ರಾಜ್ಯ ಸರ್ಕಾರದಿಂದ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ

ಸುದ್ದಿಗಳು News

Posted by vidyamaana on 2024-07-03 08:24:56 |

Share: | | | | |


ರಾಜ್ಯ ಸರ್ಕಾರದಿಂದ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ

ಬೆಂಗಳೂರು : ರಾಜ್ಯ ಸರ್ಕಾರದಿಂದ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸೋ ಕೆಲಸ ಮಾಡಲಾಗಿದೆ. ನಾಲ್ವರು ಕೆಎಎಸ್ ಅಧಿಕಾರಿ ಹಾಗೂ 25 ಮಂದಿ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶಿಸಿದೆ.

ಕರ್ನಾಟಕ ಆಡಳಿತ ಸೇವೆಗೆ ಸೇರಿದ ಈ ಕೆಳಕಂಡ ಅಧಿಕಾರಿಗಳನ್ನು ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಠಿಯಿಂದ ಈ ಕೂಡಲೇ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಅವರುಗಳ ಹೆಸರಿನ ಮುಂದೆ ನಮೂದಿಸಿರುವ ಹುದ್ದೆಗಳಿಗೆ ವರ್ಗಾಯಿಸಿ / ಸ್ಥಳನಿಯುಕ್ತಿಗೊಳಿಸಿ ಆದೇಶಿಸಿದೆ.

ವರ್ಗಾವಣೆಗೊಂಡ ಕೆಎಎಸ್‌ ಅಧಿಕಾರಿಗಳು

ಡಾ. ಜಗದೀಶ್‌ ಕೆ. ನಾಯಕ್‌

ರಘುನಂದನ್‌ ಎ.ಎನ್‌

ಪ್ರಸನ್ನ ಕುಮಾರ್‌ ವಿ.ಕೆ

ಹುಲ್ಲುಮನಿ ತಿಮ್ಮಣ್ಣ

ವರ್ಗಾವಣೆಗೊಂಡ ಐಪಿಎಸ್‌ ಅಧಿಕಾರಿಗಳು

ಬಿ. ರಮೇಶ -ಡಿಐಜಿಪಿ, ಪೂರ್ವ ವಲಯ, ದಾವಣಗೆರೆ

ಎನ್. ವಿಷ್ಣು ವರ್ಧನ್ -ಎಸ್.ಪಿ. ಮೈಸೂರು ಜಿಲ್ಲೆ

ಸೀಮಾ ಲಾಟ್ಕರ್ -ಪೊಲೀಸ್ ಆಯುಕ್ತರು, ಮೈಸೂರು ನಗರ

ರೇಣುಕಾ ಸುಕುಮಾರ -ಎಐಜಿಪಿ ಬೆಂಗಳೂರು ಡಿಜಿ ಕಚೇರಿ

ಸಿ.ಕೆ. ಬಾಬಾ -ಎಸ್.ಪಿ. ಬೆಂಗಳೂರು ಗ್ರಾಮಾಂತರ

ಸುಮನ್ ಡಿ. ಪೆನ್ನೇಕರ್ -ಎಸ್‌ ಪಿ, ಬಿಎಂಟಿಎಫ್

ಸಿ.ಬಿ. ರಿಷ್ಯಂತ್ -ಎಸ್.ಪಿ

ಚನ್ನಬಸವಣ್ಣ - ಎಐಜಿಪಿ, ಆಡಳಿತ, ಡಿಜಿ ಕಚೇರಿ

ಲಾಬೂ ರಾಮ್ -ಐಜಿಪಿ ಕೇಂದ್ರ ವಲಯ

ರವಿಕಾಂತೇಗೌಡ -ಐಜಿಪಿ ಕೇಂದ್ರ ಕಚೇರಿ- ಒಂದು ಬೆಂಗಳೂರು ಡಿಜಿ ಕಚೇರಿ

ಕೆ. ತ್ಯಾಗರಾಜನ್ -ಐಜಿಪಿ, ಐ.ಎಸ್.ಡಿ.

ಎನ್. ಶಶಿಕುಮಾರ್ -ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರ್

ಪ್ರದೀಪ್‌ ಗುಂಡಿ - ಎಸ್‌ ಪಿ. ಬೀದರ್‌ ಜಿಲ್ಲೆ

ಯತೀಶ್‌ ಎನ್. - ಎಸ್‌ ಪಿ ದಕ್ಷಿಣ ಕನ್ನಡ ಜಿಲ್ಲೆ

ಮಲ್ಲಿಕಾರ್ಜುನ ಬಾಲದಂಡ ಎಸ್‌ ಪಿ ಮಂಡ್ಯ ಜಿಲ್ಲೆ

ಡಾ.ಟಿ. ಕವಿತಾ ಎಸ್.ಪಿ. ಚಾಮರಾಜನಗರ ಜಿಲ್ಲೆ

ಬಿ. ನಿಖಿಲ್‌ ಎಸ್‌ ಪಿ ಕೋಲಾರ ಜಿಲ್ಲೆ

 Share: | | | | |


ಹಿಂದೂ ನಂಬಿಕೆಯ ತಳಹದಿಯಲ್ಲಿ ಕಣ್ಣೀರೊರೆಸುವ ಕಾರ್ಯ

Posted by Vidyamaana on 2024-04-12 07:14:19 |

Share: | | | | |


ಹಿಂದೂ ನಂಬಿಕೆಯ ತಳಹದಿಯಲ್ಲಿ ಕಣ್ಣೀರೊರೆಸುವ ಕಾರ್ಯ

ಸುಳ್ಯ: ನಾನೋರ್ವ ಹಿಂದೂ. ನನ್ನ ಧರ್ಮದ ತಳಹದಿಯಲ್ಲಿ ಕೆಲಸ ಮಾಡುತ್ತಾ, ಅನೇಕ ಮಂದಿಯ ಕಣ್ಣೀರೊರೆಸುವ ಕೆಲಸ ಮಾಡಿದ್ದೇನೆ ಎಂದು ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಹೇಳಿದರು.


ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ನಿಂತಿಕಲ್ಲಿನಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದರು.


ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಟ್ರಸ್ಟಿಯಾಗಿ, ಕೋಶಾಧಿಕಾರಿಯಾಗಿ 28 ವರ್ಷದಿಂದ ಕೆಲಸ ನಿರ್ವಹಿಸುತ್ತಿದ್ದೇನೆ. ಇದರ ಜೊತೆಗೆ ಸಾಮಾಜಿಕ ಕೆಲಸದಲ್ಲಿ ತೊಡಗಿಸಿಕೊಂಡಿದ್ದೇನೆ. ತಾನು ಬೆಳೆದು ಬಂದ ಧರ್ಮ ತನಗೆ ಎಲ್ಲಾ ಧರ್ಮವನ್ನು ಸಮಾನವಾಗಿ ಕಾಣಲು ತಿಳಿಸಿದೆ. ಅದರ ಪ್ರಕಾರ, ಧರ್ಮದ ಕಾರ್ಯ ನಡೆಸಿದ್ದೇನೆ ಎಂದ ಅವರು, ನಮ್ಮ ಸಂವಿಧಾನದ ಆಶಯದಂತೆ ನಾವೆಲ್ಲರೂ ಒಂದೇ ಎಂಬ ಭಾವನೆಯೊಂದಿಗೆ ಬಾಳಲು ಬೇಕಾದ ವಾತಾವರಣವನ್ನು ಕಲ್ಪಿಸಿಕೊಡಲು ಶ್ರಮಿಸಲಾಗುವುದು ಎಂದರು.

ಬಡ ವಿದ್ಯಾರ್ಥಿನಿಯ ಶುಲ್ಕ ಪಾವತಿಸಿದ ಶಾಸಕರು

Posted by Vidyamaana on 2024-01-19 22:22:22 |

Share: | | | | |


ಬಡ ವಿದ್ಯಾರ್ಥಿನಿಯ ಶುಲ್ಕ ಪಾವತಿಸಿದ ಶಾಸಕರು

ಪುತ್ತೂರು: ಕೊಡಿಪ್ಪಾಡಿ ಗ್ರಾಮದ ವಿದ್ಯಾರ್ಥಿನಿಯೋರ್ವಳಿಗೆ ಪುತ್ತೂರು ಶಾಸಕರು ಆರ್ಥಿಕ ನೆರವು ನೀಡಿದರು.


ಬಡ ವಿದ್ಯಾರ್ಥಿನಿಯಾದ ಈಕೆಯ ತಂದೆ ಇತ್ತೀಚೆಗೆ ನಿಧನರಾಗಿದ್ದರು. ಆರ್ಥಿಕ ಸಂಕಷ್ಟದಿಂದ ಆಕೆಯ ಶಿಕ್ಷಣಕ್ಕೆ ಅಡಚಣೆಯಗಿತ್ತು. ಈ ಬಗ್ಗೆ ಕುಟುಂಬ ನೆರವು ನೀಡುವಂತೆ ಶಾಸಕರಿಗೆ ಮನವಿ ಮಾಡಿದ್ದರು. ವಿದ್ಯಾರ್ಥಿನಿಯ ಶಾಲೆಯ ಶುಲ್ಕವನ್ನು ಪೂರ್ತಿಯಾಗಿ ಪಾವತಿಸುವ ಮೂಲಕ ಬಡ ಕುಟುಂಬಕ್ಕೆ ಶಾಸಕರು ಆಸರೆಯಾಗಿದ್ದಾರೆ.

ಮೈಸೂರು ಭೇಟಿ ವೇಳೆ ಝಿರೋ ಟ್ರಾಫಿಕ್ ಮಾಡಿದ್ದಕ್ಕೆ ಗರಂ ಆದ ಸಿಎಂ

Posted by Vidyamaana on 2023-06-10 14:17:25 |

Share: | | | | |


ಮೈಸೂರು ಭೇಟಿ ವೇಳೆ ಝಿರೋ ಟ್ರಾಫಿಕ್ ಮಾಡಿದ್ದಕ್ಕೆ ಗರಂ ಆದ ಸಿಎಂ

ಮೈಸೂರು : ತಮ್ಮ ಪ್ರಯಾಣದ ವೇಳೆ ಝೀರೋ ಟ್ರಾಫಿಕ್ ಮಾಡಿದ್ದಕ್ಕೆ ಸಿಎಂ ಸಿದ್ದರಾಮಯ್ಯ ಗರಂ ಆಗಿದ್ದಾರೆ. ಯಾಕಾಗಿ ಝೀರೋ ಟ್ರಾಫಿಕ್ ಮಾಡಿದ್ದೀರಾ? ಎಂದು ಮೈಸೂರು ಪೊಲೀಸ್ ಆಯುಕ್ತರನ್ನು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.ಸಿಎಂ ಸಿದ್ದರಾಮಯ್ಯ ಮೈಸೂರು ವಿಮಾನ ನಿಲ್ದಾಣದಿಂದ ಜಿಲ್ಲಾ ಪಂಚಾಯತ್ ಕಚೇರಿಗೆ ಆಗಮಿಸಿದ್ದರು.ಈ ವೇಳೆ ಅವರಿಗೆ ಝೀರೋ ಟ್ರಾಫಿಕ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಇದರಿಂದ ಸಿಟ್ಟಾದ ಸಿದ್ದರಾಮಯ್ಯ ಪೊಲೀಸ್ ಆಯುಕ್ತರನ್ನು ಪ್ರಶ್ನಿಸಿ, ನಿಮಗೆ ಗೊತ್ತಿದೆಯಾ, ನಾನು ಝೀರೋ ಟ್ರಾಫಿಕ್ ಮಾಡಬೇಡಿ ಎಂದು ಹೇಳಿದ್ದೇನೆ. DONT DO THAT ಎಂದು ಹೇಳುತ್ತಾ ಖಡಕ್ ವಾರ್ನಿಂಗ್ ನೀಡಿದ ಘಟನೆ ಜಿ.ಪಂ ಆವರಣದಲ್ಲಿ ನಡೆದಿದೆ.ಸಿದ್ದರಾಮಯ್ಯ ಎರಡನೇ ಬಾರಿಗೆ ಸಿಎಂ ಆಗಿ ಅಧಿಕಾರ ವಹಿಸುತ್ತಿದ್ದಂತೆ ತಮ್ಮ ವಾಹನ ಸಂಚಾರಕ್ಕೆ ನೀಡಲಾಗಿದ್ದ ಝೀರೋ ಟ್ರಾಫಿಕ್​ ಸೌಲಭ್ಯವನ್ನು ಹಿಂಪಡೆಯುವಂತೆ ನಗರ ಪೊಲೀಸ್ ಆಯುಕ್ತರಿಗೆ ತಿಳಿಸಿದ್ದರು. ಝೀರೋ ಟ್ರಾಪಿಕ್‌ನಿಂದಾಗಿ ರಸ್ತೆಯಲ್ಲಿ ವಾಹನ ದಟ್ಟಣೆ ಉಂಟಾಗಿ ಸಾರ್ವಜನಿಕರಿಗೆ ಅನಾನುಕೂಲವಾಗುತ್ತಿರುವುದನ್ನು ಕಂಡು ಈ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದ್ದರು.ಸಿಎಂ ಸಿದ್ದರಾಮಯ್ಯ ಮೈಸೂರು ಜಿಲ್ಲಾ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಹಲವು ವಿಷಯಗಳ ಬಗ್ಗೆ ಚರ್ಚಿಸಿದ್ದಾರೆ. ಈ ವೇಳೆ ಸಚಿವರಾದ ಎಚ್‌.ಸಿ.ಮಹದೇವಪ್ಪ, ಕೆ.ವೆಂಕಟೇಶ್, ಶಾಸಕರಾದ ಜಿ.ಟಿ.ದೇವೇಗೌಡ, ತನ್ವೀರ್‌ ಸೇಠ್, ಶ್ರೀವತ್ಸ, ರವಿಶಂಕರ್, ಅನಿಲ್ ಚಿಕ್ಕಮಾದು, ಜಿ.ಡಿ.ಹರೀಶ್‌ ಗೌಡ, ವಿಧಾನ ಪರಿಷತ್ ಸದಸ್ಯ ತಿಮ್ಮಯ್ಯ ಸೇರಿ ಹಲವರು ಭಾಗಿಯಾಗಿದ್ದರು.

ಓಮ್ನಿ – ಬೈಕ್ ಢಿಕ್ಕಿ: ಗಂಭೀರ ಗಾಯಗೊಂಡಿದ್ದ ಸವಾರ ಕೆಮ್ಮಾಯಿ ನಿವಾಸಿ ನಾರಾಯಣ್ ಮೃತ್ಯು

Posted by Vidyamaana on 2023-08-14 16:18:39 |

Share: | | | | |


ಓಮ್ನಿ – ಬೈಕ್ ಢಿಕ್ಕಿ: ಗಂಭೀರ ಗಾಯಗೊಂಡಿದ್ದ ಸವಾರ  ಕೆಮ್ಮಾಯಿ ನಿವಾಸಿ  ನಾರಾಯಣ್ ಮೃತ್ಯು

ಪುತ್ತೂರು: ಮುಕ್ರಂಪಾಡಿಯಲ್ಲಿ ನಡೆದ ಒಮ್ನಿ ಕಾರು ಹಾಗೂ ಬೈಕ್ ನಡುವಿನ ಅಪಘಾತದಲ್ಲಿ ಸವಾರ ಮೃತಪಟ್ಟ ಬಗ್ಗೆ ವರದಿಯಾಗಿದೆ.


ಮೃತಪಟ್ಟವರನ್ನು ಮೂಲತಃ ಕೆಮ್ಮಾಯಿ ನಿವಾಸಿ, ಉಪ್ಪಳಿಗೆಯ ಅಜಲಡ್ಕದಲ್ಲಿ ವಾಸವಾಗಿರುವ ನಾರಾಯಣ್ ಎಂದು ಗುರುತಿಸಲಾಗಿದೆ. ಇವರಿಗೆ ಸುಮಾರು 28 ವರ್ಷ ಎಂದು ಅಂದಾಜಿಸಲಾಗಿದೆ.


ಅಜಲಡ್ಕದ ತನ್ನ ಚಿಕ್ಕಪ್ಪನ ಮನೆಯಲ್ಲಿದ್ದುಕೊಂಡು, ಅಡಿಕೆ ತೆಗೆಯುವ, ಅಡಿಕೆಗೆ ಮದ್ದು ಬಿಡುವ ಕೆಲಸ ಮಾಡಿಕೊಂಡಿದ್ದರು ನಾರಾಯಣ್.

ಆ. 13ರ ರಾತ್ರಿ ಮುಕ್ರಂಪಾಡಿಯಲ್ಲಿ ಬೈಕ್ ಮತ್ತು ಮಾರುತಿ ಒಮ್ನಿ ನಡುವೆ ಭೀಕರ ಅಪಘಾತ ಸಂಭವಿಸಿತ್ತು. ಅಡ್ಡ ಬಂದ ನಾಯಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋದಾಗ, ಎದುರು ಬಂದ ಒಮ್ನಿ ಕಾರಿಗೆ ಬೈಕ್ ಢಿಕ್ಕಿಯಾಗಿತ್ತು ಎಂದು ಹೇಳಲಾಗಿದೆ.


ಗಂಭೀರವಾಗಿ ಗಾಯಗೊಂಡಿದ್ದ ನಾರಾಯಣ್ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಕರೆದೊಯ್ದಿದ್ದು, ಸೋಮವಾರ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಇದು ನನ್ನ ಕೊನೆಯ ಚುನಾವಣೆ: ವಿನಯ್ ಕುಮಾರ್ ಸೊರಕೆ

Posted by Vidyamaana on 2023-03-04 09:24:18 |

Share: | | | | |


 ಇದು ನನ್ನ ಕೊನೆಯ ಚುನಾವಣೆ: ವಿನಯ್ ಕುಮಾರ್ ಸೊರಕೆ

ಉದ್ಯಾವರ: ಈ ವಿಧಾನಸಭಾ ಚುನಾವಣೆ ನನ್ನ ರಾಜಕೀಯ ಜೀವನದ ಕೊನೆಯ ಚುನಾವಣೆ ಎಂದು ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಹೇಳಿದ್ದಾರೆ.

ಉದ್ಯಾವರ ಗ್ರಾಮೀಣ ಕಾಂಗ್ರೆಸ್ ಸಮಿತಿಯ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ನನ್ನ ರಾಜಕೀಯ ಜೀವನದಲ್ಲಿ ಇದುವರೆಗೂ ಕಪ್ಪುಚುಕ್ಕೆ ಬಂದಿಲ್ಲ. ಅಧಿಕಾರ ಇದ್ದಾಗಲೂ, ಇಲ್ಲದಿದ್ದಾಗಲೂ ಜನರ ಸಮಸ್ಯೆಗಳಿಗೆ ಸ್ಪಂದಿಸಿದ್ದೇನೆ. ಇಂದೂ ಕೂಡಾ ಜನ ನನ್ನ ಬಳಿ ಸಮಸ್ಯೆ ಹೇಳಿಕೊಂಡು ಬರ್ತಾರೆ. ನಾನು ವೈಯಕ್ತಿಕ ಸಹಾಯವನ್ನೂ ಮಾಡುತ್ತಿದ್ದೇನೆ. ಮುಂಬರುವ ಚುನಾವಣೆ ನನ್ನ ಕೊನೆಯ ಚುನಾವಣೆ. ಮತದಾರರು ನನ್ನನ್ನು ಆಶೀರ್ವದಿಸುತ್ತಾರೆಂದು ನಂಬಿದ್ದೇನೆ ಎಂದರು.

ಬೆಂಗಳೂರಿನಲ್ಲಿ ಅಪಘಾತ : ನರ್ಸಿಂಗ್ ವಿದ್ಯಾರ್ಥಿ ಥೋಮಸ್ ಮೃತ್ಯು

Posted by Vidyamaana on 2024-05-30 16:54:25 |

Share: | | | | |


ಬೆಂಗಳೂರಿನಲ್ಲಿ ಅಪಘಾತ :  ನರ್ಸಿಂಗ್ ವಿದ್ಯಾರ್ಥಿ ಥೋಮಸ್ ಮೃತ್ಯು

ನೆಲ್ಯಾಡಿ : ಬೆಂಗಳೂರಿನ ನೆಲಮಂಗಲದಲ್ಲಿ ಬೈಕ್ ಹಾಗೂ ಲಾರಿ ಮಧ್ಯೆ ಅಪಘಾತ ಸಂಭವಿಸಿ ನೆಲ್ಯಾಡಿ ಎಂಜಿರ ಪರಕ್ಕಳದ ಯುವಕ ಮೃತಪಟ್ಟ ಬಗ್ಗೆ ವರದಿಯಾಗಿದೆ.

ನೆಲ್ಯಾಡಿ ಎಂಜಿರ ಪರಕ್ಕಳ ನಿವಾಸಿ ಸ್ಕೇರಿಯಾ ಎಂಬವರ ಪುತ್ರ, ನರ್ಸಿಂಗ್ ವಿದ್ಯಾರ್ಥಿ ಥೋಮಸ್ ಮೃತ ಯುವಕ.



Leave a Comment: