ಬಂಟ್ವಾಳ : ವಗ್ಗ ಬಳಿ ಅಂಬುಲೆನ್ಸ್ ನಿಯಂತ್ರಣ ತಪ್ಪಿ ಪಲ್ಟಿ

ಸುದ್ದಿಗಳು News

Posted by vidyamaana on 2023-08-18 08:29:00 |

Share: | | | | |


ಬಂಟ್ವಾಳ : ವಗ್ಗ ಬಳಿ ಅಂಬುಲೆನ್ಸ್  ನಿಯಂತ್ರಣ ತಪ್ಪಿ ಪಲ್ಟಿ

ಬೆಳ್ತಂಗಡಿ: ರೋಗಿಯೊಬ್ಬರನ್ನು  ಕೊಂಡುಹೋಗುತ್ತಿರುವ ವೇಳೆ ಟುಫಾನ್ ಅಂಬುಲೆನ್ಸ್ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಚಾಲಕ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಘಟನೆ ವಗ್ಗ ಬಳಿ ಆಗಸ್ಟ್ 18 ರಂದು ನಡೆದಿದೆ.



ಬೆಳ್ತಂಗಡಿಯಿಂದ ಮಂಗಳೂರಿಗೆ ರೋಗಿಯೊಬ್ಬರನ್ನು ಕೊಂಡೊಯ್ಯುತ್ತಿರುವ ವೇಳೆ ಬಂಟ್ವಾಳದ ವಗ್ಗ ಬಳಿ ಅಂಬುಲೆನ್ಸ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಈ ವೇಳೆ ಚಾಲಕ ಮಡಂತ್ಯಾರ್ ಮಾಲಾಡಿ ನಿವಾಸಿ ಶಬೀರ್ ಎಂಬವರು ಗಂಭೀರ ಗಾಯಗೊಂಡಿದ್ದು ತಕ್ಷಣ ಅವರನ್ನು ತುಂಬೆ ಖಾಸಗಿ ಆಸ್ಪತ್ರೆಗೆ ಕೊಂಡು ಹೋದರೂ ಅಲ್ಲಿ ಅವರು ಚಿಕಿತ್ಸೆಗೆ ಸ್ಪಂದಿಸದೇ  ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

 Share: | | | | |


ಪುತ್ತೂರು : ನಗರ ಸಭಾ ಸದಸ್ಯ ಶಕ್ತಿ ಸಿನ್ಹಾ ಹೃದಯಾಘಾತದಿಂದ ನಿಧನ

Posted by Vidyamaana on 2023-10-17 10:10:52 |

Share: | | | | |


ಪುತ್ತೂರು : ನಗರ ಸಭಾ ಸದಸ್ಯ ಶಕ್ತಿ ಸಿನ್ಹಾ ಹೃದಯಾಘಾತದಿಂದ   ನಿಧನ

ಪುತ್ತೂರು : ನಗರ ಸಭಾ ಸದಸ್ಯ, ನೆಲ್ಲಿಕಟ್ಟೆ ನಿವಾಸಿ ಶಕ್ತಿ ಸಿನ್ಹಾ ರವರು ಹೃದಯಾಘಾತದಿಂದ ಇಂದು ನಿಧನರಾದರು.



ತನ್ನ ಕಿರಿಯ ಮಗಳ ಜೊತೆ ವಾಸವಿದ್ದ ಶಕ್ತಿ ಸಿನ್ಹಾ ರವರಿಗೆ ಇಂದು ಮುಂಜಾನೆ ಹೃದಯಾಘಾತವಾಗಿದ್ದು, ಖಾಸಗಿ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಅವರು ಸಾವನ್ನಪ್ಪಿದ್ದರು ಎಂದು ವರದಿಯಾಗಿದೆ.


ಮೃತರು ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ..

ಪ್ರಮಾಣವಚನ ಸ್ವೀಕಾರ ಸಮಾರಂಭ

Posted by Vidyamaana on 2023-05-20 04:04:58 |

Share: | | | | |


ಪ್ರಮಾಣವಚನ ಸ್ವೀಕಾರ ಸಮಾರಂಭ

ಬೆಂಗಳೂರು : ಇಂದು ರಾಜ್ಯದ 31ನೇ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರು 2 ನೇ ಬಾರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್  ಅವರು ಮೊದಲ ಬಾರಿಗೆ ಉಪ ಮುಖ್ಯಮಂತ್ರಿಯಾಗಿ  ಇಂದು ಮಧ್ಯಾಹ್ನ 12.30 ಕ್ಕೆ ಬೆಂಗಳೂರಿನ ಕಂಠೀರ ಕ್ರೀಡಾಂಗಣದಲ್ಲಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.ಇಂದು ಮಧ್ಯಾಹ್ನ 12.30 ಕ್ಕೆ ರಾಜ್ಯಪಾಲ ಥಾವತ್ ಚಂದ್ ಗೆಹಲೋತ್ ಅವರು ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಗೆ ಅಧಿಕಾರ ಮತ್ತು ಗೌಪ್ಯತೆಯ ಪ್ರತಿಜ್ಞೆ ಬೋಧಿಸಲಿದ್ದಾರೆ. ಇಂದು ಮಧ್ಯಾಹ್ನ 12.30 ಕ್ಕೆ ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರು ಪ್ರಮಾಣವಚನ ಸ್ವೀಕರಿಸಲಿದ್ದು, ಪ್ರಮಾಣ ವಚನ ಸಮಾರಂಭಕ್ಕೆ ಕಾಂಗ್ರೆಸ್‌ ನಾಯಕರಾದ ಸೋನಿಯಾ ಗಾಂಧಿ ಸೇರಿದಂತೆ ಹಲವು ಗಣ್ಯರಿಗೆ ಆಹ್ವಾನ ನೀಡಲಾಗಿದೆ.

ರಾಜ್ಯ ರಾಜಕೀಯದಲ್ಲೊಂದು ಅಚ್ಚರಿಯ ಬೆಳವಣಿಗೆ

Posted by Vidyamaana on 2023-06-01 15:32:42 |

Share: | | | | |


ರಾಜ್ಯ ರಾಜಕೀಯದಲ್ಲೊಂದು ಅಚ್ಚರಿಯ ಬೆಳವಣಿಗೆ

ಬೆಂಗಳೂರು: ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿ.ಕೆ.ಶಿವಕುಮಾರ್ ಅವರು, ಬಿಜೆಪಿ ಹಿರಿಯ ಮುಖಂಡ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನಿವಾಸಕ್ಕೆ ತೆರಳಿ ಸಮಾಲೋಚನೆ ನಡೆಸಿ ಕುತೂಹಲ ಸೃಷ್ಟಿಸಿದ್ದಾರೆ.

ಗುರುವಾರ ಇಲ್ಲಿನ ಡಾಲರ್ಸ್ ಕಾಲನಿಯಲ್ಲಿರುವ ಯಡಿಯೂರಪ್ಪ ಅವರ ಧವಳಗಿರಿ ನಿವಾಸಕ್ಕೆ ಡಿ.ಕೆ. ಶಿವಕುಮಾರ್ ಭೇಟಿ ನೀಡಿದರು. ತಮ್ಮ ನಿವಾಸಕ್ಕೆ ಆಗಮಿಸಿದ ಶಿವಕುಮಾರ್ ಅವರನ್ನು ಗೇಟ್ ಬಳಿ ಬಂದು ಹೂಗುಚ್ಛ ನೀಡಿದ ಬಿ.ಎಸ್.ಯಡಿಯೂರಪ್ಪ ಆತ್ಮೀಯವಾಗಿ ಬರಮಾಡಿಕೊಂಡರು. ಈ ವೇಳೆ ಡಿ.ಕೆ.ಶಿವಕುಮಾರ್ ಅವರು ಬಿಎಸ್‍ವೈ ಅವರಿಗೆ ಹೂಗುಚ್ಛ ನೀಡಿ ಗೌರವ ಸಲ್ಲಿಸಿದರು.

ಆ ಬಳಿಕ ಬಿಎಸ್‍ವೈ ಅವರ ನಿವಾಸದ ಒಳಗೆ ತೆರಳಿದ ಉಭಯ ನಾಯಕರು ಕೆಲಕಾಲ ಸಮಾಲೋಚನೆ ನಡೆಸಿದ್ದು, ಇಂದೊಂದು ಸೌರ್ಜನ್ಯ ಭೇಟಿ ಎಂದು ಹೇಳಲಾಗಿದೆ.

ಉಪ್ಪಿನಂಗಡಿ: ಚಾಲಕನ ಅಜಾಗರೂಕತೆಯಿಂದ ಹಿಮ್ಮುಖವಾಗಿ ಚಲಿಸಿದ ಖಾಸಗಿ ಬಸ್ ; ಅಂಗಡಿಗಳು ಹಾಗೂ ದ್ವಿಚಕ್ರ ವಾಹನಗಳಿಗೆ ಹಾನಿ

Posted by Vidyamaana on 2024-03-03 13:48:11 |

Share: | | | | |


ಉಪ್ಪಿನಂಗಡಿ: ಚಾಲಕನ ಅಜಾಗರೂಕತೆಯಿಂದ ಹಿಮ್ಮುಖವಾಗಿ ಚಲಿಸಿದ ಖಾಸಗಿ ಬಸ್ ; ಅಂಗಡಿಗಳು ಹಾಗೂ ದ್ವಿಚಕ್ರ ವಾಹನಗಳಿಗೆ ಹಾನಿ

ಉಪ್ಪಿನಂಗಡಿ: ಚಾಲಕನ ಅಜಾಗರೂಕತೆಯಿಂದ ಖಾಸಗಿ ಬಸ್ ಹಿಮ್ಮುಖವಾಗಿ ಚಲಿಸಿದ ಪರಿಣಾಮ ಅಂಗಡಿಗಳು ಹಾಗೂ ದ್ವಿಚಕ್ರ ವಾಹನಗಳಿಗೆ ಹಾನಿಯಾಗಿರುವ ಘಟನೆ ಉಪ್ಪಿನಂಗಡಿ ಬಸ್ ನಿಲ್ದಾಣದಲ್ಲಿ ನಡೆದಿದೆ.

ಚಾಲಕ ಅಜಾಗರೂಕತೆಯಿಂದ ಬಸ್ ಹಿಮ್ಮುಖವಾಗಿ ಚಲಾಯಿಸಿದ್ದರಿಂದ ಬಸ್ ವಾಹನಗಳ ಪಾರ್ಕಿಂಗ್ ಪ್ರದೇಶ ದಾಟಿ ಅಂಗಡಿಗೆ ನುಗ್ಗಿದ್ದರಿಂದ ನಾಗರಾಜ್ ಭಟ್ ಎಂಬವರ ಸಿಹಿತಿಂಡಿ ಮತ್ತು ತಂಪು ಪಾನೀಯ ಮಾರಾಟದ ಅಂಗಡಿಗೆ ಹಾನಿಯಾಗಿದೆ. ಕಬ್ಬು ಅರೆಯುವ ಯಂತ್ರ ಸೇರಿದಂತೆ ಅಂಗಡಿಯ ಕಪಾಟುಗಳಿಗೂ ಹಾನಿಯಾಗಿದೆ. ಮಾತ್ರವಲ್ಲದೆ ಮೂರಾಲ್ಕು ದ್ವಿಚಕ್ರ ವಾಹನ ಹಾಗೂ ಕಾರಿಗೂ ಹಾನಿಯಾಗಿದೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್‌ ಠಾಣೆಗೆ ದೂರು ನೀಡಲಾಗಿದೆ.

ಈ ದುರ್ಘಟನೆಯ ಸಂದರ್ಭ ಕೆಲವೇ ಜನರಿದ್ದರಿಂದ, ಅವರು ಅಲ್ಲಿಂದ ಓಡಿ ಪಾರಾಗಿದ್ದಾರೆ. ಅದೃಷ್ಟವಶಾತ್ ಅಂಗಡಿಯವರು ಅಪಾಯದಿಂದ ಪಾರಾಗಿದ್ದಾರೆ

ಕಡಬ ಅಪ್ರಾಪ್ತ ಬಾಲಕಿಯನ್ನು ಗರ್ಭಿಣಿಯಾಗಿಸಿದ ನಿಶಾಂತ್ ಬಂಧನ

Posted by Vidyamaana on 2023-07-10 16:23:37 |

Share: | | | | |


ಕಡಬ ಅಪ್ರಾಪ್ತ ಬಾಲಕಿಯನ್ನು ಗರ್ಭಿಣಿಯಾಗಿಸಿದ ನಿಶಾಂತ್ ಬಂಧನ

ಕಡಬ; ಅಪ್ರಾಪ್ತ ಬಾಲಕಿಯನ್ನು ಗರ್ಭಿಣಿಯಾಗಿಸಿದಾತನನ್ನು ಪೊಲೀಸರು ಬಂಧಿಸಿರುವ ಘಟನೆ ಕಡಬ ಕೋಡಿಂಬಾಳದಲ್ಲಿ ನಡೆದಿದೆ. ಕೋಡಿಂಬಾಳ ಗ್ರಾಮದ ನಿಶಾಂತ್ (20 ) ಬಂಧಿತ ಆರೋಪಿ . ಆತನ ವಿರುದ್ಧ ಪೋಕ್ಸ್ ಪ್ರಕರಣ ದಾಖಲಾಗಿದೆ.


ನಿಶಾಂತ್ ತನ್ನ ಸೋದರ ಸಂಬಂಧಿ 14 ರ ಹರೆಯದ ಬಾಲಕಿಯನ್ನು ಅತ್ಯಾಚಾರವೆಸಗಿದ್ದ ಪರಿಣಾಮ ಆಕೆ ಎಂಟು ತಿಂಗಳ ಗರ್ಭಿಣಿಯಾಗಿದ್ದಾಳೆ. ತಾಯಿ ಜೊತೆ ಬಾಲಕಿ ಕಡಬ ಸಮುದಾಯ ಆಸ್ಪತ್ರೆಗೆ ಚಿಕಿತ್ಸೆಗೆಂದು ಬಂದಾದ ಈ ಘಟನೆ ಬೆಳಕಿಗೆ ಬಂದಿದೆ.


ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಯುವಕನನ್ನು ಪೊಲೀಸರು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿರುವುದಾಗಿ ತಿಳಿದು ಬಂದಿದೆ

ಬೇಟಿ ಬಚಾವೋ ಬೇಟಿ ಪಡಾವೋ ಎಂದು ಬರೆಯಲು ಬಾರದೆ ಕೇಂದ್ರ ಸಚಿವೆ ಪರದಾಟ; ನೆಟ್ಟಿಗರಿಂದ ಕ್ಲಾಸ್

Posted by Vidyamaana on 2024-06-19 21:04:57 |

Share: | | | | |


ಬೇಟಿ ಬಚಾವೋ ಬೇಟಿ ಪಡಾವೋ ಎಂದು ಬರೆಯಲು ಬಾರದೆ ಕೇಂದ್ರ ಸಚಿವೆ ಪರದಾಟ; ನೆಟ್ಟಿಗರಿಂದ ಕ್ಲಾಸ್

ಬೋಪಾಲ್:‌ ದೇಶದಲ್ಲಿ ಸಿ ದರ್ಜೆ, ಡಿ ದರ್ಜೆ ನೌಕರರನ್ನು ನೇಮಿಸಿಕೊಳ್ಳಲು ಕೂಡ ಮಾನದಂಡ ಇದೆ. ಕನಿಷ್ಠ ಇಷ್ಟೇ ಶಿಕ್ಷಣ ಪಡೆದಿರಬೇಕು ಎಂಬ ನಿಯಮವಿದೆ. ಆದರೆ, ದೇಶದ ಭವಿಷ್ಯ ರೂಪಿಸಬೇಕಾದ ರಾಜಕಾರಣಿಗಳಿಗೆ ಯಾವುದೇ ಶೈಕ್ಷಣಿಕ ಹಿನ್ನೆಲೆಯ ಕಟ್ಟುಪಾಡುಗಳಿಲ್ಲ. ಇದೇ ಕಾರಣಕ್ಕೆ, 10ನೇ ಕ್ಲಾಸು ಫೇಲಾದವರು ಗ್ರಂಥಾಲಯ ಸಚಿವರಾಗುತ್ತಾರೆ, ಓದಲು ಬರದವರೂ ಶಿಕ್ಷಣ ಸಚಿವರಾಗುತ್ತಾರೆ.

ಇದಕ್ಕೆ ನಿದರ್ಶನ ಎಂಬಂತೆ, ಕೇಂದ್ರ ಸಚಿವೆ ಸಾವಿತ್ರಿ ಠಾಕೂರ್‌ (Savitri Thakur) ಅವರು ಕೇಂದ್ರ ಸರ್ಕಾರದ ಬೇಟಿ ಬಚಾವೋ ಬೇಟಿ ಪಡಾವೋ (Beti Bachao Beti P

non

hao) ಅಭಿಯಾನವನ್ನು ಹಿಂದಿಯಲ್ಲಿ ಬರೆಯಲು ಪರದಾಡಿದ್ದಾರೆ. ಅವರು ಅಭಿಯಾನದ ಹೆಸರನ್ನು ತಪ್ಪಾಗಿ ಬರೆದ ವಿಡಿಯೊ ಈಗ ವೈರಲ್‌ (Viral Video) ಆಗಿದೆ.

ಹೌದು, ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಹಾಯಕ ಸಚಿವೆಯಾಗಿರುವ ಸಾವಿತ್ರಿ ಠಾಕೂರ್‌ ಅವರು ಮಧ್ಯಪ್ರದೇಶದ ಧಾರ್‌ನಲ್ಲಿರುವ ಸರ್ಕಾರಿ ಶಾಲೆಯೊಂದರಲ್ಲಿ ನಡೆದ ಸ್ಕೂಲ್‌ ಚಲೋ ಅಭಿಯಾನದಲ್ಲಿ ಪಾಲ್ಗೊಂಡಿದ್ದಾರೆ. ಇದೇ ವೇಳೆ ಅವರು ಬೋರ್ಡ್‌ ಮೇಲೆ ಬೇಟಿ ಬಚಾವೋ ಬೇಟಿ ಪಡಾವೋ ಎಂಬುದಾಗಿ ಬರೆಯಲು ಮುಂದಾಗಿದ್ದಾರೆ. ಆದರೆ, ಅಭಿಯಾನದ ಹೆಸರು ಬರೆಯಲು ಅವರಿಗೆ ಬಂದಿಲ್ಲ. ಅವರು ಬೇಡಿ ಪಡಾವೋ ಬಚ್ಚಾವ್  ಎಂಬುದಾಗಿ ತಪ್ಪಾಗಿ ಬರೆದಿದ್ದಾರೆ.



Leave a Comment: