ದಕ್ಷಿಣಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆ ಹಿನ್ನೆಲೆ : ದ. ಕ ಜಿಲ್ಲೆಯ ಎಲ್ಲ ಶಾಲೆಗಳಿಗೆ ನಾಳೆ (ಜು 9) ರಜೆ

ಸುದ್ದಿಗಳು News

Posted by vidyamaana on 2024-07-08 20:09:58 |

Share: | | | | |


ದಕ್ಷಿಣಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆ ಹಿನ್ನೆಲೆ : ದ. ಕ ಜಿಲ್ಲೆಯ ಎಲ್ಲ ಶಾಲೆಗಳಿಗೆ ನಾಳೆ (ಜು 9) ರಜೆ

ಮಂಗಳೂರು: ದ‌.ಕ ಜಿಲ್ಲೆಯಲ್ಲಿ ಮಳೆ ಆರ್ಭಟ ಮುಂದುವರಿದಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ದಕ್ಷಿಣ ಕನ್ನಡ ಜಿಲ್ಲೆ ಯ ಶಾಲಾ, ಪಿಯು ಕಾಲೇಜಿಗೆ ಜುಲೈ 09ರಂದು ಜಿಲ್ಲಾಡಳಿತ ರಜೆ ಘೋಷಣೆ ಮಾಡಿ ಆದೇಶ ಹೊರಡಿಸಿದೆ.

ದ. ಕ ಜಿಲ್ಲೆಯ ಎಲ್ಲಾ ಅಂಗನವಾಡಿ, ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಪ್ರಾಥಮಿಕ, ಪ್ರೌಢಶಾಲೆ. ಪದವಿ ಪೂರ್ವ ಕಾಲೇಜು, (12 ನೇ ತರಗತಿವರೆಗೆ) ದಿನಾಂಕ: 09/07/224 ರಂದು ರಜೆಯನ್ನು ಘೋಷಿಸಲಾಗಿದೆ.

 Share: | | | | |


ತೆಲಂಗಾಣದಲ್ಲಿ ಫೋನ್ ಕದ್ದಾಲಿಕೆ ಪ್ರಕರಣ ; ಮೂವರು ಐಪಿಎಸ್ ಅಧಿಕಾರಿಗಳ ಬಂಧನ

Posted by Vidyamaana on 2024-03-26 07:55:28 |

Share: | | | | |


ತೆಲಂಗಾಣದಲ್ಲಿ ಫೋನ್ ಕದ್ದಾಲಿಕೆ ಪ್ರಕರಣ ; ಮೂವರು ಐಪಿಎಸ್ ಅಧಿಕಾರಿಗಳ ಬಂಧನ

ಹೈದರಾಬಾದ್, ಮಾ.26: ಲೋಕಸಭೆ ಚುನಾವಣೆಗೂ ಮುನ್ನ ತೆಲಂಗಾಣದಲ್ಲಿ ಪೊಲೀಸ್ ಅಧಿಕಾರಿಗಳ ಫೋನ್‌ ಕದ್ದಾಲಿಕೆ ಪ್ರಕರಣ ರಾಹಕೀಯ ಬಿರುಗಾಳಿ ಎಬ್ಬಿಸಿದೆ. ಗುಪ್ತಚರ ದಳದ ಮಾಜಿ ಮುಖ್ಯಸ್ಥ ಡಾ. ಟಿ ಪ್ರಭಾಕರ್ ರಾವ್ ಅವರನ್ನು ಪ್ರಕರಣದಲ್ಲಿ ಮೊದಲ ಆರೋಪಿಯಾಗಿ ಮಾಡಿದ್ದು ಇದರ ಬೆನ್ನಲ್ಲೇ ತಲೆಮರೆಸಿಕೊಂಡಿದ್ದಾರೆ. 

ಪ್ರಭಾಕರ್‌ ರಾವ್‌ ಸದ್ಯ ಅಮೆರಿಕದಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ. ಅವರ ವಿರುದ್ಧ ಲುಕ್ ಔಟ್ ನೋಟಿಸ್ ಜಾರಿ ಮಾಡಲಾಗಿದೆ. ಕೆ ಚಂದ್ರಶೇಖರ ರಾವ್ ನೇತೃತ್ವದ ಹಿಂದಿನ ಬಿಆರ್‌ಎಸ್ ಸರ್ಕಾರದ ಅವಧಿಯಲ್ಲಿ ಪ್ರತಿಪಕ್ಷ ನಾಯಕರ ಫೋನ್‌ಗಳನ್ನು ಅಕ್ರಮವಾಗಿ ಕದ್ದಾಲಿಕೆ ಮಾಡುವ ಮೂಲಕ ದತ್ತಾಂಶಗಳನ್ನು ಸಂಗ್ರಹಿಸಿದ ಆರೋಪದಲ್ಲಿ ಪ್ರಕರಣ ದಾಖಲಾಗಿದೆ. 

ಹೈದರಾಬಾದ್‌ನಲ್ಲಿ ಪ್ರಭಾಕರ್‌ ರಾವ್ ಅವರ ಮನೆ, ಐ ನ್ಯೂಸ್ ಎಂಬ ತೆಲುಗು ಟಿವಿ ವಾಹಿನಿಯನ್ನು ನಡೆಸುತ್ತಿರುವ ಶ್ರವಣ್ ರಾವ್ ಅವರ ನಿವಾಸ ಸೇರಿದಂತೆ ಸುಮಾರು ಹನ್ನೆರಡು ಇತರ ಸ್ಥಳಗಳನ್ನು ಹುಡುಕಾಟ ನಡೆಸಲಾಗಿದೆ. ಶ್ರವಣ್‌ ರಾವ್‌ ಕೂಡ ದೇಶ ತೊರೆದಿದ್ದಾರೆ ಎಂದು ನಂಬಲಾಗಿದ್ದು, ಇಸ್ರೇಲ್‌ನಿಂದ ಫೋನ್ ಟ್ಯಾಪಿಂಗ್ ಉಪಕರಣಗಳನ್ನು ತರಿಸಿ ಸರ್ವರ್‌ಗಳನ್ನು ಸ್ಥಾಪಿಸಲು ಇವರು ಸಹಾಯ ಮಾಡಿದ್ದಾರೆ ಎನ್ನಲಾಗಿದೆ.


ಪ್ರಕರಣದಲ್ಲಿ ಈಗಾಗಲೇ ಮೂವರು ಐಪಿಎಸ್‌ ದರ್ಜೆ ಅಧಿಕಾರಿಗಳನ್ನು ಬಂಧಿಸಲಾಗಿದೆ. ಹೆಚ್ಚುವರಿ ಎಸ್ಪಿಗಳಾದ ಭುಜಂಗ ರಾವ್, ತಿರುಪತಣ್ಣ, ಮತ್ತು ಡಿವೈಎಸ್‌ಪಿ ಪ್ರಣೀತ್ ರಾವ್ ಅವರನ್ನು ಈಗಾಗಲೇ ಬಂಧಿಸಲಾಗಿದೆ. ಭುಜಂಗ ರಾವ್ ಮತ್ತು ತಿರುಪತಣ್ಣ ಖಾಸಗಿ ವ್ಯಕ್ತಿಗಳ ಮೇಲೆ ಅಕ್ರಮವಾಗಿ ನಿಗಾ ವಹಿಸಿ ಸಾಕ್ಷ್ಯ ನಾಶಪಡಿಸಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೊರೋನಾ ಉಪತಳಿ ಜೆಎನ್1: ರೋಗದ ಲಕ್ಷಣ, ಹರಡುವಿಕೆ ಹೇಗೆ? ತಡೆಯುವಿಕೆ ಏನು? ಇಲ್ಲಿದೆ ಮಾಹಿತಿ

Posted by Vidyamaana on 2023-12-21 16:56:51 |

Share: | | | | |


ಕೊರೋನಾ ಉಪತಳಿ ಜೆಎನ್1: ರೋಗದ ಲಕ್ಷಣ, ಹರಡುವಿಕೆ ಹೇಗೆ? ತಡೆಯುವಿಕೆ ಏನು? ಇಲ್ಲಿದೆ ಮಾಹಿತಿ

ನವದೆಹಲಿ: ಹೊಸ COVID-19 ರೂಪಾಂತರ JN.1 ಅನ್ನು ವಿಶ್ವ ಆರೋಗ್ಯ ಸಂಸ್ಥೆ(WHO) “ಆಸಕ್ತಿಯ ರೂಪಾಂತರ(Variant of Interest)” ಎಂದು ವರ್ಗೀಕರಿಸಿದೆ. ಆದರೆ, ಇದು ಸಾರ್ವಜನಿಕ ಆರೋಗ್ಯಕ್ಕೆ ಹೆಚ್ಚಿನ ಅಪಾಯವನ್ನುಂಟುಮಾಡುವುದಿಲ್ಲ ಎಂದು WHO ಹೇಳಿದೆ.


JN.1 ರೂಪಾಂತರವು ಭಾರತದ ಆರೋಗ್ಯ ವೃತ್ತಿಪರರು, ತಜ್ಞರು, ಅಧಿಕಾರಿಗಳು ಮತ್ತು ಸಾರ್ವಜನಿಕರಲ್ಲಿ ಕಳವಳವನ್ನು ಹುಟ್ಟುಹಾಕಿದೆ. JN.1 ಕೋವಿಡ್ ಸಬ್‌ವೇರಿಯಂಟ್, ಆರಂಭದಲ್ಲಿ ಲಕ್ಸೆಂಬರ್ಗ್‌ನಲ್ಲಿ ಗುರುತಿಸಲ್ಪಟ್ಟಿದೆ. ಇದು ಪಿರೋಲಾ ರೂಪಾಂತರದ (BA.2.86) ವಂಶಸ್ಥರಾಗಿದ್ದು, ಇದು ಓಮಿಕ್ರಾನ್ ಉಪ-ವ್ಯತ್ಯಯದಲ್ಲಿ ತನ್ನ ಮೂಲವನ್ನು ಹೊಂದಿದೆ.ಈ ರೂಪಾಂತರವು ಭಾರತದ ಸಕ್ರಿಯ COVID-19 ಪ್ರಕರಣಗಳಲ್ಲಿ ಹೆಚ್ಚಳಕ್ಕೆ ಕಾರಣವಾಗಿದೆ. ಸೋಮವಾರ(ಡಿಸೆಂಬರ್ 18) ಕೊರೊನಾ ಸೋಂಕಿತರ ಸಂಖ್ಯೆ 1,828 ಕ್ಕೆ ತಲುಪಿದೆ, ಇತ್ತೀಚೆಗೆ JN.1 ಪತ್ತೆಯಾದ ಕೇರಳದಲ್ಲಿ ಒಂದು ಸಾವು ವರದಿಯಾಗಿದೆ. ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳಿಗೆ ಸಲಹೆಗಳನ್ನು ನೀಡಿದೆ. ಈ ಬೆಳವಣಿಗೆಗೆ ಪ್ರತಿಕ್ರಿಯೆಯಾಗಿ ಸಾಕಷ್ಟು ಆರೋಗ್ಯ ವ್ಯವಸ್ಥೆಗಳನ್ನು ಖಚಿತಪಡಿಸಿಕೊಳ್ಳಲು ಒತ್ತಾಯಿಸಿದೆ.


ಕೋವಿಡ್-19 ರೂಪಾಂತರ JN.1 ನ ಲಕ್ಷಣಗಳು


ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ, ಹೊಸ COVID ರೂಪಾಂತರದೊಂದಿಗೆ ಸಂಬಂಧಿಸಿದ ರೋಗಲಕ್ಷಣಗಳು ಸಾಮಾನ್ಯವಾಗಿ ಸೌಮ್ಯದಿಂದ ಮಧ್ಯಮವಾಗಿರುತ್ತದೆ. ರೋಗಲಕ್ಷಣಗಳು ಜ್ವರ, ಸ್ರವಿಸುವ ಮೂಗು, ನೋಯುತ್ತಿರುವ ಗಂಟಲು ಮತ್ತು ತಲೆನೋವುಗಳನ್ನು ಒಳಗೊಂಡಿರಬಹುದು.


ಹೆಚ್ಚಿನ ರೋಗಿಗಳು ಸೌಮ್ಯ ಮೇಲ್ಭಾಗದ ಉಸಿರಾಟದ ರೋಗಲಕ್ಷಣಗಳನ್ನು ಅನುಭವಿಸುತ್ತಾರೆ. ಅದು ಸಾಮಾನ್ಯವಾಗಿ ನಾಲ್ಕರಿಂದ ಐದು ದಿನಗಳಲ್ಲಿ ಸುಧಾರಿಸುತ್ತದೆ. ಹೊಸ ರೂಪಾಂತರವು ಹಸಿವಿನ ನಷ್ಟ ಮತ್ತು ನಿರಂತರ ವಾಕರಿಕೆಯೊಂದಿಗೆ ಕಾಣಿಸಿಕೊಳ್ಳಬಹುದು. ಹಠಾತ್ ತೊಂದರೆ ಅನುಭವಿಸುವ ಹಸಿವು, ನಿರ್ದಿಷ್ಟವಾಗಿ ಇತರ ರೋಗಲಕ್ಷಣಗಳ ಜೊತೆಯಲ್ಲಿ, JN.1 ರೂಪಾಂತರದ ಸಂಭಾವ್ಯ ಸೂಚನೆಯಾಗಿ ಹೈಲೈಟ್ ಮಾಡಲಾಗಿದೆ ಮತ್ತು ವೈದ್ಯಕೀಯ ಸಮಾಲೋಚನೆಗೆ ಸಲಹೆ ನೀಡಲಾಗುತ್ತದೆ.


JN.1 ರೂಪಾಂತರದ ಮತ್ತೊಂದು ಗಮನಾರ್ಹ ಚಿಹ್ನೆಯು ತೀವ್ರ ಆಯಾಸವಾಗಿದೆ. ಅಗಾಧವಾದ ಬಳಲಿಕೆ ಮತ್ತು ಸ್ನಾಯು ದೌರ್ಬಲ್ಯದಿಂದ ಗುಣಲಕ್ಷಣಗಳನ್ನು ಹೊಂದಿರುವ ಈ ರೋಗಲಕ್ಷಣಗಳು ವಿಶಿಷ್ಟವಾದ COVID-19 ಆಯಾಸವನ್ನು ಮೀರಿವೆ. ಮೂಲಭೂತ ಕಾರ್ಯಗಳು ಸ್ಮಾರಕವೆಂದು ಭಾವಿಸಬಹುದು, ಮತ್ತು ಅಂತಹ ಆಯಾಸವನ್ನು ಅನುಭವಿಸುವ ವ್ಯಕ್ತಿಗಳು ವೈದ್ಯಕೀಯ ಮೌಲ್ಯಮಾಪನವನ್ನು ಪಡೆಯಬೇಕು.


ಅಪರೂಪದ ಸಂದರ್ಭಗಳಲ್ಲಿ, JN.1 ರೂಪಾಂತರದ ಸೋಂಕಿಗೆ ಒಳಗಾದ ವ್ಯಕ್ತಿಗಳು ಜೀರ್ಣಾಂಗವ್ಯೂಹದ ಸಮಸ್ಯೆಗಳನ್ನು ಸಹ ಅನುಭವಿಸಬಹುದು. ಇದು ಜೀರ್ಣಕಾರಿ ಆರೋಗ್ಯದಲ್ಲಿ ಬದಲಾವಣೆಗಳಿಗೆ ಕಾರಣವಾಗುತ್ತದೆ. ವಾಂತಿ ಮತ್ತು ವಾಕರಿಕೆ ಮುಂತಾದ ಲಕ್ಷಣಗಳು ಕಂಡುಬರಬಹುದು.


CDC ಪ್ರಕಾರ, ಪ್ರಕರಣಗಳ ಉಲ್ಬಣವು ಇತರ ತಳಿಗಳಿಗೆ ಹೋಲಿಸಿದರೆ JN.1 ಹೆಚ್ಚು ಹರಡಬಹುದು ಎಂದು ಸೂಚಿಸುತ್ತದೆ. ರಜಾದಿನದ ಕೂಟಗಳ ಸಂಯೋಜನೆ, ಕಡಿಮೆ COVID-19 ಲಸಿಕೆ ದರಗಳು ಮತ್ತು ಹೊಸ, ಹರಡುವ ರೂಪಾಂತರದ ಉಪಸ್ಥಿತಿಯಿಂದಾಗಿ ತಜ್ಞರು ಕಳವಳವನ್ನು ವ್ಯಕ್ತಪಡಿಸುತ್ತಾರೆ. ಪ್ರಸ್ತುತ, ಭಾರತದಲ್ಲಿ 90% ಕ್ಕಿಂತ ಹೆಚ್ಚು ಕೋವಿಡ್ ಪ್ರಕರಣಗಳು ಸೌಮ್ಯವಾಗಿರುತ್ತವೆ ಮತ್ತು ಮನೆಯ ಪ್ರತ್ಯೇಕತೆಯ ಮೂಲಕ ನಿರ್ವಹಿಸಲ್ಪಡುತ್ತವೆ.

ಬೆಂಬಲ ಬೆಲೆಯನ್ನು ಘೋಷಿಸುವ ಜವಾಬ್ದಾರಿ ಈಗ ಕೇಂದ್ರಕ್ಕೆ ಸೇರಿದ್ದು

Posted by Vidyamaana on 2024-02-27 16:21:42 |

Share: | | | | |


ಬೆಂಬಲ ಬೆಲೆಯನ್ನು ಘೋಷಿಸುವ ಜವಾಬ್ದಾರಿ ಈಗ ಕೇಂದ್ರಕ್ಕೆ ಸೇರಿದ್ದು

ಪುತ್ತೂರು: ಪುತ್ತೂರಿನ ರಾಜಕೀಯದಲ್ಲಿ ತನ್ನ ಅಸ್ತಿತ್ವವನ್ನು ಸ್ಥಾಪಿಸಲು ಮತ್ತು ಪುತ್ತೂರು ಬಿಜೆಪಿಯಲ್ಲಿ ತನ್ಙ ಯಾಜಮಾನ್ಯ ಪುನರ್ ಸ್ಥಾಪಿಸಲು ಹೆಣಗಾಡುವ ಸಂಜೀವ ಮಠಂದೂರು ಅವರ, ಪ್ರಯತ್ನದ ಅಂಗವಾಗಿ ಅಡಿಕೆಯ ಬೆಲೆ ಕುಸಿತವನ್ನು ಬಳಸಿಕೊಂಡು ಕರ್ನಾಟಕ ಸರಕಾರವನ್ನು ರೈತ ವಿರೋಧಿ ಎಂದು ಬಿಂಬಿಸುವ ವ್ಯರ್ಥ ಪ್ರಯತ್ನ ಮಾಡಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಅಮಳ ರಾಮಚಂದ್ರ ಹೇಳಿದ್ದಾರೆ.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕುಸಿಯುತ್ತಿರುವ ಅಡಿಕೆ ಬೆಲೆಗೆ ಕರ್ನಾಟಕ ರಾಜ್ಯ ಸರ್ಕಾರ ಮಾರುಕಟ್ಟೆ ಮಧ್ಯಪ್ರವೇಶ ಯೋಜನೆಯಲ್ಲಿ ಬೆಂಬಲ ಬೆಲೆಯನ್ನು ಘೋಷಿಸಬೇಕು ಎಂದು ಒಂದು ಕಡೆ ಹೇಳುವ ಸಂಜೀವ ಮಠಂದೂರ್ರವರು ಎಪಿಎಂಸಿಯಲ್ಲಿ  ಸಂಗ್ರಹವಾಗುವ ಸೆಸ್ ಹಣ  ರಾಜ್ಯ ಸರ್ಕಾರಕ್ಕೆ ಹೋಗುತ್ತದೆ. ಈ ಹಣದ ಆವರ್ತನ ನಿಧಿಯಿಂದ ರಾಜ್ಯ ಸರ್ಕಾರ ಅಡಿಕೆಗೆ ಬೆಂಬಲ ಬೆಲೆ ನೀಡಬೇಕು ಎಂದು ಹೇಳುತ್ತಾರೆ. ಹೀಗೆ ಸ್ಪಷ್ಟತೆ ಇಲ್ಲದೆ ಮಾತನಾಡಿದ ಸಂಜೀವ ಮಠಂದೂರ್ರವರಿಗೆ ಮಾರುಕಟ್ಟೆ ಮಧ್ಯಪ್ರವೇಶ ಯೋಜನೆ ಅಂದರೆ ಏನು ಅನ್ನುವುದೇ ಗೊತ್ತಿಲ್ಲ. ಎಪಿಎಂಸಿಯಲ್ಲಿ ಏನು ಆಗುತ್ತಿದೆ ಅನ್ನುವುದೂ ಗೊತ್ತಿಲ್ಲ ಅನ್ನುವುದು ಇದರಿಂದ ಸ್ಪಷ್ಟವಾಗುತ್ತದೆ ಎಂದು ಕುಟುಕಿದರು.

ರಾಜ್ಯ ಸರ್ಕಾರ ನಿರ್ದಿಷ್ಟ ಬೆಳೆಯ ಮಾರುಕಟ್ಟೆ ದರ ಕುಸಿದಿರುವುದನ್ನು ಉಲ್ಲೇಖಿಸಿ ಕೇಂದ್ರ ಸರಕಾರಕ್ಕೆ ಮಾರುಕಟ್ಟೆ ಮಧ್ಯ ಪ್ರವೇಶಕ್ಕಾಗಿ ಪ್ರಸ್ತಾವನೆಯನ್ನು ಕಳುಹಿಸಬೇಕಾಗುತ್ತದೆ. ಇದಕ್ಕೆ ಕೇಂದ್ರ ಸರಕಾರ ಒಪ್ಪಿಗೆ ನೀಡಿ ಶೇಕಡ 50:50ರ ಅನುಪಾತದ ಪಾಲುಗಾರಿಕೆಯಲ್ಲಿ ಮಾರುಕಟ್ಟೆ ಮಧ್ಯ ಪ್ರವೇಶ ಯೋಜನೆಯನ್ನು ಜಾರಿಗೊಳಿಸಲಾಗುತ್ತದೆ. ಹಿಂದೆ ಎಸ್.ಎಂ. ಕೃಷ್ಣ ನೇತೃತ್ವದ ಕಾಂಗ್ರೆಸ್ ಸರಕಾರ ಅಡಿಕೆಗೆ ಬೆಂಬಲ ಬೆಲೆಯನ್ನು ಘೋಷಿಸಿದ್ದು ಇದೇ ವ್ಯವಸ್ಥೆಯಲ್ಲಿ. ಈಗ ಭಾರತದ ಗಡಿಗಳಲ್ಲಿ ವಿದೇಶೀ ಅಡಿಕೆ  ಭಾರತದ ಮಾರುಕಟ್ಟೆಗೆ ಕಳ್ಳಸಾಗಾಟದ ಮುಖಾಂತರ ಬಂದು ಮಾರುಕಟ್ಟೆ ದರ ತೀವ್ರವಾಗಿ ಕುಸಿದ ಈ ಸಂದರ್ಭದಲ್ಲಿ ಮಾರುಕಟ್ಟೆ ಮಧ್ಯ ಪ್ರವೇಶ ಯೋಜನೆಯಲ್ಲಿ ರಾಜ್ಯ ಸರ್ಕಾರ ಅಡಿಕೆಗೆ ಬೆಂಬಲ ಬೆಲೆ ಘೋಷಿಸಬೇಕೆಂದು ಸಂಜೀವ ಮಠಂದೂರ್ರವರು ಒತ್ತಾಯಿಸುತ್ತಿರುವುದು ಮತ್ತು ಈಗ ನಡೆಯುತ್ತಿರುವ ವಿಧಾನಸಭಾ ಅಧಿವೇಶನದಲ್ಲಿ ಬಿಜೆಪಿ ಶಾಸಕರು ಬೆಂಬಲ ಬೆಲೆಗಾಗಿ ಸರಕಾರವನ್ನು ಒತ್ತಾಯಿಸಲಿದ್ದಾರೆ ಎಂದು ಹೇಳಿರುವುದು ನಗೆ ಪಾಟಲಿನ ವಿಚಾರವಾಗಿದೆ ಎಂದರು.

ಸಂಜೀವ ಮಠಂದೂರ್ರವರಿಗೆ ಈ ರಾಜ್ಯದಲ್ಲಿ ಏನು ಆಗುತ್ತಾ ಇದೆ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಯಾವ ರೀತಿಯಲ್ಲಿ ರೈತರ ಪರವಾಗಿ ಕೆಲಸ ಮಾಡುತ್ತಿದೆ ಅನ್ನುವುದರ ಅರಿವೇ ಇಲ್ಲ. ಅವರು ದಯವಿಟ್ಟು ಮೊನ್ನೆ ನಡೆದ ಬಜೆಟ್ ಅಧಿವೇಶನದಲ್ಲಿ ಸಿದ್ದರಾಮಯ್ಯನವರು ಮಾಡಿದ ಬಜೆಟ್ ಭಾಷಣವನ್ನು ಒಮ್ಮೆ ಸರಿಯಾಗಿ ಕೇಳಬೇಕು. ಕೇಳುವುದಕ್ಕೆ ಸಾಧ್ಯವಿಲ್ಲವೆಂದಾದರೆ ಬಜೆಟ್ ಪ್ರತಿಯನ್ನು ಪಡೆದು ಅದನ್ನು ಓದಬೇಕು. ಈ ಬಾರಿಯ  ಕರ್ನಾಟಕ ರಾಜ್ಯ ಸರ್ಕಾರದ ಬಜೆಟಿನಲ್ಲಿ ಇತರ ಕೆಲವು ಬೆಳೆಗಳು ಸೇರಿದಂತೆ ಅಡಿಕೆಗೆ ಕನಿಷ್ಠ ಬೆಂಬಲ ಬೆಲೆಯನ್ನು ಘೋಷಿಸುವುದಕ್ಕಾಗಿ ಈಗಾಗಲೇ ಪ್ರಸ್ತಾವನೆಯನ್ನು ಕಳುಹಿಸಿರುವುದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ವಿಧಾನಸಭೆಯಲ್ಲಿ ಅಧಿಕೃತವಾಗಿ ಮತ್ತು ಸ್ಪಷ್ಟವಾಗಿ ಘೋಷಿಸಿದ್ದಾರೆ.  ಇದರ ಅರಿವಿಲ್ಲದ ಮಾಜಿ ಶಾಸಕರು ಈಗ ಬೆಂಬಲೆ ಬೆಲೆಗಾಗಿ ಬೇಡಿಕೆ ಇಟ್ಟಿದ್ದಾರೆ. 

ಅಡಿಕೆಗೆ ಬೆಂಬಲ ಬೆಲೆ ನೀಡಬೇಕೆಂಬ ಪ್ರಸ್ತಾವನೆಯನ್ನು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರವು ಈಗಾಗಲೇ ಕೇಂದ್ರ ಸರಕಾರಕ್ಕೆ ಸಲ್ಲಿಸಿ ಆಗಿದೆ. ಆದ್ದರಿಂದ ಸಂಜೀವಣ್ಣ, ನಿದ್ದೆಯಿಂದ ಬೇಗ ಏಳಬೇಕಿತ್ತು ಎಂದು ಲೇವಡಿ ಮಾಡಿದರು.

ಕರ್ನಾಟಕ ಸರಕಾರದ ಈ ಪ್ರಸ್ತಾವನೆಯನ್ನು ಅಂಗೀಕರಿಸಿ ಬೆಂಬಲ ಬೆಲೆಯನ್ನು ಘೋಷಿಸುವ ಜವಾಬ್ದಾರಿ ಈಗ ಇರುವುದು ಮೋದಿ ನೇತೃತ್ವದ ಬಿಜೆಪಿಯ ಕೇಂದ್ರ ಸರ್ಕಾರಕ್ಕೆ. ಚೆಂಡು ಈಗ ಕೇಂದ್ರ ಸರ್ಕಾರದ ಅಂಗಳದಲ್ಲಿದೆಯೇ ಹೊರತು ರಾಜ್ಯ ಸರಕಾರದಿಂದ ಯಾವ ನಿರ್ಲಕ್ಷವೂ ಆಗಿಲ್ಲ. ಸಂಜೀವ ಮಠಂದೂರ್ರವರಿಗೆ ಈ ಹಂತದಲ್ಲಿ ಅಡಿಕೆಗೆ ಬೆಂಬಲ ಬೆಲೆ ಸಿಗಬೇಕೆಂಬ  ಅವರ ಮಾತಿನಲ್ಲಿ ಕಿಂಚಿತ್ತಾದರೂ ಸತ್ಯ ಇರುವುದಾದರೆ, ಅಡಿಕೆ ಬೆಳೆಗಾರರ ಬಗ್ಗೆ ನಿಜವಾಗಿಯೂ ಕಾಳಜಿ ಇರುವುದಾದರೆ ಅವರು ಒತ್ತಾಯ ಮಾಡಬೇಕಾಗಿರುವುದು ಕರ್ನಾಟಕ ಕಾಂಗ್ರೆಸ್ ಸರಕಾರವನ್ನಲ್ಲ,  ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಪ್ರಧಾನಿ ಮೋದಿ ಅವರ ಆಡಳಿತವನ್ನು. ಕಳ್ಳ ಸಾಗಾಟದ ಮೂಲಕ ದೇಶವನ್ನು ಪ್ರವೇಶಿಸಿ ಇಲ್ಲಿನ ಅಡಿಕೆ ಮಾರುಕಟ್ಟೆಯನ್ನು ಕೆಡಿಸುತ್ತಿರುವ ವಿದೇಶೀ ಅಡಿಕೆಯನ್ನು ದೇಶ ಪ್ರವೇಶಿಸದಂತೆ ತಡೆಯುವುದಕ್ಕೆ ಸಾದ್ಯವಾಗದ ಕೇಂದ್ರ ಸರಕಾರದ ವೈಫಲ್ಯಗಳನ್ನು ಮರೆಮಾಚಿ ಜನರ ಕಣ್ಣಿಗೆ ಮಣ್ಣೆರಚುವ ಉದ್ದೇಶದಿಂದ ಸಂಜೀವ ಮಠಂದೂರು ಈ ಪತ್ರಿಕಾಗೋಷ್ಠಿ ನಡೆಸಿದ್ದಾರೆ ಎಂದರು.

ಅಕ್ರಮ ಅಡಕೆ ಅಂದರೆ ಕಳ್ಳಸಾಗಾಣಿಕೆಯೇ!!:

ಅಡಿಕೆ ಮಾರುಕಟ್ಟೆ ಪುನಶ್ಚೇತನಕ್ಕೆ ಈಗ ಆಗಬೇಕಾಗಿರುವುದಾದರೂ ಏನು?: ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ಅವರಿಂದ ತೊಡಗಿ ಅಡಿಕೆಯ ಕಟ್ಟ ಕಡೆಯ ಕೃಷಿಕರವರೆಗೆ  ಭಾರತಕ್ಕೆ ಕಳ್ಳ ಸಾಗಾಣಿಕೆಯ ಮೂಲಕ ಅವ್ಯಾಹತವಾಗಿ  ಕಳಪೆ ಗುಣಮಟ್ಟದ ಅಡಿಕೆ ಪೂರೈಕೆ ಆಗುತ್ತಿದೆ. ಈ ಕಳಪೆ ಗುಣಮಟ್ಟದ ಅಡಿಕೆಯನ್ನು ನಮ್ಮ ರೈತರು ಬೆಳೆದ ಶ್ರೇಷ್ಠ ಗುಣಮಟ್ಟದ ಅಡಿಕೆಗೆ ಮಿಶ್ರಣ ಮಾಡಿ, ಅಡಿಕೆಯ ಮಾರುಕಟ್ಟೆಯನ್ನು ಹಾಳುಗೆಡಹಿ ಅಡಿಕೆಯ ಬೆಲೆಯ ಕುಸಿತಕ್ಕೆ ಕಾರಣವಾಗಿದೆ ಎಂದು ಸ್ಪಷ್ಟವಾಗಿ ಗೊತ್ತಿದೆ. ಆದ್ದರಿಂದ, ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರವು ತಕ್ಷಣ ದೇಶದ ಗಡಿಗಳನ್ನು ಭದ್ರಪಡಿಸಿ, ವಿದೇಶೀ ಅಡಿಕೆಯ ಅಕ್ರಮ ಕಳ್ಳಸಾಗಾಟವನ್ನು ತಡೆದು, ತನ್ಮೂಲಕ ಅಡಿಕೆಯ ಕಲಬೆರಕೆಯನ್ನು ನಿಲ್ಲಿಸಿ ಮಾರುಕಟ್ಟೆ ಚೇತರಿಕೆಗೆ ಕ್ರಮ ಕೈಗೊಳ್ಳುವುದೇ ಅಡಿಕೆ ಮಾರುಕಟ್ಟೆಯ ಪುನಶ್ಚೇತನಕ್ಕೆ ಅಗತ್ಯವಾಗಿ ಆಗಬೇಕಾಗಿರುವುದಾಗಿದೆ. ಇದನ್ನೇ ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿಯವರು ಹೇಳಿದ್ದಾರೆ. ಯಾವ ಕ್ಷಣದಲ್ಲಿ ಸಂಜೀವ ಮಠಂದೂರ್ರವರು ಅಡಿಕೆಗೆ ಬೆಂಬಲ ಬೆಲೆ ಘೋಷಿಸಬೇಕೆಂದು ಒತ್ತಾಯಿಸಿದರೋ ಅದರ ಮರು ದಿವಸವೇ ಕ್ಯಾಂಪ್ಕೋ ಅಧ್ಯಕ್ಷರು ಅಡಿಕೆ ಮಾರುಕಟ್ಟೆಯ ಪುನಶ್ಚೇತನಕ್ಕೆ ಕಳ್ಳ ಸಾಗಾಣಿಕೆಯನ್ನು  ತಡೆಯುವಬೇಕು ಎಂದು ಹೇಳಿಕೆ ನೀಡಿ ಸಂಜೀವ ಮಠಂದೂರ್ರವರ ವಾದವನ್ನು ಸುಳ್ಳು ಎಂದು ನಿರೂಪಿಸಿದ್ದಾರೆ ಎಂದರು.

ಅಡಿಕೆಯ ಕಳ್ಳ ಸಾಗಾಣಿಕೆಯಿಂದಾಗಿ  ಅಡಿಕೆಯ ಮಾರುಕಟ್ಟೆ ಕುಸಿದಿದೆ ಎಂದು ಕ್ಯಾಂಪ್ಕೋದ ಅಧ್ಯಕ್ಷರೇ ಮತ್ತೆ ಮತ್ತೆ ಹೇಳುತ್ತಿದ್ದರೂ  ದಕ್ಷಿಣ ಕನ್ನಡ ಜಿಲ್ಲೆಯ ಸಂಸತ್ ಸದಸ್ಯರಾದ ಮಾನ್ಯ ನಳಿನ್ ಕುಮಾರ್ ಕಟೀಲ್ ಆಗಲಿ ಕೇಂದ್ರದ ಕೃಷಿ ಸಚಿವರಾದ ಶೋಭಾ ಕರಂದ್ಲಾಜೆಯವರಾಗಲಿ ಈ ವಿಚಾರದಲ್ಲಿ ಯಾಕೆ ಬಾಯಿಯನ್ನೇ ಬಿಡುತ್ತಿಲ್ಲ?  ಅಡಿಕೆ ಕಳ್ಳ ಸಾಗಾಣಿಕೆಯ ಕಿಂಗ್ ಪಿನ್ನುಗಳು ಇವರ ಬಾಯಿಯನ್ನು ಮುಚ್ಚಿದ್ದಾರೆಯೇ?  ಊರಿಗೆಲ್ಲ ತಿಳಿದಿರುವಂತೆ ಬಿಜೆಪಿಯ ದೊಡ್ಡ ದೊಡ್ಡ ಕುಳಗಳು  ಅಡಿಕೆ ಮಾರುಕಟ್ಟೆಯಲ್ಲಿ ಕೈಯಾಡಿಸುತ್ತಿರುವುದೇ ಇದಕ್ಕೆ ಕಾರಣ. ಬಿಜೆಪಿಯ ಚುನಾವಣಾ ಚಾಣಕ್ಯರ ಸುಪುತ್ರ ನಡೆಸುತ್ತಿರುವ ಅಡಿಕೆ ವ್ಯವಹಾರಕ್ಕೆ ಅನುಕೂಲವಾಗಬೇಕೆಂಬ ದೃಷ್ಟಿಯಿಂದಲೇ ಈ ಅಡಿಕೆ ಕಳ್ಳ ಸಾಗಾಣಿಕೆಯನ್ನು ಕೇಂದ್ರ ಸರಕಾರ  ಕಂಡು ಕಾಣದಂತೆ ಕಣ್ಣು ಮುಚ್ಚಿ  ಕುಳಿತಿದೆ.  ಇದೇ ಕಾರಣಕ್ಕಾಗಿಯೇ ಕ್ಯಾಂಪ್ಕೋ ಅಧ್ಯಕ್ಷರಾದಿಯಾಗಿ ಬಿಜೆಪಿಯವರೆಲ್ಲರೂ  ಅಡಿಕೆ ಅಕ್ರಮವಾಗಿ ಆಮದಾಗುತ್ತಿದೆ ಎಂದು ಹೇಳುತ್ತಾರಷ್ಟೇ ಹೊರತು  ಅಂತರಾಷ್ಟ್ರೀಯ ಗಡಿಗಳಲ್ಲಿ ವಿದೇಶಿ ಅಡಿಕೆ ಕಳ್ಳ ಸಾಗಾಣಿಕೆಯಾಗಿ ಭಾರತಕ್ಕೆ  ಬಂದು ನಮ್ಮ ಮಾರುಕಟ್ಟೆಯನ್ನು ಹಾಳುಗೆಡಹುತ್ತಿದೆ ಎಂದು ಹೇಳುತ್ತಿಲ್ಲ . ಅಕ್ರಮ ಆಮದು ಎಂದರೆ ಕಳ್ಳ ಸಾಗಾಣಿಕೆಯಲ್ಲದೆ ಮತ್ತೇನು ? ಎಂದು ಪ್ರಶ್ನಿಸಿದರು.

ಎ.ಪಿ.ಎಂ.ಸಿ. ಸೆಸ್ : 

ಎಪಿಎಂಸಿಯಲ್ಲಿ ಸೆಸ್ ರೂಪದಲ್ಲಿ ಹಣ ಸಂಗ್ರಹವಾಗುತ್ತದೆ,  ಈ ಹಣ ರಾಜ್ಯ ಸರ್ಕಾರಕ್ಕೆ ಹೋಗುತ್ತದೆ,  ಈ ಹಣದಲ್ಲಿ ರಾಜ್ಯ ಸರಕಾರ ಬೆಂಬಲ ಬೆಲೆ ನೀಡಬೇಕು ಎಂದು ಹೇಳುತ್ತಿರುವ ಮಾನ್ಯ ಸಂಜೀವ ಮಠಂದೂರ್ರವರಿಗೆ  ಎಪಿಎಂಸಿಯ ಪರಿಸ್ಥಿತಿಯ ಬಗ್ಗೆ ಯಾವುದೇ ರೀತಿಯ ತಿಳುವಳಿಕೆ ಇಲ್ಲದಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಎಪಿಎಂಸಿಯಲ್ಲಿ ಸೆಸ್ ರೂಪದಲ್ಲಿ  ಸಂಗ್ರಹವಾಗುವ  ಹಣ ಇಂದು ರಾಜ್ಯ ಸರ್ಕಾರಕ್ಕೆ ಹೋಗುತ್ತಿಲ್ಲ.  ಸೆಸ್ ಹಣ ಒಂದಷ್ಟು ರಸ್ತೆಗಳನ್ನು ನಿರ್ಮಿಸುವುದಕ್ಕೆ ಎಪಿಎಂಸಿ ಸದಸ್ಯರಿಗೆ ನೀಡುವ ಅನುದಾನ, ರೈತರು ಅಪಘಾತದಿಂದ ಅಕಾಲಿಕ ಮರಣ ಹೊಂದಿದಾಗ ನೀಡುವ ಪರಿಹಾರ, ಇತ್ಯಾದಿ ಬಳಕೆಗೆ ಎಪಿಎಂಸಿ ಸೆಸ್ ಹಣ ಬಳಕೆಯಾಗುತ್ತದೆಯಷ್ಟೇ ಹೊರತು ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಆ ಹಣ ಹೋಗುತ್ತಿಲ್ಲ ಎನ್ನುವ  ಪ್ರಾಥಮಿಕ ಜ್ಞಾನವೂ ಮಾಜಿ ಶಾಸಕರಿಗೆ ಇಲ್ಲದಿರುವುದು ದುರ್ದೈವದ ಸಂಗತಿಯಾಗಿದೆ. ಕೇಂದ್ರ ಸರಕಾರ 3 ಕರಾಳ  ಕೃಷಿ ಕಾಯಿದೆಗಳನ್ನು ತಂದು ಎಪಿಎಂಸಿ ಕಾಯ್ದೆಯನ್ನ ತಿದ್ದುಪಡಿ ಮಾಡುವವರೆಗೆ ಎಪಿಎಂಸಿಗೆ ಸೆಸ್ ರೂಪದಲ್ಲಿ ಪ್ರತಿ ವರ್ಷ ಕೋಟ್ಯಂತರ ರೂಪಾಯಿ  ಆದಾಯ ಬರುತ್ತಿತ್ತು.  ಕೇಂದ್ರ ಸರ್ಕಾರವನ್ನು ಅನುಸರಿಸಿ ಕರ್ನಾಟಕ ರಾಜ್ಯವನ್ನು ಆಗ ಆಳುತ್ತಿದ್ದ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರಕಾರ  ಕರ್ನಾಟಕ ಎಪಿಎಂಸಿ ಕಾಯ್ದೆಗೂ ತಿದ್ದುಪಡಿ ತಂದಿದ್ದು,   ರೈತರ ಪ್ರತಿಭಟನೆಗಳ ನಂತರ ಕೇಂದ್ರ ಸರ್ಕಾರ ಈ ವಿವಾದಿತ ಎಪಿಎಂಸಿ ಮಸೂದೆಯನ್ನು ಹಿಂತೆಗೆದುಕೊಂಡರೂ ಬಿಜೆಪಿ ನೇತೃತ್ವದ ಕರ್ನಾಟಕ ರಾಜ್ಯ ಸರ್ಕಾರ ತಾನು ತಂದ ಎಪಿಎಂಸಿ ತಿದ್ದುಪಡಿ ಕಾಯ್ದೆಯನ್ನು ಹಿಂತೆಗೆದುಕೊಂಡಿರಲಿಲ್ಲ. ರೈತರು ತಮ್ಮ ಕೃಷಿ ಉತ್ಪನ್ನಗಳನ್ನು  ಎಪಿಎಂಸಿಯಲ್ಲಿಯೇ  ಮಾರಾಟ ಮಾಡಬೇಕೆಂದೇನಿಲ್ಲ , ಎಲ್ಲಿ ಬೇಕಿದ್ದರೂ ಮಾರಬಹುದು ಎಂಬ ಕಾನೂನು ಬಂದ ನಂತರ ನಗರ ಮತ್ತು ಹಳ್ಳಿಗಳ ಅಡಿಕೆ ವ್ಯಾಪಾರಿಗಳ ಮೇಲಿದ್ದ ಎಪಿಎಂಸಿ ಹಿಡಿತ ತಪ್ಪಿ ಹೋಗಿ ಏಪಿಎಂಸಿಗೆ ಬರುತ್ತಿದ್ದ ಆದಾಯ ಕುಸಿದು ಹೋಯಿತು. ಇದರ ಜೊತೆಗೆ 2020ರಲ್ಲಿ  ಬಿಜೆಪಿ ಸರಕಾರವು 1.5℅  ಇದ್ದ ಸೆಸ್ ಧರವನ್ನು 1℅ ಕ್ಕೆ , ತದನಂತರ 0.35ಕ್ಕೆ ಇಳಿಸಿ  ಎಪಿಎಂಸಿ ಆದಾಯವನ್ನು ಕನಿಷ್ಠ ಮಟ್ಟಕ್ಕೆ ತಂದು ಹಾಕಿತು. 2020ನೇ ಇಸವಿಯಲ್ಲಿ ಈ ಬಗ್ಗೆ ಮಾತನಾಡಿದ್ದ ಅಂದಿನ ಬಿಜೆಪಿ ಸರಕಾರದ ಕಾನೂನು ಸಚಿವರಾದ ಮಾಧುಸ್ವಾಮಿಯವರು ವ್ಯಾಪಾರಿಗಳ ಒತ್ತಡದಿಂದಾಗಿ ಈ ಸೆಸ್ ದರವನ್ನು ಇಳಿಕೆ ಮಾಡಲಾಗಿದೆ ಮತ್ತು ಇದರಿಂದಾಗಿ ಎಪಿಎಂಸಿಯನ್ನು ನಡೆಸುವುದೇ ನಮಗೆ ಕಷ್ಟವಾಗಿದೆ ಎಂಬ ಹೇಳಿಕೆಯನ್ನು ನೀಡಿದ್ದನ್ನು ಗಮನಿಸಬಹುದಾಗಿದೆ. ಹೀಗಿದ್ದರೂ ಸಂಜೀವ ಮಠಂದೂರ್ರವರು ಎಪಿಎಂಸಿ ಸೆಸ್ ಹಣದಲ್ಲಿ ಬೆಂಬಲ ಬೆಲೆ ನೀಡಿ ಎಂದು ಹೇಳಿರುವುದು ಹಾಸ್ಯಾಸ್ಪದವಾಗಿದೆ ಎಂದು ಲೇವಡಿ ಮಾಡಿದರು.

ಅಡಿಕೆ ಬೆಳೆಗಾರರ ಲಾಬಿಯಂತೆ :  

ಪತ್ರಿಕಾಗೋಷ್ಠಿಯಲ್ಲಿ ಸಂಜೀವ ಮಠಂದೂರ್ರವರು, ಅಡಿಕೆ ವ್ಯಾಪಾರಿಗಳ ಲಾಬಿ ಇದೆ, ಬೆಳೆಗಾರರ ಲಾಬಿ ಇಲ್ಲ ಎಂಬ ಮಾತನ್ನು ಹೇಳಿದ್ದಾರೆ.  ಈ ಮಾತನ್ನು ಹೇಳಲು ಅವರಿಗೆ ನಾಚಿಕೆ ಆಗಬೇಕು.  ವ್ಯಾಪಾರಿಗಳ ಲಾಭಿಯನ್ನು ವ್ಯಾಪಾರಿಗಳೇ ತಮ್ಮ ಹಣ ಬಲದಿಂದ ಮಾಡುತ್ತಾರೆ.  ಆದರೆ ಅಡಿಕೆ ಬೆಳೆಗಾರರ ಲಾಭಿಯನ್ನು ಮಾಡಬೇಕಾದವರು ಯಾರು?  ಅಡಿಕೆ ಬೆಳೆಗಾರರ ಲಾಬಿಯನ್ನು ಮಾಡಬೇಕಾದವರು ನಮ್ಮ ಜನಪ್ರತಿನಿಧಿಗಳು. ಅಡಿಕೆ ಬೆಳೆಗಾರರಿಗೆ ಸಮಸ್ಯೆ ಬಂದಾಗ, ಅಡಿಕೆ ಮಾರುಕಟ್ಟೆ ಕುಸಿದು ಹೋದಾಗ, ಸರಕಾರಗಳಿಗೆ ಒತ್ತಡವನ್ನು ತಂದು, ಬೆಳಗಾರರ ಹಿತರಕ್ಷಣೆಗೆ ಜನಪ್ರತಿನಿಧಿಗಳೇ ಪ್ರಯತ್ನಿಸಬೇಕು. ಇದೇ ಲಾಬಿ.  ಇಂದು ಅಡಿಕೆ ಬೆಳೆಗಾರರಿಗೆ ಲಾಬಿ ಇಲ್ಲ ಎಂದು ಹೇಳುತ್ತಿರುವ ಮಾನ್ಯ ಸಂಜೀವ ಮಠಂದೂರ್ರವರು  ತಾವು ಶಾಸಕರಾಗಿದ್ದ ಸಂದರ್ಭದಲ್ಲಿ ಅಡಿಕೆ ಬೆಳೆಗಾರರ ಪರವಾಗಿ ಯಾವುದೇ ಲಾಬಿಯನ್ನು ಮಾಡಿದವರಲ್ಲ.  ವಿಧಾನಸಭೆಯಲ್ಲಿ ಅಡಿಕೆ ಬೆಳೆಗಾರರ ಪರವಾಗಿ ಯಾವುದೇ ಒತ್ತಡವನ್ನು ಸರಕಾರದ ಮೇಲೆ ತಂದಿಲ್ಲ.  "ಅಡಿಕೆ ಒಂದು ಜಗಿದು ಉಗಿಯುವ ವಸ್ತು" ಎಂದು ಮತ್ತೆ ಮತ್ತೆ ಹೀಯಾಳಿಸಿದವರು ಮಾನ್ಯ ಸಂಜೀವ ಮಠಂದೂರ್ರವರು.  ಮೊನ್ನೆ ನಡೆದ ಪತ್ರಿಕಾಗೋಷ್ಠಿಯಲ್ಲೂ  ಪತ್ರಕರ್ತರ ತೀವ್ರ ಆಕ್ಷೇಪದ ಹೊರತಾಗಿಯೂ ಮಾನ್ಯ ಸಂಜೀವ ಮಠಂದೂರ್ರವರು  "ಅಡಿಕೆ ಒಂದು ಜಗಿದು ಉಗುಳುವ ವಸ್ತು" ಎಂದು ಮತ್ತೆ ಮತ್ತೆ ಪ್ರತಿಪಾದಿಸಿರುವುದು ಅತ್ಯಂತ ನಾಚಿಕೆಗೇಡಿನ ಸಂಗತಿಯಾಗಿದೆ ಎಂದರು.

ಅಡಿಕೆಯನ್ನು ಹೀಯಾಳಿಸಿದವರು ಅಡಿಕೆ ಬೆಳೆಗಾರರ ಪರವಾಗಿ ಇರುವುದಕ್ಕೆ ಸಾಧ್ಯವೇ?  ಕಳೆದ ವರ್ಷ ನಡೆದ ಕ್ಯಾಂಪ್ಕೋ  ಮಹಾಸಭೆಯಲ್ಲಿ ಮಾನ್ಯ ಸಂಜೀವ ಮಠಂದೂರ್ರವರು  ಎಲೆ ಚುಕ್ಕಿ ರೋಗ ಮತ್ತು  ಅಡಿಕೆಯ ಹಳದಿ ರೋಗಕ್ಕೆ  ಸಂಶೋಧನೆಗಳನ್ನು ನಡೆಸಬೇಕೆಂದು  ಒತ್ತಾಯಿಸಿದಾಗ ಸಭಾಧ್ಯಕ್ಷತೆಯನ್ನು ವಹಿಸಿದ್ದ ಕ್ಯಾಂಪ್ಕೋದ ಅಧ್ಯಕ್ಷರು  ನಾವು 3-4 ಬಾರಿ ಒತ್ತಾಯಿಸಿದರೂ ಅಡಿಕೆಯ ಬಗ್ಗೆ ವಿಧಾನಸಭೆಯಲ್ಲಿ ನೀವೆಷ್ಟು ಮಾತನಾಡಿದ್ದೀರಿ ಎಂದು ಛೇಡಿಸುವ ಮೂಲಕ  ಮಾನ್ಯ ಸಂಜೀವ ಮಠಂದೂರ್ರವರ ನಿಜ ಬಣ್ಣವನ್ನು ಸಾರ್ವಜನಿಕವಾಗಿ ಬಯಲುಗೊಳಿಸಿದ್ದರು. ಅಡಿಕೆಯನ್ನು ಜಗಿದು ಉಗಿಯುವ ವಸ್ತು ಎಂದು ಹೀಯಾಳಿಸಿ ಬೆಳೆಗಾರರ ಮನಸ್ಸನ್ನು ನೋಯಿಸಿದ ಕಾರಣಕ್ಕಾಗಿಯೇ ಅವರನ್ನು ಅವರ ಕಳೆದ ಚುನಾವಣೆಯಲ್ಲಿ ಪಕ್ಷ ಜಗಿದು ಉಗಿದಿದೆ. ಅಡಿಕೆ ಬೆಳೆಗಾರರ ಪರವಾದ ಲಾಭಿ ಮಾಡುವುದೆಂದರೆ  ಅಡಿಕೆ ಬೆಳೆಗಾರರ ಸಮಸ್ಯೆಗಳನ್ನು ಸಮರ್ಥವಾಗಿ ಸರಕಾರಗಳ ಮುಂದೆ ಇಡುವುದು. ವ್ಯಾಪಾರಿಗಳು ಹಣಬಲದಿಂದ ತಮ್ಮ ಲಾಬಿಯನ್ನು ನಡೆಸಿದರೆ ಜನಪ್ರತಿನಿಧಿಗಳು ಜನ ಬಲದಿಂದ ಬೆಳೆಗಾರರ ಲಾಬಿಯನ್ನು ನಡೆಸಬೇಕಾಗಿದೆ. ಈಗ ಅಡಿಕೆ ಬೆಳೆಗಾರರ ಪರವಾದ ಲಾಬಿ ಪುತ್ತೂರಿನಿಂದ  ಆರಂಭವಾಗಿದೆ. ಪುತ್ತೂರಿನ ಶಾಸಕರಾದ ಅಶೋಕ್ ಕುಮಾರ್ ರೈಯವರು ಅಡಿಕೆ ಬೆಳೆಗಾರರ ಪರವಾದ ಲಾಬಿಯ ನೇತೃತ್ವವನ್ನು ವಹಿಸಿದ್ದಾರೆ. ತಾವು ಎದುರಿಸಿದ ಮೊದಲನೆಯ ಅಧಿವೇಶನದಲ್ಲಿಯೇ ಅಡಿಕೆ ಹಳದಿ ರೋಗದ ಬಗ್ಗೆ ವಿಧಾನಸಭೆಯಲ್ಲಿ ಧ್ವನಿಯೆತ್ತಿದ ಮಾನ್ಯ ಶಾಸಕರು, ಇತ್ತೀಚೆಗೆ ಅಡಕೆಯ ಕಲಬೆರಕೆಯ ವಿಚಾರದಲ್ಲಿ ಧ್ವನಿ ಎತ್ತಿ ಕೇಂದ್ರ ಸರಕಾರಕ್ಕೆ ಪತ್ರವನ್ನು ಬರೆದು ಅಡಿಕೆಯ ಆಮದು ನಿಲ್ಲಿಸಬೇಕೆಂದು ಕೇಂದ್ರ ಸರಕಾರಕ್ಕೆ ಒತ್ತಡ ಹಾಕಿ ಅಡಿಕೆ ಕಳ್ಳಸಾಗಾಣಿಕೆಯ ವಿರುದ್ಧ ಮಾತನಾಡಿದ ಮೊದಲ ಮತ್ತು ಏಕೈಕ ಶಾಸಕರಾಗಿದ್ದಾರೆ.  ದ.ಕ. ಜಿಲ್ಲೆಯ ಅಡಿಕೆ ಬೆಳೆಗಾರರಿಗೆ ಅಕ್ರಮ ಸಕ್ರಮ ಯೋಜನೆಯಲ್ಲಿ ತೊಡಕಾಗಿರುವ ಕುಮ್ಕಿ ಭೂಮಿಯ ವಿಚಾರವನ್ನು ವಿಧಾನಸಭೆಯಲ್ಲಿ ಸಮರ್ಥವಾಗಿ ಮಂಡಿಸಿ ಕುಮ್ಕಿ ಭೂಮಿಯನ್ನು ಸಕ್ರಮಗೊಳಿಸಿ ರೈತರಿಗೆ ನೀಡಬೇಕೆಂದು ಸರಕಾರವನ್ನು ಒತ್ತಾಯಿಸಿದ್ದಾರೆ. ಮೊನ್ನೆ ನಡೆದ ಬಜೆಟ್ ಅಧಿವೇಶಕ್ಕೆ  ಪೂರ್ವಭಾವಿಯಾಗಿ,  ಸರಕಾರದ ಮೇಲೆ ಒತ್ತಡ ತಂದು,  ಬಜೆಟ್ ಭಾಷಣದಲ್ಲಿ ಅಡಿಕೆಯ ಬೆಂಬಲ ಬೆಲೆಯ ವಿಚಾರ ಪ್ರಸ್ತಾಪವಾಗುವುದಕ್ಕೆ, ಅಡಿಕೆಯ ಬೆಂಬಲ ಬೆಲೆಗಾಗಿ ಕೇಂದ್ರ ಸರಕಾರಕ್ಕೆ ಪ್ರಸ್ತಾಪನೆಯನ್ನು ಈಗಾಗಲೇ ಸಲ್ಲಿಸಲಿರುವುದಕ್ಕೆ, ಪುತ್ತೂರಿನ ಶಾಸಕ ಅಶೋಕ್ ಕುಮಾರ್ ರೈಯವರು ಮೂಲ ಕಾರಣಕರ್ತರಾಗಿದ್ದಾರೆ. ಸಂಜೀವ ಮಠಂದೂರ್ರವರು ಅಡಿಕೆ ಬೆಳೆಗಾರರ ಬಗ್ಗೆ ಮೊಸಳೆ ಕಣ್ಣೀರು ಸುರಿಸುವುದನ್ನು ತೊರೆದು ಇನ್ನಾದರೂ ಅಡಿಕೆ ಬೆಳೆಗಾರರ ಪರವಾಗಿ ಮಾತನಾಡಬೇಕು ಎಂದು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕಿಸಾನ್ ಘಟಕದ ಅಧ್ಯಕ್ಷ ಮುರಳೀಧರ್ ಶೆಟ್ಟಿ, ಎಪಿಎಂಸಿ ಸದಸ್ಯ ಶಕೂರ್ ಹಾಜಿ, ಎಪಿಎಂಸಿ ಮಾಜಿ ಸದಸ್ಯ ಶಶಿಕಿರಣ್ ರೈ ಉಪಸ್ಥಿತರಿದ್ದರು.

ರೈಲು ಡಿಕ್ಕಿ ಹೊಡೆದು ಕಾರ್ಮಿಕ ಹರಿಶ್ಚಂದ್ರ ಮೃತ್ಯು

Posted by Vidyamaana on 2024-02-05 12:35:09 |

Share: | | | | |


ರೈಲು ಡಿಕ್ಕಿ ಹೊಡೆದು ಕಾರ್ಮಿಕ ಹರಿಶ್ಚಂದ್ರ ಮೃತ್ಯು

ಬಂಟ್ವಾಳ : ರೈಲು ಡಿಕ್ಕಿಯಾಗಿ ಕೂಲಿ ಕಾರ್ಮಿಕನೋರ್ವ ಮೃತಪಟ್ಟ ಘಟನೆ ಬಿ.ಸಿ.ರೋಡು ಸಮೀಪದ ಮಾರ್ನಬೈಲು ಎಂಬಲ್ಲಿ ಸೋಮವಾರ ಮುಂಜಾನೆ ನಡೆದಿದೆ.


ಮೂಲತಃ ಮಡಂತ್ಯಾರು ಪಣಕಜೆ ನಿವಾಸಿ, ಪ್ರಸ್ತುತ ಸಜೀಪಮುನ್ನೂರು ಗ್ರಾ.ಪಂ.ವ್ಯಾಪ್ತಿಯ ಮಾರ್ನಬೈಲು ದಾಸರಗುಡ್ಡೆಯಲ್ಲಿ ವಾಸವಾಗಿರುವ ಹರಿಶ್ಚಂದ್ರ (37) ಮೃತಪಟ್ಟ ವ್ಯಕ್ತಿ.ಕೂಲಿ ಕಾರ್ಮಿಕರಾಗಿರುವ ಹರಿಶ್ಚಂದ್ರ ಇಂದು ಬೆಳಿಗ್ಗೆ ಮನೆಯಿಂದ ಕೆಲಸಕ್ಕೆಂದು ತೆರಳಿದ್ದು, ರೈಲ್ವೆ ಹಳಿಯನ್ನು ದಾಟುವ ಸಂದರ್ಭ ರೈಲು ಡಿಕ್ಕಿ ಹೊಡೆದು ಸ್ಥಳದಲ್ಲೇ ಮೃತಪಟ್ಟಿರಬೇಕೆಂದು ಸ್ಥಳೀಯರು ತಿಳಿಸಿದ್ದಾರೆ. ರೈಲ್ವೆ ಪೋಲೀಸ್ ಇಲಾಖೆಯ ಎ.ಎಸ್.ಐ.ಜಾನ್ ಕೊರಿಯ ಕೋಸ್ ಸ್ಥಳಕ್ಕೆ ಭೇಟಿ ನೀಡಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಬಂಟ್ವಾಳ ಠಾಣಾ ಸಹಾಯಕ ಉಪ ನಿರೀಕ್ಷಕ ದೇವಪ್ಪ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಅಂತಃಕರಣ ಶುದ್ದಿಯಾಗಿಟ್ಟುಕೊಳ್ಳುವ ಮೌಲ್ಯ ಅಡಗಿರುವ ಕೃತಿ; ಡಿ ಯದುಪತಿ ಗೌಡ

Posted by Vidyamaana on 2023-10-16 09:27:16 |

Share: | | | | |


ಅಂತಃಕರಣ  ಶುದ್ದಿಯಾಗಿಟ್ಟುಕೊಳ್ಳುವ ಮೌಲ್ಯ ಅಡಗಿರುವ ಕೃತಿ; ಡಿ ಯದುಪತಿ ಗೌಡ

ಬೆಳ್ತಂಗಡಿ; ಜಾಗತೀಕರಣ, ಉದಾರೀಕರಣ, ಆಧುನೀಕರಣ, ಸಂಸ್ಕೃತೀಕರಣ, ಮೊಬೈಲೀಕರಣ  ಇವೆಲ್ಲದರ ಮಧ್ಯೆ ನಮ್ಮ ಅಂತಃಕರಣ ಮೌಲ್ಯ ಹೇಗೆ ಶುದ್ದಿಯಾಗಿಟ್ಟುಕೊಳ್ಳುವುದು ಎಂಬುದರ ಕುರಿತಾಗಿ

ವಿದ್ಯಾರ್ಥಿಗಳು, ಪೋಷಕರು ಓದಬೇಕಾದ ಕೃತಿಯಾಗಿ ಮೌಲ್ಯ  ಹುಡುಕಾಟದಲ್ಲಿ ಕೃತಿ ಹೊರಬಂದಿದೆ ಎಂದು ಕಸಾಪ ಬೆಳ್ತಂಗಡಿ ಘಟಕದ ಅಧ್ಯಕ್ಷ ಡಿ‌ ಯದುಪತಿ ಗೌಡ ಹೇಳಿದರು.

ವಾಣಿ ಕಾಲೇಜಿನ ಆವರಣದಲ್ಲಿ ಅ.14 ರಂದು, ಮಾಮರ ಪ್ರಕಾಶನ ಮೈಸೂರು‌ ಅವರು ಹೊರ ತಂದಿರುವ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಯಾಕೂಬ್ ಎಸ್ ಕೊಯ್ಯೂರು ಅವರ ಬರಹಗಳ ಸಂಕಲ "ಮೌಲ್ಯಗಳ ಹುಡುಕಾಟದಲ್ಲಿ" ಕೃತಿ ಬಿಡುಗಡೆಗೊಳಿಸಿ ಅವರು ಮಾತನಾಡುತ್ತಿದ್ದರು. 


ಈ ಪುಸ್ತಕದಲ್ಲಿ 62 ಲೇಖನಗಳಿದ್ದು, ತನ್ನ ಶಿಕ್ಷಕ ವೃತ್ತಿಬದುಕಿನ ಅನುಭವ ಮತ್ತು ಬೇರೆ ಬೇರೆ ಮನಸ್ಥಿತಿಯ ವಿದ್ಯಾರ್ಥಿಗಳ ಒಡನಾಟದ ಅನುಭವದಿಂದ ಈ ಬರಹಗಳು ಅವರ ಮೂಲಕ ಹೊರ ಬಂದಿದೆ. ಸಾಮಾಜಿಕ ಮೌಲ್ಯ ಎಂದರೇನು ಎಂಬುದನ್ನು ಪ್ರಶ್ನಿಸುವ ದಿನಮಾನದಲ್ಲಿ ಶಿಕ್ಷಣ ಅಂದರೆ ಓದು ಮಾತ್ರ ಅಲ್ಲ. ಅದರ ಆಚೆಗೆ ಬದುಕು ಇದೆ. ಸಮಾಜದ ವ್ಯಕ್ತಿಗಳು ಮತ್ತು ವ್ಯವಸ್ಥೆಯೊಂದಿಗೆ ಹೊಂದಾಣಿಕೆ ಮಾಡಿಕೊಂಡುಹೋಗಬೇಕಾದ ಮೌಲ್ಯವನ್ನು ಈ ಬರಹಗಳು ಎಚ್ಚರಿಸುತ್ತವೆ. ವ್ಯಕ್ತಿ ವ್ಯಕ್ತಿ ಗಳ ನಡುವಿನ ಸಂಬಂಧ ಇಲ್ಲದ ಶಿಕ್ಷಣ ಮೌಲ್ಯವಿಲ್ಲದ್ದು. ಹಿಂದಿನ ಕಾಲದಲ್ಲಿ ಬಡತನದ ಮಧ್ಯೆಯೂ ಹಿರಿಯರ ಜೀವನದಲ್ಲಿ ನೈತಿಕತೆ, ಜೀವನ ಮೌಲ್ಯ ಉಳಿದುಕೊಂಡಿದ್ದರು ಎಂದವರು ವಿವರಿಸಿದರು.

ಮುಖ್ಯ ಅತಿಥಿಯಾಗಿದ್ದ ಬಂಟ್ವಾಳದ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ‌ದ ಅಧ್ಯಕ್ಷ ಡಾ. ತುಕಾರಾಮ ಪೂಜಾರಿ ಮಾತನಾಡಿ, ಮನುಷ್ಯನ ಮನಸ್ಸು ಮತ್ತು ಆಲೋಚನೆಗಳು ನಿರ್ಮಲವಾಗಿದ್ದರೆ ಬಾಹ್ಯವಾಗಿ ಮತ್ತು ಆಂತರಿಕವಾಗಿ ನಮ್ಮ ಯೌವ್ವನವನ್ನು ಕಾಪಾಡಿಕೊಳ್ಳಬಹುದು. ನಮ್ಮ ನಡೆ ನುಡಿಯಲ್ಲಿ ಯಾವುದಾದರೊಂದು ಅಧ್ಯಾಪಕನ ಪ್ರಭಾವ ಇದ್ದೇ ಇರುತ್ತದೆ. ಈಗಿನ ದಿನಮಾನಗಳಲ್ಲಿ ನಾವು ಹೋಗುವ ದಾರಿಯಲ್ಲಿ ಎಡವಿದ್ದೇವೆ ಎಂದೆನಿಸುತ್ತದೆ. ಆಧುನಿಕ ಶಿಕ್ಷಣದ ಶೈಲಿ ಬದಲಾದರೂ ಸ್ಥಿತಿ ಅದೇ ಎಂಬುದು ಮುಖ್ಯ. ಯಾಕೂಬ್ ಅವರ ಈ ಕೃತಿಯಲ್ಲಿ ಭಾವ ಕೇಂದ್ರಿತವಾಗಿ ವಿಚಾರವನ್ನು ಮಂಡಿಸುವ ಶೈಲಿಯ ಬರಹಗಳು ಅಡಗಿವೆ. ಇದು ಸಮಾಜಕ್ಕೆ ಪ್ರಯೋಜನಕಾರಿಯಾಗಲಿದೆ ಎಂದರು.

ಪುಸ್ತಕಕ್ಕೆ ಮುನ್ನುಡಿ‌ ಬರೆದ ಹಿರಿಯ ಸಾಹಿತಿ ಅರವಿಂದ ಚೊಕ್ಕಾಡಿ ಮಾತನಾಡಿ ಲೇಖಕ ಯಾವತ್ತೂ ತೀರ್ಪುಗಾರ ಅಲ್ಲ. ತನ್ನ ಒಳಶೋಧದ ಪರಿಣಾಮಗಳನ್ನು ಹೇಳುವವನು ಅಷ್ಟೇ. ಆತನ ಅನುಭವಗಳು ಸಹೃದಯನ ಓದಿನ‌ ಪರಿಣಾಮವಾಗಿ ಅವನ ಅನುಭವವಾಗಿ ಅವನು ಕಂಡುಕೊಳ್ಳುವ ಸತ್ಯವೇ ಅವರವರ ಮೌಲ್ಯವಾಗುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಲಯನ್ಸ್ ಕ್ಲಬ್ ಇಂಟರ್ನ್ಯಾಷನಲ್ ಬೆಳ್ತಂಗಡಿ ಘಟಕ್ ಅಧ್ಯಕ್ಷ ಉಮೇಶ್ ಶೆಟ್ಟಿ ಉಜಿರೆ ಅವರು ಮಾತನಾಡಿ, ಲಯನ್ಸ್ ಕ್ಲಬ್ ಸೇವಾ ಚಟುವಟಿಕೆಗೆ ಹೆಸರಾದ ಅಂತಾರಾಷ್ಟ್ರೀಯ ಸಂಸ್ಥೆ. ಇದೀಗ ಸಾಹಿತ್ಯಿಕ ಸೇವೆಗೂ ಮುಂದಡಿಇಟ್ಟಿದೆ. ಮೌಲ್ಯಗಳ ಬಗ್ಗೆ ಬರೆದ ಈ‌ಕೃತಿ ಹೊರತರಲು ವೇದಿಕೆ ಒದಗಿಸಿರುವುದು ನಮ್ಮ ಜವಾಬ್ದಾರಿ ಕೂಡ ಎಂದರು. 

ಲೇಖಕ ಯಾಕೂಬ್ ಎಸ್ ಕೊಯ್ಯೂರು ಅವರು ಪ್ರತಿಕ್ರಿಯಿಸಿ, ನನ್ನ ಅನುಭವ ಮತ್ತು ಆಲೋಚನೆಗಳಿಗೆ ಅಕ್ಷರ ರೂಪ ನೀಡಿ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸುತ್ತಿದ್ದೆ. ಜನರ ಪ್ರತಿಕ್ರಿಯೆ, ಹಿರಿಯರ ಸಲಹೆಯ ಮೂಲಕ ಅದಕ್ಕೆ ಈಗ ಪುಸ್ತಕದ ರೂಪ ಬಂದಿದೆ ಎಂದರು.


ಕಾರ್ಯಕ್ರಮ ಸಂಯೋಜಕ ಅಶ್ರಫ್ ಆಲಿಕುಂಞಿ ಮುಂಡಾಜೆ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು.

ಅಬ್ದುಲ್ ಖಾದರ್ ನಾವೂರು ಕಾರ್ಯಕ್ರಮ ನಿರೂಪಿಸಿದರು. ಅಝರ್ ವಂದಿಸಿದರು. ಸಹಸಂಯೋಜಕರಾದ ಹರೀಶ್‌ ಹೆಗ್ಡೆ, ಹರ್ಷದ್, ಹೆರಾಲ್ಡ್ ಪಿಂಟೋ, ಶಾಹುಲ್ ಹಮೀದ್ ಸಹಕರಿಸಿದರು. ಸಂಘಟಕರ ಕಡೆಯಿಂದ ಯಾಕೂಬ್ ಎಸ್ ಕೊಯ್ಯೂರು ಅವರನ್ನು ಗೌರವಿಸಲಾಯಿತು. ಸಮಾರಂಭದಲ್ಲಿ ವಿವಿಧ ಸಂಘ ಸಂಸ್ಥೆಗಳ ಆಯ್ದ ಪ್ರತನಿಧಿಗಳು ಭಾಗಿಯಾಗಿದ್ದರು.

ವಾಹನ ಸವಾರರೇ ಗಮನಿಸಿ : ನಾಳೆಯೊಳಗೆ HSRP ನಂಬರ್ ಪ್ಲೇಟ್ ಹಾಕಿಸದಿದ್ರೆ ದಂಡ ಬೀಳುತ್ತೆ ಹುಷಾರು

Posted by Vidyamaana on 2024-06-11 14:40:36 |

Share: | | | | |


ವಾಹನ ಸವಾರರೇ ಗಮನಿಸಿ : ನಾಳೆಯೊಳಗೆ HSRP ನಂಬರ್ ಪ್ಲೇಟ್ ಹಾಕಿಸದಿದ್ರೆ ದಂಡ ಬೀಳುತ್ತೆ ಹುಷಾರು

ಬೆಂಗಳೂರು : ಕರ್ನಾಟಕ ಸಾರಿಗೆ ಇಲಾಖೆಯು ರಾಜ್ಯದಲ್ಲಿ ಎಲ್ಲ ವಾಹನಗಳಿಗೂ ಹೈ ಸೆಕ್ಯುರಿಟಿ ರಿಜಿಸ್ಟ್ರೇಶನ್ ಪ್ಲೇಟ್‌ಗಳು (HSRP) ಅಳವಡಿಕೆಗೆ ಆದೇಶ ಹೊರಡಿಸಿದೆ. ಆದರೆ, ರಾಜ್ಯ ಸರ್ಕಾರ ಈಗಾಗಲೇ ಹಲವು ಬಾರಿ ಅವಧಿ ವಿಸ್ತರಣೆ ಮಾಡಿ ಜೂನ್.‌ 12ಕ್ಕೆ ಗಡುವು ವಿಸ್ತರಿಸಿದೆ

2019ರ ಏಪ್ರಿಲ್ 1ರ ಮೊದಲು ರಾಜ್ಯದಲ್ಲಿ ನೋಂದಣಿಯಾಗಿರುವ ಎಲ್ಲ ವಾಹನಗಳಿಗೆ ಎಚ್‌ಎಸ್‌ಆರ್ಪಿ ಅಳವಡಿಸುವುದನ್ನು ಕಡ್ಡಾಯಗೊಳಿಸಿ ಸಾರಿಗೆ ಇಲಾಖೆ ಕಳೆದ ವರ್ಷ ಆಗಸ್ಟ್ನಲ್ಲಿ ಅಧಿಸೂಚನೆ ಹೊರಡಿಸಿತ್ತು. ರಾಜ್ಯದಲ್ಲಿ ಸುಮಾರು ಎರಡು ಕೋಟಿ ವಾಹನಗಳಿಗೆ ಹೈ ಸೆಕ್ಯುರಿಟಿ ನಂಬರ್ ಪ್ಲೇಟ್ ಅಗತ್ಯವಿದೆ ಎಂದು ಸಾರಿಗೆ ಅಧಿಕಾರಿಗಳು ಅಂದಾಜಿಸಿದ್ದಾರೆ.

ರಾಜ್ಯ ಸಾರಿಗೆ ಇಲಾಖೆ ಜೂನ್‌ 12 ರವರೆಗೆ ಎಚ್ ಎಸ್ ಆರ್ ಪಿ ಪಡೆಯಲು ನೋಂದಣಿ ಮಾಡಿಕೊಳ್ಳಲು ಅವಕಾಸ ನೀಡಿದೆ. ಅದಾದನಂತರ ಜೂನ್.‌13 ರಿಂದ ಪೊಲೀಸ್ ಇಲಾಖೆ ಜೊತೆಗೂಡಿ ಎಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಇಲ್ಲದ ವಾಹನಗಳಿಗೆ ದಂಡ ವಿಧಿಸಲು ನಿರ್ಧರಿಸಲಾಗಿದೆ. ಅವಧಿಯೊಳಗೆ ಎಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಅಳವಡಿಸದಿದ್ದರೆ 500 ರೂ.ನಿಂದ 1,000 ರೂ.ವರೆಗೆ ದಂಡ ವಿಧಿಸುವುದಾಗಿ ಸಾರಿಗೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.



Leave a Comment: