ಬಂಟ್ವಾಳ : ವಗ್ಗ ಬಳಿ ಅಂಬುಲೆನ್ಸ್ ನಿಯಂತ್ರಣ ತಪ್ಪಿ ಪಲ್ಟಿ

ಸುದ್ದಿಗಳು News

Posted by vidyamaana on 2023-08-18 08:29:00 |

Share: | | | | |


ಬಂಟ್ವಾಳ : ವಗ್ಗ ಬಳಿ ಅಂಬುಲೆನ್ಸ್  ನಿಯಂತ್ರಣ ತಪ್ಪಿ ಪಲ್ಟಿ

ಬೆಳ್ತಂಗಡಿ: ರೋಗಿಯೊಬ್ಬರನ್ನು  ಕೊಂಡುಹೋಗುತ್ತಿರುವ ವೇಳೆ ಟುಫಾನ್ ಅಂಬುಲೆನ್ಸ್ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಚಾಲಕ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಘಟನೆ ವಗ್ಗ ಬಳಿ ಆಗಸ್ಟ್ 18 ರಂದು ನಡೆದಿದೆ.



ಬೆಳ್ತಂಗಡಿಯಿಂದ ಮಂಗಳೂರಿಗೆ ರೋಗಿಯೊಬ್ಬರನ್ನು ಕೊಂಡೊಯ್ಯುತ್ತಿರುವ ವೇಳೆ ಬಂಟ್ವಾಳದ ವಗ್ಗ ಬಳಿ ಅಂಬುಲೆನ್ಸ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಈ ವೇಳೆ ಚಾಲಕ ಮಡಂತ್ಯಾರ್ ಮಾಲಾಡಿ ನಿವಾಸಿ ಶಬೀರ್ ಎಂಬವರು ಗಂಭೀರ ಗಾಯಗೊಂಡಿದ್ದು ತಕ್ಷಣ ಅವರನ್ನು ತುಂಬೆ ಖಾಸಗಿ ಆಸ್ಪತ್ರೆಗೆ ಕೊಂಡು ಹೋದರೂ ಅಲ್ಲಿ ಅವರು ಚಿಕಿತ್ಸೆಗೆ ಸ್ಪಂದಿಸದೇ  ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

 Share: | | | | |


ಅಮಿತ್‌ ಶಾ ಭೇಟಿಯಾದ ಹೆಚ್‌ಡಿಕೆ, ಮಂಜುನಾಥ್

Posted by Vidyamaana on 2024-03-17 13:57:09 |

Share: | | | | |


ಅಮಿತ್‌ ಶಾ ಭೇಟಿಯಾದ ಹೆಚ್‌ಡಿಕೆ, ಮಂಜುನಾಥ್

ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್‌ ಶಾ (Amit Shah) ಅವರನ್ನು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ (HD Kumaraswamy), ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಮೈತ್ರಿಕೂಟದ ಅಭ್ಯರ್ಥಿ ಡಾ.ಸಿ.ಎನ್.ಮಂಜುನಾಥ್ (CN Manjunath) ಭೇಟಿಯಾಗಿ ಮಾತುಕತೆ ನಡೆಸಿದರು.ಲೋಕ ಸಭಾ ಚುನಾವಣೆಗೆ ಇನ್ನೇನೂ ಕೆಲವೇ ದಿನಗಳು ಬಾಕಿಯಿದೆ. ಈ ಬೆನ್ನಲ್ಲೇ ಹೆಚ್ ಡಿ ಕುಮಾರಸ್ವಾಮಿ ಅವರು ಇಂದು ದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದರು. ಈ ವೇಳೆ ಕೆಲಕಾಲ ಮಾತುಕತೆ ನಡೆಸಿದರು.


ಈ ವೇಳೆ ರಾಜ್ಯ ಯುವ ಜನತಾದಳ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಮೈತ್ರಿಕೂಟದ ಅಭ್ಯರ್ಥಿ ಡಾ.ಸಿ.ಎನ್.ಮಂಜುನಾಥ್, ಅನಸೂಯ ಮಂಜುನಾಥ್ ಇದ್ದರು.

ಸ್ನಾನ ಮಾಡುತ್ತಿದ್ದ ಮಹಿಳೆಯ ವೀಡಿಯೊ ಚಿತ್ರೀಕರಣ ಪ್ರಕರಣ: ಸುಮಂತ್ ಪೂಜಾರಿಗೆ ನ್ಯಾಯಾಂಗ ಬಂಧನ

Posted by Vidyamaana on 2023-08-05 10:51:31 |

Share: | | | | |


ಸ್ನಾನ ಮಾಡುತ್ತಿದ್ದ ಮಹಿಳೆಯ ವೀಡಿಯೊ ಚಿತ್ರೀಕರಣ ಪ್ರಕರಣ: ಸುಮಂತ್ ಪೂಜಾರಿಗೆ ನ್ಯಾಯಾಂಗ ಬಂಧನ

ಮಂಗಳೂರು: ಮಹಿಳೆಯೊಬ್ಬರು ಸ್ನಾನ ಮಾಡುವಾಗ ವೀಡಿಯೊ ಚಿತ್ರೀಕರಣ ಮಾಡುತ್ತಿದ್ದವ ನನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆಯೊಂದು ಬುಧವಾರ ನಡೆದಿದ್ದು, ಸುಮಂತ್ ಪೂಜಾರಿಗೆ ನ್ಯಾಯಾಂಗ ಬಂಧನವಾಗಿದೆ ಎಂದು ತಿಳಿದು ಬಂದಿದೆ.

ಈ ಸಂಬಂಧ ಮಾಹಿತಿ ನೀಡಿರುವ ಮಂಗಳೂರು ನಗರ ಪೊಲೀಸ್ ಆಯುಕ್ತ, ಘಟನೆಗೆ ಸಂಬಂಧಿಸಿ ಪ್ರಜ್ವಲ್ ಎಂಬವರು ಮುಲ್ಕಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಸುಮಂತ್ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ. ನ್ಯಾಯಾಲಯವು ಸುಮಂತ್ ಗೆ ನ್ಯಾಯಾಂಗ ಬಂಧನ ವಿಧಿಸಿದೆ. ಮೊಬೈಲ್ ಫೋನ್ ನ್ನು ಎಫ್ಎಸ್ಎಲ್ ತನಿಖೆಗೆ ಕಳುಹಿಸಲಾಗಿದ್ದು, ವರದಿಯ ಬಳಿಕ ಹೆಚ್ಚಿನ ಮಾಹಿತಿ ನೀಡಲಾಗುವುದು ಎಂದು ತಿಳಿಸಿದ್ದಾರೆ

ಪುತ್ತೂರು : ಅಪ್ರಾಪ್ತ ಬಾಲಕಿಯ ಮೇಲೆ ಕಿರುಕುಳ ಆರೋಪ -ಕಡಬ ಮೂಲದ ಶಾಕಿರ್ ಪೊಲೀಸ್ ವಶಕ್ಕೆ

Posted by Vidyamaana on 2024-01-28 05:12:54 |

Share: | | | | |


ಪುತ್ತೂರು : ಅಪ್ರಾಪ್ತ  ಬಾಲಕಿಯ ಮೇಲೆ ಕಿರುಕುಳ ಆರೋಪ -ಕಡಬ ಮೂಲದ ಶಾಕಿರ್ ಪೊಲೀಸ್ ವಶಕ್ಕೆ

ಪುತ್ತೂರು:  ಯುವಕನೊಬ್ಬ ಅಪ್ರಾಪ್ತ ಬಾಲಕಿಗೆ ಕಿರುಕುಳ ನೀಡಿದ ಘಟನೆ ಪುತ್ತೂರು ನಗರದಲ್ಲಿ ಜ 27ರ ತಡ ರಾತ್ರಿ ನಡೆದಿದೆ. ಕೃತ್ಯ ಎಸಗಿದ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ಕಡಬ ಮೂಲದ ಶಾಕೀರ್ ವಶದಲ್ಲಿರುವ ವ್ಯಕ್ತಿ. ಪುತ್ತೂರು ಮೂಲದ ಅಪ್ರಾಪ್ತ ಬಾಲಕಿ, ಪುತ್ತೂರು  ದಾರಿ ಮಧ್ಯೆ ಆರೊಪಿ ದೌರ್ಜನ್ಯ ಎಸಗಿದ್ದಾರೆಂದು ಆರೋಪಿಸಲಾಗಿದೆ.ಆರೋಪಿಯನ್ನು ತಮ್ಮವಶಕ್ಕೆ ನೀಡಬೇಕೆಂದು ತಂಡವೊಂದು ಠಾಣೆಯ ಮುಂದೆ ಜಮಾಯಿಸಿತ್ತು. ಉದ್ರಿಕ್ತರನ್ನು ಪುತ್ತಿಲ ಪರಿವಾರ ಸಂಸ್ಥಾಪಕ ಅರುಣ್‌ ಕುಮಾರ ಪುತ್ತಿಲ ಸಮಾಧಾನಗೊಳಿಸಿದರು. ಆರೊಪಿಯ ವಿರುದ್ದ ಪೊಕ್ಕೋ ಪ್ರಕರಣ ದಾಖಲಿಸಲಾಗಿದೆ.

ನವದೆಹಲಿ : ಕೆಂಪು ಕೋಟೆ ಯಲ್ಲಿ ಪ್ರಧಾನಿ ಮೋದಿ ಮಾಡಿದ ಘೋಷಣೆ ಕುರಿತು ಯೋಜನೆ ಅನುಷ್ಠಾನ ಪರಾಮರ್ಶೆ ಸಭೆ

Posted by Vidyamaana on 2023-10-08 08:49:37 |

Share: | | | | |


ನವದೆಹಲಿ : ಕೆಂಪು ಕೋಟೆ ಯಲ್ಲಿ  ಪ್ರಧಾನಿ ಮೋದಿ ಮಾಡಿದ ಘೋಷಣೆ ಕುರಿತು ಯೋಜನೆ ಅನುಷ್ಠಾನ ಪರಾಮರ್ಶೆ ಸಭೆ

ನವದೆಹಲಿ:ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಇಂದು ಮಹತ್ವದ ಪರಾಮರ್ಶೆ ಸಭೆ ನಡೆದಿದೆ. ಸ್ವಾತಂತ್ರ್ಯ ದಿನಾಚರಣೆಗೆ ಕೆಂಪುಕೋಟೆಯಲ್ಲಿ ಪ್ರಧಾನಿ ಮೋದಿ ಮಾಡಿದ ಘೋಷಣೆಗಳು ಹಾಗೂ ಯೋಜನೆ ಅನುಷ್ಠಾನ ಕುರಿತು ಪರಾಮರ್ಶೆ ಸಭೆ ನಡೆಸಲಾಗಿದೆ. ಪ್ರಮುಖವಾಗಿ ವಸತಿ ಮತ್ತು ಇಂಧನ ಸೌಲಭ್ಯಗಳ ಒದಗಿಸುವ ಯೋಜನೆ ಕುರಿತು ಚರ್ಚಿಸಲಾಗಿದೆ.ಇದೇ ವೇಳೆ ಬಡ ಹಾಗೂ ಮಧ್ಯಮ ವರ್ಗದ ಮನೆಗಳಿಗೆ ಸೋಲಾರ್ ಒದಗಿಸುವ ಯೋಜನೆ ಕುರಿತು ಪರಾಮರ್ಶೆ ನಡೆಸಿದ್ದಾರೆ. 

ಅಸಿಡಿಟಿಯ ಎದೆ ಉರಿಯನ್ನು ಮತ್ತು ಎದೆ ನೋವಿನ ಉರಿಯನ್ನು ಐಡೆಂಟಿಫೈ ಮಾಡೋದು ತುಂಬಾ ಸುಲಭ:ಡಾ ಜೆ.ಸಿ.ಅಡಿಗ

ಸ್ವಾತಂತ್ರ್ಯ ದಿನಾಚರಣೆಯಂದು ಕೆಂಪು ಕೋಟೆ ಮೇಲೆ ಧ್ವಜಾರೋಹಣ ನೆರವೇರಿಸಿದ್ದ ಪ್ರಧಾನಿ ಮೋದಿ ದೇಶವನ್ನುದ್ಧೇಶಿ ಭಾಷಣ ಮಾಡಿದ್ದರು. ಈ ವೇಳೆ ಕೆಲ ಘೋಷಣೆಗಳನ್ನು ಮಾಡಿದ್ದರು. ಮಧ್ಯಮ ವರ್ಗದ ಕುಟುಂಬಗಳಿಗೆ ಮನೆ ಒದಿಗಿಸುವ ಕುರಿತು ಘೋಷಿಸಿದ್ದರು. ಇದೀಗ ಮಧ್ಯಮ ವರ್ಗದ ಕುಟುಂಬಗಳಿಗೆ ಮನೆ ಕನಸು ನನಸಾಗಿಸಲು ಮೋದಿ ಯೋಜನೆಗಳ ಪರಾಮರ್ಶೆ ನಡೆಸಿದ್ದಾರೆ.ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳಿಗೆ ಸೋಲಾರ್ ಸೌಲಭ್ಯ ಯೋಜನೆಯನ್ನು ಮೋದಿ ಘೋಷಿಸಿದ್ದರು. ಈ ಕುರಿತು ಮೋದಿ ಚರ್ಚಿಸಿದ್ದಾರೆ. ಯೋಜನೆ ಪ್ರತಿಯೊಬ್ಬ ಫಲಾನುಭವಿಗೆ ಯಾವುದೇ ಸಮಸ್ಯೆಗಳಿಲ್ಲದೆ ತಲುಪಬೇಕು. ಸರಳ ಹಾಗೂ ಸುಲಭವಾಗಿ ಸೌಲಭ್ಯವನ್ನು ಅರ್ಹ ಫಲಾನುಭವಿಗಳು ಪಡೆಯುವಂತಾಗಬೇಕು ಎಂದು ಮೋದಿ ಸೂಚಿಸಿದ್ದಾರೆ

ಮಂಗಳೂರು : ಮನೆ ಬಾಗಿಲು ಒಡೆದು ಚಿನ್ನಾಭರಣ ಕಳವು ಪ್ರಕರಣ

Posted by Vidyamaana on 2023-09-05 21:16:18 |

Share: | | | | |


ಮಂಗಳೂರು : ಮನೆ ಬಾಗಿಲು ಒಡೆದು ಚಿನ್ನಾಭರಣ ಕಳವು ಪ್ರಕರಣ

ಮಂಗಳೂರು: ನಾಲ್ಕು ದಿನಗಳ ಹಿಂದೆ ಬಜ್ಪೆಯಲ್ಲಿ ಮನೆ ಬಾಗಿಲು ಒಡೆದು ಚಿನ್ನಾಭರಣ ಕಳವು ಮಾಡಿದ್ದ ಪ್ರಕರಣದಲ್ಲಿ ಆರೋಪಿಯನ್ನು ಬಜ್ಪೆ ಪೊಲೀಸರು ಬಂಧಿಸಿದ್ದಾರೆ. ತಾರಿಕಂಬ್ಳ ನಿವಾಸಿ ವಿನ್ಸೆಂಟ್ ಡಿಸೋಜ (34) ಬಂಧಿತ ಆರೋಪಿ.


ಸೆ.1ರಂದು ಬಜಪೆ ಗ್ರಾಮದ ಪೊರ್ಕೋಡಿ ದೇವಸ್ಥಾನದ ರಸ್ತೆಯ ಕರೋಡಿ ಎಂಬಲ್ಲಿ ಮನೆಯ ಬೆಡ್ ರೂಮಿನಲ್ಲಿದ್ದ ಕಬ್ಬಿಣದ ಕಪಾಟಿನ ಲಾಕರ್ ಮುರಿದು 5 ಲಕ್ಷ ಮೌಲ್ಯದ ಚಿನ್ನಾಭರಣ ಕಳವುಗೈದ ಬಗ್ಗೆ ಬಜಪೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪ್ರಕರಣದ ತನಿಖೆ ನಡೆಸಿದ ಬಜಪೆ ಪೊಲೀಸ್ ನಿರೀಕ್ಷಕ ಪ್ರಕಾಶ್ ನೇತೃತ್ವದ ತಂಡ ಗುಮಾನಿಯ ಮೇರೆಗೆ ಆರೋಪಿ ವಿನ್ಸೆಂಟ್ ಡಿಸೋಜಾನನ್ನ ಬಜ್ಪೆಯ ಕಿನ್ನಿಪದವು ಚೆಕ್ ಪೋಸ್ಟ್ ಬಳಿ ವಶಕ್ಕೆ ಪಡೆದಿತ್ತು. 


ವಿಚಾರಣೆ ವೇಳೆ ಆರೋಪಿ ತಪ್ಪು ಒಪ್ಪಿಕೊಂಡಿದ್ದು ಸುಮಾರು 5 ಲಕ್ಷ ರೂ. ಮೌಲ್ಯದ ಒಟ್ಟು 80 ಗ್ರಾಂ ತೂಕದ ಚಿನ್ನಾಭರಣಗಳನ್ನು ಪೊಲೀಸರು ವಶಪಡಿಸಿದ್ದಾರೆ. ಬಜ್ಪೆ ಪಿಎಸ್ಐ ಗುರಪ್ಪ ಕಾಂತಿ, ಪಿಎಸ್‌ಐ ರೇವಣ ಸಿದ್ದಪ್ಪ, ಪಿಎಸ್ಐ ಕುಮಾರೇಶನ್, ಪಿಎಸ್‌ಐ ಶ್ರೀಮತಿ ಲತಾ, ಎಎಸ್‌ಐ ರಾಮ ಪೂಜಾರಿ ಮೇರೆಮಜಲು, ರಶೀದ ಶೇಖ್, ಸುಜನ್, ರೋಹಿತ, ದುರ್ಗಾಪ್ರಸಾದ್ ಶೆಟ್ಟಿ, ಸಂತೋಷ, ಬಸವರಾಜ್ ಪಾಟೀಲ್, ಕೆಂಚನ ಗೌಡ ಮತ್ತು ಇತರ ಸಿಬ್ಬಂದಿ ಪತ್ತೆ ಕಾರ್ಯದಲ್ಲಿ ಭಾಗಿಯಾಗಿದ್ದರು

ಮೈಸೂರು ದಸರಾದಲ್ಲಿ 14 ಬಾರಿ ಅಂಬಾರಿ ಹೊತ್ತಿದ್ದ ಬಲರಾಮ ಇನ್ನಿಲ್ಲ

Posted by Vidyamaana on 2023-05-07 15:50:02 |

Share: | | | | |


ಮೈಸೂರು ದಸರಾದಲ್ಲಿ 14 ಬಾರಿ ಅಂಬಾರಿ ಹೊತ್ತಿದ್ದ ಬಲರಾಮ ಇನ್ನಿಲ್ಲ

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸಾರದಲ್ಲಿ 14 ಬಾರಿ ಅಂಬಾರಿ ಹೊತ್ತಿದ್ದ ಆನೆ ಬಲರಾಮ (67) ಮೃತಪಟ್ಟಿದೆ. ಅನಾರೋಗ್ಯದಿಂದ ಬಲರಾಮ ಸಾವನ್ನಪ್ಪಿದೆ.

ಕೆಲ ದಿನಗಳಿಂದ ನಾಗರಹೊಳೆ ಉದ್ಯಾನದಲ್ಲಿನ ಹುಣಸೂರು ರೇಂಜ್ ವ್ಯಾಪ್ತಿಯಲ್ಲಿನ ಭೀಮನಕಟ್ಟೆ ಆನೆ ಶಿಬಿರದಲ್ಲಿದ್ದಂತ ಬಲರಾಮ ಆನೆಯು ಅನಾರೋಗ್ಯಕ್ಕೆ ತುತ್ತಾಗಿತ್ತು. ಆನೆಯ ಬಾಯಿಯಲ್ಲಿ ಹುಣ್ಣಾಗಿ ಆಹಾರ ಸೇವಿಸಲು ಕಷ್ಟಪಡುತ್ತಿತ್ತು.ಆನೆಗೆ ಆಹಾರ ಸೇವಿಸಲು, ನೀರು ಕುಡಿಯಲು ಆಗದ ಕಾರಣದಿಂದಾಗಿ ಮತ್ತಷ್ಟು ಕುಗ್ಗಿ ಹೋಗಿತ್ತು. ಸ್ಥಳದಲ್ಲಿಯೇ ಪಶುವೈದ್ಯರು ಠಿಕಾಣಿ ಹೂಡಿ ಚಿಕಿತ್ಸೆ ಕೊಟ್ಟಿದ್ದರೂ, ಇಂದು ಚಿಕಿತ್ಸೆ ಫಲಿಸದೇ ಬಲರಾಮ ಕೊನೆ ಉಸಿರು ಚೆಲ್ಲಿದೆ.



Leave a Comment: