ಜೋಕಟ್ಟೆ: ಮನೆ ಮೇಲೆ ತಡೆಗೋಡೆ ಕುಸಿತ; ಬಾಲಕ ಮೃತ್ಯು

ಸುದ್ದಿಗಳು News

Posted by vidyamaana on 2024-07-25 12:27:06 |

Share: | | | | |


ಜೋಕಟ್ಟೆ: ಮನೆ ಮೇಲೆ ತಡೆಗೋಡೆ ಕುಸಿತ; ಬಾಲಕ ಮೃತ್ಯು

ಪಣಂಬೂರು: ಇಲ್ಲಿನ ಜೋಕಟ್ಟೆ ಗ್ರಾಮ ಪಂಚಾಯತ್ ಗುಡ್ಡೆ ಎಂಬಲ್ಲಿ ಮನೆಯ ಮೇಲೆ� ತಡೆಗೋಡೆ ಕುಸಿದು ಬಿದ್ದು ಯುವಕ ಮೃತಪಟ್ಟಿರುವ ಘಟನೆ ಬುಧವಾರ ರಾತ್ರಿ ನಡೆದಿರುವ ಬಗ್ಗೆ ವರದಿಯಾಗಿದೆ‌.ಮುಲ್ಕಿ ಕೊಲ್ನಾಡು ನಿವಾಸಿ ಶಂಕರ ಎಂಬವರ ಪುತ್ರ ಶೈಲೇಶ್ (17) ಮೃತ ಯುವಕ. ಜೋಕಟ್ಟೆಯಲ್ಲಿರುವ ತನ್ನ ದೊಡಮ್ಮನ ಮಗಳ ಮನೆಗೆ ಬಂದಿದ್ದ ಶೈಲೇಶ್, ಇಲ್ಲಿಯೇ ಉಳಿದುಕೊಂಡಿದ್ದ.

ಮನೆಯಲ್ಲಿ ಶೈಲೇಶ್ ರವರ ದೊಡ್ಡಮನ ಮಗಳು ಸವಿತಾ, ಆಕೆಯ ಗಂಡ ಸುರೇಶ್ ಮತ್ತು ಮಗು ಸಾಕ್ಷಿ ಮನೆಯ ಒಂದು ಕೋಣೆಯಲ್ಲಿ ಮಲಗಿದ್ದು, ಶೈಲೇಶ್ ಇನ್ನೊಂದು ಕಡೆ ಮಲಗಿದ್ದ. ತಡೆಗೋಡೆ ಕುಸಿದು ಹಂಚಿನ ಮನೆಯ ಮೇಲೆ ಬಿದ್ದಿದ್ದರಿಂದ ಅಲ್ಲಿ ಮಲಗಿದ್ದ ಶೈಲೇಶ್ ತೀವ್ರ ಗಾಯಗೊಂಡು ಮೃತಪಟ್ಟಿದ್ದಾನೆ. ಇನ್ನೊಂದು ಕೋಣೆಯಲ್ಲಿ ಮಲಗಿದ್ದ ಇತರ ಮೂರು ಜನರಲ್ಲಿ ಸವಿತಾ ಅವರಿಗೆ ಸಣ್ಣ ಗಾಯವಾಗಿದ್ದು‌, ಚಿಕಿತ್ಸೆ ಪಡೆದಿದ್ದಾರೆ‌ ಎಂದು ತಿಳಿದು ಬಂದಿದೆ.

ಶೈಲೇಶ್ ಅವರ ಮೃತದೇಹವನ್ನು ನಗರದ ಎ.ಜೆ.ಆಸ್ಪತ್ರೆಯ ಶವಗಾರದಲ್ಲಿಡಲಾಗಿದ್ದು, ಸ್ಥಳಕ್ಕೆ ಪಣಂಬೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ

 Share: | | | | |


ದ.ಕ.ಜಿಲ್ಲೆಯಲ್ಲಿ ಭಾರೀ ಮಳೆ ಸಾಧ್ಯತೆ: ಜೂ.11ರವರೆಗೆ ಮುನ್ನೆಚ್ಚರಿಕೆ ವಹಿಸಲು: ಡಿಸಿ ರವಿಕುಮಾರ್ ಸೂಚನೆ

Posted by Vidyamaana on 2023-06-07 10:53:10 |

Share: | | | | |


ದ.ಕ.ಜಿಲ್ಲೆಯಲ್ಲಿ ಭಾರೀ ಮಳೆ ಸಾಧ್ಯತೆ: ಜೂ.11ರವರೆಗೆ ಮುನ್ನೆಚ್ಚರಿಕೆ ವಹಿಸಲು: ಡಿಸಿ ರವಿಕುಮಾರ್ ಸೂಚನೆ

ಮಂಗಳೂರು:ಭಾರತೀಯ ಹವಾಮಾನ ಇಲಾಖೆಯು ನೀಡಿದ ಮುನ್ಸೂಚನೆಯಂತೆ ದ.ಕ. ಸಹಿತ ಕರಾವಳಿಯಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಹಾಗಾಗಿ ಜೂ.11ರವರೆಗೆ ಮುನ್ನೆಚ್ಚರಿಕೆ ವಹಿಸಲು ದ.ಕ. ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ದ.ಕ.ಜಿಲ್ಲಾಧಿಕಾರಿ ರವಿಕುಮಾರ್ ಸೂಚನೆ ನೀಡಿದ್ದಾರೆ.

ಮಳೆಯೊಂದಿಗೆ ಸಮುದ್ರದ ಅಲೆಗಳು ಏಳುವ ಸಾಧ್ಯತೆ ಇದೆ. ಹಾಗಾಗಿ ನದಿ, ಸಮುದ್ರ ಕಿನಾರೆಯ ಬಳಿ ತೆರಳಬಾರದು. ಮೀನುಗಾರರು ಈ ಅವಧಿಯಲ್ಲಿ ಮೀನುಗಾರಿಕೆಗೂ ತೆರಳದಂತೆ ಡಿಸಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಮೊಬೈಲ್​​ ಫೋನ್​​ ಕಳೆದು ಹೋದ್ರೆ ಗಾಬರಿ ಆಗ್ಬೇಡಿ

Posted by Vidyamaana on 2023-09-21 20:47:54 |

Share: | | | | |


ಮೊಬೈಲ್​​ ಫೋನ್​​ ಕಳೆದು ಹೋದ್ರೆ ಗಾಬರಿ ಆಗ್ಬೇಡಿ

   ಮೊಬೈಲ್​​ ಕಳೆದು ಹೋದ ತಕ್ಷಣ ನಮಗಾಗುವ ಗಾಬರಿ ಅಷ್ಟಿಷ್ಟಲ್ಲ. ಕೇವಲ ದುಬಾರಿ ಬೆಲೆ ವಸ್ತು ಎನ್ನುವುದಕ್ಕಿಂತಲೂ ಅದರಲ್ಲಿರುವ ಸಂಪರ್ಕ ಸಂಖ್ಯೆಗಳು, ಒಡನಾಡಿಗಳ ಜೊತೆಗಿರುವ ಫೋಟೋಗಳು ಮತ್ತು ಖಾಸಗಿ ಮಾಹಿತಿಗಳು ಸೋರಿಕೆಯಾಗುವ ಭಯ ಸಾಕಷ್ಟು ಕಾಡುತ್ತಿರುತ್ತದೆ.ಮೊಬೈಲ್ ಕಳವಾದಾಗ ಅತ್ಯಂತ ಮುಖ್ಯ ಮಾಹಿತಿ ಮತ್ತು ನಮ್ಮ ಮೊಬೈಲ್​ ಡೇಟಾ ಸೋರಿಕೆಯಾಗುವ ಟೆನ್ಶನ್​ ತುಂಬಾನೆ ಇರುತ್ತೆ.ಆದ್ರೆ ಇನ್ಮುಂದೆ ನಿಮ್ಮ ಸ್ಮಾರ್ಟ್​ಫೋನ್ ಕಳೆದುಹೋದರೆ ಅಥವಾ ಕಳ್ಳತನವಾದರೆ ಮೊಬೈಲ್‌ ಅನ್ನು ಬ್ಲಾಕ್‌ ಮಾಡಲು ಕರ್ನಾಟಕ ಪೊಲೀಸ್‌ ಇಲಾಖೆ ಆರಂಭಿಸಿರುವ ಕರ್ನಾಟಕ ರಾಜ್ಯ ಪೊಲೀಸ್‌ ಆಯಪ್( KSP Application ) ಸಹಾಯ ಮಾಡಲಿದೆ. 


ನಿಮ್ಮ ಬಳಿ ಇನ್ನೊಂದು ಮೊಬೈಲ್‌ ಇದ್ದರೆ ಅಥವಾ ಮನೆಯವರದ್ದು, ಸ್ನೇಹಿತರ ಮೊಬೈಲ್‌ನಲ್ಲಿ ಈ ಆಯಪ್ ಅನ್ನು ಇನ್​ಸ್ಟಾಲ್ ಮಾಡಿ ಬ್ಲಾಕ್‌ ಮಾಡಿ ದೂರು ದಾಖಲಿಸಬಹುದು.

ಗಳೂರು ನಗರ ಪೊಲೀಸರು ತಮ್ಮ ಎಕ್ಸ್ (ಟ್ವಿಟ್ಟರ್) ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಜೊತೆಗೆ ಯಾವರೀತಿ ನೋಂದಣಿ ಮಾಡಬೇಕು ಎಂಬ ಬಗ್ಗೆ ವಿವರವಾಗಿ ತಿಳಿಸಿದ್ದಾರೆ.ಕೇಂದ್ರ ಸರ್ಕಾರ ಕೂಡ ಜನರ ಫೋನ್ ಮತ್ತು ಡೇಟಾ ಕಳ್ಳತನಕ್ಕೆ ಪರಿಹಾರ ಕಂಡುಹಿಡಿದಿದೆ. ಕೇಂದ್ರ ಸರ್ಕಾರ ಇತ್ತೀಚೆಗಷ್ಟೆ ಸಂಚಾರ್ ಸಾಥಿ ಪೋರ್ಟಲ್ ಅನ್ನು ಪ್ರಾರಂಭಿಸಸಿದದೆ. ಸಂಚಾರ್ ಸಾಥಿ ಪೋರ್ಟಲ್ ಅಡಿಯಲ್ಲಿ, ಬಳಕೆದಾರರು ತಮ್ಮ ಫೋನ್ ಅನ್ನು ಎಲ್ಲಿದೆ ಎಂದು ಹುಡುಕಬಹುದು ಅಥವಾ ಸ್ವಿಚ್ ಆಫ್ ಮಾಡಬಹುದು. ಆಯಪಲ್‌ ಐಫೋನ್​ನಲ್ಲಿರುವ ಫೈಂಡ್ ಮೈ ಫೋನ್ ವೈಶಿಷ್ಟ್ಯದಂತೆ ಇದು ಆಂಡ್ರಾಯ್ಡ್ ಫೋನ್​ನಲ್ಲಿ ಕಾರ್ಯನಿರ್ವಹಿಸಲಿದೆ.

ಅನೈತಿಕ ಸಂಬಂಧ ಶಂಕೆ; ಪತ್ನಿಯನ್ನು ಕೊಲೆಗೈದು ಪೊಲೀಸರಿಗೆ ಶರಣಾದ ಪತಿ

Posted by Vidyamaana on 2023-12-13 17:19:19 |

Share: | | | | |


ಅನೈತಿಕ ಸಂಬಂಧ ಶಂಕೆ; ಪತ್ನಿಯನ್ನು ಕೊಲೆಗೈದು ಪೊಲೀಸರಿಗೆ ಶರಣಾದ ಪತಿ

ಮಂಡ್ಯ: ಪತ್ನಿ ಮೇಲೆ ಅನೈತಿಕ ಸಂಬಂಧದ ಶಂಕೆಯಿಂದ ಪತಿ ಪತ್ನಿಯನ್ನು ಕೊಲೆಗೈದು ಮಗು ಜೊತೆ ಪೊಲೀಸರಿಗೆ ಶರಣಾದ ಘಟನೆ ಜಿಲ್ಲೆಯ ಮಳವಳ್ಳಿ ತಾಲೂಕಿನ ದೇಶಹಳ್ಳಿ ಗ್ರಾಮದಲ್ಲಿ ನಡೆದಿದೆ.ಮಧುಶ್ರೀ (32) ಕೊಲೆಯಾದ ಮಹಿಳೆ. ಮಹದೇವ(38) ಕೊಲೆ ಮಾಡಿದ ಕಿರಾತಕ ಪತಿ.


ಮೃತ ಮಧುಶ್ರೀ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದು, ಗಂಡ ಮಹದೇವ್ ಚಾಲಕನಾಗಿ ಕೆಲಸ ಮಾಡುತ್ತಿದ್ದ.


ಪತ್ನಿ ಮೇಲೆ ಅನೈತಿಕ ಸಂಬಂಧದ ಶಂಕೆಯಿದ್ದ ಗಂಡ ಎನ್ನಲಾಗಿದ್ದು, ಅದೇ ವಿಚಾರಕ್ಕೆ ಆಗಾಗ ದಂಪತಿಗಳ ನಡುವೆ ಜಗಳವಾಗುತ್ತಿತ್ತು ಎನ್ನಲಾಗಿದೆ.ಗಂಡನ ಅನುಮಾನದ ಭೂತಕ್ಕೆ ಪತ್ನಿ ಮಧುಶ್ರೀ ಕೆಲ ತಿಂಗಳ ಹಿಂದೆ‌ ತವರು ಮನೆ ಸೇರಿದ್ದು, ಎರಡು ತಿಂಗಳ ಹಿಂದೆಯಷ್ಟೆ ರಾಜಿ ಪಂಚಾಯತಿ ನಡೆಸಿ ಕುಟುಂಬಸ್ಥರು ಗಂಡನ ಮನೆಗೆ ವಾಪಸ್ಸು ಕಳುಹಿಸಿದ್ದರು.



ನಿನ್ನೆ ಮೊಬೈಲ್ ರೀಚಾರ್ಜ್ ವಿಚಾರವಾಗಿ ಮತ್ತೆ ದಂಪತಿಗಳ ನಡುವೆ ಜಗಳವಾಗಿದ್ದು, ಜಗಳ ವಿಕೋಪಕ್ಕೆ ತಿರುಗಿ ಕಬ್ಬಿಣದ ರಾಡ್ ನಿಂದ ಪತ್ನಿ ಮೇಲೆ ಮಹದೇವ್ ಹಲ್ಲೆ ನಡೆಸಿದ್ದ. ಘಟನೆಯಿಂದ ತೀವ್ರ ಹಲ್ಲೆಗೆ ಒಳಗಾದ ಮಧುಶ್ರೀ ಸ್ಥಳದಲ್ಲೆ ಸಾವನಪ್ಪಿದ್ದಾರೆ. ಪತ್ನಿ ಸಾವನಪ್ಪುತ್ತಿದ್ದಂತೆ ಪತಿ ಮಗು ಜೊತೆ ಕಿರುಗಾವಲು ಪೊಲೀಸರಿಗೆ ಶರಣಾಗಿದ್ದಾನೆ.


ಈ‌ ಸಂಬಂಧ ಕಿರುಗಾವಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸುಳ್ಯ : ವಿದ್ಯುತ್​ ಶಾಕ್​ ತಗುಲಿ ಲೈನ್ ಮ್ಯಾನ್​ ಹಾಸನ ಮೂಲದ ರಘು ಮೃತ್ಯು

Posted by Vidyamaana on 2024-01-05 18:49:42 |

Share: | | | | |


ಸುಳ್ಯ : ವಿದ್ಯುತ್​ ಶಾಕ್​ ತಗುಲಿ ಲೈನ್ ಮ್ಯಾನ್​ ಹಾಸನ ಮೂಲದ ರಘು ಮೃತ್ಯು

ಸುಬ್ರಹ್ಮಣ್ಯ: ವಿದ್ಯುತ್ ಶಾಕ್ ಗೆ ಲೈನ್ ಮ್ಯಾನ್ ಒಬ್ಬರು ಮೃತಪಟ್ಟ ಘಟನೆ ಕಡಬ ತಾಲೂಕಿನ ಸುಬ್ರಹ್ಮಣ್ಯ ಸಮೀಪದ ಪಂಜ ಸೆಕ್ಷನ್‌ನ ಬಳ್ಪದ ಪಾದೆ ಎಂಬಲ್ಲಿ ಶುಕ್ರವಾರ ಸಂಭವಿಸಿದೆ.ಹಾಸನ ಜಿಲ್ಲೆಯ ಹೊಳೆನರಸಿಪುರ ಸಿಗರನಹಳ್ಳಿ ನಿವಾಸಿ ಬಳ್ಪದಲ್ಲಿ ಪವರ್‌ಮ್ಯಾನ್ ಆಗಿದ್ದ ರಘು ಎಸ್.ಆರ್. (32) ಮೃತರು ಎಂದು ಗುರುತಿಸಲಾಗಿದೆ.ಬಳ್ಪದ ಪಾದೆ ಸಮೀಪದ ನರಿಯಂಗ ಎಂಬಲ್ಲಿ ವಿದ್ಯುತ್ ಕಂಬ ಹತ್ತಿ ಕೆಲಸ ನಿರ್ವಹಣೆ ವೇಳೆ ಆಕಸ್ಮಿಕವಾಗಿ ವಿದ್ಯುತ್ ಪ್ರವಹಿಸಿ ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ.


ಘಟನಾ ಸ್ಥಳಕ್ಕೆ ಪೊಲೀಸರು ಹಾಗೂ ಮೆಸ್ಕಾಂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಫಾಝಿಲ್ ಹತ್ಯೆ ಪ್ರಕರಣ: ಇಬ್ಬರು ಆರೋಪಿಗಳಿಗೆ ಜಾಮೀನು

Posted by Vidyamaana on 2023-08-22 01:32:43 |

Share: | | | | |


ಫಾಝಿಲ್ ಹತ್ಯೆ ಪ್ರಕರಣ: ಇಬ್ಬರು ಆರೋಪಿಗಳಿಗೆ ಜಾಮೀನು

ಮಂಗಳೂರು: ದ.ಕ.ಜಿಲ್ಲೆಯನ್ನೇ ಬೆಚ್ಚಿಬೀಳಿಸಿದ ಸುರತ್ಕಲ್ ಮಂಗಳಪೇಟೆ ನಿವಾಸಿ ಫಾಝಿಲ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳಿಗೆ ಜಾಮೀನು ಮಂಜೂರಾಗಿದೆ.


ಪ್ರಕರಣದ ಆರೋಪಿಗಳಾದ ಅಜಿತ್ ಕ್ರಾಸ್ತಾ, ಶ್ರೀನಿವಾಸ್ ಗೆ ಜಾಮೀನು ಆಗಿದೆ.


ಕಳೆದ ವರ್ಷ ಜುಲೈ 28 ರಂದು ರಾತ್ರಿ ಮಂಗಳೂರು ಬಳಿಯ ಸುರತ್ಕಲ್ ನಲ್ಲಿ ಫಾಝಿಲ್ ಹತ್ಯೆ ನಡೆದಿತ್ತು. ಕಾರಿನಲ್ಲಿ ಬಂದಿದ್ದ ದುಷ್ಕರ್ಮಿಗಳ ತಂಡ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದರು.


ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಹಲವು ಆರೋಪಿಗಳನ್ನು ಬಂಧಿಸಿದ್ದರು. ಆ ಪೈಕಿ ಹರ್ಷಿತ್‌ ಎಂಬಾತನಿಗೆ ನ್ಯಾಯಾಲಯವು ಸೆ.7, 2022ರಂದು ಜಾಮೀನು ಮಂಜೂರು ಮಾಡಿತ್ತು

ಎಂಟು ದಿನ ಕಾಡಿನಲ್ಲಿ ಅಲೆದಾಟ – ಮಾನಸಿಕ ಅಸ್ವಸ್ಥ ಯುವಕನಿಗೆ ಊರಿನ ದಾರಿ ತೋರಿದ ಶ್ವಾನ

Posted by Vidyamaana on 2023-09-27 14:54:27 |

Share: | | | | |


ಎಂಟು ದಿನ ಕಾಡಿನಲ್ಲಿ ಅಲೆದಾಟ – ಮಾನಸಿಕ ಅಸ್ವಸ್ಥ ಯುವಕನಿಗೆ ಊರಿನ ದಾರಿ ತೋರಿದ ಶ್ವಾನ

ಕುಂದಾಪುರ: ಮನೆಯಿಂದ ಹೊರಹೋಗಿ ಕಾಡಿನಲ್ಲಿ ನಾಪತ್ತೆಯಾಗಿದ್ದ ಯುವಕನೊಬ್ಬ ಕಾಡಿನ ದಾರಿಯಲ್ಲಿ ಹಾದಿ ತಪ್ಪಿ ಎಂಟು ದಿನಗಳ ನಿರಂತರ ಅಲೆದಾಟದ ಬಳಿಕ ಮನೆ ಸೇರಿರುವ ವಿಸ್ಮಯಕಾರಿ ಘಟನೆ ಮತ್ತು ಈ ಮಾನಸಿಕ ಅಸ್ವಸ್ಥ ಯುವಕನನ್ನು ಕಾಡಿನಿಂದ ಮರಳಿ ಮನೆ ಸೇರಿಸಿದ ಸಾಕು ನಾಯಿಯ ಸಾಹಸವೊಂದು ಇದೀಗ ಉಡುಪಿ ಜಿಲ್ಲೆಯಾದ್ಯಂತ ‘ಟಾಕ್ ಆಫ್ ದಿ ಟೌನ್ ಆಗಿದೆ.

ಮುಳ್ಳುಗುಡ್ಡೆ ಕೊರಗಜ್ಜನಿಗೆ ಹೇಳಿಕೊಂಡ ಹರಕೆ ಮತ್ತು ಆ ಯುವಕನ ಜೊತೆ ಕಾಡಿಗೆ ತೆರಳಿದ್ದ ನಾಯಿಯ ಸಾಹಸದಿಂದ ಯುವಕ ಎಂಟು ದಿನಗಳ ಕಾನನ ಅಲೆದಾಟದ ಬಳಿಕವೂ ಸುರಕ್ಷಿತವಾಗಿ ನಿತ್ರಾಣಗೊಂಡ ಸ್ಥಿತಿಯಲ್ಲಿ ಮನೆ ತಲುಪುವಂತಾಗಿದೆ.

ಉಡುಪಿ ಜಿಲ್ಲೆಯ ಅಮಾವಾಸ್ಯೆ ಬೈಲಿನಲ್ಲಿ ಈ ಅಚ್ಚರಿಯ ಘಟನೆ ನಡೆದಿದ್ದು, ಮಟ್ಟಟ್ಟು ಗ್ರಾಮದ ತೊಂಬಟ್ಟು ಇರ್ಕಿಗದ್ದೆ ನಿವಾಸಿ ಶೀನ ನಾಯ್ಕ ಅವರ ಮಗ ವಿವೇಕಾನಂದ (28) ಎಂಬಾತ ಸೆ.16ರಂದು ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದ. 

ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದ ಈ ಯುವಕ ತನ್ನ ಮನೆಯಿಂದ ಹೊರಡುವ ಸಂದರ್ಭದಲ್ಲಿ ಮನೆಯ ನಾಯಿ ಕೂಡು ಆತನ ಜೊತೆ ತೆರಳಿತ್ತು. ಇತ್ತ ಕಾಡಿನಲ್ಲಿ ದಾರಿ ತಪ್ಪಿ ವಾರಗಳ ಅಲೆದಾಡಿದ್ದ ವಿವೇಕಾನಂದ ಸರಿಯಾದ ಆಹಾರವಿಲ್ಲದೆ ಬರೀ ನೀರು ಕುಡಿದು ಜೀವ ಉಳಿಸಿಕೊಂಡಿದ್ದ.

ಊರಿಗೆ ಮರಳುವ ದಾರಿ ಕಾಣದೇ ಕಾಡಿನಲ್ಲೇ ಸತ್ತಾಡುತ್ತಾ ನಿತ್ರಾಣಗೊಂಡಿದ್ದ ವಿವೇಕಾನಂದ ಆಶ್ಚರ್ಯಕರ ರೀತಿಯಲ್ಲಿ ಎಂಟು ದಿನಗಳ ಬಳಿಕ ಕಬ್ಬಿನಾಲೆ ಸಮೀಪದ ಮನೆ ಒಂದರ ಬಳಿ ನಿತ್ರಾಣಗೊಂಡ ಸ್ಥಿತಿಯಲ್ಲಿ ಪತ್ತೆಯಾಗುತ್ತಾನೆ.

ಅಷ್ಟೂ ದಿನಗಳ ಕಾಲ ಯುವಕನ ಜೊತೆಯಲ್ಲೇ ಕಾಡಿನಲ್ಲಿ ಸುತ್ತಾಡುತ್ತಿದ್ದ ಅವರ ಮನೆ ನಾಯಿಯೇ ಯುವಕನಿಗೆ ಕೊನೆಗೂ ಕಾಡಿನಿಂದ ನಾಡಿನ ದಾರಿ ತೋರಿಸುವಲ್ಲಿ ಸಹಾಯ ಮಾಡಿದೆ ಎಂಬುದಾಗಿ ಎಲ್ಲರೂ ಮಾತನಾಡಿಕೊಳ್ಳುತ್ತಿದ್ದು, ಈ ನಾಯಿಯ ಸಾಹಸಕ್ಕೆ ಗ್ರಾಮಸ್ಥರಿಂದ ಬಾರೀ ಮೆಚ್ಚುಗೆ ವ್ಯಕ್ತವಾಗಿದೆ.

ಎಂಟು ದಿನಗಳ ಅಲೆದಾಟದ ಬಳಿಕ ಕಾಡಿನಿಂದ ಸುರಕ್ಷಿತವಾಗಿ ನಾಡಿಗೆ ವಾಪಾಸಾದ ಯುವಕ ಮತ್ತು ಆತನಿಗೆ ಊರಿನ ದಾರಿ ತೋರಿಸಿದೆ ಎನ್ನಲಾದ ಸಾಕು ನಾಯಿಯನ್ನು ಊರವರು ಮೆರವಣಿಗೆ ಮಾಡಿದ್ದಾರೆ ಮತ್ತು ತಮ್ಮ ಮನೆ ಮಗ ಜೀವಂತವಾಗಿ ವಾಪಾಸು ಬಂದ ಖುಷಿಗೆ ಶೀನ ನಾಯ್ಕರ ಕುಟುಂಬ ಸಿಹಿಯೂಟವನ್ನೂ ಹಾಕಿಸಿದ್ದು ಒಟ್ಟಿನಲ್ಲಿ ಈ ಘಟನೆ ಮಚ್ಚೆಟ್ಟು ಭಾಗದಲ್ಲಿ ಸಂಭ್ರಮದ ವಾತಾವರಣಕ್ಕೆ ಕಾರಣವಾಗಿತ್ತು.



Leave a Comment: