ಮಂಗಳೂರಿನಲ್ಲಿ ಚಡ್ಡಿಗ್ಯಾಂಗ್ ಹಾವಳಿ - ಕೋಡಿಕಲ್ ನಲ್ಲಿ ಮನೆಯೊಂದರ ಕಿಟಕಿ ಗ್ರಿಲ್ಸ್ ಕತ್ತರಿಸಿದ ಕಳ್ಳತನಕ್ಕೆ ಯತ್ನಿಸಿದ ಕಳ್ಳರು

ಸುದ್ದಿಗಳು News

Posted by vidyamaana on 2024-07-08 08:23:43 |

Share: | | | | |


ಮಂಗಳೂರಿನಲ್ಲಿ ಚಡ್ಡಿಗ್ಯಾಂಗ್ ಹಾವಳಿ - ಕೋಡಿಕಲ್ ನಲ್ಲಿ ಮನೆಯೊಂದರ ಕಿಟಕಿ ಗ್ರಿಲ್ಸ್ ಕತ್ತರಿಸಿದ ಕಳ್ಳತನಕ್ಕೆ ಯತ್ನಿಸಿದ ಕಳ್ಳರು

 ಮಂಗಳೂರು : ಮಂಗಳೂರಿನಲ್ಲಿ ಒಂದೆಡೆ ಮುಂಗಾರು ಮಳೆ ಅಬ್ಬರವಿದ್ದರೆ ಇನ್ನೊಂದೆಡೆ ಕಳ್ಳರ ಭಯ ಪ್ರಾರಂಭವಾಗಿದ್ದು, ಕಳ್ಳತನಕ್ಕೆ ಹೆಸರು ಮಾಡಿರುವ ಚೆಡ್ಡಿ ಗ್ಯಾಂಗ್ ನಗರದಲ್ಲಿ ಕಾಣಿಸಿಕೊಂಡಿದೆ. ಅಲ್ಲದೆ ಕೋಡಿಕಲ್ ನಲ್ಲಿ ನಿನ್ನೆ ರಾತ್ರಿ ಮನೆಯೊಂದರ ಕಿಟಕಿ ಗ್ರಿಲ್ಸ್ ಕತ್ತರಿಸಿ ಕಳ್ಳರು ಮನೆಗೆ ನುಗ್ಗಿ ಕಳ್ಳತನಕ್ಕೆ ವಿಫಲ ಯತ್ನ ನಡೆಸಿದ ಘಟನೆ ನಡೆದಿದೆ.ಈ ಕೃತ್ಯವನ್ನು ಹೊರ ರಾಜ್ಯದ ಚಡ್ಡಿ ಗ್ಯಾಂಗ್ ನಡೆಸಿರುವ ಬಗ್ಗೆ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.

ಕಳ್ಳರು ಮನೆಯ ಕಿಟಕಿ ಕತ್ತರಿಸುವುದಕ್ಕೂ ಮುನ್ನ ಕೋಡಿಕಲ್ ಪರಿಸರದಲ್ಲಿ ಅಡ್ಡಾಡುವುದು ಸಿಸಿಟಿವಿಯಲ್ಲಿ ದಾಖಲಾಗಿದೆ. ಐವರಿದ್ದ ಕಳ್ಳರ ತಂಡ ಮೆಲ್ಲನೆ ಹೆಜ್ಜೆ ಇಡುತ್ತಾ ಕೈಯಲ್ಲಿ ಟಾರ್ಚ್ ಬೆಳಕು ಹರಿಸಿ ಕಳವಿಗೆ ಮನೆ ಹುಡುಕುತ್ತಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ‌. ಚಡ್ಡಿ ಹಾಕಿದ್ದ ಕಳ್ಳರ ಗ್ಯಾಂಗ್ ಸದಸ್ಯರು ಬರುತ್ತಿದ್ದಾಗಲೇ ನಾಯಿಗಳು ಜೋರಾಗಿ ಬೊಗಳಿದ್ದು ಅವುಗಳತ್ತ ಕಳ್ಳರು ಕಲ್ಲೆಸೆದು ಓಡಿಸಿದ್ದಾರೆ.

ಕಿಟಕಿ ಕತ್ತರಿಸಿ ಒಂದು ಮನೆಯ ಒಳಗೆ ನುಗ್ಗಿದ್ದ ಕಳ್ಳರು ಬೆಲೆಬಾಳುವ ವಸ್ತುಗಳಿಗಾಗಿ ಜಾಲಾಡಿದ್ದಾರೆ. ಆದರೆ ಅವರಿಗೆ ಚಿಲ್ಲರೆ ನಗದು ಬಿಟ್ಟರೆ ಯಾವುದೇ ವಸ್ತುಗಳು ಸಿಕ್ಕಿಲ್ಲ. ವಿಶೇಷ ಅಂದ್ರೆ, ಮನೆಮಂದಿ ಮಲಗಿದ್ದಾಗಲೇ ಕಳ್ಳರು ನುಗ್ಗಿ ಹುಡುಕಾಟ ಮುಗಿಸಿ ಸದ್ದಿಲ್ಲದೆ ಹೊರಕ್ಕೆ ತೆರಳಿದ್ದಾರೆ. ಮನೆಯವರಿಗೆ ಬೆಳಗಾದಾಗಲೇ ಕಳವು ಕೃತ್ಯ ತಿಳಿದುಬಂದಿತ್ತು.

 Share: | | | | |


ಲೋಕಸಭಾ ಚುನಾವಣೆಗೆ ಬೆಳ್ತಂಗಡಿ ನಗರ ಬ್ಲಾಕ್ ಗೆ ವೀಕ್ಷಕರಾಗಿ ಎಚ್. ಮಹಮ್ಮದ್ ಅಲಿ ನೇಮಕ

Posted by Vidyamaana on 2023-11-24 12:41:28 |

Share: | | | | |


ಲೋಕಸಭಾ ಚುನಾವಣೆಗೆ ಬೆಳ್ತಂಗಡಿ ನಗರ ಬ್ಲಾಕ್ ಗೆ ವೀಕ್ಷಕರಾಗಿ ಎಚ್. ಮಹಮ್ಮದ್ ಅಲಿ ನೇಮಕ

ಪುತ್ತೂರು : ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಗೆಲುವಿಗಾಗಿ ಕಾರ್ಯತಂತ್ರ ರೂಪಿಸಲು ಹಾಗೂ ಪಕ್ಷ ಸಂಘಟನೆಗಾಗಿ, ಸೂಕ್ತ ಸಲಹೆ ಸೂಚನೆ ನೀಡಿ ಇವೆಲ್ಲದರ ಮೇಲ್ವಿಚಾರಣೆ ನೋಡಿಕೊಳ್ಳುವುದಕ್ಕಾಗಿ ಬೆಳ್ತಂಗಡಿ ನಗರ ಬ್ಲಾಕ್ ಗೆ ಚುನಾವಣೆ ವೀಕ್ಷಕರಾಗಿ ಎಚ್ ಮಹಮ್ಮದ್ ಅಲಿಯವರನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ನೇಮಕಗೊಳಿಸಿದ್ದಾರೆ.


ಮಹಮ್ಮದ್ ಅಲಿ ಯವರು ಜಿಲ್ಲಾ ಕಾಂಗ್ರೆಸ್ ನ ಪ್ರದಾನ ಕಾರ್ಯದರ್ಶಿಯಾಗಿ ಹಾಗೂ ಪುತ್ತೂರು ನಗರ ಕಾಂಗ್ರೆಸ್ ಅಧ್ಯಕ್ಷರಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿರುತ್ತಾರೆ.

ರಾಜ್ಯ ಸರ್ಕಾರದ ವಿರುದ್ಧ ವಿಧಾನಸೌಧದ ಎದುರು ಬಿಜೆಪಿ ಪ್ರತಿಭಟನೆ

Posted by Vidyamaana on 2024-02-07 14:56:48 |

Share: | | | | |


ರಾಜ್ಯ ಸರ್ಕಾರದ ವಿರುದ್ಧ ವಿಧಾನಸೌಧದ ಎದುರು ಬಿಜೆಪಿ ಪ್ರತಿಭಟನೆ

ಬೆಂಗಳೂರು: ಬರ ಪರಿಸ್ಥಿತಿ ನಿಭಾಯಿಸುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ ಮತ್ತು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ವಿಧಾನಸೌಧದ ಗಾಂಧಿ ಪ್ರತಿಮೆಯ ಮುಂಭಾಗದಲ್ಲಿ ಬಿಜೆಪಿ ವತಿಯಿಂದ ಬುಧವಾರ ಪ್ರತಿಭಟನೆ ನಡೆಯಿತು.


ಪ್ರತಿಭಟನೆಯಲ್ಲಿ ಬಿಜೆಪಿ ಶಾಸಕರು, ವಿಧಾನಪರಿಷತ್ ಸದಸ್ಯರು ಭಾಗವಹಿಸಿದರು. ‘ರೈತರಿಗೆ ಬರ ಪರಿಹಾರ ನೀಡದ, ಅಭಿವೃದ್ಧಿ ವಿರೋಧಿ, ಜನ ವಿರೋಧಿ ರಾಜ್ಯ ಸರ್ಕಾರವಿದು. ಶಾಸಕರಿಗೆ ಅನುದಾನ ನೀಡುವ ವಿಚಾರದಲ್ಲೂ ಸರ್ಕಾರ ತಾರತಮ್ಯ ಮಾಡುತ್ತಿದೆ ಎಂದು ಆರೋಪಿಸಿದರು.

ಪುತ್ತಿಲ ಅಭಿಮಾನಿ ಬಳಗದ ವಾಟ್ಸಪ್ ಗ್ರೂಪ್ ನಲ್ಲಿ ತೇಜೋವಧೆ, ಕೋಮು ಪ್ರಚೋದನಕಾರಿ ಸಂದೇಶ : ಗೌರವಾಧ್ಯಕ್ಷರಿಂದ ಬಂಟ್ವಾಳ ನಗರ ಠಾಣೆಗೆ ದೂರು

Posted by Vidyamaana on 2023-06-01 16:23:14 |

Share: | | | | |


ಪುತ್ತಿಲ ಅಭಿಮಾನಿ ಬಳಗದ ವಾಟ್ಸಪ್ ಗ್ರೂಪ್ ನಲ್ಲಿ ತೇಜೋವಧೆ, ಕೋಮು ಪ್ರಚೋದನಕಾರಿ ಸಂದೇಶ : ಗೌರವಾಧ್ಯಕ್ಷರಿಂದ ಬಂಟ್ವಾಳ  ನಗರ ಠಾಣೆಗೆ ದೂರು

ಬಂಟ್ವಾಳ : ಅರುಣ್ ಪುತ್ತಿಲ ಅಭಿಮಾನಿ ಬಳಗ ಎಂಬ ವಾಟ್ಸಪ್ ಗ್ರೂಪ್ ನಲ್ಲಿ ಅದರ ಗ್ರೂಪ್ ಲಿಂಕನ್ನು ಬಳಸಿಕೊಂಡು ಗ್ರೂಪ್ ಸೇರಿದ ವ್ಯಕ್ತಿಯೋರ್ವ ಪುತ್ತೂರಿನಲ್ಲಿ ಹಲ್ಲೆಗೊಳಗಾದ ವ್ಯಕ್ತಿಗಳ ಖಾಸಗಿ ಫೋಟೋಗಳನ್ನು ಬಳಸಿಕೊಂಡು ಅರುಣ್ ಪುತ್ತಿಲರ ತೇಜೋವಧೆಯ ಜೊತೆಗೆ ಕೋಮು ಪ್ರಚೋದನೆಗೆ ಪ್ರೇರೆಪಿಸಿರುವುದಾಗಿ ಆರೋಪಿಸಿ ಬಂಟ್ವಾಳ ನಗರಠಾಣೆಗೆ ದೂರು ನೀಡಿದ ಘಟನೆ ನಡೆದಿದೆ.ಅರುಣ್ ಪುತ್ತಿಲ ಅಭಿಮಾನಿ ಸಂಘದ ಗೌರವಾಧ್ಯಕ್ಷರಾದ ರಾಜಶೇಖರ ಕೋಟ್ಯಾನ್ ಎಂಬವರು ಈ ಬಗ್ಗೆ ಠಾಣೆಗೆ ದೂರು ನೀಡಿದ್ದಾರೆ.ಬಂಟ್ವಾಳ ತಾಲೂಕಿನಲ್ಲಿ ಅರುಣ್ ಕುಮಾರ್ ಪುತ್ತಿಲರ ಅಸಂಖ್ಯಾತ ಅಭಿಮಾನಿ ಬಳಗವಿದ್ದು, ಇದಕ್ಕೆ ಪೂರಕವಾಗಿ ಅರುಣ್ ಕುಮಾರ್ ಪುತ್ತಿಲ ಅಭಿಮಾನಿ ಬಳಗ ಬಂಟ್ವಾಳ ಎಂಬ ವಾಟ್ಸಪ್ ಗ್ರೂಪ್ ಇದ್ದು, ಈ ಗ್ರೂಪ್ನಲ್ಲಿ ಸಮಾಜದ ಅಶಕ್ತರ ಏಳಿಗೆಗೆ ದುಡಿಯುವ ಧ್ಯೇಯೋದ್ದೇಶವನ್ನು ಇಟ್ಟುಕೊಂಡು ಸದ್ರಿ ವಾಟ್ಸಪ್ ಗ್ರೂಪ್ ನ ಅಡ್ಮಿನ್ ಗಳಲ್ಲಿ ಒಬ್ಬನಾಗಿರುತ್ತೇನೆ.

ಅದರಂತೆ ಸದ್ರಿ ಗ್ರೂಪ್ ನ ಇನ್ ವೈಟ್ ಲಿಂಕನ್ನು ಬಳಸಿಕೊಂಡು “ಯಾ ಅಲ್ಲಾಹ್” ಎಂಬ ನಾಮಾಂಕಿತ ಹೊಂದಿರುವ ವ್ಯಕ್ತಿಯು ಮೊಬೈಲ್ ನಂಬರ್ ನಿಂದ ಇತ್ತೀಚಿಗೆ ಪುತ್ತೂರಿನಲ್ಲಿ ಪೊಲೀಸರಿಂದ ದೌರ್ಜನ್ಯಕ್ಕೊಳಗಾದ ವ್ಯಕ್ತಿಗಳ ಖಾಸಗಿ ಭಾಗಗಳ ಫೋಟೋಗಳನ್ನು ಬಳಸಿಕೊಂಡು ಅರುಣ್ ಕುಮಾರ್ ಪುತ್ತಿಲರಿಗೆ ಅವಮಾನವಾಗುವ ರೀತಿಯಲ್ಲಿ ಹಾಗೂ ಹಿಂದೂ ಧರ್ಮದ ಶ್ರೇಷ್ಠತೆಯನ್ನು ಎತ್ತಿ ಸಾರುವ ಭಗವಾಧ್ವಜದ ಚಿತ್ರವನ್ನು ಜೋಡಿಸಿ ಸದ್ರಿ ಫೋಟೋಗಳ ಜೊತೆ ನಿಂದನಾತ್ಮಕ ಬರಹಗಳನ್ನು ನಮೂದಿಸಿ ಗ್ರೂಪ್ ಗೆ ಕಳುಹಿಸಿದ್ದು, ಅಲ್ಲದೆ ಕೆಲವೊಂದು ಸ್ವರ ಸಂದೇಶಗಳನ್ನು ಕಳುಹಿಸಿ ಹಿಂದೂ ಧರ್ಮಕ್ಕೆ ಧಕ್ಕೆಯನ್ನುಂಟು ಮಾಡುವ ಹಾಗೂ ಕೋಮು ಪ್ರಚೋದನೆಯನ್ನು ಉಂಟು ಮಾಡಿರುತ್ತಾರೆ. ಈ ರೀತಿ ಕೃತ್ಯವೆಸಗಿದ ವ್ಯಕ್ತಿಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ತಿಳಿಸಲಾಗಿದೆ.

ಈ ವೇಳೆ ವಕೀಲರಾದ ಶಿವಾನಂದ್, ಸುಮಿತ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಯುವಶಕ್ತಿ ಸೇವಾಪಥದ ದ್ವಿತೀಯ ವಾರ್ಷಿಕೋತ್ಸವ ಸೇವಾ ಸಂಭ್ರಮ ಸಂಪನ್ನ

Posted by Vidyamaana on 2024-03-29 11:47:20 |

Share: | | | | |


ಯುವಶಕ್ತಿ ಸೇವಾಪಥದ ದ್ವಿತೀಯ ವಾರ್ಷಿಕೋತ್ಸವ ಸೇವಾ ಸಂಭ್ರಮ ಸಂಪನ್ನ

ಬಂಟ್ವಾಳ :ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯಲ್ಲಿ  ಸೇವಾಕಾರ್ಯದಲ್ಲಿ  ಸಮಾಜಕ್ಕೆ ನಿರಂತರವಾಗಿ ಸ್ಪಂದಿಸುತ್ತಿರುವ ಯುವಶಕ್ತಿ ಸೇವಾಪಥವು  ತನ್ನ ದ್ವೀತಿಯ ವಾರ್ಷಿಕೋತ್ಸವವನ್ನು  "ಸೇವಾ ಸಂಭ್ರಮ" ಎಂಬ ವಿನೂತನ ಪರಿಕಲ್ಪನೆಯ ಮೂಲಕ ಕಟ್ಟದ ಪಡ್ಪು ಅರುಣೋದಯ ಸಭಾಭವನದಲ್ಲಿ ಆಚರಿಸಿಕೊಂಡಿತು .

ಸಮಾಜ ಬಂಧುಗಳಿಂದ ಸಂಗ್ರಹಿಸಿ ಜಿಲ್ಲೆಯ ವಿವಿಧ ಭಾಗದ ಒಟ್ಟು 11 ಜನ ಅನಾರೋಗ್ಯ ಪೀಡಿತ ಫಲಾನುಭವಿಗಳಿಗೆ ನಾಲ್ಕು ಲಕ್ಷ ರೂಗಳ ಆರ್ಥಿಕ ಸಹಕಾರ ನೀಡುವುದರ ಮೂಲಕ ಯುವಶಕ್ತಿ ಸೇವಾಪಥವು ಶಕ್ತ ಸಮಾಜ ಮತ್ತು ಅಶಕ್ತ ಸಮಾಜದ ನಡುವಿನ ಕೊಂಡಿಯೆನಿಸಿತು.


ಹೊಸ ಟ್ರೆಂಡ್ ಸೃಷ್ಟಿಸಿದ ಮೋದಿ ಎಐ ವಾಯ್ಸ್ - ಮೋದಿ ವಾಯ್ಸನಲ್ಲಿ ಕನ್ನಡ ಹಾಡು ಕೂಡ ಕೇಳಬಹುದು : ಹೇಗೆ ಗೊತ್ತಾ?

Posted by Vidyamaana on 2023-10-05 06:42:29 |

Share: | | | | |


ಹೊಸ ಟ್ರೆಂಡ್ ಸೃಷ್ಟಿಸಿದ ಮೋದಿ ಎಐ ವಾಯ್ಸ್ - ಮೋದಿ ವಾಯ್ಸನಲ್ಲಿ ಕನ್ನಡ ಹಾಡು ಕೂಡ ಕೇಳಬಹುದು : ಹೇಗೆ ಗೊತ್ತಾ?

ಆಧುನಿಕ ಕಾಲಘಟ್ಟದಲ್ಲಿ ಕೃತಕ ಬುದ್ಧಿಮತ್ತೆ ಎಲ್ಲೆಡೆ ಸದ್ದು ಮಾಡುತ್ತಿದ್ದು, ಇದೀಗ ಪ್ರಸಿದ್ಧರ ಧ್ವನಿಗಳನ್ನು ನಕಲು ಮಾಡಲು ಕೂಡ ಎಐ ಬಳಕೆಯಾಗುತ್ತಿದೆ. ಅದರಲ್ಲೂ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲರ್‌ಗಳಿಗೆ, ಮೆಮ್‌ ಪೇಜ್‌ಗಳಿಗೆ ಇದೊಂದು ಹೊಸ ಅಸ್ತ್ರವಾಗಿದೆ.ಪ್ರಸ್ತುತ ಪ್ರಧಾನಿ ನರೇಂದ್ರ ಮೋದಿ ಅವರ ಎಐ ಆಧಾರಿತ ಧ್ವನಿ ಬಳಸಿದ ವಿಡಿಯೋಗಳು ಟ್ರೋಲ್‌ ಆಗುತ್ತಿದೆ. ಈಚೆಗೆ ಭಾರತದಲ್ಲಿ ನಡೆದ ಜಿ 20 ಶೃಂಗಸಭೆಯಲ್ಲಿ ಪಾಲ್ಗೊಂಡ ವಿವಿಧ ದೇಶಗಳ ಮಹಿಳಾ ಅಧಿಕಾರಿಗಳ ಜತೆ ಮೋದಿ ನಡೆಸಿದ ಮಾತುಕತೆಯ ವಿಡಿಯೋಗೆ ಎಐ ವಾಯ್ಸ್‌ ಬಳಸಿ ಟ್ರೋಲ್ ಮಾಡಲಾಗಿದೆ. ಇವರಲ್ಲದೆ ಇನ್ನೂ ಹಲವು ಖ್ಯಾತರ ವಿಡಿಯೋಗಳಿಗೆ ಅವರ ಧ್ವನಿಯನ್ನು ನಕಲು ಮಾಡಿ ಟ್ರೋಲ್ ಮಾಡುತ್ತಿದ್ದಾರೆ.


ಗೂಗಲ್‌ನಲ್ಲಿ ಎಐ ವಾಯ್ಸ್‌ ಚೇಂಜರ್ ಅಂತಾ ಟೈಪಿಸಿದರೆ ಸಾವಿರಾರು ವಾಯ್ಸ್ ಎಐ ವೆಬ್‌ಸೈಟ್‌ಗಳು ಬರುತ್ತವೆ. ಅಲ್ಲದೇ ಆ್ಯಪ್ ಗಳು ಲಭ್ಯವಿವೆ. ಯಾರಿಗೆ ಯಾವ ಮೂಲ ಧ್ವನಿಯಲ್ಲಿ ಯಾರ ಎಐ ಬೇಕಾಗಿರುತ್ತದೋ ಅದನ್ನು ಆಯ್ಕೆ ಮಾಡಿಕೊಂಡರೆ ಅದು ಸಿದ್ಧವಾಗುತ್ತದೆ. ಬಳಕೆದಾರರು ಇವುಗಳನ್ನು ಬಳಸಿಕೊಂಡು ತಮಗೆ ಬೇಕಾದವರ ಧ್ವನಿಗಳನ್ನು ನಕಲು ಮಾಡಬಹುದು.ಉದಾಹರಣೆಗೆ ಕನ್ನಡದ ಉಸಿರೇ.. ಉಸಿರೇ ಹಾಡನ್ನು ಪ್ರಧಾನಿ ಮೋದಿ ಅವರ ಧ್ವನಿಯಲ್ಲಿ ಕೇಳಬೇಕಾದರೆ ಉಸಿರೇ ಉಸಿರೇ ಹಾಡಿನ ಕ್ಲಿಪ್ ಅಥವಾ ಲಿಂಕ್ ಅನ್ನು ಹಾಕಿ ಮೋದಿ ಧ್ವನಿಗೆ ಬದಲಿಸಬಹುದು.ಇದನ್ನು ಮನರಂಜನಾತ್ಮಕವಾಗಿ ಮಾಡಲು ಶುರುಮಾಡಿದ್ದು, ಇದೀಗ ಮೋಸದಾಟಕ್ಕೂ ಬಳಕೆಯಾಗುತ್ತಿರುವುದು ಬೆಳಕಿಗೆ ಬಂದಿದೆ.

ಮಣಿಪುರ ಹಿಂಸಾಚಾರ ಖಂಡಿಸಿ ಕೆಥೋಲಿಕ್ ಸಭಾ ಮಂಗಳೂರು ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ

Posted by Vidyamaana on 2023-07-28 03:52:06 |

Share: | | | | |


ಮಣಿಪುರ ಹಿಂಸಾಚಾರ ಖಂಡಿಸಿ ಕೆಥೋಲಿಕ್ ಸಭಾ ಮಂಗಳೂರು ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ

ಮಂಗಳೂರು, ಜುಲೈ 27: ಮಣಿಪುರದಲ್ಲಿ ಸರಣಿ ಅತ್ಯಾಚಾರ, ಮಹಿಳೆಯರ ಬೆತ್ತಲೆ ಮೆರವಣಿಗೆ, ಹತ್ಯಾಕಾಂಡ ವಿಚಾರದಲ್ಲಿ ಕೇಂದ್ರ ಮತ್ತು ಮಣಿಪುರ ಸರ್ಕಾರದ ನಿರ್ಲಕ್ಷ್ಯವನ್ನು ಖಂಡಿಸಿ ಮಂಗಳೂರಿನಲ್ಲಿ ಕೆಥೋಲಿಕ್ ಸಭಾ ವತಿಯಿಂದ ಬೃಹತ್ ಪ್ರತಿಭಟನೆ ನಡೆಯಿತು. ನಗರದ ಟೌನ್ ಹಾಲ್ ಮುಂಭಾಗದಲ್ಲಿ ಸೇರಿದ ಎರಡು ಸಾವಿರಾರು ಜನರು, ಬಿಜೆಪಿ ಸರಕಾರದ ಇಬ್ಬಗೆ ನೀತಿಯ ಬಗ್ಗೆ ಖಂಡನೆ, ಧಿಕ್ಕಾರ ಕೂಗಿದರು.


ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ರಾಯ್ ಕ್ಯಾಸ್ಟಲಿನೋ, ಮಣಿಪುರದಲ್ಲಿ ಕುಕ್ಕಿ ಮತ್ತು ಮೈಥಿ ಸಮುದಾಯಗಳ ನಡುವೆ ಬಿಕ್ಕಟ್ಟು, ಕಲಹ 40 ವರ್ಷಗಳಿಂದಲೂ ನಡೀತಿದೆ. ಆದರೆ, ಅದನ್ನೀಗ ರಾಜಕೀಯಕ್ಕೆ ಬಳಸುತ್ತಿದ್ದಾರೆ. ಮೊನ್ನೆ ಮಹಿಳೆಯರ ಬೆತ್ತಲೆ ಮೆರವಣಿಗೆ ಹೊರಬಂದಾಗ ಇಡೀ ದೇಶ ಕಂಬನಿ ಹಾಕಿತ್ತು. ಆದರೆ ಒಬ್ಬರು ಮಾತ್ರ ಕನಿಕರ ತೋರಲಿಲ್ಲ. ನಿರ್ಲಕ್ಷ್ಯ ನೋಡಿದರೆ, ಕ್ರೈಸ್ತರನ್ನು ಹೊರಗಟ್ಟುವ ಷಡ್ಯಂತ್ರ ಇರುವಂತೆ ಕಾಣುತ್ತಿದೆ. ಇಂಟರ್ನೆಟ್ ಬ್ಯಾನ್ ಮಾಡಿ, ಅಲ್ಲಿನ ಹೆಣ್ಮಕ್ಕಳ ಚಿತ್ರಹಿಂಸೆ, ಹತ್ಯೆ ಘಟನೆಗಳು ಹೊರಬರದಂತೆ ಮಾಡಿದ್ದಾರೆ. ಪ್ರಧಾನಿಯ 56 ಇಂಚಿನ ಎದೆಯ ಬಗ್ಗೆ ಟೆಲಿಗ್ರಾಫ್ ಪತ್ರಿಕೆ ಮೊಸಳೆಯ ಫೋಟೋ ತೋರಿಸಿ ಅಣಕಿಸಿದೆ. ಡಬಲ್ ಇಂಜಿನ್ ಸರ್ಕಾರದಿಂದ ಲಾಭ ಎನ್ನುವವರು ಮಣಿಪುರದಲ್ಲಿ ಯಾಕೆ ಮೂರು ತಿಂಗಳಿನಿಂದ ಗಲಭೆ ಹತ್ತಿಕ್ಕಲು ಸಾಧ್ಯವಾಗಿಲ್ಲ. 70 ದಿನಗಳ ಇಂಟರ್ನೆಟ್ ಸ್ಥಗಿತ ಕೊನೆಗೊಂಡಾಗಲೇ ಒಂದು ವಿಡಿಯೋ ಹೊರಬಂದಿತ್ತು. ಆ ವಿಡಿಯೋ ಉದ್ದೇಶಪೂರ್ವಕ ಹೊರಬಿಟ್ಟಿದ್ದು, ಇಡೀ ದೇಶದ ಜನರನ್ನು ಭಯ ಪಡಿಸುವಂತೆ ಮಾಡಿದ್ದಾರೆ ಎಂದು ಹೇಳಿದರು.ಇದೇ ವೇಳೆ, ಮಾತನಾಡಿದ ಸಾಮಾಜಿಕ ಕಾರ್ಯಕರ್ತೆ ವಿದ್ಯಾ ದಿನಕರ್, 56 ಇಂಚಿನ ಎದೆಗಾರರಿಗೆ ದೇಶದ ಬಗ್ಗೆ ಕಾಳಜಿ ಇಲ್ಲ. ಮಣಿಪುರದ ಜನರು ಊಟಕ್ಕಾಗಿ ಪರದಾಡುತ್ತಿದ್ದರೆ ಪ್ರಧಾನಿಯ ಮನಸ್ಸು ಕರಗಲಿಲ್ಲ. ಸಂಸತ್ತಿನಲ್ಲಿ ಹೇಳಿಕೆ ಕೊಡಿ ಎಂದರೂ, ನಿರ್ಲಕ್ಷ್ಯ ತೋರುತ್ತಾರೆ. ಇದರ ನಡುವೆ, ಮುಂದಿನ ಪ್ರಧಾನಿ ನಾನೇ ಎಂದು ಅಬ್ಬರಿಸುತ್ತಾರೆ. 2024ರಲ್ಲಿ ಜನರು ಈ ರೀತಿಯ ಫ್ಯಾಸಿಸ್ಟ್ ಸರಕಾರವನ್ನು ಬದಲಾಯಿಸಬೇಕು ಎಂದು ಹೇಳಿದರು.ಉಲೇಮಾ ಹಿಂದ್ ಸಂಘಟನೆಯ ಮಹಮ್ಮದ್ ದಾರಿಮಿ ಮಾತನಾಡಿ, ನಾವು ರಾಮಾಯಣ, ಮಹಾಭಾರತ ಓದಿಕೊಂಡು ಬೆಳೆದವರು. ದುಶ್ಶಾಸನ ದ್ರೌಪದಿಯ ಸೀರೆ ಎಳೆದಿದ್ದೇ ಮಹಾಭಾರತಕ್ಕೆ ಕಾರಣವಾಯಿತು. ಅದೇ ಕಾರಣಕ್ಕೆ ಶ್ರೀಕೃಷ್ಣ ಧರ್ಮದ ಪರವಾಗಿ ನಿಂತು ಅಧರ್ಮಿಗಳನ್ನು ವಧಿಸುವಂತೆ ಮಾಡಿದ. ರಾಮಾಯಣ, ಮಹಾಭಾರತ ಬರೀಯ ಹಿಂದುಗಳದ್ದಲ್ಲ. ಅದು ಈ ದೇಶದ ಅಸ್ಮಿತೆ. ನಾವೀಗ ಈ ದೇಶದ ನೈಜ ಹಿಂದುಗಳನ್ನು ಉಳಿಸುವುದಕ್ಕಾಗಿ ಹೋರಾಡಬೇಕಿದೆ. ಸಾವಿರಾರು ವರ್ಷಗಳಿಂದ ಈ ದೇಶದಲ್ಲಿರುವ ಹಿಂದುಗಳನ್ನು ಹಿಂದುತ್ವದ ಹೆಸರಲ್ಲಿ ವಿಭಜಿಸಲು, ಧ್ರುವೀಕರಣ ಮಾಡಲು ಹೊರಟಿದ್ದಾರೆ. ಕ್ರೈಸ್ತ, ಮುಸ್ಲಿಮರನ್ನು ಎತ್ತಿ ಕಟ್ಟಿ ಮತ ಗಳಿಸುತ್ತಿದ್ದಾರೆ. ನಾವೀಗ ಹಿಂದುಗಳ ಪರ ನಿಲ್ಲುವ ಅವಶ್ಯಕತೆಯಿದೆ. ನೈಜ ಹಿಂದು ಯಾವತ್ತೂ ಕೇಡು ಬಗೆಯಲ್ಲ. ಉದಾರಿ ವ್ಯಕ್ತಿತ್ವದವರು ಎಂದು ಹೇಳಿದರು.ಪ್ರತಿಭಟನಾ ಸಭೆಯಲ್ಲಿ ಮಣಿಪುರದ ಜನರು ನಮ್ಮವರೇ, ಅವರೊಂದಿಗೆ ನಾವಿದ್ದೇವೆ ಎನ್ನುವ ಘೋಷಣೆ ಕೂಗಿದರು. ಅಲ್ಲದೆ, ನೂರಾರು ಪ್ಲೇಕಾರ್ಡ್ ಹಿಡಿದು ಮಣಿಪುರದ ಪರವಾಗಿ ಘೋಷಣೆ ಕೂಗಿದರು. ಮಂಗಳೂರು ಧರ್ಮಪ್ರಾಂತ್ಯದ ಎಲ್ಲ ಚರ್ಚ್ ಗಳಿಂದಲೂ ಧರ್ಮಗುರು ಸಹಿತ ಭಗಿನಿಯರು, ಶಿಕ್ಷಕರು, ವಿದ್ಯಾರ್ಥಿಗಳು ಸೇರಿದ್ದರು.



Leave a Comment: