ಕಟ್ಟಡ ಕಾರ್ಮಿಕರಿಗೆ ಇ ಕಾರ್ಡು ವಿತರಣೆ-ಕಾರ್ಡು ಮಾಡಿಸಿ ಸವಲತ್ತು ಪಡೆದುಕೊಳ್ಳಿ: ಕಟ್ಟಡ ಕಾರ್ಮಿಕರಿಗೆ ಶಾಸಕ ಅಶೋಕ್ ರೈ ಮನವಿ

ಸುದ್ದಿಗಳು News

Posted by vidyamaana on 2024-07-03 19:28:29 |

Share: | | | | |


ಕಟ್ಟಡ ಕಾರ್ಮಿಕರಿಗೆ ಇ ಕಾರ್ಡು ವಿತರಣೆ-ಕಾರ್ಡು ಮಾಡಿಸಿ ಸವಲತ್ತು ಪಡೆದುಕೊಳ್ಳಿ: ಕಟ್ಟಡ ಕಾರ್ಮಿಕರಿಗೆ ಶಾಸಕ ಅಶೋಕ್ ರೈ ಮನವಿ

ಪುತ್ತೂರು:  ರೈ ಎಸ್ಟೇಟ್ಸ್ ಎಜುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ಅಧೀನದಲ್ಲಿ ಶಾಸಕ ಅಶೋಕ್ ರೈ ಕಚೇರಿ ಮೂಲಕ ಉಚಿತ ಕಾರ್ಮಿಕ ಇ ಕಾರ್ಡು ಮಾಡಿಸಿಕೊಂಡ ಕಟ್ಟಡ ಕಾರ್ಮಿಕರಿಗೆ ಕಾರ್ಡು ವಿತರಣಾ ಕಾರ್ಯಕ್ರಮ ಶಾಸಕರ ಕಚೇರಿಯಲ್ಲಿ ನಡೆಯಿತು.

ಒಟ್ಟು ೩೪ ಮಂದಿ ಕಾರ್ಮಿಕರಿಗೆ ಕಾರ್ಡು ವಿತರಿಸಲಾಯಿತು. ಕಟ್ಟಡ ಕಾರ್ಮಿಕರು ಶಾಸಕರ ಕಚೇರಿ ಮೂಲಕ ನೋಂದಾವಣೆ ಮಾಡಿಕೊಂಡಿದ್ದರು. ಇ ಕಾರ್ಡು ವಿತರಿಸಿ ಮಾತನಾಡಿದ ಶಾಸಕರು ರಾಜ್ಯ ಸರಕಾರದಿಂದ ಕಾರ್ಮಿಕರಿಗ ವಿವಿಧ ಸೌಲಭ್ಯಗಳನ್ನು ನೀಡಲಾಗುತ್ತದೆ.ಆಕಸ್ಮಿಕಮರಣಾವಾದರೆ ರೂ ೧ ಲಕ್ಷ ಮತ್ತು ಅಪಘಾತದಲ್ಲಿ ಮರಣಹೊಂದಿದರೆ ೫ ಲಕ್ಷ ಸರಕಾರದಿಂದ ಪರಿಹಾರ ಸಿಗುತ್ತದೆ. ಕಾರ್ಮಿಕರು ತನ್ನ ಕಚೇರಿ ಮೂಲಕವೇ ನೋಂದಣಿ ಮಾಡಿಕೊಳ್ಳಬಹುದು. ಒಟ್ಟು ೩೦೦೦ ಮಂದಿಗೆ ಕಾರ್ಡು ವಿತರಣೆ ಮಾಡಲಾಗಿದೆ.

ಕಟ್ಟಡ ಕಾರ್ಮಿಕ ಮಕ್ಕಳಿಗೆ ವಿದ್ಯಾರ್ಥಿ ವೇತನವನ್ನು ಸರಕಾರ ನೀಡುತ್ತಿದೆ. ಕಳೆದ ಸಾಲಿನಲ್ಲಿ ಉತ್ತಮ ಅಂಕಪಡೆದ ವಿದ್ಯಾರ್ಥಿಗಳಿಗೆ ಲ್ಯಾಪ್‌ಟ್ಯಾಪ್ ಕೂಡಾ ವಿತರಣೆ ಮಾಡಲಾಗಿದೆ. ಕಟ್ಟಡ ಕಾರ್ಮಿಕರು ಈ ಸೌಲಭ್ಯವನ್ನು ಪಡೆದುಕೊಳ್ಳುವುದರ ಜೊತೆ ಇದುವರೆಗೂ ಕಾರ್ಡು ಮಾಡಿಸದವರು ಶಾಸಕರ ಕಚೇರಿಗೆ ಬಂದು ಉಚಿತವಾಗಿ ಕಾರ್ಡು ಮಾಡಿಸಿಕೊಳ್ಳಬಹುದಾಗಿದೆ ಎಂದು ಶಾಸಕರು ತಿಳಿಸಿದರು.

ಕಾರ್ಯಕ್ರಮದಲ್ಲಿ ಟ್ರಸ್ಟ್‌ನ ಮಾಧ್ಯಮ ಸಂಚಾಲಕ ಕೃಷ್ಣಪ್ರಸಾದ್ ಭಟ್ ಬೊಳ್ಳಾಯಿ ಉಪಸ್ಥಿತರಿದ್ದರು. ಸಿಬಂದಿ ರಚನಾ ಸ್ವಾಗತಿಸಿ ವಂದಿಸಿದರು.

 Share: | | | | |


ವಿಸ್ತಾರ ಏರ್ಲೈನ್ಸ್ ಸಂಸ್ಥೆಯಲ್ಲಿ ಉದ್ಯೋಗ ಆಮಿಷಕ್ಕೆ

Posted by Vidyamaana on 2023-10-13 04:46:47 |

Share: | | | | |


ವಿಸ್ತಾರ ಏರ್ಲೈನ್ಸ್ ಸಂಸ್ಥೆಯಲ್ಲಿ ಉದ್ಯೋಗ ಆಮಿಷಕ್ಕೆ

ಸುಳ್ಯ, ಅ.12: ವಿಸ್ತಾರ ಏರ್ಲೈನ್ಸ್ ಸಂಸ್ಥೆಯಲ್ಲಿ ಉದ್ಯೋಗ ತೆಗೆಸಿಕೊಡುವುದಾಗಿ ನಂಬಿಸಿ ಅಪರಿಚಿತ ವ್ಯಕ್ತಿಯೊಬ್ಬ ಮಹಿಳೆಯೊಬ್ಬರಿಂದ 13 ಲಕ್ಷಕ್ಕೂ ಹೆಚ್ಚು ಮೊತ್ತವನ್ನು ಪೀಕಿಸಿರುವ ಘಟನೆ ನಡೆದಿದ್ದು ವಂಚನೆಗೊಳಗಾದ ಮಹಿಳೆ ಬೆಳ್ಳಾರೆ ಠಾಣೆಯಲ್ಲಿ ದೂರು ನೀಡಿದ್ದಾರೆ. 


ಸುಳ್ಯ ತಾಲೂಕಿನ ಅಮರಪಡ್ನೂರು ಗ್ರಾಮದ ನಿವಾಸಿ ಯಶ್ವಿನಿ ಕೆಬಿ ಎಂಬವರು ವಂಚನೆಗೆ ಒಳಗಾದವರು. ಅಪರಿಚಿತ ವ್ಯಕ್ತಿ ಜುಲೈ 15ರಂದು ಫೋನ್ ಮಾಡಿದ್ದು ತನ್ನನ್ನು ವಿಸ್ತಾರ ಏರ್ಲೈನ್ಸ್ ಸಿಂಗಾಪುರ ಬ್ರಾಂಚ್, ದೇವನಹಳ್ಳಿ ಬೆಂಗಳೂರು ಸಂಸ್ಥೆಯಿಂದ ಎಂದು ಪರಿಚಯಿಸಿಕೊಂಡಿದ್ದ. ತಮ್ಮ ಸಂಸ್ಥೆಯಲ್ಲಿ ಉದ್ಯೋಗ ಖಾಲಿಯಿದ್ದು ಹೆಚ್ಚಿನ ಸಂಬಳ ಹಾಗೂ ಇನ್ನಿತರ ಸೌಲಭ್ಯಗಳು ನೀಡುವುದಾಗಿ ತಿಳಿಸಿದ್ದ. 


ಆದರೆ ಉದ್ಯೋಗ ತೆಗೆಸಿಕೊಡಲು ಹಣದ ಅಗತ್ಯವಿದೆಯೆಂದು ತಿಳಿಸಿದ್ದು ಪದೇ ಪದೇ ಕರೆ ಮಾಡಿ ಹಣ ಕೇಳಿ ಪಡೆದಿದ್ದಾನೆ. ಒಟ್ಟು ವಿವಿಧ ಹಂತಗಳಲ್ಲಿ 13,00,997 ರೂ. ಗಳನ್ನು ಆನ್ಲೈನ್ ಮೂಲಕ ಪಾವತಿಸಿದ್ದು ಉದ್ಯೋಗ ನೀಡದೇ ಮೋಸ ಮಾಡಿದ್ದಾರೆ ಎಂದು ಮಹಿಳೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಐಪಿಸಿ ಕಲಂ 419, 420 ಮತ್ತು ಐಟಿ ಆಕ್ಟ್ 66 (ಡಿ) ಅಡಿ  ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ‌

ಲಂಚ ಸ್ವೀಕರಿಸುವಾಗ ರೆಡ್‌ ಹ್ಯಾಂಡಾಗಿ ಲೋಕಾಯುಕ್ತ ಬಲೆಗೆ ಬಿದ್ದ PSI

Posted by Vidyamaana on 2024-05-30 21:54:10 |

Share: | | | | |


ಲಂಚ ಸ್ವೀಕರಿಸುವಾಗ ರೆಡ್‌ ಹ್ಯಾಂಡಾಗಿ ಲೋಕಾಯುಕ್ತ ಬಲೆಗೆ ಬಿದ್ದ PSI

ಮೈಸೂರು: ಲಂಚ ಸ್ವೀಕರಿಸುತ್ತಿದ್ದ‌ ಸಬ್ ಇನ್ಸ್ ಪೆಕ್ಟರ್ ರೆಡ್‌ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.ಮೈಸೂರಿನ ಕುವೆಂಪು ನಗರ ಠಾಣೆ ಸಬ್ ಇನ್ಸ್ ಪೆಕ್ಟರ್ ರಾಧಾ ಲೋಕಾಯುಕ್ತ ಬಲೆಗೆ ಸಿಕ್ಕಿಬಿದ್ದಿದ್ದಾರೆ.ಕ್ರಿಮಿನಲ್ ಕೇಸ್ ಒಂದರ ಸಂಬಂಧ ಕುವೆಂಪುನಗರದ ವ್ಯಕ್ತಿಯಿಂದ 25000 ರೂ ಹಣ ಪಡೆಯುತ್ತಿದ್ದಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ, ರಾಧಾ ಅವರನ್ನು ಬಂಧಿಸಿದ್ದಾರೆ.

ಅಕ್ರಮ ಆಸ್ತಿ ಗಳಿಕೆ:ಪುತ್ತೂರು ಮೂಲದ ತಹಶೀಲ್ದಾರ್ ಅಜಿತ್ ರೈ 7 ದಿನ ಲೋಕಾಯುಕ್ತ ಕಸ್ಟಡಿಗೆ

Posted by Vidyamaana on 2023-06-30 11:45:49 |

Share: | | | | |


ಅಕ್ರಮ ಆಸ್ತಿ ಗಳಿಕೆ:ಪುತ್ತೂರು ಮೂಲದ ತಹಶೀಲ್ದಾರ್ ಅಜಿತ್ ರೈ 7 ದಿನ ಲೋಕಾಯುಕ್ತ ಕಸ್ಟಡಿಗೆ

ಬೆಂಗಳೂರು: ಲೋಕಾಯುಕ್ತ ದಾಳಿ ವೇಳೆ ಅಕ್ರಮ ಆಸ್ತಿ, ಸಂಪತ್ತು ಪತ್ತೆಯಾದ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ತಹಶೀಲ್ದಾರ್ ಅಜಿತ್ ರೈ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಕೋರ್ಟ್ ಅವರನ್ನು ಹೆಚ್ಚಿನ ತನಿಖೆಗಾಗಿ ಏಳು ದಿನಗಳ ಕಾಲ ಲೋಕಾಯುಕ್ತ ಕಸ್ಟಡಿಗೆ ಒಪ್ಪಿಸಿ ಶುಕ್ರವಾರ ಆದೇಶ ನೀಡಿದೆ.

24 ಗಂಟೆಗಳಿಗೂ ಹೆಚ್ಚು ಕಾಲ ನಡೆದ ದಾಳಿ, ಶೋಧ ಕಾರ್ಯದ ವೇಳೆ ತಹಶೀಲ್ದಾರ್ ಅವರ ನಿವಾಸ ಮತ್ತು ಇತರ ಕಡೆಗಳಲ್ಲಿ ಆಸ್ತಿಗಳಲ್ಲಿ ಅಕ್ರಮ ಆಸ್ತಿ ಪತ್ತೆಯಾದ ಹಿನ್ನೆಲೆಯಲ್ಲಿ ಲೋಕಾಯುಕ್ತರು ಗುರುವಾರ ಅವರನ್ನು ಬಂಧಿಸಿದ್ದರು.

ಪುತ್ತೂರು: ಎಸ್.ಡಿ.ಪಿ.ಐ ಚುನಾವಣಾ ಉಸ್ತುವಾರಿಗಳ ಸಭೆ- ರಾಜ್ಯ ಚುನಾವಣಾ ಉಸ್ತುವಾರಿ ಅಪ್ಸ‌ ಕೊಡ್ಲಿಪೇಟೆ ಭಾಗಿ

Posted by Vidyamaana on 2023-03-08 09:36:51 |

Share: | | | | |


ಪುತ್ತೂರು: ಎಸ್.ಡಿ.ಪಿ.ಐ ಚುನಾವಣಾ ಉಸ್ತುವಾರಿಗಳ ಸಭೆ- ರಾಜ್ಯ ಚುನಾವಣಾ ಉಸ್ತುವಾರಿ ಅಪ್ಸ‌ ಕೊಡ್ಲಿಪೇಟೆ ಭಾಗಿ

ಪುತ್ತೂರು: ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಪುತ್ತೂರು ವಿಧಾನ ಸಭಾ ಕ್ಷೇತ್ರದ ಚುನಾವಣಾ ಉಸ್ತುವಾರಿಗಳ ಸಭೆ ಮಾ.6ರಂದು ಪಕ್ಷದ ಕಚೇರಿಯಲ್ಲಿ ನಡೆಯಿತು.ಸಭೆಯಲ್ಲಿ ಪಕ್ಷದ ರಾಜ್ಯ ಚುನಾವಣಾ ಉಸ್ತುವಾರಿ ಅಪ್ಪರ್ ಕೊಡ್ಲಿಪೇಟೆ, ಎಸ್.ಡಿ.ಪಿ.ಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಲತೀಫ್ ಪುತ್ತೂರು, ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನ್ವರ್ ಸಾದತ್ ಬಜತ್ತೂರು, ಜಿಲ್ಲಾ ಕಾರ್ಯದರ್ಶಿ ಶಾಕಿ‌ ಅಳಕೆಮಜಲು ಭಾಗವಹಿಸಿ ಚುನಾವಣಾ ಕಾರ್ಯತಂತ್ರದ ಬಗ್ಗೆ ಚರ್ಚೆ ನಡೆಸಿದರು.

ಸಭೆಯಲ್ಲಿ ಎಸ್.ಡಿ.ಪಿ.ಐ ಪುತ್ತೂರು ಕ್ಷೇತ್ರ ಸಮಿತಿ ಅಧ್ಯಕ್ಷರಾದ ಹಾಜಿ ಇಬ್ರಾಹಿಂ ಸಾಗರ್, ಕಾರ್ಯದರ್ಶಿ ಅಬ್ದುಲ್ ರಹೀಂ, ಸಂಘಟನಾ ಕಾರ್ಯದರ್ಶಿ ಅಶ್ರಫ್ ಬಾವು ಹಾಗೂ ಕ್ಷೇತ್ರದ ಎಲ್ಲಾ ಮಟ್ಟದ ನಾಯಕರುಗಳು ಭಾಗವಹಿಸಿದ್ದರು.

ಉಡುಪಿ: ವಾರದ ಬಳಿಕ ಪತ್ತೆಯಾಯ್ತು ಅರಶಿನಗುಂಡಿ ಜಲಪಾತಕ್ಕೆ ಬಿದ್ದ ಶರತ್ ಮೃತದೇಹ

Posted by Vidyamaana on 2023-07-30 07:59:14 |

Share: | | | | |


ಉಡುಪಿ: ವಾರದ ಬಳಿಕ ಪತ್ತೆಯಾಯ್ತು ಅರಶಿನಗುಂಡಿ ಜಲಪಾತಕ್ಕೆ ಬಿದ್ದ ಶರತ್ ಮೃತದೇಹ

ಕುಂದಾಪುರ: ಕೊಲ್ಲೂರಿನ ಅರಶಿನ ಗುಂಡಿ ಜಲಪಾತ ವೀಕ್ಷಣೆ ಮಾಡಲು ಹೋಗಿ ಜಾರಿ ಬಿದ್ದು ನೀರುಪಾಲಾಗಿದ್ದ ಭದ್ರಾವತಿ ಮೂಲದ ಯುವಕ ಶರತ್ ಮೃತದೇಹ ವಾರದ ಬಳಿಕ ಪತ್ತೆಯಾಗಿದೆ.

ಜುಲೈ 23ರಂದು ಕೊಲ್ಲೂರು ಸಮೀಪದ ಅರಣ್ಯ ಪ್ರದೇಶದಲ್ಲಿರುವ ಅರಶಿನ ಗುಂಡಿ ಜಲಪಾತ ನೋಡಲು 23 ವರ್ಷದ ಶರತ್ ಕುಮಾರ್ ಸ್ನೇಹಿತನೊಂದಿಗೆ ಹೋಗಿದ್ದರು. ಜಲಪಾತದ ಪಕ್ಕದ ಬಂಡೆ ಕಲ್ಲಿನ ಮೇಲೆ ನಿಂತಿದ್ದು ಅವರು ಜಾರಿ ನೀರಿಗೆ ಬಿದ್ದಿದ್ದರು.


ಶರತ್ ಹುಡುಕಾಟಕ್ಕೆ ಹಲವು ತಂಡಗಳು ವಾರಗಳ ಕಾಲ ಶ್ರಮ ವಹಿಸಿದ್ದವು. ಆದರೆ ತೀವ್ರ ಮಳೆ ಮತ್ತು ನೀರಿನ ರಭಸದ ಕಾರಣದಿಂದ ಕಾರ್ಯಾಚರಣೆಗೆ ಅಡ್ಡಿಯಾಗುತ್ತಿತ್ತು. ಇದೀಗ ವಾರದ ಬಳಿಕ ಜುಲೈ 30ರಂದು ಬಿದ್ದ ಜಾಗದಿಂದ ಹತ್ತು ಮೀಟರ್ ದೂರದಲ್ಲಿ ಶವ ಪತ್ತೆಯಾಗಿದೆ ಎಂದು ವರದಿಯಾಗಿದೆ.


ಕೊಲ್ಲೂರು ಪೊಲೀಸರು, ರಾಜ್ಯ ವಿಪತ್ತು ನಿರ್ವಹಣ ತಂಡ (ಎಸ್‌ಡಿಆರ್‌ಎಫ್‌), ಅರಣ್ಯ ಇಲಾಖೆ ಸಿಬಂದಿ, ಅಗ್ನಿ ಶಾಮಕ ದಳದ ಸಿಬಂದಿ, ಸ್ಥಳೀಯರು, ಶರತ್‌ ಅವರ ಸ್ನೇಹಿತರು, ಸಂಬಂಧಿಕರು ಪ್ರತೀ ದಿನ ಹಗಲಿಡೀ ನಿರಂತರ ಹುಡುಕಾಟ ನಡೆಸಿದ್ದರು. ಈಶ್ವರ್ ಮಲ್ಪೆ, ಜ್ಯೋತಿರಾಜ್ ತಂಡವೂ ಹುಡುಕಾಟ ನಡೆಸಿತ್ತುಶರತ್‌ ಪತ್ತೆಗಾಗಿ ಜಲಪಾತ ಹರಿದು ಬರುವ ಬೇರೆ ಬೇರೆ ಕಡೆಗಳಲ್ಲಿ ಸಾಗರ ಬಾರಕೂರು ಅವರ ನೇತೃತ್ವದಲ್ಲಿ ಡ್ರೋನ್‌ ಕೆಮರಾದ ಮೂಲಕ ಹುಡುಕುವ ಪ್ರಯತ್ನ ಮಾಡಲಾಗಿತ್ತು

ಮಹಿಳೆಯರೇ ಗಮನಿಸಿ: ಗೃಹಲಕ್ಷ್ಮಿ ಯೋಜನೆಯ ಮತ್ತೊಂದು ಅಪ್ಡೇಟ್ : ಮಿಸ್‌ ಮಾಡ್ದೇ ಓದಿ!

Posted by Vidyamaana on 2024-03-08 12:49:54 |

Share: | | | | |


ಮಹಿಳೆಯರೇ ಗಮನಿಸಿ: ಗೃಹಲಕ್ಷ್ಮಿ ಯೋಜನೆಯ ಮತ್ತೊಂದು ಅಪ್ಡೇಟ್ : ಮಿಸ್‌ ಮಾಡ್ದೇ ಓದಿ!

ಬೆಂಗಳೂರು : ಮಹಿಳೆಯರಿಗೆ ಸಿಹಿಸುದ್ದಿ ಸಿಕ್ಕಿದ್ದು, ಗೃಹಲಕ್ಷ್ಮಿ ಯೋಜನೆಯ ಇನ್ನೊಂದು ಬಿಗ್ ಅಪ್ಡೇಟ್ ಸುದ್ದಿ ಮಿಸ್ ಏನಾಪ್ಪಾ ಅಂದ್ರೆ ಗೃಹ ಲಕ್ಷ್ಮಿ ಯೋಜನೆಯ ಹಣ ಯಾರ ಖಾತೆಗೆ ಜಮಾ ಆಗುತ್ತಿಲ್ಲವೋ ಅವರ ಸಮಸ್ಯೆಯನ್ನು ಪರಿಹರಿಸಲು ಅಧಿಕಾರಿಗಳು ಜಿಲ್ಲೆಗಳಿಗೆ ಭೇಟಿ ನೀಡಲಿದ್ದಾರೆ.ಬ್ಯಾಂಕ್ ಖಾತೆಯಲ್ಲಿ ಸಮಸ್ಯೆ ಇದ್ದರೆ ಅಂತವರಿಗೆ ಅಂಚೆ ಇಲಾಖೆಯಲ್ಲಿ ಖಾತೆ ತೆರೆಸಿ ಆ ಖಾತೆಗೆ ಹಣ ಜಮಾ ಮಾಡಲು ಅಧಿಕಾರಿಗಳು ನಿರ್ಧರಿಸಿದ್ದಾರೆ.

ಇನ್ನು ಗೃಹಿಣಿಯ ಸಮಸ್ಯೆಯ ಪರಿಹಾರಕ್ಕೆ ಅಧಿಕಾರಿಗಳನ್ನು ನೇಮಿಸಿರುವುದರ ಜೊತೆಗೆ ಆಶಾ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಸಹಾಯಕಿಯರು ಗೃಹಿಣಿಯರ ಜೊತೆ ನಿಂತು ಅವರ ಸಮಸ್ಯೆ ನಿವಾರಿಸಿ ಹಣ ಜಮಾ ಮಾಡಿಕೊಡುವಂತೆ ಸರ್ಕಾರ ಸೂಚಿಸಿದೆ. ಆಯಾ ಜಿಲ್ಲೆಯ ಆಶಾ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಸಮಸ್ಯೆ ಇದ್ದವರ ಜೊತೆಗೆ ಹೋಗಿ ಸಮಸ್ಯೆ ಪರಿಹರಿಸಲಿದ್ದಾರೆ.

ಆದಷ್ಟು ಬೇಗ ಗೃಹ ಲಕ್ಷ್ಮಿ ಯೋಜನೆಯ ಎಲ್ಲ ಲೋಪದೋಷಗಳು ನಿವಾರಣೆ ಆಗಲಿದೆ. ಫಲಾನುಭವಿಗಳ ಸಮಸ್ಯೆಯನ್ನು ಪರಿಹರಿಸಲು ಸದ್ಯ ಸರ್ಕಾರವೇ ಮುಂದೆ ಬಂದಿದೆ. ಫಲಾನುಭವಿಗಳ ಸಮಸ್ಯೆ ಪರಿಹಾರವಾದ ಎಲ್ಲ ಕಂತುಗಳ ಹಣವನ್ನು ಸರ್ಕಾರ ಒಂದೇ ಬಾರಿಗೆ ಜಮಾ ಮಾಡಲಿದೆ ಎನ್ನಲಾಗುತ್ತಿದೆ.



Leave a Comment: