ಲಿಂಗನಮಕ್ಕಿ ಜಲಾಶಯದಿಂದ ಯಾವುದೇ ಕ್ಷಣದಲ್ಲಿ ನದಿಗೆ ನೀರು

ಸುದ್ದಿಗಳು News

Posted by vidyamaana on 2024-07-25 16:34:52 |

Share: | | | | |


ಲಿಂಗನಮಕ್ಕಿ ಜಲಾಶಯದಿಂದ ಯಾವುದೇ ಕ್ಷಣದಲ್ಲಿ ನದಿಗೆ ನೀರು

ಶಿವಮೊಗ್ಗ: ಲಿಂಗನಮಕ್ಕಿ ಜಲಾಶಯದಿಂದ ಯಾವುದೇ ಕ್ಷಣದಲ್ಲಿ ನದಿಗೆ ನೀರು ಹರಿಸಲಾಗುತ್ತದೆ. ಹೀಗಾಗಿ ನದಿ ಪಾತ್ರದಲ್ಲಿ ವಾಸಿಸುತ್ತಿರುವ ಜನರು ತಮ್ಮ ಜಾನುವಾರುಗಳೊಂದಿಗೆ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಕರ್ನಾಟಕ ವಿದ್ಯುತ್ ನಿಗಮದ ಕಾರ್ಯ ನಿರ್ವಾಹಕ ಎಂಜಿನಿಯರ್ ಬುಧವಾರ ಮುನ್ನೆಚ್ಚರಿಕೆ ನೀಡಿದ್ದಾರೆ

ಕಾರ್ಗಲ್ ನ ಲಿಂಗನಮಕ್ಕಿ ಜಲಾಶಯದ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿರುವ ಕಾರಣ ಜಲಾಶಯಕ್ಕೆ ಸದ್ಯ 60 ಸಾವಿರ ಕ್ಯುಸೆಕ್ ಒಳಹರಿವು ಇದೆ.

Additional Image


ಜಲಾಶಯದ ಗರಿಷ್ಠ ಮಟ್ಟ 1819 ಅಡಿಗಳು ಇದ್ದು, ಜಲಾಶಯದಲ್ಲಿ ಈಗ 1801. 20 ಅಡಿ ನೀರಿನ ಸಂಗ್ರಹ ಇದೆ. ಮಳೆ ಹೆಚ್ಚಿರುವುದರಿಂದ ಜಲಾಶಯದ ಮಟ್ಟ ಶೀಘ್ರವೇ ಗರಿಷ್ಠ ಮಟ್ಟ ತಲುಪುವ ಸಾಧ್ಯತೆ ಇದೆ.


ಅಣೆಕಟ್ಟೆಯ ಸುರಕ್ಷತೆಯ ದೃಷ್ಟಿಯಿಂದ ಯಾವುದೇ ಕ್ಷಣದಲ್ಲಿ ನದಿಗೆ ನೀರು ಹರಿಸಬಹುದು ಎಂದು ಕೆಪಿಸಿಎಲ್‌ ಪ್ರಕಟಣೆಯಲ್ಲಿ ತಿಳಿಸಿದೆ.

 Share: | | | | |


ಗೋದಾಮಿನಲ್ಲಿ ಕಾರ್ಮಿಕರ ಮೇಲೆ ಮೆಕ್ಕೆಜೋಳದ ನಿಟ್ಟು ಕುಸಿತ

Posted by Vidyamaana on 2023-12-04 21:38:52 |

Share: | | | | |


ಗೋದಾಮಿನಲ್ಲಿ ಕಾರ್ಮಿಕರ ಮೇಲೆ ಮೆಕ್ಕೆಜೋಳದ ನಿಟ್ಟು ಕುಸಿತ

ವಿಜಯಪುರ : ನಗರದ ಖಾಸಗಿ ಗೋದಾಮಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಮೆಕ್ಕೆಜೋಳ ತುಂಬಿದ್ದ ಚೀಲ ನಿಟ್ಟು ಕುಸಿದು ಸುಮಾರು 10ಕ್ಕೂ ಹೆಚ್ಚು ಕಾರ್ಮಿಕರು ಚೀಲದ ಅಡಿಯಲ್ಲಿ ಸಿಲುಕಿರುವ ಘಟನೆ ನಡೆದಿದೆ. ರಕ್ಷಿಸಲ್ಪಟ್ಟ ಮೂವರು ಕಾರ್ಮಿಕರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ರಾತ್ರಿ ವೇಳೆ ಕತ್ತಲಲ್ಲೂ ರಕ್ಷಣ ಕಾರ್ಯಾಚರಣೆ ಮುಂದುವರೆದಿದೆ.



ಸೋಮವಾರ ಸಂಜೆ ಬಿಹಾರ ಮೂಲದ ಕಾರ್ಮಿಕರು ನಗರದ ಕೈಗಾರಿಕಾ ಪ್ರದೇಶದಲ್ಲಿರುವ ರಾಜಗುರು ಇಂಡಸ್ಟ್ರೀಸ್ ಸಂಸ್ಥೆಯ ಗೋದಾಮಿನಲ್ಲಿ ಧಾನ್ಯಗಳ ಚೀಲಗಳನ್ನು ಜೋಡಿಸುವ ಕೆಲಸದಲ್ಲಿ ನಿರತರಾಗಿದ್ದರು.ಈ ಹಂತದಲ್ಲಿ ಚೀಲಗಳ ನಿಟ್ಟು ಜೋಡಿಸುವ ಕೆಲಸದಲ್ಲಿ ತೊಡಗಿದ್ದಾಗಲೇ ಏಕಾಏಕಿ ತುಂಬಿದ ಚೀಲಗಳ ನಿಟ್ಟು ಕುಸಿದು ಕೆಲಸದಲ್ಲಿ ತೊಡಗಿದ್ದ ಕಾರ್ಮಿಕರ ಬಿದ್ದಿದೆ. ಇದರಿಂದಾಗಿ ಸುಮಾರು 20-25 ಕಾರ್ಮಿಕರು ಕುಸಿದ ಚೀಲಗಳ ಅಡಿಯಲ್ಲಿ ಸಿಲುಕಿದ್ದು, ಜೀವನ್ಮರಣದೊಂದಿಗೆ ಹೋರಾಟ ನಡೆಸಿದ್ದಾಗಿ ಪ್ರತ್ಯಕ್ಷದರ್ಶಿ ಕಾರ್ಮಿಕರು ವಿವರಿಸಿದ್ದಾರೆ.


ಬಿಹಾರ ಮೂಲದ ಸುಮಾರು 50ಕ್ಕೂ ಹೆಚ್ಚು ಕಾರ್ಮಿಕರು ರಾಜಗುರು ಇಂಡಸ್ಟ್ರೀಸ್ ಅವರ ಫುಡ್ ಪ್ರೊಸೆಸಿಂಗ್ ಘಟಕದಲ್ಲಿ ಕೆಲಸ ಮಾಡುತ್ತಿದ್ದಾರೆ. ಸೋಮವಾರ ಸಂಜೆ ಮೆಕ್ಕೆಜೋಳ ತುಂಬಿದ್ದ ಚೀಲಗಳನ್ನು ನಿಟ್ಟಿನಂತೆ ಜೋಡಿಸುವ ಕೆಲಸದಲ್ಲಿ ತೊಡಗಿದ್ದರು.


ಸ್ಥಳದಲ್ಲಿರುವ ಕಾರ್ಮಿಕರು ಹೇಳುವ ಪ್ರಕಾರ ಮೆಕ್ಕೆಜೋಳದ ಚೀಲಗಳ ಅಡಿಯಲ್ಲಿ ಸುಮಾರು 25 ಕಾರ್ಮಿಕರು ಸಿಲುಕಿದ್ದು, 3-4 ಕಾರ್ಮಿಕರು ರಕ್ಷಣೆಗೆ ಕೂಗಿಕೊಳ್ಳುವ ಧ್ವನಿ ಕೇಳಿಸುತ್ತಿದೆ ಎಂದು ವಿವರಿಸಿದ್ದಾರೆ.ಘಟನೆಯಲ್ಲಿ ಗಾಯಗೊಂಡಿರುವ ಸುಮಾರು 3 ಕಾರ್ಮಿಕರರನ್ನು ನಗರ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆ ದಾಖಲಿಸಿದ್ದು, ರಕ್ಷಣಾ ಕಾರ್ಯಾಚರಣೆ ಸಂಸರ್ಭದಲ್ಲಿ ಸೊಂಟದ ವರೆಗೆ ಚೀಲದ ನಿಟ್ಟಿಯಲ್ಲಿ ಸಿಲಕುರಿತು ಮೂವರು ಕಾರ್ಮಿಕರು ಪತ್ತೆಯಾಗಿದ್ದಾರೆ. ಆತಂಕದಲ್ಲಿರುವ ಕಾರ್ಮಿಕರಿಗೆ ಆತ್ಮ ಸ್ಥೈರ್ಯ ತುಂಬುತ್ತಿರುವ ಅಧಿಕಾರಿಗಳು, ಕುಡಿಯಲು ನೀರು ಒದಗಿಸಿದ್ದಾರೆ.ವಿಷಯ ತಿಳಿಯುತ್ತಲೇ ಸ್ಥಳಕ್ಕೆ ಧಾವಿಸಿರುವ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದು, 3 ಅಗ್ನಿಶಾಮಕ ವಾಹನಗಳು ಸ್ಥಳದಲ್ಲಿ ಇರಿಸಸಲಾಗಿದೆ. 5 ಜೆಸಿಬಿ ಯಂತ್ರಗಳ ಸಹಾಯದಿಂದ ಅಪಾಯದಲ್ಲಿ ಸಿಲುಕಿರುವ ಕಾರ್ಮಿಕರ ರಕ್ಷಿಸುವ ಕಾರ್ಯಾಚರಣೆ ನಡೆದಿದೆ.



ರಕ್ಷಿಸಲ್ಪಡುವ ಕಾರ್ಮಿಕರನ್ನು ತುರ್ತಾಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಸಾಗಿಸಲು ಸ್ಥಳದಲ್ಲಿ 5 ಅಂಬ್ಯುಲೆನ್ಸ್‍ಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ. ಗೋದಾಮುಗಳಲ್ಲಿ ರಾತ್ರಿ ವೇಳೆ ಸೂಕ್ತ ಬೆಳಕಿನ ವ್ಯವಸ್ಥೆ ಇಲ್ಲ. ಹೀಗಾಗಿ ರಾತ್ರಿ ವೇಳೆ ಕಾರ್ಯಾರಣೆಗೆ ಹೆಚ್ಚಿನ ಬೆಳಕಿಗಾಗಿ 2 ಜನರೇಟರ್ ತರಿಸಲಾಗಿದೆ.


ಕಾರ್ಯಚರಣೆಯಲ್ಲಿ ತೊಡಗಿರುವ ತಂಡಗಳ ಅಧಿಕಾರಿಗಳ ಮಾಹಿತಿ ಪ್ರಕಾರ ಮೂವರು ಕಾರ್ಮಿಕರು ಚೀಲಗಳ ಅಡಿಯಲ್ಲಿ ಸಿಲುಕಿದ್ದರೂ ಸುರಕ್ಷಿತವಾಗಿರುವುದು ಗೋಚರಿಸುತ್ತಿದೆ. ಇನ್ನೂ ಸುಮಾರು 10ಕ್ಕೂ ಹೆಚ್ಚು ಕಾರ್ಮಿಕರು ಚೀಲಗಳ ಅಡಿಯಲ್ಲಿ ಇರುವ ಸಾಧ್ಯತೆ. ಪೂರ್ಣ ಕಾರ್ಯಾಚರಣೆಯ ಬಳಿಕವೇ ಅಪಾಯಕ್ಕೆ ಸಿಲುಕಿರುವ ಕಾರ್ಮಿಕರ ನಿಖರ ಸಂಖ್ಯೆ ಬಹಿರಂಗವಾಗಲಿದೆ ಎಂದು ಹೇಳಿದ್ದಾರೆ.


ಅವಘಡ ಸಂಭಸಿರುವ ಗೋದಾಮಿನಲ್ಲಿ ಭಾರಿ ಪ್ರಮಾಣ ಧಾನ್ಯ ತುಂಬಿರುವ ಚೀಲಗಳನ್ನು ನಿಟ್ಟಾಗಿ ಒಟ್ಟಿದ್ದು, ಕಾರ್ಯಾಚರಣೆ ವೇಳೆ ಮತ್ತೆ ಕುಸಿಯುವ ಭೀತಿ ಇದೆ. ಹೀಗಾಗಿ ಮನುಷ್ಯರು ನೇರವಾಗಿ ಕಾರ್ಯಚರಣೇ ನಡೆಸದೆ ಜೆಸಿಬಿ ಯಂತ್ರಗಳ ಸಹಾಯದಿಂದ ಸೂಕ್ಷ್ಮವಾಗಿ ರಕ್ಷಣ ಕಾರ್ಯಾಚರಣೆ ನಡೆಸಿದ್ದಾರೆ.


ವಿಷಯ ತಿಳಿಯುತ್ತಲೇ ಸ್ಥಳಕ್ಕೆ ತೆರಳಿ ಬೀಡುಬಿಟ್ಟಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಭಗವಾನ್, ಕಾರ್ಮಿಕರ ರಕ್ಷಣಾ ಕಾರ್ಯಾಚರಣೆಯ ಮೇಲೆ ನಿಗಾ ವಹಿಸಿದ್ದಾರೆ.

ಗರ್ಲ್‌ ಫ್ರೆಂಡ್‌ ಜೊತೆಗೆ ಇದ್ದಾಗಲೇ ಹೆಂಡ್ತಿಗೆ ಸಿಕ್ಕಿ ಬಿದ್ದ ಗಂಡ, ವಿಡಿಯೋ ವೈರಲ್

Posted by Vidyamaana on 2024-06-01 15:30:17 |

Share: | | | | |


ಗರ್ಲ್‌ ಫ್ರೆಂಡ್‌ ಜೊತೆಗೆ ಇದ್ದಾಗಲೇ ಹೆಂಡ್ತಿಗೆ ಸಿಕ್ಕಿ ಬಿದ್ದ ಗಂಡ, ವಿಡಿಯೋ ವೈರಲ್

ವಿಶಾಖಪಟ್ಟಣಂ: ಮಾಜಿ ಮಿಸ್ ವೈಜಾಗ್ ನಕ್ಷತ್ರ ಅವರು ಗುರುವಾರ ವಿಶಾಖಪಟ್ಟಣಂನಲ್ಲಿ ತಮ್ಮ ಪತಿ ತ್ರಿಪುರಾಣ ವೆಂಕಟ ಸಾಯಿ ತೇಜಾ ಅವರ ವಿವಾಹೇತರ ಸಂಬಂಧವನ್ನು ಮಾಧ್ಯಮಗಳಿಗೆ ಬಹಿರಂಗಪಡಿಸುವ ಮೂಲಕ ಸಂಚಲನ ಸೃಷ್ಟಿಸಿದ್ದಾರೆ.ವರದಿಗಳ ಪ್ರಕಾರ, ನಕ್ಷತ್ರ ಪತ್ರಕರ್ತರನ್ನು ತೇಜಾ ಅವರ ಸ್ಥಳಕ್ಕೆ ಕರೆದೊಯ್ದರು, ಅಲ್ಲಿ ಅವರು ಅವರನ್ನು ಇನ್ನೊಬ್ಬ ಮಹಿಳೆಯೊಂದಿಗೆ ಕಂಡುಕೊಂಡರು ಎನ್ನಲಾಗಿದೆ, ಘಟನೆ ವಿಡಿಯೋ ವೈರಲ್ ಆಗಿದೆ .

ಜಿ.ಎಲ್. ಜ್ಯುವೆಲ್ಲರ್ಸ್ ನಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ ಧ್ವಜವಂದನೆ

Posted by Vidyamaana on 2023-08-16 09:56:04 |

Share: | | | | |


ಜಿ.ಎಲ್. ಜ್ಯುವೆಲ್ಲರ್ಸ್ ನಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ ಧ್ವಜವಂದನೆ

ಪುತ್ತೂರು: ಚಿನ್ನಾಭರಣಗಳಲ್ಲಿ ವಿಶಿಷ್ಟ ಸ್ಥಾನಮಾನ ಕಾಯ್ದುಕೊಂಡಿರುವ ಪುತ್ತೂರಿನ ಪ್ರತಿಷ್ಠಿತ ಜಿಎಲ್ ಆಚಾರ್ಯ ಜ್ಯುವೆಲ್ಲರ್ಸ್ನಲ್ಲಿ ಆಗಸ್ಟ್ 15ರಂದು ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು.

ಸಂಸ್ಥೆಯ ಮಾಲಕ ಜಿ.ಎಲ್‌ ಬಲರಾಮ ಆಚಾರ್ಯ ಅವರು ಧ್ವಜಾರೋಹಣ ನೆರವೇರಿಸಿ, ಶುಭ ಹಾರೈಸಿದರು.

ಲಕ್ಷ್ಮೀಕಾಂತ ಆಚಾರ್ಯ, ಸುಧನ್ವ ಆಚಾರ್ಯ, ವೇದ ಲಕ್ಷ್ಮೀಕಾಂತ ಆಚಾರ್ಯ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಟೈಟ್ ಆಗಿ ಮರ್ಮಾಂಗವನ್ನೇ ಕತ್ತರಿಸಿಕೊಂಡ ರಾಜ ಶೆಟ್ಟಿ

Posted by Vidyamaana on 2023-04-09 16:04:30 |

Share: | | | | |


ಟೈಟ್ ಆಗಿ ಮರ್ಮಾಂಗವನ್ನೇ ಕತ್ತರಿಸಿಕೊಂಡ ರಾಜ ಶೆಟ್ಟಿ

ಮೈಸೂರು, ಕುಡಿದ ಮತ್ತಿನಲ್ಲಿ ಮೈಸೂರಿನ ಹುಣಸೂರಿನಲ್ಲಿ ವ್ಯಕ್ತಿಯೊಬ್ಬ ಹುಚ್ಚಾಟ ಮೆರೆದಿದ್ದಾನೆ. ತನ್ನ ಮರ್ಮಾಂಗವನ್ನೇ ಕತ್ತರಿಸಿಕೊಂಡು ಪೇಚೆಗೆ ಸಿಲುಕಿದ ಘಟನೆ ನಡೆದಿದೆ.ಹುಣಸೂರಿನ ತೊಂಡಾಳು ಗ್ರಾಮದಲ್ಲಿ ರಾಜಶೆಟ್ಟಿ ಎಂಬಾತ ಕುಡಿದ ಮತ್ತಿನಲ್ಲಿ ತನ್ನ ಮರ್ಮಾಂಗವನ್ನು ಕತ್ತರಿಸಿದ್ದಾನೆ.

ಕುಡಿದ ಮತ್ತಿನಲ್ಲಿ ರಾಜಶೆಟ್ಟಿ ಶುಕ್ರವಾರ ತಡ ರಾತ್ರಿ ಮದ್ಯದ ನಶೆಯಲ್ಲಿ ತೂರಾಡುತ್ತಾ ಮನೆ ಕಡೆ ಹೋಗುವಾಗ ಕೆಲವರು ಬೈದಿದ್ದಾರೆ.ಇದರಿಂದ ಮನೆಯೊಂದರ ಬಳಿ ಇಟ್ಟಿದ್ದ ಕುಡುಗೋಲಿನಿಂದ ಏಕಾಏಕಿ ಮರ್ಮಾಂಗ ಕತ್ತರಿಸಿಕೊಂಡಿದ್ದಾನೆ.ಬಳಿಕ ನೋವಿನಿಂದ ಚೀರಾಡಿದ್ದಾನೆ.ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಸುಳ್ಯ : ವಿಷಕಾರಿ ಹಣ್ಣಿನ ಜ್ಯೂಸ್ ಸೇವಿಸಿ ಬೆಳ್ಳಾರೆ ಮೂಲದ ಲೀಲಾವತಿ ಮೃತ್ಯು

Posted by Vidyamaana on 2023-10-03 15:58:48 |

Share: | | | | |


ಸುಳ್ಯ : ವಿಷಕಾರಿ ಹಣ್ಣಿನ ಜ್ಯೂಸ್ ಸೇವಿಸಿ ಬೆಳ್ಳಾರೆ ಮೂಲದ ಲೀಲಾವತಿ ಮೃತ್ಯು

ಸುಳ್ಯ: ವಿಷಕಾರಿ ಹಣ್ಣಿನ ಜ್ಯೂಸ್ ತಯಾರಿಸಿ ಕುಡಿದ ಪರಿಣಾಮ ಮಹಿಳೆಯೋರ್ವಳು ಮೃತಪಟ್ಟ ಘಟನೆ ಅಮರಪಡ್ಡೂರು ಗ್ರಾಮದ ಕುಳ್ಳಾಜಿ ಎಂಬಲ್ಲಿ ನಡೆದಿದೆ.

ಲೀಲಾವತಿ (35) ಮೃತಪಟ್ಟವರು ಎಂದು ಗುರುತಿಸಲಾಗಿದೆ.

ಪಡೀಲ್ ಕೆಪುಳು ಬಳಿ ಬೈಕ್ ಸ್ಕೂಟರ್ ನಡುವೆ ನಡೆದ ಅಪಘಾತದ ಸಿ ಸಿ ಟಿವಿ ದೃಶ್ಯ!

ಒಂದು ವಾರದ ಹಿಂದೆ ಕಾಡಿನಲ್ಲಿ ಸಿಗುವ ಮೈರೋಳ್ ಹಣ್ಣನ್ನು , ತಿನ್ನಬಹುದಾದ ಹಣ್ಣು ಎಂದು ಭಾವಿಸಿ ಮನೆಗೆ ತಂದು, ಅದರ ರಸ ತೆಗೆದು ಶರ್ಬತ್ ಮಾಡಿ ಲೀಲಾವತಿ ಹಾಗೂ ಅವರ ತಂದೆ ಸೇವನೆ ಮಾಡಿದ್ದರು.



ಇದರ ಪರಿಣಾಮವಾಗಿ ತಂದೆ ಮಗಳಿಬ್ಬರೂ ಅಸ್ವಸ್ಥರಾಗಿದ್ದರು. ಅವರಲ್ಲಿ ಲೀಲಾವತಿಯವರಿಗೆ ವಾಂತಿ, ಭೇದಿ ಆರ೦ಭವಾಗಿ ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಅಸೌಖ್ಯ ತೀವ್ರಗೊ೦ಡು ಅ. 2ರ೦ದು ಹೆಚ್ಚಿನ ಚಿಕಿತ್ಸೆಗಾಗಿ ಮ೦ಗಳೂರಿಗೆ ಕೊ೦ಡೊಯ್ಯುವಾಗ ಕೊನೆಯುಸಿರೆಳೆದಿದ್ದಾರೆ ಎಂದು ವರದಿಯಾಗಿದೆ

ಮಂಗಳೂರು :ಕೊಣಾಜೆ ಮೂಲದ ಯುವತಿ ಅಫ್ರಿನಾ ನಾಪತ್ತೆ; ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

Posted by Vidyamaana on 2023-11-01 14:13:15 |

Share: | | | | |


ಮಂಗಳೂರು :ಕೊಣಾಜೆ ಮೂಲದ ಯುವತಿ ಅಫ್ರಿನಾ ನಾಪತ್ತೆ; ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಮಂಗಳೂರು: ಕೊಣಾಜೆ ಗ್ರಾಮದ ನಡುಪದವಿನ ಯುವತಿ ಕಾಣೆಯಾದ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಕಾಣೆಯಾದ ಯುವತಿ ಅಫ್ರಿನಾ (20). ಈಕೆ ಅ.30ರಂದು ಸಂಜೆ 3.30 ಗಂಟೆಗೆ ಉಳ್ಳಾಲ ತಾಲೂಕು ಕೊಣಾಜೆ ಗ್ರಾಮದ ನಡುಪದವು ಎಂಬಲ್ಲಿಂದ ಕಾಣೆಯಾಗಿದ್ದಾರೆ. ಈ ಕುರಿತು ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.


ಅಫ್ರಿನಾ ಪತ್ತೆಯಾದಲ್ಲಿ ಪೊಲೀಸ್ ಆಯುಕ್ತರ ಕಛೇರಿಯ ಮಂಗಳೂರು ನಗರ ನಿಯಂತ್ರಣ ಕೊಠಡಿಗೆ ದೂರವಾಣಿ ಸಂಖ್ಯೆ 0824-2220800 ಅಥವಾ ಕೊಣಾಜೆ ಪೊಲೀಸ್ ಠಾಣೆಯ 0824-2220536, 9480802350 ನೇ ಸಂಖ್ಯೆಗೆ ಮಾಹಿತಿ ನೀಡಬೇಕಾಗಿ ಕೋರಲಾಗಿದೆ.

Recent News


Leave a Comment: