ಕಾರು ಡಿಕ್ಕಿ: ಯುಕೆಜಿ ವಿದ್ಯಾರ್ಥಿ ಮಹಮ್ಮದ್ ಆದಿಲ್ ಮೃತ್ಯು

ಸುದ್ದಿಗಳು News

Posted by vidyamaana on 2023-09-23 20:22:34 | Last Updated by Vidyamaana on 2023-09-23 20:22:34

Share: | | | | |


ಕಾರು ಡಿಕ್ಕಿ: ಯುಕೆಜಿ ವಿದ್ಯಾರ್ಥಿ ಮಹಮ್ಮದ್ ಆದಿಲ್ ಮೃತ್ಯು

ಪುತ್ತೂರು: ಮಧ್ಯಾಹ್ನ ಕೆಯ್ಯೂರಿನಲ್ಲಿ ನಡೆದ ಕಾರು ಅಪಘಾತದಲ್ಲಿ ಕೆಯ್ಯೂರು ಕರ್ನಾಟಕ ಪಬ್ಲಿಕ್ ಸ್ಕೂಲ್ ನ ಯುಕೆಜಿ ವಿದ್ಯಾರ್ಥಿ,ನುಸ್ರತುಲ್ ಇಸ್ಲಾಂ ಮದ್ರಸದ 1ನೇ ತರಗತಿ ವಿದ್ಯಾರ್ಥಿ ಮೃತಪಟ್ಟಿರುವುದಾಗಿ ವರದಿಯಾಗಿದೆ.

ಮೃತನನ್ನು 5 ವರ್ಷ ಪ್ರಾಯದ ಮುಹಮ್ಮದ್ ಆದಿಲ್ ಎಂದು ಗುರುತಿಸಲಾಗಿದೆ‌. ಕೆಯ್ಯೂರು ನಿವಾಸಿ ಹಾರೀಸ್ ದಾರಿಮಿ ಅವರ ಪುತ್ರ.

ಪುತ್ತೂರು ಕಡೆ ಬರುತ್ತಿದ್ದ ಈಕೋ ಕಾರು ಬಾಲಕನಿಗೆ ಢಿಕ್ಕಿ ಹೊಡೆದಿದ್ದು, ಬಾಲಕ ಗಂಭೀರ ಗಾಯಗೊಂಡಿದ್ದ. ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ಸಂಜೆ ವೇಳೆ ಮೃತಪಟ್ಟ ಬಗ್ಗೆ ವರದಿಯಾಗಿದೆ.

 Share: | | | | |


ಮಂಗಳೂರು ಜೆರೋಸಾ ಶಾಲೆಗೆ ಕಾಂಗ್ರೆಸ್ ನಿಯೋಗ ಭೇಟಿ: ಸತ್ಯಶೋಧನಾ ತನಿಖೆಗೆ ಆಗ್ರಹ

Posted by Vidyamaana on 2024-02-13 17:43:25 |

Share: | | | | |


ಮಂಗಳೂರು  ಜೆರೋಸಾ ಶಾಲೆಗೆ ಕಾಂಗ್ರೆಸ್ ನಿಯೋಗ ಭೇಟಿ: ಸತ್ಯಶೋಧನಾ ತನಿಖೆಗೆ ಆಗ್ರಹ

ಮಂಗಳೂರು: ನಗರದ ಜೆಪ್ಪುವಿನ ಸಂತ ಜೆರೋಸಾ ಶಾಲೆಯಲ್ಲಿ ಶಿಕ್ಷಕಿಯೊಬ್ಬರು ಹಿಂದೂ ಧರ್ಮಕ್ಕೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆಂಬ ಆರೋಪಕ್ಕೆ ಸಂಬಂಧಿಸಿ ಮಾಜಿ ಸಚಿವರಾದ ಬಿ.ರಮಾನಾಥ ರೈ ಹಾಗೂ ವಿನಯ ಕುಮಾರ್ ಸೊರಕೆ ಅವರ ನೇತೃತ್ವದ ಜಿಲ್ಲಾ ಕಾಂಗ್ರೆಸ್ ನಿಯೋಗ ಇಂದು ಶಾಲೆಗೆ ಭೇಟಿ ನೀಡಿದೆ.



ಸಂಪೂರ್ಣ ಘಟನೆ ಹಾಗೂ ಬಳಿಕ ನಡೆದ ವಿದ್ಯಮಾನಗಳ ಕುರಿತಂತೆ ಶಿಕ್ಷಣ ಇಲಾಖೆಯ ನೇತೃತ್ವದಲ್ಲಿ ಸತ್ಯಶೋಧನಾ ತನಿಖೆಯಾಗಬೇಕು ಎಂದು ಒತ್ತಾಯಿಸಿದೆ.



ಬಳಿಕ ಮಾತನಾಡಿದ ಮಾಜಿ ಶಾಸಕ ರಮಾನಾಥ ರೈ, ಜೆರೋಸಾ ವಿದ್ಯಾಸಂಸ್ಥೆ ಘಟನೆ ಬಗ್ಗೆ ಆರೋಪ ದೊಡ್ಡ ಪ್ರಚಾರ ಆಗಿದೆ. ಅದರ ಸತ್ಯಾಸತ್ಯತೆ ವಿಮರ್ಶೆ ನಾವು ಮಾಡಬೇಕಿದೆ. ಸಮಾಜದಲ್ಲಿ ಸಾಮಾಜಿಕ ಸಾಮರಸ್ಯ ಉಳಿಯಬೇಕು ಅನ್ನೋದು ನಮ್ಮ ಆಶಯ ಎಂದರು.

ಕೆಲವರು ಪ್ರಚೋದನೆ ಮಾಡಬಹುದು, ಆದರೆ ನಾವು ಆ ಕೂಟದಲ್ಲಿ ಇಲ್ಲ. ಇವತ್ತು ಸಂಸ್ಥೆಯ ಮುಖ್ಯಸ್ಥರ ಭೇಟಿಯಾಗಿ ಮಾತುಕತೆ ಮಾಡಿದ್ದೇವೆ. ಸರ್ಕಾರ ಇದರ ಬಗ್ಗೆ ಒಂದು ಸತ್ಯಶೋಧನ ಸಮಿತಿ ಮಾಡಬೇಕು. ಇದು ಘರ್ಷಣೆಗೆ ಕಾರಣ ಆಗಬಾರದು, ಅಹಿತಕರ ಘಟನೆ ಆಗಬಾರದು ಎಂದರು.

ಫಿಲೋಮಿನಾ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಎಲ್ಯಾಸ್ ಪಿಂಟೋರವರಿಗೆ ಡಾಕ್ಟರೇಟ್ ಪದವಿ

Posted by Vidyamaana on 2024-02-20 07:33:57 |

Share: | | | | |


ಫಿಲೋಮಿನಾ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಎಲ್ಯಾಸ್ ಪಿಂಟೋರವರಿಗೆ ಡಾಕ್ಟರೇಟ್ ಪದವಿ

ಪುತ್ತೂರು: ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಸಂತ ಫಿಲೋಮಿನಾ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಎಲ್ಯಾಸ್ ಪಿಂಟೋರವರಿಗೆ ರಾಜಸ್ಥಾನ ಜೆ.ಜೆ.ಟಿ ವಿಶ್ವವಿದ್ಯಾನಿಲಯವು ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.

ದೈಹಿಕ ಶಿಕ್ಷಣ ನಿರ್ದೇಶಕ ಎಲ್ಯಾಸ್ ಪಿಂಟೊರವರು ಡಾ.ಬಾಪು ನರಸಿಂಗ ಚೌಗುಲೆರವರ ಮಾರ್ಗದರ್ಶನದಲ್ಲಿ ದ.ಕ ಜಿಲ್ಲೆಯ ಜನರ ಮನರಂಜನಾ ಚಟುವಟಿಕೆಗಳು ಮತ್ತು ಕೋವಿಡ್ 19 ಸಾಂಕ್ರಾಮಿಕ ಸಮಯದಲ್ಲಿ ಅವರ ಬಿಡುವಿನ ವೇಳೆಯ ಚಟುವಟಿಕೆಗಳು (A Study on the Recreational Activities of People In Dakshina Kann

non

a District and their leisure time activities during Covid-19 Pandamic)"ಕುರಿತಾಗಿ ಮಂಡಿಸಿದ ಮಹಾ ಅಧ್ಯಯನ ಪ್ರಬಂಧಕ್ಕೆ ಡಾಕ್ಟರೇಟ್ ಪದವಿ ಲಭಿಸಿದೆ. ಎಲ್ಯಾಸ್ ಪಿಂಟೋರವರು ಅಣ್ಣಾಮಲೈ ವಿಶ್ವವಿದ್ಯಾಲಯದಲ್ಲಿ ಎಂ.ಫಿಲ್ ಪದವಿಯನ್ನು, ಮೈಸೂರು ವಿಶ್ವವಿದ್ಯಾಲಯದಲ್ಲಿ ದ್ವಿತೀಯ ರ್ಯಾಂಕಿನೊಂದಿಗೆ ಎಂ.ಪಿ.ಎಡ್ ಪದವಿಯನ್ನು ಗಳಿಸಿದ್ದು ಮಾತ್ರವಲ್ಲ ಪ್ರತಿಷ್ಠಿತ ಕೆ.ಎಸ್.ಇ.ಟಿ ಪರೀಕ್ಷೆಯನ್ನು ಪೂರ್ಣಗೊಳಿಸಿರುತ್ತಾರೆ. ಎಲ್ಯಾಸ್ ಪಿಂಟೋರವರು ಯೋಗದ ಆಯಾಮಗಳು ಮತ್ತು ಆರೋಗ್ಯಕರ ಜೀವನ ಎಂಬ ಬಗ್ಗೆ ಪುಸ್ತಕವನ್ನು ಬರೆದಿದ್ದಾರೆ ಜೊತೆಗೆ ಖಿನ್ನತೆಗೆ ಯೋಗ ಹಾಗೂ ಮಾನಸಿಕ ಆರೋಗ್ಯಕ್ಕಾಗಿ ಯೋಗ ಎಂಬ ಪುಸ್ತಕವೂ ಪ್ರಕಟವಾಗಿದೆ. ಇದರೊಂದಿಗೆ 3 ಅಂತರಾಷ್ಟ್ರೀಯ ಸೆಮಿನಾರ್ ಗಳು 4 ರಾಷ್ಟ್ರೀಯ ವಿಚಾರ ಸಂಕಿರಣಗಳು, ಹಲವಾರು ಕಾರ್ಯಾಗಾರಗಳಲ್ಲಿ ಭಾಗವಹಿಸಿರುತ್ತಾರೆ.


ಎಲ್ಯಾಸ್ ಪಿಂಟೋರವರು ಪೂರ್ವ ಮತ್ತು ಪಾಶ್ಚಿಮಾತ್ಯ ನೃತ್ಯ ಸ್ಪರ್ಧೆಯಲ್ಲಿ 5 ಬಾರಿ ರಾಜ್ಯ ಮಟ್ಟದ ವಿಜೇತರಾಗಿ, ಜಿಲ್ಲಾ ಮಟ್ಟದ ಫಿಲ್ಮ ಡ್ಯಾನ್ಸ್ ಸ್ಪರ್ಧೆಯಲ್ಲಿ 10 ಬಾರಿ ವಿಜೇತರಾಗಿ, ಜಿಲ್ಲೆಯಲ್ಲಿ 1990 ರಿಂದ 2000ರ ವರಗೆ ನಂಬರ್‌ವನ್ ಡ್ಯಾನ್ಸ್ ಗ್ರೂಪ್ ಪಿಂಟೋ ಬ್ರದರ್ಸ್ ಇದರ ಸಂಯೋಜಕರಾಗಿ ಮನ ಸೆಳೆದಿದ್ದರು.

ಬೆಂಕಿ ಆರಿಸಲು ಬಂದ ಅಗ್ನಿಶಾಮಕ ವಾಹನದಲ್ಲೇ ನೀರಿಲ್ಲ! ಬಿದ್ದು..ಬಿದ್ದು ನಕ್ಕ ಜನ..!

Posted by Vidyamaana on 2024-05-19 09:34:54 |

Share: | | | | |


ಬೆಂಕಿ ಆರಿಸಲು ಬಂದ ಅಗ್ನಿಶಾಮಕ ವಾಹನದಲ್ಲೇ ನೀರಿಲ್ಲ! ಬಿದ್ದು..ಬಿದ್ದು ನಕ್ಕ ಜನ..!

ಉಡುಪಿ, ಮೇ 18: ಬೆಂಕಿ ಆರಿಸಲು ಬಂದ ಅಗ್ನಿಶಾಮಕ ದಳದ ವಾಹನದಲ್ಲಿ ನೀರಿಲ್ಲದೇ ಕಟ್ಟಡ ಸುಟ್ಟು ಹೋದ ಘಟನೆ ಆದಿ ಉಡುಪಿ ಬಳಿ ನಡೆದಿದೆ. ಈ ವಿಚಾರ ವೈರಲ್‌ ಆಗಿದ್ದು, ಘಟನೆ ಬಗ್ಗೆ ತಿಳಿದ ಕೆಲವರು ಅಗ್ನಿಶಾಮಕ ದಳ ಸಿಬ್ಬಂದಿ ನಿರ್ಲಕ್ಷ್ಯದ ಬಗ್ಗೆ ಆಕ್ರೋಶಗೊಂಡಿದ್ದರೆ, ಇನ್ನೂ ಕೆಲವರು ಬಿದ್ದು ಬಿದ್ದು ನಕ್ಕಿದ್ದಾರೆ.

ಆದಿ ಉಡುಪಿ ಬಳಿ ಬಳಿಯ ಹೋಟೆಲ್‌ವೊಂದರಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಕೂಡಲೇ ಸ್ಥಳೀಯರು ಬ್ರಹ್ಮಗಿರಿಯಲ್ಲಿರುವ ಅಗ್ನಿಶಾಮಕ ದಳ ಸಿಬ್ಬಂದಿಗೆ ಮಾಹಿತಿ ನೀಡಿದರು. ಅರ್ಧಗಂಟೆಯ ಬಳಿಕ ಘಟನಾ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳ ವಾಹನ ಮತ್ತು ಸಿಬ್ಬಂದಿ ಕಾರ್ಯಾಚರಣೆಗೆ ತಯಾರಿ ನಡೆಸುವಾಗ ವಾಹನದಲ್ಲಿ ನೀರಿಲ್ಲ ಎನ್ನುವುದು ತಿಳಿದು ಬಂದಿದೆ

ಕರ್ನಾಟಕದಲ್ಲಿ ಒಂದು ಕುಟುಂಬದ ಕೈಯಲ್ಲಿ ಸಿಕ್ಕಾಕೊಂಡಿರುವ ಪಕ್ಷವನ್ನು ರಕ್ಷಿಸಬೇಕಿದೆ : ಬಂಡಾಯವೆದ್ದ KS ಈಶ್ವರಪ್ಪ

Posted by Vidyamaana on 2024-03-13 22:45:58 |

Share: | | | | |


ಕರ್ನಾಟಕದಲ್ಲಿ ಒಂದು ಕುಟುಂಬದ ಕೈಯಲ್ಲಿ ಸಿಕ್ಕಾಕೊಂಡಿರುವ ಪಕ್ಷವನ್ನು ರಕ್ಷಿಸಬೇಕಿದೆ : ಬಂಡಾಯವೆದ್ದ KS ಈಶ್ವರಪ್ಪ

ಶಿವಮೊಗ್ಗ : ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಇದೀಗ ಬಿಜೆಪಿ ಎರಡನೇ ಪಟ್ಟಿ ಬಿಡುಗಡೆಗೊಳಿಸಿದ್ದು ಸದ್ಯ ಬಿಜೆಪಿಯ ಹಲವು ಹಾಲಿ ಸಂಸದರಿಗೆ ಟಿಕೆಟ್ ಕೈತಪ್ಪಿದೆ. ಅದರಂತೆ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಅವರ ಮಗ ಕಾಂತೇಶ್ ಗೆ ಕೂಡ ಈ ಬಾರಿ ಟಿಕೆಟ್ ದೊರಕಿಲ್ಲ.ಇದರಿಂದ ಸಿಡಿದೆದ್ದ ಕೆಎಸ್ ಈಶ್ವರಪ್ಪ ಕರ್ನಾಟಕದಲ್ಲಿ ಕುಟುಂಬದ ಕೈಯಲ್ಲಿ ಪಕ್ಷವೊಂದು ಸಿಕ್ಕಾಕೊಂಡಿದೆ.ಅದನ್ನು ರಕ್ಷಿಸಬೇಕಿದೆ ಎಂದು ಪರೋಕ್ಷವಾಗಿ ಬಿಎಸ್ ಯಡಿಯೂರಪ್ಪ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ ಒಂದು ಕುಟುಂಬದ ಕೈಯಲ್ಲಿ ಪಕ್ಷ ಸಿಕ್ಕಾಕೊಂಡಿದೆ.ಕುಟುಂಬದ ಕೈಯಿಂದ ಪಕ್ಷ ರಕ್ಷಿಸಬೇಕೆಂಬ ಒತ್ತಾಯವಿದೆ ಎಂದು ಶಿವಮೊಗ್ಗದಲ್ಲಿ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಹೇಳಿಕೆ ನೀಡಿದರು.ಕರ್ನಾಟಕದಲ್ಲಿ ಬೇರೆ ಯಾರು ಲಿಂಗಾಯತ ನಾಯಕರೆಲ್ವಾ? ಎಂದು ಕಿಡಿ ಕಾರಿದ್ದಾರೆ.ಬಿಎಸ್ ಯಡಿಯೂರಪ್ಪ ಪಟ್ಟು ಹಿಡಿದು ಶೋಭಾ ಕರಂದ್ಲಾಜೆ ಹಾಗೂ ಬಸವರಾಜ ಬೊಮ್ಮಾಯಿಗೆ ಪಟ್ಟು ಹಿಡಿದು ಟಿಕೆಟ್ ಕೊಡಿಸಿದ್ದಾರೆ.ನನ್ನ ಮಗ ಕೆಇ ಕಾಂತೇಶ್ ಗೆ ಯಾಕೆ ಟಿಕೆಟ್ ಕೊಡಿಸಲಿಲ್ಲ? ನಾನು 40 ವರ್ಷ ನಿಷ್ಠೆಯಿಂದ ಪಕ್ಷಕ್ಕಾಗಿ ಕೆಲಸ ಮಾಡಿದ್ದೇನೆ ಸಿಟಿ ರವಿ, ನಳಿನ ಕುಮಾರ್ ಕಟೀಲ್, ಪ್ರತಾಪ್ ಸಿಂಹ, ನನಗೆ ಸೇರಿದಂತೆ ನನ್ನ ಪುತ್ರನಿಗೆ ಅನ್ಯಾಯವಾಗಿದೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗಬೇಕೆಂದು ಅಪೇಕ್ಷೆ ಪಡುವವರಲ್ಲಿ ನಾನು ಒಬ್ಬ. ನೀವು ಮತ್ತೆ ನರೇಂದ್ರ ಮೋದಿಯವರಿಗೆ ಬೆಂಬಲ ಕೊಡಿ ನಾವು ಚುನಾವಣೆಗೆ ನಿಲ್ಲಿಸಿ ಲೋಕಸಭೆ ಚುನಾವಣೆಯಲ್ಲಿ ಗೆಲ್ಲಿಸುತ್ತೇವೆ ಎಂದು ಬೆಂಬಲಿಗರು ತಿಳಿಸಿದ್ದಾರೆ. 15 ರಂದು ಶುಕ್ರವಾರ ಸಂಜೆ 5:00 ಗಂಟೆಗೆ ಶಿವಮೊಗ್ಗದ ಬಣಜಾರ ಭವನದಲ್ಲಿ ಎಲ್ಲಾ ಸಮಾಜದ ಪ್ರಮುಖರು ಹಿರಿಯರು ಹಿತೈಷಿಗಳು ಈ ಸಭೆಯಲ್ಲಿ ಸೇರಲಿದ್ದಾರೆ. ಅವರೆಲ್ಲರ ಸಲಹೆ ಮೇಲೆ ನಾನು ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದು ತಿಳಿಸಿದರು.

ಪೆನ್‌ಡ್ರೈವ್ ಪ್ರಕರಣ: ಕೊನೆಗೂ ಸಂಸದ ಪ್ರಜ್ವಲ್ ರೇವಣ್ಣ ಪ್ರತ್ಯಕ್ಷ- ಮೇ 31ಕ್ಕೆ ಭಾರತಕ್ಕೆ ಬರ್ತೀನಿ: ವಿದೇಶದಿಂದಲೇ ಹೇಳಿಕೆ ಕೊಟ್ಟ ಪ್ರಜ್ವಲ್

Posted by Vidyamaana on 2024-05-27 16:35:55 |

Share: | | | | |


ಪೆನ್‌ಡ್ರೈವ್ ಪ್ರಕರಣ: ಕೊನೆಗೂ ಸಂಸದ ಪ್ರಜ್ವಲ್ ರೇವಣ್ಣ ಪ್ರತ್ಯಕ್ಷ- ಮೇ 31ಕ್ಕೆ ಭಾರತಕ್ಕೆ ಬರ್ತೀನಿ: ವಿದೇಶದಿಂದಲೇ ಹೇಳಿಕೆ ಕೊಟ್ಟ ಪ್ರಜ್ವಲ್

ಬೆಂಗಳೂರು : ಹಾಸನದ ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣ ದೇಶದೆಲ್ಲೆಡೆ ಕಿಡಿ ಹೊತ್ತಿದ ನಂತರ ಒಂದು ತಿಂಗಳ ಬಳಿಕ ಪ್ರತ್ಯಕ್ಷರಾಗಿದ್ದಾರೆ. ಈ ಕುರಿತು ವಿಡಿಯೋ ರಿಲೀಸ್ ಮಾಡಿರುವ ಪ್ರಜ್ವಲ್, ಮೇ 31ಕ್ಕೆ ಎಸ್‌ಐಟಿ ತನಿಖೆಗೆ ಬರುವುದಾಗಿ ಖುದ್ದು ಹೇಳಿದ್ದಾರೆ.ಇನ್ನು ಪ್ರಕರಣ ಸಂಬಂಧ ಮಾತನಾಡುತ್ತಾ ರಾಜ್ಯದ ಹಾಗೂ ಜೆಡಿಎಸ್ ಕಾರ್ಯಕರ್ತರ ಕ್ಷೆಮೆಯಾಚಿಸಿದ್ದಾರೆ. ನನ್ನ ರಾಜಕೀಯ ಬೆಳವಣಿಗೆ ಸಹಿಸಲಾಗದೇ ಕೆಲ ಶಕ್ತಿಗಳು ನನ್ನ ವಿರುದ್ಧ ಈ ರೀತಿ ಪಿತೂರಿ ಮಾಡಿದ್ದಾರೆ. ಹೀಗಾಗಿ ಎಲ್ಲರ ಕ್ಷಮೆ ಕೇಳುವೆ ಎಂದಿದ್ದಾರೆ.

ಯುಕೋ ಬ್ಯಾಂಕಿನಲ್ಲಿ 820 ಕೋಟಿ ಅಕ್ರಮ ವರ್ಗಾವಣೆ

Posted by Vidyamaana on 2023-12-06 12:13:46 |

Share: | | | | |


ಯುಕೋ ಬ್ಯಾಂಕಿನಲ್ಲಿ 820 ಕೋಟಿ ಅಕ್ರಮ ವರ್ಗಾವಣೆ

ಮಂಗಳೂರು: ದೇಶದ ಬ್ಯಾಂಕ್ ಗಳಲ್ಲಿ ಒಂದಾದ ಯುಕೊ ಬ್ಯಾಂಕ್ 41 ಸಾವಿರಕ್ಕೂ ಅಧಿಕ ಖಾತೆದಾರರ ಖಾತೆಗೆ ಸುಮಾರು 820 ಕೋಟಿ ರೂಪಾಯಿ ತಾಂತ್ರಿಕ ದೋಷದಿಂದ ಜಮೆಯಾಗಿದೆ ಎಂದು ಬ್ಯಾಂಕ್ ತಿಳಿಸಿದ್ದು, ಈ ಸಂಬಂಧ ಸಿಬಿಐ ಎಫ್ಐಆರ್ ದಾಖಲಿಸಿದ್ದು, ಮಂಗಳೂರು ಸೇರಿದಂತೆ 13 ಸ್ಥಳಗಳಲ್ಲಿ ಶೋಧ ನಡೆಸಿದೆ.

ಈ ಕುರಿತು ಯುಕೊ ಬ್ಯಾಂಕ್, ಸಂಶಯಾಸ್ಪದ ಐಎಂಪಿಎಸ್ ವ್ಯವಹಾರಗಳಿಗೆ ಸಂಬಂಧಿಸಿ ತನ್ನೊಂದಿಗೆ ಕಾರ್ಯ ನಿರ್ವಹಿಸುತ್ತಿದ್ದ ಇಬ್ಬರು ಎಂಜಿನಿಯರ್ ಹಾಗೂ ಇತರ ಕೆಲ ಅಪರಿಚಿತರ ವಿರುದ್ಧ ದೂರು ನೀಡಿದೆ. ಈ ದೂರಿನ ಆಧಾರದಲ್ಲಿ ಎಫ್ಐಆರ್ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ನ. 10 ಹಾಗೂ 13ರ ಮಧ್ಯೆ 820 ಕೋಟಿ ರೂ. ಮೊತ್ತವನ್ನು ಏಳು ಖಾಸಗಿ ಬ್ಯಾಂಕ್‌ಗಳ 14,000 ಖಾತೆದಾರರಿಂದ ಐಎಂಪಿಎಸ್‌ ಆಂತರಿಕ ವಹಿವಾಟುಗಳ ಮೂಲಕ ಯುಕೋ ಬ್ಯಾಂಕ್‌ನ 41,000 ಖಾತೆದಾರರಿಗೆ ವರ್ಗಾಯಿಸಲಾಗಿದೆ ಎಂದು ಆರೋಪಿಸಲಾಗಿದೆ.


ಹುಡುಕಾಟದ ಸಮಯದಲ್ಲಿ, ಮೊಬೈಲ್‌ ಫೋನ್‌ಗಳು, ಲ್ಯಾಪ್‌ಟಾಪ್‌ಗ್ಳು, ಕಂಪ್ಯೂಟರ್‌ ಸಿಸ್ಟಮ್‌ಗಳು, ಇಮೇಲ್‌ ಆಕ್ರೈವ್‌ಗಳು ಮತ್ತು ಡೆಬಿಟ್‌/ಕ್ರೆಡಿಟ್‌ ಕಾರ್ಡ್‌ಗಳು ಸೇರಿದಂತೆ ಎಲೆಕ್ಟ್ರಾನಿಕ್‌ ಪುರಾವೆಗಳನ್ನು ಪಡೆಯಲಾಗಿದೆ


ಅಚಾನಕ್‌ ಆಗಿ ಖಾತೆಗೆ ಹಣ ಬಿದ್ದ ಕೂಡಲೇ ಕೆಲವರು ವಿತ್‌ಡ್ರಾ ಕೂಡ ಮಾಡಿಕೊಂಡಿದ್ದಾರೆ. ಎಲ್ಲ ಆಯಾಮಗಳಲ್ಲಿ ತನಿಖೆ ನಡೆಯುತ್ತಿದೆ ಎಂದು ಸಿಬಿಐ ತಿಳಿಸಿದೆ.



Leave a Comment: