ಚಾಲಕನ ನಿಯಂತ್ರಣ ತಪ್ಪಿ ಮನೆ ಮೇಲೆ ಬಿದ್ದ ಪಿಕಪ್ ವಾಹನ

ಸುದ್ದಿಗಳು News

Posted by vidyamaana on 2023-07-14 03:02:36 | Last Updated by Vidyamaana on 2023-09-05 09:08:10

Share: | | | | |


ಚಾಲಕನ ನಿಯಂತ್ರಣ ತಪ್ಪಿ ಮನೆ ಮೇಲೆ ಬಿದ್ದ ಪಿಕಪ್ ವಾಹನ

ವಿಟ್ಲ: ಪರಿಯಲ್ಲಡ್ಕ – ಸಾರಡ್ಕ ರಸ್ತೆಯ ಕೂರೇಲು ಎಂಬಲ್ಲಿ ಪಿಕಪ್ ರಸ್ತೆಯಿಂದ ಮನೆಯ ಮೇಲೆ ಬಿದ್ದಿದ್ದು, ಮನೆಯ ಒಳಗೆ ಮಹಿಳೆ ಸಿಲುಕಿ ಹಾಕಿಕೊಂಡಿದ್ದಾರೆ.ಕೂರೇಲು ಮಧ್ಯದ ಅಂಗಡಿಯ ಸಮೀಪದಲ್ಲಿ ರಸ್ತೆಯಿಂದ ಕೆಳಗಿದ್ದ ಮನೆಗೆ ಜು.14 ರ ಬೆಳಗ್ಗಿನ ಜಾವ ಚಾಲಕ ನಿಯಂತ್ರಣ ತಪ್ಪಿದ ಪಿಕಪ್ ಮನೆಯ ಮೇಲೆ ಬಿದ್ದಿದೆಅಪಘಾತದಿಂದ ಹಂಚಿನ ಮನೆ ಸಂಪೂರ್ಣ ಹಾನಿಯಾಗಿದೆ. ಪಿಕಪ್ ಕೋಳಿ ಸಾಗಟ ನಡೆಸುತಿತ್ತು. ಅಪಘಾತದಿಂದ ನೂರಾರು ಕೋಳಿಗಳು ಸತ್ತಿದೆ. ಅಪಘಾತ ನಡೆದಾಗ ಮನೆಯ ಒಳಗೆ ಮಹಿಳೆ ಮಲಗಿದ್ದರು, ಮಹಿಳೆಗೆ ಗಂಭೀರ ಗಾಯವಾದ ಪರಿಸ್ಥಿಯಲಿದ್ದಾರೆ.ಪಿಕಪ್ ವಾಹನವನ್ನು ತೆರವು ಮಾಡಡೆ, ಮಹಿಳೆಯನ್ನು ಹೊರಗೆ ತೆಗೆಯಲು ಸಾಧ್ಯವಿಲ್ಲದ ಸ್ಥಿತಿ ನಿರ್ಮಾಣವಾಗಿದೆ.

ಸ್ಥಳದಲ್ಲಿ ವಿಟ್ಲ ಪೊಲೀಸರು, ತುರ್ತು ಸೇವಾ ವಾಹನ ಬೀಡು ಬಿಟ್ಟಿದ್ದು, ಕ್ರೇನ್ ಬಳಸಿ ವಾಹನ ಮೇಲೆತ್ತುವ ಕಾರ್ಯಾಚರಣೆ ನಡೆಯುತ್ತಿದೆ.

 Share: | | | | |


ಬಿಜೆಪಿ ಸೇರಿದ ಮಂಗಳೂರಿನ ಮಾಜಿ ಮೇಯರ್ ಕವಿತಾ ಸನಿಲ್

Posted by Vidyamaana on 2024-04-20 16:57:34 |

Share: | | | | |


ಬಿಜೆಪಿ ಸೇರಿದ ಮಂಗಳೂರಿನ ಮಾಜಿ ಮೇಯರ್ ಕವಿತಾ ಸನಿಲ್

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ ಮಾಜಿ ಮೇಯರ್, ಕಾಂಗ್ರೆಸ್ ನಾಯಕಿ ಕವಿತಾ ಸನಿಲ್ ಶನಿವಾರ ಬಂಟ್ವಾಳದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾದರು.

ಅಂಕೋಲಾ : ರಿಕ್ಷಾ ಢಿಕ್ಕಿಯಾಗಿ ಗರ್ಭಿಣಿ ಶೋಭಾ ಮೃತ್ಯು

Posted by Vidyamaana on 2023-04-13 06:15:49 |

Share: | | | | |


ಅಂಕೋಲಾ : ರಿಕ್ಷಾ ಢಿಕ್ಕಿಯಾಗಿ ಗರ್ಭಿಣಿ ಶೋಭಾ ಮೃತ್ಯು

ಅಂಕೋಲಾ : ಗರ್ಭಿಣಿ ಮಹಿಳೆಯೋರ್ವಳಿಗೆ ರಿಕ್ಷಾ ಬಡಿದು ಸ್ಥಳದಲ್ಲೇ ಮೃತಪಟ್ಟ ಹೃದಯ ವಿದ್ರಾವಕ ಘಟನೆ ಭಾವಿಕೇರಿಯಲ್ಲಿ ಸಂಭವಿಸಿದೆ. ಶೋಭಾ ಗೋಪಾಲ ನಾಯಕ (28) ಮೃತ ದುರ್ದೈವಿ ಮಹಿಳೆಯಾಗಿದ್ದಾಳೆ.


ಸುಮಾರು 3-4 ತಿಂಗಳ ಗರ್ಭಿಣಿಯಾಗಿದ್ದ ಈಕೆ ತನ್ನ ಮನೆ ಮುಂದಿನ ಟಾರ ರಸ್ತೆ ಪಕ್ಕದ ಕಚ್ಚಾ ಮಣ್ಣಿನ ರಸ್ತೆಯಲ್ಲಿ ತನ್ನ ಗಂಡ ವೈಭವ ನಾಯಕ ಈತನೊಂದಿಗೆ ನಡೆದುಕೊಂಡು ಹೋಗುತ್ತಿದ್ದಾಗ ಜವರಾಯನಂತೆ ಬಂದ ರಿಕ್ಷಾ ಚಾಲಕ ಅತಿ ವೇಗ ಹಾಗೂ ನಿರ್ಲಕ್ಷದಿಂದ ತನ್ನ ವಾಹನವನ್ನು ಚಲಾಯಿಸಿ, ಮಹಿಳೆಗೆ ಜೋರಾಗಿ ಡಿಕ್ಕಿಪಡಿಸಿದ ಪರಿಣಾಮ, ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.ಅಪಘಾತದ ರಭಸಕ್ಕೆ ಗರ್ಭಿಣಿ ಮಹಿಳೆ ಗಂಭೀರ ಗಾಯಗೊಂಡು ಮೃತಪಟ್ಟಿದ್ದಾಳೆ. ಪಟ್ಟಣದ ಲಕ್ಷೇಶ್ವರ – ಕುಂಬಾರಕೇರಿ ವ್ಯಾಪ್ತಿಯ ಚಾಲಕ ಗರ್ಭಿಣಿ ಮಹಿಳೆಗೆ ಅಪಘಾತಪಡಿಸಿ ತಾನು ಚಲಾಯಿಸುತ್ತಿದ್ದ ರಿಕ್ಷಾ ಸಮೇತ ಸ್ಥಳದಿಂದ ಪರಾರಿಯಾಗಿದ್ದಾನೆ ಎನ್ನಲಾಗಿದೆ..ಅಪಘಾತ ಪಡಿಸಿದ ರಿಕ್ಷಾಕ್ಕೆ ಆತನೇ ಮಾಲಕನೇ ಅಥವಾ ತನ್ನ ಸಂಬಂಧಿಗಳ ರಿಕ್ಷಾವನ್ನು ಈತ ಚಾಲನೆ ಮಾಡುತ್ತಿದ್ದನೇ ಎಂಬ ಅನುಮಾನದ ಮಾತುಗಳು ಕೇಳಿ ಬರುತ್ತಿದ್ದು ಈ ಕುರಿತು ಪೊಲೀಸ್ ತನಿಖೆ ಮುಂದುವರೆದಿದೆ

ಹಣ ಹಾಕದೆಯೇ ಎಟಿಎಂ ಕಳ್ಳತನವೆಂದು ದೂರು: ಬೆಡ್ ಶೀಟ್ ಹಾಕ್ಕೊಂಡು ಬಂದಿದ್ದ ಬ್ಯಾಂಕ್‌ ಸಿಬ್ಬಂದಿಯ ಕಳ್ಳಾಟ ಬಯಲು

Posted by Vidyamaana on 2024-07-17 12:54:11 |

Share: | | | | |


ಹಣ ಹಾಕದೆಯೇ ಎಟಿಎಂ ಕಳ್ಳತನವೆಂದು ದೂರು: ಬೆಡ್ ಶೀಟ್ ಹಾಕ್ಕೊಂಡು ಬಂದಿದ್ದ ಬ್ಯಾಂಕ್‌ ಸಿಬ್ಬಂದಿಯ ಕಳ್ಳಾಟ ಬಯಲು

ಬೆಂಗಳೂರು, ಜು.16: ಬೆಡ್ ಶೀಟ್ ಹಾಕಿಕೊಂಡು ಬಂದು ಬೆಂಗಳೂರಿನ ಬೆಳ್ಳಂದೂರು(Bellandur) ಎಟಿಎಂ ಕಳ್ಳತನ ಮಾಡಿದ್ದ ಕೇಸ್​ಗೆ ಮೇಜರ್ ಟ್ವಿಸ್ಟ್‌ ಸಿಕ್ಕಿದೆ. ಹೌದು, ಪೊಲೀಸರ ತ‌ನಿಖೆಯಲ್ಲಿ 16.5 ಲಕ್ಷ ರೂ. ಹಣ ಕಳ್ಳತನ ಆಗಿದೆ ಎಂದು ದೂರು ಕೊಟ್ಟ ಬ್ಯಾಂಕ್ ಸಿಬ್ಬಂದಿಯ ಕಳ್ಳಾಟ ಬೆಳಕಿಗೆ ಬಂದಿದೆ. ಹಣ ಹಾಕದೆಯೇ ಎಟಿಎಂನಲ್ಲಿ ಕಳ್ಳತನ ಆಗಿದೆ ಎಂದು ಸಿಬ್ಬಂದಿ ಪೊಲೀಸರಿಗೆ ದೂರು ನೀಡಿದ್ದ. ತನಿಖೆ ಕೈಗೊಂಡ ಪೊಲಿಸರು, ಸಿಸಿ ಕ್ಯಾಮರಾಗಳ ಪರಿಶೀಲನೆ ನಡೆಸಿದ ವೇಳೆ ಏಜೆನ್ಸಿಯವರು ಸಿಕ್ಕಿಬಿದ್ದಿದ್ದಾರೆ.

ಐವರನ್ನು ಬಂಧಿಸಿದ ಬೆಳ್ಳಂದೂರು ಪೊಲೀಸರು

ಇದುವರೆಗೂ ಐವರನ್ನು ಬೆಳ್ಳಂದೂರು ಪೊಲೀಸರು ಬಂಧಿಸಿದ್ದಾರೆ. ಫೀಲ್ಡ್ ಆಪರೇಷನ್ ಮ್ಯಾನೇಜರ್ ಪ್ರತಾಪ್, ಎಟಿಎಂ ಆಫಿಸರ್ ಪವನ್ ಕಲ್ಯಾಣ್(28), ಸೆಕ್ಯೂರ್ ವ್ಯಾಲ್ಯೂ ಕಂಪನಿ ಬೆಂಗಳೂರು ನಗರ ಎಟಿಎಂ ಇನ್ ಚಾರ್ಜ್ ಧರ್ಮೇಂದ್ರ(52),

ಸೆಕ್ಯೂರ್ ವ್ಯಾಲ್ಯೂ ಕಂಪನಿ ಮಡಿವಾಳ ಏರಿಯಾ ಬ್ರಾಂಚ್ ಹೆಡ್ ರಾಘವೇಂದ್ರ ( 36) , ಸೆಕ್ಯೂರ್ ವ್ಯಾಲ್ಯೂ ಕಂಪನಿ ಅಸ್ಸಿಸ್ಟೆಂಟ್ ಮ್ಯಾನೇಜರ್ ಮಹೇಶ್(30) ಎಂಬುವವರು ಬಂಧಿತ ಆರೋಪಿಗಳು.

ಮಾ.18: ಉಳ್ಳಾಲದಲ್ಲಿ ಮೆಸೇಜ್-2 ಅಹ್ಲನ್ ರಮಝಾನ್.

Posted by Vidyamaana on 2023-03-16 04:02:52 |

Share: | | | | |


ಮಾ.18: ಉಳ್ಳಾಲದಲ್ಲಿ ಮೆಸೇಜ್-2 ಅಹ್ಲನ್ ರಮಝಾನ್.

ಪುತ್ತೂರು: ನ್ಯಾಷನಲ್ ಮಿಷನ್ ಕರ್ನಾಟಕ ಇದರ ಶೈಕ್ಷಣಿಕ ಅಭಿಯಾನದ ಅಂಗವಾಗಿ ಮಾ.18ರಂದು ಸಂಜೆ ಉಳ್ಳಾಲದ ಹಾಜ್ರತ್ ಮೈದಾನದಲ್ಲಿ ಮೆಸೇಜ್ -2 ಅಹ್ಲನ್ ರಮಝಾನ್ ಕಾರ್ಯಕ್ರಮ ನಡೆಯಲಿದೆ ಎಂದು ನ್ಯಾಷನಲ್ ಮಿಷನ್ ಕರ್ನಾಟಕದ ರಾಜ್ಯ ಉಪಾಧ್ಯಕ್ಷ ಅಬ್ದುಲ್ ರಶೀದ್‌ ಹಾಜಿ ಪರ್ಲಡ್ಕ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.


ಸೈಯದ್‌ ಮುಹಮ್ಮದ್‌ ಜಿಫ್ರಿ ಮುತ್ತುಕೋಯ  ತಂಙಳ್  , ಸೈಯದ್‌ ಸ್ವಾದಿಕಲಿ ಶಿಹಾಬ್ ತಂಙಳ್ ಪಾಣಕ್ಕಾಡ್, ಶೈಖುನಾ ಶೈಖುಲ್ ಜಾಮಿಯಾ, ಅಲಿಕುಟ್ಟಿ ಮುಸ್ಲಿಯಾರ್ ಮತ್ತಿತರರ ಧಾರ್ಮಿಕ, ಸಾಮಾಜಿಕ ಮುಖಂಡರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಪುತ್ತೂರಿನಿಂದ ಒಂದು ಸಾವಿರಕ್ಕೂ ಮಿಕ್ಕಿ ಜನರು ಭಾಗವಹಿಸುವ ನಿರೀಕ್ಷೆಯಿದ್ದು, ಅಂದು ಸಂಜೆ 4 ಗಂಟೆಗೆ ದರ್ಬೆ ಬೈಪಾಸ್  ಪತ್ರಾವು ವೃತ್ತದಿಂದ ವಾಹನ ಹೊರಡಲಿದೆ ಎಂದು ತಿಳಿಸಿದರು.


ಸುದ್ದಿಗೋಷ್ಠಿಯಲ್ಲಿ ಜಂಇಯ್ಯತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹಮೀದ್ ದಾರಿಮಿ ಸಂಪ್ಯ, ಪುತ್ತೂರು ರೇಂಜ್‌ನ ಕೋಶಾಧಿಕಾರಿ ಎಲ್.ಟಿ. ಅಬ್ದುರಝಾಕ್ ಹಾಜಿ, ಎಸ್ಕೆಎಸ್ಸೆಸ್ಸೆಫ್‌ ಯುಎಇ ಕಾರ್ಯಾಧ್ಯಕ್ಷ ಸುಲೈಮಾನ್ ಮುಸ್ಲಿಯಾರ್ ಕಲ್ಲೇಗ, ಪುತ್ತೂರು ವಲಯ ಅಧ್ಯಕ್ಷ ಹಾಜಿ ಬಾತೀಶ ಪಾಟ್ರಕೋಡಿ ಉಪಸ್ಥಿತರಿದ್ದರು.

7ಲಕ್ಷ ರೂ.ಮೊತ್ತದ ಚೆಕ್ ಮರಳಿಸಿ ಪ್ರಾಮಾಣಿಕತೆ ಮೆರೆದ ರಿಕ್ಷಾ ಚಾಲಕ

Posted by Vidyamaana on 2023-09-24 07:31:17 |

Share: | | | | |


7ಲಕ್ಷ ರೂ.ಮೊತ್ತದ ಚೆಕ್ ಮರಳಿಸಿ ಪ್ರಾಮಾಣಿಕತೆ ಮೆರೆದ ರಿಕ್ಷಾ ಚಾಲಕ

ಮಣಿಪಾಲ: ಆಟೊ ರಿಕ್ಷಾದಲ್ಲಿ ಮರೆತು ಬಿಟ್ಟು ಹೋದ 7ಲಕ್ಷ ರೂ. ಮೊತ್ತದ ಚೆಕ್‌ ಹಾಗೂ ದಾಖಲೆ ಪತ್ರವನ್ನು ರಿಕ್ಷಾ ಚಾಲಕ ವಾರಸುದಾರರಿಗೆ ಮರಳಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ.


ಕುಂದಾಪುರ ನಿವಾಸಿ ಅನಂತ ದೇವಾಡಿಗ ಎಂಬವರು ಸೆ.18ರಂದು ಮಣಿಪಾಲ ರಿಕ್ಷಾ ನಿಲ್ದಾಣದಿಂದ ಸತೀಶ್ ಎಂಬವರ ರಿಕ್ಷಾದಲ್ಲಿ ಮಣಿಪಾಲದಿಂದ ಉಡುಪಿಗೆ ಬಾಡಿಗೆ ಮಾಡಿಕೊಂಡು ತೆರಳಿದ್ದರು. ಈ ವೇಳೆ ಅವರು ತಮ್ಮ ಕೈಯಲ್ಲಿದ್ದ ಚೆಕ್‌ ಹಾಗೂ ದಾಖಲಾತಿಗಳನ್ನು ರಿಕ್ಷಾದಲ್ಲಿಯೇ ಬಿಟ್ಟು ಹೋಗಿದ್ದರು. ಬಾಡಿಗೆ ಮುಗಿಸಿ ಮಣಿಪಾಲಕ್ಕೆ ಬಂದ ರಿಕ್ಷಾದಲ್ಲಿ ದಾಖಲಾತಿ ಬಿಟ್ಟು ಹೋಗಿ ರುವುದು ಸತೀಶ್ ಅವರ ಗಮನಕ್ಕೆ ಬಂತು.


ಈ ವಿಚಾರವನ್ನು ಸತೀಶ್, ತಮ್ಮ ಸಂಘದ ಅಧ್ಯಕ್ಷ ವಿಜಯ್ ಪುತ್ರನ್ ಹಿರೇಬೆಟ್ಟು ಅವರಿಗೆ ತಿಳಿಸಿದರು. ಬಳಿಕ ವಾರಸುದಾರರನ್ನು ಪತ್ತೆ ಹಚ್ಚ ಲಾಯಿತು.


ಮಣಿಪಾಲ ಪೊಲೀಸ್‌ ನಿರೀಕ್ಷಕ ದೇವರಾಜ್ ಹಾಗೂ ಎಸ್ಥೆಗಳಾದ ಅಕ್ಷಯ ಕುಮಾರಿ, ರಾಘವೇಂದ್ರ ಹಾಗೂ ಮನೋಹರ್ ಕುಮಾರ್‌ ಮೂಲಕ ಚೆಕ್‌ ಹಾಗೂ ದಾಖಲಾತಿಗಳನ್ನು ಹಸ್ತಾಂತರಿಸಲಾಯಿತು.

ನೇಜಾರು ಹತ್ಯಾಕಾಂಡ ಪ್ರಕರಣ ಒಂದೊಂದಾಗಿ ಬಯಲಾಗುತ್ತಿದೆ ಸೈಕೋ ಕಿಲ್ಲರ್ ಪ್ರವೀಣ್ ಚೌಗುಲೆಯ ಸೀಕ್ರೆಟ್ಸ್!

Posted by Vidyamaana on 2023-11-17 20:12:33 |

Share: | | | | |


ನೇಜಾರು ಹತ್ಯಾಕಾಂಡ ಪ್ರಕರಣ  ಒಂದೊಂದಾಗಿ ಬಯಲಾಗುತ್ತಿದೆ ಸೈಕೋ ಕಿಲ್ಲರ್ ಪ್ರವೀಣ್ ಚೌಗುಲೆಯ ಸೀಕ್ರೆಟ್ಸ್!

ಮಂಗಳೂರು, ನ.17: ಉಡುಪಿಯಲ್ಲಿ ಒಂದೇ ಕುಟುಂಬದ ನಾಲ್ವರನ್ನು ಪೈಶಾಚಿಕವಾಗಿ ಕೊಂದಿದ್ದ ಹಂತಕ ಪ್ರವೀಣ್ ಚೌಗುಲೆ ವಿಚಿತ್ರ ಮತ್ತು ವಿಕ್ಷಿಪ್ತ ಮನಸ್ಥಿತಿ ಹೊಂದಿದ್ದ ಅನ್ನೋ ವಿಚಾರ ಬಯಲಿಗೆ ಬಂದಿದೆ. ಅಂತಹ ವಿಕೃತ ಮನಸ್ಥಿತಿಯಿಂದಲೇ ಹಸೀನಾ ಅವರ ಕುಟುಂಬದ ಮೂವರು ಹೆಣ್ಮಕ್ಕಳನ್ನು ಮತ್ತು ಇನ್ನೊಬ್ಬ ಬಾಲಕನನ್ನು ಕೊಲೆ ಮಾಡಿದ್ದಾನೆ ಎನ್ನಲಾಗುತ್ತಿದೆ. ಇದಲ್ಲದೆ, ಮಂಗಳೂರಿನಲ್ಲಿ ಐಷಾರಾಮಿ ಜೀವನ ಮಾಡಿಕೊಂಡಿದ್ದ ಅನ್ನೋ ವಿಚಾರವೂ ಸಾರ್ವಜನಿಕರಲ್ಲಿ ಚರ್ಚೆಯಾಗುತ್ತಿದೆ.


ಪ್ರವೀಣ್ ಚೌಗುಲೆಯ ವಿಕ್ಷಿಪ್ತ ಮನಸ್ಥಿತಿ ಎಷ್ಟಿತ್ತು ಅಂದರೆ, ಪತ್ನಿಯ ಬಗ್ಗೆಯೂ ತೀವ್ರ ಸಂಶಯ ಹೊಂದಿದ್ನಂತೆ. ಆಕೆಯನ್ನು ಒಬ್ಬಂಟಿಯಾಗಿ ಹೊರಗಡೆ ಹೋಗುವುದಕ್ಕೂ ಬಿಡುತ್ತಿರಲಿಲ್ವಂತೆ. ಮನೆಯಲ್ಲಿ ಅಗತ್ಯ ಸಾಮಗ್ರಿ ಮುಗಿದರೂ, ಆತನೇ ರಜೆಯಿದ್ದ ದಿವಸ ಅಂಗಡಿಯಿಂದ ಸಾಮಾನು ಖರೀದಿಸುತ್ತಿದ್ದ. ಸದಾ ಅನುಮಾನದ ದೃಷ್ಟಿಯಿಂದ ನೋಡುತ್ತಿದ್ದ ಮತ್ತು ಮಾನಸಿಕ ಹಿಂಸೆ ಕೊಡುತ್ತಿದ್ದ ಅನ್ನುವ ವಿಚಾರ ಆತನ ಸಹವರ್ತಿಗಳಿಂದ ತಿಳಿದುಬಂದಿದೆ. ಇದೇ ವಿಚಾರದಲ್ಲಿ ಪತ್ನಿಯೊಂದಿಗೆ ಜಗಳ ಮಾಡಿ ಆಕೆಯನ್ನು ಕೊಲ್ಲುವುದಕ್ಕೂ ಎರಡು ಬಾರಿ ಪ್ರಯತ್ನ ಪಟ್ಟಿದ್ದ.

ಮಂಗಳೂರಿನ ಕೆಪಿಟಿ ಬಳಿ ಫ್ಲಾಟ್ ಹೊಂದಿದ್ದ ಚೌಗುಲೆ ಆನಂತರ ಇತ್ತೀಚೆಗೆ ಸುರತ್ಕಲ್ ನಲ್ಲಿ ಇಂಡಿಪೆಂಡೆಂಟ್ ಮನೆಗೆ ಶಿಫ್ಟ್ ಆಗಿದ್ದ. ಇದಲ್ಲದೆ, ಕಳೆದ 2023ರ ಜನವರಿ 31ರಂದು ಹೊಸತಾಗಿ ಎಂಜಿ ಹೆಕ್ಟರ್ ಕಾರು ಖರೀದಿಸಿದ್ದ. ಇದೇ ವೇಳೆ, ಟ್ರೈನಿಯಾಗಿ ಏರ್ ಇಂಡಿಯಾ ಸಂಸ್ಥೆಗೆ ಸೇರಿದ್ದ ಅಯ್ನಾಜ್ ಜೊತೆಗೆ ಗೆಳೆತನ ಹೊಂದಿದ್ದ ಎನ್ನಲಾಗುತ್ತಿದ್ದು, ಆಕೆಯ ಮನೆಗೂ ಸಹೋದ್ಯೋಗಿ ಅನ್ನುವ ನೆಲೆಯಲ್ಲಿ ಬಂದು ಹೋಗಿರುವ ಅನುಮಾನವಿದೆ. ಅಯ್ನಾಜ್ ಳನ್ನು ಹೆಚ್ಚಾಗಿ ಹಚ್ಚಿಕೊಂಡಿದ್ದ ಆಕೆಯೊಂದಿಗೆ ನಿಕಟ ಸಂಪರ್ಕ ಇಟ್ಟುಕೊಂಡಿದ್ದ. ಆದರೆ ಇವರ ನಡುವೆ ಪ್ರೀತಿಯಿತ್ತೇ, ಈತನದ್ದು ಏಕಮುಖದ ಪ್ರೀತಿಯಾಗಿತ್ತೇ ಎನ್ನುವುದು ತಿಳಿದುಬಂದಿಲ್ಲ. ಆಕೆಯೊಂದಿಗಿದ್ದ ಅತಿಯಾದ ಮೋಹದಿಂದಲೇ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ


ಮೊನ್ನೆ ನ.12ರಂದು ಕೊಲೆಯಾದ ದಿನವೇ ಪ್ರವೀಣ್ ಚೌಗುಲೆ, ಉಡುಪಿಯಿಂದ ಮಂಗಳೂರಿಗೆ ಬಂದು ತನ್ನ ಕುಟುಂಬದ ಜೊತೆಗೆ ಕಾರಿನಲ್ಲಿ ಪ್ರವಾಸಕ್ಕೆಂದು ಹೊರಟಿದ್ದ. ಬೆಳಗಾವಿ ತಲುಪಿದ ಬಳಿಕ ಕುಡಚಿಯಲ್ಲಿದ್ದ ಸಂಬಂಧಿಕರ ಮನೆಗೆ ತೆರಳಿ ಉಳಿದುಕೊಂಡಿದ್ದ. ಅಲ್ಲಿರುವಾಗಲೇ ಮೊಬೈಲ್ ಆನ್ ಆಗಿದ್ದರಿಂದ ಬೆನ್ನು ಬಿದ್ದಿದ್ದ ಉಡುಪಿ ಪೊಲೀಸರು, ಬೆಳಗಾವಿ ಪೊಲೀಸರ ಮೂಲಕ ಹಿಡಿದಾಕಿದ್ದರು. ಪ್ರವೀಣ್ ಚೌಗುಲೆ ಐಷಾರಾಮಿ ಜೀವನ ಮಾಡುತ್ತಿದ್ದು ಕೇವಲ ಅಲ್ಲಿ ಸಿಗುತ್ತಿದ್ದ ಸಂಬಳದ ಹಣದಿಂದ ಇಷ್ಟೆಲ್ಲ ಮಾಡಲು ಸಾಧ್ಯವಿಲ್ಲ ಎನ್ನುತ್ತಿದ್ದಾರೆ, ಆತನನ್ನು ಬಲ್ಲವರು. ಮಂಗಳೂರಿನಲ್ಲಿ ಎರಡು ಫ್ಲಾಟ್, ಸುರತ್ಕಲ್ ನಲ್ಲಿ ಸ್ವಂತ ಮನೆ, ಮತ್ತೊಂದು ಕಡೆ ಖಾಲಿ ಜಾಗ ಖರೀದಿಸಿಟ್ಟಿದ್ದ ಚೌಗುಲೆಗೆ ಹಣ ಎಲ್ಲಿಂದ ಬಂದಿರುವುದು ಅನ್ನುವ ಶಂಕೆ ಇದೆ.


ಪ್ರವೀಣ್ ಚೌಗುಲೆ ಏಳೆಂಟು ವರ್ಷಗಳಿಂದ ಏರ್ ಇಂಡಿಯಾ ವಿಮಾನದಲ್ಲಿ ಸಿಬಂದಿಯಾಗಿದ್ದರಿಂದ ಮಾದಕ ವಸ್ತು ಅಥವಾ ಚಿನ್ನದ ಸ್ಮಗ್ಲಿಂಗ್ ಜಾಲದಲ್ಲಿ ಇದ್ದಾನೆಯೇ ಎಂಬ ಸಂಶಯಗಳಿವೆ. ದುಬೈ ವಿಮಾನದಲ್ಲಿ ಕೆಲಸಕ್ಕಿದ್ದರಿಂದ ಅಕ್ರಮ ಮಾಫಿಯಾಗಳ ನಂಟು ಇರಬಹುದು. ವಿಮಾನದ ಸಿಬಂದಿಗಳಿಗೆ ಏರ್ಪೋರ್ಟ್ ನಲ್ಲಿ ಚೆಕ್ಕಿಂಗ್ ಇಲ್ಲದೆ ನೇರವಾಗಿ ಬಂದು ಹೋಗುವ ವ್ಯವಸ್ಥೆ ಇರುವುದರಿಂದ ಇವರನ್ನು ಬಳಸಿಕೊಂಡು ಚಿನ್ನ, ಮಾದಕ ವಸ್ತು ಸಾಗಾಟ ನಡೆದಿರಬಹುದೇ ಅನ್ನುವ ಅನುಮಾನ ವ್ಯಕ್ತವಾಗಿದೆ. ಈತ ಮಹಾರಾಷ್ಟ್ರದ ಸಾಂಗ್ಲಿ ಮೂಲದ ಮಹಿಳೆಯನ್ನು ಮದುವೆಯಾಗಿದ್ದು, ಹತ್ತು ವರ್ಷದ ಮಗ ಮತ್ತು ಇನ್ನೊಂದು ಎರಡು ವರ್ಷದ ಮಗು ಹೊಂದಿದ್ದಾನೆ.

ಅತಿಯಾದ ವ್ಯಾಮೋಹಕ್ಕೆ ನಾಲ್ಕು ಜೀವ ಬಲಿ


ಆರೋಪಿ ಪ್ರವೀಣ್ ಚೌಗುಲೆಯದ್ದು ವಿಕ್ಷಿಪ್ತ ಮನಸ್ಥಿತಿ ಇತ್ತು ಅನ್ನುವ ನೆಲೆಯಲ್ಲಿ ಚರ್ಚೆಯಾಗುತ್ತಿರುವಾಗಲೇ ಮನಶಾಸ್ತ್ರಜ್ಞರು ಅತಿಯಾದ ಮೋಹವೂ (ಪೊಸೆಸಿವ್ ನೆಸ್) ಅಪರಾಧಕ್ಕೆ ಕಾರಣವಾಗಬಲ್ಲದು ಎಂದು ಅಭಿಪ್ರಾಯ ಪಟ್ಟಿದ್ದಾರೆ. ಕೆಲವೊಂದು ವಸ್ತುಗಳ ಬಗ್ಗೆ, ಮನಸ್ಸಿಗೆ ಕಂಡಿದ್ದು, ತುಂಬ ಇಷ್ಟವಾದ ವಸ್ತುಗಳ ಬಗ್ಗೆ ಮನುಷ್ಯ ಅತಿಯಾದ ವ್ಯಾಮೋಹ ಇಟ್ಟುಕೊಂಡಿರುತ್ತಾನೆ. ಇದರಿಂದ ಆ ವಸ್ತು ತನಗೆ ಬಿಟ್ಟು ಬೇರೆ ಯಾರಿಗೂ ಸೇರಬಾರದು, ತನಗೆ ಮಾತ್ರ ಸೇರಬೇಕು ಎನ್ನುವ ಮತ್ಸರ ಸಹಿತ ವ್ಯಾಮೋಹ ಇರುತ್ತದೆ. ಪತ್ನಿಗೆ ಯಾರೊಂದಿಗೋ ಸಂಬಂಧವಿದೆ ಎನ್ನುವ ಶಂಕೆಯೂ ಇದೇ ತೆರನಾದದ್ದು ಎನ್ನುತ್ತಾರೆ, ತಜ್ಞರು. ಕೆಲವೊಬ್ಬರು ಗಣ್ಯರು, ಸೆಲೆಬ್ರಿಟಿಗಳ ಬಗ್ಗೆ ಅತಿಯಾದ ಹುಸಿ ಪ್ರೀತಿ, ವ್ಯಾಮೋಹ ಇಟ್ಟಿರುತ್ತಾರೆ. ಅಂಥವರು ಸತ್ತರೆ ತಾವೂ ಸಾಯುವ, ಆತ್ಮಹತ್ಯೆ ಮಾಡಿಕೊಳ್ಳುವ ಪ್ರವೃತ್ತಿ ಹೊಂದಿರುತ್ತಾರೆ. ಇಂಥವರು ಕೆಲವೊಮ್ಮೆ ವೃತ್ತಿ ಸಾಮೀಪ್ಯದಲ್ಲಿ ಹೆಣ್ಮಕ್ಕಳು ನಕ್ಕರೂ, ಆಕೆ ತನ್ನನ್ನು ಇಷ್ಟ ಪಡುತ್ತಾಳೆ ಎಂದು ಭ್ರಮೆಯಲ್ಲಿರುತ್ತಾರೆ. ಆದರೆ ಈ ರೀತಿಯ ಮಾನಸಿಕ ಸ್ಥಿತಿ ಅಪರಾಧಕ್ಕೆ ಕಾರಣವಾದೀತೆಂದು ಅದನ್ನು ಶಿಕ್ಷೆಯಿಂದ ಪಾರು ಮಾಡಲು ಮಾನಸಿಕ ಸಮಸ್ಯೆಯೆಂದು ಪರಿಗಣಿಸಲಾಗದು ಎಂದು ಹೇಳುತ್ತಾರೆ, ತಜ್ಞರು.

Recent News


Leave a Comment: