ಉಳ್ಳಾಲ ಖಾಝಿ ಸೈಯ್ಯದ್ ಫಝಲ್ ಕೋಯಮ್ಮ ತಂಙಳ್ ನಿಧನ

ಸುದ್ದಿಗಳು News

Posted by vidyamaana on 2024-07-08 11:07:30 | Last Updated by Vidyamaana on 2024-07-08 11:07:30

Share: | | | | |


ಉಳ್ಳಾಲ ಖಾಝಿ ಸೈಯ್ಯದ್ ಫಝಲ್ ಕೋಯಮ್ಮ ತಂಙಳ್ ನಿಧನ

ಮಂಗಳೂರು(ಇಟ್ಟಿಕುಳಂ): ಉಳ್ಳಾಲ ಖಾಝಿ ಸಯ್ಯದ್ ಫಝಲ್ ಕೋಯಮ್ಮ ತಂಜಳ್ ನಿಧನರಾಗಿದ್ದಾರೆ. ಕಣ್ಣೂರಿನ ಇಟ್ಟಿಕುಳಂ ನಿವಾಸಿಯಾಗಿರುವ ಹಾಗೂ ಉಳ್ಳಾಲ ಖಾಝಿಯಾಗಿದ್ದ ಇವರು ಕೂರ ತಂಜಳ್ ಎಂದೇ ಪ್ರಸಿದ್ದರಾಗಿದ್ದರು. ಅಲ್ಪಕಾಲದಿಂದ ಅನಾರೋಗ್ಯದಿಂದಿದ್ದ ಅವರು ಇಂದು ಬೆಳಿಗ್ಗೆ ನಿಧರಾಗಿದ್ದಾರೆ.

ಮೃತರು ಪತ್ನಿ ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗ ಮತ್ತು ಅಭಿಮಾನಿಗಳನ್ನು ಅಗಲಿದ್ದಾರೆ. ಇಂದು ರಾತ್ರಿ 9

ಗಂಟೆ ವೇಳೆಗೆ ಕೂರ ಮಸೀದಿ ವಠಾರದಲ್ಲಿ ದಫನ ಕಾರ್ಯ ನಡೆಯಲಿದೆ ಎಂದು ಮೂಲಗಳು ತಿಳಿಸಿದೆ. ಸುಲ್ತಾನುಲ್ ಉಲಮಾ ಎ ಪಿ ಅಬೂಬಕ್ಕರ್ ಮುಸ್ಲಿಯಾರ್ ಇಂದು ಸಂಜೆ 5 ಗಂಟೆಗೆ ಕೂರ ಮಸೀದಿಯಲ್ಲಿ ನಡೆಯಲಿರುವ ಜನಾಝಾನಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿದು ಬಂದಿದೆ.

 Share: | | | | |


ಪುತ್ತೂರು : ನೆಹರುನಗರದಲ್ಲಿ ರೈಲ್ವೇ ಮೇಲ್ವೇತುವೆ ಪುನರ್‌ನಿರ್ಮಾಣ ಹಿನ್ನೆಲೆ

Posted by Vidyamaana on 2023-11-16 13:26:14 |

Share: | | | | |


ಪುತ್ತೂರು : ನೆಹರುನಗರದಲ್ಲಿ ರೈಲ್ವೇ ಮೇಲ್ವೇತುವೆ ಪುನರ್‌ನಿರ್ಮಾಣ ಹಿನ್ನೆಲೆ

ಪುತ್ತೂರು – ನೇರಳಕಟ್ಟೆ ರೈಲು ನಿಲ್ದಾಣಗಳ ನಡುವೆ ಇರುವ ಮೇಲ್ಲೇತುವೆ ಸಂಖ್ಯೆ 520 ಇದರ ಪುನರ್ ನಿರ್ಮಾಣಕ್ಕೆ ಸ೦ಬ೦ಧಿಸಿದ೦ತೆ ನೆಹರುನಗರ ವಿವೇಕಾನಂದ ಕಾಲೇಜು ರಸ್ತೆಯನ್ನು ತಾತ್ಕಾಲಿಕವಾಗಿ ಮುಚ್ಚಲಾಗುವುದು ಎಂದು ಸೌತ್ ವೆಸ್ಟರ್ನ್ ರೈಲ್ವೇ ಪ್ರಕಟಣೆಯಲ್ಲಿ ತಿಳಿಸಿದೆ.


ರೈಲ್ವೆ ಮೇಲೇತುವೆ ಪುನರ್ ನಿರ್ಮಾಣಕ್ಕೆ ಸಂಬಂಧಿಸಿ ನ.15ರಿಂದ ಕಾಮಗಾರಿ ಆರ೦ಭಿಸುವ ನಿಟ್ಟಿನಲ್ಲಿ ರಸ್ತೆ ಮುಚ್ಚಲು ಜಿಲ್ಲಾಧಿಕಾರಿಯವರು ಅನುಮತಿ ನೀಡಿದ್ದರು. ಆದರೆ ನ.16ರಂದು ಶಿಲಾನ್ಯಾಸ ಕಾರ್ಯಕ್ರಮ ನಡೆದ ಬಳಿಕ ನ.17ರಿಂದ ಮುಂದಿನ ಮೂರು ತಿಂಗಳು ನೆಹರುನಗರ ವಿವೇಕಾನಂದ ರಸ್ತೆಯನ್ನು ಮುಚ್ಚಲಾಗುವುದು ಎಂದು ರೈಲ್ವೇ ಸೌತ್ ವೆಸ್ಟರ್ನ್ ರೈಲ್ವೇಯ ಸಕಲೇಶಪುರ ವಿಭಾಗದ ಸಹಾಯಕ ವಿಭಾಗೀಯ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮುರದಿಂದ ಪರ್ಯಾಯ ರಸ್ತೆ:

ನೆಹರುನಗರ ವಿವೇಕಾನಂದ ಕಾಲೇಜು ರಸ್ತೆಯನ್ನು ತಾತ್ಕಾಲಿಕವಾಗಿ ಮುಚ್ಚಿದ ಬಳಿಕ ಲಘು ವಾಹನಗಳಿಗೆ ಪರ್ಯಾಯ ವ್ಯವಸ್ಥೆಯಾಗಿ ಮುರದಿಂದ ತೆರಳಲು ಅವಕಾಶವಿದೆ. ಉಳಿದಂತೆ ಹಾರಾಡಿ ಬನ್ನೂರು, ಪಡೀಲು ರಸ್ತೆಯಾಗಿಯೂ ಕಾಲೇಜು ರಸ್ತೆಯನ್ನು ಸಂಪರ್ಕಿಸಬಹುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ



ಆರ್ಯಾಪು ಕೃಷಿ ಪತ್ತಿನ ಸಹಕಾರ ಸಂಘ: ಅಧ್ಯಕ್ಷರಾಗಿ ಮಹಮ್ಮದ್ ಆಲಿ ಉಪಾಧ್ಯಕ್ಷರಾಗಿ ಸುರೇಂದ್ರ ರೈ ಆಯ್ಕೆ

Posted by Vidyamaana on 2024-01-15 21:47:52 |

Share: | | | | |


ಆರ್ಯಾಪು ಕೃಷಿ ಪತ್ತಿನ ಸಹಕಾರ ಸಂಘ: ಅಧ್ಯಕ್ಷರಾಗಿ ಮಹಮ್ಮದ್ ಆಲಿ ಉಪಾಧ್ಯಕ್ಷರಾಗಿ ಸುರೇಂದ್ರ ರೈ   ಆಯ್ಕೆ

ಪುತ್ತೂರು: ತಾಲೂಕಿನ ಆರ್ಯಾಪು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಹಾಲಿ ಅಧ್ಯಕ್ಷ ಹೆಚ್. ಮಹಮ್ಮದ್ ಆಲಿ ಮೂರನೇ ಬಾರಿಗೆ ಪುನರಾಯ್ಕೆಗೊಂಡಿದ್ದಾರೆ. ಉಪಾಧ್ಯಕ್ಷರಾಗಿ ಸುರೇಂದ್ರ ರೈ ಬಳ್ಳಮಜಲು ಅವರು ಆಯ್ಕೆಗೊಂಡರು. ಇಬ್ಬರ ಆಯ್ಕೆಯು ಅವಿರೋಧವಾಗಿ ನಡೆಯಿತು.


ಸಹಕಾರ ಸಂಘದ ಕಚೇರಿಯಲ್ಲಿ ಸೋಮವಾರ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಸಲಾಯಿತು. ಸಹಕಾರಿ ಇಲಾಖೆಯ ಅಧೀಕ್ಷಕ ನಾಗೇಂದ್ರ ಅವರು ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು.ಸಂಘದ ನಿರ್ದೇಶಕರಾದ ಸಂಶುದ್ದೀನ್, ರಂಜಿತ್ ಬಂಗೇರಾ, ಗಣೇಶ್ ರೈ ಸದಾನಂದ ಶೆಟ್ಟಿ ಕೂರೇಲು, ಚಂದ್ರಕಲಾ ಪಿ, ತೆರೆಜಾ ಎಂ ಸಿಕ್ವೆರಾ, ಇಸ್ಮಾಯಿಲ್ ಎಂ, ಗಣೇಶ್ ರೈ ಶೀನಪ್ಪ ಮತ್ತು ತಿಮ್ಮಪ್ಪ ನಾಯ್ಕ ಉಪಸ್ಥಿತರಿದ್ದರು.

ಇಸ್ರೇಲ್ ನಲ್ಲಿ ವೆಸ್ಟ್ ನೈಲ್‌ ಜ್ವರಕ್ಕೆ ಮತ್ತೊಂದು ಬಲಿ : ಸಾವನ್ನಪ್ಪಿದವರ ಸಂಖ್ಯೆ 15ಕ್ಕೆ ಏರಿಕೆ

Posted by Vidyamaana on 2024-07-10 11:27:00 |

Share: | | | | |


ಇಸ್ರೇಲ್ ನಲ್ಲಿ ವೆಸ್ಟ್ ನೈಲ್‌ ಜ್ವರಕ್ಕೆ ಮತ್ತೊಂದು ಬಲಿ : ಸಾವನ್ನಪ್ಪಿದವರ ಸಂಖ್ಯೆ 15ಕ್ಕೆ ಏರಿಕೆ

ಜೆರುಸಲೇಂ : ಇಸ್ರೇಲ್ ನಲ್ಲಿ ವೆಸ್ಟ್ ನೈಲ್ ಜ್ವರಕ್ಕೆ ಬಲಿಯಾದವರ ಸಂಖ್ಯೆ 15ಕ್ಕೆ ಏರಿಕೆಯಾಗಿದ್ದು, ಒಂದು ಹೊಸ ಸಾವು ಸಂಭವಿಸಿದೆ ಎಂದು ದೇಶದ ಆರೋಗ್ಯ ಸಚಿವಾಲಯ ತಿಳಿಸಿದೆ.

ಮೇ ಆರಂಭದಿಂದ ದೃಢಪಡಿಸಿದ ಒಟ್ಟು ಸೋಂಕಿನ ಪ್ರಕರಣಗಳ ಸಂಖ್ಯೆ 299 ಕ್ಕೆ ತಲುಪಿದೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ಮಂಗಳವಾರ ವರದಿ ಮಾಡಿದೆ.ಹೆಚ್ಚಿನ ಪ್ರಕರಣಗಳು ಇಸ್ರೇಲ್ನ ಕೇಂದ್ರ ಪ್ರದೇಶದಲ್ಲಿ ಪತ್ತೆಯಾಗಿದ್ದರೂ, ಉತ್ತರದ ನಗರ ಹೈಫಾದ ರಂಬಾಮ್ ಆಸ್ಪತ್ರೆ ಗುರುವಾರ ವೈರಸ್ ಸೋಂಕಿಗೆ ಒಳಗಾದ ಆಸ್ಪತ್ರೆಗೆ ದಾಖಲಾದ ಇಬ್ಬರು ರೋಗಿಗಳನ್ನು ವರದಿ ಮಾಡಿದೆ, ಇದರಲ್ಲಿ ಮಧ್ಯಮ-ತೀವ್ರ ಸ್ಥಿತಿಯಲ್ಲಿರುವ 50 ವರ್ಷದ ವ್ಯಕ್ತಿ ಸೇರಿದ್ದಾರೆ.

ಪತ್ರಕರ್ತನ ಮೊಬೈಲ್ ಒಡೆದು ಹಾಕಿದ ಪ್ರಕರಣ ಸುಖಾಂತ್ಯ

Posted by Vidyamaana on 2023-07-20 02:17:28 |

Share: | | | | |


ಪತ್ರಕರ್ತನ ಮೊಬೈಲ್ ಒಡೆದು ಹಾಕಿದ ಪ್ರಕರಣ ಸುಖಾಂತ್ಯ

ಪುತ್ತೂರು: ಪತ್ರಕರ್ತ ನಿಶಾಂತ್ ಬಿಲ್ಲಂಪದವು ಅವರ ಮೊಬೈಲ್ ಒಡೆದು ಹಾಕಿರುವ ಪ್ರಕರಣ ಇದೀಗ ಸುಖಾಂತ್ಯ ಕಂಡಿದೆ ಎಂದು ತಿಳಿದುಬಂದಿದೆ.

ಬಪ್ಪಳಿಗೆ ಎಂಬಲ್ಲಿ ಚಿತ್ರೀಕರಣ ನಡೆಸುತ್ತಿದ್ದ ವೇಳೆ ಮೊಬೈಲ್ ಕಸಿದು‌ ಹಾನಿಗೊಳಿಸಲಾಗಿದೆ ಎಂದು ನಿಶಾಂತ್ ಆರೋಪಿಸಿದ್ದರು. ಇದನ್ನು ಪತ್ರಕರ್ತರ ಸಂಘಗಳು ಖಂಡಿಸಿ, ಸೂಕ್ತ ತನಿಖೆ ನಡೆಸಲು ಆಗ್ರಹಿಸಿದ್ದವು. ಇದೀಗ ಬಂದ ಮಾಹಿತಿಯಂತೆ, ಮೊಬೈಲ್ ಒಡೆದು‌ ಹಾಕಿದವರು‌ ಹೊಸ ಮೊಬೈಲನ್ನು ನಿಶಾಂತ್ ಅವರಿಗೆ ನೀಡಿದ್ದಾರೆ ಎನ್ನಲಾಗಿದೆ. ಈ‌ ಹಿನ್ನೆಲೆಯಲ್ಲಿ ಪ್ರಕರಣವನ್ನು ಸುಖಾಂತ್ಯಗೊಳಿಸಲಾಗಿದೆ ಎಂದು‌ ತಿಳಿದುಬಂದಿದೆ.

ಬಾಡಿಗೆ ಆಸೆಗೆ ಬಿದ್ದು ಕೋಟ್ಯಾಂತರ ರೂ ವೆಚ್ಚದ ಮನೆ, ಫ್ಲಾಟ್ ಕಳೆದುಕೊಂಡ ಮಾಲೀಕರು: ವಂಚಿಸಿ ಪರಾರಿಯಾದ ಆಲಿ ಬೇಗ್

Posted by Vidyamaana on 2024-06-25 07:59:41 |

Share: | | | | |


ಬಾಡಿಗೆ ಆಸೆಗೆ ಬಿದ್ದು ಕೋಟ್ಯಾಂತರ ರೂ ವೆಚ್ಚದ ಮನೆ, ಫ್ಲಾಟ್ ಕಳೆದುಕೊಂಡ ಮಾಲೀಕರು: ವಂಚಿಸಿ ಪರಾರಿಯಾದ ಆಲಿ ಬೇಗ್

ಬೆಂಗಳೂರು, ಜೂನ್​ 24: ಬಾಡಿಗೆ ಆಸೆಗೆ ಬಿದ್ಧ ಮನೆ ಮಾಲೀಕರಿಗೆ ಬ್ರೋಕರ್ (broker) ಕಂಪನಿ ಹೆಸರಲ್ಲಿ ಕೋಟಿ ಕೋಟಿ ರೂ. ಪಂಗನಾಮ (cheated) ಹಾಕಿರುವಂತಹ ಘಟನೆ ನಗರದಲ್ಲಿ ನಡೆದಿದೆ. ಜಿಯೂ ಹೋಮ್ಸ್ ಎಂಬ ಕಂಪನಿ ಹೆಸರಲ್ಲಿ ಮನೆಗಳು, ಫ್ಲಾಟ್​ಗಳನ್ನು ಡೀಲ್ ಮಾಡಲಾಗಿದೆ. ಬಾಡಿಗೆಗೆ ಕೊಡಿಸುತ್ತೇನೆ ಎಂದು ಮಧ್ಯಸ್ಥಿಕೆ ವಹಿಸಿದ್ದ ಆಸಾಮಿ ಅಹಮದ್ ಆಲಿ ಬೇಗ್, ಮಾಲೀಕರಿಂದ ಮನೆ ಪಡೆದು ನನ್ನದೇ ಅಂತ ನಂಬಿಸಿ ಲಕ್ಷ ಲಕ್ಷ ರೂ. ಹಣ ಪಡೆದು ಲೀಸ್​ಗೆ ಕೊಟ್ಟಿದ್ದಾರೆ.

ಹಲ್ಲಿನ ಶಸ್ತ್ರಚಿಕಿತ್ಸೆಗೆ ಹೋಗಿ ವರ ಮೃತ್ಯು: ಏನಿದು ಸ್ಮೈಲ್ ಡಿಸೈನಿಂಗ್ ಶಸ್ತ್ರಚಿಕಿತ್ಸೆ?

Posted by Vidyamaana on 2024-02-20 15:12:31 |

Share: | | | | |


ಹಲ್ಲಿನ ಶಸ್ತ್ರಚಿಕಿತ್ಸೆಗೆ ಹೋಗಿ ವರ ಮೃತ್ಯು: ಏನಿದು ಸ್ಮೈಲ್ ಡಿಸೈನಿಂಗ್ ಶಸ್ತ್ರಚಿಕಿತ್ಸೆ?

ಹೈದರಾಬಾದ್: ಮದುವೆಯ ದಿನ ಚೆನ್ನಾಗಿ ಕಾಣಿಸಬೇಕು ಎಂದು ಲಕ್ಷ್ಮಿ ನಾರಾಯಣ ವಿಂಜಮ್ (28) ಎಂಬಾತ ಸ್ಮೈಲ್ ಡಿಸೈನಿಂಗ್ ಶಸ್ತ್ರಚಿಕಿತ್ಸೆಗೆ ಹೋಗಿ ಪ್ರಾಣವನ್ನೇ ಕಳೆದುಕೊಂಡ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.



ಮದುವೆಯ ದಿನ ತನ್ನ ನಗು ಮತ್ತು ನಗುವನ್ನು ಉತ್ತಮವಾಗಿ ಕಾಣುವಂತೆ ಸ್ಮೈ ಲ್ ಡಿಸೈನಿಂಗ್ ಶಸ್ತ್ರ ಚಿಕಿತ್ಸೆಗೆ ಹೈದರಾಬಾದ್ ನ ಜುಬಿಲಿ ಹಿಲ್ ನಲ್ಲಿರುವ ಎಫ್ ಎಂಎಸ್ ಇಂಟರ್ನ್ಯಾ ಷನಲ್ ಡೆಂಟಲ್ ಕ್ಲಿನಿಕ್ ಗೆ ಹೋಗಿದ್ದನು. ಆದರೆ ಶಸ್ತ್ರ ಚಿಕಿತ್ಸೆಯ ಸಮಯದಲ್ಲಿಯೇ ಈತ ಸಾವನ್ನಪ್ಪಿದ್ದಾನೆ. ಪ್ರಜ್ಞೆ ತಪ್ಪಿಸುವ ಔಷಧ (ಅನಸ್ತೇಶಿಯಾ) ಹೆಚ್ಚು ಕೊಟ್ಟ ಕಾರಣ ಆತ ಸಾವನ್ನಪ್ಪಿದ್ದಾನೆ ಎಂದು ಲಕ್ಷ್ಮಿ ನಾರಾಯಣ್ ತಂದೆ ಗಂಭೀರ ಆರೋಪ ಮಾಡಿದ್ದಾರೆ.



ಶಸ್ತ್ರಚಿಕಿತ್ಸೆ ವೇಳೆ ತನ್ನ ಮಗ ಪ್ರಜ್ಞಾ ಹೀನನಾಗಿದ್ದ. ಸರ್ಜರಿ ಬಳಿಕ ಅವನ ತಲೆಯಲ್ಲಿ ಯಾವುದೇ ಚಲನೆಯಿಲ್ಲದಿದ್ದಾಗ ಕ್ಲಿನಿಕ್ ಸಿಬ್ಬಂದಿ ನನ್ನನ್ನು ಕರೆದರು. ನಾನು ಹೋಗಿ ನೋಡಿದಾಗ ಆತನನ್ನು ನೋಡಿ ಗಾಬರಿಯಾಯಿತು. ಕೂಡಲೇ ನಾವು ಆತನನ್ನು ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋದೆವು. ಈ ವೇಳೆ ವೈದ್ಯರು ಆತ ಮೃತಪಟ್ಟಿರುವುದಾಗಿ ತಿಳಿಸಿದರು. ಮಗನಿಗೆ ಯಾವುದೇ ಆರೋಗ್ಯ ಸಮಸ್ಯೆ ಇರಲಿಲ್ಲ. ಆದರೆ ಈ ಸಾವಿಗೆ ವೈದ್ಯರೇ ನೇರ ಕಾರಣ ಎಂದು ಲಕ್ಷ್ಮಿ ನಾರಾಯಣ ತಂದೆ ರಾಮುಲು ವಿಂಜಮ್ ಕಣ್ಣೀರು ಹಾಕಿದ್ದಾರೆ.



ಏನಿದು ಸ್ಮೈಲ್ ಡಿಸೈನಿಂಗ್?:

ಜನರು ತಮ್ಮ ಹಲ್ಲುಗಳನ್ನು ಸರಿಪಡಿಸಲು, ಶುಚಿಗೊಳಿಸುವಿಕೆಗೆ ಆಸ್ಪತ್ರೆಗೆ ಹೋಗುತ್ತಾರೆ. ಇದರಿಂದ ಅವುಗಳು ಹೆಚ್ಚು ಹೊಳೆಯುವಂತೆ ಕಾಣುತ್ತವೆ. ಮಾನವನ ಹಲ್ಲುಗಳು ಕಾಲಾನಂತರದಲ್ಲಿ ಸಡಿಲಗೊಳ್ಳುತ್ತವೆ ಮತ್ತು ಅವುಗಳ ಬಣ್ಣವು ಮಸುಕಾಗಲು ಪ್ರಾರಂಭಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಸ್ಮೈ ಲ್ ಡಿಸೈನ್ ಸರ್ಜರಿ ಮೂಲಕ ಅವುಗಳನ್ನು ಹೊಳೆಯುವಂತೆ ಮಾಡಲಾಗುತ್ತದೆ

Recent News


Leave a Comment: