ಎಫ್‌ಐಆರ್ ರದ್ದು ಕೋರಿ ಶಾಸಕ ಹರೀಶ್ ಪೂಂಜ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್

ಸುದ್ದಿಗಳು News

Posted by vidyamaana on 2024-07-05 17:03:24 |

Share: | | | | |


ಎಫ್‌ಐಆರ್ ರದ್ದು ಕೋರಿ ಶಾಸಕ ಹರೀಶ್ ಪೂಂಜ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್

ಬೆಳ್ತಂಗಡಿ : ಅಕ್ರಮ ಕಲ್ಲು ಕೊರೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್‌ ಠಾಣೆಗೆ ಹೋಗಿ ಪೊಲೀಸರಿಗೆ ಬೆದರಿಕೆ ಹಾಕಿದ ಪ್ರಕರಣ ಹಾಗೂ ಅನುಮತಿ ಪಡೆಯದೆ ಪ್ರತಿಭಟನೆ ಮಾಡಿದ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರು ಹಾಕಿದ್ದ ಅರ್ಜಿಯನ್ನು ಹೈಕೋರ್ಟ್ ನ ಜನಪ್ರತಿನಿಧಿಗಳ ಕೋರ್ಟ್ ಇಂದು ವಜಾಗೊಳಿಸಿದೆ.

ಎರಡು ಪ್ರಕರಣವನ್ನು ರದ್ದು ಕೋರಿ ಹಾಕಿದ ಅರ್ಜಿಯ ಬಗ್ಗೆ ಜೂ. 5 ರಂದು(ಇಂದು) ಬೆಂಗಳೂರಿನ ಹೈಕೋರ್ಟ್ ನ ಜನಪ್ರತಿನಿಧಿಗಳ ಕೋರ್ಟ್ ನಲ್ಲಿ ವಿಚಾರಣೆ ನಡೆಯಿತು. ಈ ವೇಳೆ ಕೋರ್ಟ್ ಎರಡು ಪ್ರಕರಣವನ್ನು ರದ್ದು ಮಾಡಲು ಸಾಧ್ಯವಿಲ್ಲ ಎಂದು ಅರ್ಜಿಯನ್ನು ವಜಾಗೊಳಿಸಿದೆ ಹಾಗೂ ಈ ಪ್ರಕರಣದಲ್ಲಿ ಹೈಕೋರ್ಟ್ ಮಧ್ಯಪ್ರದೇಶಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.

 Share: | | | | |


ಗುಣಮಟ್ಟವಲ್ಲದ ಮಸಾಲೆ ಪದಾರ್ಥ ಮತ್ತು ಚಹಾಪುಡಿ ಗಳ ಪಟ್ಟಿ ಬಿಡುಗಡೆ ಮಾಡಿ ರಾಜ್ಯ ಸರ್ಕಾರ

Posted by Vidyamaana on 2024-06-07 10:39:17 |

Share: | | | | |


ಗುಣಮಟ್ಟವಲ್ಲದ ಮಸಾಲೆ ಪದಾರ್ಥ ಮತ್ತು ಚಹಾಪುಡಿ ಗಳ ಪಟ್ಟಿ ಬಿಡುಗಡೆ ಮಾಡಿ ರಾಜ್ಯ ಸರ್ಕಾರ

ಬೆಂಗಳೂರು : ಸುದ್ದಿ ಮಾಧ್ಯಮಗಳಲ್ಲಿ ಮಸಾಲೆ ಪದಾರ್ಥಗಳ ಗುಣಮಟ್ಟವು ಕಳಪೆಯಾಗಿರುವ ಬಗ್ಗೆ ಅಭಿಪ್ರಾಯಗಳು ವ್ಯಕ್ತವಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಮಸಾಲೆ ಪುಡಿ ಮತ್ತು ಸಾಂಬಾರ್ ಪದಾರ್ಥಗಳನ್ನು ಮೈಕ್ರೋ ಬಯೋಲಾಜಿಕಲ್ ಪೆರಿಮಿಟರ್ಸ್ ಅಂಶಗಳನ್ನು ಪರೀಕ್ಷಿಸಲು ಮಸಾಲೆ ಪುಡಿ ಮತ್ತು ಸಾಂಬಾರ್ ಪದಾರ್ಥಗಳ ಮಾದರಿಗಳನ್ನು ಸಂಗ್ರಹಿಸಿ ಮೇ ಮೊದಲ ಮತ್ತು ಎರಡನೇ ವಾರದಲ್ಲಿ ವಿಶ್ಲೇಷಣೆಗೆ ಒಳಪಡಿಸಲಾಗಿರುತ್ತದೆ.

ಅವುಗಳಲ್ಲಿ 23 ಮಾದರಿಗಳಲ್ಲಿ ರೋಗಕಾರಕ ಸೂಕ್ಷಂಆನು ಜೀವಿಗಳು ಕಂಡು ಬಂದ ಹಿನ್ನೆಲೆಯಲ್ಲಿ ಅಸುರಕ್ಷಿತ ಎಂದು ವರದಿಯಾಗಿರುತ್ತವೆ.


ತುಮಕೂರಿನ ಮೆಣಸಿನಕಾಯಿ ಪುಡಿ, ಮೈಸೂರು ಗ್ರಾಮಾಂತರದ ಕೌಶಿಕ್ ಪುಡ್ ಬ್ರ್ಯಾಂಡ್‍ನ ಮಿಕ್ಸ್ಡ್ ಮಸಾಲ, ಕೊಪ್ಪಳದ ಶ್ರೀ ಮಂಜುನಾಥ ಬ್ರ್ಯಾಂಡ್‍ನ ಮೆಣಿಸಿನಕಾಯ ಮತ್ತು ಕ್ಯಾಪ್ಸಿಕಾಂ (ಲಾಲ್ ಮಿರ್ಚಿ), ಮಂಡ್ಯದ ಸಾಂಬರ್ ಪುಡಿ, ದಾವಣಗೆರೆಯ ಅಪೇಕ್ಷಾ ಬ್ರ್ಯಾಂಡ್‍ನ ಸಾಂಬಾರು ಪುಡಿ, ಚಿಕ್ಕಬಳ್ಳಾಪುರದ ಎ.ಆರ್.ಕೆ ಬ್ರ್ಯಾಂಡ್‍ನ ಮೆಣಿಸಿನಕಾಯಿ ಪುಡಿ, ದಕ್ಷಿಣ ಕನ್ನಡದ ಅರುಣ್ ಮಸಾಲ ಬ್ರ್ಯಾಂಡ್‍ನ ಗರಂ ಮಸಾಲ ಚಿಕ್ಕಮಗಳೂರಿನ ಎವರೆಸ್ಟ್ ಬ್ರ್ಯಾಂಡ್‍ನ ಮಿಕ್ಸ್ಡ್ ಮಸಾಲ, ಚಿಕ್ಕಬಳ್ಳಾಪುರದ ಮೆಣಸಿನಕಾಯಿ ಪುಡಿ, ಕೊಡುಗಿನ ಈಸ್ಟ್ರನ್ ಬ್ರ್ಯಾಂಡ್‍ನ ಧನಿಯಾ ಪುಡಿ, ಲೋಲಾರದ ಸಾಂಬರುಪುಡಿ ಮತ್ತು ಮೆಣಸಿನಕಾಯಿ ಪುಡಿ, ರಾಯಚೂರಿನ ಜಿ.ಸ್ಪೆಷಲ್ (ಸ್ಥಳೀಯ) ಬ್ರ್ಯಾಂಡ್‍ನ ಜಿ.ಟಿ. ಸ್ಪೆಷಲ್ ಮೆಣಸಿನಕಾಯಿಪುಡಿ, ಗದಗಿನ ಎಂ.ಜಿ.ಆರ್ ಬ್ರ್ಯಾಂಡ್‍ನ ಮೆಣಸಿನಕಾಯಿ ಪುಡಿ, ಚಿತ್ರದುರ್ಗದ ಮಾರುತಿ ಬ್ರ್ಯಾಂಡ್‍ನ ಮೆಣಸಿನಕಾಯಿ ಪುಡಿ, ಯಾದಗಿರಿಯ ಚಾರ್‍ಮಿನಾರ್ ಸ್ಪೀಸಿಸ್ ಬ್ರ್ಯಾಂಡ್‍ನ ಮೆಣಸಿನಕಾಯಿ ಪುಡಿ, ಹಾವೇರಿಯ ಮೆಣಸಿನಕಯಿ ಪುಡಿ, ಕಲಬುರಗಿಯ ಎಂಟಿಆರ್ ಚಿಲ್ಲಿಪೌಡರ್ ಬ್ರ್ಯಾಂಡ್‍ನ ಮೆಣಸಿನಕಾಯಿ ಪುಡಿ, ಚೆನ್ನರಾಯಪಟ್ಟಣದ ತೇಜು ಸಾಂಬರ್ ಪೌಡರ್ ಬ್ರ್ಯಾಂಡ್‍ನ ಸಾಂಬಾರು ಪುಡಿ, ಶಿವಮೊಗ್ಗೆ ಎವರೆಸ್ಡ್ ಬ್ರ್ಯಾಂಡ್‍ನ ತೀಕಾಲಾಲ್ ಹಾಟ್ ಅಂಡ್ ರೆಡ್ ಮೆಣಸಿನಕಾಯಿ ಪುಡಿ, ಬಿ.ಬಿ.ಎಂ.ಪಿ, ಪೂರ್ವದ ಎ.ವಿವಿಎ ಬ್ರ್ಯಾಂಡ್‍ನ ಬಿಸಿಬೇಳೆ ಬಾತ್ ಪಛಡರ್, ಸಾಂಬಾರು ಪುಡಿ, ವಾಂಗಿಬಾತ್ ಪುಡಿಗಳು ಅಸುರಕ್ಷಿತ ಎಂದು ವರದಿಯಾಗಿರುವ ಸಮಬಂಧ ಆಹಾರ ಮಾದರಿಗಳ ತಯಾರಕರುಗಳ ವಿರುದ್ದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2006 ನಿಯಮಗಳು 2011ರನ್ವಯ ಕನೂನು ಕ್ರಮವಹಿಸಲಾಗುತ್ತಿದೆ ಎಂದು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇಂದು (ಜ 18) ವಿದ್ಯುತ್‌ ನಿಲುಗಡೆ

Posted by Vidyamaana on 2024-01-18 07:13:25 |

Share: | | | | |


ಇಂದು (ಜ 18) ವಿದ್ಯುತ್‌ ನಿಲುಗಡೆ

ಪುತ್ತೂರು: ರಸ್ತೆ ಅಗಲೀಕರಣಕ್ಕಾಗಿ ವಿದ್ಯುತ್ ಮಾರ್ಗ ಸ್ಥಳಾಂತರ ಕಾಮಗಾರಿ ನಿಮಿತ್ತ 110/33/11 ಕೆವಿ ಪುತ್ತೂರು ವಿದ್ಯುತ್ ಕೇಂದ್ರದಿಂದ ಹೊರಡುವ ಕಾಂಚನ, ರಾಮಕುಂಜ, ಉಪ್ಪಿನಂಗಡಿ ಓಲ್ಡ್, ಉಪ್ಪಿನಂಗಡಿ ವಾಟರ್ ಸಪ್ಪೆ ಮತ್ತು ಉಪ್ಪಿನಂಗಡಿ ಎಕ್ಸ್‌ಪ್ರೆಸ್ ಮತ್ತು 110/11 ಕೆವಿ ಕರಾಯ ವಿದ್ಯುತ್ ಉಪಕೇಂದ್ರದಿಂದ ಹೊರಡುವ ಉಪ್ಪಿನಂಗಡಿ ಟೌನ್ ಫೀಡರ್‌ನಲ್ಲಿ ಜ.18ರಂದು ಪೂರ್ವಾಹ್ನ ಗಂಟೆ 10 ರಿಂದ ಅಪರಾಹ್ನ 5.30ರವರೆಗೆ ವಿದ್ಯುತ್ ನಿಲುಗಡೆ ಮಾಡಲಾಗುವುದು. ಆದುದರಿಂದ 110/33/11 ಕೆವಿ ಪುತ್ತೂರು ವಿದ್ಯುತ್ ಕೇಂದ್ರದಿಂದ ಮತ್ತು 110/11ಕೆವಿ ಕರಾಯ ವಿದ್ಯುತ್ ಉಪಕೇಂದ್ರದಿಂದ ಹೊರಡುವ ಮೇಲೆ ತಿಳಿಸಿದ ಫೀಡರ್‌ನಿಂದ ವಿದ್ಯುತ್ ಸರಬರಾಜಾಗುವ ಬಜತ್ತೂರು, ಕೊಯಿಲ, ಹಿರೇಬಂಡಾಡಿ, ರಾಮಕುಂಜ, ನೆಕ್ಕಿಲಾಡಿ ಮತ್ತು ಉಪ್ಪಿನಂಗಡಿ ಗ್ರಾಮದ ವಿದ್ಯುತ್ ಬಳಕೆದಾರರು ಗಮನಿಸಿ ಸಹಕರಿಸಬೇಕಾಗಿ ಮೆಸ್ಕಾಂ ಪ್ರಕಟಣೆ ತಿಳಿಸಿದೆ

ಮೂಡಿಗೆರೆ : ರಸ್ತೆ ಮಧ್ಯ ಹಸುವಿಗೆ ಢಿಕ್ಕಿಯಾದ ಬೈಕ್ ಸವಾರರ ಮೇಲೆ ಹರಿದ ಲಾರಿ

Posted by Vidyamaana on 2023-11-05 04:30:43 |

Share: | | | | |


ಮೂಡಿಗೆರೆ : ರಸ್ತೆ ಮಧ್ಯ ಹಸುವಿಗೆ ಢಿಕ್ಕಿಯಾದ ಬೈಕ್ ಸವಾರರ ಮೇಲೆ ಹರಿದ ಲಾರಿ

ಮೂಡಿಗೆರೆ: ತಾಲೂಕಿನ ಬಿದರಹಳ್ಳಿ ಬಸ್ ಡಿಪೋ ಬಳಿ ಶನಿವಾರ ಭೀಕರ ಅಪಘಾತ ಸಂಭವಿಸಿದ್ದು, ರಸ್ತೆಮಧ್ಯೆ ಕೂತಿದ್ದ ಹಸುವಿಗೆ ಬೈಕ್ ಢಿಕ್ಕಿಯಾಗಿ ಕೆಳಗೆ ಬಿದ್ದ ಬೈಕ್ ಸವಾರರ ಮೇಲೆ ಗ್ಯಾಸ್ ಲಾರಿ ಹರಿದು ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದು, ಹಿಂಬದಿ ಸವಾರೆ ಗಂಭೀರವಾಗಿ ಗಾಯಗೊಂಡಿದ್ದಾರೆ.



ಲಾರಿ ಚಕ್ರದಡಿಗೆ ಸಿಲುಕಿದ ಪರಿಣಾಮವಾಗಿ ವಿಶ್ವೇಂದ್ರ (43) ಎಂಬ ದುರ್ದೈವಿ ಛಿದ್ರ-ಛಿದ್ರವಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.


ರಾಷ್ಟ್ರೀಯ ಹೆದ್ದಾರಿ 173ರಲ್ಲಿ ಭೀಕರ ಅಪಘಾತ ನಡೆದಿದ್ದು, ಬೈಕ್ ಹಿಂಬದಿ ಸವಾರೆಯಾಗಿದ್ದ ಲಕ್ಷ್ಮೀ ಎಂಬ ಮಹಿಳೆಯ ಕಾಲು ತುಂಡಾಗಿದ್ದು ಅವರನ್ನು ಮಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದೆ. ಇಬ್ಬರೂ ಕೊಪ್ಪ ತಾಲೂಕಿನ ಜಯಪುರ ಸಮೀಪದ ಕಲ್ಕೆರೆ ಗ್ರಾಮದವರು ಎಂದು ತಿಳಿದು ಬಂದಿದೆ. ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉಡುಪಿ: ತಾಯಿ, ಮಕ್ಕಳ ಹತ್ಯೆ ಪ್ರಕರಣದ ಆರೋಪಿಯ ಪರೋಲ್ ಅರ್ಜಿ ತಿರಸ್ಕೃತ

Posted by Vidyamaana on 2024-02-10 21:50:12 |

Share: | | | | |


ಉಡುಪಿ: ತಾಯಿ, ಮಕ್ಕಳ ಹತ್ಯೆ ಪ್ರಕರಣದ ಆರೋಪಿಯ  ಪರೋಲ್ ಅರ್ಜಿ ತಿರಸ್ಕೃತ

ಉಡುಪಿ : ಉಡುಪಿ ಸಮೀಪದ ನೇಜಾರಿನಲ್ಲಿ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣದ ಆರೋಪಿ ಪ್ರವೀಣ್ ಅರುಣ್ ಚೌಗುಲೆ ಸಲ್ಲಿಸಿರುವ ಪರೋಲ್ ಅರ್ಜಿಯನ್ನು ಉಡುಪಿಯ ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್‌ಸಿ ನ್ಯಾಯಾಲಯ ತಿರಸ್ಕರಿಸಿ ಆದೇಶ ನೀಡಿದೆ.ಫೆಬ್ರವರಿ 1ರಂದು ನಿಧನರಾದ ತನ್ನ ಸಹೋದರ ನಿತಿನ್ ಅವರ ಧಾರ್ಮಿಕ ವಿಧಿ ವಿಧಾನ ಕಾರ್ಯಕ್ರಮದಲ್ಲಿ ಮೂರು ತಾಸು ಭಾಗವಹಿಸಲು ತನ್ನ ಊರಾದ ಮಹಾರಾಷ್ಟ್ರ ರಾಜ್ಯದ ಸಾಂಗ್ಲಿಗೆ ತೆರಳಲು ಪರೋಲ್ ಮಂಜೂರು ಮಾಡುವಂತೆ ನ್ಯಾಯಾಲಯಕ್ಕೆ ಆರೋಪಿ ಫೆಬ್ರವರಿ 8ರಂದು ಅರ್ಜಿ ಸಲ್ಲಿಸಿದ್ದನು.ಆದರೆ ಇದಕ್ಕೆ ಹಿರಿಯ ಸಹಾಯಕ ಸರಕಾರಿ ಅಭಿಯೋಜಕ ಎಚ್.ಎಂ. ನದಾಫ್ ಆಕ್ಷೇಪಣೆ ಸಲ್ಲಿಸಿದ್ದು, ಆರೋಪಿಗೆ ಪರೋಲ್ ನೀಡಿದರೆ ಕಾನೂನು ಸುವ್ಯವಸ್ಥೆಗೆ ಸಮಸ್ಯೆಯಾಗುತ್ತದೆ. ಅಲ್ಲದೆ ಆರೋಪಿಯ ಮೇಲೆ ದಾಳಿಯಾಗುವ ಸಾಧ್ಯತೆ ಇರುತ್ತದೆ. ಅದೇ ರೀತಿ ಆರೋಪಿ ತನ್ನ ಸಹೋದರ ಮೃತಪಟ್ಟ ಬಗ್ಗೆ ಯಾವುದೇ ಮರಣ ಪ್ರಮಾಣಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸದೆ ಇರುವುದರಿಂದ ಆತನಿಗೆ ಪರೋಲ್ ನೀಡಬಾರದು ಎಂದು ವಾದ ಮಂಡಿಸಿದ್ದರು. ಕೋರ್ಟ್ ಈ ವಾದವನ್ನು ಪುರಸ್ಕರಿಸಿತ್ತು.

ಕಬಕ : ಓಜಾಲ ನಿವಾಸಿ ಉಸ್ಮಾನ್ ಹೃದಯಾಘಾತದಿಂದ ನಿಧನ

Posted by Vidyamaana on 2024-03-06 15:11:50 |

Share: | | | | |


ಕಬಕ : ಓಜಾಲ ನಿವಾಸಿ ಉಸ್ಮಾನ್ ಹೃದಯಾಘಾತದಿಂದ ನಿಧನ

ಪುತ್ತೂರು :- ಬಂಟ್ವಾಳ ತಾಲೂಕಿನ ಕುಲ ಗ್ರಾಮದ ಓಜಾಲ ನಿವಾಸಿ ಉಸ್ಮಾನ್ ರವರು ದೇರಳಕಟ್ಟೆ ಯಾನಪೋಯ ಆಸ್ಪತ್ರೆಯಲ್ಲಿ ಮಾ 06 ರಂದು  ಹೃದಯಾಘಾತದಿಂದ ನಿಧನರಾದರು 

ಹಲವಾರು ವರ್ಷಗಳಿಂದ ಸೆಕೆಂಡೆಂಡ್ ವಾಹನ ವ್ಯಾಪಾರಸ್ಥರು,ಹಲವಾರು ವರ್ಷಗಳ ಹಿಂದೆ ಪುತ್ತೂರಿನ ಜೆ.ಎಂ.ಕಟ್ಟಡದಲ್ಲಿ ಯುನೈನ್ ಅಂಟೋ ಲಿಂಕ್ಸ್ ಮಾಲಕ ರಾಗಿದ್ದರು,ಮೃತರು ಪತ್ನಿ ಮಕ್ಕಳನ್ನು ಅಗಲಿದ್ದಾರೆ

ಪುತ್ತೂರು : ಅಪ್ರಾಪ್ತ ಬಾಲಕಿಯ ಮೇಲೆ ಕಿರುಕುಳ ಆರೋಪ -ಕಡಬ ಮೂಲದ ಶಾಕಿರ್ ಪೊಲೀಸ್ ವಶಕ್ಕೆ

Posted by Vidyamaana on 2024-01-28 05:12:54 |

Share: | | | | |


ಪುತ್ತೂರು : ಅಪ್ರಾಪ್ತ  ಬಾಲಕಿಯ ಮೇಲೆ ಕಿರುಕುಳ ಆರೋಪ -ಕಡಬ ಮೂಲದ ಶಾಕಿರ್ ಪೊಲೀಸ್ ವಶಕ್ಕೆ

ಪುತ್ತೂರು:  ಯುವಕನೊಬ್ಬ ಅಪ್ರಾಪ್ತ ಬಾಲಕಿಗೆ ಕಿರುಕುಳ ನೀಡಿದ ಘಟನೆ ಪುತ್ತೂರು ನಗರದಲ್ಲಿ ಜ 27ರ ತಡ ರಾತ್ರಿ ನಡೆದಿದೆ. ಕೃತ್ಯ ಎಸಗಿದ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ಕಡಬ ಮೂಲದ ಶಾಕೀರ್ ವಶದಲ್ಲಿರುವ ವ್ಯಕ್ತಿ. ಪುತ್ತೂರು ಮೂಲದ ಅಪ್ರಾಪ್ತ ಬಾಲಕಿ, ಪುತ್ತೂರು  ದಾರಿ ಮಧ್ಯೆ ಆರೊಪಿ ದೌರ್ಜನ್ಯ ಎಸಗಿದ್ದಾರೆಂದು ಆರೋಪಿಸಲಾಗಿದೆ.ಆರೋಪಿಯನ್ನು ತಮ್ಮವಶಕ್ಕೆ ನೀಡಬೇಕೆಂದು ತಂಡವೊಂದು ಠಾಣೆಯ ಮುಂದೆ ಜಮಾಯಿಸಿತ್ತು. ಉದ್ರಿಕ್ತರನ್ನು ಪುತ್ತಿಲ ಪರಿವಾರ ಸಂಸ್ಥಾಪಕ ಅರುಣ್‌ ಕುಮಾರ ಪುತ್ತಿಲ ಸಮಾಧಾನಗೊಳಿಸಿದರು. ಆರೊಪಿಯ ವಿರುದ್ದ ಪೊಕ್ಕೋ ಪ್ರಕರಣ ದಾಖಲಿಸಲಾಗಿದೆ.



Leave a Comment: