ನಕಲಿ ಚಿನ್ನ ದ ಆಸೆಗೆ ತುಮಕೂರಿನಲ್ಲಿ ಬಲಿಯಾದರೇ ಬೆಳ್ತಂಗಡಿಯ ಮೂವರು?

ಸುದ್ದಿಗಳು News

Posted by vidyamaana on 2024-03-23 10:38:46 |

Share: | | | | |


ನಕಲಿ ಚಿನ್ನ ದ ಆಸೆಗೆ ತುಮಕೂರಿನಲ್ಲಿ ಬಲಿಯಾದರೇ ಬೆಳ್ತಂಗಡಿಯ ಮೂವರು?

ಬೆಳ್ತಂಗಡಿ : ತುಮಕೂರಿನಲ್ಲಿ ಕಾರಿಗೆ ಬೆಂಕಿ ಹಚ್ಚಿ ಕೆರೆಗೆ ತಳ್ಳಿದ ಪ್ರಕರಣದಲ್ಲಿ ಮೂವರು ಸಾವನ್ನಪ್ಪಿದ ಸಂಬಂಧಪಟ್ಟಂತೆ ಆರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ಪ್ರಕರಣದ‌ ಪ್ರಮುಖ ರೂವಾರಿ ತುಮಕೂರಿನ ಸ್ವಾಮಿ ಮತ್ತು ಐದು ಜನರನ್ನು ಕೋರಾ ಪೊಲೀಸರು ಮಾ.22 ರಂದು ರಾತ್ರಿ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ತುಮಕೂರಿಗೆ ಕಳೆದ ಹನ್ನೊಂದು ದಿನದ ಹಿಂದೆ ವ್ಯವಹಾರ ಸಂಬಂಧ ಮದಡ್ಕದ ರಫೀಕ್ ಎಂಬವರ ಮಾಲೀಕತ್ವದ ಎಸ್ ಪ್ರೆಸ್ ಕಾರಿನಲ್ಲಿ ಬೆಳ್ತಂಗಡಿ ತಾಲೂಕಿನ ನಡ ಗ್ರಾಮದ ಟಿ.ಬಿ.ಕ್ರಾಸ್ ನಿವಾಸಿ ಆಟೋ ಚಾಲಕ ಸಾಹುಲ್ ಹಮೀದ್(45) , ಕುವೆಟ್ಟು ಗ್ರಾಮದ ಮದಡ್ಕ ನಿವಾಸಿ ಇಸಾಕ್(56) , ಶಿರ್ಲಾಲು ಗ್ರಾಮದ ಸಿದ್ದಿಕ್(34) ಮೂವರು ಬಾಡಿಗೆ ಮಾಡಿಕೊಂಡು ಹೋಗಿದ್ದರು ಎಂದು ಗುರುತಿಸಿದ್ದಾರೆ.

ಇನ್ನು ಮೂರು ಜನ ಮೃತರೆಲ್ಲಾ ನಕಲಿ ಚಿನ‌್ನದ ದಂಧೆಯ ಆಸೆಗೆ ಬಲಿಯಾಗಿದ್ದಾರೆ ಅನ್ನೋದು ಪ್ರಾಥಮಿಕ ವಿಚಾರಣೆ ವೇಳೆ ಗೊತ್ತಾಗಿದೆ. ನಮ್ಮ ಜಾಗದಲ್ಲಿ ಕೃಷಿ ಮಾಡುವಾಗ ಚಿನ್ನದ ಹಂಡೆ ಸಿಕ್ಕಿದೆ ಕಡಿಮೆ ಚಿನ್ನವನ್ನು ಬೆಲೆಗೆ ನೀಡುತ್ತೇವೆ ಎಂದು ಸುಳ್ಳು ಹೇಳಿ ಮೂವರನ್ನು ಕರೆಸಿ ಹಣ ದೋಚುವ ಪ್ಲ್ಯಾನ್ ಮಾಡಿ ಕರೆಸಿಕೊಂಡು ನಂತರ ಕೈಕಾಲು ಕಟ್ಟಿ ಹಾಕಿ ಕಾರಿಗೆ ಬೆಂಕಿ ಹಚ್ಚಿ ಕೊಲೆ ಮಾಡಲಾಗಿದೆ ಎನ್ನಲಾಗಿದೆ.

ಪ್ರಕರಣದ ಪ್ರಮುಖ ರೂವಾರಿ ತುಮಕೂರಿನ ಸ್ವಾಮಿ ಮತ್ತು ಇತರ ಐದು ಜನ ಸೇರಿ ಒಟ್ಟು ಆರು ಜನರನ್ನು ವಶಕ್ಕೆ ಪಡೆದಿರುವ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. 


ಕೋರಾ ಪೊಲೀಸ್ ಠಾಣೆಯಲ್ಲಿ ಮಾ.22 ರಂದು ಸುಮೊಟೋ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದು. ಇನ್ನು ಮೂವರ ಶವ ಸಂಪೂರ್ಣವಾಗಿ ಸುಟ್ಟಿರುವ ಕಾರಣ ಗುರುತು ಪತ್ತೆಹಚ್ಚಲು ಡಿಎನ್ಎ ಪರೀಕ್ಷೆ ಬಳಿಕ ಮನೆಮಂದಿಗೆ ಶವ ಬಿಟ್ಟು ಕೊಡಲಿದ್ದಾರೆ. ಡಿಎನ್ಎ ವರದಿ ಬರಲು ಸುಮಾರು ಒಂದು ವಾರ ಬೇಕಾಗುತ್ತದೆ ಎಂದು ಪೊಲೀಸರು ಮನೆಯವರಿಗೆ ತಿಳಸಿದ್ದಾರೆ.

 Share: | | | | |


ಕುಟ್ರುಪಾಡಿ: ಕಾಡಾನೆ ದಾಳಿ ಹಾಲು ಸೊಸೈಟಿ ಸಿಬ್ಬಂದಿ ರಂಜಿತಾ ಮತ್ತು ರಮೇಶ್ ರೈ ಮೃತ್ಯು.

Posted by Vidyamaana on 2023-02-20 02:42:04 |

Share: | | | | |


ಕುಟ್ರುಪಾಡಿ: ಕಾಡಾನೆ ದಾಳಿ ಹಾಲು ಸೊಸೈಟಿ ಸಿಬ್ಬಂದಿ ರಂಜಿತಾ ಮತ್ತು ರಮೇಶ್ ರೈ ಮೃತ್ಯು.

ಕಡಬ: ಕುಟ್ರುಪಾಡಿ ಗ್ರಾಮದ ಮೀನಾಡಿ ಸಮೀಪ ಮುಂಜಾನೆ ಆನೆ ದಾಳಿ ನಡೆಸಿದ್ದು ಯುವತಿ ಸಹಿತ ಇಬ್ಬರು ಮೃತಪಟ್ಟಿದ್ದಾರೆ.

ಪೇರಡ್ಕ ಹಾಲು ಸೊಸೈಟಿಯಲ್ಲಿ ಸಿಬ್ಬಂದಿಯಾಗಿರುವ ರಂಜಿತಾ ಎಂಬವರು ಸೊಸೈಟಿ ಗೆ ಮನೆಯಿಂದ ಹೋಗುತ್ತಿದ್ದ ವೇಳೆ ಮೀನಾಡಿ ಎಂಬಲ್ಲಿ ಆನೆ ದಾಳಿ ನಡೆಸಿದೆ. ಇದೇ ವೇಳೆ ಸ್ಥಳದಲ್ಲಿದ್ದ ಸ್ಥಳೀಯ ನಿವಾಸಿ ರಮೇಶ್ ರೈ ಎಂಬವರ ಮೇಲೆ ಆನೆ ಅಟ್ಟಹಾಸ ಮೆರೆದಿದೆ. ರಮೇಶ್ ರೈ ಸ್ಥಳದಲ್ಲಿ ಮೃತಪಟ್ಟರೆ ರಂಜಿತ ಅವರು ನೆಲ್ಯಾಡಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದ್ದು, ಹೆಚ್ಚಿನ ಮಾಹಿತಿ ಇನ್ನಷ್ಟೆ ಬರಬೇಕಿದೆ.

ಪುತ್ತೂರು : ಸೂತ್ರಬೆಟ್ಟು ಟ್ರಾನ್ಸ್ಫಾರ್ಮರ್ ಬಳಿ ಅಗ್ನಿ ಅವಘಡ

Posted by Vidyamaana on 2024-02-13 07:28:10 |

Share: | | | | |


ಪುತ್ತೂರು : ಸೂತ್ರಬೆಟ್ಟು ಟ್ರಾನ್ಸ್ಫಾರ್ಮರ್ ಬಳಿ ಅಗ್ನಿ ಅವಘಡ

ಪುತ್ತೂರು : ಟ್ರಾನ್ಸ್ಫಾರ್ಮರ್ ಬಳಿ ಬೆಂಕಿ ಅವಘಡ ಸಂಭವಿಸಿದ ಘಟನೆ ಸೂತ್ರಬೆಟ್ಟು ಬಳಿ ನಡೆದಿದೆ.ಸೂತ್ರಬೆಟ್ಟು ಬಳಿ ರಸ್ತೆ ಬದಿಯ ಟ್ರಾನ್ಸ್ಫಾರ್ಮರ್ ನ ಹತ್ತಿರ ಬೆಂಕಿ ಅವಘಡ ಸಂಭವಿಸಿದ್ದು, ಹುಲ್ಲುಗಾವಲು ಬೆಂಕಿಗಾಹುತಿಯಾಗಿದೆ.

ತಕ್ಷಣ ಅಗ್ನಿಶಾಮಕದಳದ ಸಿಬ್ಬಂದಿ ಆಗಮಿಸಿದ್ದು, ಬೆಂಕಿ ನಂದಿಸುವ ಕಾರ್ಯ ನಿರ್ವಹಿಸಿದರು.

ಬೆಳ್ತಂಗಡಿ: ಮಹಿಳೆಯ ಶವ ಬಾವಿಯಲ್ಲಿ ಪತ್ತೆ

Posted by Vidyamaana on 2023-11-03 18:35:01 |

Share: | | | | |


ಬೆಳ್ತಂಗಡಿ: ಮಹಿಳೆಯ ಶವ ಬಾವಿಯಲ್ಲಿ ಪತ್ತೆ

ಬೆಳ್ತಂಗಡಿ : ವಿವಾಹಿತ ಮಹಿಳೆಯೊಬ್ಬರ ಶವ ಬಾವಿಯಲ್ಲಿ ಪತ್ತೆಯಾಗಿದ ಘಟನೆ ಸಂಬಂಧ ಧರ್ಮಸ್ಥಳ ಪೊಲೀಸರು ಪತಿ ಸುಧಾಕರ್ ನಾಯ್ಕ ನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.


ಬೆಳ್ತಂಗಡಿ ತಾಲೂಕಿನ ಬೆಳಾಲು ಗ್ರಾಮದ ಜ್ಯೋತಿನಗರದ ನಿವಾಸಿ ಟ್ಯಾಪಿಂಗ್ ಕೆಲಸ ಮಾಡುತ್ತಿರುವ ಪತಿ ಸುಧಾಕರ್ ಮತ್ತು ಪತ್ನಿ ಶಶಿಕಲಾ ನಡುವೆ ಗಲಾಟೆ ನಡೆದು ನಂತರ ಶಶಿಕಲಾ ವನ್ನು ಕೊಲೆ ಮಾಡಿ ಬಾವಿಗೆ ಹಾಕಿರುವ ಆರೋಪ ಪತ್ನಿ ಕುಟುಂಬದವರಿಂದ ಕೇಳಿಬರುತ್ತಿದೆ.


ಧರ್ಮಸ್ಥಳ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಸಂಸದರ ಸಾಧನೆಗೆ ಹೊಸ ಗರಿ ಮೂಡಿಸಿದ ಬಳ್ಪ - ಸಂಸದರ ಆದರ್ಶ ಗ್ರಾಮ ಯೋಜನೆ

Posted by Vidyamaana on 2023-11-10 07:41:02 |

Share: | | | | |


ಸಂಸದರ ಸಾಧನೆಗೆ ಹೊಸ ಗರಿ ಮೂಡಿಸಿದ ಬಳ್ಪ - ಸಂಸದರ ಆದರ್ಶ ಗ್ರಾಮ ಯೋಜನೆ

ಮಂಗಳೂರು: ಲೋಕಸಭಾ ಚುನಾವಣೆಗೆ ದಿನಗಣನೆ ಪ್ರಾರಂಭಗೊಂಡಿದೆ. ಈ ಹಿನ್ನಲೆಯಲ್ಲಿ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರಕ್ಕೆ ಈ ಬಾರಿ ಬಿಜೆಪಿ ಅಭ್ಯರ್ಥಿ ಯಾರಾಗಬಹುದೆಂಬ ಚರ್ಚೆಗಳೂ ಸಹ ಗರಿಗೆದರಿದೆ.

ಒಂದು ಮೂಲಗಳ ಪ್ರಕಾರ ಹ್ಯಾಟ್ರಿಕ್ ಸಂಸದ ನಳಿನ್ ಕುಮಾರ್ ಕಟೀಲ್ ಅವರಿಗೇ ಈ ಬಾರಿ ಪಕ್ಷ ಮಣೆ ಹಾಕುವ ಸಾಧ್ಯತೆಗಳು ದಟ್ಟವಾಗಿದೆ. ಹಾಲಿ ಸಂಸದರೂ ಹಾಗೂ ಭಾರತೀಯ ಜನತಾ ಪಾರ್ಟಿಯ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಬಗೆಗಿನ ಪರ ವಿರೋಧದ ಚರ್ಚೆಯ ನಡುವೆ ನಳಿನ್ ಅಭಿಮಾನಿಗಳಿಗೆ ಗುಡ್ ನ್ಯೂಸ್ ಬಂದಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆಯ ಸಂಸದರ ಆದರ್ಶ ಗ್ರಾಮ ಯೋಜನೆಯನ್ನು ಸಮರ್ಪಕವಾಗಿ ಬಳಸಿ ಗುರಿ ಮುಟ್ಟಿದ ರಾಜ್ಯದ ಸಂಸದರ ಪೈಕಿ ಮಂಗಳೂರು ಸಂಸದರು ಪ್ರಥಮ ಸ್ಥಾನದಲ್ಲಿದ್ದಾರೆ ಎಂದು ಸಂಸದರ ಆದರ್ಶ ಗ್ರಾಮದ ಯೋಜನಾ ನಿರ್ದೇಶಕರು ಹೇಳಿದ್ದಾರೆ.

ಸುಳ್ಯ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಬಳ್ಪ ಗ್ರಾಮವನ್ನು ಸಂಸದರು ಆಯ್ಕೆ ಮಾಡಿಕೊಂಡಿದ್ದು ಈ ಗ್ರಾಮದಲ್ಲಿ ಅಭೂತಪೂರ್ವ ಅಭಿವೃದ್ಧಿ ಕಾಮಗಾರಿಯನ್ನು ನಡೆಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಶಾಲೆ, ಆಸ್ಪತ್ರೆ, ಸಾರಿಗೆ ವ್ಯವಸ್ಥೆ, ನೆಟ್ವರ್ಕ್ ವ್ಯವಸ್ಥೆ ಸೇರಿದಂತೆ 55 ಕೋಟಿ ರೂಪಾಯಿ ಅನುದಾನವನ್ನು ಒಂದು ಗ್ರಾಮಕ್ಕೆ ಒದಗಿಸಿ ಆ ಗ್ರಾಮವನ್ನು ಸಮಗ್ರ ಅಭಿವೃದ್ಧಿ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಇದು, ಸತತ ನಾಲ್ಕನೇ ಬಾರಿ ಸಂಸದ ಸ್ಥಾನದ ಮೇಲೆ ಕಣ್ಣಿಟ್ಟಿರುವ ನಳಿನ್ ಕುಮಾರ್ ಕಟೀಲ್ ಅವರ ಉಮೇದುವಾರಿಕೆಗೆ ಇನ್ನಷ್ಟು ಬಲ ತುಂಬಲಿದೆ ಎಂಬ ಲೆಕ್ಕಾಚಾರ ಪಕ್ಷದಲ್ಲಿ ನಡೆಯುತ್ತಿದೆ.

ಪಿಡಿಓ ನೇಮಕಾತಿಗೆ ಅರ್ಜಿ ಆಹ್ವಾನಿಸಿದ ಪಂಚಾಯತ್ ರಾಜ್ ಇಲಾಖೆ- ವಿದ್ಯಾಮಾತಾ ಅಕಾಡೆಮಿಯಲ್ಲಿ ತರಬೇತಿ ಪ್ರಾರಂಭ

Posted by Vidyamaana on 2024-03-18 16:52:23 |

Share: | | | | |


ಪಿಡಿಓ ನೇಮಕಾತಿಗೆ ಅರ್ಜಿ ಆಹ್ವಾನಿಸಿದ ಪಂಚಾಯತ್ ರಾಜ್ ಇಲಾಖೆ- ವಿದ್ಯಾಮಾತಾ ಅಕಾಡೆಮಿಯಲ್ಲಿ ತರಬೇತಿ ಪ್ರಾರಂಭ

ಪುತ್ತೂರು  ಕರ್ನಾಟಕ ಸರಕಾರವು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಓ) 150 ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಪ್ರಾರಂಭಿಸಿದ್ದು ಅರ್ಜಿ ಆಹ್ವಾನಿಸಲಾಗಿದೆ. ಪ್ರತಿಷ್ಠಿತ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರವಾದ ವಿದ್ಯಾಮಾತಾ ಅಕಾಡೆಮಿಯಲ್ಲಿ ನೇರ ಮತ್ತು ಆನ್ಲೈನ್ ಮೂಲಕ ಲಿಖಿತ ಪರೀಕ್ಷಾ ತರಬೇತಿಯನ್ನು ಪ್ರಾರಂಭಿಸಲಿದ್ದು 18/03/2024 ಸೋಮವಾರದಿಂದ ಪ್ರವೇಶಾತಿ ಪ್ರಾರಂಭಗೊಳ್ಳಲಿದೆ.


ತರಬೇತಿ ಅವಧಿ ಎರಡುವರೆ ತಿಂಗಳು. ಕಳೆದ ಎರಡುವರೆ ವರ್ಷದಿಂದ ಪೊಲೀಸ್ ,ಅರಣ್ಯ ಇಲಾಖೆ, ಬ್ಯಾಂಕಿಂಗ್, ಕೆ.ಎಂ.ಎಫ್ ,ಶಿಕ್ಷಕರ ನೇಮಕಾತಿ ಸೇರಿದಂತೆ 116 ಎಷ್ಟು ಅಭ್ಯರ್ಥಿಗಳು ವಿದ್ಯಾಮಾತಾ ಅಕಾಡೆಮಿಯಲ್ಲಿ ತರಬೇತಿ ಪಡೆದು ಸರಕಾರಿ ಹುದ್ದೆಗಳನ್ನು ಏರಿರುತ್ತಾರೆ. ಕರ್ನಾಟಕ ಸರಕಾರವು ಇತ್ತೀಚೆಗೆ ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸಿರುವ ಗ್ರಾಮ ಆಡಳಿತ ಅಧಿಕಾರಿ(VAO) ಹುದ್ದೆಗಳಿಗೂ ಅಕಾಡೆಮಿಯಲ್ಲಿ ತರಬೇತಿ ಪ್ರಾರಂಭವಾಗಿದ್ದು, ಸದ್ಯ ಕರೆದಿರುವ ಪಿಡಿಓ ಹುದ್ದೆಗಳಿಗೆ ತರಬೇತಿಯನ್ನು ಪ್ರಾರಂಭಿಸಲಾಗುತ್ತಿದೆ.


ನೇರ ತರಗತಿಗಳು – ಬೆಳಗ್ಗೆ 9:30 ರಿಂದ ಮಧ್ಯಾಹ್ನ 1:00 ರವರೆಗೆ (ವಾರದ 5 ದಿನ) ಆನ್ಲೈನ್ ತರಗತಿಗಳು – ರಾತ್ರಿ 7:00 ರಿಂದ 8:00 ರವರೆಗೆ (ವಾರದ ಎಲ್ಲಾ ದಿನ) ಉದ್ಯೋಗಸ್ಥರಿಗೆ, ವಿದ್ಯಾರ್ಥಿಗಳಿಗೆ , ಗೃಹಿಣಿಯರಿಗಾಗಿ ಅನುಕೂಲವಾಗುವಂತೆ ನಡೆಯುತ್ತವೆ.


ಪಿಡಿಓ ನೇಮಕಾತಿಯ ಅರ್ಹತೆಗಳು :-

ವಿದ್ಯಾರ್ಹತೆ : ಯಾವುದೇ ಪದವಿ

ವೇತನ : 70,000 ವರೆಗೆ

ಹುದ್ದೆಗಳು :150

ವಯಸ್ಸಿನ ಮಿತಿ :18 ರಿಂದ 40 (ಸಾಮಾನ್ಯ 35 , ಒ.ಬಿ.ಸಿ 38 , SC,ST 40)

ನೇಮಕಾತಿ ಪ್ರಕ್ರಿಯೆ : ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ

ಅರ್ಜಿ ಪ್ರಾರಂಭ ದಿನಾಂಕ : 15/04/2024 ರಿಂದ 15/05/2024

ಅರ್ಜಿ ಸಲ್ಲಿಸಲು ಅವಶ್ಯಕ ದಾಖಲೆಗಳು: ಫೋಟೋ ,ಅಂಕಪಟ್ಟಿ ,ಆಧಾರ್ ಕಾರ್ಡ್, ಜಾತಿ ಪ್ರಮಾಣ ಪತ್ರ ,ಕನ್ನಡ ಮಾಧ್ಯಮ ಮತ್ತು ಗ್ರಾಮೀಣ ಅಭ್ಯರ್ಥಿ ಪ್ರಮಾಣ ಪತ್ರ.


ತರಬೇತಿಗಾಗಿ ಪ್ರವೇಶಾತಿ ಪಡೆಯಲು ಇಚ್ಛಿಸುವವರು ಹೆಚ್ಚಿನ ಮಾಹಿತಿಗಾಗಿ :

ವಿದ್ಯಾಮಾತಾ ಅಕಾಡೆಮಿ – ಹಿಂದೂಸ್ತಾನ್ ಕಾಂಪ್ಲೆಕ್ಸ್,1 ನೇ ಮಹಡಿ ,ಎ.ಪಿ.ಎಂ.ಸಿ ರಸ್ತೆ ಪುತ್ತೂರು.

9620468869/ 9148935808

ಸುಳ್ಯ ಶಾಖೆ : TAPCMS ಬಿಲ್ಡಿಂಗ್ ,ಕಾರ್ ಸ್ಟ್ರೀಟ್

9448527606

ಶಾಸಕರ ಇಂದಿನ ಕಾರ್ಯಕ್ರಮ ಆ 13

Posted by Vidyamaana on 2023-08-13 00:43:48 |

Share: | | | | |


ಶಾಸಕರ ಇಂದಿನ ಕಾರ್ಯಕ್ರಮ ಆ 13

ಪುತ್ತೂರು ಶಾಸಕ ಅಶೋಕ್ ಕುಮಾರ್ ಅವರು ಆಗಸ್ಟ್ 13 ರಂದು

ಬೆಳ್ಳಗ್ಗೆ  10:00 ಆಟಿಡೊಂಜಿ ದಿನ ಕರ್ನಾಟಕ ರಾಜ್ಯ ದೇವಾಡಿಗರ ಸಂಘ,ಮಣ್ಣ ಗುಡ್ಡ ಮಂಗಳೂರು 

ಬೆಳ್ಳಗ್ಗೆ  11

ಆಟಿದ ಕೂಟ ಬಂಟರ ಭವನ  ಸುರತ್ಕಲ್ 

ಮದ್ಯಾಹ್ನ  1:00 ಆಟಿದ ಕೂಟ  ಬಂಟರ ಭವನ  ಪುತ್ತೂರು 

ಮದ್ಯಾಹ್ನ  2:00 ವಿಟ್ಲ ವಲಯ ಬಂಟರ ಸಂಘದ ಆಟಿದ ಕೂಟ ಪುಣಚ ಬೈಲು ಗುತ್ತು 


ಮದ್ಯಾಹ್ನ 2:30 ಕೆಸರು ಗದ್ದೆ ವಿಟ್ಲ 


ಮದ್ಯಾಹ್ನ  3:30 ಕೆಸರು ಗದ್ದೆ  ಬಿಳಿಯೂರು 


ಮದ್ಯಾಹ್ನ  4:00 ಕೆಸರು ಗದ್ದೆ  ಪುಳಿತ್ತಡಿ ಉಪ್ಪಿನಂಗಡಿ 


ಸಂಜೆ 5:30 ಕೆಸರು ಗದ್ದೆ ಕೈಕಾರ

ಕಾರ್ಯಕ್ರಮದ ಲ್ಲಿ ಭಾಗವಹಿಸಲಿದ್ದಾರೆ



Leave a Comment: