ನಕಲಿ ಚಿನ್ನ ದ ಆಸೆಗೆ ತುಮಕೂರಿನಲ್ಲಿ ಬಲಿಯಾದರೇ ಬೆಳ್ತಂಗಡಿಯ ಮೂವರು?

ಸುದ್ದಿಗಳು News

Posted by vidyamaana on 2024-03-23 10:38:46 |

Share: | | | | |


ನಕಲಿ ಚಿನ್ನ ದ ಆಸೆಗೆ ತುಮಕೂರಿನಲ್ಲಿ ಬಲಿಯಾದರೇ ಬೆಳ್ತಂಗಡಿಯ ಮೂವರು?

ಬೆಳ್ತಂಗಡಿ : ತುಮಕೂರಿನಲ್ಲಿ ಕಾರಿಗೆ ಬೆಂಕಿ ಹಚ್ಚಿ ಕೆರೆಗೆ ತಳ್ಳಿದ ಪ್ರಕರಣದಲ್ಲಿ ಮೂವರು ಸಾವನ್ನಪ್ಪಿದ ಸಂಬಂಧಪಟ್ಟಂತೆ ಆರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ಪ್ರಕರಣದ‌ ಪ್ರಮುಖ ರೂವಾರಿ ತುಮಕೂರಿನ ಸ್ವಾಮಿ ಮತ್ತು ಐದು ಜನರನ್ನು ಕೋರಾ ಪೊಲೀಸರು ಮಾ.22 ರಂದು ರಾತ್ರಿ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ತುಮಕೂರಿಗೆ ಕಳೆದ ಹನ್ನೊಂದು ದಿನದ ಹಿಂದೆ ವ್ಯವಹಾರ ಸಂಬಂಧ ಮದಡ್ಕದ ರಫೀಕ್ ಎಂಬವರ ಮಾಲೀಕತ್ವದ ಎಸ್ ಪ್ರೆಸ್ ಕಾರಿನಲ್ಲಿ ಬೆಳ್ತಂಗಡಿ ತಾಲೂಕಿನ ನಡ ಗ್ರಾಮದ ಟಿ.ಬಿ.ಕ್ರಾಸ್ ನಿವಾಸಿ ಆಟೋ ಚಾಲಕ ಸಾಹುಲ್ ಹಮೀದ್(45) , ಕುವೆಟ್ಟು ಗ್ರಾಮದ ಮದಡ್ಕ ನಿವಾಸಿ ಇಸಾಕ್(56) , ಶಿರ್ಲಾಲು ಗ್ರಾಮದ ಸಿದ್ದಿಕ್(34) ಮೂವರು ಬಾಡಿಗೆ ಮಾಡಿಕೊಂಡು ಹೋಗಿದ್ದರು ಎಂದು ಗುರುತಿಸಿದ್ದಾರೆ.

ಇನ್ನು ಮೂರು ಜನ ಮೃತರೆಲ್ಲಾ ನಕಲಿ ಚಿನ‌್ನದ ದಂಧೆಯ ಆಸೆಗೆ ಬಲಿಯಾಗಿದ್ದಾರೆ ಅನ್ನೋದು ಪ್ರಾಥಮಿಕ ವಿಚಾರಣೆ ವೇಳೆ ಗೊತ್ತಾಗಿದೆ. ನಮ್ಮ ಜಾಗದಲ್ಲಿ ಕೃಷಿ ಮಾಡುವಾಗ ಚಿನ್ನದ ಹಂಡೆ ಸಿಕ್ಕಿದೆ ಕಡಿಮೆ ಚಿನ್ನವನ್ನು ಬೆಲೆಗೆ ನೀಡುತ್ತೇವೆ ಎಂದು ಸುಳ್ಳು ಹೇಳಿ ಮೂವರನ್ನು ಕರೆಸಿ ಹಣ ದೋಚುವ ಪ್ಲ್ಯಾನ್ ಮಾಡಿ ಕರೆಸಿಕೊಂಡು ನಂತರ ಕೈಕಾಲು ಕಟ್ಟಿ ಹಾಕಿ ಕಾರಿಗೆ ಬೆಂಕಿ ಹಚ್ಚಿ ಕೊಲೆ ಮಾಡಲಾಗಿದೆ ಎನ್ನಲಾಗಿದೆ.

ಪ್ರಕರಣದ ಪ್ರಮುಖ ರೂವಾರಿ ತುಮಕೂರಿನ ಸ್ವಾಮಿ ಮತ್ತು ಇತರ ಐದು ಜನ ಸೇರಿ ಒಟ್ಟು ಆರು ಜನರನ್ನು ವಶಕ್ಕೆ ಪಡೆದಿರುವ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. 


ಕೋರಾ ಪೊಲೀಸ್ ಠಾಣೆಯಲ್ಲಿ ಮಾ.22 ರಂದು ಸುಮೊಟೋ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದು. ಇನ್ನು ಮೂವರ ಶವ ಸಂಪೂರ್ಣವಾಗಿ ಸುಟ್ಟಿರುವ ಕಾರಣ ಗುರುತು ಪತ್ತೆಹಚ್ಚಲು ಡಿಎನ್ಎ ಪರೀಕ್ಷೆ ಬಳಿಕ ಮನೆಮಂದಿಗೆ ಶವ ಬಿಟ್ಟು ಕೊಡಲಿದ್ದಾರೆ. ಡಿಎನ್ಎ ವರದಿ ಬರಲು ಸುಮಾರು ಒಂದು ವಾರ ಬೇಕಾಗುತ್ತದೆ ಎಂದು ಪೊಲೀಸರು ಮನೆಯವರಿಗೆ ತಿಳಸಿದ್ದಾರೆ.

 Share: | | | | |


ಮೆಂಟಲಿ ಟಾರ್ಚರ್‌ ಕೊಡುತ್ತಿದ್ದ ಬಾವನನ್ನೇ ಮುಗಿಸಿದ ನಾದಿನಿ

Posted by Vidyamaana on 2024-01-11 11:30:00 |

Share: | | | | |


ಮೆಂಟಲಿ ಟಾರ್ಚರ್‌ ಕೊಡುತ್ತಿದ್ದ ಬಾವನನ್ನೇ ಮುಗಿಸಿದ ನಾದಿನಿ

ಕಲಬುರಗಿ: ದೈಹಿಕ ಸಂಬಂದ ಬೆಳೆಸು ಅಂತ ಕಿರುಕುಳ ನೀಡ್ತಿದ್ದ ಭಾವನನ್ನ ಖುದ್ದು ನಾದನಿಯೇ ಖಲಾಸ್ ಮಾಡಿಸಿದ ಘಟನೆ ಕಲಬುರಗಿಯಲ್ಲಿ ನಡೆದಿದೆ.ಅಂಬಿಕಾ ಎಂಬಾಕೆ ಇದೀಗ ಪ್ರಿಯಕರ ರಾಜು ಎಂಬಾತನ ಜೊತೆ ಲಾಕ್ ಆಗಿದ್ದಾಳೆ.ಅಂದಹಾಗೆ ಪೋಲೀಸರ ಅತಿಥಿಯಾಗಿರುವ ಅಂಬಿಕಾಳ ಅಕ್ಕನ ಗಂಡ ಅಂಬಾರಾಯ ಜನೆವರಿ 2ರಂದು ಕಮಲಾಪುರ ಬಳಿ ಕೊಲೆಯಾಗಿದ್ದ.ಪ್ರಕರಣ ದಾಖಲಿಸಿಕೊಂಡಿದ್ದ ಪೋಲೀಸರು ಅಂಬಾರಾಯನ ನಾದನಿಯನ್ನ ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಎಲ್ಲ ವಿಷ್ಯ ಬಟಾಬಯಲಾಗಿದೆ.


ದೈಹಿಕ ಸಂಪರ್ಕ ಹೊಂದುವಂತೆ ತನಗೆ ನಿತ್ಯವೂ ಟಾರ್ಚರ್ ಮಾಡ್ತಿದ್ದ ಕಾರಣಕ್ಕೆ ಕೊಲೆ ಮಾಡಿಸಿದ್ದೇನೆ ಅಂತ ಆರೋಪಿ ಬಾಯಿಬಿಟ್ಟಿದ್ದಾಳೆ..ಒಟ್ಟಾರೆ ಅಂಬಿಕಾ ಸೇರಿ 7 ಜನ ಇದೀಗ ಅರೆಸ್ಟಾಗಿದ್ದಾರೆ

ಮುಂಬೈ ಹೋರ್ಡಿಂಗ್‌ ದುರಂತ: ರಹಸ್ಯ ಕಾರ್ಯಾಚರಣೆ ನಡೆಸಿ ಆರೋಪಿಯ ಬಂಧಿಸಿದ ಪೊಲೀಸರು

Posted by Vidyamaana on 2024-05-17 22:41:35 |

Share: | | | | |


ಮುಂಬೈ ಹೋರ್ಡಿಂಗ್‌ ದುರಂತ: ರಹಸ್ಯ ಕಾರ್ಯಾಚರಣೆ ನಡೆಸಿ ಆರೋಪಿಯ ಬಂಧಿಸಿದ ಪೊಲೀಸರು

ಮುಂಬೈ ನಲ್ಲಿ ಜಾಹೀರಾತು ಫಲಕ ಬಿದ್ದು 16 ಜೀವಗಳನ್ನು ಬಲಿ ಪಡೆದಿತ್ತು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ರಹಸ್ಯ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಮುಂಬೈನ ಘಾಟ್ಕೋಪರ್ ಹೋರ್ಡಿಂಗ್(Hoarding)​ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ರಹಸ್ಯ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.

ಮುಂಬೈನಲ್ಲಿ ಸೋಮವಾರ ಬೀಸಿದ ಬಿರುಗಾಳಿಗೆ ಘಾಟ್ಕೋಪರ್​ನ ಪೆಟ್ರೋಲ್​ ಬಂಕ್ ಮೇಲೆ ಬೃಹತ್ ಗಾತ್ರದ ಹೋರ್ಡಿಂಗ್​ ಬಿದ್ದಿತ್ತು. ಇದರ ಕೆಳಗೆ ಸಾಕಷ್ಟು ಮಂದಿ ಸಿಲುಕಿಕೊಂಡಿದ್ದರು. ಇವರ ರಕ್ಷಣೆಗೆ ಕೇಂದ್ರ ವಿಪತ್ತು ನಿರ್ವಹಣಾ ತಂಡ ಧಾವಿಸಿತ್ತು. ಸುಮಾರು 66 ಗಂಟೆಗಳ ಕಾರ್ಯಾಚರಣೆ ಗುರುವಾರ ಅಂತ್ಯಗೊಂಡಿದ್ದು, 16 ಮಂದಿ ಶವಗಳು ಪತ್ತೆಯಾಗಿದೆ.

ಟ್ರಾಫಿಕ್ ಸಿಗ್ನಲ್ ಲೈಟ್‌ಗೆ ಸೇರ್ಪಡೆಯಾಗಲಿದೆ ನಾಲ್ಕನೇ ಬಣ್ಣ, ಆ ಬಣ್ಣ ಯಾವುದು ಗೊತ್ತಾ?

Posted by Vidyamaana on 2024-08-13 05:40:56 |

Share: | | | | |


ಟ್ರಾಫಿಕ್ ಸಿಗ್ನಲ್ ಲೈಟ್‌ಗೆ ಸೇರ್ಪಡೆಯಾಗಲಿದೆ ನಾಲ್ಕನೇ ಬಣ್ಣ, ಆ ಬಣ್ಣ ಯಾವುದು ಗೊತ್ತಾ?

ಟ್ರಾಫಿಕ್‌ ಸಮಸ್ಯೆಯನ್ನು ನಿಯಂತ್ರಿಸುವ ಉದ್ದೇಶದಿಂದ ರಸ್ತೆಗಳಲ್ಲಿ ಕೆಂಪು, ಹಸಿರು ಮತ್ತು ಹಳದಿ ಬಣ್ಣದ ಟ್ರಾಫಿಕ್‌ ಲೈಟ್‌ಗಳನ್ನು ಅಳವಡಿಸಿರುತ್ತಾರೆ. ವಿಶ್ವದ ಎಲ್ಲಾ ಕಡೆಯೂ ಇದೇ ಮೂರು ಬಣ್ಣದ ಲೈಟ್‌ಗಳಿರುತ್ತವೆ. ಆದ್ರೆ ಇನ್ಮುಂದೆ ಟ್ರಾಫಿಕ್‌ ಸಿಗ್ನಲ್‌ಗಳಲ್ಲಿ ನಾಲ್ಕನೆಯ ಬಣ್ಣ ಬರಲಿದೆಯಂತೆ.ಅದು ಏಕೆ ಮತ್ತು ಆ ಬಣ್ಣ ಯಾವುದು ಎಂಬ ಕುತೂಹಲಕಾರಿ ಮಾಹಿತಿ ಇಲ್ಲಿದೆ. 

ಟ್ರಾಫಿಕ್‌ ಸಿಗ್ನಲ್‌ ದೀಪಗಳು ಕೆಂಪು, ಹಸಿರು ಮತ್ತು ಹಳದಿ ಈ ಮೂರು ಬಣ್ಣದಲ್ಲಿರುತ್ತವೆ. ನಮ್ಮ ಭಾರತವಷ್ಟೇ ಅಲ್ಲ ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಟ್ರಾಫಿಕ್‌ ಸಿಗ್ನಲ್‌ಗಳಲ್ಲಿ ಇದೇ ಬಣ್ಣದ ದೀಪಗಳಿರುತ್ತವೆ. ಟ್ರಾಫಿಕ್‌ ಸಮಸ್ಯೆಗಳನ್ನು ನಿಯಂತ್ರಿಸುವ ಉದ್ದೇಶದಿಂದ ಇವುಗಳನ್ನು ಅಳವಡಿಸಲಾಗುತ್ತದೆ. ಶತಮಾನಗಳಿಂದಲೂ ಟ್ರಾಫಿಕ್‌ ಸಿಗ್ನಲ್‌ಗಳಲ್ಲಿ ಈ ಮೂರು ಬಣ್ಣದ ಲೈಟ್‌ಗಳು ಮಾತ್ರ ಇವೆ. ಆದ್ರೆ ಇನ್ಮುಂದೆ ಟ್ರಾಫಿಕ್‌ ಸಿಗ್ನಲ್‌ ಲೈಟ್‌ಗೆ ನಾಲ್ಕನೆಯ ಬಣ್ಣ ಸೇರ್ಪಡೆಯಾಗಲಿದೆಯಂತೆ. ಅದು ಏಕೆ ಮತ್ತು ಆ ಬಣ್ಣ ಯಾವುದು ಎಂಬ ಕುತೂಹಲಕಾರಿ ಮಾಹಿತಿ ಇಲ್ಲಿದೆ.

ಮತ ಚಲಾಯಿಸಿದ ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಗೌಡ

Posted by Vidyamaana on 2023-05-10 06:10:12 |

Share: | | | | |


ಮತ ಚಲಾಯಿಸಿದ ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಗೌಡ

ಪುತ್ತೂರು : ರಾಜ್ಯಾದ್ಯಂತ ವಿಧಾನ ಸಭಾ ಚುನಾವಣೆಯ ಮತದಾನ ಪ್ರಕ್ರಿಯೆ ಆರಂಭವಾಗಿದ್ದು, ಪುತ್ತೂರು ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಗೌಡ ರವರು ಮತ ಚಲಾಯಿಸಿದರು.ಕುಂತೂರಿನಲ್ಲಿರುವ ಮತದಾನ ಕೇಂದ್ರದಲ್ಲಿ ಅವರು ಮತ ಚಲಾಯಿಸಿದರು

ನಿಲ್ಲಿಸಿದ ಕಾರು ಫುಲ್ ಶೇಕಿಂಗ್ ಹತ್ತಿರ ಹೋಗಿ ನೋಡಿದವರಿಗೆ ಶಾಕಿಂಗ್ ಈ ನ್ಯೂಸ್ ಫುಲ್ ಇಂಟ್ರೆಸ್ಟಿಂಗ್

Posted by Vidyamaana on 2024-08-07 16:22:13 |

Share: | | | | |


ನಿಲ್ಲಿಸಿದ ಕಾರು ಫುಲ್ ಶೇಕಿಂಗ್  ಹತ್ತಿರ ಹೋಗಿ ನೋಡಿದವರಿಗೆ ಶಾಕಿಂಗ್ ಈ ನ್ಯೂಸ್ ಫುಲ್ ಇಂಟ್ರೆಸ್ಟಿಂಗ್

ಉಡುಪಿ : ನಗರದಲ್ಲಿ ಹಾಡ ಹಗಲಲ್ಲೇ ಕಾರಿನೊಳಗೆ ಅನೈತಿಕ ಚಟುವಟಿಕೆ ನಡೆಸುತ್ತಿದ್ದ ಜೋಡಿ ಸಾರ್ವಜನಿಕರ ಕೈಗೆ ಸಿಕ್ಕಿ ಬಿದ್ದ ಬಳಿಕ ಸ್ಥಳದಿಂದ ಪರಾರಿಯಾದ ಘಟನೆ ಬುಧವಾರ (ಆಗಸ್ಟ್ 7) ರಂದು ನಡೆದಿದೆ.

ಕವಿ ಮುದ್ದಣ ಮಾರ್ಗದಿಂದ ಚಿತ್ತರಂಜನ್ ಸರ್ಕಲ್ ಸಂಪರ್ಕಿಸುವ ರಸ್ತೆಯ ಸರಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ಎದುರು, ಕಾರು ನಿಲುಗಡೆಗೊಳಿಸಿ ಒಳಭಾಗದಲ್ಲಿ ಹಾಡ ಹಗಲಲ್ಲೇ ಅನೈತಿಕ ಚಟುವಟಿಕೆ ನಡೆಸುತ್ತಿದ್ದ ಯುವಕ ಮತ್ತು ಯುವತಿಯ ಜೋಡಿ ಕಾರನ್ನು ಸ್ಥಳದಲ್ಲಿ ಬಿಟ್ಟು ಪರಾರಿಯಾಗಿದ್ದಾರೆ.

ಪಾಕಿಸ್ತಾನ ಆಪರೇಟಿವ್ಸ್ ಗಳಿಂದ ಹನಿಟ್ರ್ಯಾಪ್ ಗೆ ಸಿಲುಕಿದ್ದ ಬಿಎಸ್ ಎಫ್ ಸಿಬಂದಿ ನೀಲೇಶ್ ಬಾಲಿಯಾ ಬಂಧನ

Posted by Vidyamaana on 2023-07-08 14:27:30 |

Share: | | | | |


ಪಾಕಿಸ್ತಾನ ಆಪರೇಟಿವ್ಸ್ ಗಳಿಂದ ಹನಿಟ್ರ್ಯಾಪ್ ಗೆ ಸಿಲುಕಿದ್ದ ಬಿಎಸ್ ಎಫ್ ಸಿಬಂದಿ ನೀಲೇಶ್ ಬಾಲಿಯಾ ಬಂಧನ

ಸೂರತ್: ಪಾಕಿಸ್ತಾನದ ಮಹಿಳಾ ಗುಪ್ತಚರ ಅಧಿಕಾರಿಯೊಂದಿಗೆ ಸೂಕ್ಷ್ಮ ಮಾಹಿತಿಯನ್ನು ಹಂಚಿಕೊಂಡ ಆರೋಪದ ಮೇಲೆ ಗಡಿ ಭದ್ರತಾ ಪಡೆ (BSF) ನೌಕರನನ್ನು ಗುಜರಾತ್ ಭಯೋತ್ಪಾದನಾ ನಿಗ್ರಹ ದಳ (ATS) ಬಂಧಿಸಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆಬಂಧಿತ ಆರೋಪಿ ನೀಲೇಶ್ ಬಾಲಿಯಾ ಕಳೆದ ಐದು ವರ್ಷಗಳಿಂದ ಬಿಎಸ್‌ಎಫ್‌ನ ಭುಜ್ ಪ್ರಧಾನ ಕಚೇರಿಯಲ್ಲಿ ಸಿಪಿಡಬ್ಲ್ಯೂಡಿಯ ಎಲೆಕ್ಟ್ರಿಕಲ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.2023 ರ ಜನವರಿಯಲ್ಲಿ ಪಾಕಿಸ್ಥಾನದ ಮಹಿಳಾ ಗುಪ್ತಚರ ಏಜೆಂಟ್ ಳೊಂದಿಗೆ ಸಂಪರ್ಕಕ್ಕೆ ಬಂದಿದ್ದ ಎಂದು ಎಟಿಎಸ್ ಪೊಲೀಸ್ ವರಿಷ್ಠಾಧಿಕಾರಿ ಸುನಿಲ್ ಜೋಶಿ ಸುದ್ದಿಗಾರರಿಗೆ ತಿಳಿಸಿದ್ದಾರೆ

Recent News


Leave a Comment: