ಕಾರು ಡಿಕ್ಕಿ: ಯುಕೆಜಿ ವಿದ್ಯಾರ್ಥಿ ಮಹಮ್ಮದ್ ಆದಿಲ್ ಮೃತ್ಯು

ಸುದ್ದಿಗಳು News

Posted by vidyamaana on 2023-09-23 20:22:34 | Last Updated by Vidyamaana on 2023-09-23 20:22:34

Share: | | | | |


ಕಾರು ಡಿಕ್ಕಿ: ಯುಕೆಜಿ ವಿದ್ಯಾರ್ಥಿ ಮಹಮ್ಮದ್ ಆದಿಲ್ ಮೃತ್ಯು

ಪುತ್ತೂರು: ಮಧ್ಯಾಹ್ನ ಕೆಯ್ಯೂರಿನಲ್ಲಿ ನಡೆದ ಕಾರು ಅಪಘಾತದಲ್ಲಿ ಕೆಯ್ಯೂರು ಕರ್ನಾಟಕ ಪಬ್ಲಿಕ್ ಸ್ಕೂಲ್ ನ ಯುಕೆಜಿ ವಿದ್ಯಾರ್ಥಿ,ನುಸ್ರತುಲ್ ಇಸ್ಲಾಂ ಮದ್ರಸದ 1ನೇ ತರಗತಿ ವಿದ್ಯಾರ್ಥಿ ಮೃತಪಟ್ಟಿರುವುದಾಗಿ ವರದಿಯಾಗಿದೆ.

ಮೃತನನ್ನು 5 ವರ್ಷ ಪ್ರಾಯದ ಮುಹಮ್ಮದ್ ಆದಿಲ್ ಎಂದು ಗುರುತಿಸಲಾಗಿದೆ‌. ಕೆಯ್ಯೂರು ನಿವಾಸಿ ಹಾರೀಸ್ ದಾರಿಮಿ ಅವರ ಪುತ್ರ.

ಪುತ್ತೂರು ಕಡೆ ಬರುತ್ತಿದ್ದ ಈಕೋ ಕಾರು ಬಾಲಕನಿಗೆ ಢಿಕ್ಕಿ ಹೊಡೆದಿದ್ದು, ಬಾಲಕ ಗಂಭೀರ ಗಾಯಗೊಂಡಿದ್ದ. ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ಸಂಜೆ ವೇಳೆ ಮೃತಪಟ್ಟ ಬಗ್ಗೆ ವರದಿಯಾಗಿದೆ.

 Share: | | | | |


ಮಂಗಳೂರು: ಪಡೀಲ್ ಅಂಡರ್‌ಪಾಸ್‌ನಲ್ಲಿ ಅಪಘಾತ ಬಜಾಲ್ ಪಲ್ಲಕೆರೆ ನಿವಾಸಿ ಭವಿನ ಮೃತ್ಯು - ಇಬ್ಬರಿಗೆ ತೀವ್ರ ಗಾಯ

Posted by Vidyamaana on 2023-09-14 22:22:47 |

Share: | | | | |


ಮಂಗಳೂರು: ಪಡೀಲ್ ಅಂಡರ್‌ಪಾಸ್‌ನಲ್ಲಿ ಅಪಘಾತ ಬಜಾಲ್ ಪಲ್ಲಕೆರೆ ನಿವಾಸಿ ಭವಿನ ಮೃತ್ಯು - ಇಬ್ಬರಿಗೆ ತೀವ್ರ ಗಾಯ

ಮಂಗಳೂರು: ನಗರದ ಪಡೀಲ್ ಅಂಡ‌ ಪಾಸ್‌ನಲ್ಲಿ ಗುರುವಾರ ನಡೆದ ರಸ್ತೆ ಅಫಘಾತದಲ್ಲಿ ವಿದ್ಯಾರ್ಥಿಯೊಬ್ಬ ಮೃತಪಟ್ಟು ಇಬ್ಬರು ಗಾಯಗೊಂಡಿರುವುದಾಗಿ ಸಂಚಾರ ಠಾಣೆಯ ಪೊಲೀಸರು ಮಾಹಿತಿ ನೀಡಿದ್ದಾರೆ.


ಮೃತಪಟ್ಟ ಯುವಕನನ್ನು ಬಜಾಲ್ ಸಮೀಪದ ಪಲ್ಲಕೆರೆಯ ನಿವಾಸಿ ಭವಿನ್ ರಾಜ್ (20) ಎಂದು ಗುರುತಿಸಲಾಗಿದೆ. ಗಾಲ್ವಿನ್ (19) ಮತ್ತು ಆಶಿತ್ 17) ಎಂಬವರು ಗಾಯಗೊಂಡಿದ್ದು, ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.


ನಗರದ ಖಾಸಗಿ ಕಾಲೇಜಿನಲ್ಲಿ ಪ್ರಥಮ ವರ್ಷದ ಪದವಿ ಕಲಿಯುತ್ತಿದ್ದ ಭವಿನ್ ರಾಜ್ ಗುರುವಾರ ಮಧ್ಯಾಹ್ನ ತನ್ನ ಗೆಳೆಯರ ಜತೆ ಬೈಕ್‌ನಲ್ಲಿ ಸಂಚರಿಸುತ್ತಿದ್ದಾಗ ಪಡೀಲ್ ಅಂಡರ್‌ಪಾಸ್ ಬಳಿ ಬೈಕ್ ನಿಯಂತ್ರಣ ತಪ್ಪಿ ಅಂಡರ್‌ಪಾಸ್‌ ಫುಟ್‌ಪಾತ್‌ಗೆ ಡಿಕ್ಕಿಯಾಗಿದೆ ಎನ್ನಲಾಗಿದೆ. ಇದರಿಂದ ಮೂವರು ಕೂಡ ಗಾಯಗೊಂಡಿದ್ದು, ಈ ಪೈಕಿ ಭವಿನ್ ರಾಜ್ ಮೃತಪಟ್ಟಿದ್ದಾರೆ.


ಮಂಗಳೂರು ದಕ್ಷಿಣ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸುಳ್ಯ ತಾಲೂಕಿನ ಕಳಂಜದಲ್ಲಿ ದುಷ್ಕರ್ಮಿಗಳಿಂದ ಹತ್ಯೆಯಾದ ಮಸೂದ್ ಕುಟುಂಬಕ್ಕೆ ಮನೆ ಹಸ್ತಾಂತರ.

Posted by Vidyamaana on 2023-02-21 03:47:27 |

Share: | | | | |


ಸುಳ್ಯ ತಾಲೂಕಿನ ಕಳಂಜದಲ್ಲಿ ದುಷ್ಕರ್ಮಿಗಳಿಂದ ಹತ್ಯೆಯಾದ ಮಸೂದ್ ಕುಟುಂಬಕ್ಕೆ ಮನೆ ಹಸ್ತಾಂತರ.

ಸುಳ್ಯ: ಕಳೆದ ಜುಲೈನಲ್ಲಿ ಸುಳ್ಯ ತಾಲೂಕಿನ ಕಳಂಜ ಎಂಬಲ್ಲಿ ಹತ್ಯೆಗೀಡಾದ ಮಸೂದ್ ಕುಟುಂಬಕ್ಕೆ ಹೊಸ ಮನೆಯನ್ನು ಹಸ್ತಾಂತರ ಮಾಡಲಾಗಿದೆ.

ಮಸೂದ್ ಕುಟುಂಬಕ್ಕೆ ಅನೇಕ ದಾನಿಗಳು, ಸಂಘಟನೆಗಳು, ರಾಜಕೀಯ ನಾಯಕರುಗಳು ಭೇಟಿ ನೀಡಿ ಸಾಂತ್ವನ ಮತ್ತು ಸಹಾಯ ಹಸ್ತವನ್ನು ಚಾಚಿದ್ದರು. ಈ ಪೈಕಿ ದ.ಕ. ಮತ್ತು ಉಡುಪಿ ಜಿಲ್ಲೆ ಮುಸ್ಲಿಂ ಸೆಂಟ್ರಲ್ ಕಮಿಟಿ ಅಧ್ಯಕ್ಷರಾದ ಹಾಜಿ ಕೆ.ಎಸ್. ಮುಹಮ್ಮದ್ ಮಸೂದ್ ಅವರು ಸೆಂಟ್ರಲ್ ಕಮಿಟಿಯಿಂದ ನೀಡಿದ 30 ಲಕ್ಷ ರೂ., ತಾಲೂಕು ಜಮಾಅತ್ ಮತ್ತು ದಾನಿಗಳು ನೀಡಲಾದ ಮೊತ್ತದಲ್ಲಿ ಸುಳ್ಯ ತಾಲೂಕು ಬೆಳ್ಳಾರೆ ಎಂಬಲ್ಲಿ ಮನೆಯನ್ನು ಹಾಗೂ ಉಳಿದ ಮೊತ್ತದಲ್ಲಿ ಮಸೂದ್ ಸಹೋದರಿಯ ಮದುವೆಗೆ ಚಿನ್ನಾಭರಣ ಖರೀದಿಸುವ ಯೋಜನೆ ರೂಪಿಸಿ ನಿನ್ನೆ ಬೆಳ್ಳಾರೆಯಲ್ಲಿ ಮಸೂದ್ ಕುಟುಂಬಕ್ಕೆ ಮನೆ ಹಸ್ತಾಂತರಿಸಿದ್ದಾರೆ.ದ.ಕ. ಮತ್ತು ಉಡುಪಿ ಜಿಲ್ಲಾ ಸೆಂಟ್ರಲ್ ಕಮಿಟಿ ಅಧ್ಯಕ್ಷ ಕೆ.ಎಸ್. ಮುಹಮ್ಮದ್ ಮಸೂದ್ ಅವರು ಮನೆ ಹಸ್ತಾಂತರ ಕಾರ್ಯಕ್ರಮ ನೆರವೇರಿಸಿ ಮಾತನಾಡಿ, ಮನೆ ಇಲ್ಲದೆ ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದ ಈ ನಿರ್ಗತಿಕ ಕುಟುಂಬ ಸಂಕಷ್ಟದಲ್ಲಿದ್ದಾಗ ಜಾತಿ, ಮತ ಭೇದ ಇಲ್ಲದೆ ನೆರವಿಗೆ ಧಾವಿಸಿ ಸಾಂತ್ವನ ಹೇಳಿ ಸಹಾಯ ಮಾಡಿ ಮಾನವೀಯತೆ ಮೆರೆದ ಎಲ್ಲರಿಗೂ ನಮ್ಮ ಅಭಿನಂದನೆಗಳು. ಎಲ್ಲರೂ ಪ್ರೀತಿ, ವಿಶ್ವಾಸದಿಂದ ಪರಸ್ಪರ ಸೌಹಾರ್ದತೆಯಿಂದ ದೇಶದ ಜಾತ್ಯತೀತ ಮೌಲ್ಯದ ಸೌಂದರ್ಯ ಹೆಚ್ಚಿಸಲು ಕಾರಣ ಕಾರಣಕರ್ತರಾಗೋಣ ಎಂದರು.

ಪುತ್ತೂರು : ಬೆಥನಿ ಆಂಗ್ಲ ಮಾಧ್ಯಮ ಪ್ರೌಢ ಶಾಲಾ ರಕ್ಷಕ ಶಿಕ್ಷಕ ಸಂಘದ ಮಹಾಸಭೆ

Posted by Vidyamaana on 2024-06-24 06:06:05 |

Share: | | | | |


ಪುತ್ತೂರು : ಬೆಥನಿ ಆಂಗ್ಲ ಮಾಧ್ಯಮ ಪ್ರೌಢ ಶಾಲಾ ರಕ್ಷಕ ಶಿಕ್ಷಕ ಸಂಘದ ಮಹಾಸಭೆ

ಪುತ್ತೂರು :ಪುತ್ತೂರಿನ ಶೈಕ್ಷಣಿಕ ಕ್ಷೇತ್ರದ ಇತಿಹಾಸದಲ್ಲಿ ಶೈಕ್ಷಣಿಕವಾಗಿ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಮುಂಚೂಣಿ ಸಂಸ್ಥೆಯಾದ ಬೆಥನಿ ಆಂಗ್ಲ ಮಾಧ್ಯಮ ಪ್ರೌಢಶಾಲೆ ಪಾಂಗ್ಲಾಯ್ ದರ್ಬೆ ಪುತ್ತೂರು ಇಲ್ಲಿನ ರಕ್ಷಕ - ಶಿಕ್ಷಕ   ಸಂಫದ ಮಹಾಸಭೆಯು  ಜೂ 22 ನೇ ಶನಿವಾರದಂದು ಶಾಲಾ ಸಭಾಂಗಣದಲ್ಲಿ ರಕ್ಷಕ - ಶಿಕ್ಷಕ ಸಂಘದ ಅಧ್ಯಕ್ಷರಾದ ವಂದನೀಯ ಭಗಿನಿ ಪ್ರಶಾಂತಿ ಬಿ ಎಸ್ ಅಧ್ಯಕ್ಷತೆಯಲ್ಲಿ ನೆರವೇರಿತು.

     ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಸಂತ ಅಲೋಶಿಯಸ್ ವಿಶ್ವವಿದ್ಯಾಲಯ ಮಂಗಳೂರು ಇಲ್ಲಿನ ಉಪನ್ಯಾಸಕರಾಗಿರುವ ಪ್ರೋ. ಸೆವ್ರಿನ್ ಪಿಂಟೊರವರು ಮಾತನಾಡಿ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಯಲ್ಲಿ ಪೋಷಕರು ಮತ್ತು ಶಿಕ್ಷಕರು ಎರಡು ಕಂಬಗಳಿದ್ದಂತೆ. ಎರಡು ಕಂಬಗಳಲ್ಲಿ ಒಂದು ಅಲ್ಲಾಡಿದರೂ ಮಕ್ಕಳ ಭವಿಷ್ಯಕ್ಕೆ ಅಪಾಯಕಾರಿ. ಆ ನಿಟ್ಟಿನಲ್ಲಿ ಪೋಷಕರು ಮತ್ತು ಶಿಕ್ಷಕರು ಎಚ್ಚರಿಕೆಯಿಂದ ಕಾರ್ಯಪ್ರವೃತ್ತರಾಗಬೇಕು,



ನಡು ರೋಡಲ್ಲೇ ಚಲಿಸುವ ಗಾಡಿ ಮೇಲೆ ರೊಮ್ಯಾನ್ಸ್- ವಿಡಿಯೋ ವೈರಲ್

Posted by Vidyamaana on 2024-01-16 21:29:39 |

Share: | | | | |


ನಡು ರೋಡಲ್ಲೇ ಚಲಿಸುವ ಗಾಡಿ ಮೇಲೆ ರೊಮ್ಯಾನ್ಸ್- ವಿಡಿಯೋ ವೈರಲ್

ವೈರಲ್ ವೈರಲ್ ವೈರಲ್.... ಸಾಮಾಜಿಕ ಜಾಲತಾಣದಲ್ಲಿ ಎಲ್ಲವೂ ವೈರಲ್ ಆಗಿಬಿಡುತ್ತವೆ. ಹೀಗಾಗಿ ಎಷ್ಟು ಜಾಗ್ರತೆಯಿಂದಿದ್ದರೂ ಕಡಿಮೆನೇ. ಅದರಲ್ಲೂ ಮೈಮರೆತು ವರ್ತಿಸುವ ಕೆಲ ಯುವ ಜೋಡಿಗಳ ವೀಡಿಯೋಗಳಂತೂ ಸಾಮಾಜಿಕ ಜಾಲತಾಣದಲ್ಲಿ ಕಾಡ್ಗಿಚ್ಚಿನಂತೆ ಎಲ್ಲೆಡೆ ಹರಡಿಬಿಡುತ್ತವೆ.ಹೀಗೊಂದು ವಿಡಿಯೋದಲ್ಲಿ ಯುವ ಜೋಡಿಯೊಂದು ನಡು ರೋಡಲ್ಲೇ ಚಲಿಸುವ ಗಾಡಿ ಮೇಲೆ ರೊಮ್ಯಾನ್ಸ್ ಮಾಡುವುದು ಕಂಡು ಬಂದಿದೆ

ನಡು ರೋಡಲ್ಲೇ ಚಲಿಸುವ ಗಾಡಿ ಮೇಲೆ ರೊಮ್ಯಾನ್ಸ್- ವೈರಲ್ ವಿಡಿಯೋ ನೋಡಲು ಕ್ಲಿಕ್ ಮಾಡಿ



ಹಿಂಬದಿ ಸವಾರರು ಈ ದೃಶ್ಯವನ್ನು ಸೆರೆಹಿಡಿದಿದ್ದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಈ ದೃಶ್ಯ ಮುಂಬೈನದ್ದು ಎಂದು ಹೇಳಲಾಗಿದೆ. ಇದು ನೋಡುಗರ ಕೋಪವನ್ನು ನೆತ್ತಿಗೇರಿಸಿದೆ. ಮುಂಬೈನ ನಡು ರಸ್ತೆಯಲ್ಲಿ ಯುವ ಜೋಡಿಯೊಂದು ತಮ್ಮ ಸ್ಕೂಟರ್‌ನಲ್ಲಿ ಅಪಾಯಕಾರಿ ಸಾಹಸ ಪ್ರದರ್ಶಿಸುತ್ತಿರುವುದು ಕ್ಯಾಮರಾದಲ್ಲಿ ಸೆರೆಯಾಗಿದೆ. ವೈರಲ್ ಆಗಿರುವ ವೀಡಿಯೊ ಬಾಂದ್ರಾ ರಿಕ್ಲಮೇಷನ್ ರಸ್ತೆಯಲ್ಲಿ ಸೆರೆಹಿಡಿದ ದೃಶ್ಯವಾಗಿದೆ. ಈ ವಿಡಿಯೋ ಜನರ ಆಕ್ರೋಶಕ್ಕೆ ಗುರಿಯಾಗಿದೆ. ಸ್ಕೂಟಿ ಮೇಲೆ ಕುಳಿತ ಹುಡುಗನ ಮೇಲೆ ಹುಡುಗಿ ಕುಳಿತಿದ್ದಾಳೆ. ಜೊತೆಗೆ ಅವರಿಬ್ಬರು ಶಾಲ್ ಅನ್ನು ಹೊದ್ದುಕೊಂಡಿದ್ದಾರೆ. ಹುಡುಗ ಸ್ಕೂಟಿ ಚಲಾಯಿಸುತ್ತಿದ್ದರೆ ಹುಡುಗಿ ಆತನನ್ನು ಗಟ್ಟಿಯಾಗಿ ಅಪ್ಪಿಕೊಂಡು ಕುಳಿತಿದ್ದಾಳೆ. ಇಬ್ಬರೂ ಶಾಲಿನ ಕೆಳಗೆ ಭಾಗಶಃ ಮರೆಯಾಗಿದ್ದಾರೆ. ಇವರಿಬ್ಬರೂ ಹೆಲ್ಮೆಟ್ ಕೂಡ ಧರಿಸಿಲ್ಲ. ಸಂಚಾರ ನಿಯಮವನ್ನು ಸಂಪೂರ್ಣವಾಗಿ ಉಲ್ಲಂಘಿಸಿದ್ದಾರೆ. ಈ ವಿಡಿಯೋವನ್ನು ಹಂಚಿಕೊಂಡವರು "ಈ ಧೈರ್ಯಶಾಲಿ ಜೋಡಿಯನ್ನು ಬಾಂದ್ರಾ ರಿಕ್ಲಮೇಷನ್‌ನಲ್ಲಿ ಗುರುತಿಸಲಾಯಿತು. ಅವರ ಅಸಾಂಪ್ರದಾಯಿಕ ಸ್ಕೂಟರ್ ರೈಡ್‌ ತಲೆ ತಿರುಗಿಸಿದೆ. @MumbaiPolice ರಸ್ತೆಗಳಲ್ಲಿ ಪ್ರತಿಯೊಬ್ಬರ ಸುರಕ್ಷತೆಯನ್ನು ಕಾಪಾಡಲು ನಿಮ್ಮ ಗಮನವನ್ನು ಇತ್ತ ಹರಿಸುವಂತೆ ವಿನಂತಿಸುತ್ತೇವೆ," ಎಂದು ಶೀರ್ಷಿಕೆಯಲ್ಲಿ ಬರೆದಿದ್ದಾರೆ. ಇನ್ನೂ ಸಹ ಪ್ರಯಾಣಿಕರಿಂದ ರೆಕಾರ್ಡ್ ಮಾಡಿದ ಈ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಕೋಲಾಹಲಕ್ಕೆ ಕಾರಣವಾಯಿತು. ಇದಕ್ಕೆ ನೆಟ್ಟಿಗರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ ಮತ್ತು ತಕ್ಷಣದ ಪೊಲೀಸ್ ಮಧ್ಯಸ್ಥಿಕೆಗೆ ಕರೆ ನೀಡಿದ್ದಾರೆ. ವಿಮಾನ ಹಾರಾಟ ತಡವಾಗಿದ್ದಕ್ಕೆ ಪೈಲಟ್‌ನನ್ನೇ ಥಳಿಸಿದ ಪ್ರಯಾಣಿಕ: ವಿಡಿಯೋ ವೈರಲ್ ನೆಟ್ಟಿಗರ ಕಾಮೆಂಟ್ ಹೀಗಿದೆ:- ಇವರು ಇತರ ಸವಾರರ ಪ್ರಾಣಕ್ಕೆ ಕುತ್ತು ತರುತ್ತಾರೆ. ಮುಂಬೈ ಪೊಲೀಸರು ಇಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ನೆಟ್ಟಿಗರರೊಬ್ಬರು ಕಾಮೆಂಟ್ ಮಾಡಿದ್ದಾರೆ. ಮುಂಬೈನಲ್ಲಿ ತುಂಬಾ ಚಳಿಯಂತೆ, ಹೀಗಿರುವಾಗ ಮನೆ ಬಿಟ್ಟು ಹೊರಬರಲು ಆಗದವರು ಹೀಗೆ ಮಾಡೋದು ಅನಿಸುತ್ತೆ ಮತ್ತೊಬ್ಬರು ಕುಟುಕಿದ್ದಾರೆ. ಮುಂಬೈನಲ್ಲಿ ಚಳಿ ನಡುವೆ ಹೀಗೂ ಹೊರಬರಬಹುದಾ? ಎಂದು ಮಗದೊಬ್ಬರು ಕಾಮೆಂಟ್ ಮಾಡಿದ್ದಾರೆ. ಚಳಿಗಾಲ ಮುಗಿದ ಬಳಿಕ ಈ ದೃಶ್ಯ ನೋಡಲು ಇನ್ನೂ ಕೆಟ್ಟದಾಗಿರುತ್ತದೆ ಎಂದು ಮತ್ತೊಬ್ಬರು ಬರೆದಿದ್ದಾರೆ. ಜನನಿಬಿಡ ರಸ್ತೆಯಲ್ಲಿ ಇಂತಹ ಘಟನೆ ದಾಖಲಾಗಿರುವುದು ಇದೇ ಮೊದಲಲ್ಲ. ಕಳೆದ ವರ್ಷವೂ ದೆಹಲಿಯ ರಸ್ತೆಗಳಲ್ಲಿ ಸ್ಕೂಟರ್ ಸವಾರಿ ಮಾಡುವಾಗ ಜೋಡಿಯೊಂದು ಒಬ್ಬರನ್ನೊಬ್ಬರು ತಬ್ಬಿಕೊಳ್ಳುತ್ತಿರುವ ವಿಡಿಯೋವೊಂದು ವೈರಲ್ ಆಗಿತ್ತು.

ಇಬ್ಬರು ಪುರುಷರೊಂದಿಗಿದ್ದ ಪತ್ನಿ; ಹೋಟೆಲ್ ಗೆ ನುಗ್ಗಿ ಚಪ್ಪಲಿಯಲ್ಲಿ ಥಳಿಸಿದ ಪತಿ

Posted by Vidyamaana on 2024-05-14 07:21:10 |

Share: | | | | |


ಇಬ್ಬರು ಪುರುಷರೊಂದಿಗಿದ್ದ ಪತ್ನಿ; ಹೋಟೆಲ್ ಗೆ ನುಗ್ಗಿ ಚಪ್ಪಲಿಯಲ್ಲಿ ಥಳಿಸಿದ ಪತಿ

ಉತ್ತರ ಪ್ರದೇಶ: ವೈದ್ಯರೊಬ್ಬರು ತನ್ನ ಪತ್ನಿಯನ್ನು ಹೋಟೆಲ್‌ ರೂಮ್ ನಲ್ಲಿ ಇತರ ಇಬ್ಬರು ಪುರುಷರೊಂದಿಗೆ ಆಕ್ಷೇಪಾರ್ಹ ಸ್ಥಿತಿಯಲ್ಲಿದ್ದ ವೇಳೆ ದಾಲ್ ನಡೆಸಿ ಹಿಡಿದು ಕೆಂಡಾಮಂಡಲವಾಗಿ ಬಡಿದಾಡಿಕೊಂಡ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಎರಡು ಕಡೆಯವರ ನಡುವೆ ನಡೆದ ತೀವ್ರ ವಾಗ್ವಾದ ಮತ್ತು ಘರ್ಷಣೆ ನಡೆದಿದ್ದು ಕೆಮರಾದಲ್ಲಿ ಸೆರೆಯಾಗಿದೆ.

ಪತ್ನಿಯ ಚಟುವಟಿಕೆಯಿಂದ ಅನುಮಾನಗೊಂಡ ವೈದ್ಯ ಇತರರೊಂದಿಗೆ ಗುರುವಾರ ರಾತ್ರಿ ಹೊಟೇಲ್ ಕೋಣೆಗೆ ನುಗ್ಗಿದ್ದು, ಹೆಂಡತಿಯೊಂದಿಗೆ ಇಬ್ಬರು ಪುರುಷರನ್ನು ಆಕ್ಷೇಪಾರ್ಹ ಪರಿಸ್ಥಿತಿಯಲ್ಲಿ ಕಂಡಿದ್ದಾರೆ. ಈ ವೇಳೆ ಕುಟುಂಬ ಸದಸ್ಯರು ಮತ್ತು ಇಬ್ಬರು ಪುರುಷರ ನಡುವೆ ದೈಹಿಕ ಘರ್ಷಣೆ ನಡೆದು ಹೈಡ್ರಾಮಾ ನಡೆದಿದೆ. ಘಟನೆ ಈಗ ಬಟಾಬಯಲಾಗಿದೆ.

ಮಾಣಿ : ಬಜರಂಗದಳ, ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾರಾಮಾರಿ : ಆಸ್ಪತ್ರೆಗೆ ದಾಖಲು

Posted by Vidyamaana on 2023-05-24 11:48:40 |

Share: | | | | |


ಮಾಣಿ : ಬಜರಂಗದಳ, ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾರಾಮಾರಿ : ಆಸ್ಪತ್ರೆಗೆ ದಾಖಲು

ಬಂಟ್ವಾಳ : ಬಜರಂಗದಳ, ಬಿಜೆಪಿ ಕಾರ್ಯಕರ್ತರ ಹಾಗೂ ಕಾಂಗ್ರೆಸ್‌ ಕಾರ್ಯಕರ್ತರ ನಡುವೆ ಜಗಳ ನಡೆದ ಘಟನೆ ಮಾಣಿಯಲ್ಲಿ ನಡೆದಿದೆ.ಘಟನೆಯಲ್ಲಿ ಪೆರಾಜೆ ಬಜರಂಗದಳ ಸಂಚಾಲಕ ಮಹೇಂದ್ರ ಹಾಗೂ ಬಿಜೆಪಿ ಕಾರ್ಯಕರ್ತ ಪ್ರಶಾಂತ್ ನಾಯ್ಕ್ ಗಾಯಗೊಂಡಿದ್ದು, ಇಬ್ಬರು ಪುತ್ತೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಚುನಾವಣಾ ಫಲಿತಾಂಶದ ದಿನ ಬಂಟ್ವಾಳ ಶಾಸಕರ ಗೆಲುವಿನ ಹರ್ಷ ಆಚರಣೆ ವೇಳೆ ಪಟಾಕಿ ಸಿಡಿಸಿ ಸಂಭ್ರಮ ಮಾಡುವ ವೇಳೆ ಇದೇ ತಂಡಗಳ ಮಧ್ಯೆ ಗಲಾಟೆ ನಡೆದಿತ್ತು ಎನ್ನಲಾಗಿದೆ.

ಸ್ಥಳಕ್ಕೆ ವಿಟ್ಲ ಪೊಲೀಸರ ತಂಡ ಭೇಟಿ ನೀಡಿ ಪ್ರಕರಣ ದಾಖಲಿಸಿದೆ.

ಹಲ್ಲೆ ನಡೆದದ್ದು ಕಟ್ಟಿಗೆಯಿಂದ, ತಲ್ವಾರಿನಿಂದಲ್ಲ:ಎಸ್ಪಿ‌ ವಿಕ್ರಮ್ ಅಮಟೆ ಸ್ಪಷ್ಟನೆ

ಬಂಟ್ವಾಳ : ಬಜರಂಗದಳ, ಬಿಜೆಪಿ ಹಾಗೂ ಕಾಂಗ್ರೆಸ್‌ ಕಾರ್ಯಕರ್ತರ ನಡುವೆ ಮಾಣಿಯಲ್ಲಿ ನಡೆದ ಜಗಳದಲ್ಲಿ ಕಟ್ಟಿಗೆಯಿಂದ ಹಲ್ಲೆ ನಡೆಸಲಾಗಿದೆಯೇ ಹೊರತು, ತಲವಾರಿನಿಂದಲ್ಲ ಎಂದು ಜಿಲ್ಲಾ‌ ಪೊಲೀಸ್ ವರಿಷ್ಠಾಧಿಕಾರಿ ಸ್ಪಷ್ಟನೆ ನೀಡಿದ್ದಾರೆ.

ಘಟನೆಯಲ್ಲಿ ಪೆರಾಜೆ ಬಜರಂಗದಳ ಸಂಚಾಲಕ ಮಹೇಂದ್ರ ಹಾಗೂ ಬಿಜೆಪಿ ಕಾರ್ಯಕರ್ತ ಪ್ರಶಾಂತ್ ನಾಯ್ಕ್ ಗಾಯಗೊಂಡಿದ್ದು, ಇಬ್ಬರು ಪುತ್ತೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಚುನಾವಣಾ ಫಲಿತಾಂಶದ ದಿನ ಬಂಟ್ವಾಳ ಶಾಸಕರ ಗೆಲುವಿನ ಹರ್ಷ ಆಚರಣೆ ವೇಳೆ ಪಟಾಕಿ ಸಿಡಿಸಿ ಸಂಭ್ರಮ ಮಾಡುವ ವೇಳೆ ಇದೇ ತಂಡಗಳ ಮಧ್ಯೆ ಗಲಾಟೆ ನಡೆದಿತ್ತು ಎನ್ನಲಾಗಿದೆ. ಸ್ಥಳಕ್ಕೆ ವಿಟ್ಲ ಪೊಲೀಸರ ತಂಡ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.




Leave a Comment: