ಅಪ್ರಾಪ್ತಗೆ ಲೈಂಗಿಕ ಕಿರುಕುಳ ಆರೋಪ. ಬೆಳಿಯೂರುಕಟ್ಟೆ ನಿವಾಸಿ ಪ್ರಸಾದ್ ಬಂಧನ

ಸುದ್ದಿಗಳು News

Posted by vidyamaana on 2024-07-24 10:52:54 |

Share: | | | | |


ಅಪ್ರಾಪ್ತಗೆ ಲೈಂಗಿಕ ಕಿರುಕುಳ ಆರೋಪ. ಬೆಳಿಯೂರುಕಟ್ಟೆ ನಿವಾಸಿ ಪ್ರಸಾದ್ ಬಂಧನ

ಪುತ್ತೂರು : ಅಪ್ರಾಪ್ತಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಬೆಳಿಯೂರುಕಟ್ಟೆ ನಿವಾಸಿಯೋರ್ವನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆಂದು ತಿಳಿದು ಬಂದಿದೆ.

ಬೆಳಿಯೂರುಕಟ್ಟೆ ನಿವಾಸಿ ಅಪ್ರಾಪ್ತೆಗೆ ವಿವಾಹಿತ ಪ್ರಸಾದ್ ಎಂಬ ವ್ಯಕ್ತಿ ಲೈಂಗಿಕ ಕಿರುಕುಳ ನೀಡಿದ್ದಾಗಿ ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದುಕೊಂಡಿರುವುದಾಗಿ ತಿಳಿದು ಬಂದಿದೆ.

 Share: | | | | |


ಪುತ್ತೂರಿನ ಯೂಟ್ಯೂಬ‌ರ್ ಧನರಾಜ್ ನಟನೆಯ ಅಬ್ಬಬ್ಬ ಸಿನಿಮಾ ಸೂಪರ್ ಹಿಟ್

Posted by Vidyamaana on 2024-02-23 04:49:06 |

Share: | | | | |


ಪುತ್ತೂರಿನ  ಯೂಟ್ಯೂಬ‌ರ್ ಧನರಾಜ್ ನಟನೆಯ ಅಬ್ಬಬ್ಬ ಸಿನಿಮಾ ಸೂಪರ್ ಹಿಟ್

ಪುತ್ತೂರು : ಜೀವನದ ಜಂಜಾಟಗಳನ್ನು ಮರೆತು ಎರಡೂವರೆ ಗಂಟೆ ಸಂಪೂರ್ಣ ಮನರಂಜನೆ, ಹೊಟ್ಟೆ ತುಂಬಾ ನಗು ಬೇಕಾಂತಿದ್ದರೇ ಕನ್ನಡದಲ್ಲೊಂದು ಸದಬಿರುಚಿಯ ಸಿನಿಮಾ ಬಂದಿದೆ. ಆ ದಿನಗಳು ಖ್ಯಾತಿಯ ಕೆ ಎಂ ಚೈತನ್ಯ ನಿರ್ದೆಶಿಸಿರುವ ಅಬ್ಬಬ್ಬ ಸಿನಿಮಾ (Abbabba Film) ಸಿಲ್ವರ್ ಸ್ಟೀನ್ ಗೆ ಅಪ್ಪಳಿಸಿ ವಾರ ಕಳೆದಿದ್ದು ಪ್ರೇಕ್ಷಕರಿಂದ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ.ಹುಡುಗರ ಹಾಸ್ಟೇಲ್ ನಲ್ಲಿ ನಡೆಯುವ ಘಟನೆಗಳೇ ಈ ಸಿನಿಮಾದ ಕಥಾ ಹಂದರ. ಇದಕ್ಕೆ ನವಿರಾದ ಹಾಸ್ಯ ಬೆರೆಸಿ ನಿರೂಪಿಸಲಾಗಿದೆ. ಈ ಹಾಸ್ಟೇಲ್ ಗೆ ಹುಡುಗಿಯೊಬ್ಬಳ ಪ್ರವೇಶದೊಂದಿಗೆ ಕಥೆ ಟ್ವಿಸ್ಟ್ ಕಾಣಿಸುತ್ತದೆ. ಇಡಿ ಚಿತ್ರ ನಗೆ ಬುಗ್ಗೆ ಇವರೆಲ್ಲರ ಜತೆಗೆ ಪುತ್ತೂರಿನ ಸೆನ್ಸೆಷನಲ್ ಯೂಟ್ಯೂಬರ್,ಕಾಮಿಡಿ ಜತೆಗೆ ಸಂದೇಶ ನೀಡುವುದನ್ನು ಕರಗತ ಮಾಡಿಕೊಂಡಿರುವ ಧನರಾಜ್ ಈ ಚಿತ್ರದಲ್ಲಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ನಕ್ಕು ನಗಿಸುತ್ತಾರೆ.


ಹೊಸಬರ ಈ ಪ್ರಯತ್ನ ವೃತ್ತಿಪರ ಕಲಾವಿದರಿಗೆ ಸಾಟಿ ಹೊಡೆಯುವಂತಿದೆ. ಹೀಗಾಗಿ ಸಿನಿಮಾ ನೋಡಲು ಬಂದ ಪ್ರೇಕ್ಷಕರ ಹಣಕ್ಕೆ ಮೋಸ ಆಗುವುದಿಲ್ಲ.ಇದರ ಜತೆಗೆ ಶುಕ್ರವಾರ ಅಬ್ಬಬ್ಬ ವೀಕ್ಷಿಸುವ ಪ್ರೇಕ್ಷಕರಿಗೆ ವಿಶೇಷ ರಿಯಾಯಿತಿಯಿದೆ. ಪುತ್ತೂರು ಜಿ ಎಲ್ ವನ್ ಮಾಲ್ ನಲ್ಲಿ ಪ್ರದರ್ಶನಗೊಳ್ಳುತ್ತಿರುವ ಬೆಳಗ್ಗಿನ (ಫೆ.23) ಶೋ ಟಿಕೆಟ್ ದರ ಕೇವಲ ರೂ.99 ಇರಲಿದೆ.ನೂರು ವರ್ಷ ತುಂಬಿರುವ ಈ ಹಾಸ್ಟೆಲ್‌ಗೆ ಮೋಹಿನಿ ಕಾಟ ಬೇರೆ ಇದೆ. ಆದರೆ, ಇದನ್ನು ಹಾಸ್ಟೆಲ್‌ನ ಫಾದರ್ ಮಾತ್ರ ನಂಬಲ್ಲ. ಕಾಣದ ಮೋಹಿನಿ, ಕಾಣುವ ಮೋಹನಾಂಗಿ ಇಬ್ಬರ ಆಟ ಹಾಸ್ಟೆಲ್‌ನ ಗೇಟು ದಾಟುವುದರೊಂದಿಗೆ ಸಿನಿಮಾ ಮುಗಿಯುತ್ತದೆ. ಈ ಮೋಹಿನಿ ಯಾರು, ಹುಡುಗರ ಹಾಸ್ಟೆಲ್‌ನಿಂದ ಹುಡುಗಿ ತಪ್ಪಿಕೊಂಡ್ರಾ ಎನ್ನುವ ಪ್ರಶ್ನೆಗಳು ನಿಮ್ಮಲ್ಲಿ ಹುಟ್ಟಿಕೊಂಡರೆ ನೀವು ಸೀದಾ ಹೋಗಿ ಸಿನಿಮಾ ನೋಡಿ.ಧನರಾಜ್, ಅವಿನಾಶ್, ಅಜಯ್ ರಾಜ್, ಅಮೃತಾ, ವಿಜಯ್ ಚೆಂಡೂರ್ ಹೀಗೆ ಎಲ್ಲರು ನಗಿಸುವ ಕೆಲಸ ಮಾಡುತ್ತಾರೆ. ಫಾದರ್ ಪಾತ್ರಧಾರಿ ಶರತ್ ಲೋಹಿತಾಶ್ವ ಅವರದ್ದು ಮಾತ್ರ ಘನ ಗಂಭೀರ ಪಾತ್ರ. ಹಾಸ್ಟೆಲ್‌ ಹುಡುಗರು ಬೇಕಾಗಿದ್ದಾರೆ ಚಿತ್ರದ ತಮ್ಮನಂತೆ ಅಬ್ಬಬ್ಬ ಚಿತ್ರದ ಹಾಸ್ಟೆಲ್ ಕತೆ..!

ಅಡ್ಕಸ್ಥಳ : ಕೆ.ಎಸ್.ಆರ್.ಟಿ.ಸಿ ಬಸ್ ಹಾಗೂ ಪಿಕಪ್ ವಾಹನದ ನಡುವೆ ಅಪಘಾತ

Posted by Vidyamaana on 2023-09-26 13:02:56 |

Share: | | | | |


ಅಡ್ಕಸ್ಥಳ : ಕೆ.ಎಸ್.ಆರ್.ಟಿ.ಸಿ ಬಸ್ ಹಾಗೂ ಪಿಕಪ್ ವಾಹನದ ನಡುವೆ ಅಪಘಾತ

ಕಾಸರಗೋಡು: ರಸ್ತೆ ಬದಿ ನಿಲ್ಲಿಸಿದ್ದ ಪಿಕಪ್ ಗೆ ಕೆಎಸ್ಸಾರ್ಟಿಸಿ ಬಸ್ ಢಿಕ್ಕಿ ಹೊಡೆದ ಪರಿಣಾಮ ಪಿಕಪ್‌ ಚಾಲಕ ಮೃತ ಪಟ್ಟ ಘಟನೆ ಕೇರಳ ಕರ್ನಾಟಕ ಗಡಿ ಪ್ರದೇಶವಾದ ಅಡ್ಕಸ್ಥಳದ ಸಮೀಪ ಮಂಗಳವಾರ ನಡೆದಿದೆ.


ಮೃತ ಚಾಲಕನನ್ನು ಪೆರ್ಲ ಮಣಿಯಂಪಾರೆ ಪಜ್ಜನದ ಮುಸ್ತಫಾ ( 43) ಎಂದು ಗುರುತಿಸಲಾಗಿದೆ. ಬಸ್ ನ ಎದುರಿನಿಂದ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲೆತ್ನಿಸಿದಾಗ ರಸ್ತೆ ಬದಿ ನಿಲ್ಲಿಸಿದ್ದ ಅಡಿಕೆ ಗಿಡ ಸಾಗಾಟದ ಪಿಕಪ್ ಗೆ ಬಸ್ಸು ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.


ಘಟನೆಯಲ್ಲಿ ತಲೆಗೆ ಗಂಭೀರ ಗಾಯಗೊಂಡ ಮುಸ್ತಫಾ ಅವರನ್ನು ಮಂಗಳೂರಿನ ಆಸ್ಪತ್ರೆಗೆ ಕೊಂಡೊಯ್ದರೂ ಜೀವ ಉಳಿಸಲಾಗಲಿಲ್ಲ ಎಂದು ತಿಳಿದು ಬಂದಿದೆ.


ಪಿಕಪ್ ವ್ಯಾನ್ ನಲ್ಲಿದ್ದ ಇನ್ನೋರ್ವ ಗಾಯಗೊಂಡಿದ್ದು, ಬದಿಯಡ್ಕ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದಾರೆ.

ಉಡುಪಿ: ಆನ್‌ಲೈನ್ ವಂಚನೆ ಪ್ರಕರಣ : ಆರೋಪಿ ಬಂಧನ, ಲಕ್ಷಾಂತರ ರೂ. ನಗದು ವಶ

Posted by Vidyamaana on 2024-09-05 07:48:51 |

Share: | | | | |


ಉಡುಪಿ: ಆನ್‌ಲೈನ್ ವಂಚನೆ ಪ್ರಕರಣ : ಆರೋಪಿ ಬಂಧನ, ಲಕ್ಷಾಂತರ ರೂ. ನಗದು ವಶ

ಉಡುಪಿ, ಸೆ.5: ಆನ್‌ಲೈನ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಓರ್ವ ಆರೋಪಿಯನ್ನು ಬಂಧಿಸಿರುವ ಉಡುಪಿ ಸೆನ್ ಪೊಲೀಸರು, ಲಕ್ಷಾಂತರ ರೂ. ನಗದು ವಶಪಡಿಸಿಕೊಂಡಿದ್ದಾರೆ. 

ಒಡಿಶಾ ರಾಜ್ಯದ ಗಂಜಮ್ ಜಿಲ್ಲೆಯ ಕೊನಪಾಲದ ವಿಶಾಲ್ ಕೋನಪಾಲ (30) ಬಂಧಿತ ಆರೋಪಿ. ಈತನಿಂದ 1,56,100ರೂ

ಮೋದಿ ಮತ್ತೊಮ್ಮೆ ಪ್ರಧಾನಿಯಾದ ಸಂಭ್ರಮ ಅನ್ನದಾನ ಮಾಡಿದ ಪಂಚಮುಖಿ ಫ್ರೆಂಡ್ಸ್

Posted by Vidyamaana on 2024-06-15 11:22:21 |

Share: | | | | |


ಮೋದಿ ಮತ್ತೊಮ್ಮೆ ಪ್ರಧಾನಿಯಾದ ಸಂಭ್ರಮ  ಅನ್ನದಾನ ಮಾಡಿದ ಪಂಚಮುಖಿ ಫ್ರೆಂಡ್ಸ್

ಪುತ್ತೂರು: ಕೋರ್ಟ್ ರಸ್ತೆ ಪಂಚಮುಖಿ ಫ್ರೆಂಡ್ಸ್ ವತಿಯಿಂದ ಬಿರುಮಲೆ ಪ್ರಜ್ಞಾ ಆಶ್ರಮದಲ್ಲಿ ಶುಕ್ರವಾರ ಮಧ್ಯಾಹ್ನ ಅನ್ನದಾನ ಸೇವೆ ಜರಗಿತು.


ನ್ಯಾಷನಲ್ ಬ್ಯಾಂಕ್ ಗಳಿಗ ಆಯ್ತು – ಈಗ ಸಹಕಾರಿ ಬ್ಯಾಂಕ್ ಗಳಿಗೂ ದೋಖಾ..!?

Posted by Vidyamaana on 2023-09-25 12:32:36 |

Share: | | | | |


ನ್ಯಾಷನಲ್ ಬ್ಯಾಂಕ್ ಗಳಿಗ ಆಯ್ತು – ಈಗ ಸಹಕಾರಿ ಬ್ಯಾಂಕ್ ಗಳಿಗೂ ದೋಖಾ..!?

ಬೆಂಗಳೂರು : ದೇಶದ ವಿವಿಧ ನ್ಯಾಷನಲ್ ಬ್ಯಾಂಕ್ ಗಳಲ್ಲಿ ಕೋಟಿ ಕೋಟಿ ಸಾಲ ಪಡೆದಂತ ಅನೇಕರು ದೇಶದಿಂದಲೇ ಪರಾರಿಯಾಗಿದ್ದಾರೆ. ಈಗ ರಾಜ್ಯದ ವಿವಿಧ ಸಹಕಾರಿ ಬ್ಯಾಂಕ್ ಗಳಲ್ಲಿ ಸಾಲ ಪಡೆದಿದ್ದಂತ 2,888 ಮಂದಿ ನಾಪತ್ತೆಯಾಗಿರೋದಾಗಿ ತಿಳಿದು ಬಂದಿದೆ.ರಾಜ್ಯದ ಪಟ್ಟಣ ಸಹಕಾರಿ ಬ್ಯಾಂಕ್, ಜಿಲ್ಲಾ ಸಹಕಾರಿ ಕೇಂದ್ರ ಬ್ಯಾಂಕ್(DCC) ಸೇರಿದಂತೆ ವಿವಿಧ ಸಹಕಾರಿ ಬ್ಯಾಂಕ್ ಗಳಿಂದ 1,404 ಕೋಟಿ ಸಾಲವನ್ನು ಪಡೆದಿದ್ದಂತ 2,888 ಮಂದಿ ಸಾಲ ತೀರಿಸಲು ಆಗದೇ ನಾಪತ್ತೆಯಾಗಿರೋ ಶಾಕಿಂಗ್ ವಿಚಾರ ಬಯಲಾಗಿದೆ.ಇನ್ನೂ ಹೀಗೆ 1,404 ಕೋಟಿ ಸಾಲ ಪಡೆದು ನಾಪತ್ತೆಯಾಗಿರುವಂತ 2,888 ಮಂದಿಯಲ್ಲಿ ಬೆಂಗಳೂರಿನ ನೆಟ್ಟಕಲ್ಲಪ್ಪ ವೃತ್ತದಲ್ಲಿರುವ ಸಹಕಾರಿ ಬ್ಯಾಂಕಿನದ್ದೇ ಸಿಂಹಪಾಲು ಆಗಿದೆ. ಈ ಹಿನ್ನಲೆಯಲ್ಲಿ ಈ ಬ್ಯಾಂಕ್ ಎವರ್ ಗ್ರೀನ್ ಕ್ರೆಡಿಟ್ ಎಂಬುದಾಗಿ ಹಾಗೂ 1,400 ಕೋಟಿ ರೂ.ಸಾಲವನ್ನು ಅನುತ್ಪಾದಕ ಆಸ್ತಿನಷ್ಟವೆಂದೂ ಘೋಷಿಸಿದೆ.


ರಾಜ್ಯದ ಇತರೆ ಸಹಕಾರಿ ಬ್ಯಾಂಕ್ ಗಳಲ್ಲಿ 25 ರಿಂದ 30 ವರ್ಷಗಳಿಂದ ಸಾಲಗಾರರು, ತಾವು ಪಡೆದಿರುವ ಸಾಲ ಪಾವತಿಸದಿರುವ ಪರಿಣಾಮ ಅಸಲುಗಿಂತ ಬಡ್ಡಿಯೇ ಜಾಸ್ತಿಯಾಗಿದೆ. ಕೆಲವರು ತಪ್ಪು ವಿಳಾಸ ಕೊಟ್ಟು ಸಾಲ ಪಡೆದಿದ್ದರೇ, ಕೆಲವರು ಸಾಲ ಪಡೆದು ಅಸಲು, ಬಡ್ಡಿ ಕಟ್ಟದೇ ನಾಪತ್ತೆಯಾಗಿದ್ದಾರೆ.ಅಂದಹಾಗೇ ಬೆಂಗಳೂರಲ್ಲಿ 2,485 ಮಂದಿಯಿಂದ 1,406 ಕೋಟಿ ರೂ, ಮೈಸೂರಲ್ಲಿ 132 ಸಾಲಗಾರರಿಂದ 57 ಲಕ್ಷ, ಬೆಳಗಾವಿ 15 ಮಂದಿಯಿಂದ 41 ಲಕ್ಷ ರೂ ಸೇರಿದಂತೆ ಜಿಲ್ಲಾ ಸಹಕಾರಿ ಕೇಂದ್ರ ಬ್ಯಾಂಕ್ ಗಳಲ್ಲಿ ಒಟ್ಟು 2,632 ಮಂದಿ ಪಟ್ಟಣ ಸಹಕಾರ ಬ್ಯಾಂಕ್ ಗಳಿಂದ ಸಾಲ ಪಡೆದಿದ್ದಾರೆ. ಇವರಲ್ಲಿ ಒಟ್ಟಾರೆ 2,888 ಮಂದಿ ಸಾಲವನ್ನು ತೀರಿಸಲಾಗದೇ ನಾಪತ್ತೆಯಾಗಿದ್ದಾರೆ ಎನ್ನಲಾಗುತ್ತಿದೆ.

ಅನುಮತಿ ಪಡೆಯದೆ ಭರ್ತಿ ಮಾಡಿದ ಹುದ್ದೆಗಳಿಗೆ ವೇತನ ಇಲ್ಲ: ಸರ್ಕಾರ ನಿರ್ಧಾರ

Posted by Vidyamaana on 2024-01-05 15:03:39 |

Share: | | | | |


ಅನುಮತಿ ಪಡೆಯದೆ ಭರ್ತಿ ಮಾಡಿದ ಹುದ್ದೆಗಳಿಗೆ ವೇತನ ಇಲ್ಲ: ಸರ್ಕಾರ ನಿರ್ಧಾರ

ಬೆಂಗಳೂರು : ಆರ್ಥಿಕ ಇಲಾಖೆಯ ಅನುಮತಿ ಪಡೆದುಕೊಳ್ಳದೆ ರಾಜ್ಯದಲ್ಲಿನ ವಿಶ್ವವಿದ್ಯಾಲಯಗಳಲ್ಲಿ ಭರ್ತಿ ಮಾಡಿರುವ ಹುದ್ದೆಗಳಿಗೆ ವೇತನಾನುದಾನ ನೀಡದಿರಲು ಸರ್ಕಾರ ನಿರ್ಧರಿಸಿದೆ.ರಾಜ್ಯದಲ್ಲಿ 41 ಸರ್ಕಾರಿ ವಿವಿಗಳಿದ್ದು, ಕೆಲವು ವಿವಿಗಳ ಕುಲಪತಿಗಳು ಹಣಕಾಸು ಇಲಾಖೆಯಿಂದ ಅನುಮೋದನೆ ಪಡೆದುಕೊಳ್ಳದೆ ತಮ್ಮ ನಿವೃತ್ತಿ ಅವಧಿಯ ಕೊನೆ ಕ್ಷಣದಲ್ಲಿ ಭರ್ತಿ ಮಾಡಿದ ಪ್ರಕರಣಗಳಿವೆ.ಆರ್ಥಿಕ ಇಲಾಖೆ ಈ ಮೊದಲೇ ಎಚ್ಚರಿಕೆ ನೀಡಿದ್ದರೂ ನೇಮಕಾತಿ ಮಾಡಿಕೊಳ್ಳಲಾಗಿದೆ.


ಅನುಮತಿ ಪಡೆದುಕೊಳ್ಳದೆ ಭರ್ತಿ ಮಾಡಿದ ಹುದ್ದೆಗಳನ್ನು ಮಂಜೂರಾದ ಹುದ್ದೆಗಳೆಂದು ಪರಿಗಣಿಸಲಾಗುವುದಿಲ್ಲ. ಈ ಹುದ್ದೆಗಳ ಭರ್ತಿಗೆ ಸಹಮತ ನೀಡುವುದಿಲ್ಲವೆಂದು ಆರ್ಥಿಕ ಇಲಾಖೆಯಿಂದ ವಿವಿಗಳಿಗೆ ಸೂಚನೆ ನೀಡಲಾಗಿದೆ. ಈ ಹುದ್ದೆಗಳಿಗೆ ವಿವಿಯ ಆರ್ಥಿಕ ಸಂಪನ್ಮೂಲದಿಂದ ಮಾತ್ರ ವೇತನ ನೀಡಬೇಕಾಗುತ್ತದೆ. ಆರ್ಥಿಕ ಇಲಾಖೆ ನೀಡುವ ವೇತನಾನುನುದಾನ ಬಳಕೆ ಸಾಧ್ಯವಿರುವುದಿಲ್ಲ.


ಆರ್ಥಿಕ ಇಲಾಖೆ ಅನುಮತಿ ಪಡೆದುಕೊಳ್ಳದೆ ಭರ್ತಿ ಮಾಡಿದ ಹುದ್ದೆಗಳಿಗೆ ವೇತನಾನುದಾನ ನೀಡಲು ವಿವಿಗಳು ಅನುದಾನ ಕೋರಿ ಪ್ರಸ್ತಾವನೆ ಸಲ್ಲಿಸುತ್ತಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಿದ ಆರ್ಥಿಕ ಇಲಾಖೆ ಪರಿಶೀಲಿಸಿದಾಗ ಅನುಮತಿ ಪಡೆದುಕೊಳ್ಳದೆ ನೇಮಕಾತಿ ನಡೆಸಿರುವುದು ಕಂಡುಬಂದಿದೆ.ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿರುವ ಎಲ್ಲಾ ಸಾಮಾನ್ಯ ವಿವಿ, ವೈದ್ಯಕೀಯ ವಿವಿ, ಕೃಷಿ ವಿವಿಗಳು ಆಡಳಿತ ಮಂಡಳಿಯ ಅನುಮೋದನೆ ಪಡೆದು ತಮ್ಮ ಹಂತದಲ್ಲಿ ಅನುಮೋದನೆ ಪಡೆದುಕೊಂಡ ಹುದ್ದೆಗಳ ವಿವರ, ಸರ್ಕಾರದ ಆದೇಶ ನೀಡಿರುವ ಕುರಿತಾದ ಮಾಹಿತಿ ಸಲ್ಲಿಸುವಂತೆ ಸೂಚಿಸಲಾಗಿದೆ.

Recent News


Leave a Comment: