ಕಾಲೇಜು ವಿದ್ಯಾರ್ಥಿಯಿಂದ ಸೆಕ್ಯೂರಿಟಿ ಗಾರ್ಡ್ ಬರ್ಬರ ಹತ್ಯೆ

ಸುದ್ದಿಗಳು News

Posted by vidyamaana on 2024-07-03 18:55:10 | Last Updated by Vidyamaana on 2024-07-03 18:55:10

Share: | | | | |


ಕಾಲೇಜು ವಿದ್ಯಾರ್ಥಿಯಿಂದ ಸೆಕ್ಯೂರಿಟಿ ಗಾರ್ಡ್ ಬರ್ಬರ ಹತ್ಯೆ

ಬೆಂಗಳೂರು : ಕಾಲೇಜು ವಿದ್ಯಾರ್ಥಿಯೊಬ್ಬ ಸೆಕ್ಯೂರಿಟಿ ಗಾರ್ಡ್ ಓರ್ವರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಂಗಳೂರಿನ ಅಮೃತಹಳ್ಳಿಯಲ್ಲಿ ನಡೆದಿದೆ.

ಅಮೃತಹಳ್ಳಿಯ ಸಿಂಧಿ ಕಾಲೇಜಿನಲ್ಲಿ ಈ ಘಟನೆ ನಡೆದಿದ್ದು, ಜೈಕಿಸನ್ ರಾಯ್ ಕೊಲೆಯಾದ ಸೆಕ್ಯೂರಿಟಿ ಗಾರ್ಡ್. ಭಾರ್ಗವ್ ಎಂಬ ವಿದ್ಯಾರ್ಥಿ ಚಾಕುವಿನಿಂದ ಇರಿದು ಸೆಕ್ಯೂರಿಟಿ ಗಾರ್ಡ್ ನನ್ನು ಹತ್ಯೆ ಮಾಡಿದ್ದಾನೆ.

ಸ್ಥಳದಲ್ಲೇ ಸೆಕ್ಯೂರಿಟಿ ಗಾರ್ಡ್ ಮೃತಪಟ್ಟಿದ್ದಾರೆ.

ಕೊಲೆಗೆ ಕಾರಣವೇನು?


ಇಂದು ಸಿಂಧಿ ಕಾಲೇಜಿನಲ್ಲಿ ಕಾರ್ಯಕ್ರಮ ಇತ್ತು. ಈ ವೇಳೆ ಆರೋಪಿ ವಿದ್ಯಾರ್ಥಿ ಭಾರ್ಗವ್, ಕಾಲೇಜಿಗೆ ಕುಡಿದು ಬಂದಿದ್ದಾನೆ. ಈ ಹಿನ್ನಲೆ ಸೆಕ್ಯೂರಿಟಿಗಾರ್ಡ್, ಭಾರ್ಗವ್​​​ನನ್ನು ಕಾಲೇಜಿನ ಒಳಗೆ ಬಿಡಲು ನಿರಾಕರಿಸಿದ್ದಾರೆ. ಇದರಿಂದ ಸೆಕ್ಯೂರಿಟಿ ಗಾರ್ಡ್​ ಹಾಗೂ ವಿದ್ಯಾರ್ಥಿ ಮಧ್ಯೆ ಗಲಾಟೆ ಆಗಿದೆ. ಬಳಿಕ ಅಂಗಡಿಗೆ ಹೋಗಿ ಚಾಕು ಖರೀದಿಸಿದ್ದ ಭಾರ್ಗವ್, ನೇರವಾಗಿ ಬಂದು ಸೆಕ್ಯೂರಿಟಿ ಗಾರ್ಡ್ ಎದೆಗೆ ಐದಾರು ಬಾರಿ ಇರಿದಿದ್ದಾನೆ. ಅದು ಹೃದಯಕ್ಕೆ ಹೊಕ್ಕು, ಸ್ಥಳದಲ್ಲೇ ಕೊನೆಯುಸಿರೆಳೆದಿದ್ದ.

 Share: | | | | |


ಮೆಸ್ಕಾಂ ತುರ್ತು ಕಾಮಗಾರಿ: ಇಂದು (ಜೂನ್ 17) ವಿದ್ಯುತ್ ನಿಲುಗಡೆ

Posted by Vidyamaana on 2023-06-16 23:14:10 |

Share: | | | | |


ಮೆಸ್ಕಾಂ ತುರ್ತು ಕಾಮಗಾರಿ: ಇಂದು (ಜೂನ್ 17) ವಿದ್ಯುತ್ ನಿಲುಗಡೆ

ಪುತ್ತೂರು: ತುರ್ತು ಕಾಮಗಾರಿ ನಿಮಿತ್ತ 110/33/11ಕೆವಿ ಪುತ್ತೂರು ವಿದ್ಯುತ್‌ ಕೇಂದ್ರದಿಂದ ಹೊರಡುವ ಕಬಕ, ಕೆದಿಲ ಮತ್ತು ನಗರ ಫೀಡರ್‌ನಲ್ಲಿ ಜೂ.17ರಂದು ಪೂರ್ವಾಹ್ನ ಗಂಟೆ 10ರಿಂದ ಅಪರಾಹ್ನ 2ರ ವರೆಗೆ ವಿದ್ಯುತ್‌ ನಿಲುಗಡೆ ಮಾಡಲಾಗುವುದು. ಆದುದರಿಂದ 110/33/11 ಕೆ.ವಿ ಮತ್ತೂರು ವಿದ್ಯುತ್‌ ಕೇಂದ್ರದಿಂದ ಹೊರಡುವ ಈ ಮೇಲೆ ತಿಳಿಸಿದ ಫೀಡರ್‌ನಿಂದ ವಿದ್ಯುತ್‌ ಸರಬರಾಜಾಗುವ ನಗರ, ಕಬಕ, ಕೊಡಿಪ್ಪಾಡಿ, ಬನ್ನೂರು, ಬಲ್ನಾಡು, ನವನಗರ, ವಿವೇಕಾನಂದ ಕಾಲೇಜು ಪರಿಸರ, ಪಡ್ಡಾಯೂರು ಗ್ರಾಮದ ವಿದ್ಯುತ್ ಬಳಕೆದಾರರು ಗಮನಿಸಿ ಸಹಕರಿಸಬೇಕೆಂದು ಮೆಸ್ಕಾಂ, ನಗರ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ.

ಪುಣಚ: ನೇಣು ಬಿಗಿದು ಕೊಲ್ಲಪದವು ನಿವಾಸಿ ಶ್ರೀಕೃಷ್ಣ ಆತ್ಮಹತ್ಯೆ

Posted by Vidyamaana on 2023-10-20 12:28:22 |

Share: | | | | |


ಪುಣಚ: ನೇಣು ಬಿಗಿದು ಕೊಲ್ಲಪದವು ನಿವಾಸಿ ಶ್ರೀಕೃಷ್ಣ ಆತ್ಮಹತ್ಯೆ

ವಿಟ್ಲ : ನೇಣು ಬಿಗಿದು ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಟ್ಲ ಸಮೀಪದ ಪುಣಚದಲ್ಲಿ ನಡೆದಿದೆ.

 ಪುಣಚ ಗ್ರಾಮದ ಕೊಲ್ಲಪದವು ಸಮೀಪ ಚೆಕ್ಕುತ್ತಿ  

ನಿವಾಸಿ ಶ್ರೀ ಕೃಷ್ಣ (26) ಆತ್ಮಹತ್ಯೆ ಮಾಡಿಕೊಂಡ ಯುವಕ.

ಶ್ರೀ ಕೃಷ್ಣ ಸೆಂಟ್ರಿಂಗ್ ಕೆಲಸ ನಿರ್ವಹಿಸುತ್ತಿದ್ದು, ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.

ಮೃತರು ತಾಯಿ, ಸಹೋದರ, ಸಹೋದರಿ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.


ವಿಟ್ಲ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಹೀಗೇಕೆ ಮಾಡಿದೆ ಎಂದು ಕೂಗುತ್ತಾ ಪ್ರಿಯತಮೆಯನ್ನು ಬರ್ಬರವಾಗಿ ಕೊಂದ ರೋಹಿತ್

Posted by Vidyamaana on 2024-06-19 13:56:15 |

Share: | | | | |


ಹೀಗೇಕೆ ಮಾಡಿದೆ ಎಂದು ಕೂಗುತ್ತಾ ಪ್ರಿಯತಮೆಯನ್ನು ಬರ್ಬರವಾಗಿ ಕೊಂದ ರೋಹಿತ್

ಮುಂಬೈ :: ಆಘಾತಕಾರಿ ಘಟನೆಯೊಂದಲ್ಲಿ ವ್ಯಕ್ತಿಯೋರ್ವ ತನ್ನ ಮಾಜಿ ಪ್ರಿಯತಮೆಯನ್ನು ನಡುರೆಸ್ತೆಯಲ್ಲಿ ಸ್ಪ್ಯಾನರ್​ನೊಂದಿಗೆ ಭೀಕರವಾಗಿ ಹತ್ಯೆ ಮಾಡಿದ್ದಾನೆ. ಘಟನೆಯು ಮಹಾರಾಷ್ಟ್ರದ ರಾಜಧಾನಿ ಮುಂಬೈನ ವಸೈಯ ಪೂರ್ವ ಚಿಂಚ್ಪಾಡಾದಲ್ಲಿ ನಡೆದಿದ್ದು, ಕೊಲೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ಮೃತರನ್ನು ಆರತಿ ಯಾದವ್​ ಎಂದು ಗುರುತಿಸಲಾಗಿದ್ದು, ಆರೋಪಿ ರೋಹಿತ್​ ಯಾದವ್​ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬೆಳಗ್ಗೆ 8:30ರ ಸುಮಾರಿಗೆ ಈ ಘಟನೆ ನಡೆದಿದ್ದು, ಜನರು ಸುಮ್ಮನೆ ನಿಂತಿರುವುದನ್ನು ವೈರಲ್​ ಆಗಿರುವ ವಿಡಿಯೋದಲ್ಲಿ ನೋಡಬಹುದಾಗಿದೆ

ಬಿಜೆಪಿ ಅಭ್ಯರ್ಥಿಗೆ ಎಂಟು ಬಾರಿ ಮತದಾನ ಮಾಡಿದ ವ್ಯಕ್ತಿ; ವಿಡಿಯೋ ವೈರಲ್

Posted by Vidyamaana on 2024-05-20 14:34:59 |

Share: | | | | |


ಬಿಜೆಪಿ ಅಭ್ಯರ್ಥಿಗೆ ಎಂಟು ಬಾರಿ ಮತದಾನ ಮಾಡಿದ ವ್ಯಕ್ತಿ; ವಿಡಿಯೋ ವೈರಲ್

ಲಕ್ನೋ: ವ್ಯಕ್ತಿಯೊಬ್ಬ ಮತದಾನ ಮಾಡುವಾಗ ಬಿಜೆಪಿ ಅಭ್ಯರ್ಥಿಗೆ ಹಲವು ಬಾರಿ ಮತದಾನ ಮಾಡಿದ್ದು, ಅದನ್ನು ವಿಡಿಯೋ ಮಾಡಿ ಹರಿಬಿಟ್ಟಿದ್ದು ವೈರಲ್ ಆದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಕೃತ್ಯವೆಸಗಿದ ಯುವಕನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿಯನ್ನು ರಾಜನ್ ಸಿಂಗ್ ಎಂದು ಗುರುತಿಸಲಾಗಿದೆ. ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷ ಸೇರಿದಂತೆ ವಿರೋಧ ಪಕ್ಷಗಳ ಹಲವು ನಾಯಕರು ಎಕ್ಸ್ ನಲ್ಲಿ ವಿಡಿಯೋ ಹಂಚಿ ಆಗ್ರಹಿಸಿದ ಬಳಿಕ ಆರೋಪಿಯನ್ನು ಬಂಧಿಸಲಾಯಿತು.

ನಟ ಯಶ್ ಬರ್ತಡೇ ಬ್ಯಾನರ್​ ಕಟ್ಟುವಾಗ ವಿದ್ಯುತ್​ ಪ್ರವಹಿಸಿ ಮೂವರು ಯುವಕರು ಮೃತ್ಯು

Posted by Vidyamaana on 2024-01-08 12:22:13 |

Share: | | | | |


ನಟ ಯಶ್ ಬರ್ತಡೇ ಬ್ಯಾನರ್​ ಕಟ್ಟುವಾಗ ವಿದ್ಯುತ್​ ಪ್ರವಹಿಸಿ ಮೂವರು ಯುವಕರು ಮೃತ್ಯು

ಗದಗ: ನಟ ಯಶ್ ಬರ್ತಡೇ ಹಿನ್ನೆಲೆ ಹುಟ್ಟಹಬ್ಬದ ಶುಭಾಶಯ ಕೋರುವ ಬ್ಯಾನರ್​ ಕಟ್ಟುವಾಗ ವಿದ್ಯುತ್​ ಪ್ರವಹಿಸಿ ಮೂವರು ಅಭಿಮಾನಿಗಳು ಮೃತಪಟ್ಟ ಘಟನೆ ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದಿದೆ.


ಹನಮಂತ ಹರಿಜನ (21), ಮುರಳಿ ನಡವಿನಮನಿ (20), ನವೀನ್ ಗಾಜಿ (19) ಮೃತ ಯುವಕರು.


ಇನ್ನು ಘಟನೆಯಲ್ಲಿ ಮಂಜುನಾಥ್ ಹರಿಜನ, ದೀಪಕ ಹರಿಜನ, ಪ್ರಕಾಶ ಮ್ಯಾಗೇರಿ ಎಂಬುವರಿಗೆ ಗಂಭೀರ ಗಾಯಗಳಾಗಿವೆ.


ತಮ್ಮ ಇಷ್ಟದ ನಟನ ಹುಟ್ಟುಹಬ್ಬವನ್ನು ಗ್ರಾಮದಲ್ಲಿ ಭರ್ಜರಿಯಾಗಿ ಮಾಡಬೇಕೆಂದು ತಡರಾತ್ರಿ ನಟ ಯಶ್​ನ ಹುಟ್ಟುಹಬ್ಬದ ಬ್ಯಾನರ್ ಕಟ್ಟಲು ಹೋಗಿ ಮೂವರು ಪ್ರಾಣ ಕಳೆದುಕೊಂಡಿದ್ದಾರೆ.

ಫೆ.18 : ಒರುಂಬಾಲು ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಮಹೋತ್ಸವ

Posted by Vidyamaana on 2023-02-17 05:34:28 |

Share: | | | | |


ಫೆ.18 : ಒರುಂಬಾಲು ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಮಹೋತ್ಸವ

ಕಡಬ : ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾಮದ ಒರುಂಬಾಲು ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಮಹೋತ್ಸವ ಫೆ.18 ಶನಿವಾರ ವಿವಿಧ ವೈದಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ನಡೆಯಲಿದೆ.

ಮಹಾಶಿವರಾತ್ರಿ ಪ್ರಯುಕ್ತ ದೇವಸ್ಥಾನದಲ್ಲಿ ವಿವಿಧ ಭಜನಾ ತಂಡಗಳಿಂದ ಸಂಜೆ 6 ಕ್ಕೆ ಕುಣಿತ ಭಜನೆ,  ಮಹಾಪೂಜೆ  ಮತ್ತು ರಾತ್ರಿ 9ಕ್ಕೆ ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ 12 ಕ್ಕೆ ಮಹಾಶಿವರಾತ್ರಿಯ ವಿಶೇಷ ಪೂಜೆ ನಡೆಯಲಿದೆ.

ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವರ ಕೃಪೆಗೆ ಪಾತ್ರರಾಗಬೇಕಾಗಿ ದೇವಸ್ಥಾನ ಪ್ರಕಟಣೆಯಲ್ಲಿ ತಿಳಿಸಿದೆ.



Leave a Comment: