್ಷ ಮಂದಿ ವೀಕ್ಷಿಸುವ ನಿರೀಕ್ಷೆ ಇದೆ. ಅದಕ್ಕೆ ಪೂರಕ ಸೌಕರ್ಯಗಳನ್ನು ಕಲ್ಪಿಸುತ್ತಿದ್ದೇವೆ. 2 ಸಾವಿರ ಅತಿಗಣ್ಯರಿಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. 145 ಮೀ ಉದ್ದದ ಕಂಬಳದ ಕರೆ ನಿರ್ಮಿಸಲಾಗುತ್ತದೆ. ಸುಮಾರು 15 ಸಾವಿರ ಆಸನಗಳ ಗ್ಯಾಲರಿನಿರ್ಮಾಣವಾಗಲಿದೆ. 6 ಸಾವಿರ ವಾಹನಗಳ ನಿಲುಗಡೆಗೆ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಕರಾವಳಿಯ ಸೊಗಡನ್ನು ಬಿಂಬಿಸುವ 150ಕ್ಕೂ ಹೆಚ್ಚು ಪ್ರದರ್ಶನ ಮಳಿಗೆಗಳನ್ನು ಸ್ಥಾಪಿಸಲಾಗುತ್ತದೆ. ಅವುಗಳಲ್ಲಿ ಕರಾವಳಿ ಶೈಲಿಯ ಆಹಾರಗಳು, ಇಲ್ಲಿನ ಕರಕುಶಲ ಪರಿಕರಗಳು, ಇಲ್ಲಿನ ಆಹಾರ ಸಿದ್ಧ ತಿನಿಸುಗಳ ಮಾರಾಟಕ್ಕೆ ವ್ಯವಸ್ಥೆ ಕಲ್ಪಿಸಲಾಗುತ್ತದೆ’ ಎಂದರು.


‘ಕಾನೂನು ಚೌಕಟ್ಟಿನಡಿಯಲ್ಲೇ ಕಂಬಳ ನಡೆಯಲಿದ್ದು, ಈ ಕುರಿತ ಸುಪ್ರೀಂ ಕೋರ್ಟ್ ಆದೇಶ ಪಾಲನೆಗೂ ಆದ್ಯತೆ ನೀಡಲಿದ್ದೇವೆ. ಈ ಕಂಬಳಕ್ಕೆ ₹ 6 ಕೋಟಿ ವೆಚ್ಚವಾಗುವ ನಿರೀಕ್ಷೆ ಇದೆ. ಸರ್ಕಾರದಿಂದಲೂ ನೆರವು ಕೋರುತ್ತೇವೆ. ಕರಾವಳಿಯ ಈ ಕ್ರೀಡೆಗೆ ಜಗದ್ವಿಖ್ಯಾತವಾಗದಬೇಕು ಎಂಬ ಆಶಯ ನಮ್ಮದು. ಬೆಂಗಳೂರಿನಲ್ಲಿ 1 ಎಕರೆ ವಿಶಾಲ ಪ್ರದೇಶದಲ್ಲಿ ತುಳುಭವನ, ಪಿಲಿಕುಳದಲ್ಲಿ ಕಂಬಳ ಭವನ ನಿರ್ಮಿಸುವ ಉದ್ದೇಶವಿದ್ದು, ಈ ಕುರಿತು ಸರ್ಕಾರಕ್ಕೆ ಬೇಡಿಕೆ ಸಲ್ಲಿಸುತ್ತೇವೆ’ ಎಂದರು.


ತುಳು ಮತ್ತು ಕನ್ನಡ ಭಾಷೆಗಳೆರಡರಲ್ಲೂ ಕಂಬಳದ ಧಾಟಿಯಲ್ಲೇ ವೀಕ್ಷಕ ವಿವರಣೆ ನೀಡಲಾಗುತ್ತದೆ. ಭಾಗವಹಿಸುವ ಎಲ್ಲ ಕೋಣಗಳಿಗೂ ಮೆಡಲ್, ಅವುಗಳನ್ನು ಓಡಿಸಿದವರಿಗೆ ಪ್ರಮಾಣಪತ್ರ ನೀಡಲಿದ್ದೇವೆ. ಮೊದಲ ಬಹುಮಾನ ಗೆದ್ದ ಕೋಣಗಳಿಗೆ ಎರಡು ಪವನ್‌ (16 ಗ್ರಾಂ) ಚಿನ್ನ, ದ್ವಿತೀಯ ಸ್ಥಾನ ಪಡೆದ ಕೋಣಗಳಿಗೆ ಒಂದು ಪವನ್ (8 ಗ್ರಾಂ) ಚಿನ್ನ ನೀಡಲಿದ್ದೇವೆ’ ಎಂದು ಮಾಹಿತಿ ನೀಡಿದರು.


ದಕ್ಷಿಣ ಕನ್ನಡ ಜಿಲ್ಲಾ ಕಂಬಳ ಸಮಿತಿಯ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ, ‘ಯಜಮಾನರು ಕೋಣಗಳನ್ನು ಬಹಳ ಜತನವಾಗಿ ಸಾಕಿರುತ್ತಾರೆ. ಹಾಗಾಗಿ ಬೆಂಗಳೂರಿಗೆ ಅವುಗಳನ್ನು ಕೊಂಡೊಯ್ಯುವಾಗ ಸಮಸ್ಯೆ ಆಗದಂತೆ ನೋಡಿಕೊಳ್ಳುವಂತೆ ಕೋರಿದ್ದಾರೆ. ಸಮಿತಿ ವ್ಯವಸ್ಥೆ ಕಲ್ಪಿಸಲಿದೆ’ ಎಂದರು.


ದ.ಕ. ಜಿಲ್ಲಾ ಕಂಬಳ ಸಮಿತಿಯ ಗೌರವಾಧ್ಯಕ್ಷ ಬಾರ್ಕೂರು ಶಾಂತಾರಾಮ ಶೆಟ್ಟಿ, ಪದಾಧಿಕಾರಿಗಳಾದ ಚಂದ್ರಹಾಸಸಾಧು ಸನಿಲ್, ವಿಜಯ ಕುಮಾರ್ ಜೈನ್‌, ಮುರಳೀಧರ ರೈ, ರೋಹಿತ್‌ ಹೆಗ್ಡೆ, ಲೋಕೇಶ್‌ ಶೆಟ್ಟಿ ಮುಚ್ಚೂರು ಮತ್ತಿತರರು ಇದ್ದರು.



Leave a Comment: