ಚಾಲಕನ ನಿಯಂತ್ರಣ ತಪ್ಪಿ ಮನೆ ಮೇಲೆ ಬಿದ್ದ ಪಿಕಪ್ ವಾಹನ

ಸುದ್ದಿಗಳು News

Posted by vidyamaana on 2023-07-14 03:02:36 | Last Updated by Vidyamaana on 2023-09-05 09:08:10

Share: | | | | |


ಚಾಲಕನ ನಿಯಂತ್ರಣ ತಪ್ಪಿ ಮನೆ ಮೇಲೆ ಬಿದ್ದ ಪಿಕಪ್ ವಾಹನ

ವಿಟ್ಲ: ಪರಿಯಲ್ಲಡ್ಕ – ಸಾರಡ್ಕ ರಸ್ತೆಯ ಕೂರೇಲು ಎಂಬಲ್ಲಿ ಪಿಕಪ್ ರಸ್ತೆಯಿಂದ ಮನೆಯ ಮೇಲೆ ಬಿದ್ದಿದ್ದು, ಮನೆಯ ಒಳಗೆ ಮಹಿಳೆ ಸಿಲುಕಿ ಹಾಕಿಕೊಂಡಿದ್ದಾರೆ.ಕೂರೇಲು ಮಧ್ಯದ ಅಂಗಡಿಯ ಸಮೀಪದಲ್ಲಿ ರಸ್ತೆಯಿಂದ ಕೆಳಗಿದ್ದ ಮನೆಗೆ ಜು.14 ರ ಬೆಳಗ್ಗಿನ ಜಾವ ಚಾಲಕ ನಿಯಂತ್ರಣ ತಪ್ಪಿದ ಪಿಕಪ್ ಮನೆಯ ಮೇಲೆ ಬಿದ್ದಿದೆಅಪಘಾತದಿಂದ ಹಂಚಿನ ಮನೆ ಸಂಪೂರ್ಣ ಹಾನಿಯಾಗಿದೆ. ಪಿಕಪ್ ಕೋಳಿ ಸಾಗಟ ನಡೆಸುತಿತ್ತು. ಅಪಘಾತದಿಂದ ನೂರಾರು ಕೋಳಿಗಳು ಸತ್ತಿದೆ. ಅಪಘಾತ ನಡೆದಾಗ ಮನೆಯ ಒಳಗೆ ಮಹಿಳೆ ಮಲಗಿದ್ದರು, ಮಹಿಳೆಗೆ ಗಂಭೀರ ಗಾಯವಾದ ಪರಿಸ್ಥಿಯಲಿದ್ದಾರೆ.ಪಿಕಪ್ ವಾಹನವನ್ನು ತೆರವು ಮಾಡಡೆ, ಮಹಿಳೆಯನ್ನು ಹೊರಗೆ ತೆಗೆಯಲು ಸಾಧ್ಯವಿಲ್ಲದ ಸ್ಥಿತಿ ನಿರ್ಮಾಣವಾಗಿದೆ.

ಸ್ಥಳದಲ್ಲಿ ವಿಟ್ಲ ಪೊಲೀಸರು, ತುರ್ತು ಸೇವಾ ವಾಹನ ಬೀಡು ಬಿಟ್ಟಿದ್ದು, ಕ್ರೇನ್ ಬಳಸಿ ವಾಹನ ಮೇಲೆತ್ತುವ ಕಾರ್ಯಾಚರಣೆ ನಡೆಯುತ್ತಿದೆ.

 Share: | | | | |


ವಿಟ್ಲ : ಹಿಂ.ಜಾ.ವೇ ಕಾರ್ಯಾಚರಣೆ : ಅಕ್ರಮ ಗೋ ಸಾಗಾಟದ ವಾಹನ ಪೊಲೀಸ್ ವಶಕ್ಕೆ

Posted by Vidyamaana on 2023-05-21 11:14:43 |

Share: | | | | |


ವಿಟ್ಲ : ಹಿಂ.ಜಾ.ವೇ ಕಾರ್ಯಾಚರಣೆ : ಅಕ್ರಮ ಗೋ ಸಾಗಾಟದ ವಾಹನ ಪೊಲೀಸ್ ವಶಕ್ಕೆ

ವಿಟ್ಲ : ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಕಾರ್ಯಾಚರಣೆ ನಡೆಸಿ ಅಕ್ರಮ ಗೋ ಸಾಗಾಟ ಮಾಡುತ್ತಿದ್ದ ವಾಹನವನ್ನು ಪೊಲೀಸರಿಗೊಪ್ಪಿಸಿ ಎರಡು ಜಾನುವಾರುಗಳನ್ನು ರಕ್ಷಣೆ ಮಾಡಿದ ಘಟನೆ ವಿಟ್ಲ ಸಮೀಪದ ಸಾಲೆತ್ತೂರು ಎಂಬಲ್ಲಿ ನಡೆದಿದೆ.ಕಂಬಳ ಕೋಣ ಎಂದು ನೆಪವೊಡ್ಡಿ ಜಾನುವಾರುಗಳನ್ನು ಸಾಗಾಟ ಮಾಡುತ್ತಿದ್ದರು ಎನ್ನಲಾಗಿದೆ.

ಈ ಬಗ್ಗೆ ತಿಳಿದ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಪಿಕಪ್ ವಾಹನವನ್ನು ತಡೆದು ಪೊಲೀಸರಿಗೊಪ್ಪಿಸಿದ್ದಾರೆ ಎಂದು ತಿಳಿದು ಬಂದಿದೆ.

ಅಯ್ಯೋ ದೇವ್ರೇ.. ಆಟವಾಡ್ತಿದ್ದ ಮಗು ಫರ್ಸ್ಟ್ ಫ್ಲೋರಿನಿಂದ ಬಿತ್ತು..

Posted by Vidyamaana on 2023-08-27 10:30:32 |

Share: | | | | |


ಅಯ್ಯೋ ದೇವ್ರೇ.. ಆಟವಾಡ್ತಿದ್ದ ಮಗು ಫರ್ಸ್ಟ್ ಫ್ಲೋರಿನಿಂದ ಬಿತ್ತು..

ಮಂಗಳೂರು: ತಾಯಿ ಜೊತೆ ಬ್ಯಾಂಕಿಗೆ ಬಂದಿದ್ದ ಮಗುವೊಂದು ಹೊರಗಡೆ ಆವರಣದಲ್ಲಿ ಆಟವಾಡುತ್ತಾ ಗ್ರಿಲ್ ಮೇಲೇರಿ ಅಲ್ಲಿಂದ ಆಯತಪ್ಪಿ ಕೆಳಗೆ ಬಿದ್ದು ಗಾಯಗೊಂಡಿರುವ ಘಟನೆ ಉಳ್ಳಾಲ ತಾಲೂಕಿನ ಮಂಜನಾಡಿ ಎಂಬಲ್ಲಿ ನಡೆದಿದೆ. 

ಆ.25ರಂದು ಮಗು ತನ್ನ ತಾಯಿ ಜೊತೆಗೆ ಇಲ್ಲಿರುವ ಬ್ಯಾಂಕಿಗೆ ಬಂದಿದ್ದ ಸಂದರ್ಭದಲ್ಲಿ ತಾಯಿ ಒಳಗಿರುವಂತೆ ಮಗು ಪ್ರಥಮ ಮಹಡಿಯ ಆವರಣದಲ್ಲಿ ಆಟವಾಡುತ್ತಿತ್ತು.

ಬಳಿಕ ಅಲ್ಲೇ ಇದ್ದ ಗ್ರಿಲ್ ಮೇಲೆರಿ ಮುಂದಕ್ಕೆ ಬಾಗಿದ ಸಂದರ್ಭ ಮಗು ತಲೆಕೆಳಗಾಗಿ ಬಿದ್ದಿದೆ.

ಈ ಸಂದರ್ಭದಲ್ಲಿ ಮಗುವನ್ನು ಹುಡುಕುತ್ತಾ ಹೊರಗಡೆ ಬಂದ ಮಗುವಿನ ತಾಯಿ ಕೆಳಗೆ ನೋಡಿ ಮಗು ಬಿದ್ದಿರುವುದನ್ನು ಕಂಡು ಬೊಬ್ಬೆ ಹಾಕಿದಾಗ ಬ್ಯಾಂಕ್ ಒಳಗಿದ್ದವರು ಮತ್ತು ಅಕ್ಕಪಕ್ಕದವರು ಬಂದು ಕೆಳಗೆ ಬಿದ್ದಿದ್ದ ಮಗುವನ್ನು ರಕ್ಷಿಸಿದ್ದಾರೆ.

ಅದೃಷ್ಟವಶಾತ್ ಈ ಮಗು ಪ್ರಾಣಾಪಾಯದಿಂದ ಪಾರಾಗಿದ್ದು,ಕೆಳಗೆ ಬಿದ್ದ ರಭಸಕ್ಕೆ ಮಗುವಿನ ತಲೆ ಮತ್ತು ಕೈಗೆ ಗಾಯಗಳಾಗಿವೆ.

ಮಗುವನ್ನು ದೇರಳಕಟ್ಟೆಯಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದುಅಲ್ಲಿ ಮಗುವಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಮಗು ಆಟವಡುತ್ತಾ ಗ್ರಿಲ್ ಮೇಲೆ ಹತ್ತಿ ಕೆಳಗೆ ಬೀಳುತ್ತಿರುವ ದೃಶ್ಯ ಇಲ್ಲಿ ಅಳವಡಿಸಲಾಗಿದ್ದ ಸಿಸಿ ಕೆಮರಾದಲ್ಲಿ ಸೆರೆಯಾಗಿದೆ.

BREAKING: ಈಶ್ವರ ದೇವರ ಹೆಸರಿನಲ್ಲಿ 3ನೇ ಬಾರಿ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ ಪ್ರಧಾನಿ ಮೋದಿ.!

Posted by Vidyamaana on 2024-06-09 19:33:00 |

Share: | | | | |


BREAKING: ಈಶ್ವರ ದೇವರ  ಹೆಸರಿನಲ್ಲಿ 3ನೇ ಬಾರಿ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ ಪ್ರಧಾನಿ ಮೋದಿ.!

ನವದೆಹಲಿ: ಹೆಸರಿನಲ್ಲಿ ಮೂರನೇ ಬಾರಿ ಪ್ರಮಾಣವಚನವನ್ನು ನರೇಂದ್ರ ಮೋದಿಯವರು ಪ್ರಧಾನಿಯಾಗಿ ಅಧಿಕಾರ ಸ್ವೀಕಾರ ಮಾಡಿದರು. ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಿತು. ಅವರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಮಾಣ ವಚನ ಬೋಧಿಸಿದರು.

ಅಭಿರಾಮ್‌ ಫ್ರೆಂಡ್ಸ್‌ ವತಿಯಿಂದ ಚಿಕ್ಕಮುಡ್ನೂರು ಶಾಲೆಗೆ ಟೇಬಲ್‌ ಚಯರ್‌ ವಿತರಣೆ

Posted by Vidyamaana on 2023-08-19 14:25:24 |

Share: | | | | |


ಅಭಿರಾಮ್‌ ಫ್ರೆಂಡ್ಸ್‌ ವತಿಯಿಂದ ಚಿಕ್ಕಮುಡ್ನೂರು ಶಾಲೆಗೆ ಟೇಬಲ್‌ ಚಯರ್‌ ವಿತರಣೆ

ಪುತ್ತೂರು: ಅಭಿರಾಮ್‌ ಫ್ರೆಂಡ್ಸ್‌ (ರಿ.) ಪುತ್ತೂರು ಇದರ ವತಿಯಿಂದ ಹಿರಿಯ ಪ್ರಾ. ಶಾಲೆ ಕೃಷ್ಣನಗರ ಹಾಗೂ ಕೇಪುಳು, ನೆಲ್ಲಿಕಟ್ಟೆ, ರೋಟರಿಪುರ, ಕೆಮ್ಮಾಯಿ ಗುಂಡಿಜಾಲು, ಬೀರ್ನಹಿತ್ಲು ಅಂಗನವಾಡಿಯ ಮಕ್ಕಳಿಗೆ ಸ್ವಾತಂತ್ರ್ಯ ದಿನಾಚರಣೆಯಂದು ಸಿಹಿತಿಂಡಿ ವಿತರಿಸಿದರು.

ಚಿಕ್ಕಮುಡ್ನೂರು ಹಿ.ಪ್ರಾ ಶಾಲೆಗೆ ಚಯರ್‌, ಟೇಬಲ್‌ ವಿತರಣೆ:

ಚಿಕ್ಕಮುಡ್ನೂರು ಹಿ.ಪ್ರಾ ಶಾಲೆಯ ಮಕ್ಕಳಿಗೆ ನಲಿ-ಕಲಿಗೆ ಬೇಕಾದಂತಹ‌ ಮೂರು ಟೇಬಲ್‌ ಹಾಗೂ 15 ಚಯರ್ ಗಳನ್ನು ಅಭಿರಾಮ್‌ ಫ್ರೆಂಡ್ಸ್‌ (ರಿ.)ನ  ಅಧ್ಯಕ್ಷರು ಮತ್ತು ಸದಸ್ಯರು ಶಾಲಾ ಮುಖ್ಯೋಪಾಧ್ಯಾಯಿನಿ ಪುಷ್ಪಲತಾರವರಿಗೆ ಹಸ್ತಾಂತರಿಸಿದರು. ಅಭಿರಾಮ್‌ ಫ್ರೆಂಡ್ಸ್‌ (ರಿ.)ನ ಅಧ್ಯಕ್ಷ ತೇಜಕುಮಾರ್‌ ಕೆಮ್ಮಾಯಿ, ಕಾರ್ಯದರ್ಶಿ ಸನತ್‌ ಸುವರ್ಣ, ಉಪಾಧ್ಯಕ್ಷರಾದ ಪ್ರಜೀತ್ ಮಂಜಲ್ಪಡ್ಪು, ಹರ್ಷಿತ್‌ ರಾಮ್‌ ಬಳ್ಳಾಲ್‌, ಖಜಾಂಜಿ ಜಯೇಶ್‌ ಹಾಗೂ ಸದಸ್ಯರಾದ ಶರತ್‌ ಕೇಪುಳು, ರಮೇಶ್‌ ಬಂಡಾಜೆ, ಭರತ್‌, ಚಿದಾನಂದ ಕೇಪುಳು, ರಾಜೇಶ್‌ ಜಿಡೆಕಲ್ಲು, ಕಾರ್ತಿಕ್‌ ಊರಮಾಲು, ಕಿಶೋರ್‌ ತಾರಿಗುಡ್ಡೆ, ಪ್ರದೀಪ್‌ ಕೇಪುಳು, ಅವಿನಾಶ್‌ ಶೆಟ್ಟಿ, ಅಭಿಷೇಕ್‌ ಶೆಟ್ಟಿ, ಕಾರ್ತಿಕ್ ಚಿಕ್ಕಪುತ್ತೂರು, ಶಾಲಾ ಎಸ್‌ಡಿಎಂಸಿ ಸದಸ್ಯರು, ಬನ್ನೂರು ಗ್ರಾ, ಪಂ ತಿಮ್ಮಪ್ಪ ಪೂಜಾರಿ, ರಾಘವೇಂದ್ರ ಅಂದ್ರಟ ಮಕ್ಕಳ ಪೋಷಕರು, ಊರುವರು ಉಪಸ್ಥಿತರಿದ್ದರು.

ನಗರ ಸಭೆ ಕಚೇರಿ ದುರಸ್ತಿಗೆ ಬೇರಿನ್ಯಾವ ಅನುದಾನ ಬಳಸ್ಬೇಕು

Posted by Vidyamaana on 2023-08-30 11:25:42 |

Share: | | | | |


ನಗರ ಸಭೆ ಕಚೇರಿ ದುರಸ್ತಿಗೆ ಬೇರಿನ್ಯಾವ ಅನುದಾನ ಬಳಸ್ಬೇಕು

ಪುತ್ತೂರು: ಶಾಸಕರ ಕಚೇರಿ ನಗರಸಭೆಯ ಕಟ್ಟಡವಾಗಿದ್ದು, ಅದನ್ನು ದುರಸ್ಥಿ ಪಡಿಸಲು ನಗರಸಭೆಯ ಅನುದಾನವನ್ನು ಬಳಸಬೇಕಲ್ಲದೆ ಬೇರೆ ಯಾವ ಅನುದಾನವನ್ನು ಬಳಕೆ ಮಾಡಬಹುದು? ಅದು ಶಾಸಕರ ಕಚೇರಿ ಹೊರತು ಅಶೋಕ್ ಕುಮಾರ್ ರೈ ಅವರ ವೈಯುಕ್ತಿಕ ಕಚೇರಿಯಲ್ಲ. ಮುಂದಿನ ದಿನ ಯಾರೆ ಶಾಸಕರಾಗಲಿ ಅವರಿಗೆ ಈ ಕಚೇರಿ ಉಪಯೋಗಕ್ಕೆ ಬರುತ್ತದೆ ಎಂದ ಬಿಜೆಪಿಯಿಂದ ಶಾಸಕ ಅಶೋಕ್ ಕುಮಾರ್ ರೈ ಅವರ ವಿರುದ್ಧ ನಡೆದ ಪತ್ರಿಕಾಗೋಷ್ಠಿಗೆ ಪುತ್ತೂರು ನಗರ ಕಾಂಗ್ರೆಸ್ ಅಧ್ಯಕ್ಷ ಹೆಚ್.ಮಹಮ್ಮದ್ ಆಲಿ ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದು, ಮಂಗಳೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಅವರ ಐಷಾರಮಿ ಕಚೇರಿಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿರುವುದು ತೆರಿಗೆಯ ದುರುಪಯೋಗವಲ್ಲವೇ ಎಂದು ಪ್ರಶ್ನಿಸಿದ್ದಾರೆ.ಅಶೋಕ್ ಕುಮಾರ್ ರೈ ಅವರು ಶಾಸಕರಾಗಿ ಮೂರೇ ತಿಂಗಳಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳು, ಜನಪರ ಯೋಜನೆಗಳನ್ನು ಹಾಕಿಕೊಂಡು ಜನಪ್ರಿಯರಾಗುತ್ತಿದ್ದಾರೆ. ಅವರ ಜನಪ್ರಿಯತೆ ಸಹಿಸಲಾಗದೆ ಹೊಟ್ಟೆಕಿಚ್ಚಿನಿಂದ ಮಾಜಿ ಶಾಸಕ ಸಂಜೀವ ಮಠಂದೂರು ಶಾಸಕರ ನೂತನ ಕಚೇರಿ ಕುರಿತು ಇಲ್ಲಸಲ್ಲದ ಆರೋಪ ಮಾಡಿದ್ದಾರೆ. ಇವತ್ತು ಮಾಜಿ ಶಾಸಕರಿಗೆ ಕೆಲಸವಿಲ್ಲ. ಕಳೆದ ಚುನಾವಣೆಯಲ್ಲಿ ಅವರಿಗೆ ಟಿಕೇಟ್ ಕೊಡಲಿಲ್ಲ. ಇವತ್ತು ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಬೇರೆ ಬೇರೆ ವಿಚಾರ ತೆಗೆದು ಕೊಂಡು ಮಾದ್ಯಮದ ಮುಂದೆ ಬರುತ್ತಿದ್ದಾರೆ. ಅಶೋಕ್ ಕುಮಾರ್ ರೈ ಅವರು ತಮ್ಮನ್ನು ಭೇಟಿಯಾಗಲು ಬರುವ ಸಾರ್ವಜನಿಕರಿಗೆ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳಿಗೆ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳಲ್ಲಿ ಸಭೆ ನಡೆಸಲು ಅನುಕೂಲವಾಗುವ ವ್ಯವಸ್ಥಿತವಾದ ಕಚೇರಿ ಇರಬೇಕೆಂಬ ಸುದುದ್ದೇಶದಿಂದ ಸುಸಜ್ಜಿತ ಕಚೇರಿ ನಿರ್ಮಿಸುವಂತೆ ಜಿಲ್ಲಾಡಳಿತದಲ್ಲಿ ಕೇಳಿಕೊಂಡಂತೆ ಹಿಂದಿನ ಪುರಸಭಾ ಕಟ್ಟಡದಲ್ಲಿ ನೂತನ ಕಚೇರಿ ನಿರ್ಮಾಣ ಮಾಡಲಾಗಿದೆ. ಆದರೆ ಈ ವಿಷಯವನ್ನು ತೆಗೆದುಕೊಂಡು ಮಾಜಿ ಶಾಸಕ ಸಂಜೀವ ಮಠಂದೂರು ಅವರು ಮೊಸರಿನಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಹಿಂದಿನ ಕಚೇರಿ ಗೂಡಂಗಡಿ:

ಹಿಂದಿನ ಶಾಸಕ ಸಂಜೀವ ಮಠಂದೂರು ಅವರ ಮಿನಿ ವಿಧಾನ ಸೌಧದಲ್ಲಿರುವ ಕಚೇರಿ ಗೂಡಂಗಡಿಯಂತೆ ಇತ್ತು. ಈ ಕಚೇರಿಯಲ್ಲಿ ಸಾರ್ವಜನಿಕರಿಗೆ ಬಂದು ಭೇಟಿಯಾಗಿ ಮಾತನಾಡಲು ಸರಿಯಾದ ಸ್ಥಳಾವಕಾಶವಿರಲಿಲ್ಲ. ಅವರಿಗೆ ಸಾರ್ವಜನಿಕರಿಗೆ ತನ್ನ ಕಚೇರಿಯಿಂದ ಅನಾನುಕೂಲ ಆಗುತ್ತದೆ ಎಂಬ ಕಾಳಜಿಯೂ ಇರಲಿಲ್ಲ. ಆದರ ಈಗಿನ ಶಾಸಕರು ಸಾರ್ವಜನಿಕರಿಗಾಗಿ ವಿಶಾಲವಾದ ಕಚೇರಿ ಮಾಡಿಕೊಂಡಿದ್ದಾರೆ. ಎಂದು ಹೆಚ್.ಮಹಮ್ಮದ್ ಆಲಿ ಹೇಳಿದರು .

ಸಂಜೀವ ಮಠಂದೂರು ಅವರಿಂದ ಕೋಟ್ಯಾಂತರ ರೂಪಾಯಿ ದುರುಪಯೋಗ:

ಮಾಜಿ ಶಾಸಕ ಸಂಜೀವ ಮಠಂದೂರು ಅವರ ಅವಧಿಯಲ್ಲಿ ಸರಕಾರದ ವಿವಿಧ ಯೋಜನೆಯಲ್ಲಿ ಕೋಟ್ಯಾಂತರ ರೂಪಾಯಿ ಹಣ ದುರುಪಯೋಗ ಆಗಿದೆ. ನಗರಸಭೆಗೆ ಸುಸಜ್ಜಿತ ಕಚೇರಿ ಇದ್ದಾಗಲೂ ಶಾಸಕ ಸಂಜೀವ ಮಠಂದೂರು ಅವರು ಹಿಂದಿನ ಪುರಸಭೆಯ ಕಟ್ಟಡ ಕೆಡವಿದಲ್ಲದೆ ಪಕ್ಕದಲ್ಲಿರುವ ಈಗಿನ ಶಾಸಕರ ಕಚೇರಿ ಕಟ್ಟಡವನ್ನು ಕೆಡವಿ ರೂ.13 ಕೋಟಿ ವೆಚ್ಚದಲ್ಲಿ ಹೊಸ ನಗರಭೆ ಕಚೇರಿ ನಿರ್ಮಿಸಲು ಹೊರಟಿದ್ದರು. ಆಗ ಜನರ ತೆರಿಗೆ ಹಣ ದುರುಪಯೋಗ ಆಗುತ್ತದೆ ಎಂದು ಅವರಿಗೆ ಗೊತ್ತಿರಲಲಿಲ್ಲವೇ? ಪುಡಾ ಕಚೇರಿಯಿಂದ ರೂ.13 ಸಾವಿರ ಬರುವ ಬಾಡಿಗೆ ನಷ್ಟ ಆಗಿದೆ ಎನ್ನುತ್ತಿರುವ ಮಾಜಿ ಶಾಸಕರಿಗೆ ಆ ಕಟ್ಟಡ ಕೆಡವಿದಾಗ ಪುಡಾದ ಬಾಡಿಗೆ, ತಳ ಅಂತಸ್ತಿನಲ್ಲಿರುವ ಹೊಟೇಲ್,ಇನ್ನಿತರ ಉದ್ಯಮದಿಂದ ಬರುವ ಬಾಡಿಗೆ ನಷ್ಟ ಆಗುತ್ತದೆ ಎಂದು ಗೊತ್ತಿರಲಿಲ್ಲವೇ? ನಗರಸಭೆಯ ವಿವಿಧ ಕಡೆಗಳಲ್ಲಿ ಹಲವು ಕಡೆ ಜನರೇ ಇಲ್ಲದಲ್ಲಿಗೆ ಪಾರ್ಕ್ ಮಾಡಿ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿರುವುದು, ರಸ್ತೆ ಬದಿಯ ಇಂಟರ್ ಲಾಕ್ ತೆರವು ಮಾಡಿ ಡಾಮಾರು ಹಾಕಿಸಿರುವುದು, ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಸ್ಮಾರ್ಟ್ ಬಸ್ ತಂಗುದಾಣ ಮಾಡಿರುವುದು, ಕೃಷಿ ಭೂಮಿ ಸಂರಕ್ಷಣೆಗೆ ಒದಗಿಸಲ್ಪಟ್ಟ ಸಣ್ಣ ನೀರಾವರಿ ಇಲಾಖೆಯ ಅನುದಾನದಲ್ಲಿ ನಿಮ್ಮ ಆಪ್ತರ ಪರಿವರ್ತನ ಭೂಮಿಗೆ ತಡೆಗೋಡೆ ಕಟ್ಟಿರುವುದು, ನಗರಸಭೆಯ ಕಚೇರಿಯಲ್ಲಿ ಅಧ್ಯಕ್ಷ, ಉಪಾಧ್ಯಕ್ಷರಿಗೆ ಸುಸಜ್ಜಿತ ಕಚೇರಿಇದ್ದಾಗಲೂ ಬಿಜೆಪಿ ಆಡಳಿತ ಬಂದಾಗ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಎಸಿ ಅಳವಡಿಸಿ ಕಚೇರಿಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿರುವುದು, ಮುಕ್ರಂಪಾಡಿಯಲ್ಲಿ ರೂ.50 ಲಕ್ಷದಲ್ಲಿ ಆಗುವ ಸೇತುವೆಗೆ ರೂ.1.75 ಕೋಟಿ ಖರ್ಚು ತೋರಿಸಿರುವುದು, ಇರ್ದೆ ಗ್ರಾಮದ ಬೈಲಾಡಿ ಗೋಪಾಲಕೃಷ್ಣ ದೇವಾಲಯದಿಂದ ಬೆಂದ್ರತೀರ್ಥಕ್ಕೆ ಹೋಗಲು ತೂಗು ಸೇತುವೆ ನಿರ್ಮಾಣ ಮಾಡುವ ಬದಲು ಖಾಸಗಿ ತೋಟಕ್ಕೆ ಹೋಗಲು ಸೇತುವೆ ಮಾಡಿರುವುದು, ಇದೆ ಗ್ರಾಮದ ಕೆಲ್ಲಾಡಿ ಎಂಬಲ್ಲಿ 500 ಮೀಟರ್ ಅಂತರದಲ್ಲಿ ರಸ್ತೆ ಸಂಪರ್ಕ ಇಲ್ಲದ ಗುಡ್ಡೆಗ ರೂ. 6.50 ಕೋಟಿ ಸೇತುವೆ ನಿರ್ಮಾಣ ಮಾಡಿರುವುದು ಯಾರ ತೆರಿಗೆಯ ಹಣದಲ್ಲಿ ಎಂದು ಪ್ರಶ್ನಿಸಿದ ಮಹಮ್ಮದ್ ಆಲಿಯವರು ಇದೆಲ್ಲ ದುರುಪಯೋಗವಲ್ಲವೇ ಎಂದು ಪ್ರಶ್ನಿಸಿದ್ದಾರೆ. ಇವೆಲ್ಲ ಶೇ.40 ಕಮಿಷನ್ ಆಸೆಗಾಗಿ ಮಾಜಿ ಶಾಸಕ ಸಂಜೀವ ಮಠಂದೂರು ಮಾಡಿದ ದುರುಪಯೋಗ ಎಂದರು. ಇವತ್ತು ಮಾಜಿ ಪುರಸಭೆ ಕಟ್ಟಡದಲ್ಲಿ ಶಾಸಕರ ಕಚೇರಿ ನಿರ್ಮಾಣಗೊಂಡಿದ್ದರಿಂದ ಅಲ್ಲಿ ಕಟ್ಟಡ ಕೆಡವುವ ಬಿಜೆಪಿಯ ಹುನ್ನಾರಕ್ಕೆ ತಡೆ ಹಿಡಿಯಲಾಗಿದೆ. ಮುಂದೆಯೂ ಅಲ್ಲಿ ನಗರಸಭೆ ಕಚೇರಿ ನಿರ್ಮಾಣ ಮಾಡಲುನಾವು ಬಿಡುವುದಿಲ್ಲ ಎಂದು ಮಹಮ್ಮದ್ ಆಲಿ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ನಗರಸಭೆ ಮಾಜಿ ಅಧ್ಯಕ್ಷೆ ಜಯಂತಿ ಬಲ್ನಾಡು, ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ರೋಶನ್ ರೈ ಬನ್ನೂರು, ನಗರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿಕ್ಟ‌ ಪಾಯಸ್, ಉಪಾಧ್ಯಕ್ಷ ಮಂಜುನಾಥ್ ಕೆಮ್ಮಾಯಿ ಉಪಸ್ಥಿತರಿದ್ದರು.

ಎ.16 ಕ್ಕೆ ಪುತ್ತೂರಿಗೆ ಸಿ ಎಂ, ಡಿಸಿಎಂ - ರೋಡ್ ಶೋ: ಕಾರ್ಯಕ್ರಮದ ಪೂರ್ವಭಾವಿ ಸಭೆ

Posted by Vidyamaana on 2024-04-13 07:27:10 |

Share: | | | | |


ಎ.16 ಕ್ಕೆ ಪುತ್ತೂರಿಗೆ ಸಿ ಎಂ, ಡಿಸಿಎಂ - ರೋಡ್ ಶೋ: ಕಾರ್ಯಕ್ರಮದ ಪೂರ್ವಭಾವಿ ಸಭೆ

ಪುತ್ತೂರು: ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಲು ಸಿಎಂ ಸಿದ್ದರಾಮಯ್ಯ  ಮತ್ತು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ರವರು ಪುತ್ತೂರಿಗೆ ಆಗಮಿಸಲಿದ್ದು ಕಿಲ್ಲೆ ಮೈದಾನದಲ್ಲಿ ಬೃಹತ್ ಚುನಾವಣಾ ಪ್ರಚಾರ ಸಭೆ ನಡೆಯಲಿದೆ ಎಂದು ಶಾಸಕರಾದ ಅಶೋಕ್ ರೈ ತಿಳಿಸಿದರು.

ಮಧ್ಯಾಹ್ನ 3 ಗಂಟೆಗೆ ಮೊಟ್ಟೆತ್ತಡ್ಕ ಹೆಲಿಪ್ಯಾಡ್ ನಲ್ಲಿ ಬಂದಿಳಿಯಲಿದ್ದು ಆ ಬಳಿಕ ಕಿಲ್ಲೆ ಮೈದಾನದಲ್ಲಿ ಸಮಾವೇಶದಲ್ಲಿ‌ಭಾಗವಹಿಸಲಿದ್ದು ಸಂಜೆ 5 ಗಂಟೆಗೆ ನಿರ್ಗಮಿಸಲಿದ್ದಾರೆ.

ಕಾರ್ಯಕ್ರಮದಲ್ಲಿ 15 ಸಾವಿರಕ್ಕೂ‌ಮಿಕ್ಕಿ ಕಾರ್ಯಕರ್ತರು ಭಾಗವಹಿಸಲಿದ್ದಾರೆ. ಜಿಲ್ಲಾ ಮಟ್ಟದ ಸಮಾವೇಶವನ್ನು ಪುತ್ತೂರಿನಲ್ಲಿ ಆಯೋಜನೆ ಮಾಡಲಾಗಿದೆ. ಕಾರ್ಯಕ್ರಮಕ್ಕೆ ಬೇಕಾದ ಎಲ್ಲಾ ಸಿದ್ದತೆಗಳನ್ನು ನಡೆಸಲಾಗುತ್ತಿದೆ ಎಂದು ಹೇಳಿದರು.



Leave a Comment: