ಮೃತಪಟ್ಟ ಗರ್ಭಿಣಿ ಮನೆಗೆ ಭೇಟಿ ನೀಡಿದ ಪುತ್ತಿಲ

ಸುದ್ದಿಗಳು News

Posted by vidyamaana on 2023-06-29 12:19:28 |

Share: | | | | |


ಮೃತಪಟ್ಟ ಗರ್ಭಿಣಿ ಮನೆಗೆ ಭೇಟಿ ನೀಡಿದ ಪುತ್ತಿಲ

ಪುತ್ತೂರು: ಹೊಸ ಉದ್ಯಮವೊಂದರ ಉದ್ಘಾಟನಾ ಕಾರ್ಯಕ್ರಮ ಮುಗಿಸಿ ಹಿಂದಿರುಗಿ ಬರುವಾಗ ಅರುಣ್ ಕುಮಾರ್ ಪುತ್ತಿಲ ಹೆರಿಗೆಗೆ ದಾಖಲಾಗಿದ್ದ ಗರ್ಭಿಣಿ ಮೃತಪಟ್ಟ ಮನೆಗೆ ತೆರಳಿ ಸಾಂತ್ವನ ಹೇಳಿದರು.


ಕಾರ್ಯಕ್ರಮ ಮುಗಿಸಿ ಬರುವಾಗ ರಸ್ತೆಯಲ್ಲಿ ಜನ ಸೇರಿದ್ದನ್ನು ನೋಡಿ ವಿಚಾರಿಸಿದಾಗ ಮೃತಪಟ್ಟ ಬಗ್ಗೆ ತಿಳಿದುಬಂದಿದ್ದು,  ನಂತರ ಮನೆಗೆ ತೆರಳಿ ಸಾಂತ್ವನ ಹೇಳಿದರು. 

ಶೇಕಮಲೆ ಬೊಳ್ಳಾಡಿ ಇಬ್ರಾಹಿಂ ಎಂಬವರ ಪತ್ನಿ 9 ತಿಂಗಳ ಗರ್ಭಿಣಿ ಹಸೀನಾ (29) ಮಂಗಳೂರಿನ ಎಜೆ ಆಸ್ಪತ್ರೆಗೆ ದಾಖಲಾಗಿದ್ದರು.  ಜೂ.28 ರಂದು ಹೆರಿಗೆ ಸಂದರ್ಭ ಹೃದಯಾಘಾತದಿಂದ ನಿಧನರಾದರು. 

ಹೆರಿಗೆಯಲ್ಲಿ ಮಗು ಜೀವಂತವಾಗಿದ್ದು, ಎಜೆ ಆಸ್ಪತ್ರೆಯ ವೈದ್ಯರಿಗೆ ಕರೆ ಮಾಡಿ ಅರುಣ್ ಪುತ್ತಿಲರು ಮಗುವಿನ ಆರೋಗ್ಯ ವಿಚಾರಿಸಿದರು. 

ಈ ಹಿಂದೆಯೂ ಅಪಘಾತ ನಡೆದ ಸಂದರ್ಭ ಧರ್ಮ ನೋಡದೆ ತನ್ನದೇ  ಕಾರಿನಲ್ಲಿ ರಕ್ತದ ಮಡುವಿನಲ್ಲಿದ್ದ  ಗಾಯಳುಗಳನ್ನು ಹಾಕಿಕೊಂಡು ಹೋದ ಉದಾಹರಣೆಯೂ ಇದೆ. ಅವರ ಕಾರಿನಲ್ಲಿ ಅಪಘಾತಗೊಂಡ  ಮುಸ್ಲಿಂ ಮಗುವೊಂದು ಮೃತಪಟ್ಟಿದೆ. 

ಮೊನ್ನೆಯಷ್ಟೇ ಮಂಗಳೂರಿನಿಂದ ಬರುತಿದ್ದಾಗ ರಸ್ತೆ ಬದಿಯ ಚರಂಡಿಗೆ ಬಿದ್ದಿದ್ದ ಕಾರನ್ನು ಮೇಲೆತ್ತಲು ಸಹಾಯ ಮಾಡಿದ್ದರು.

 Share: | | | | |


ಮಂಗಳೂರಲ್ಲಿ ಮಣ್ಣು ಕುಸಿತ ಪ್ರಕರಣ : ಓರ್ವ ಕಾರ್ಮಿಕನ ರಕ್ಷಣೆ

Posted by Vidyamaana on 2024-07-03 16:20:08 |

Share: | | | | |


ಮಂಗಳೂರಲ್ಲಿ ಮಣ್ಣು ಕುಸಿತ ಪ್ರಕರಣ : ಓರ್ವ ಕಾರ್ಮಿಕನ ರಕ್ಷಣೆ

ಮಂಗಳೂರು : ಮಂಗಳೂರಿನ ಬಲ್ಮಠದಲ್ಲಿ ನಿರ್ಮಾಣ ಹಂತದ ಕಟ್ಟಡದಲ್ಲಿ ಮಣ್ಣು ಕುಸಿತದಿಂದ ಮಣ್ಣಿನ ಅಡಿಯಲ್ಲಿ ಇಬ್ಬರು ಕಾರ್ಮಿಕರು ಸಿಲುಕಿದ್ದರು. ಇದೀಗ ಮಣ್ಣಿನ ಅಡಿ ಸಿಲುಕಿದ್ದ ಕಾರ್ಮಿಕರ ಪೈಕಿ ಒಬ್ಬನನ್ನು ರಕ್ಷಣೆ ಮಾಡಲಾಗಿದೆ.ಹೌದು ಇಂದು ಮಂಗಳೂರಿನ ಬಲ್ಮಠದಲ್ಲಿ ನಿರ್ಮಾಣ ಹಂತದ ಕಟ್ಟಡದಲ್ಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದರು

ಸುಳ್ಯ ಒಡಹುಟ್ಟಿದವರಿಂದಲೇ ಕೊಲೆಯಾದ ಉಸ್ಮಾನ್

Posted by Vidyamaana on 2023-07-14 08:18:06 |

Share: | | | | |


ಸುಳ್ಯ ಒಡಹುಟ್ಟಿದವರಿಂದಲೇ ಕೊಲೆಯಾದ ಉಸ್ಮಾನ್

ಸುಳ್ಯ : ತಮ್ಮಂದಿರು ಸೇರಿ ಅಣ್ಣನನ್ನು ಇರಿದು ಕೊಲೆಗೈದ ಘಟನೆ ಭೀಕರ ಘಟನೆ ಸುಳ್ಯ ಸಂಪಾಜೆಯ ಸಮೀಪದ ಚೆಂಬು ಗ್ರಾಮದಲ್ಲಿ ನಡೆದಿದೆ.


ಆಸ್ತಿ ವಿವಾದ ಹಿನ್ನಲೆಯಲ್ಲಿ ಈ ಹತ್ಯೆ ನಡೆದಿದ್ದು, ಕುದ್ರೆಪಾಯ ನಿವಾಸಿ ಉಸ್ಮಾನ್ ಹತ್ಯೆಯಾದ ದುರ್ದೈವಿ.


ಸತ್ತಾರ್, ರಫೀಕ್, ಇಸುಬು,ಅಬ್ಬಾಸ್, ಉಸ್ಮಾನ್ ಮೊದಲಾದ ಅಣ್ಣತಮ್ಮಂದಿರ ಕೃಷಿ ಭೂಮಿ ಸುಮಾರು 50 ಎಕ್ರೆ ಜಾಗ ಕುದ್ರೆಪಾಯದಲ್ಲಿದ್ದು ಜಾಗದ ತಕರಾರಿನಿಂದಾಗಿ ವಿವಾದವಿತ್ತು. ಶುಕ್ರವಾರ ಇವರು ಚೆಂಬು ಗ್ರಾಮದ ಕುದ್ರೆಪಾಯದ ಸಮೀಪ ಇರುವ ಜಾಗಕ್ಕೆ ಹೋಗಿದ್ದರು. ಈ ವೇಳೆ ಆಸ್ತಿ ವಿಚಾರದಲ್ಲಿ ಸಹೋದರರ ನಡುವೆ ಮಾತಿಗೆ ಮಾತು ಬೆಳೆದಿದೆ. ತೀವ್ರ ಚರ್ಚೆ ನಡೆದು ಕೋಪದ ತೀವ್ರತೆಯಲ್ಲಿ ಸಹೋದರರು ಸೇರಿ ಚೂರಿಯಿಂದ ಇರಿದು ಉಸ್ಮಾನ್ ನನ್ನು ಹತ್ಯೆ ನಡೆಸಿರುವುದಾಗಿ ತಿಳಿದುಬಂದಿದೆ.


ಉಸ್ಮಾನ್ ಕುದ್ರೆಪಾಯದಲ್ಲಿ ಭೂಮಿ ಹೊಂದಿದ್ದರು. ಅರಂತೋಡಿನಲ್ಲೂ ಇವರಿಗೆ ಜಾಗವಿದೆ ಎಂದು ತಿಳಿದು ಬಂದಿದೆ. ಸದ್ಯ ಇವರು ಪುತ್ತೂರಿನ ಸಂಪ್ಯದಲ್ಲಿ ನೆಲೆಸಿದ್ದರು ಎನ್ನಲಾಗುತ್ತಿದೆ. ಸಂಪಾಜೆ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸುತ್ತಿದ್ದಾರೆ.

ಪ್ರೀತಿ‌ ನಿರಾಕರಿಸಿದ ಮಂಗಳಮುಖಿಗೆ ಚಾಕು ಇರಿದ ಆದಿಲ್ !

Posted by Vidyamaana on 2024-08-29 15:00:45 |

Share: | | | | |


ಪ್ರೀತಿ‌ ನಿರಾಕರಿಸಿದ ಮಂಗಳಮುಖಿಗೆ ಚಾಕು ಇರಿದ ಆದಿಲ್ !

ತುಮಕೂರು: ಪ್ರೀತಿ‌ ನಿರಾಕರಿಸಿದ ಮಂಗಳಮುಖಿಗೆ ಯುವಕನೊರ್ವ ಚಾಕು (Attempt To murder) ಇರಿದಿದ್ದಾನೆ. ಚಾಕುವಿನಿಂದ ಇರಿದು ಪರಾರಿಯಾಗಲು ಯತ್ನಿಸಿದಾಗ ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.ತುಮಕೂರು ಜಿಲ್ಲೆಯ ಕುಣಿಗಲ್ ಪಟ್ಟಣದ ಕೋಟೆ ಪ್ರದೇಶದಲ್ಲಿ ಘಟನೆ ನಡೆದಿದೆ.

ಹನೀಷಾ (21) ಚಾಕುವಿನಿಂದ ಇರಿತಕ್ಕೊಳಗಾದ ಮಂಗಳಮುಖಿಯಾಗಿದ್ದಾರೆ. ಮಂಡ್ಯದ ಆದಿಲ್‌ (23) ಚಾಕು ಇರಿದ ಆರೋಪಿಯಾಗಿದ್ದಾನೆ. ಇವರಿಬ್ಬರು ಕಳೆದ ಆರು ತಿಂಗಳಿಂದ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಹನೀಷಾ ಲಿಂಗತ್ವ ಅಲ್ಪಸಂಖ್ಯಾತರ ಕಾರ್ಯಕ್ರಮಗಳ ನಿಮಿತ್ತ ಪರ ಊರುಗಳಿಗೆ ಆಗಾಗ ಹೋಗುತ್ತಿದ್ದರು.

ಡಾಲರ್ ಎದುರು ರುಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ

Posted by Vidyamaana on 2023-09-08 11:45:10 |

Share: | | | | |


ಡಾಲರ್ ಎದುರು ರುಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ

ದೆಹಲಿ: ಅಮೆರಿಕದ ಡಾಲರ್ ಎದುರು ರುಪಾಯಿ ಮೌಲ್ಯವು ಸಾರ್ವಕಾಲಿಕ ಕುಸಿತ ಕಂಡಿದ್ದು ಅ೦ದಾಜು 83.14 ರು. ಆಗಿದೆ. ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಹೆಚ್ಚಳ ಹಾಗೂ ಅಮೆರಿಕದ ಡಾಲರ್ ಕರೆನ್ಸಿ ಬಲಿಷ್ಠಗೊಂಡಿದ್ದುದೇ ರುಪಾಯಿ ಮೌಲ್ಯ ಕುಸಿತಕ್ಕೆ ಕಾರಣವೆನ್ನಲಾಗಿದೆ. ಅಮೆರಿಕ ಡಾಲರ್ ಎದುರು ರುಪಾಯಿ ಮೌಲ್ಯವು ಗುರುವಾರದ ಆರು ತಿಂಗಳುಗಳಲ್ಲಿಯೇ ಗರಿಷ್ಠ ಮಟ್ಟಕ್ಕೆ ಕುಸಿದಿದೆ ಎಂದು ವಿದೇಶಿ ವಿನಿಮಯಫಾರೆಕ್ಸ್) ವರ್ತಕರು ಹೇಳಿದ್ದಾರೆ. ದಿನದ ವಹಿವಾಟಿನ ಆರಂಭದಲ್ಲಿ ಅಂತ‌ ಬ್ಯಾಂಕ್ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಅಮೆರಿಕನ್ ಡಾಲರ್ ಎದುರು ರುಪಾಯಿ ಕರೆನ್ಸಿಯು 83.08ಕ್ಕೆ ಆಗಿದ್ದು, ದಿನದ ವಹಿವಾಟಿನ ಅಂತ್ಯಕ್ಕೆ 83.18ಕ್ಕೆ ಕುಸಿಯಿತು ಎಂದು ಫಾರೆಕ್ಸ್ ಮೂಲಗಳು ತಿಳಿಸಿವೆ. ಭಾರತೀಯ ಕರೆನ್ಸಿಯು ಈ ವರ್ಷದ ಆಗಸ್ಟ್ 21ರಂದು 83.13 ರು. ಆಗಿದ್ದುಅದು ಈವರ್ಷದ ಅತ್ಯಧಿಕ ಕುಸಿತವಾಗಿತ್ತು

ಕೆಎಸ್ಸಾರ್ಟಿಸಿಗೆ 40 ಪಲ್ಲಕ್ಕಿ ಉತ್ಸವ ದಕ್ಷಿಣ ಕನ್ನಡ ಜಿಲ್ಲೆಗೆ 12 ಐಷಾರಾಮಿ ಬಸ್

Posted by Vidyamaana on 2023-10-13 17:15:58 |

Share: | | | | |


ಕೆಎಸ್ಸಾರ್ಟಿಸಿಗೆ 40 ಪಲ್ಲಕ್ಕಿ ಉತ್ಸವ ದಕ್ಷಿಣ ಕನ್ನಡ ಜಿಲ್ಲೆಗೆ 12 ಐಷಾರಾಮಿ ಬಸ್

Y, ಅ.13: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (ಕೆಎಸ್ಸಾರ್ಟಿಸಿ) ಐಶಾರಾಮಿ ಬಸ್‌ಗಳ ಸಾಲಿಗೆ ಪಲ್ಲಕ್ಕಿ ಉತ್ಸವ ಹೆಸರಿನ ಸ್ಲೀಪರ್‌ ಬಸ್‌ಗಳು ಸೇರ್ಪಡೆಯಾಗಿದ್ದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 12 ಬಸ್‌ಗಳು ವಿವಿಧ ಜಿಲ್ಲೆಗಳಿಗೆ ಸಂಚರಿಸಲಿವೆ. 


ಐರಾವತ, ಅಂಬಾರಿ ರೀತಿಯಲ್ಲೇ ಅತ್ಯಾಧುನಿಕ ವ್ಯವಸ್ಥೆಗಳನ್ನು ಹೊಂದಿರುವ ಪಲ್ಲಕ್ಕಿ ಉತ್ಸವ ಬಸ್‌ಗಳಿಗೆ ಅಕ್ಟೋಬರ್‌ 7ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಗಳೂರಿನಲ್ಲಿ ಚಾಲನೆ ನೀಡಿದ್ದರು. ಕೆಎಸ್‌ಆರ್‌ಟಿಸಿ 40 ಬಸ್‌ಗಳನ್ನು ರಸ್ತೆಗಿಳಿಸಲು ನಿರ್ಧರಿಸಿದ್ದು, ಇದರಲ್ಲಿ ಮಂಗಳೂರು ವಿಭಾಗಕ್ಕೆ 8 ಮತ್ತು ಪುತ್ತೂರು ವಿಭಾಗಕ್ಕೆ 4 ಬಸ್‌ಗಳು ಬರಲಿದ್ದು ಹೆಚ್ಚಿನವು ಬೆಂಗಳೂರಿಗೆ ಪ್ರಯಾಣಿಸಲಿವೆ. 


ಪುತ್ತೂರು ಮತ್ತು ಧರ್ಮಸ್ಥಳ ಡಿಪೋಗಳಿಗೆ ತಲಾ 2ರಂತೆ ಬಸ್‌ ಗಳನ್ನು ನೀಡಲಾಗಿದ್ದು ಪುತ್ತೂರು, ಧರ್ಮಸ್ಥಳ ಮತ್ತು ಬೆಳ್ತಂಗಡಿಯಿಂದ ಬೆಂಗಳೂರಿಗೆ ರಾತ್ರಿ ಸಂಚಾರ ನಡೆಸಲಿವೆ ಎಂದು ಪುತ್ತೂರು ವಿಭಾಗೀಯ ನಿಯಂತ್ರಣಾಧಿಕಾರಿ ಜಯಕರ ಶೆಟ್ಟಿ ತಿಳಿಸಿದ್ದಾರೆ. ಇದಲ್ಲದೆ, 9 ಹೊಸ ಸಾಮಾನ್ಯ ಸಾರಿಗೆಯ ಕೆಂಪು ಬಸ್‌ಗಳು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ವಿಭಾಗಕ್ಕೆ ಬರಲಿದ್ದು, ಇದರಲ್ಲಿ ಪುತ್ತೂರು, ಬಿ.ಸಿ.ರೋಡ್‌, ಧರ್ಮಸ್ಥಳ ಮತ್ತು ಮಡಿಕೇರಿ ಡಿಪೋಗಳಿಗೆ ತಲಾ 2 ಮತ್ತು ಸುಳ್ಯಕ್ಕೆ 1 ಬಸ್‌ ನೀಡಲು ನಿರ್ಧರಿಸಲಾಗಿದೆ. ಮಹಿಳೆಯರಿಗೆ ಉಚಿತ ಯೋಜನೆ ಬಂದ ಬಳಿಕ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಚ್ಚುವರಿ ಸರ್ಕಾರಿ ಬಸ್ ಗಳನ್ನು ಇಳಿಸಲು ಒತ್ತಾಯ ಕೇಳಿಬಂದಿತ್ತು. 


ಪಲ್ಲಕ್ಕಿ ನಾನ್‌ ಎ.ಸಿ. ಸ್ಲೀಪರ್‌ ಬಸ್ ಆಗಿದ್ದು, 30 ಸ್ಲೀಪರ್‌ ಬರ್ತ್ ಹೊಂದಿದೆ. ಪ್ರತೀ ಸ್ಲೀಪರ್‌ನಲ್ಲಿ ಮೊಬೈಲ್‌ ಹೋಲ್ಡರ್‌, ಮೊಬೈಲ್‌ ಚಾರ್ಜರ್‌, ಪಾದರಕ್ಷೆ ಇಡುವ ವ್ಯವಸ್ಥೆ ಹೊಂದಿದೆ. ಎಮೆರ್ಜೆನಿ ಅಲರ್ಟ್‌ ವ್ಯವಸ್ಥೆ ಇದೆ. ಆಡಿಯೋ ಮೂಲಕ ಪ್ರಯಾಣಿಕರಿಗೆ ಮಾಹಿತಿ ನೀಡುವ ಮತ್ತು ಪ್ರಯಾಣಿಕರಿಂದ ಮಾಹಿತಿ ಪಡೆಯುವ ಸೌಕರ್ಯವಿದೆ. ಸೀಟ್‌ ನಂಬರ್‌ ಮೇಲೆ ಎಲ್‌ಇಡಿ ಬೆಳಕು, ಡಿಜಿಟಲ್‌ ಗಡಿಯಾರ, ಎಲ್‌ಇಡಿ ಫ್ಲೋರ್‌ ಮುಂತಾದ ಸವಲತ್ತುಗಳಿವೆ. ಚಾಲಕನಿಗೆ ನೆರವಾಗುವ ಅತ್ಯಾಧುನಿಕ ಬ್ಯಾಕ್‌ ಕ್ಯಾಮೆರಾವೂ ಇದೆ. 


ಕೆಎಸ್‌ಆರ್‌ಟಿಸಿ ರಾಜ್ಯದಲ್ಲಿ 40 ಪಲ್ಲಕ್ಕಿ ಉತ್ಸವ ಬಸ್‌ಗಳನ್ನು ಖರೀದಿ ಮಾಡಿದೆ. ಈ ಪೈಕಿ ಒಟ್ಟು 12ಕ್ಕೂ ಅಧಿಕ ಮಾರ್ಗಗಳಲ್ಲಿ ಈ ಬಸ್‌ಗಳು ಸಂಚಾರ ನಡೆಸಲಿವೆ. ಪ್ರಮುಖವಾಗಿ ಬೆಂಗಳೂರಿನಿಂದ ಮಂಗಳೂರು, ಉತ್ತರ ಕನ್ನಡ, ಹೊಸಪೇಟೆ, ಬೆಳಗಾವಿ, ಮಂತ್ರಾಲಯ, ಶಿವಮೊಗ್ಗ ಮಾರ್ಗದಲ್ಲಿ ಸಂಚರಿಸಲಿವೆ. ಮಂಗಳೂರಿನಿಂದ ಮಂತ್ರಾಲಯ, ಬೆಂಗಳೂರಿಗೆ, ದಾವಣಗೆರೆಯಿಂದ ಮಂಗಳೂರು, ಕಲಬುರಗಿಗೆ ಈ ಪಲ್ಲಕ್ಕಿ ಉತ್ಸವ ಬಸ್‌ಳ ಸೌಲಭ್ಯ ನೀಡಲಾಗಿದೆ

ಬೆಂಗಳೂರು ಕಂಬಳ: ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆ ಕರೆದ ಸ್ಪೀಕರ್ ಯು ಟಿ ಖಾದರ್

Posted by Vidyamaana on 2023-11-16 07:54:35 |

Share: | | | | |


ಬೆಂಗಳೂರು ಕಂಬಳ: ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆ ಕರೆದ ಸ್ಪೀಕರ್ ಯು ಟಿ ಖಾದರ್

ಪುತ್ತೂರು: ನವೆಂಬರ್ ೨೪ ರಿಂದ ೨೬ ತನಕ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿರುವ ಬೆಂಗಳೂರು ಕಂಬಳ ವಿಚಾರಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ವಿಧಾನಸಭಾ ಸ್ಪೀಕರ್ ಯು ಟಿ ಖಾದರ್ ರವರು ವಿವಿಧ ಇಲಾಖಾ ಅಧಿಕಾರಿಗಳ ಸಭೆಯನ್ನು ನಡೆಸಿದರು.


ಬೆಂಗಳೂರು ಕಂಬಳಕ್ಕೆ ಲಕ್ಷಾಂತರ ಮಂದಿ ಕಂಬಳಾಭಿಮಾನಿಗಳು ಆಗಮಿಸಲಿದ್ದು, ಮುಖ್ಯಮಂತ್ರಿ ಮತ್ತು ಸಚಿವರು, ಬಾಲಿವುಡ್ ನಟರು, ಕನ್ನಡ ಚಿತ್ರ ರಂಗದ ಪ್ರಮುಖರು, ತಮಿಳು , ತೆಳುಗು ಸೇರಿದಂತೆ ವಿವಿಧ ಭಾಷಾ ಚಲನಚಿತ್ರ ನಟರು , ವಿವಿಐಪಿಗಳು ಭಾಗವಹಿಸುವ ಕಾರಣ ಕೈಗೊಳ್ಳಬೇಕಾದ ಸುರಕ್ಷಾ ಕ್ರಮಗಳ ಬಗ್ಗೆ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದರು.


ಕರ್ನಾಟಕದ ಇತಿಹಾಸದಲ್ಲೇ ಮೊದಲ ಬಾರಿಗೆ ರಾಜ್ಯದ ರಾಜಧಾನಿಯಲ್ಲಿ ಕಂಬಳ ನಡೆಯುತ್ತಿದ್ದು ಇದೇ ಮೊದಲ ಬಾರಿಗೆ ಎಂಬಂತೆ ರಾಜಧಾನಿಯಲ್ಲಿ ಆಹೋರಾತ್ರಿ ಕಾರ್ಯಕ್ರಮ ನಡೆಯುತ್ತಿದೆ. ಲಕ್ಷಾಂತರ ಮಂದಿ ಭಾಗವಹಿಸುವ ಕಾರಣಕ್ಕೆ ಟ್ರಾಫಿಕ್ ಸಮಸ್ಯೆ, ಅಗ್ನಿಶಾಮಕ ದಳ, ಪೊಲೀಸ್ ಇಲಾಖೆ, ಬಿಬಿಎಂಪಿ ಅರಣ್ಯ ಇಲಾಖೆ ಸೇರಿದಂತೆ ಕಂಬಳ ಕಾರ್ಯಕ್ರಮಕ್ಕೆ ಸಂಬಂದಿಸಿದಂತೆ ಅಧಿಕಾರಿಗಳ ಸಭೆಯನ್ನು ಕರೆದು ಅವರ ಜೊತೆ ಚರ್ಚೆ ನಡೆಸಿದರು. ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಇಲಖಾ ಅಧಿಕಾರಿಗಳಿಗೆ ಸ್ಪೀಕರ್ ರವರು ಮಾಹಿತಿ ಮತ್ತು ಸೂಚನೆಯನ್ನು ನೀಡಿದರು. ಸಭೆಯಲ್ಲಿ ಕಂಬಳ ಸಮಿತಿಯ ಪ್ರಮುಖರಾದ ಬಂಜಾರಾ ಪ್ರಕಾಶ್ ಶೆಟ್ಟಿ, ಗುಣರಂಜನ್ ಶೆಟ್ಟಿ, ಗುರುಕಿರಣ್ ಸೇರಿದಂತೆ ಪ್ರಮುಖರು ಉಪಸ್ತಿತರಿದ್ದರು.


 


ಬೆಂಗಳೂರು ಕಂಬಳಕ್ಕೆ ಲಕ್ಷಾಂತರ ಮಂದಿ ಭಾಗವಹಿಸುವ ಕಾರಣ ಕೈಗೊಳ್ಳಬೇಕಾದ ಇಲಾಖಾವಾರು ವ್ಯವಸ್ಥೆಗಳ ಬಗ್ಗೆ ತಿಳಿಸಲು ಅಧಿಕಾರಿಗಳ ಸಭೆಯನ್ನು ಕರೆಯಲಾಗಿತ್ತು. ಪ್ರಮುಖ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಖ್ಯಾತರು ಭಾಗವಹಿಸಲಿದ್ದಾರೆ. ಕೈಗೊಳ್ಳಬೇಕಾದ ಸುರಕ್ಷಾ ಕ್ರಮಗಳ ಬಗ್ಗೆಯೂ ಅಧಿಕಾರಿಗಳಿಗೆ ತಿಳಿಸಲಾಗಿದೆ. ಇದೇ ಮೊದಲ ಬಾರಿಗೆ ಆಹೋರಾತ್ರಿ ಕಾರ್ಯಕ್ರಮ ನಡೆಯುತ್ತಿದ್ದು ಅಗತ್ಯ ಕ್ರಮಗಳ ಬಗ್ಗೆ ಅಧಿಕಾರಿಗಳಿಗೆ ಸೂಚನೆಯನ್ನು ನೀಡಲಾಯಿತು.


ಅಶೋಕ್ ರೈ ಅಧ್ಯಕ್ಷರು ಕಂಬಳ ಸಮಿತಿ, ಶಾಸಕರು ಪುತ್ತೂರು.

Recent News


Leave a Comment: