ಪುತ್ತೂರಿನ ಪ್ರತಿಷ್ಠಿತ ಕಲ್ಲೇಗ ಟೈಗರ್ಸ್ ಮುಖ್ಯಸ್ಥ ಅಕ್ಷಯ್ ಕಲ್ಲೇಗ ತಡರಾತ್ರಿ ಬರ್ಬರ ಹತ್ಯೆ

ಸುದ್ದಿಗಳು News

Posted by vidyamaana on 2023-11-07 04:42:13 |

Share: | | | | |


ಪುತ್ತೂರಿನ ಪ್ರತಿಷ್ಠಿತ ಕಲ್ಲೇಗ ಟೈಗರ್ಸ್ ಮುಖ್ಯಸ್ಥ ಅಕ್ಷಯ್ ಕಲ್ಲೇಗ ತಡರಾತ್ರಿ ಬರ್ಬರ ಹತ್ಯೆ

ಪುತ್ತೂರು: ಪುತ್ತೂರಿನ ನಗರದಲ್ಲಿ ತಲವಾರ್ ನಲ್ಲಿ ಕಡಿದು ಕಲ್ಲೇಗ ಟೈಗರ್ಸ್ ನ ಪ್ರಮುಖ ನಾಯಕನನ್ನು ಹತ್ಯೆ ಮಾಡಿದ ಘಟನೆ ಇದೀಗ ನಡೆದಿದೆ.


ಟೈಗರ್ಸ್ ನ ಮುಖ್ಯಸ್ಥ ಅಕ್ಷಯ್ ಕಲ್ಲೇಗ ಅವರನ್ನು ಹತ್ಯೆಗೀಡಾದ ಯುವಕ. ಈತ ಪುತ್ತೂರಿನ ನಗರದಲ್ಲಿ ಇದ್ದಾಗ ತಂಡಯೊಂದು ಆಗಮಿಸಿ ಯದ್ವಾತದ್ವ ತಲವಾರ್ ನಲ್ಲಿ ದಾಳಿ ನಡೆಸಿ, ಹತ್ಯೆ ಮಾಡಿದೆ. ಸ್ಥಳಕ್ಕೆ ಆಗಮಿಸಿದ ಪುತ್ತೂರು ನಗರ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

 Share: | | | | |


ಮಂಗಳೂರು ಕಪಿತಾನಿಯೋ ಶಾಲೆಯ ಮತಗಟ್ಟೆ ಹೊರಗಡೆ ಕಮಲ – ಖಾಕಿ ಜಟಾಪಟಿ!

Posted by Vidyamaana on 2024-04-26 11:11:36 |

Share: | | | | |


ಮಂಗಳೂರು ಕಪಿತಾನಿಯೋ ಶಾಲೆಯ ಮತಗಟ್ಟೆ ಹೊರಗಡೆ ಕಮಲ – ಖಾಕಿ ಜಟಾಪಟಿ!

ಮಂಗಳೂರು, ಎ.25: ಕಪಿತಾನಿಯೋ ಶಾಲೆಯ ಮತಗಟ್ಟೆ ಹೊರಗಡೆ ಬಿಜೆಪಿ ಕಾರ್ಯಕರ್ತರು ಮತ್ತು ಪೊಲೀಸರ ನಡುವೆ ಜಟಾಪಟಿ ನಡೆದಿದೆ. 


ಮತಗಟ್ಟೆ ಹೊರಗೆ ಮಾಧ್ಯಮಕ್ಕೆ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಪ್ರತಿಕ್ರಿಯೆ ನೀಡುತ್ತಿದ್ದಾಗ, ಅಲ್ಲಿ ಒಂದಷ್ಟು ಗುಂಪು ಸೇರಿದ್ದರು. ಈ ವೇಳೆ, ಬಿಜೆಪಿ ಕಾರ್ಯಕರ್ತನೊಬ್ಬ ಪ್ರಶ್ನೆ ಮಾಡಲು ಬಂದಿದ್ದಾನೆ. ಮಂಗಳೂರು ನಗರ ಠಾಣೆ ಇನ್ಸ್ ಪೆಕ್ಟರ್ ಟಿಡಿ ನಾಗರಾಜ್ ಬಳಿ ವಾಯ್ಸ್ ರೈಸ್ ಮಾಡಿ ಮಾತನಾಡಿದ್ದಾನೆ. ಇದರಿಂದ ಸಿಟ್ಟಿಗೆದ್ದ ಇನ್ಸ್ ಪೆಕ್ಟರ್, ಬಿಜೆಪಿ ಕಾರ್ಯಕರ್ತನ ಕಾಲರ್ ಹಿಡಿದು ಎಳೆದೊಯ್ದಿದ್ದಾರೆ.

ಶಾಂತಿ ಕದಡಿದರೆ ಬಜರಂಗದಳ ನಿಷೇಧ:ಪ್ರಿಯಾಂಕ್ ಖರ್ಗೆ

Posted by Vidyamaana on 2023-05-24 11:23:35 |

Share: | | | | |


ಶಾಂತಿ ಕದಡಿದರೆ ಬಜರಂಗದಳ  ನಿಷೇಧ:ಪ್ರಿಯಾಂಕ್ ಖರ್ಗೆ

ಬೆಂಗಳೂರು: ರಾಜ್ಯದಲ್ಲಿ ಶಾಂತಿ ಕದಡಿದರೆ ಬಜರಂಗದಳ ಮತ್ತು ಆರ್‌ಎಸ್‌ಎಸ್‌ನಂತಹ ಸಂಘಟನೆಗಳನ್ನು ತಮ್ಮ ಸರಕಾರ ನಿಷೇಧಿಸುತ್ತದೆ ಮತ್ತು ಬಿಜೆಪಿ ನಾಯಕತ್ವವು ಅದನ್ನು ಒಪ್ಪಿಕೊಳ್ಳಲು ಸಾಧ್ಯವಾಗದಿದ್ದರೆ ಪಾಕಿಸ್ತಾನಕ್ಕೆ ಹೋಗಬಹುದು ಎಂದು ಕರ್ನಾಟಕ ಸಚಿವ ಪ್ರಿಯಾಂಕ್ ಖರ್ಗೆ ಬುಧವಾರ ಪುನರುಚ್ಚರಿಸಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಪ್ರಿಯಾಂಕ್, ”ಕರ್ನಾಟಕವನ್ನು ಸ್ವರ್ಗವನ್ನಾಗಿ ಮಾಡುತ್ತೇವೆ ಎಂದು ಭರವಸೆ ನೀಡಿದ್ದೇವೆ, ಶಾಂತಿ ಕದಡಿದರೆ ಅದು ಬಜರಂಗದಳ ಅಥವಾ ಆರ್‌ಎಸ್‌ಎಸ್ ಎಂದು ಪರಿಗಣಿಸುವುದಿಲ್ಲ, ಕಾನೂನು ಕೈಗೆತ್ತಿಕೊಂಡಾಗ ನಿಷೇಧ ಹೇರಲಾಗುವುದು” ಎಂದು ಖರ್ಗೆ ಹೇಳಿದ್ದಾರೆ.ಹಿಜಾಬ್, ಹಲಾಲ್ ಕಟ್ ಮತ್ತು ಗೋಹತ್ಯೆ ಕಾನೂನುಗಳ ಮೇಲಿನ ನಿಷೇಧವನ್ನು ಸರಕಾರ ಹಿಂಪಡೆಯಲಿದೆ. ಸಮಾಜದಲ್ಲಿ ಕಾನೂನು ಮತ್ತು ಪೊಲೀಸರ ಭಯವಿಲ್ಲದೆ ಕೆಲವು ಅಂಶಗಳು ಮುಕ್ತವಾಗಿ ವಿಹರಿಸುತ್ತಿವೆ. ಮೂರು ವರ್ಷಗಳಿಂದ ಈ ಪ್ರವೃತ್ತಿ ನಡೆಯುತ್ತಿದೆ” ಎಂದರು.

”ಜನರು ವಿರೋಧ ಪಕ್ಷದಲ್ಲಿ ಕೂರಿಸಲು ಕಾರಣವೇನು ಎಂಬುದನ್ನು ಬಿಜೆಪಿ ಅರ್ಥ ಮಾಡಿಕೊಳ್ಳಬೇಕು. ಕೇಸರಿಕರಣ ತಪ್ಪು ಎಂದು ಹೇಳಿದ್ದೇವೆ, ಎಲ್ಲರೂ ಅನುಸರಿಸಬಹುದಾದ ಬಸವಣ್ಣನವರ ತತ್ವಗಳನ್ನು ಕಾಂಗ್ರೆಸ್ ಅನುಸರಿಸುತ್ತದೆ” ಎಂದರು.

ಬಿಲ್ಲವ ಯವ ಸಮಾಜ ವತಿಯಿಂದ ಶಾಸಕರಿಗೆ ಅಭಿನಂದನಾ ಕಾರ್ಯಕ್ರಮ

Posted by Vidyamaana on 2023-08-28 14:48:05 |

Share: | | | | |


ಬಿಲ್ಲವ ಯವ ಸಮಾಜ ವತಿಯಿಂದ ಶಾಸಕರಿಗೆ ಅಭಿನಂದನಾ ಕಾರ್ಯಕ್ರಮ

ಪುತ್ತೂರು: ಬಿಲ್ಲವ ಯುವ ಸಮಾಜ ಪುತ್ತೂರು ಇದರ ವತಿಯಿಂದ ಪುತ್ತೂರು ಶಾಸಕರಾದ ಅಶೋಕ್ ರೈಯವರಿಗೆ ಅಭಿನಂದನೆ ಸಲ್ಲಿಸಲಾಯಿತು. ಶಾಸಕರ ನೂತನ ಕಚೇರಿ ಶುಭಾರಂಭ ಕಾರ್ಯಕ್ರಮದ ಬಳಿಕ ಯುವ ವೇದಿಕೆಯ ವತಿಯಿಂದ ಶಾಸಕರ ಕಚೇರಿಯಲ್ಲಿ ಅಭಿನಂದನೆ ಸಲ್ಲಿಸಲಾಯಿತು. ಕ್ಷೇತ್ರದ ಅಭಿವೃದ್ದಿಗೆ ಇನ್ನಷ್ಟು ಒತ್ತು ನೀಡುವ ಮೂಲಕ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಬಡವರ ಕೆಲಸಗಳು ಸೇರಿದಂತೆ ಪ್ರಮುಖ ಬೇಡಿಕೆಗಳನ್ನು ಈಡೇರಿಸುವ ಕೆಲಸ ನಿಮ್ಮಿಂದಾಗಲಿ ಎಂದು ಬಿಲ್ಲವ ಯುವ ಸಮಾಜದ ಮುಖಂಡರು ಶಾಸಕರಲ್ಲಿ ವಿನಂತಿಸಿದರು. ಈ ಸಂದರ್ಭದಲ್ಲಿ ಕೋಡಿಂಬಾಡಿ ಗ್ರಾಪಂ ಉಪಾಧ್ಯಕ್ಷರಾದ ಜಯಪ್ರಕಾಶ್ ಬದಿನಾರ್, ಕಿರಣ್‌ಬಸಂತಕೋಡಿ, ದಿನೇಶ್ ಕರ್ಕೆರಾ ಕೋಲಾಡಿ, ಚಂಧ್ರಶೇಖರ್ ಕಲ್ಲಗುಡ್ಡೆ, ಚಂದ್ರಕಲಾ ಮುಕ್ವೆ, ಮೋಹನ್ ಗುರ್ಜಿನಡ್ಕ, ಕೇಶವ ಅರ್ಕ, ಮೋಹನ್ ಪೂಜಾರಿ ಪುಣಚ, ಅಶೋಕ್ ಪೂಜಾರಿ ಬೊಳ್ಳಾಡಿ, ಕೃಷ್ಣಪ್ಪ ಕಲಾವಿದ, ಎಲ್ಯಣ್ಣ ಪೂಜಾರಿ ಮಿರುಂಡ, ನಾರಾಯಣ ಪೂಜಾರಿ ಬದಿಗುಡ್ಡೆ ಮೊದಲಾದವರು ಉಪಸ್ತಿತರಿದ್ದರು. ನೆನಪಿನ ಕಾಣಿಕೆಯಾಗಿ ಬ್ರಹ್ಮಶ್ರೀ ನಾರಾಯಣಗುರುಗಳ ಭಾವಚಿತ್ರವನ್ನು ಕೊಡುಗೆಯಾಗಿ ನೀಡಿದರು.

ಬೆಳ್ಳಾರೆಯ ಬಾಡಿಗೆ ಮನೆ ಮೇಲೆ ಬೆಳ್ಳಂಬೆಳಗ್ಗೆ NIA ದಾಳಿ

Posted by Vidyamaana on 2024-03-05 16:13:39 |

Share: | | | | |


ಬೆಳ್ಳಾರೆಯ ಬಾಡಿಗೆ ಮನೆ ಮೇಲೆ ಬೆಳ್ಳಂಬೆಳಗ್ಗೆ NIA ದಾಳಿ

ಬೆಳ್ಳಾರೆ : ಎನ್.ಐ.ಎ ಅಧಿಕಾರಿಗಳ ತಂಡ ಪ್ರಕರಣವೊಂದರ ಸಂಬಂಧ ಮಾ‌.5 ರಂದು ಬೆಳ್ಳಾರೆಯ ಬಾಡಿಗೆ ಮನೆಗೆ ಬೆಳಗ್ಗೆ ದಾಳಿ ಮಾಡಿ ಮನೆಯನ್ನು ಶೋಧ ನಡೆಸಿ ನಂತರ ಬೀಜು ಎಂಬಾತನಿಗೆ ಸಮನ್ಸ್ ನೀಡಿ ಮೊಬೈಲ್ ಫೋನ್ ವಶಕ್ಕೆ ಪಡೆದು ಮಹಜರು ನಡೆಸಿ ಹೋಗಿರುವ ಅಧಿಕಾರಿಗಳು. 

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ನಿಂತಿಕಲ್ಲು ಬಳಿಯ ಕಲ್ಮಡ್ಕ ನಿವಾಸಿ ಚಿದಾನಂದ ಎಂಬವರ ಬಾಡಿಗೆ ಮನೆ ಮೇಲೆ ಬೆಂಗಳೂರು ಬ್ರಾಂಚ್ ನ ಎನ್.ಐ.ಎ ಅಧಿಕಾರಿಗಳಾದ ಡಿವೈಎಸ್ಪಿ ರಾಜನ್ ಪಿ.ವಿ , ಸಬ್ ಇನ್ಸ್ಪೆಕ್ಟರ್ ಮಂಜಪ್ಪ , ಕಾನ್ಟೇಬಲ್ ಸುರೇಶ್.ಸಿ ನೇತೃತ್ವದ ಮೂರು ಜನರ ತಂಡ ಬೆಳ್ಳಾರೆ ಪೊಲೀಸರ ಸಹಕಾರದಲ್ಲಿ ಮಾ.5 ರಂದು ಬೆಳಗ್ಗೆ 6 ಗಂಟೆಗೆ ದಾಳಿ ಮಾಡಿ ಮನೆಯನ್ನು ಪರಿಶೀಲನೆ ನಡೆಸಿದ್ದಾರೆ‌.


*ಪ್ರಕರಣದ ವಿವರ:* 25-10-2023 ರಂದು RC-28/2023/NIA/DLI ಯಲ್ಲಿ 120B,121,121A&122 ಜೊತೆಗೆ 3,25 ಆರ್ಮ್ಸ್ 13 ,18 ಮತ್ತು UA(P) ಅಡಿಯಲ್ಲಿ ದಾಖಲಾದ ಪ್ರಕರಣ ಸಂಬಂಧಿಸಿದಂತೆ ಬೆಳ್ಳಾರೆಯ ಚಿದಾನಂದ ಎಂಬವರ ಬಾಡಿಗೆ ಮನೆಗೆ ಎರಡು ದಿನದ ಹಿಂದೆ ಬಂದ ಕೇರಳ ರಾಜ್ಯದ ಇಡುಕ್ಕಿಯ ಬಿಜು ಅಬ್ರಾಹಂ @ ಬಿಜು ಎಮ್.ಎ (45) ಎಂಬಾತನ ವಾಸವಾಗಿದ್ದ ಮನೆಗೆ ಎನ್.ಐ.ಎ ಅಧಿಕಾರಿಗಳು ದಾಳಿ ಮಾಡಿ ಪರಿಶೀಲನೆ ನಡೆಸಿದ ನಂತರ ಬಿಜುಗೆ  ಸಮನ್ಸ್ ನೀಡಿದ್ದಾರೆ‌.


*ಮೊಬೈಲ್ ವಶಕ್ಕೆ:* ಎನ್.ಐ.ಎ ಅಧಿಕಾರಿಗಳು ದಾಳಿ ಮಾಡಿ ಪರಿಶೀಲನೆ ನಡೆಸಿದ ಬಳಿಕ ಬಿಜು ಬಳಸುತ್ತಿದ್ದ ಮೊಬೈಲ್ ಫೋನ್‌ ಮತ್ತು ಅದರಲ್ಲಿದ್ದ ಜಿಯೋ ಕಂಪನಿಯ ಸಿಮ್ ಕಾರ್ಡ್ ವಶಕ್ಕೆ ಪಡೆದುಕೊಂಡಿದ್ದಾರೆ. ಈ ಬಗ್ಗೆ ಬೆಳ್ಳಾರೆ ಪೊಲೀಸರ ಸಹಕಾರದಲ್ಲಿ ಮಹಜರು ನಡೆಸಿ ಹೋಗಿದ್ದಾರೆ.

ಸುಳ್ಯ : ಅಯೋಧ್ಯೆ ರಾಮಮಂದಿರ ಬ್ಯಾನರ್ ಹರಿದ ಕಿಡಿಗೇಡಿಗಳು

Posted by Vidyamaana on 2024-01-06 15:01:18 |

Share: | | | | |


ಸುಳ್ಯ : ಅಯೋಧ್ಯೆ ರಾಮಮಂದಿರ ಬ್ಯಾನರ್ ಹರಿದ ಕಿಡಿಗೇಡಿಗಳು

ಸುಳ್ಯ : ಶ್ರೀರಾಮಚಂದ್ರನ ಅಯೋಧ್ಯೆ ರಾಮಮಂದಿರ ಲೋಕಾರ್ಪಣೆ ಬ್ಯಾನರನ್ನು ಯಾರೋ ಕಿಡಿಗೇಡಿಗಳು ಹರಿದಿದ್ದು, ತಕ್ಷಣ ಬಂಧಿಸಬೇಕು ಎಂದು ಅರುಣ್ ಪುತ್ತಿಲ ಒತ್ತಾಯಿಸಿದ್ದಾರೆ.ಸುಳ್ಯದ ಮುಖ್ಯರಸ್ತೆಯಲ್ಲಿ ಸುಳ್ಯ ಜಾತ್ರೆ , ಅಯೋಧ್ಯೆ ರಾಮಮಂದಿರ ಹಾಗೂ ಸುಳ್ಯ ತಾಲೂಕು ಆಟೋ ರಿಕ್ಷಾ ಚಾಲಕರ ಸಂಘ ಬಿಎಂಎಸ್ ನ ಬೆಳ್ಳಿಹಬ್ಬಕ್ಕೆ ಶುಭಕೋರಿ ಬೃಹತ್ ಬ್ಯಾನರ್ ಅಳವಡಿಕೆ ಮಾಡಲಾಗಿತ್ತು. ಅದರಲ್ಲಿ ನಡುವಿನಲ್ಲಿದ್ದ ಶ್ರೀರಾಮ ದೇವರ ಸಹಿತ ರಾಮಮಂದಿರ ಲೋಕಾರ್ಪಣೆ ವಿಷಯವನ್ನು ಯಾರೋ ಕಿಡಿಗೇಡಿಗಳು ರಾತ್ರಿ ಹರಿದು ಹಾಕಿದ್ದಾರೆ.


ಹಿಂದೂಗಳ ಭಾವನೆ ಜೊತೆ ಆಟವಾಡುವ ಇಂತಹ ರಾಮವಿರೋಧಿಗಳನ್ನು ತಕ್ಷಣ ಬಂಧಿಸಿ ಗಡಿಪಾರು ಮಾಡಬೇಕು ಇಲ್ಲದಿದ್ದರೆ ಹಿಂದೂ ಸಮಾಜ ಹೋರಾಟಕ್ಕಿಳಿಯಬೇಕಾದಿತು ಎಂಬ ಎಚ್ಚರಿಕೆ ನೀಡುತ್ತಿದ್ದೇವೆ ಎಂದು ಅರುಣ್ ಕುಮಾರ್ ಪುತ್ತಿಲ ಆಗ್ರಹಿಸಿದ್ದಾರೆ.

ಪುತ್ತೂರು :ದ.ಕ.ಜಿಲ್ಲಾ ಪೊಲೀಸ್ ಅಧೀಕ್ಷಕ ಯತೀಶ್ ಎನ್.ಹಾಗೂ ಪುತ್ತೂರು ನಗರ ಠಾಣೆಯ ಹೆಚ್.ಸಿ.ಅದ್ರಾಮ ಎನ್ ಮುಖ್ಯಮಂತ್ರಿ ಪದಕಕ್ಕೆ ಆಯ್ಕೆ

Posted by Vidyamaana on 2024-08-15 13:51:35 |

Share: | | | | |


ಪುತ್ತೂರು :ದ.ಕ.ಜಿಲ್ಲಾ ಪೊಲೀಸ್ ಅಧೀಕ್ಷಕ ಯತೀಶ್ ಎನ್.ಹಾಗೂ ಪುತ್ತೂರು ನಗರ ಠಾಣೆಯ ಹೆಚ್.ಸಿ.ಅದ್ರಾಮ ಎನ್ ಮುಖ್ಯಮಂತ್ರಿ ಪದಕಕ್ಕೆ ಆಯ್ಕೆ

ಪುತ್ತೂರು:ದ.ಕ.ಜಿಲ್ಲೆಯ ಪೊಲೀಸ್ ಅಧೀಕ್ಷಕ ಯತೀಶ್ ಎನ್.ಹಾಗೂ ಪುತ್ತೂರು ನಗರ ಪೊಲೀಸ್ ಠಾಣೆಯ ಹೆಡ್ ಕಾನ್‌ಸ್ಟೇಬಲ್ ಅದ್ರಾಮ ಎನ್. ಸೇರಿದಂತೆ ರಾಜ್ಯದ 126 ಪೊಲೀಸ್ ಅಧಿಕಾರಿ, ಸಿಬ್ಬಂದಿಗಳನ್ನು 2023ನೇ ಸಾಲಿನ ಮುಖ್ಯಮಂತ್ರಿ ಪದಕಕ್ಕೆ ಆಯ್ಕೆ ಮಾಡಲಾಗಿದೆ.

ಯತೀಶ್ ಎನ್: 2016ನೇ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿರುವ ಯತೀಶ್ ಎನ್. ಅವರು ಶಿವಮೊಗ್ಗದಲ್ಲಿ ಎ ಎಸ್ ಪಿ ಯಾಗಿ ಬಳಿಕ ಗದಗ, ಮಂಡ್ಯದಲ್ಲಿ ಎಸ್‌ಪಿಯಾಗಿ ಕರ್ತವ್ಯ ನಿರ್ವಹಿಸಿದ್ದರು.ಇತ್ತೀಚೆಗಷ್ಟೆ ಮಂಡ್ಯದಿಂದ ವರ್ಗಾವಣೆಗೊಂಡು ದ.ಕ.ಜಿಲ್ಲಾ ಪೊಲೀಸ್ ಅಧೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.ಇವರು ಬೆಂಗಳೂರು ನಿವಾಸಿಯಾಗಿದ್ದಾರೆ. ತನ್ನ ಕರ್ತವ್ಯದ ಅವಧಿಯಲ್ಲಿ ಮಾಡಿರುವ ಸಾಧನೆಯನ್ನು ಪುರಸ್ಕರಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.  

ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಹೆಡ್ ಕಾನ್‌ಸ್ಟೇಬಲ್ ಆಗಿರುವ ಆದ್ರಾಮ ಎನ್.ಅವರು

Recent News


Leave a Comment: