ನಕಲಿ ಚಿನ್ನ ದ ಆಸೆಗೆ ತುಮಕೂರಿನಲ್ಲಿ ಬಲಿಯಾದರೇ ಬೆಳ್ತಂಗಡಿಯ ಮೂವರು?

ಸುದ್ದಿಗಳು News

Posted by vidyamaana on 2024-03-23 10:38:46 |

Share: | | | | |


ನಕಲಿ ಚಿನ್ನ ದ ಆಸೆಗೆ ತುಮಕೂರಿನಲ್ಲಿ ಬಲಿಯಾದರೇ ಬೆಳ್ತಂಗಡಿಯ ಮೂವರು?

ಬೆಳ್ತಂಗಡಿ : ತುಮಕೂರಿನಲ್ಲಿ ಕಾರಿಗೆ ಬೆಂಕಿ ಹಚ್ಚಿ ಕೆರೆಗೆ ತಳ್ಳಿದ ಪ್ರಕರಣದಲ್ಲಿ ಮೂವರು ಸಾವನ್ನಪ್ಪಿದ ಸಂಬಂಧಪಟ್ಟಂತೆ ಆರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ಪ್ರಕರಣದ‌ ಪ್ರಮುಖ ರೂವಾರಿ ತುಮಕೂರಿನ ಸ್ವಾಮಿ ಮತ್ತು ಐದು ಜನರನ್ನು ಕೋರಾ ಪೊಲೀಸರು ಮಾ.22 ರಂದು ರಾತ್ರಿ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ತುಮಕೂರಿಗೆ ಕಳೆದ ಹನ್ನೊಂದು ದಿನದ ಹಿಂದೆ ವ್ಯವಹಾರ ಸಂಬಂಧ ಮದಡ್ಕದ ರಫೀಕ್ ಎಂಬವರ ಮಾಲೀಕತ್ವದ ಎಸ್ ಪ್ರೆಸ್ ಕಾರಿನಲ್ಲಿ ಬೆಳ್ತಂಗಡಿ ತಾಲೂಕಿನ ನಡ ಗ್ರಾಮದ ಟಿ.ಬಿ.ಕ್ರಾಸ್ ನಿವಾಸಿ ಆಟೋ ಚಾಲಕ ಸಾಹುಲ್ ಹಮೀದ್(45) , ಕುವೆಟ್ಟು ಗ್ರಾಮದ ಮದಡ್ಕ ನಿವಾಸಿ ಇಸಾಕ್(56) , ಶಿರ್ಲಾಲು ಗ್ರಾಮದ ಸಿದ್ದಿಕ್(34) ಮೂವರು ಬಾಡಿಗೆ ಮಾಡಿಕೊಂಡು ಹೋಗಿದ್ದರು ಎಂದು ಗುರುತಿಸಿದ್ದಾರೆ.

ಇನ್ನು ಮೂರು ಜನ ಮೃತರೆಲ್ಲಾ ನಕಲಿ ಚಿನ‌್ನದ ದಂಧೆಯ ಆಸೆಗೆ ಬಲಿಯಾಗಿದ್ದಾರೆ ಅನ್ನೋದು ಪ್ರಾಥಮಿಕ ವಿಚಾರಣೆ ವೇಳೆ ಗೊತ್ತಾಗಿದೆ. ನಮ್ಮ ಜಾಗದಲ್ಲಿ ಕೃಷಿ ಮಾಡುವಾಗ ಚಿನ್ನದ ಹಂಡೆ ಸಿಕ್ಕಿದೆ ಕಡಿಮೆ ಚಿನ್ನವನ್ನು ಬೆಲೆಗೆ ನೀಡುತ್ತೇವೆ ಎಂದು ಸುಳ್ಳು ಹೇಳಿ ಮೂವರನ್ನು ಕರೆಸಿ ಹಣ ದೋಚುವ ಪ್ಲ್ಯಾನ್ ಮಾಡಿ ಕರೆಸಿಕೊಂಡು ನಂತರ ಕೈಕಾಲು ಕಟ್ಟಿ ಹಾಕಿ ಕಾರಿಗೆ ಬೆಂಕಿ ಹಚ್ಚಿ ಕೊಲೆ ಮಾಡಲಾಗಿದೆ ಎನ್ನಲಾಗಿದೆ.

ಪ್ರಕರಣದ ಪ್ರಮುಖ ರೂವಾರಿ ತುಮಕೂರಿನ ಸ್ವಾಮಿ ಮತ್ತು ಇತರ ಐದು ಜನ ಸೇರಿ ಒಟ್ಟು ಆರು ಜನರನ್ನು ವಶಕ್ಕೆ ಪಡೆದಿರುವ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. 


ಕೋರಾ ಪೊಲೀಸ್ ಠಾಣೆಯಲ್ಲಿ ಮಾ.22 ರಂದು ಸುಮೊಟೋ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದು. ಇನ್ನು ಮೂವರ ಶವ ಸಂಪೂರ್ಣವಾಗಿ ಸುಟ್ಟಿರುವ ಕಾರಣ ಗುರುತು ಪತ್ತೆಹಚ್ಚಲು ಡಿಎನ್ಎ ಪರೀಕ್ಷೆ ಬಳಿಕ ಮನೆಮಂದಿಗೆ ಶವ ಬಿಟ್ಟು ಕೊಡಲಿದ್ದಾರೆ. ಡಿಎನ್ಎ ವರದಿ ಬರಲು ಸುಮಾರು ಒಂದು ವಾರ ಬೇಕಾಗುತ್ತದೆ ಎಂದು ಪೊಲೀಸರು ಮನೆಯವರಿಗೆ ತಿಳಸಿದ್ದಾರೆ.

 Share: | | | | |


ನಾಳೆ (ಜು.26) ಪುತ್ತೂರು ಸಹಿತ - ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಿಗೆ - ರಜೆ ಘೋಷಣೆ!!!

Posted by Vidyamaana on 2023-07-25 13:41:53 |

Share: | | | | |


ನಾಳೆ (ಜು.26) ಪುತ್ತೂರು ಸಹಿತ - ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಿಗೆ - ರಜೆ ಘೋಷಣೆ!!!

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿರಂತರವಾಗಿ ಮಳೆಯಾಗುತ್ತಿದ್ದು ಹೆಚ್ಚು ಮಳೆಯಾಗುತ್ತಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಜುಲೈ 26 ರಂದು ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆ, ಪದವಿಪೂರ್ವ ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಮುತ್ತೈ ಮುಗಿಲನ್ ಆದೇಶಿಸಿದ್ದಾರೆ.

ಮಾ.23-24 : ಕೆಮ್ಮಿಂಜೆ ಶ್ರೀ ರಾಮ ಭಜನಾ ಮಂದಿರದ ಪುನರ್ ಪ್ರತಿಷ್ಠಾಪನೆ | ಆಮಂತ್ರಣ ಪತ್ರಿಕೆ ಬಿಡುಗಡೆ.

Posted by Vidyamaana on 2024-04-06 16:13:34 |

Share: | | | | |


ಮಾ.23-24 : ಕೆಮ್ಮಿಂಜೆ ಶ್ರೀ ರಾಮ ಭಜನಾ ಮಂದಿರದ ಪುನರ್ ಪ್ರತಿಷ್ಠಾಪನೆ | ಆಮಂತ್ರಣ ಪತ್ರಿಕೆ ಬಿಡುಗಡೆ.

ಪುತ್ತೂರು: ಶ್ರೀ ರಾಮ ಭಜನಾ ಮಂದಿರ ಟ್ರಸ್ಟ್ ವತಿಯಿಂದ ಕೆಮ್ಮಿಂಜೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ-ಶ್ರೀ ಮಹಾವಿಷ್ಣು ದೇವಸ್ಥಾನದ ವಠಾರದಲ್ಲಿರುವ ಶ್ರೀ ರಾಮ ಭಜನಾ ಮಂದಿರದ ಪುನರ್ ಪ್ರತಿಷ್ಠಾಪನೆ ಏ.23 ಹಾಗೂ 24 ರಂದು ನಡೆಯಲಿದ್ದು, ಈ ಪ್ರಯುಕ್ತ ಆಮಂತ್ರಣ ಪತ್ರಿಕೆಯನ್ನು ಇಂದು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬಿಡುಗಡೆ ಮಾಡಲಾಯಿತು.

ಮೊದಲಿಗೆ ದೇವಸ್ಥಾನ ಗರ್ಭಗುಡಿಯಲ್ಲಿ ದೇವಸ್ಥಾನದ ಪ್ರಧಾನ ಅರ್ಚಕ ವಸಂತ ಕೆದಿಲಾಯರು ಕಾರ್ಯಕ್ರಮದ ಯಶಸ್ಸಿಗಾಗಿ ಪ್ರಾರ್ಥನೆ ನೆರವೇರಿಸಿ ಪ್ರಸಾದ ನೀಡಿದರು.


ಆಸ್ಪತ್ರೆಯ ಆಂಬ್ಯುಲೆನ್ಸ್ ಕದ್ದು ಪರಾರಿಯಾದ ರೋಗಿ ಆಘಾತಕಾರಿ ಘಟನೆ CCTV ಯಲ್ಲಿ ಸೆರೆ

Posted by Vidyamaana on 2024-02-22 20:42:50 |

Share: | | | | |


ಆಸ್ಪತ್ರೆಯ ಆಂಬ್ಯುಲೆನ್ಸ್ ಕದ್ದು ಪರಾರಿಯಾದ ರೋಗಿ ಆಘಾತಕಾರಿ ಘಟನೆ CCTV ಯಲ್ಲಿ ಸೆರೆ

ಆಸ್ಪತ್ರೆಗೆ ದಾಖಲಾದ ರೋಗಿಯೊಬ್ಬ ಆಂಬ್ಯುಲೆನ್ಸ್ ಕದ್ದು ಪರಾರಿಯಾಗಿರು ಆಘಾತಕಾರಿ ಘಟನೆ ನಡೆದಿದೆ. ಚಿಕಿತ್ಸೆಯ ಮಧ್ಯದಲ್ಲಿ ಆಸ್ಪತ್ರೆಯಿಂದ ಹೊರಬಂದು ಆಂಬ್ಯುಲೆನ್ಸ್ ಕದ್ದು ಪರಾರಿಯಾಗಿದ್ದಾನೆ. ಆತ ರೋಗಿಗಳ ಬಟ್ಟೆಗಳನ್ನ ಧರಿಸಿದ್ದು, ಕೈಯಲ್ಲಿ IV ಇತ್ತು.ಈ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. 


ಈ ಪ್ರಕರಣವು ಅಮೆರಿಕದ ವರ್ಜೀನಿಯಾದಲ್ಲಿ ಸೋಮವಾರ ಈ ಘಟನೆ ನಡೆದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಫಾಕ್ಸ್ ನ್ಯೂಸ್ ವರದಿಯ ಪ್ರಕಾರ, ರಾತ್ರಿ 9: 30 ಕ್ಕೆ ಇನ್ನೋವಾ ಫೈಫಾಕ್ಸ್ ಆಸ್ಪತ್ರೆಯ ಹೊರಗೆ ಈ ಘಟನೆ ನಡೆದಿದೆ. ತಲೆಮರೆಸಿಕೊಂಡಿರುವ ಆರೋಪಿ ಈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ.


ಫೇರ್ಫಾಕ್ಸ್ ಕೌಂಟಿ ಪೊಲೀಸ್ ಇಲಾಖೆ ಆಸ್ಪತ್ರೆಯ ಹೊರಗೆ ತೆಗೆದ ಶಂಕಿತನ ಫೋಟೋವನ್ನು ಹಂಚಿಕೊಂಡಿದ್ದು, "ಆತ ಇನ್ನೂ ಡಿಸ್ಚಾರ್ಜ್ ಆಗಿರಲಿಲ್ಲ. ಆತನ ಕೈಯಲ್ಲಿ IV ಇತ್ತು. ಚಿಕಿತ್ಸೆ ನಡೆಯುತ್ತಿತ್ತು" ಎಂದು ಅವರು ಹೇಳಿದರು.ಶಂಕಿತ ಇನ್ನೂ ತಲೆಮರೆಸಿಕೊಂಡಿದ್ದು, ಆತನನ್ನು 32 ವರ್ಷದ ರಿಕಿ ಲೆವೆ ಎಂದು ಗುರುತಿಸಲಾಗಿದೆ.

ಮಂಗಳೂರು ಡ್ರಗ್ಸ್ ಜಾಲದ ಸೂತ್ರಧಾರಿ ಪೊಲೀಸರ ಬಲೆಗೆ

Posted by Vidyamaana on 2023-09-02 15:45:50 |

Share: | | | | |


ಮಂಗಳೂರು ಡ್ರಗ್ಸ್ ಜಾಲದ ಸೂತ್ರಧಾರಿ  ಪೊಲೀಸರ ಬಲೆಗೆ

ಮಂಗಳೂರು: "ಡ್ರಗ್ಸ್ ಫ್ರೀ ಮಂಗಳೂರು" ಎಂಬ ಗುರಿ ಇಟ್ಟುಕೊಂಡು ಮಂಗಳೂರು ಸಿಸಿಬಿ ಪೊಲೀಸರು ಡ್ರಗ್ಸ್ ಮತ್ತು ಗಾಂಜಾ ವಿರುದ್ಧ ನಿರಂತರ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಇದೀಗ ಡ್ರಗ್ಸ್ ಜಾಲದ ಪ್ರಮುಖ ಸೂತ್ರಧಾರಿ ಎನ್ನಲಾದ ನೈಜೀರಿಯಾ ದೇಶದ ಮಹಿಳೆಯೋರ್ವಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.


ಡ್ರಗ್ ದಂಧೆಯ ಕಿಂಗ್ ಪಿನ್ ಯಾರಿದ್ದಾರೆಂದು ಪತ್ತೆ ಮಾಡಲು ಮಂಗಳೂರು ಸಿಸಿಬಿ ಪೊಲೀಸರು ಕಳೆದ ಮೂರು ತಿಂಗಳಿನಿಂದ ತನಿಖೆ ಕೈಗೊಂಡಿದ್ದಾರೆ. ಕಳೆದ ಮೂರು ತಿಂಗಳಲ್ಲಿ ಬಂಧಿತರಾಗಿರುವ ಹೆಚ್ಚಿನ ಆರೋಪಿಗಳಿಗೆ ನೈಜಿರಿಯಾ ಮೂಲದವರಿಂದಲೇ ಡ್ರಗ್ಸ್ ಪೂರೈಕೆ ಆಗುತ್ತಿರುವುದು ತಿಳಿದುಬಂದಿತ್ತು. ನಿರಂತರ ಕಾರ್ಯಾಚರಣೆ ಬಳಿಕ ನೈಜೀರಿಯಾ ಮೂಲದ ಮಹಿಳೆಯೊಬ್ಬಳು ತನ್ನ ನಿಜ ವಿಚಾರ ಮುಚ್ಚಿಟ್ಟು ಬೆಂಗಳೂರಿನ ಯಲಹಂಕದಲ್ಲಿ ವಾಸ್ತವ್ಯ ಇರುವುದು ಪತ್ತೆಯಾಗಿತ್ತು. 


ಪೊಲೀಸರು ಇದೀಗ ನೈಜೀರಿಯಾ ಮೂಲದ ಅಡೆವೊಲೆ ಅಡೆಟುಟು ಆನು @ ರೆಜಿನಾ ಜರಾ @ ಆಯಿಶಾ(33) ಎಂಬಾಕೆಯನ್ನು ಬಂಧಿಸಿದ್ದಾರೆ. ಈಕೆ ‌ಮೂಲತಃ ನೈಜೀರಿಯಾ ದೇಶದ ಒಂಡೋ ರಾಜ್ಯದ ಅಕುರೆ ನಗರದ ನಿವಾಸಿಯಾಗಿದ್ದು ಪ್ರಸಕ್ತ ಯಲಹಂಕ ಹೋಬಳಿಯ ಜಕ್ಕೂರಿನ ಜಿಪಿ ನಾರ್ತ್ ಅವೆನ್ಯೂ ಅಪಾರ್ಟ್ಮೆಂಟ್ ನಲ್ಲಿ ನೆಲೆಸಿದ್ದಳು. 


ಆರೋಪಿ ವಶದಿಂದ ಒಟ್ಟು 400 ಗ್ರಾಂ ತೂಕದ ರೂ. 20 ಲಕ್ಷ ಮೌಲ್ಯದ ಎಂಡಿಎಂಎ ಮಾದಕ ವಸ್ತು, ಐಫೋನ್-1, ನಗದು ರೂ. 2910 ವಶಪಡಿಸಲಾಗಿದೆ. ವಶಕ್ಕೆ ಪಡೆದ ಸೊತ್ತುಗಳ ಒಟ್ಟು ಮೌಲ್ಯ ರೂ 20,52,910 ಆಗಬಹುದೆಂದು ಪೊಲೀಸರು ತಿಳಿಸಿದ್ದಾರೆ. ಶಿಕ್ಷಣದ ಉದ್ದೇಶದಲ್ಲಿ ಭಾರತದ ವೀಸಾ ಪಡೆದು ಬೆಂಗಳೂರಿಗೆ ಬಂದಿದ್ದ ಈಕೆ, ಬಳಿಕ ಇಲ್ಲಿಯೇ ಉಳಿದುಕೊಂಡಿದ್ದಳು.‌ ಸ್ವಲ್ಪ ಸಮಯ ನರ್ಸಿಂಗ್ ಕೆಲಸ ಮಾಡಿಕೊಂಡಿದ್ದು ಆನಂತರ ನರ್ಸಿಂಗ್ ಕೆಲಸ ಬಿಟ್ಟು ಮಾದಕ ವಸ್ತುಗಳ ಮಾರಾಟ ದಂಧೆ ನಡೆಸುತ್ತಿದ್ದಳು. ಮಂಗಳೂರು ನಗರದ ಉಳ್ಳಾಲ, ಸೆನ್ ಪೊಲೀಸ್ ಠಾಣೆ, ಮಂಗಳೂರು ಉತ್ತರ, ಕಂಕನಾಡಿ ನಗರ, ಕೊಣಾಜೆ, ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಈಕೆ ವಿರುದ್ಧ ಪ್ರಕರಣ ದಾಖಲಾಗಿದೆ. ಪ್ರಕರಣಗಳಲ್ಲಿ ಬಂಧಿತ ಆರೋಪಿಗಳು ಈಕೆಯಿಂದಲೇ ಮಾದಕ ವಸ್ತು ಖರೀದಿಸಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರು.  


ಪತ್ತೆ ಕಾರ್ಯದಲ್ಲಿ ಸಿಸಿಬಿ ಘಟಕದ ಎಸಿಪಿ ಪಿ.ಎ ಹೆಗಡೆ, ಪೊಲೀಸ್ ನಿರೀಕ್ಷಕರಾದ ಶ್ಯಾಮ್ ಸುಂದರ್ ಹೆಚ್ ಎಂ, ಪಿಎಸ್ಐ ಯವರಾದ ರಾಜೇಂದ್ರ ಬಿ, ಶರಣಪ್ಪ ಭಂಡಾರಿ, ಸುದೀಪ್ ಎಂ.ವಿ, ನರೇಂದ್ರ  ಹಾಗೂ ಸಿಸಿಬಿ ಸಿಬ್ಬಂದಿ ಪಾಲ್ಗೊಂಡಿದ್ದರು.

ಎರಡು ಸಾವಿರದ ವಿಚಾರಕ್ಕೆ ನಡೆಯಿತಾ ಕೊಲೆ? ಇಬ್ಬರ ಬಂಧನ

Posted by Vidyamaana on 2023-11-07 06:47:27 |

Share: | | | | |


ಎರಡು ಸಾವಿರದ ವಿಚಾರಕ್ಕೆ ನಡೆಯಿತಾ ಕೊಲೆ? ಇಬ್ಬರ ಬಂಧನ

ಪುತ್ತೂರು: ಕ್ಷುಲ್ಲಕ ಕಾರಣ ಮಾತುಕತೆ ನಡೆದು ಕಲ್ಲೇಗ ಟೈಲರ್ ಮುಖ್ಯಸ್ಥನನ್ನು ಮಾಣಿ ಮೈಸೂರು ಹೆದ್ದಾರಿಯ ನೆಹರು ನಗರ ಜಂಕ್ಷನ್ ನಲ್ಲಿ ಅಟ್ಟಾಡಿಸಿ ಕೊಲೆ ಮಾಡಲಾಗಿದೆ.


ಪಡ್ನೂರು ನಿವಾಸಿ ಅಕ್ಷಯ್ ಕಲ್ಲೇಗ (26) ಮೃತ ವ್ಯಕ್ತಿ. ಬನ್ನೂರು ನಿವಾಸಿ ಮನೀಷ್, ಚೇತು ಅವರು ಠಾಣೆಗೆ ಶರಣಾಗಿದ್ದು, ಓರ್ವ ತಲೆಮಲೆಸಿಕೊಂಡಿದ್ದಾನೆಂದು ಹೇಳಲಾಗಿದೆ.



ನೆಹರು ನಗರದಲ್ಲಿ ಸಾಯಂಕಾಲ ದ್ವಿಚಕ್ರ ವಾಹನಗಳ ನಡುವೆ ನಡೆದ ಅಪಘಾತ ವಿಚಾರದಲ್ಲಿ ಮಾತುಕತೆ ಆರಂಭವಾಗಿದೆ. ಈ ಸಂದರ್ಭ ಎರಡು ಸಾವಿರ ನೀಡುವ ವಿಚಾರದಲ್ಲಿ ಮಾತುಕತೆ ವಿಕೋಪಕ್ಕೆ ತೆರಳಿದ್ದು, ಬಸ್ ಚಾಲಕ ಚೇತು ಅವರ ಬೆಂಬಲಿಗನಿಗೆ ಹಾಗೂ ಅಕ್ಷಯ್ ನಡುವೆ ತೀವ್ರ ವಾಗ್ವಾದ ನಡೆದಿದೆ. ಇದುವೇ ವಿಕೋಪಕ್ಕೆ ಹೋಗಿ ರಾತ್ರಿ ಸುಮಾರು 11.30 ಸಮಯ ನೆಹರುನಗರದ ಕಾಲೇಜು ರಸ್ತೆಯಲ್ಲಿನ ಎಟಿಎಂ ಬಳಿಯಿಂದ ದಾಳಿ ಪ್ರಾರಂಭವಾಗಿದ್ದು, ಮುಖ್ಯ ರಸ್ತೆಯ ಇನ್ನೊಂದು ಭಾಗದ ಖಾಲಿ ಜಾಗದ ವರೆಗೆ ಅಟ್ಟಾಡಿಸಿ ತಲವಾರಿನಿಂದ ಮೂರಕ್ಕೂ ಅಧಿಕ ಮಂದಿಯ ತಂಡ ದಾಳಿ ನಡೆಸಿದೆ.


ಗಂಭೀರ ಗಾಯಗೊಂಡ ಅಕ್ಷಯ್ ಪೊದೆಗಳ ನಡುವೆ ಬಿದ್ದಿದ್ದು, 1ಗಂಟೆ ಸಮಯಕ್ಕೆ ಪೊಲೀಸರಿಗೆ ವಿಚಾರ ತೆಳಿದಿದೆ. ಸುಮಾರು 1.30ರ ಸುಮಾರಿಗೆ ವಿಚಾರ ಬಹಿರಂಗವಾಗಿದೆ. ಸ್ಥಳದಲ್ಲಿ ಪೊಲೀಸರು ಬೀಡು ಬಿಟ್ಟಿದ್ದು, ಎರಡು ಮಂದಿ ಪೋಲೀಸ್ ಠಾಣೆಗೆ ಶರಣಾಗಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಘಟನೆ ಕೇವಲ ಅಪಘಾತದ ಹಣದ ವಿಚಾರಕ್ಕೆ ನಡೆಯಲು ಸಾಧ್ಯವಾ? ಇಲ್ಲಾ ಬೇರೆ ಕಾರಣಗಳು ಇದೆಯಾ ಎಂಬ ಅನುಮಾನ ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿದೆ. ಇತ್ತೀಚೆಗೆ ನಡೆದ ಹುಲಿಕುಣಿತದಲ್ಲಿ ಕಲ್ಲೇಗ ಟೈಗರ್ಸ್ ತಂಡದ ನೇತೃತ್ವ ವಹಿಸಿಕೊಂಡಿದ್ದ ಅಕ್ಷಯ್ ನಗರ ಠಾಣೆಯಲ್ಲಿ ರೌಡಿಶೀಟರ್ ಆಗಿದ್ದ.

ಪುತ್ತೂರು : ಶಾಸಕರ ಇಂದಿನ ಕಾರ್ಯಕ್ರಮ ಸೆ 26

Posted by Vidyamaana on 2023-09-26 07:15:06 |

Share: | | | | |


ಪುತ್ತೂರು : ಶಾಸಕರ ಇಂದಿನ ಕಾರ್ಯಕ್ರಮ ಸೆ 26

ಪುತ್ತೂರು ಶಾಸಕ ಅಶೋಕ್ ಕುಮಾರ್ ಅವರು ಸೆ 26 ರಂದು



*ಬೆಳಿಗ್ಗೆ 10 ಗಂಟೆಗೆ ಪೆರ್ನೆಯಲ್ಲಿ ಮಾಜಿ ಸಚಿವ ಬಿ. ರಮಾನಾಥ್ ರೈ ಯವರ ಹುಟ್ಟುಹಬ್ಬ ಆಚರಣೆ  ಹಾಗೂ ಶಾಸಕರಿಗೆ ಅಭಿನಂದನಾ ಕಾರ್ಯಕ್ರಮ*


*ಮದ್ಯಾಹ್ನ 3 ಗಂಟೆಗೆ BRC ನೆಲ್ಲಿಕಟ್ಟೆಯಲ್ಲಿ ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ಇಲಾಖೆಯಿಂದ  ವಿವಿಧ ಸವಲತ್ತುಗಳ ವಿತರಣೆ*


*ಸಂಜೆ 6 ಗಂಟೆಗೆ ಬನ್ನೂರ್ ಚರ್ಚ್ ನಲ್ಲಿ ಶಾಸಕರಿಗೆ ಅಭಿನಂದನಾ ಕಾರ್ಯಕ್ರಮ*


ಸಂಜೆ 7 ಗಂಟೆಗೆ ಈದ್ ಮಿಲಾದ್ ಕಾರ್ಯಕ್ರಮ  ಅಡೆಕ್ಕಲ್ ಹಿರೇಬಂಡಾಡಿ ಕಾರ್ಯಕ್ರಮ ದಲ್ಲಿ  ಭಾಗವಹಿಸಲಿದ್ದಾರೆ



Leave a Comment: